Tag: ರಿಚ್ಚಿ

  • ನಟಿಗೆ ಕಿರುಕುಳ – ನಿರ್ಮಾಪಕ ಹೇಮಂತ್‌ ಕುಮಾರ್‌ ಅರೆಸ್ಟ್‌

    ನಟಿಗೆ ಕಿರುಕುಳ – ನಿರ್ಮಾಪಕ ಹೇಮಂತ್‌ ಕುಮಾರ್‌ ಅರೆಸ್ಟ್‌

    ಬೆಂಗಳೂರು: ನಟಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪದಡಿ ರಾಜಾಜಿನಗರ ಪೊಲೀಸರು ನಿರ್ಮಾಪಕ ಹೇಮಂತ್‌ ಕುಮಾರ್‌ (Hemanth Kumar) ಅವರನ್ನು ಬಂಧಿಸಿದ್ದಾರೆ.

    ರಿಚ್ಚಿ (Richie)ಸಿನಿಮಾದ ಶೂಟಿಂಗ್‌ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು  ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೇಮಂತ್‌ ಕುಮಾರ್‌ ಅವರನ್ನು ಬಂಧಿಸಿದ್ದಾರೆ.  ಇದನ್ನೂ ಓದಿ:  700 ವರ್ಷಗಳ ಹಿಂದಿನ ಕಥೆಗೆ ಶ್ರೀಮುರಳಿ ನಾಯಕ: ಹೊಸ ಚಿತ್ರಕ್ಕೆ ಮುಹೂರ್ತ

    ನಟಿಯ ಆರೋಪ ಏನು?
    2022 ರಲ್ಲಿ ರಿಚ್ಚಿ ಹೆಸರಿನಲ್ಲಿ ಸಿನಿಮಾ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದರು. ನಂತರ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಎರಡು ಲಕ್ಷ ರೂ. ಹಣಕ್ಕೆ ಒಪ್ಪಂದವಾಗಿತ್ತು. ಮುಂಗಡ ಹಣವಾಗಿ ಹೇಮಂತ್‌ ಕುಮಾರ್‌ 60 ಸಾವಿರ ರೂ. ನೀಡಿದ್ದರು.  ಇದನ್ನೂ ಓದಿ:  ಕಾಂತಾರದ ಸಕ್ಸಸ್ ಜರ್ನಿ.. ದುನಿಯಾ ವಿಜಯ್ ವಿಭಿನ್ನವಾಗಿ ಅಭಿನಂದನೆ

    ಸಿನಿಮಾ ಶೂಟಿಂಗ್ ವೇಳೆ ಅರೆಬರೆ ಬಟ್ಟೆ ಧರಿಸುವಂತೆ ಒತ್ತಾಯ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಚಿತ್ರ ಶೂಟಿಂಗ್ ಮುಗಿದ ಮೇಲೆ ಪ್ರಚಾರದ ನೆಪದಲ್ಲಿ ಖಾಸಗಿ ಹೋಟೆಲಿಗೆ ಒಬ್ಬಳೇ ಬರುವಂತೆ ಕಿರುಕುಳ ನೀಡಿದ್ದರು.

    ಈ ಬೇಡಿಕೆಗೆ ಒಪ್ಪದೇ ಇದ್ದಾಗ ಚಿತ್ರದಲ್ಲಿ ಸೆನ್ಸಾರ್ ಆಗದ ಪೋಟೋಗಳನ್ನು ಸೋಷಿಯಲ್ ಮೀಡಿಯದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೇ ನನ್ನ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ದೂರು ನೀಡಿದ್ದರು.

  • ‘ರಿಚ್ಚಿ’ ಹಾಡಿಗೆ ಸೊಂಟ ಬಳುಕಿಸಲಿರುವ ಮಾನ್ವಿತಾ ಕಾಮತ್

    ‘ರಿಚ್ಚಿ’ ಹಾಡಿಗೆ ಸೊಂಟ ಬಳುಕಿಸಲಿರುವ ಮಾನ್ವಿತಾ ಕಾಮತ್

    ರಿಚ್ಚಿ (ಹೇಮಂತ್ ಕುಮಾರ್) ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ರಿಚ್ಚಿ (Ritchie) ಚಿತ್ರದಲ್ಲಿ ಟಗರು ಖ್ಯಾತಿಯ ಮಾನ್ವಿತ ಕಾಮತ್ (Manvita Kamat) ನಟಿಸುತ್ತಿದ್ದಾರೆ.  ಖ್ಯಾತ ಗಾಯಕ ಸೋನು ನಿಗಮ್ ಹಾಡಿರುವ (Song), ಅಗಸ್ತ್ಯ ಸಂಗೀತ ಸಂಯೋಜಿಸಿರುವ ‘ಸನಿಹ ನೀ ಇರುವಾಗ’ ಎಂಬ ಹಾಡಿಗೆ ಮಾನ್ವಿತ ಹೆಜ್ಜೆ ಹಾಕಲಿದ್ದಾರೆ. ಜೊತೆಗೆ ಕೆಲವು ಮಾತಿನ ಭಾಗದ ಸನ್ನಿವೇಶಗಳಲ್ಲೂ ಅವರು ಅಭಿನಯಿಸಲಿದ್ದಾರೆ ಎಂದು ರಿಚ್ಚಿ ತಿಳಿಸಿದ್ದಾರೆ.

    ಈ ಸಿನಿಮಾದಲ್ಲಿ ಮಾನ್ವಿತಾ ಕಾಮತ್ ಕೇವಲ ಹಾಡಿಗೆ ಮಾತ್ರ ಹೆಜ್ಜೆ ಹಾಕುತ್ತಿಲ್ಲ, ಜೊತೆಗೆ ಕೆಲವು ದೃಶ್ಯಗಳಲ್ಲೂ ಅವರು ನಟಿಸಲಿದ್ದಾರೆ. ಹಾಗಾಗಿ ಈ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರಂತೆ. ವಿಶೇಷ ಸನ್ನಿವೇಶಗಳು ಅವು ಆಗಿರಲಿವೆ ಎನ್ನುವುದು ಚಿತ್ರತಂಡದ ಮಾತು.

    ಅಗಸ್ತ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ವೆಂಕಟಾಚಲಯ್ಯ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರಾಕೇಶ್ ರಾವ್ ಅವರ ಸಹ ನಿರ್ಮಾಣವಿದೆ.   ರಿಚ್ಚಿ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಅಜಿತ್ ಕುಮಾರ್ ಅವರ ಛಾಯಾಗ್ರಹಣ ರಿಚ್ಚಿ ಚಿತ್ರಕ್ಕಿದೆ.

  • ರಿಚ್ಚಿ ಹೀರೋ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟಿ

    ರಿಚ್ಚಿ ಹೀರೋ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟಿ

    ಹೊಸಬರ ಸಿನಿಮಾ ‘ರಿಚ್ಚಿ’ (Ritchie) ಮೊನ್ನೆ ಮೊನ್ನೆಯಷ್ಟೇ ತನ್ನ ಹಾಡುಗಳನ್ನು ಬಿಡುಗಡೆ ಮಾಡಿತ್ತು. ಕುನಾಲ್ ಗಾಂಜಾವಾಲ್ ಈ ಸಿನಿಮಾಗಾಗಿ ಮತ್ತೆ ಕನ್ನಡಕ್ಕೆ ಬಂದಿದ್ದರು. ಒಂದೊಳ್ಳೆ ಹಾಡು ಹೇಳಿದ್ದರು. ನಗನಗ್ತಾ ಶೂಟಿಂಗ್ ಮುಗಿಸಿ, ಸಿನಿಮಾ ರಿಲೀಸ್ ಗೆ ರೆಡಿ ಮಾಡಿಕೊಳ್ಳುತ್ತಿದ್ದ ತಂಡಕ್ಕೆ ಈಗೊಂದು ಶಾಕಿಂಗ್ ನ್ಯೂಸ್ ಬಂದಿದೆ.

    ರಿಚ್ಚಿ ಸಿನಿಮಾದ ನಾಯಕ, ನಿರ್ಮಾಪಕ, ನಿರ್ದೇಶಕ ರಿಚ್ಚಿ ವಿರುದ್ಧ ಸಿನಿಮಾದ ನಾಯಕಿ ಪೊಲೀಸ್ (police) ಠಾಣೆ ಮೆಟ್ಟಿಲು ಏರಿದ್ದಾರೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಈ ಇಬ್ಬರ ನಡುವೆ ಜಗಳ ನಡೆದಿದ್ದು, ನಟಿ ರೆಮೋಲಾ (Remola) ಹಾಗೂ ನಟಿಯ ತಾಯಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ರಿಚ್ಚಿ ವಿರುದ್ಧ ದೂರು (complaint) ದಾಖಲಿಸಿದ್ದಾರೆ.

    ತನ್ನದೇ ಹೆಸರನ್ನು ಸಿನಿಮಾದ ಟೈಟಲ್ ಆಗಿಸಿ, ಹಲವು ಜವಾಬ್ದಾರಿಗಳನ್ನು ಹೊತ್ತಿದ್ದಾರೆ ರಿಚ್ಚಿ. ಈ ಸಿನಿಮಾಗೆ ಕಿರುತೆರೆ ನಟಿ ರೆಮೋಲಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಂಭಾವನೆಯಾಗಿ ಎರಡು ಲಕ್ಷ ರೂಪಾಯಿಯ ಚೆಕ್ ಅನ್ನೂ ನೀಡಿದ್ದಾರೆ. ಆದರೆ, ಕಾಲ್ ಶೀಟ್ ವಿಚಾರವಾಗಿ ಇಬ್ಬರ ಮಧ್ಯ ಗಲಾಟೆಯಾಗಿದೆ. ಅಲ್ಲದೇ, ರೆಮೋಲಾಗೆ ಕೊಟ್ಟಿರುವ ಚೆಕ್ ಬೌನ್ಸ್ ಕೂಡ ಆಗಿದೆ. ಈ ವಿಚಾರವಾಗಿ ನಟಿ ಮತ್ತು ರಿಚ್ಚಿ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ರಮೋಲಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಅಲ್ಲಿ ಇತ್ಯರ್ಥವಾಗದೇ ಇದೀಗ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

    ನಟಿಯ ತಾಯಿ ತಮಗೆ ಅವಾಚ್ಯ ಪದಗಳಿಂದ ಬೈದಿದ್ದಾರೆ ಎಂದು ರಿಚ್ಚಿ ಆರೋಪ ಮಾಡಿದ್ದಾರೆ.  ಅದಕ್ಕೆ ಆಡಿಯೋ ಕ್ಲಿಪ್ ವೊಂದನ್ನು ನೀಡಿದ್ದಾರೆ. ಇಂದು ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಮಾತುಗಳನ್ನು ದಾಖಲಿಸಲಿದ್ದಾರಂತೆ ರಿಚ್ಚಿ.

  • ರಿಚ್ಚಿಗಾಗಿ ಹಾಡಿದ ಸರಿಗಮಪ ಖ್ಯಾತಿಯ ಅಂಕಿತಾ ಕುಂಡು

    ರಿಚ್ಚಿಗಾಗಿ ಹಾಡಿದ ಸರಿಗಮಪ ಖ್ಯಾತಿಯ ಅಂಕಿತಾ ಕುಂಡು

    ಮಾರುತಿ ಮೂವೀ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ರಿಚ್ಚಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ ಹಾಡುಗಳ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ರಿಚ್ಚಿ ಚಿತ್ರಕ್ಕಾಗಿ ಕುನಾಲ್ ಗಾಂಜಾವಾಲ ಅವರು ಬಹಳ ವರ್ಷಗಳ ನಂತರ ಹಾಡಿರುವ ಹಾಡೊಂದು ಬಿಡುಗಡೆಯಾಗಿ, ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗ ಚಿತ್ರದ ಮತ್ತೊಂದು ಹಾಡು ಜುಲೈ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

    ವಿನೋದ್  ಅವರು ಈ‌ ಹಾಡನ್ನು ಬರೆದಿದ್ದು, ಹೆಸರಾಂತ ಗಾಯಕಿ ಅಂಕಿತಾ ಕುಂಡು ಹಾಡಿದ್ದಾರೆ. ಅಗಸ್ತ್ಯ ಸಂತೋಷ್ ಸಂಗೀತ ನೀಡಿದ್ಧಾರೆ.  ರಿಚ್ಚಿ ಇದು ಸಿನಿಮಾ‌ ಹೆಸರು ಮಾತ್ರವಲ್ಲ, ನಿರ್ದೇಶಕ ಹಾಗೂ ನಾಯಕನ ಹೆಸರು ಕೂಡ. ಹೌದು ತಮ್ಮ ಹೆಸರನ್ನೇ ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ ರಿಚ್ಚಿ. ಚಿತ್ರದ ನಿರ್ಮಾಪಕರೂ ಇವರೆ.‌ ರಾಕೇಶ್ ರಾವ್ ಹಾಗೂ ವೆಂಕಟಾಚಲಯ್ಯ ರಿಚ್ಚಿ ಚಿತ್ರದ ಸಹ ನಿರ್ಮಾಪಕರು. ಅಣಜಿ ನಾಗರಾಜ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಇದನ್ನೂ ಓದಿ: ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಹಾಟ್‌ ಆಗಿ ಕಾಣಿಸಿಕೊಂಡ ‘ಕೆಜಿಎಫ್‌’ ನಟಿ

    ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ರಿಚ್ಚಿ ನಿರ್ಮಾಣವಾಗಿದೆ. ಅಗಸ್ತ್ಯ ಸಂತೋಷ್ ಅವರು ಸಂಗೀತ ನೀಡಿರುವ ನಾಲ್ಕು ಸುಮಧುರ ಹಾಡುಗಳು ಈ ಚಿತ್ರದಲ್ಲಿವೆ. ಸೋನು ನಿಗಮ್, ಕುನಾಲ್ ಗಾಂಜಾವಾಲ ಹಾಗೂ ಅಂಕಿತಾ ಕುಂಡು ಹಾಡುಗಳನ್ನು ಹಾಡಿದ್ದಾರೆ. ಗೌಸ್ ಫಿರ್, ಆನಂದ್ ಹಾಗೂ ವಿನೋದ್ ಹಾಡುಗಳನ್ನು ಬರೆದಿದ್ದಾರೆ. ಹಿಂದಿ ಭಾಷೆಯಲ್ಲಿ ಈ ಚಿತ್ರದ ಹಾಡುಗಳನ್ನು ಜಾವೇದ್ ಅಲಿ, ಪಲಾಕ್ ಮುಚ್ಚಲ್ ಹಾಗೂ ಕುನಾಲ್ ಗಾಂಜಾವಾಲ ಹಾಡಿದ್ದಾರೆ.

     

    ಅಜಿತ್ ಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿಪ್ರಕಾಶ್, ಧನಂಜಯ ಹಾಗೂ ಭೂಷಣ್ ನೃತ್ಯ ನಿರ್ದೇಶನ ಹಾಗೂ ವಿಕ್ರಮ್ ಮೋರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ‌ ಈ ಚಿತ್ರಕ್ಕಿದೆ. ರಿಚ್ಚಿ ಅವರಿಗೆ ನಾಯಕಿಯಾಗಿ ಕನ್ನಡತಿ ಧಾರಾವಾಹಿ ಖ್ಯಾತಿಯ ರಮೋಲ ಅಭಿನಯಿಸಿದ್ದಾರೆ. ಮನೋಜ್, ಮಿಮಿಕ್ರಿ ಗೋಪಿ, ಮಜಾಭಾರತ ಚಂದ್ರಪ್ರಭ, ಕಾಮಿಡಿ ಕಿಲಾಡಿಗಳು ರಾಘವೇಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಹಾಡಿನ ಮೂಲಕ ಪ್ರೇಮಲೋಕಕ್ಕೆ ಆಹ್ವಾನ ನೀಡಿದ್ದಾರೆ ರಿಚ್ಚಿ

    ಹಾಡಿನ ಮೂಲಕ ಪ್ರೇಮಲೋಕಕ್ಕೆ ಆಹ್ವಾನ ನೀಡಿದ್ದಾರೆ ರಿಚ್ಚಿ

    ಹಾಡುಗಳೇ ಚಿತ್ರಕ್ಕೆ ಮೊದಲು ಆಮಂತ್ರಣವಿದ್ದಂತೆ. ಇಂಥದ್ದೊಂದು ಆಮಂತ್ರಣವನ್ನು ತಯಾರಿಸಿ ಜನರ ಮುಂದೆ ಹೋಗಿದ್ದಾರೆ ನಿರ್ದೇಶಕ, ನಟ, ನಿರ್ಮಾಪಕ ರಿಚ್ಚಿ (Richie). ಈ ಚಿತ್ರದ ಮೋಹಕ ಹಾಡೊಂದು ಇದೀಗ ಬಿಡುಗಡೆಯಾಗಿದ್ದು, ಕುನಾಲ್ ಗಾಂಜಾವಾಲಾ ಸಂಗೀತದೊಂದಿಗೆ ಹಾಡು (Song) ಮೂಡಿ ಬಂದಿದೆ. ಈ ಚೆಂದದ ಹಾಡು ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಪ್ರೇಮ ಲೋಕದಲ್ಲಿ ತೇಲಾಡಿಸುತ್ತಿದೆ.

    ‘ಕಳೆದು ಹೋಗಿರುವೆ ನಿನ್ನ ನೋಡಿ, ಜೀವ ಹಿಂಡುತಿದೆ ಒಲವು ಮೂಡಿ’ ಅಂತ ಶುರುವಾಗುವ ಈ ಹಾಡು ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲದರಲ್ಲಿಯೂ ಮೋಡಿ ಮಾಡುವಂತಿದೆ. ಅದರಲ್ಲಿಯೂ ರಿಚ್ಚಿ ಮತ್ತು ರಮೋಲಾ ಜೋಡಿ ಎಲ್ಲರನ್ನೂ ಆವರಿಸಿಕೊಳ್ಳುವಂತೆ ಕಾಣಿಸಿಕೊಂಡಿದೆ. ಈ ಮೂಲಕ ಇದೊಂದು ಅದ್ಭುತ ಪ್ರೇಮ ಕಥಾನಕವಾಗಿ ದಾಖಲಾಗುವ ಭರವಸೆಯಂತೂ ದಟ್ಟವಾಗಿದೆ. ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗೀತರಚನೆಕಾರ ಗೌಸ್ ಪೀರ್ ಖಾತೆಗೆ ಮತ್ತೊಂದು ಮಧುರವಾದಗೀತೆ  ಜಮೆಯಾಗಿದೆ. ಅಗಸ್ತ್ಯ ಸಂತೋಷ್ (Agastya Santosh) ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಗೀತೆಯನ್ನು, ಕುನಾಲ್ ಗಾಂಜಾವಾಲಾ(Kunal Ganjawala)  ಹಾಡಿದ್ದಾರೆ.

    ಅಣಜಿ ನಾಗರಾಜ್ ಅರ್ಪಿಸುವ ಈ ಸಿನಿಮಾ, ರಿಚ್ಚಿ ಪಾಲಿನ ಕನಸಿನ ಕೂಸು. ಸ್ವತಃ ನಿರ್ಮಾಪಕರಾಗಿ ಈ ಸಿನಿಮಾವನ್ನು ಪೊರೆದಿರುವ ಅವರಿಗೆ ರಾಕೇಶ್ ರಾವ್ ಸಹ ನಿರ್ಮಾಪಕರಾಗಿ ಹೆಗಲು ಕೊಟ್ಟಿದ್ದಾರೆ. ಈ  ವೀಡಿಯೋ ಸಾಂಗ್ ಮೂಲಕ ರೊಮ್ಯಾಂಟಿಕ್ ಲೋಕಕ್ಕೆ ಕರೆದೊಯ್ಯುತ್ತಾರೆ. ಲವ್ ಮತ್ತು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜಾನರ್ ನಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಇದನ್ನೂ ಓದಿ:ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ

    ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ ನೃತ್ಯ ಸಂಯೋಜನೆ ಚಿತ್ರಕ್ಕಿದ್ದು, ಪ್ರತಿಭಾವಂತ ತಾರಾಗಣ ಹಾಗೂ ನುರಿತ ತಾಂತ್ರಿಕ ವರ್ಗ ಚಿತ್ರಕ್ಕಾಗಿ ಕೆಲಸ ಮಾಡಿದೆ. ಅಜಿತ್ ಕುಮಾರ್ ಎನ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿ ಪ್ರಕಾಶ್, ಧನಂಜಯ ಮತ್ತು ಭೂಷಣ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ರಿಲೀಸ್ ಆಗಿರುವ ಹಾಡಿನ ಮೂಲಕ ಚಿತ್ರ ನಿರೀಕ್ಷೆ ಮೂಡಿಸಿದೆ.

  • ಚೆಂದದ ಹಾಡಿನೊಂದಿಗೆ ಮತ್ತೆ ಕನ್ನಡಕ್ಕೆ ಬಂದ ಕುನಾಲ್ ಗಾಂಜಾವಾಲಾ

    ಚೆಂದದ ಹಾಡಿನೊಂದಿಗೆ ಮತ್ತೆ ಕನ್ನಡಕ್ಕೆ ಬಂದ ಕುನಾಲ್ ಗಾಂಜಾವಾಲಾ

    ಹೊಸತನ, ಹೊಸಾ ಪ್ರಯೋಗಗಳನ್ನು ಒಳಗೊಂಡಿರುವ ಒಂದಷ್ಟು ಚಿತ್ರಗಳೀಗ ಒಂದರ ಹಿಂದೊಂದರಂತೆ ಬಿಡುಗಡೆಗೆ ಸಜ್ಜಾಗಿವೆ. ಆ ಸಾಲಿನಲ್ಲಿ ಸದ್ಯ ಮುನ್ನೆಲೆಯಲ್ಲಿರುವ ಚಿತ್ರ ರಿಚ್ಚಿ. ವಿಶೇಷವೆಂದರೆ ಈ ಸಿನಿಮಾದ ನಾಯಕ, ನಿರ್ದೇಶಕ, ನಿರ್ಮಾಪಕ ಹೀಗೆ ಅನೇಕ ಜವಾಬ್ದಾರಿಗಳನ್ನು ರಿಚ್ಚಿ (Richie) ಅವರೇ ಹೊತ್ತುಕೊಂಡಿದ್ದಾರೆ. ತಮ್ಮ ಹೆಸರನ್ನೇ ಶೀರ್ಷಿಕೆಯಾಗಿಟ್ಟುಕೊಂಡು ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿಯಲ್ಲಿರುವ ರಿಚ್ಚಿ, ತಮ್ಮ ಸಿನಿಮಾದ ಚೆಂದದ ಹಾಡೊಂದನ್ನು (Song) ಪ್ರೇಕ್ಷಕರಿಗೆ ತಲುಪಿಸಲು ಮುಂದಾಗಿದ್ದಾರೆ. ಕುನಾಲ್ ಗಾಂಜಾವಾಲಾ (Kunal Ganjawala) ಹಾಡಿರುವ ಆ ಹಾಡು ಇದೇ ಮೇ 18ರಂದು ಬಿಡುಗಡೆಗೊಳ್ಳಲಿದೆ.

    ಸಾಮಾನ್ಯವಾಗಿ, ಒಂದು ಜವಾಬ್ದಾರಿ ಹೊತ್ತುಕೊಂಡು ಸಿನಿಮಾವೊಂದನ್ನು ರೂಪಿಸೋದೇ ಸಾಹಸ. ಅಂಥಾದ್ದರಲ್ಲಿ ಎಲ್ಲ ಜವಾಬ್ದಾರಿಗೂ ಹೆಗಲುಕೊಟ್ಟು, ಬಹು ಕಾಲದ ಕನಸನ್ನು ನನಸು ಮಾಡಿಕೊಂಡಿರೋ ರಿಚ್ಚಿಯ ಸಾಹಸವನ್ನು ಮೆಚ್ಚದಿರಲು ಸಾಧ್ಯವಿಲ್ಲ. ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗೆ ಸೇರಬಹುದಾದ ಈ ಚಿತ್ರದಲ್ಲಿ ಹಾಡುಗಳಿಗೂ ಪ್ರಧಾನ ಪ್ರಾಶಸ್ತ್ಯ ಕೊಡಲಾಗಿದೆಯಂತೆ. ಅದರಲ್ಲೊಂದು ಹಾಡನ್ನು ಗೌಸ್ ಫೀರ್ ಬರೆದಿದ್ದಾರೆ. ಅದಕ್ಕೆ ಅಗಸ್ತ್ಯ ಸಂತೋಷ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದ ಮಂದಿಗೆ ಚಿರಪರಿಚಿತರಾಗಿರುವ ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ಆ ಹಾಡಿಗೆ ಧ್ವನಿಯಾಗಿದ್ದಾರೆ. ಈಗಾಗಲೇ ಅನೇಕ ಹಿಟ್ ಸಾಂಗುಗಳನ್ನು ಹಾಡಿ, ಒಂದಷ್ಟು ಕಾಲದಿಂದ ದೂರವುಳಿದಿದ್ದ ಕುನಾಲ್ ಗಾಂಜಾವಾಲಾ, ಈ ಹಾಡಿನ ಮೂಲಕ ಮತ್ತೆ ವಾಪಾಸಾಗಿದ್ದಾರೆ. ಇದನ್ನೂ ಓದಿ:ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಶುಭಮನ್‌ ಗಿಲ್

    ಅಂದಹಾಗೆ, ಈ ಚಿತ್ರದಲ್ಲಿ ರಿಚ್ಚಿಗೆ ನಾಯಕಿಯಾಗಿ ಕಿರುತೆರೆ ಖ್ಯಾತಿಯ ರಮೋಲಾ (Ramola) ನಟಿಸಿದ್ದಾರೆ. ಒಂದು ಭರ್ಜರಿ ತಾರಾಗಣ ಈ ಜೋಡಿಗೆ ಸಾಥ್ ಕೊಟ್ಟಿದೆ. ಹಲವಾರು ಹೊಸತನ, ಚೆಂದದ ಕಥೆ ಮತ್ತು ಅದ್ಭುತ ಎನ್ನುವಂತಹ ಮೇಕಿಂಗ್ ನೊಂದಿಗೆ ರಿಚ್ಚಿ ಸಂಪೂರ್ಣಗೊಂಡಿದೆ. ಪ್ರತಿಭಾವಂತರ ತಾಂತ್ರಿಕ ವರ್ಗದ ಸಾಥ್‍ನೊಂದಿಗೆ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆಯೆಂಬ ತೃಪ್ತಿ ಚಿತ್ರತಂಡದಲ್ಲಿದೆ. ವಿಶೇಷವೆಂದರೆ ಖ್ಯಾತ ಕೋರಿಯೋಗ್ರಾಫರ್ ಚಿನ್ನಿಮಾಸ್ಟರ್ ಬಲು ಪ್ರೀತಿಯಿಂದ ಈ ಚಿತ್ರಕ್ಕೆ ನೃತ್ಯನಿರ್ದೇಶನ ಮಾಡಿದ್ದಾರೆ.

    ಅಣಜಿ ನಾಗರಾಜ್ ಅರ್ಪಿಸುವ ಈ ಚಿತ್ರಕ್ಕೆ ರಾಕೇಶ್ ರಾವ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾದಲ್ಲಿ ಮೈ ನವಿರೇಳಿಸುವಂಥಾ ಸಾಹಸ ಸನ್ನಿವೇಶಗಳೂ ಇವೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಈಗಾಗೇ ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಕಾರ್ಯನಿರ್ವಹಿಸಿರುವ ರಿಚ್ಚಿ, ಅಚ್ಚರಿದಾಯಕ ಲುಕ್ಕುಗಳೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸಂಭ್ರಮದಲ್ಲಿದಾರೆ. ಅಜಿತ್ ಕುಮಾರ್ ಎನ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿ ಪ್ರಕಾಶ್, ಧನಂಜಯ ಮತ್ತು ಭೂಷಣ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ರಿಚ್ಚಿ ಅವತಾರದಲ್ಲಿ ಮತ್ತೆ ರಕ್ಷಿತ್ ಶೆಟ್ಟಿ ಎಂಟ್ರಿ!

    ರಿಚ್ಚಿ ಅವತಾರದಲ್ಲಿ ಮತ್ತೆ ರಕ್ಷಿತ್ ಶೆಟ್ಟಿ ಎಂಟ್ರಿ!

    ಬೆಂಗಳೂರು: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಈಗ ಮತ್ತೊಂದು ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಮತ್ತೆ ಉಳಿದವರು ಕಂಡಂತೆ ಸಿನಿಮಾದಲ್ಲಿನ ರಿಚ್ಚಿ ಅವತಾರದಲ್ಲಿ  ಕಾಣಿಸಿಕೊಳ್ಳಲಿದ್ದಾರೆ.

    ನಟ ರಕ್ಷಿತ್ ಶೆಟ್ಟಿ ಈಗ ಹೊಸ ನಿರ್ದೇಶಕರೊಂದಿಗೆ ಸಿನಿಮಾ ಮಾಡಲಿದ್ದು, ಈ ಸಿನಿಮಾವನ್ನು ರಾಹುಲ್ ಪಿಕೆ ನಿದೇರ್ಶಿಸುತ್ತಿದ್ದಾರೆ.

    ರಕ್ಷಿತ್ ಶೆಟ್ಟಿ ಮೊದಲ ಬಾರಿಗೆ ನಿರ್ದೇಶಿಸಿದ ಉಳಿದವರು ಕಂಡಂತೆ ಎಂಬ ಸಿನಿಮಾದಲ್ಲಿ, ರಾಹುಲ್ ಸಹಾಯಕ ನಿರ್ದೇಶಕರಾಗಿದ್ದರು. `ಉಳಿದವರು ಕಂಡಂತೆ’ ಸಿನಿಮಾವು ತಮಿಳು ಭಾಷೆಯಲ್ಲಿ ರೀಮೇಕ್ ಆಗಿತ್ತು. ಅಷ್ಟೇ ಅಲ್ಲದೇ ರಿಕ್ಕಿ ಮತ್ತು ಕಿರಿಕ್ ಪಾರ್ಟಿ ಸಿನಿಮಾದಲ್ಲೂ ಭಾಗಿಯಾಗಿದ್ದರು. ಇದೀಗ ಮೊದಲ ಬಾರಿಗೆ ರಾಹುಲ್ ಪಿಕೆ ಅವರು ನಿರ್ದೆಶಿಸುತ್ತಿದ್ದು, ಅದರಲ್ಲಿ ರಕ್ಷಿತ್ ಶೆಟ್ಟಿ ಅಭಿನಯಿಸಲು ಸಜ್ಜಾಗಿದ್ದಾರೆ.

    ರಾಹುಲ್ ಪಿಕೆ ನಿರ್ದೇಶನದ ಚಿತ್ರ ಕಥೆಯಲ್ಲಿ ರಕ್ಷಿತ್ ಅವರ ಪಾತ್ರ ರಿಚ್ಚಿಯನ್ನು ಹೋಲುವಂತೆ ಇದೆ ಎಂದು ಹೇಳಿದ್ದಾರೆ. ಹಾಗಾಗಿ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ರಿಚ್ಚಿ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಆದರೆ ಹೊಸ ಸಿನಿಮಾದ ಟೈಟಲ್ ಇನ್ನೂ ಬಿಡುಗಡೆ ಯಾಗಿಲ್ಲ.

    ಸದ್ಯ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಹಾಗೂ 777 ಚಾರ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಎರಡು ಸಿನಿಮಾದ ಚಿತ್ರೀಕರಣ ಮುಗಿದ ನಂತರ ಈ ಸಿನಿಮಾ ಸೆಟ್ಟೇರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv