Tag: ರಿತು ಖಂಡೂರಿ

  • ಉತ್ತರಾಖಂಡದ ಮೊದಲ ಮಹಿಳಾ ಸ್ಪೀಕರ್ ಆಗಿ ರಿತು ಖಂಡೂರಿ ಆಯ್ಕೆ

    ಉತ್ತರಾಖಂಡದ ಮೊದಲ ಮಹಿಳಾ ಸ್ಪೀಕರ್ ಆಗಿ ರಿತು ಖಂಡೂರಿ ಆಯ್ಕೆ

    ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯ ಸ್ಪೀಕರ್ ಆಗಿ ರಿತು ಖಂಡೂರಿ ಶನಿವಾರ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಉತ್ತರಾಖಂಡ ವಿಧಾನಸಭೆಯ ಐದನೇ ಸ್ಪೀಕರ್ ಆಗಿ ರಿತು ಖಂಡೂರಿ ಆಯ್ಕೆಯಾದರು. ರಿತು ಖಂಡೂರಿ ಅವರು 2017ರಲ್ಲಿ ಮೊದಲ ಬಾರಿಗೆ ಯಮಕೇಶ್ವರ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಈ ಹಿಂದೆ ರಿತು ಉತ್ತರಾಖಂಡ್‍ನ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು.

    ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೋಟ್‍ದ್ವಾರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್‍ನ ಸುರೇಂದ್ರ ಸಿಂಗ್ ನೇಗಿ ಅವರನ್ನು ಸೋಲಿಸಿದ್ದರು.

    ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಿತು ಖಂಡೂರಿ ಅವರನ್ನು ಅಭಿನಂದಿಸಿ ಅವರ ನಾಯಕತ್ವದಲ್ಲಿ ರಾಜ್ಯ ವಿಧಾನಸಭೆಯು ಹೊಸ ಇತಿಹಾಸವನ್ನು ರಚಿಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ: 5 ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ: ಆಪ್‌ನಿಂದ ರೋಜ್‌ಗಾರ್ ಬಜೆಟ್ ಮಂಡನೆ

    ಉತ್ತರಾಖಂಡದ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಪುಷ್ಕರ್ ಸಿಂಗ್  ಧಾಮಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಆದರೆ ಹೈಕಮಾಂಡ್ ಮತ್ತೆ ಅವರಿಗೆ ಸಿಎಂ ಪಟ್ಟವನ್ನು ಕಟ್ಟಿದೆ. ಇದನ್ನೂ ಓದಿ: ಹಿಜಬ್ ವಿವಾದ ಸೃಷ್ಟಿ ಮಾಡಿದ್ದು ಕಾಂಗ್ರೆಸ್, ದೇಶದ್ರೋಹಿ PFI, SDPI ಸಂಘಟನೆಗಳು: ಎಂ.ಪಿ.ರೇಣುಕಾಚಾರ್ಯ