Tag: ರಿಜಿಸ್ಟರ್

  • ಐಎಎಸ್-ಐಪಿಎಸ್ ಕಿತ್ತಾಟ ಸಿನಿಮಾ : ಟೈಟಲ್ ಕೊಡುತ್ತಾ ಫಿಲ್ಮ್ ಚೇಂಬರ್?

    ಐಎಎಸ್-ಐಪಿಎಸ್ ಕಿತ್ತಾಟ ಸಿನಿಮಾ : ಟೈಟಲ್ ಕೊಡುತ್ತಾ ಫಿಲ್ಮ್ ಚೇಂಬರ್?

    ಪಿಎಸ್ ಮತ್ತು ಐಎಎಸ್ ಮಹಿಳಾ ಅಧಿಕಾರಿಗಳ ಕಿತ್ತಾಟಕ್ಕೆ ಸಂಬಂಧಿಸಿದಂತೆ ಇಬ್ಬರು ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬಂದಿದ್ದು, ಆ ಸಿನಿಮಾಗೆ ಟೈಟಲ್ ಕೊಡುವಂತೆ ಮೊನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿಯ ಕುರಿತಂತೆ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದ್ದು, ನಿರ್ಮಾಪಕರು ಕೇಳಿರುವ ಶೀರ್ಷಿಕೆಯನ್ನು ವಾಣಿಜ್ಯ ಮಂಡಳಿ ನೀಡುತ್ತಾ ಎನ್ನುವ ಕುತೂಹಲ ಮೂಡಿದೆ.

    ಜನರ ಮನಸ್ಸನ್ನು ಸೆಳೆದ ಘಟನೆಗಳನ್ನು ಆಧರಿಸಿ ಸಿನಿಮಾಗಳು ಬರುವುದು ಹೊಸದೇನೂ ಅಲ್ಲ. ಅದರಲ್ಲೂ ಕಾಂಟ್ರವರ್ಸಿ ಆಗಿರುವಂತಹ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲು ನಾಮುಂದು ತಾಮುಂದು ಎಂದು ಬಂದವರ ಸಂಖ್ಯೆ ಕಡಿಮೆಯೇನೂ ಇಲ್ಲ. ಇದೀಗ ಅದಕ್ಕೆ ಹೊಸ ಸೇರ್ಪಡೆ ಐಎಎಸ್, ಐಪಿಎಸ್ ಅಧಿಕಾರಿಗಳ ಜಗಳ. ನಾಲ್ಕೈದು ದಿನಗಳ ಕಾಲ ಸಾಕಷ್ಟು ಸುದ್ದಿಯಾಗಿದ್ದ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲು ಇಬ್ಬರು ನಿರ್ಮಾಪಕರು ಮುಂದೆ ಬಂದಿದ್ದಾರೆ.

    ಇಬ್ಬರು ಮಹಿಳಾ ಅಧಿಕಾರಿಗಳು ನಾಲ್ಕೈದು ದಿನಗಳ ಕಾಲ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಅದೇ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಸಿನಿಮಾದ ಟೈಟಲ್ ಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿಯನ್ನೂ ಹಾಕಿದ್ದಾರೆ. ಒಂದು ಸಿನಿಮಾದ ಟೈಟಲ್ ಅಧಿಕಾರಿಗಳ ಹೆಸರನ್ನು ಒಳಗೊಂಡಿದ್ದರೆ, ಮತ್ತೊಂದು ಸಿನಿಮಾದ ಟೈಟಲ್ ಆರ್ ವರ್ಸಸ್ ಆರ್ ಎಂದು ಇಟ್ಟಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಟೈಟಲ್ ಗಾಗಿ ಅರ್ಜಿ ಸಲ್ಲಿಸಿದ್ದರ ಕುರಿತು ವಾಣಿಜ್ಯ ಮಂಡಳಿಯ ಅಧ್ಯಕ್ಷರೇ ಖಚಿತ ಪಡಿಸಿದ್ದು ಟೈಟಲ್ ಕಮೀಟಿ ಮುಂದೆ ಇಟ್ಟು ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಒಂದು ಸಿನಿಮಾವನ್ನು ಬಿಯಾಂಡ್ ಡ್ರೀಮ್ಸ್ ಸಂಸ್ಥೆ ನಿರ್ಮಿಸಲು ಮುಂದೆ ಬಂದಿದ್ದರೆ, ಮತ್ತೊಂದು ಚಿತ್ರದ ಟೈಟಲ್ ಗಾಗಿ ಪ್ರವೀಣ್ ಶೆಟ್ಟಿ ಎನ್ನುವ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಎರಡೂ ಅರ್ಜಿಗಳು ಟೈಟಲ್ ಕಮಿಟಿ ಮುಂದೆ ಇಂದು ಬಂದಿವೆ. ಟೈಟಲ್ ಕೊಡುತ್ತಾ ಅಥವಾ ತಿರಸ್ಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕು.

  • ಐಪಿಎಸ್, ಐಎಎಸ್ ಅಧಿಕಾರಿಗಳ ಕಿತ್ತಾಟ: ಸಿನಿಮಾ ಮಾಡಲು ಟೈಟಲ್ ಗಾಗಿ ಅರ್ಜಿ

    ಐಪಿಎಸ್, ಐಎಎಸ್ ಅಧಿಕಾರಿಗಳ ಕಿತ್ತಾಟ: ಸಿನಿಮಾ ಮಾಡಲು ಟೈಟಲ್ ಗಾಗಿ ಅರ್ಜಿ

    ನರ ಮನಸ್ಸನ್ನು ಸೆಳೆದ ಘಟನೆಗಳನ್ನು ಆಧರಿಸಿ ಸಿನಿಮಾಗಳು ಬರುವುದು ಹೊಸದೇನೂ ಅಲ್ಲ. ಅದರಲ್ಲೂ ಕಾಂಟ್ರವರ್ಸಿ ಆಗಿರುವಂತಹ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲು ನಾಮುಂದು ತಾಮುಂದು ಎಂದು ಬಂದವರ ಸಂಖ್ಯೆ ಕಡಿಮೆಯೇನೂ ಇಲ್ಲ. ಇದೀಗ ಅದಕ್ಕೆ ಹೊಸ ಸೇರ್ಪಡೆ ಐಎಎಸ್ (IAS), ಐಪಿಎಸ್ (IPS) ಅಧಿಕಾರಿಗಳ ಜಗಳ. ನಾಲ್ಕೈದು ದಿನಗಳ ಕಾಲ ಸಾಕಷ್ಟು ಸುದ್ದಿಯಾಗಿದ್ದ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲು ಇಬ್ಬರು ನಿರ್ಮಾಪಕರು ಮುಂದೆ ಬಂದಿದ್ದಾರೆ.

    ಇಬ್ಬರು ಮಹಿಳಾ ಅಧಿಕಾರಿಗಳು ನಾಲ್ಕೈದು ದಿನಗಳ ಕಾಲ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಅದೇ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಸಿನಿಮಾದ ಟೈಟಲ್ ಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿಯನ್ನೂ ಹಾಕಿದ್ದಾರೆ. ಒಂದು ಸಿನಿಮಾದ ಟೈಟಲ್ ಅಧಿಕಾರಿಗಳ ಹೆಸರನ್ನು ಒಳಗೊಂಡಿದ್ದರೆ, ಮತ್ತೊಂದು ಸಿನಿಮಾದ ಟೈಟಲ್ ಆರ್ ವರ್ಸಸ್ ಆರ್ ಎಂದು ಇಟ್ಟಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಟೈಟಲ್ ಗಾಗಿ ಅರ್ಜಿ ಸಲ್ಲಿಸಿದ್ದರ ಕುರಿತು ವಾಣಿಜ್ಯ ಮಂಡಳಿಯ ಅಧ್ಯಕ್ಷರೇ ಖಚಿತ ಪಡಿಸಿದ್ದು ಟೈಟಲ್ ಕಮಿಟಿ ಮುಂದೆ ಇಟ್ಟು ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಒಂದು ಸಿನಿಮಾವನ್ನು ಬಿಯಾಂಡ್ ಡ್ರೀಮ್ಸ್ ಸಂಸ್ಥೆ ನಿರ್ಮಿಸಲು ಮುಂದೆ ಬಂದಿದ್ದರೆ, ಮತ್ತೊಂದು ಚಿತ್ರದ ಟೈಟಲ್ ಗಾಗಿ ಪ್ರವೀಣ್ ಶೆಟ್ಟಿ ಎನ್ನುವ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಎರಡೂ ಅರ್ಜಿಗಳು ಟೈಟಲ್ ಕಮಿಟಿ ಮುಂದೆ ಸೋಮವಾರ ಬರಲಿವೆ ಎಂದು ಹೇಳಲಾಗುತ್ತಿದೆ.

  • ಮೈಸೂರಿನಿಂದ ಆದಿಲ್ ಗೆ ಕರೆ ಬರ್ತಿವೆ: ‘ನನ್ನನ್ನು ಬಿಟ್ಟು ಹೋಗ್ಬೇಡ’ ಎಂದು ಗಳಗಳನೆ ಅತ್ತ ರಾಖಿ

    ಮೈಸೂರಿನಿಂದ ಆದಿಲ್ ಗೆ ಕರೆ ಬರ್ತಿವೆ: ‘ನನ್ನನ್ನು ಬಿಟ್ಟು ಹೋಗ್ಬೇಡ’ ಎಂದು ಗಳಗಳನೆ ಅತ್ತ ರಾಖಿ

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತು ಮೈಸೂರಿನ ಹುಡುಗ ಆದಿಲ್ ಖಾನ್ (Adil) ಮದುವೆ (Marriage) ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಮ್ಮಿಬ್ಬರದ್ದೂ ಮದುವೆ ಆಗಿಲ್ಲ ಎಂದು ಹೇಳುತ್ತಿದ್ದ ಆದಿಲ್, ಕೊನೆಗೂ ಒಪ್ಪಿಕೊಂಡು ಆಗಿದೆ. ಆದರೆ, ಮೈಸೂರಿನಿಂದ ಆತನಿಗೆ ನಿರಂತರವಾಗಿ ಕರೆ ಬರುತ್ತಿರುವುದಾಗಿ ರಾಖಿ ಹೇಳಿಕೊಂಡಿದ್ದಾರೆ. ಕ್ಯಾಮೆರಾಗಳ ಮುಂದೆ ದುಃಖಿಸುತ್ತಾ ಮಾತನಾಡಿರುವ ಅವರು ‘ಮೈಸೂರಿನ (Mysore) ಜನ ನನ್ನೊಂದಿಗೆ ನಿಲ್ಲಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

    ‘ಆದಿಲ್ ನನ್ನನ್ನು ಮದುವೆ ಆದಾಗಿಂದ ಅವರ ಕುಟುಂಬದಿಂದ ಮತ್ತು ಮೈಸೂರಿನ ಹಲವರು ಅವನಿಗೆ ನಿರಂತರವಾಗಿ ಕರೆ ಮಾಡುತ್ತಿದ್ದಾರೆ. ರಾಖಿಯನ್ನು ಬಿಟ್ಟು ಬರುವಂತೆ ಒತ್ತಡ ಹೇರುತ್ತಿದ್ದಾರೆ. ಇದು ನನಗೆ ಆತಂಕ ಮೂಡಿಸಿದೆ. ಅವನನ್ನು ನಾನು ಮನಸಾರೆ ಇಷ್ಟಪಟ್ಟು ಮದುವೆ ಆಗಿರುವೆ. ಈ ವಿಷಯದಲ್ಲಿ ನನಗೆ ಮೈಸೂರು ಜನ ಆಶೀರ್ವದಿಸಬೇಕು. ನಾವಿಬ್ಬರೂ ಸುಖವಾಗಿ ಜೀವನ ನಡೆಸುವಂತೆ ಸಪೋರ್ಟ್ ಮಾಡಿ’ ಎಂದು ರಾಖಿ ಕೈ ಮುಗಿದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯಾಗುತ್ತಿರುವ ಗುಡ್‌ ನ್ಯೂಸ್‌ ಕೊಟ್ರು ʻಯೇ ಜವಾನಿ ಹೇ ದಿವಾನಿ’ ನಟಿ

    ಮದುವೆಯಾಗಿ ಏಳು ತಿಂಗಳಿಗೆ ರಾಖಿ ಸಾವಂತ್ ತಾಯಿ ಆಗುತ್ತಿದ್ದಾರಾ? ಇಂಥದ್ದೊಂದು ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸುದ್ದಿಗೆ ಪುಷ್ಠಿ ಕೊಡುವಂತೆ ರಾಖಿ ಆಡಿದ ಮಾತುಗಳು ಕೂಡ ವೈರಲ್ ಆಗುತ್ತಿವೆ. ಮಾಧ್ಯಮದೊಂದಿಗೆ ಮಾತನಾಡುತ್ತಾ ಮದುವೆ ಬಗ್ಗೆ ಪ್ರಸ್ತಾಪ ಮಾಡುತ್ತಾರೆ ರಾಖಿ. ಆಗ ಸಂದರ್ಶಕರು ‘ನೀವು ಪ್ರಗ್ನೆಂಟಾ?’ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ‘ನೋ ಕಾಮೆಂಟ್ಸ್’ ಎಂದು ಹೇಳುವ ಮೂಲಕ ಅನುಮಾನಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ ರಾಖಿ ಸಾವಂತ್.

    ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ. ಜೊತೆಗೆ ಇದೀಗ ಪ್ರಗ್ನೆಂಟ್ ಎನ್ನುವ ಸುದ್ದಿಗೂ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಖಿ ಸಾವಂತ್ ಪ್ರಗ್ನೆಂಟ್: ನೋ ಕಾಮೆಂಟ್ಸ್ ಎಂದ ನಟಿ

    ರಾಖಿ ಸಾವಂತ್ ಪ್ರಗ್ನೆಂಟ್: ನೋ ಕಾಮೆಂಟ್ಸ್ ಎಂದ ನಟಿ

    ದುವೆಯಾಗಿ (Marriage) ಏಳು ತಿಂಗಳಿಗೆ ರಾಖಿ ಸಾವಂತ್ (Rakhi Sawant) ತಾಯಿ ಆಗುತ್ತಿದ್ದಾರಾ? ಇಂಥದ್ದೊಂದು ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸುದ್ದಿಗೆ ಪುಷ್ಠಿ ಕೊಡುವಂತೆ ರಾಖಿ ಆಡಿದ ಮಾತುಗಳು ಕೂಡ ವೈರಲ್ ಆಗುತ್ತಿವೆ. ಮಾಧ್ಯಮದೊಂದಿಗೆ ಮಾತನಾಡುತ್ತಾ ಮದುವೆ ಬಗ್ಗೆ ಪ್ರಸ್ತಾಪ ಮಾಡುತ್ತಾರೆ ರಾಖಿ. ಆಗ ಸಂದರ್ಶಕರು ‘ನೀವು ಪ್ರಗ್ನೆಂಟಾ? (Pregnant)’ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ‘ನೋ ಕಾಮೆಂಟ್ಸ್’ ಎಂದು ಹೇಳುವ ಮೂಲಕ ಅನುಮಾನಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ ರಾಖಿ ಸಾವಂತ್.

    ತಾನು ಪ್ರೀತಿಸಿ ಮದುವೆಯಾದ ಹುಡುಗ ಆದಿಲ್ ಖಾನ್ (Adil) ತಮಗೆ ಮೋಸ ಮಾಡುತ್ತಿದ್ದಾನೆ ಎಂದು ಮೊನ್ನೆಯಷ್ಟೇ ನಟಿ ರಾಖಿ ಸಾವಂತ್ ಕಣ್ಣೀರಿಟ್ಟಿದ್ದರು. ಅವನು ತನ್ನನ್ನು ಮದುವೆಯೇ ಆಗಿಲ್ಲವೆಂದು ಹೇಳುತ್ತಿದ್ದಾನೆ. ಅವನಿಂದ ನನಗೆ ಮೋಸ ಆಗುತ್ತಿದೆ ಎಂದು ಹೇಳಿಕೊಂಡಿದ್ದರು. ಇದೀಗ ಎಲ್ಲವೂ ಸುಖಾಂತ್ಯವಾಗಿದೆ. ರಾಖಿ ಸಾವಂತ್ ನನ್ನೊಂದಿಗೆ ಮದುವೆ ಆಗಿದ್ದಾರೆ ಎಂದು ಸ್ವತಃ ಆದಿಲ್ ಹೇಳಿಕೊಂಡಿದ್ದಾರೆ. ಹಾಗಾಗಿ ಮದುವೆ ವಿವಾದ ಸರಿ ಹೋಗಿದೆ. ಹಾಗಾಗಿಯೇ ಕೇಸರಿ ಬಣ್ಣದ ಬುರ್ಖಾ ಧರಿಸಿ ಎಲ್ಲರಿಗೂ ವಂದನೆಗಳನ್ನು ಹೇಳಿದ್ದಾರೆ ರಾಖಿ. ಇದನ್ನೂ ಓದಿ: ರವಿಚಂದ್ರನ್ ಸಿನಿಮಾದ ಹೆಸರು ಮತ್ತು ನಾಯಕಿ ಬದಲು

    ರಾಖಿ ಕಣ್ಣೀರು ಹಾಕುತ್ತಿದ್ದಂತೆಯೇ ಮದುವೆಯಾಗಿ ಆರು ತಿಂಗಳಿಗೆ ಈ ಮದುವೆ ಮುರಿದು ಬಿತ್ತು ಎಂದು ಹೇಳಲಾಗಿತ್ತು. ಆರು ತಿಂಗಳ ಹಿಂದೆಯಷ್ಟೇ ರಾಖಿ ಸಾವಂತ್ ಮತ್ತು ಮೈಸೂರು ಹುಡುಗ ಆದಿಲ್ ಖಾನ್ ರಿಜಿಸ್ಟರ್ (Register) ಮದುವೆ ಆಗಿದ್ದರು. ನಿಕಾ ಕೂಡ ಮಾಡಿಕೊಂಡಿದ್ದರು. ಆದರೆ, ತಮ್ಮ ಮದುವೆಯೇ ಆಗಿಲ್ಲ ಎಂದು ಆದಿಲ್ ಹೇಳುತ್ತಿದ್ದಾನೆ ಎಂದು ರಾಖಿ ರಂಪಾಟ ಮಾಡಿದ್ದರು. ಮದುವೆ ಆಗಿದ್ದರ ಗುರುತಾಗಿ ರಿಜಿಸ್ಟರ್ ಪತ್ರಗಳನ್ನೂ ಅವರು ಬಹಿರಂಗ ಪಡಿಸಿದ್ದರು.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿದ್ದ ರಾಖಿ, ‘ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆಯವರೆಗೆ ನಾನು ಅಂದರೆ ಇಷ್ಟವಿಲ್ಲ. ಹಾಗಾಗಿ ಅವರೂ ಅಡ್ಡಿ ಪಡಿಸುತ್ತಿದ್ದಾರೆ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ, ಅವನು ನನಗೆ ಮೋಸ ಮಾಡುತ್ತಿದ್ದಾನೆ’ ಎಂದು ರಾಖಿ ಹೇಳಿಕೊಂಡಿದ್ದರು.

    ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ. ಜೊತೆಗೆ ಇದೀಗ ಪ್ರಗ್ನೆಂಟ್ ಎನ್ನುವ ಸುದ್ದಿಗೂ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಖಿ ಸಾವಂತ್ ಮದುವೆ ವಿವಾದ ಸುಖಾಂತ್ಯ: ಬುರ್ಖಾ ಧರಿಸಿದ ನಟಿ

    ರಾಖಿ ಸಾವಂತ್ ಮದುವೆ ವಿವಾದ ಸುಖಾಂತ್ಯ: ಬುರ್ಖಾ ಧರಿಸಿದ ನಟಿ

    ತಾನು ಪ್ರೀತಿಸಿ ಮದುವೆಯಾದ ಹುಡುಗ ಆದಿಲ್ ಖಾನ್ ತಮಗೆ ಮೋಸ ಮಾಡುತ್ತಿದ್ದಾನೆ ಎಂದು ಮೊನ್ನೆಯಷ್ಟೇ ನಟಿ ರಾಖಿ ಸಾವಂತ್ ಕಣ್ಣೀರಿಟ್ಟಿದ್ದರು. ಅವನು ತನ್ನನ್ನು ಮದುವೆಯೇ ಆಗಿಲ್ಲವೆಂದು ಹೇಳುತ್ತಿದ್ದಾನೆ. ಅವನಿಂದ ನನಗೆ ಮೋಸ ಆಗುತ್ತಿದೆ ಎಂದು ಹೇಳಿಕೊಂಡಿದ್ದರು. ಇದೀಗ ಎಲ್ಲವೂ ಸುಖಾಂತ್ಯವಾಗಿದೆ. ರಾಖಿ ಸಾವಂತ್ ನನ್ನೊಂದಿಗೆ ಮದುವೆ ಆಗಿದ್ದಾರೆ ಎಂದು ಸ್ವತಃ ಆದಿಲ್ ಹೇಳಿಕೊಂಡಿದ್ದಾರೆ. ಹಾಗಾಗಿ ಮದುವೆ ವಿವಾದ ಸರಿ ಹೋಗಿದೆ. ಹಾಗಾಗಿಯೇ ಕೇಸರಿ ಬಣ್ಣದ ಬುರ್ಖಾ ಧರಿಸಿ ಎಲ್ಲರಿಗೂ ವಂದನೆಗಳನ್ನು ಹೇಳಿದ್ದಾರೆ ರಾಖಿ.

    ರಾಖಿ ಕಣ್ಣೀರು ಹಾಕುತ್ತಿದ್ದಂತೆಯೇ ಮದುವೆಯಾಗಿ ಆರು ತಿಂಗಳಿಗೆ ಈ ಮದುವೆ ಮುರಿದು ಬಿತ್ತು ಎಂದು ಹೇಳಲಾಗಿತ್ತು. ಆರು ತಿಂಗಳ ಹಿಂದೆಯಷ್ಟೇ ರಾಖಿ ಸಾವಂತ್ ಮತ್ತು ಮೈಸೂರು ಹುಡುಗ ಆದಿಲ್ ಖಾನ್ ರಿಜಿಸ್ಟರ್ ಮದುವೆ ಆಗಿದ್ದರು. ನಿಕಾ ಕೂಡ ಮಾಡಿಕೊಂಡಿದ್ದರು. ಆದರೆ, ತಮ್ಮ ಮದುವೆಯೇ ಆಗಿಲ್ಲ ಎಂದು ಆದಿಲ್ ಹೇಳುತ್ತಿದ್ದಾನೆ ಎಂದು ರಾಖಿ ರಂಪಾಟ ಮಾಡಿದ್ದರು. ಮದುವೆ ಆಗಿದ್ದರ ಗುರುತಾಗಿ ರಿಜಿಸ್ಟರ್ ಪತ್ರಗಳನ್ನೂ ಅವರು ಬಹಿರಂಗ ಪಡಿಸಿದ್ದರು. ಇದನ್ನೂ ಓದಿ: ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿದ್ದ ರಾಖಿ, ‘ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆಯವರೆಗೆ ನಾನು ಅಂದರೆ ಇಷ್ಟವಿಲ್ಲ. ಹಾಗಾಗಿ ಅವರೂ ಅಡ್ಡಿ ಪಡಿಸುತ್ತಿದ್ದಾರೆ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ, ಅವನು ನನಗೆ ಮೋಸ ಮಾಡುತ್ತಿದ್ದಾನೆ’ ಎಂದು ರಾಖಿ ಹೇಳಿಕೊಂಡಿದ್ದರು.

    ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆದಿಲ್ ಖಾನ್  ಮದುವೆ ಆಗಿ ಮೋಸ ಮಾಡ್ತಿದ್ದಾನೆ : ನಟಿ ರಾಖಿ ಸಾವಂತ್ ಅಳಲು

    ಆದಿಲ್ ಖಾನ್ ಮದುವೆ ಆಗಿ ಮೋಸ ಮಾಡ್ತಿದ್ದಾನೆ : ನಟಿ ರಾಖಿ ಸಾವಂತ್ ಅಳಲು

    ದುವೆಯಾಗಿ ಆರು ತಿಂಗಳಿಗೆ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಮದುವೆ ಮುರಿದು ಬಿತ್ತಾ? ಹೌದು ಎನ್ನುತ್ತಾರೆ ನಟಿ ರಾಖಿ ಸಾವಂತ್. ಆರು ತಿಂಗಳ ಹಿಂದೆಯಷ್ಟೇ ರಾಖಿ ಸಾವಂತ್ ಮತ್ತು ಮೈಸೂರು ಹುಡುಗ ಆದಿಲ್ ಖಾನ್ ರಿಜಿಸ್ಟರ್ ಮದುವೆ ಆಗಿದ್ದಾರೆ. ನಿಕಾ ಕೂಡ ಮಾಡಿಕೊಂಡಿದ್ದರು. ಆದರೆ, ಇದೀಗ ತಮ್ಮ ಮದುವೆಯೇ ಆಗಿಲ್ಲ ಎಂದು ಆದಿಲ್ ಹೇಳುತ್ತಿದ್ದಾನೆ ಎನ್ನುತ್ತಾರೆ ರಾಖಿ. ಮದುವೆ ಆಗಿದ್ದರ ಗುರುತಾಗಿ ರಿಜಿಸ್ಟರ್ ಪತ್ರಗಳನ್ನೂ ಅವರು ಬಹಿರಂಗ ಪಡಿಸಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿರುವ ರಾಖಿ, ‘ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆಯವರೆಗೆ ನಾನು ಅಂದರೆ ಇಷ್ಟವಿಲ್ಲ. ಹಾಗಾಗಿ ಅವರೂ ಅಡ್ಡಿ ಪಡಿಸುತ್ತಿದ್ದಾರೆ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ, ಅವನು ನನಗೆ ಮೋಸ ಮಾಡುತ್ತಿದ್ದಾನೆ’ ಎಂದು ರಾಖಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: `ಬಘೀರ’ ಸಿನಿಮಾದ ಶೂಟಿಂಗ್ ವೇಳೆ ಅವಗಢ: ನಟ ಶ್ರೀಮುರಳಿಗೆ ಪೆಟ್ಟು

    ರಾಖಿ ಸಾವಂತ್ ಕದ್ದುಮುಚ್ಚಿ ಎರಡನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೈಸೂರು ಹುಡುಗ ಆದಿಲ್ ಜೊತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಈ ಸುದ್ದಿಗೆ ಪೂರಕ ಆದಿಲ್ ಮತ್ತು ರಾಖಿ ಸಾವಂತ್ ಮದುವೆಯನ್ನು ರೆಜಿಸ್ಟರ್ ಮಾಡಿಸುತ್ತಿರುವ ಫೋಟೋಗಳು ಹರಿದಾಡುತ್ತಿವೆ. ಅಲ್ಲದೇ, ರಿಜಿಸ್ಟರ್ ಪತ್ರದಲ್ಲಿ ಇಬ್ಬರು ಫೋಟೋ ಕೂಡ ಇರುವುದು ಕಂಡುಬಂದಿದೆ.

    ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ.

    ನಿನ್ನೆಯಷ್ಟೇ ತಮ್ಮ ತಾಯಿಗೆ ಕ್ಯಾನ್ಸರ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಮರಾಠಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ದಢೀರ್ ಅಂತ ಮದುವೆ ಪತ್ರವನ್ನು ಹಿಡಿದು ನಿಂತಿದ್ದಾರೆ. ತಾಯಿಗೆ ಹುಷಾರಿಲ್ಲದ ಕಾರಣದಿಂದಾಗಿ ಅವರು ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಆದರೆ, ಈ ಮದುವೆ ಕುರಿತಾಗಿ ಆದಿಲ್ ಆಗಲಿ ಅಥವಾ ರಾಖಿ ಸಾವಂತ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ರೆಜಿಸ್ಟಾರ್ ಮದುವೆ ಆಗಿರುವ ಕುರಿತು, ಅವರು ಸಹಿ ಮಾಡುತ್ತಿರುವ ಮತ್ತು ಆ ಪತ್ರವನ್ನು ಹಿಡಿದು ನಿಂತಿರುವ ಫೋಟೋಗಳು ಮಾತ್ರ ವೈರಲ್ ಆಗಿವೆ. ಮುಂದಿನ ದಿನಗಳಲ್ಲಿ ಈ ಫೋಟೋ ಕುರಿತಾಗಿ ಅವರು ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಖಿ ಸಾವಂತ್ ಇದೀಗ ಫಾತಿಮಾ: ಮೈಸೂರು ಹುಡುಗನ ಮದುವೆ ಕಹಾನಿ

    ರಾಖಿ ಸಾವಂತ್ ಇದೀಗ ಫಾತಿಮಾ: ಮೈಸೂರು ಹುಡುಗನ ಮದುವೆ ಕಹಾನಿ

    ನಿನ್ನೆಯಷ್ಟೇ ಮೈಸೂರಿನ ಹುಡುಗ ಆದಿಲ್ ಖಾನ್ ಜೊತೆ ರಾಖಿ ಸಾವಂತ್ ರಿಜಿಸ್ಟರ್ ಮದುವೆ ಆಗಿರುವ ವಿಚಾರ ಬಿಟೌನ್ ಅಂಗಳದಿಂದ ಹೊರ ಬಿದ್ದಿತ್ತು. ಇದರ ಬೆನ್ನಲ್ಲೇ ರಾಖಿ ಅವರ ಹೆಸರು ಕೂಡ ಬದಲಾವಣೆ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಿಜಿಸ್ಟರ್ ಮದುವೆ ಆದ ನಂತರ ರಾಖಿ ಅವರು ಫಾತಿಮಾ ಆಗಿ ಬದಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಮದುವೆ ರಿಜಿಸ್ಟರ್ ನಲ್ಲಿ ರಾಖಿ ಅನಂತ್ ಸಾವಂತ್ ಅಂತಾನೇ ಹೆಸರಿದೆ. ಈ ರಿಜಿಸ್ಟರ್ ಆದ ನಂತರ ಹೆಸರಿನ ಬದಲಾವಣೆ ಆಗಿದೆಯಂತೆ.

    ರಾಖಿ ಸಾವಂತ್ ಕದ್ದುಮುಚ್ಚಿ ಎರಡನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೈಸೂರು ಹುಡುಗ ಆದಿಲ್ ಜೊತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಈ ಸುದ್ದಿಗೆ ಪೂರಕ ಆದಿಲ್ ಮತ್ತು ರಾಖಿ ಸಾವಂತ್ ಮದುವೆಯನ್ನು ರಿಜಿಸ್ಟರ್ ಮಾಡಿಸುತ್ತಿರುವ ಫೋಟೋಗಳು ಹರಿದಾಡುತ್ತಿವೆ. ಅಲ್ಲದೇ, ರಿಜಿಸ್ಟರ್ ಪತ್ರದಲ್ಲಿ ಇಬ್ಬರು ಫೋಟೋ ಕೂಡ ಇರುವುದು ಕಂಡುಬಂದಿದೆ. ಇದನ್ನೂ ಓದಿ: ಹರಿಪ್ರಿಯಾ ತಂದೆ ಕಾರ್ಯದ ದಿನ ನಾನು ಪ್ರಪೋಸ್ ಮಾಡಿದೆ:ವಸಿಷ್ಠ ಸಿಂಹ

    ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಇದೀಗ ಸದ್ದಿಲ್ಲದೇ ಆ ಕುಟುಂಬವನ್ನೂ ಸೊಸೆಯಾಗಿ ಸೇರಿಕೊಂಡಿದ್ದಾರೆ.

    ನಿನ್ನೆಯಷ್ಟೇ ತಮ್ಮ ತಾಯಿಗೆ ಕ್ಯಾನ್ಸರ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಮರಾಠಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ದಢೀರ್ ಅಂತ ಮದುವೆ ಪತ್ರವನ್ನು ಹಿಡಿದು ನಿಂತಿದ್ದಾರೆ. ತಾಯಿಗೆ ಹುಷಾರಿಲ್ಲದ ಕಾರಣದಿಂದಾಗಿ ಅವರು ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಆದರೆ, ಈ ಮದುವೆ ಕುರಿತಾಗಿ ಆದಿಲ್ ಆಗಲಿ ಅಥವಾ ರಾಖಿ ಸಾವಂತ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ರೆಜಿಸ್ಟಾರ್ ಮದುವೆ ಆಗಿರುವ ಕುರಿತು, ಅವರು ಸಹಿ ಮಾಡುತ್ತಿರುವ ಮತ್ತು ಆ ಪತ್ರವನ್ನು ಹಿಡಿದು ನಿಂತಿರುವ ಫೋಟೋಗಳು ಮಾತ್ರ ವೈರಲ್ ಆಗಿವೆ. ಮುಂದಿನ ದಿನಗಳಲ್ಲಿ ಈ ಫೋಟೋ ಕುರಿತಾಗಿ ಅವರು ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಿಯತಮನ ಜೊತೆ ರಿಜಿಸ್ಟರ್ ಮದ್ವೆಯಾಗಿ ವರನಿಗೆ ಕೈಕೊಟ್ಟ ಯುವತಿ!

    ಪ್ರಿಯತಮನ ಜೊತೆ ರಿಜಿಸ್ಟರ್ ಮದ್ವೆಯಾಗಿ ವರನಿಗೆ ಕೈಕೊಟ್ಟ ಯುವತಿ!

    ಮೈಸೂರು: ಕಲ್ಯಾಣ ಮಂಟಪಕ್ಕೆ ವಧು ಬಾರದ ಕಾರಣ ಮದುವೆ ಮುರಿದು ಬಿದ್ದಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

    ಈ ಹಿಂದೆ ರಿಜಿಸ್ಟರ್ ಮದುವೆ ಮಾಡಿಕೊಂಡು ಇಂದು ಮತ್ತೊಬ್ಬರ ಜೊತೆ ಮದುವೆಗೆ ವಧು ಮುಂದಾಗಿ ಕೊನೆ ಕ್ಷಣದಲ್ಲಿ ಮದುವೆಯನ್ನು ಮುರಿದುಕೊಂಡಿದ್ದಾಳೆ. ಚಿಕ್ಕಮಗಳೂರು ಮೂಲದ ಕವಿತಾ(ಹೆಸರು ಬದಲಾಯಿಸಲಾಗಿದೆ) ಇಂದು ಮೈಸೂರಿನಲ್ಲಿ ಟಿ. ನರಸೀಪುರ ಮೂಲದ ನಿಖಿಲ್ ಅರಸ್ ಅವರನ್ನು ಕೈ ಹಿಡಿಯಬೇಕಿತ್ತು.

    ಈಗಾಗಲೇ ತನ್ನ ಪ್ರೇಮಿಯೊಂದಿಗೆ ರಿಜಿಸ್ಟರ್ ಮದುವೆ ಆಗಿರುವ ಕವಿತಾ, ಮನೆಯವರ ಒತ್ತಾಯದ ಮೇರೆಗೆ ನಿಖಿಲ್ ಅರಸ್ ಜೊತೆ ನಿಶ್ಚಿತಾರ್ಥವಾಗಿ ಇಂದು ಮದುವೆ ಆಗಬೇಕಿತ್ತು. ಮಂಗಳವಾರ ರಾತ್ರಿ ಆರತಕ್ಷತೆ, ಇಂದು ಬೆಳಗ್ಗೆ 6.45 ರಿಂದ 7.45 ಮೂಹೂರ್ತದಲ್ಲಿ ಮದುವೆ ನಡೆಯಬೇಕಿತ್ತು.

    ಮಂಗಳವಾರ ಕಲ್ಯಾಣ ಮಂಟಪಕ್ಕೆ ಬರೋದಾಗಿ ಚಿಕ್ಕಮಗಳೂರುನಿಂದ ಹೊರಟಿದ್ದ ಕವಿತಾ, ಕಲ್ಯಾಣ ಮಂಟಪಕ್ಕೆ ಹೋಗುವ ವೇಳೆ ತನ್ನ ಪೋಷಕರಿಗೆ ನಾನು ಈಗಾಗಲೇ ರಿಜಿಸ್ಟರ್ ಮದುವೆ ಆಗಿರುವುದಾಗಿ ಹೇಳಿದ್ದಾಳೆ. ಇದರಿಂದ ಕಂಗಾಲಾದ ಕವಿತಾ ಕುಟುಂಬ ಕಲ್ಯಾಣ ಮಂಟಪಕ್ಕೆ ಬಾರದೇ ದೂರ ಉಳಿದಿದೆ.

    ಕವಿತಾಳ ನಡವಳಿಕೆಯಿಂದ ವರ ನಿಖಿಲ್ ಅರಸ್ ಕುಟುಂಬ ಕಕ್ಕಾಬಿಕ್ಕಿಯಾಗಿದೆ. ವಧುವಿಗಾಗಿ ಕಲ್ಯಾಣ ಮಂಟಪದಲ್ಲೇ ವರನ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಇರುವ ಕವಿತಾಳನ್ನು ಮನವೂಲಿಸಲು ನಿಖಿಲ್ ಅರಸ್ ಕುಟುಂಬ ಹಾಗೂ ಕವಿತಾ ಪೋಷಕರು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews