Tag: ರಿಕ್ಷಾ ಚಾಲಕ

  • ಸಾಲ ತೀರಿಸದ್ದಕ್ಕೆ ಆಟೋ ಚಾಲಕನ ಪತ್ನಿಯನ್ನೇ ಪದೇ ಪದೇ ರೇಪ್‌ ಮಾಡಿದ ಫೈನಾನ್ಸರ್

    ಸಾಲ ತೀರಿಸದ್ದಕ್ಕೆ ಆಟೋ ಚಾಲಕನ ಪತ್ನಿಯನ್ನೇ ಪದೇ ಪದೇ ರೇಪ್‌ ಮಾಡಿದ ಫೈನಾನ್ಸರ್

    ಗಾಂಧಿನಗರ: ವ್ಯಕ್ತಿಯೊಬ್ಬ ಫೈನಾನ್ಸರ್ ನೀಡಿದ್ದ 50,000 ರೂ.ಗಳನ್ನು ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಆತನ ಪತ್ನಿ (Wife) ಮೇಲೆ ಅತ್ಯಾಚಾರವೆಸಗಿದ ಘಟನೆ ಗುಜರಾತ್‍ನ (Gujarat) ಅಹಮದಾಬಾದ್‍ನಲ್ಲಿ ನಡೆದಿದೆ.

    ಖಾಸಗಿ ಫೈನಾನ್ಸರಾದ ಅಜಿತ್ ಸಿನ್ಹ್ ಚಾವ್ಡಾ ಎಂಬಾತನಿಂದ ಆಟೋ ಚಾಲಕನೊಬ್ಬ (Auto Rickshaw Driver) ಸಾಲ ಪಡೆದಿದ್ದ. ಆದರೆ ಆ ಸಾಲವನ್ನು ತೀರಿಸಲು ವಿಫಲವಾಗಿದ್ದ. ಈ ಹಿನ್ನೆಲೆಯಲ್ಲಿ ಚಾವ್ಡಾ ಸಾಲ ಮಾಡಿದ್ದ ಆಟೋ ಚಾಲಕನ ಮನೆಗೆ ಬಂದು ಆತನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಜೊತೆಗೆ ಕೃತ್ಯವನ್ನು ಚಿತ್ರೀಕರಿಸಿದ್ದಾನೆ.

    ಅಷ್ಟೇ ಅಲ್ಲದೇ, ಚಾವ್ಡಾ ಆಟೋ ಚಾಲಕನ ಹೆಂಡತಿಯನ್ನು ಬಲವಂತವಾಗಿ ದೇವಸ್ಥಾನಕ್ಕೆ ಕರೆದೊಯ್ದು ಅವಳ ಹಣೆಗೆ ಸಿಂಧೂರ ಹಚ್ಚಿ ಅವಳನ್ನು ತನ್ನ ಹೆಂಡತಿ ಎಂದು ಘೋಷಿಸಿದ್ದಾನೆ. ಬಳಿಕ ಸಂತ್ರಸ್ತೆಯ ಮನೆಗೆ ಆಗಾಗ್ಗೆ ಭೇಟಿ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಕಾಸ್ ಕೊಟ್ರೆ ಮಾತ್ರ ಚಿಕಿತ್ಸೆ – ಸಿಬ್ಬಂದಿ ಲಂಚವತಾರ ಬಯಲು

    ಘಟನೆಗೆ ಸಂಬಂಧಿಸಿ ಸಂತ್ರಸ್ತೆ ದೂರು ದಾಖಲಿಸಲು ರಾಜ್‍ಕೋಟ್ ತಾಲೂಕಾ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಆದರೆ ಅವರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಅದಾದ ಬಳಿಕ ಆಕೆ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ಪೊಲೀಸರಿಗೆ ದೂರು ದಾಖಲಿಸಿಕೊಳ್ಳುವಂತೆ ತಿಳಿಸಿದೆ.

    BRIBE

    ತನ್ನ ವಿರುದ್ಧ ದೂರು ದಾಖಲಾದ ಬಗ್ಗೆ ತಿಳಿದ ಚಾವ್ಡಾ ಸಂತ್ರಸ್ತೆಯ ಪತಿ ಪಡೆದಿದ್ದ ಸಾಲದ ಮರುಪಾವತಿ ಮೊತ್ತದಲ್ಲಿ ವಿನಾಯತಿ ನೀಡುತ್ತೇನೆ ಎಂದು ಆಮಿಷವೊಡ್ಡಿದ್ದಾನೆ. ಅದಕ್ಕೆ ಒಪ್ಪದಿದ್ದಾಗ ಚಾವ್ಡಾ ತನ್ನ ಸಹಚರರಿಗೆ ಹೇಳಿ ಮಹಿಳೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಹಿಳೆಯ ಕೈಗೆ ಗಾಯವಾಗಿದೆ. ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಸಾರ್ವಜನಿಕರಿಗೆ ನಿತ್ಯವೂ ಕಿರುಕುಳ ಆರೋಪ – PSI ಗೀತಾಂಜಲಿ ಅಮಾನತು

    Live Tv
    [brid partner=56869869 player=32851 video=960834 autoplay=true]

  • ಕುಂಟ ಅಂತ ರೇಗಿಸಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆಗೈದ ರಿಕ್ಷಾ ಚಾಲಕ

    ಕುಂಟ ಅಂತ ರೇಗಿಸಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆಗೈದ ರಿಕ್ಷಾ ಚಾಲಕ

    ಮುಂಬೈ: ಕುಂಟ ಎಂದು ರೇಗಿಸಿದ್ದಕ್ಕೆ 32 ವರ್ಷದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ರಿಕ್ಷಾ ಚಾಲಕ ಹತ್ಯೆಗೈದಿರುವ ಘಟನೆ ಮುಂಬೈನ (Mumbai) ಗೋರೆಗಾಂವ್‍ನಲ್ಲಿ (Goregaon) ನಡೆದಿದೆ.

    ಗೋರೆಗಾಂವ್ (ಪೂರ್ವ)ದ ಮುಲುಂಡ್ ಲಿಂಕ್ ರಸ್ತೆಯ ಹನುಮಾನ್ ಟೆಕ್ಡಿಯಲ್ಲಿರುವ ಚೈನೀಸ್ ಫುಡ್ ಹೋಟೆಲ್ ಎದುರಿಗೆ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಮುಖೇಶ್ ಝಂಜರೆ (32) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾಶ್ಮೀರದಲ್ಲಿ ಹಿಂದೂಗಳೇ ಇರುವುದಿಲ್ಲ: ಫಾರೂಕ್ ಅಬ್ದುಲ್ಲಾ

    ಮುಖೇಶ್ ಝಂಜರೆ ಕುಳಿದ್ದ ವೇಳೆ ಆಹಾರ ತೆಗೆದುಕೊಂಡು ಹೋಗಲು 45 ವರ್ಷದ ಆರೋಪಿ ರಿಕ್ಷಾ ಚಾಲಕ ತೇಜ್ ಬಹದ್ದೂರ್ ಮೋರಿಯಾ ಹೋಟೆಲ್‍ಗೆ ಬಂದಿದ್ದನು. ಅಪಘಾತದಿಂದಾಗಿ ಬಲಗಾಲು ಅಂಗವೈಕಲ್ಯ ಹೊಂದಿದ್ದ ತೇಜ್ ಬಹದ್ದೂರ್ ಕುಂಟುತ್ತಾ ನಡೆಯುತ್ತಿದ್ದರು. ಇದನ್ನು ಕಂಡು ಮುಖೇಶ್ ಝಂಜರೆ ಚುಡಾಯಿಸಿ, ನಿಂದಿಸಲು ಆರಂಭಿಸಿದ್ದಾನೆ. ನಂತರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ರೊಚ್ಚಿಗೆದ್ದ ಮೋರಿಯಾ ಜೇಬಿನಿಂದ ಚಾಕುವನ್ನು ತೆಗೆದು, ಮುಖೇಶ್ ಎದೆ, ಹೊಟ್ಟೆ, ಕಿವಿ ಮತ್ತು ಕಣ್ಣಿನ ಮೇಲೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಂತರ ಘಟನೆಯಲ್ಲಿ ಗಾಯಗೊಂಡ ಮುಖೇಶ್ ಅವರನ್ನು ಟ್ರಾಮಾ ಕೇರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಬುಧವಾರ ಮಧ್ಯರಾತ್ರಿ 12.35ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇದೀಗ ಪೊಲೀಸರು ಆರೋಪಿ ತೇಜ್ ಬಹದ್ದೂರ್ ಮೋರಿಯಾ ಅನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಕಾಶ ಏರ್‌ಗೆ ಬಡಿದ ಹಕ್ಕಿ – ತಪ್ಪಿದ ದುರಂತ, ವಿಮಾನದ ಮೂತಿಗೆ ಹಾನಿ

    Live Tv
    [brid partner=56869869 player=32851 video=960834 autoplay=true]

  • ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು

    ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು

    ಲಕ್ನೋ: ಇ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಮಹಿಳೆಯೊಬ್ಬಳು ನಡು ರಸ್ತೆಯಲ್ಲಿಯೇ ಕಪಾಳಮೋಕ್ಷ ಮಾಡಿ ರಂಪಾಟ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ನೋಯ್ಡಾದ 2ನೇ ಹಂತದ, ಸೆಕ್ಟರ್ 110 ರ ಮಾರುಕಟ್ಟೆಯಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮಹಿಳೆಯ ಕಾರಿಗೆ ಈ ರಿಕ್ಷಾದ ಢಿಕ್ಕಿ ಹೊಡೆದ ಹಿನ್ನೆಲೆ ಗಲಾಟೆ ಪ್ರಾರಂಭವಾಯಿತು. ಇದರಿಂದ ಕೋಪಗೊಂಡ ಮಹಿಳೆ ಇ-ರಿಕ್ಷಾ ಚಾಲಕನ ಕಾಲರ್ ಅನ್ನು ನಡು ರಸ್ತೆಯಲ್ಲಿ ಎಳೆದಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಪಾಳ ಮೋಕ್ಷ ಮಾಡಿದ್ದಾಳೆ. ಈ ವೇಳೆ ಸ್ಥಳದಲ್ಲಿಯೇ ಸ್ಥಳೀಯರಿದ್ದರೂ, ಜಗಳ ಬಿಡಿಸಲು ಯಾರು ಮಧ್ಯಪ್ರವೇಶಿಸಲಿಲ್ಲ. ಇದನ್ನೂ ಓದಿ: ಕ್ಷಣಾರ್ಧದಲ್ಲಿ ಮಗನನ್ನು ಹಾವಿನಿಂದ ರಕ್ಷಿಸಿದ ತಾಯಿ – ವೀಡಿಯೋ ವೈರಲ್

    ಈ ವೀಡಿಯೋ ವೈರಲ್ ಆದ ನಂತರ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ನೋಯ್ಡಾ ಪೊಲೀಸರಿಗೆ ಆಗ್ರಹಿಸಲಾಗಿತ್ತು. ಇದೀಗ ಸಂತ್ರಸ್ತ ಮಿಥುನ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಕಿರಣ್ ಸಿಂಗ್ ಅನ್ನು ಬಂಧಿಸಿದ್ದಾರೆ. ಆರೋಪಿ ಶ್ರಮಿಕ್ ಕುಂಜ್ ನಿವಾಸಿಯಾಗಿದ್ದರೆ, ಮಿಥುನ್ ಅವರು ಸೆಕ್ಟರ್ 82ರ ಪಾಕೆಟ್-2 ನಲ್ಲಿ ವಾಸಿಸುತ್ತಿದ್ದಾರೆ.

    ಸದ್ಯ ಈ ಪ್ರಕರಣ ಸಂಬಂಧ ಟ್ವೀಟ್ ಮೂಲಕ ಮಾಹಿತಿ ನೀಡಿರುವ ನೋಯ್ಡಾ ಪೊಲೀಸರು, ಇ-ರಿಕ್ಷಾ ಚಾಲಕನ ದೂರಿನ ಮೇರೆಗೆ ಮಹಿಳೆಯನ್ನು ಠಾಣೆಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ

    Live Tv
    [brid partner=56869869 player=32851 video=960834 autoplay=true]

  • ಚಪಾತಿ ನೀಡದ್ದಕ್ಕೆ ಚಿಂದಿ ಆಯುವವನ ಕೈಯಿಂದ ನಡೆಯಿತು ರಿಕ್ಷಾ ಚಾಲಕನ ಕೊಲೆ!

    ಚಪಾತಿ ನೀಡದ್ದಕ್ಕೆ ಚಿಂದಿ ಆಯುವವನ ಕೈಯಿಂದ ನಡೆಯಿತು ರಿಕ್ಷಾ ಚಾಲಕನ ಕೊಲೆ!

    ನವದೆಹಲಿ: ಚಪಾತಿ ನೀಡಲು ನಿರಾಕರಿಸಿದಕ್ಕೆ ರಿಕ್ಷಾ ಚಾಲಕನನ್ನು ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.

    ಮುನ್ನಾ(40) ಮೃತವ್ಯಕ್ತಿಯಾಗಿದ್ದು, ಆರೋಪಿಯನ್ನು ಚಿಂದಿ ಆಯುವ ಫಿರೋಜ್ ಖಾನ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 26ರ ಮಂಗಳವಾರ, ವ್ಯಕ್ತಿಯೋರ್ವ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿ ನಂತರ ಸ್ಥಳೀಯರು ವ್ಯಕ್ತಿಯನ್ನು ಆಟೋದಲ್ಲಿ ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ.  ಇದನ್ನೂ ಓದಿ: ನೀವು ಊರಿಗೆ ಹಿರಿಯರು, ಕೋಳಿ ಅಂಗಡಿ ಉದ್ಘಾಟನೆಗೆ ತಂದೆಯನ್ನು ಆಹ್ವಾನಿಸಿದ್ದರು: ಪ್ರವೀಣ್ ಬಗ್ಗೆ ಆರೀಫ್ ಮಾತು

    ರಾತ್ರಿ 10 ಗಂಟೆ ಸುಮಾರಿಗೆ ವಿಷ್ಣು ಮಂದಿರ ಮಾರ್ಗದಲ್ಲಿ ಮುನ್ನಾ ಕುಳಿತಿದ್ದ. ಈ ವೇಳೆ ಹೋಟೆಲ್‍ನಿಂದ ತಂದಿದ್ದ ಚಪಾತಿಯನ್ನು ಮುನ್ನ ತಿನ್ನತೊಡಗಿದ. ನಂತರ ಅಲ್ಲಿಗೆ ಬಂದ ಕುಡುಕನೋರ್ವ ಚಪಾತಿ ತನಗೂ ನೀಡುವಂತೆ ಕೇಳಿದಾಗ ಮುನ್ನಾ ಚಪಾತಿ ಕೊಟ್ಟಿದ್ದಾನೆ. ನಂತರ ಆರೋಪಿ ಮತ್ತೊಂದು ಚಪಾತಿ ನೀಡುವಂತೆ ಕೇಳಿದ್ದಾನೆ. ಆಗ ಚಪಾತಿ ನೀಡಲು ನಿರಾಕರಿಸಿದ್ದಕ್ಕೆ ಹರಿತವಾದ ಚಾಕುವನ್ನು ಹೊರತಂದು ಮುನ್ನಾನನ್ನು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದರು.

    ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು, ಕೊನೆಗೆ ರಸ್ತೆ ಬದಿಯ ಪಾರ್ಕ್ ಒಂದರಲ್ಲಿ ತಂಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಜನರ ಕಣ್ಣೀರು ಒರೆಸುವುದು ಬಿಟ್ಟು ಗೃಹ ಸಚಿವರೇ ಕಣ್ಣೀರು ಹಾಕ್ತಿದ್ದಾರೆ – ರಾಜೀನಾಮೆ ಕೊಟ್ಟು ಹೊರಡಲಿ: ಶ್ರೀನಿವಾಸ್ ಬಿ.ವಿ

    Live Tv
    [brid partner=56869869 player=32851 video=960834 autoplay=true]

  • ಹಾವೇರಿ: ಪ್ರವಾಹದಲ್ಲಿ ಸಿಲುಕಿದ ಆಟೋ ಚಾಲಕನನ್ನು ಪ್ರಾಣದ ಹಂಗು ತೊರೆದು ರಕ್ಷಸಿದ ಯುವಕ

    ಹಾವೇರಿ: ಪ್ರವಾಹದಲ್ಲಿ ಸಿಲುಕಿದ ಆಟೋ ಚಾಲಕನನ್ನು ಪ್ರಾಣದ ಹಂಗು ತೊರೆದು ರಕ್ಷಸಿದ ಯುವಕ

    ಹಾವೇರಿ: ರಾತ್ರಿಯಿಡೀ ನೀರಿನಲ್ಲಿ ಸಿಲುಕಿದ್ದ ಆಟೋ ಚಾಲಕನನ್ನ ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೈದೂರು-ಯತ್ನಳ್ಳಿ ಗ್ರಾಮದ ಬಳಿ ನಡೆದಿದೆ.

    ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ರೈತರ ಜಮೀನಿನ ನೀರು ಸೇರಿ ಹಳ್ಳ ತುಂಬಿ ರಭಸವಾಗಿ ಹರಿಯುತ್ತಿತ್ತು. ನೀರಿನ ರಭಸಕ್ಕೆ ತೇಲಿ ಹೋಗಿದ್ದ ಯುವಕನಿಗೆ ಮುಳ್ಳುಕಂಟೆ ಆಸರೆಯಾಗಿ ಸಿಕ್ಕಿತ್ತು. ಅದನ್ನು ಹಿಡಿದುಕೊಂಡು ಮುಳ್ಳುಕಂಟೆಯಲ್ಲಿ ಕುಳಿತು ರಿಕ್ಷಾ ಚಾಲಕ ಗಂಗಪ್ಪ ರಾತ್ರಿ ಕಳೆದಿದ್ದಾರೆ ಎಂದು ಹೇಳಲಾಗಿದೆ.

    ಬೆಳಗ್ಗೆ ಹರಿಯುತ್ತಿರುವ ನೀರಿನ ಮಧ್ಯದ ಮುಳ್ಳುಕಂಟೆಯಲ್ಲಿ ಕುಳಿತಿದ್ದ ರಿಕ್ಷಾ ಚಾಲಕನನ್ನ ಕಂಡ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಗ್ರಾಮದ ಮಾರುತಿ ಎಂಬ ಯುವಕ ಸೇರಿ ಮೂವರು ಯುವಕರು ಪ್ರಾಣದ ಹಂಗು ತೊರೆದು ನೀರಿಗಿಳಿದು ರಿಕ್ಷಾ ಚಾಲಕನನ್ನ ರಕ್ಷಣೆ ಮಾಡಿದ್ದಾರೆ. ಯುವಕರ ಸಹಾಯದಿಂದ ಬದುಕಿ ಬಂದ ರಿಕ್ಷಾ ಚಾಲಕ ಗಂಗಪ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಮಾರುತಿ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನೀರಿನ ರಭಸಕ್ಕೆ ಇನ್ನೂ ಆಟೋ ರಿಕ್ಷಾ ಪತ್ತೆಯಾಗಿಲ್ಲ.

    ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.