Tag: ರಿತಿಕ

  • ಕೊಹ್ಲಿ ವರ್ಸಸ್ ರೋಹಿತ್ ಮಧ್ಯೆ ‘ರಿತಿಕ’ ಟ್ವಿಸ್ಟ್

    ಕೊಹ್ಲಿ ವರ್ಸಸ್ ರೋಹಿತ್ ಮಧ್ಯೆ ‘ರಿತಿಕ’ ಟ್ವಿಸ್ಟ್

    ಬೆಂಗಳೂರು: ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ನಡುವಿನ ಮುಸುಕಿನ ಗುದ್ದಾಟ ಜಗಜಾಹೀರ್ ಆಗಿತ್ತು.

    ಈಗ ಭಾರತ ಆಗಸ್ಟ್ 3ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ಸರಣಿಗೆ ತೆರಳಿದೆ. ಇದರ ಮಧ್ಯೆ ರೋಹಿತ್ ಶರ್ಮಾ ಪತ್ನಿ ರಿತಿಕ ಅವರ ಹೆಸರು ಈ ವಿವಾದದಲ್ಲಿ ಥಳಕು ಹಾಕಿಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲ ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

    ವಿರಾಟ್ ಕೊಹ್ಲಿ 2013ರ ವೇಳೆ ಮುಂಬೈನಲ್ಲಿ ರಜಾ ದಿನವನ್ನು ಕಳೆದಿದ್ದರು. ಈ ವೇಳೆ ರಿತಿಕಾ ಕೊಹ್ಲಿ ಜೊತೆ ಸಿನಿಮಾ ಹಾಲ್‍ನಲ್ಲಿ ಕಾಣಿಸಿಕೊಂಡಿದ್ದರು. ವಿರಾಟ್ ಕೊಹ್ಲಿ ಮೊದಲ ಬಾರಿಗೆ 2010ರ ಐಪಿಎಲ್ ಸಮಯದಲ್ಲಿ ರಿತಿಕಾರನ್ನು ಭೇಟಿಯಾಗಿದ್ದರು. ಈ ವೇಳೆ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ರಿತಿಕಾ, ಕೊಹ್ಲಿಯ ವ್ಯವಹಾರ ನೋಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೇ ಈ ಜೋಡಿ ಮೂವಿ ಡೇಟ್, ಡಿನ್ನರ್ ಡೇಟ್‍ಗೆ ಕೂಡ ಹೋಗುತ್ತಿದ್ದರು ಎನ್ನಲಾಗಿದೆ.

    ಈ ವಿಚಾರಗಳು ಮಾಧ್ಯಮಗಳಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾದ ಬಳಿಕ ರಿತಿಕಾ ಕೆಲಸಕ್ಕೆ ಗುಡ್‍ಬೈ ಹೇಳಿದ್ದರಂತೆ. ಈಗ ಕೆಲ ಹಳೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಮಧ್ಯ ಮನಸ್ತಾಪಕ್ಕೆ ಇದೇ ಕಾರಣ ಎಂಬ ಚರ್ಚೆಗಳು ಬಲವಾಗಿ ಕೇಳಿಬರುತ್ತಿವೆ.