Tag: ರಿಕ್ಕಿ ರೈ

  • ಫೈರಿಂಗ್ ಪ್ರಕರಣ – ವಿಚಾರಣೆಗೆ ಹಾಜರಾಗಲು 20 ದಿನಗಳ ಸಮಯಾವಕಾಶ ಕೋರಿದ ರಿಕ್ಕಿ ರೈ

    ಫೈರಿಂಗ್ ಪ್ರಕರಣ – ವಿಚಾರಣೆಗೆ ಹಾಜರಾಗಲು 20 ದಿನಗಳ ಸಮಯಾವಕಾಶ ಕೋರಿದ ರಿಕ್ಕಿ ರೈ

    ರಾಮನಗರ: ರಿಕ್ಕಿ ರೈ (Rikki Rai) ಮೇಲಿನ ಗುಂಡಿನ ದಾಳಿ ಪ್ರಕರಣ (Firing Case) ಕುರಿತು ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ನೋಟೀಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗಲು ರಿಕ್ಕಿ ರೈ 20 ದಿನಗಳ ಕಾಲಾವಕಾಶ ಕೇಳಿದ್ದು, ಮೆಡಿಕಲ್ ರಿಪೋರ್ಟ್ ಕೊಟ್ಟು ಸಮಯಾವಕಾಶ ಕೇಳಿದ್ದಾರೆ ಎಂದು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣ ಸಂಬಂಧ ಎಲ್ಲಾ ರೀತಿಯಲ್ಲೂ ತನಿಖೆ ನಡೆಯುತ್ತಿದೆ. ಕೆಲವೊಂದು ರಿಪೋರ್ಟ್‌ಗಳು ಬರಬೇಕಾಗಿದೆ, ಅದಕ್ಕಾಗಿ ಕಾಯುತ್ತಿದ್ದೇವೆ. ಈ ಎಲ್ಲಾ ವರದಿಗಳು ಬಂದ ಬಳಿಕ ಚಾರ್ಜ್‌ಶೀಟ್ ಫೈಲ್ ಮಾಡುತ್ತೇವೆ. ಜೊತೆಗೆ ರಿಕ್ಕಿ ರೈಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೇವೆ. ಅವರು ಬಂದ ನಂತರ ತನಿಖೆ ಮುಂದುವರಿಸುತ್ತೇವೆ ಎಂದರು. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಹುಟ್ಟುಹಬ್ಬ – ಮೋದಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ

    ಪ್ರಕರಣದಲ್ಲಿ ವಿಠಲ್ ಪ್ರಮುಖ ಆರೋಪಿಯಾಗಿದ್ದಾನೆ. ಆತನನ್ನು ದಸ್ತಗಿರಿ ಮಾಡಿ ಈಗಾಗಲೇ ಜೈಲಿಗೆ ಬಿಟ್ಟಿದ್ದೇವೆ. ಕೆಲವೊಂದು ಸಾಕ್ಷ್ಯಾಧಾರಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ. ಆ ವರದಿಗಳು ಬಂದ ಮೇಲೆ ಪ್ರಕರಣ ತನಿಖೆ ಚುರುಕುಗೊಳಿಸುತ್ತೇವೆ. ಸದ್ಯಕ್ಕೆ ವಿಠಲ್ ಒಬ್ಬನೇ ಕೇಸ್‌ನಲ್ಲಿ ಆರೋಪಿಯಾಗಿದ್ದಾನೆ. ರಿಕ್ಕಿ ರೈ ವಿಚಾರಣೆಗೆ ಹಾಜರಾದ ಬಳಿಕ ಮತ್ತಷ್ಟು ವಿಚಾರಗಳು ಹೊರಬರಬೇಕಿದೆ ಎಂದು ತಿಳಿಸಿದರು.‌ ಇದನ್ನೂ ಓದಿ: ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ – ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಬೆಲ್ಲದ್ ಪತ್ರ

  • ಫೈರಿಂಗ್ ಕೇಸ್ – ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ನೋಟಿಸ್

    ಫೈರಿಂಗ್ ಕೇಸ್ – ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ನೋಟಿಸ್

    ರಾಮನಗರ: ಮುತ್ತಪ್ಪ ರೈ (Muttappa Rai) ಪುತ್ರ ಮೇಲಿನ ಫೈರಿಂಗ್ ಪ್ರಕರಣ ಸಂಬಂಧ ರಿಕ್ಕಿ ರೈಗೂ ಬಿಡದಿ ಪೊಲೀಸರು (Bidadi Police) ನೋಟಿಸ್ ನೀಡಿದ್ದಾರೆ.

    ಈಗಾಗಲೇ ಆಸ್ಪತ್ರೆಯಲ್ಲೇ ರಿಕ್ಕಿ ರೈ (Ricky Rai) ಹೇಳಿಕೆ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅವಶ್ಯಕತೆ ಇದ್ದು ಖುದ್ದು ಠಾಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ಬುಧವಾರ ನೋಟಿಸ್ ನೀಡಿದ್ದಾರೆ. ಫೈರಿಂಗ್‌ನ ವೇಳೆ ರಿಕ್ಕಿ ರೈ ಕೈ ಹಾಗೂ ಮೂಗಿನ ಭಾಗಕ್ಕೆ ಗಂಭೀರ ಗಾಯವಾಗಿತ್ತು.  ಇದನ್ನೂ ಓದಿ: ಸತ್ತವರು ವಾಪಸ್ ಬರಲ್ಲ ಅಂತ ಬಿಟ್ರೆ ನಾಳೆ ನಿಮ್ಮನೆಗೂ ಉಗ್ರರು ಬರ್ತಾರೆ: ಸಿಎಂ ವಿರುದ್ಧ ಶಿವಾಚಾರ್ಯಶ್ರೀ ಕಿಡಿ

    2 ಆಪರೇಷನ್‌ಗಳಿಗೆ ಒಳಗಾಗಿದ್ದ ರಿಕ್ಕಿ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಂಧಿತ ಗನ್‌ಮ್ಯಾನ್ ವಿಠ್ಠಲ್ ಫೈರಿಂಗ್ ಮಾಡಿರುವ ಶಂಕೆ ಇದ್ದು, ಘಟನೆ ಸಂಬಂಧ ವಿಚಾರಣೆಯಲ್ಲಿ ವಿಠ್ಠಲ್ ಯಾವುದೇ ಸತ್ಯ ಬಾಯ್ಬಿಡುತ್ತಿಲ್ಲ. ಹೀಗಾಗಿ ರಿಕ್ಕಿ ರೈ ಹಾಗೂ ಆರೋಪಿ ವಿಠ್ಠಲ್ ಮುಖಾಮುಖಿ ವಿಚಾರಣೆ ನಡೆಸಲು ಪೊಲೀಸರ ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: PublicTV Explainer: ಪುಲ್ವಾಮಾ to ಪಹಲ್ಗಾಮ್‌ ದಾಳಿ; ಭಾರತ ಕೆಂಡ – ಉಗ್ರರನ್ನು ಓಲೈಸುವ ಪಾಕಿಸ್ತಾನ ತೆತ್ತ ಬೆಲೆ ಏನು?

    ಅಲ್ಲದೇ ಎಫ್‌ಎಸ್‌ಎಲ್ ವರದಿಗಾಗಿ (Forensic Science Laboratory  Report) ಕಾಯುತ್ತಿರುವ ಪೊಲೀಸರು, ವಶಪಡಿಸಿಕೊಂಡ 7 ಗನ್‌ಗಳಲ್ಲಿ ಯಾವ ಗನ್‌ಗೆ ಸ್ಥಳದಲ್ಲಿ ಸಿಕ್ಕ ಬುಲೆಟ್ ಮ್ಯಾಚ್ ಆಗುತ್ತೆ ಎಂಬ ಮಾಹಿತಿ ತಿಳಿದು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲು ಮುಂದಾಗಿದ್ದಾರೆ.

  • ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ – ವಿಚಾರಣೆ ಬಳಿಕ ಮುತ್ತಪ್ಪ ರೈ 2ನೇ ಪತ್ನಿ ಪ್ರತಿಕ್ರಿಯೆ

    ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ – ವಿಚಾರಣೆ ಬಳಿಕ ಮುತ್ತಪ್ಪ ರೈ 2ನೇ ಪತ್ನಿ ಪ್ರತಿಕ್ರಿಯೆ

    – ಸತತ 6 ಗಂಟೆ ವಿಚಾರಣೆ ಎದುರಿಸಿದ ಅನುರಾಧ ರೈ

    ರಾಮನಗರ: ರಿಕ್ಕಿ ರೈ (Ricky Rai) ಮೇಲೆ ಫೈರಿಗ್ ಪ್ರಕರಣ ಸಂಬಂಧ ಇಂದು ಪ್ರಕರಣದ ಎ2 ಆರೋಪಿ ಅನುರಾಧ ರೈ (Anuradha Rai) ಬಿಡದಿ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ. ಸತತ 6 ಗಂಟೆಗಳ ಕಾಲ ಬಿಡದಿ ಇನ್ಸ್‌ಪೆಕ್ಟರ್ ಶಂಕರ್ ನಾಯಕ್‌ ಅವರು ಅನುರಾಧ ರೈರನ್ನ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

    ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅನುರಾಧ ಅವರು, ಪೊಲೀಸರು ವಿಚಾರಣೆಗೆ ಕರೆದಿದ್ರು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೀನಿ. ಪೊಲೀಸರ ಮೇಲೆ ನಂಬಿಕೆ ಇದೆ. ಇದರಲ್ಲಿ ಯಾರಿದ್ದಾರೋ, ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ನಮ್ಮ ಪಾತ್ರ ಇದರಲ್ಲಿ ಏನು ಇಲ್ಲ. ಯಾಕೆ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟಿದ್ದಾರೊ ಎಂಬುದನ್ನ ಅವರನ್ನೇ ಕೇಳಬೇಕು ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಪಾಕ್‌ನಿಂದ ಆಮದಾಗ್ತಿದ್ದ ಡ್ರೈಫ್ರೂಟ್ಸ್‌ ಪೂರೈಕೆಯಲ್ಲಿ ವ್ಯತ್ಯಯ – ಬೆಲೆ ಏರಿಕೆ ಆತಂಕ!

    ಫೈರಿಂಗ್‌ ಪ್ರಕರಣದಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಜಮೀನು ವ್ಯಾಜ್ಯ ಈ ಹಿಂದೆ ಇತ್ತು, ಅದು ರಾಜೀ ಆಗಿದೆ. ಕೋರ್ಟ್ ನಲ್ಲಿ ಸುಖಾಂತ್ಯವಾಗಿ ಕೇಸ್ ಮುಗಿದಿದೆ. ನಮಗೂ ಅವರಿಗೂ ಯಾವುದೇ ಸಂಬಂಧ ಇಲ್ಲ. ಪೊಲೀಸರು ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ನಂಬಿಕೆ ಇದೆ. ಅಕ್ಟೋಬರ್ ನಲ್ಲಿ ನಾನು ರಿಕ್ಕಿ ರೈ ನೋಡಿದ್ದು. 6 ತಿಂಗಳ ಹಿಂದೆ ಕೋರ್ಟ್‌ನಲ್ಲಿ ಸಹಿ ಮಾಡುವಾಗ ನೋಡಿದ್ದೆ‌. ಅದಾದಮೇಲೆ ನಾನು ನೋಡಿಯೂ ಇಲ್ಲ, ಸಂಪರ್ಕ ಕೂಡ ಇಲ್ಲ. ಪೊಲೀಸರು ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ಅನುರಾಧ ರೈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ – ಬೆಂಗಳೂರು ಮೂಲದ ವ್ಯಕ್ತಿ ಸಾವು!

  • ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣ – ಗನ್ ಮ್ಯಾನ್ ವಿಠ್ಠಲ್ ಪೊಲೀಸರ ವಶಕ್ಕೆ

    ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣ – ಗನ್ ಮ್ಯಾನ್ ವಿಠ್ಠಲ್ ಪೊಲೀಸರ ವಶಕ್ಕೆ

    ರಾಮನಗರ: ಮುತ್ತಪ್ಪ ರೈ (Muthappa Rai) ಪುತ್ರ ರಿಕ್ಕಿ ರೈ (Ricky Rai) ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದೊಂದು ಫೇಕ್ ಅಟ್ಯಾಕ್ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ರಿಕ್ಕಿ ರೈ ಮನೆಯ ಭದ್ರತೆ ನೋಡಿಕೊಳ್ಳುತ್ತಿದ್ದ ವಿಠ್ಠಲ್‌ನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

    ಕಳೆದ ಏ.18ರ ಮಧ್ಯರಾತ್ರಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಇದು ಸುಪಾರಿ ಕಿಲ್ಲರ್‌ನಿಂದ ನಡೆದ ಅಟ್ಯಾಕಾ ಅಥವಾ ಜೊತೆಯಲ್ಲಿದ್ದವರಿಂದಲೇ ನಡೆದ ಕೊಲೆ ಯತ್ನವಾ ಎಂಬ ಅನುಮಾನದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳು ಮಹತ್ವದ ಸುಳಿವು ನೀಡಿವೆ. ಇದನ್ನೂ ಓದಿ: Exclusive | ರಿಕ್ಕಿ ರೈಗಿದ್ದ ಭದ್ರತೆ ನೋಡಿದ್ರೆ ಎದುರಾಳಿಗಳು ಹತ್ತಿರ ಸುಳಿಯೋಕು ನಡುಗುತ್ತಾರೆ!

    ಮನೆಗೆಲಸದವರು, ಗನ್ ಮ್ಯಾನ್‌ಗಳು, ಸೆಕ್ಯುರಿಟಿ, ಮ್ಯಾನೇಜರ್ ಹಾಗೂ ಆಡಿಟರ್‌ಗಳನ್ನ ವಿಚಾರಣೆ ಮಾಡಿದ್ದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ ವಿಚಾರಣಾಧೀನರ ಹೇಳಿಕೆಗೂ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳಿಗೂ ತಾಳೆ ಆಗದಿರುವುದು ಇದೊಂದು ಫೇಕ್ ಅಟ್ಯಾಕ್ ಎಂಬ ಅನುಮಾನ ಬಂದಿದೆ. ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹತ್ಯೆಗೆ ಯತ್ನ – ಶೂಟೌಟ್‌ ಹಿಂದೆ ಭೂಗತ ಲೋಕದ ಕೈವಾಡ..?

    ಸೋಮವಾರ ಇಡೀ ದಿನ ರಿಕ್ಕಿ ರೈ ಗನ್ ಮ್ಯಾನ್‌ಗಳನ್ನ ವಿಚಾರಣೆ ಮಾಡಿದ್ದ ಪೊಲೀಸರು, ಬಿಡದಿ ಫಾರ್ಮ್ಹೌಸ್‌ನಲ್ಲೂ ಸಂಪೂರ್ಣ ತಲಾಶ್ ಮಾಡಿದ್ದರು. ರಿಕ್ಕಿ ಭದ್ರತೆಗಾಗಿ ಇಟ್ಟುಕೊಂಡಿದ್ದ ಗನ್‌ಗಳೆಷ್ಟು, ಎಷ್ಟು ಬುಲೆಟ್ ಇವೆ. ಎಲ್ಲಾ ಗನ್‌ಗಳಿಗೂ ಲೈಸೆನ್ಸ್ ಇದ್ಯಾ ಎಂಬ ಪರಿಶೀಲನೆ ವೇಳೆ ಫೈರಿಂಗ್ ಸ್ಥಳದಲ್ಲಿ ಸಿಕ್ಕ ಗುಂಡಿಗೂ ರಿಕ್ಕಿ ರೈ ಮನೆಯ ಭದ್ರತೆ ನೋಡಿಕೊಳ್ಳುತ್ತಿದ್ದ ವಿಠ್ಠಲ್ ಎಂಬಾತನಿಗೂ ಗನ್‌ಗೂ ಸಾಮ್ಯತೆ ಇದೆ. ಹಾಗಾಗಿ ಗನ್ ಮ್ಯಾನ್ ವಿಠ್ಠಲ್‌ನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಅಲ್ಲದೇ ತನಿಖೆಯ ದಿಕ್ಕು ತಪ್ಪಿಸಲು ಸಿಮ್ ಇಲ್ಲದ ಮೊಬೈಲ್ ಬಿಸಾಕಿ, ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಂಗ್ ಕಮಾಂಡರ್ ತಪ್ಪು ಮಾಡಿದ್ರೂ ತಪ್ಪೇ: ಸಿಎಂ

    ಮುತ್ತಪ್ಪ ರೈ ಗನ್ ಮ್ಯಾನ್ ಆಗಿದ್ದ ಮಡಿಕೇರಿ (Madikeri) ಮೂಲದ ವಿಠ್ಠಲ್, ಮುತ್ತಪ್ಪ ರೈ ನಿಧನದ ಬಳಿ ಅವರ ಕುಟುಂಬದ ಭದ್ರತೆ ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಹೆಚ್ಚಾಗಿದ್ದ ಕಾರಣ ಅವರಿಗೆ ಬಿಡದಿ ಮನೆಯ ಭದ್ರತೆ ಜವಾಬ್ದಾರಿ ನೀಡಲಾಗಿತ್ತು. ಘಟನೆ ನಡೆಯುವ ಮುನ್ನ ರಿಕ್ಕಿ ರೈ ಹಾಗೂ ವಿಠ್ಠಲ್ ಪ್ರತ್ಯೇಕ ಮಾತುಕತೆ ನಡೆಸಿದ್ದು, ಮನೆಯಿಂದ ಹೊರ ಹೋಗಿದ್ದರು.

    ಘಟನೆ ನಡೆದು ರಿಕ್ಕಿ ರೈ ಆಸ್ಪತ್ರೆಗೆ ಸೇರಿದ ಬಳಿಕ ಮತ್ತೆ ವಿಠ್ಠಲ್ ಮನೆಗೆ ವಾಪಸ್ ಬಂದಿದ್ದ ಎಂಬುದು ಮನೆಯ ಸಿಸಿಟಿವಿ ಕ್ಯಾಮರಾದಿಂದ ಪೊಲೀಸರಿಗೆ ತಿಳಿದುಬಂದಿದೆ. ಹಾಗಾಗಿ ವಿಠ್ಠಲ್‌ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ವಿಠ್ಠಲ್‌ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಮತ್ತಷ್ಟು ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಸಂಸತ್ತೇ ಸರ್ವೋಚ್ಚ, ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವಿಷಯದ ಅಲ್ಟಿಮೇಟ್‌ ಮಾಸ್ಟರ್ಸ್‌: ಧನಕರ್‌

    ಒಟ್ಟಾರೆ ರಿಕ್ಕಿ ರೈ ಮೇಲೆ ಅಟ್ಯಾಕ್ ಆದಾಗ ಗನ್ ಮ್ಯಾನ್ ಇದ್ರೂ ಕೌಂಟರ್ ಅಟ್ಯಾಕ್ ಆಗಿರಲಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇದೊಂದು ಫೇಕ್ ಅಟ್ಯಾಕ್ ಎನ್ನಲಾಗಿದೆ. ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬೀಳಬೇಕಿದೆ.

  • ನನ್ನ ಶತ್ರುಗಳು ಅಂದ್ರೆ ಅದು ನನ್ನ ಚಿಕ್ಕಮ್ಮ, ರಾಕೇಶ್ ಮಲ್ಲಿ – ಪೊಲೀಸರ ಮುಂದೆ ರಿಕ್ಕಿ ರೈ ಸ್ಫೋಟಕ ಹೇಳಿಕೆ

    ನನ್ನ ಶತ್ರುಗಳು ಅಂದ್ರೆ ಅದು ನನ್ನ ಚಿಕ್ಕಮ್ಮ, ರಾಕೇಶ್ ಮಲ್ಲಿ – ಪೊಲೀಸರ ಮುಂದೆ ರಿಕ್ಕಿ ರೈ ಸ್ಫೋಟಕ ಹೇಳಿಕೆ

    ಬೆಂಗಳೂರು: ನನ್ನ ಶತ್ರುಗಳು ಎಂದರೆ ಅದು ನನ್ನ ಚಿಕ್ಕಮ್ಮ, ರಾಕೇಶ್‌ ಮಲ್ಲಿ ಎಂದು ಪೊಲೀಸರ ಮುಂದೆ ರಿಕ್ಕಿ ರೈ (Ricky Rai) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಮುತ್ತಪ್ಪ ರೈ (Mutahhap Rai) ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಸಂಬಂಧ ಪೊಲೀಸರು ರಿಕ್ಕಿ ರೈ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ನನಗೆ ಶತ್ರುಗಳು ಅಂತಾ ಇರೋದು ಚಿಕ್ಕಮ್ಮ ಅನುರಾಧ ಮತ್ತು ರಾಕೇಶ್ ಮಲ್ಲಿ ಮಾತ್ರ. ಅವರಿಬ್ಬರು ಆಸ್ತಿ ವಿಚಾರದಲ್ಲಿ ಒಂದಾಗಿದ್ದಾರೆ. ಇದು ಬಿಟ್ಟರೆ ನಿತೀಶ್ ಕಂಪನಿ ವಿಚಾರದಲ್ಲಿ ಒಂದಷ್ಟು ಮನಸ್ತಾಪವಿದೆ ಎಂದು ತಿಳಿಸಿದ್ದಾರೆ.

    ಇವರನ್ನ ಹೊರತುಪಡಿಸಿ ಬೇರೆ ಯಾರ ಮೇಲೂ ಅನುಮಾನವಿಲ್ಲ ಅಂತಾ ಡಿವೈಎಸ್‌ಪಿ ಶ್ರೀನಿವಾಸ್ ಮುಂದೆ ರಿಕ್ಕಿ ಹೇಳಿಕೆ ನೀಡಿದ್ದಾನೆ. ಘಟನೆ ದಿನ ಯಾವ ಕಡೆಯಿಂದ ಫೈರಿಂಗ್ ಮಾಡಿದ್ರು ಅಂತಾ ಗೊತ್ತಾಗಲಿಲ್ಲ. ಫೈರಿಂಗ್ ಶಬ್ಧ ಕೇಳಿದೊಡನೆ ನನ್ನ ಮೂಗು ಮತ್ತು ತೋಳಿನಲ್ಲಿ ರಕ್ತ ಬರುತ್ತಿತ್ತು. ನಾನು ನೋವಿನಿಂದ ನರಳುತ್ತಿದ್ದೆ.‌

    ಗಾಬರಿ ಮತ್ತು ನೋವಿನಲ್ಲಿ ನಾನು ಏನನ್ನೂ ಗಮನಿಸಿಲ್ಲ ಅಂತಾ ಡಿವೈಎಸ್‌ಪಿ ಮುಂದೆ ರಿಕ್ಕಿ ಹೇಳಿಕೆ ನೀಡಿದ್ದಾರೆ.

  • ಕೇವಿಯರ್ ಡಿಸ್ಟ್ರಿಬ್ಯೂಷನ್‌ನಲ್ಲಿ ವಿಶ್ವದಲ್ಲೇ ಮುಂಚೂಣಿ – ರಿಕ್ಕಿ ರೈ ಆಸ್ತಿ ಎಷ್ಟಿದೆ?

    ಕೇವಿಯರ್ ಡಿಸ್ಟ್ರಿಬ್ಯೂಷನ್‌ನಲ್ಲಿ ವಿಶ್ವದಲ್ಲೇ ಮುಂಚೂಣಿ – ರಿಕ್ಕಿ ರೈ ಆಸ್ತಿ ಎಷ್ಟಿದೆ?

    ಬೆಂಗಳೂರು: ಅಪ್ಪನ ಬಿಸಿನೆಸ್ ಜೊತೆಗೆ ತನ್ನ ಬಿಸಿನೆಸ್‌ನಲ್ಲೂ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ (Ricky Rai) ಸಕ್ಸಸ್ ಕಂಡಿದ್ದಾರೆ. ಅಂದಾಜಿನ ಪ್ರಕಾರ, ರಿಕ್ಕಿ ರೈ 1,000 ಕೋಟಿ ಮೌಲ್ಯದ ಆಸ್ತಿಯ ಸರದಾರ. ಕೇವಿಯರ್ ಡಿಸ್ಟ್ರಿಬ್ಯೂಷನ್‌ನಲ್ಲಿ (Caviar Distribution) ರಿಕ್ಕಿ ರೈ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದಾರೆ.

    ರಿಕ್ಕಿ ರೈ ಅಪ್ಪನ ಕೇವಿಯರ್ ಬಿಸಿನೆಸ್ ಇಂಪ್ರೂವ್ ಮಾಡಿದ್ದಾರೆ. ಅಸಲಿಗೆ ಕೇವಿಯರ್ ಅಂದರೆ ಮೀನಿನ ಮೊಟ್ಟೆ. ಮಾರ್ಕೆಟ್‌ನಲ್ಲಿ ಇದರ ಬೆಲೆ 100 ಗ್ರಾಂಗೆ ಸಾವಿರ ಗಟ್ಟಲೆ ರೇಟ್ ಇದೆ. ಬಡಬಗ್ಗರು ಇದನ್ನ ಆಸೆಪಡೋಕು ಆಗಲ್ಲ. ಚೈನಿಸ್ ಫುಡ್ ಮೇಲಿಟ್ಟು ಈ ಕೇವಿಯರ್ ಅನ್ನು ತಿನ್ನುತ್ತಾರೆ. ಅಲ್ಲದೇ ಯೌವ್ವನ ಕಾಪಾಡಲು ಕೇವಿಯರ್ ಒಳ್ಳೆ ಅಮೃತದಂತೆ ಕೆಲಸ ಮಾಡುತ್ತದೆ. ಇದನ್ನೂ ಓದಿ: ಕೆಕೆಆರ್‌ಟಿಸಿ ಬಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

    ರಷ್ಯಾದಲ್ಲಿ ಮಾಸ್ಕೋ ಐಟಿ ಕಂಪನಿ, ಹೋಟೆಲ್ಸ್, ಕ್ಲಬ್, ಕೆಸಿನೊ ಅಲ್ಲದೇ ಹೈ ಎಂಡ್ ಕಾರ್‌ಗಳ ಚಕ್ರ ತಯಾರಿಕಾ ಕಂಪನಿಯನ್ನು ರಿಕ್ಕಿ ಹೊಂದಿದ್ದಾರೆ. ರಷ್ಯಾದ ಮಾಸ್ಕೋದಲ್ಲಿ ನೂರಾರು ಕೋಟಿ ಇನ್ವೆಸ್ಟ್ ಮಾಡಿರುವ ರಿಕ್ಕಿ ರೈ, ಅಪ್ಪನ ಆಸ್ತಿ ಜೋಪಾನ ಮಾಡುವುದರ ಜೊತೆಗೆ ತಾನೂ ನೂರಾರು ಕೋಟಿ ದುಡಿದಿದ್ದಾರೆ. ಇದನ್ನೂ ಓದಿ: ನಾನು ಚಿಕ್ಕಂದಿನಿಂದ ಶಿವನ ಭಕ್ತ: ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಯಶ್

  • ಗುಂಡೇಟಿನಿಂದ ಆಸ್ಪತ್ರೆ ಸೇರಿರೋ ಮುತ್ತಪ್ಪ ರೈ ಮಗನ ಆರೋಗ್ಯ ವಿಚಾರಿಸಿದ ಡಿಕೆಶಿ

    ಗುಂಡೇಟಿನಿಂದ ಆಸ್ಪತ್ರೆ ಸೇರಿರೋ ಮುತ್ತಪ್ಪ ರೈ ಮಗನ ಆರೋಗ್ಯ ವಿಚಾರಿಸಿದ ಡಿಕೆಶಿ

    ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ (Muttappa Rai) ಪುತ್ರ ರಿಕ್ಕಿ ರೈ ಗುಂಡೇಟು ತಿಂದು ಮಣಿಪಾಲ್ ಆಸ್ಪತ್ರೆ (Manipal Hospital)  ಸೇರಿದ್ದು, ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ಆರೋಗ್ಯವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)  ವಿಚಾರಿಸಿದ್ದಾರೆ.

    ಆಸ್ಪತ್ರೆಗೆ ಭೇಟಿ ನೀಡುವ ಮೊದಲೇ ರಿಕ್ಕಿ ರೈಗೆ (Rikki Rai) ಕರೆ ಮಾಡಿ ಘಟನೆ ಹೇಗಾಯ್ತು ಎಂದು ಮಾಹಿತಿ ಪಡೆದಿದ್ದಾರೆ. ಆರೋಪಿಗಳು ಯಾರೇ ಆಗಿದ್ದರೂ ಪೊಲೀಸರು ಪತ್ತೆ ಹಚ್ಚುತ್ತಾರೆ. ನಾನು ಗೃಹ ಇಲಾಖೆ ಜೊತೆಗೆ ಪ್ರಕರಣದ ಬಗ್ಗೆ ಮಾತನಾಡುತ್ತೇನೆ. ಪೊಲೀಸರು ಆರೋಪಿಗಳನ್ನ ಪತ್ತೆ ಮಾಡುತ್ತಾರೆ. ನೀನು ಆರೋಗ್ಯದ ಕಡೆ ಗಮನ ಕೊಡು ಎಂದು ಡಿಕೆಶಿ ಪೋನ್ ಮೂಲಕ ಸಾಂತ್ವನ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: Exclusive | ರಿಕ್ಕಿ ರೈಗಿದ್ದ ಭದ್ರತೆ ನೋಡಿದ್ರೆ ಎದುರಾಳಿಗಳು ಹತ್ತಿರ ಸುಳಿಯೋಕು ನಡುಗುತ್ತಾರೆ!

    ಶನಿವಾರ ಸಂಜೆ ಡಿಕೆಶಿ ರಿಕ್ಕಿ ರೈ ಜೊತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ಇತ್ತ ಪೊಲೀಸರ ತನಿಖೆ ನಡುವೆ ಡಿಸಿಎಂ ಆರೋಗ್ಯ ವಿಚಾರಿಸಿರುವುದು ಆತ್ಮಬಲ ಹೆಚ್ಚಿಸಿದೆ ಎಂದು ರಿಕ್ಕಿ ರೈ ಹೇಳಿದ್ದಾರೆ.

    ಏನಿದು ಘಟನೆ?
    ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ.

    ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಫೈರಿಂಗ್:
    ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದ ಶೂಟೌಟ್‌ನಲ್ಲಿ ದುಷ್ಕರ್ಮಿಗಳು ಡ್ರೈವಿಂಗ್ ಸೀಟ್‌ನನ್ನೇ ಗುರಿಯಾಗಿಸಿ 2 ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ರಿಕ್ಕಿ ರೈ ಸಾಮಾನ್ಯವಾಗಿ ತಾನೇ ಕಾರು ಚಾಲನೆ ಮಾಡುತ್ತಿದ್ದ ಕಾರಣ, ದಾಳಿಕೋರರು ಡ್ರೈವಿಂಗ್ ಸೀಟ್‌ನ ಮೇಲೆ ಗುರಿ ಇಟ್ಟಿದ್ದರು. ಆದರೆ, ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ. ಆದರೆ, ಪಕ್ಕದ ಸೀಟ್‌ನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಾಕಿದ್ದು, ಗಂಭೀರ ಗಾಯಗೊಂಡಿದ್ದರು.

    ಘಟನೆಯ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದಾಳಿಯ ಹಿಂದಿನ ಕಾರಣ, ದುಷ್ಕರ್ಮಿಗಳ ಗುರುತು ಮತ್ತು ಈ ಘಟನೆಯ ಹಿನ್ನೆಲೆಯನ್ನು ಪತ್ತೆಹಚ್ಚಲು ತೀವ್ರ ಪ್ರಯತ್ನ ನಡೆಯುತ್ತಿದೆ.ಇದನ್ನೂ ಓದಿ: ಗೆಳತಿಯೊಂದಿಗೆ ಲಿವ್‌ ಇನ್‌ನಲ್ಲಿರಲು ಮನೆಯವರ ವಿರೋಧ – ರೈಲ್ವೆ ಹಳಿಗೆ ಹಾರಿ ಯುವಕ ಆತ್ಮಹತ್ಯೆ

  • Exclusive | ರಿಕ್ಕಿ ರೈಗಿದ್ದ ಭದ್ರತೆ ನೋಡಿದ್ರೆ ಎದುರಾಳಿಗಳು ಹತ್ತಿರ ಸುಳಿಯೋಕು ನಡುಗುತ್ತಾರೆ!

    Exclusive | ರಿಕ್ಕಿ ರೈಗಿದ್ದ ಭದ್ರತೆ ನೋಡಿದ್ರೆ ಎದುರಾಳಿಗಳು ಹತ್ತಿರ ಸುಳಿಯೋಕು ನಡುಗುತ್ತಾರೆ!

    – ಶಾಟ್ ಗನ್ ಹಿಡಿದು ಸದಾಕಾಲ ಕಾಯುವ ಅಂಗರಕ್ಷಕರಿದ್ರೂ ರಿಕ್ಕಿ ರೈಗೆ ಗುಂಡು ಹಾರಿಸಿದ್ಯಾರು..?

    ಬೆಂಗಳೂರು: ಮಾಜಿ ಡಾನ್‌ ಮುತ್ತಪ್ಪ ರೈ (Muthappa Rai) ಮಗ ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣ ಸಾಕಷ್ಟು ಚರ್ಚಗೆ ಕಾರಣವಾಗಿದೆ. ಸಾಮಾನ್ಯವಾಗಿ ರಿಕ್ಕಿ ರೈ ಸೆಕ್ಯುರಿಟಿಯನ್ನ ಕಣ್ಣಾರೆ ಕಂಡವರು ಅದ್ಯಾವ ಗಟ್ಟಿ ಪಿಂಡ ಇವನನ್ನ ಟಾರ್ಗೆಟ್ ಮಾಡ್ತು ಅಂತಾ ಮಾತಾಡ್ತಿದ್ದಾರೆ.

    ರಿಕ್ಕಿ ರೈನ (Ricky Rai) ಸೆಕ್ಯುರಿಟಿ ಹೇಗಿದೆ ಗೊತ್ತಾದ್ರೆ ವಿರೋಧಿಗಳು ಹತ್ರ ಸುಳಿಯೋಕು ಭಯ ಪಡ್ತಾರೆ. ನೂರಾರು ಕೋಟಿ ಆಸ್ತಿ, ಊರೆಲ್ಲಾ ಶತೃಗಳನ್ನ ಇಟ್ಕೊಂಡು ಒಬ್ಬಂಟಿ ತಿರುಗಾಡ್ತಿದ್ನಾ ರಿಕ್ಕಿ ರೈ ಅನ್ನೊ ಪ್ರಶ್ನೆ ಕೇಳಿದ್ರೆ, ನೋ ನೆವರ್. ಕಣ್ಣಲ್ಲಿ ಕಣ್ಣಿಟ್ಟು, ಕೈಯಲ್ಲಿ ಗನ್ ಇಡ್ಕೊಂಡು ರಿಕ್ಕಿ ರೈನ ಕಾಯ್ತಿದ್ದ ಬಾಡಿಗಾರ್ಡ್ಸ್ ಸದಾ ಕಣ್ಮುಂದೆ ಬರ್ತಾರೆ. ಹಾಗಿದ್ರೆ ರಿಕ್ಕಿ ರೈಗೆ ಭದ್ರತೆ ಹೇಗಿತ್ತು ಅಂತ ತಿಳಿಯೋಕೆ ಮುಂದೆ ಓದಿ… ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹತ್ಯೆಗೆ ಯತ್ನ – ಶೂಟೌಟ್‌ ಹಿಂದೆ ಭೂಗತ ಲೋಕದ ಕೈವಾಡ..?

    ರಿಕ್ಕಿಗೆ ಟೈಟ್‌ ಸೆಕ್ಯುರಿಟಿ ಹೇಗಿತ್ತು?
    ʻಪಬ್ಲಿಕ್ ಟಿವಿʼಗೆ ರಿಕ್ಕಿ ರೈ ಸೆಕ್ಯುರಿಟಿಯ ಎಕ್ಸ್‌ಕ್ಲೂಸಿವ್‌ ವೀಡಿಯೊ ಲಭ್ಯವಾಗಿದೆ. ಡಬಲ್ ಬ್ಯಾರೆಲ್, ಸಿಂಗಲ್ ಬ್ಯಾರೆಲ್, ಪಿಸ್ತೂಲ್ ಹಿಡಿದು ರಿಕ್ಕಿ ರೈನ ಕಾಯೋಕೆ ಸದಾ ಇಬ್ಬರು ಬಾಡಿಗಾರ್ಡ್‌ ಜೊತೆ ಪಿಸ್ತೂಲ್ ಹಿಡಿದು ಓರ್ವ ಅಂಗರಕ್ಷಕ ಇರ್ತಾನೆ. ಶಾಟ್ ಗನ್‌ಗಳಾದ ಡಬಲ್ ಬ್ಯಾರೆಲ್ ಹಾಗೂ ಸಿಂಗಲ್ ಬ್ಯಾರೆಲ್ ಗನ್‌ಗಳಲ್ಲಿ ಪವರ್ ಹಾಗೂ ಇಂಪ್ಯಾಕ್ಟ್ ಜಾಸ್ತಿಯಿರುತ್ತೆ. ಅಕ್ಯುರೇಟ್ ಆಗಿ ದೂರದವರೆಗೆ ಟಾರ್ಗೆಟ್‌ ಇಡಬಹುದು. ಹೀಗಾಗಿಯೇ ಈ ಗನ್ ಗಳಲ್ಲಿ ಪಳಗಿದ್ದ ಶಾರ್ಪ್ ಶೂಟರ್ಸ್‌ನ ರಿಕ್ಕಿ ರೈ ಜೊತೆಯಲ್ಲಿಟ್ಟುಕೊಂಡಿದ್ದ. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?

    ಶೂಟೌಟ್ ನಡೆದ ದಿನ ರಿಕ್ಕಿ ಮೇಲೆ ಫೈರಿಂಗ್ ನಡೆದಾಗ ಗನ್ ಮ್ಯಾನ್‌ಗಳು ಯಾಕೆ ರಿವರ್ಸ್ ಫೈರಿಂಗ್ ಮಾಡಿಲ್ಲ ಅನ್ನೋ ಪ್ರಶ್ನೆ ಮೂಡುತ್ತೆ. ಇನ್ನೂ ರಿಕ್ಕಿಗೆ ಗುಂಡೇಟು ಬಿದ್ದಾಗ ಡ್ರೈವರ್ ಹಾಗೂ ಮತ್ತೊಬ್ಬ ಗನ್ ಮ್ಯಾನ್ ಆರೈಕೆ ಮಾಡಿದ್ರಂತೆ‌. ಉಳಿದ ಇಬ್ಬರು ಗನ್ ಮ್ಯಾನ್ ಗಳು ಯಾಕೆ ಇರಲಿಲ್ಲ ಅನ್ನೊ ಪ್ರಶ್ನೆ ಸಹಜವಾಗೆ ಮೂಡಿದೆ. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಫೈರಿಂಗ್ – ಕೂದಲೆಳೆ ಅಂತರದಲ್ಲಿ ಪಾರು

  • ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹತ್ಯೆಗೆ ಯತ್ನ – ಶೂಟೌಟ್‌ ಹಿಂದೆ ಭೂಗತ ಲೋಕದ ಕೈವಾಡ..?

    ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹತ್ಯೆಗೆ ಯತ್ನ – ಶೂಟೌಟ್‌ ಹಿಂದೆ ಭೂಗತ ಲೋಕದ ಕೈವಾಡ..?

    – ಪೊಲೀಸರ ತನಿಖೆ ಮತ್ತಷ್ಟು ಚುರುಕು

    ರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ (Ricky Rai Shootout), ಸಾವಿನಿಂದ ಜಸ್ಟ್ ಮಿಸ್ ಆಗಿದ್ದಾರೆ.. ರಿಕ್ಕಿ ರೈ ಹತ್ಯೆಗೆ ಯತ್ನ ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಯಾವ ಕಾರಣಕ್ಕೆ ಗುಂಡು ಹಾರಿಸಲಾಯ್ತು ಅನ್ನೋದು ಇನ್ನೂ ನಿಗೂಢವಾಗಿದೆ. ಮೇಲ್ನೊಟಕ್ಕೆ ಕುಟುಂಬದ ಆಸ್ತಿ ವಿಚಾರಕ್ಕೆ ಕೊಲೆ ಯತ್ನ ನಡೆದಿದೆ ಎಂಬ ಬಗ್ಗೆ ಚರ್ಚೆ ಆಗ್ತಿದೆ. ಅಲ್ಲದೇ, ಹತ್ಯೆ ಯತ್ನದ ಹಿಂದೆ ಭೂಗತ ಲೋಕದ ಕೈವಾಡದ ಶಂಕೆ ಕೂಡ ವ್ಯಕ್ತವಾಗ್ತಿದೆ.

    ರಿಕ್ಕಿ ರೈ ಮೇಲಿನ ಅಟ್ಯಾಕ್ ಸಾಕಷ್ಟು ಸಂಚಲನ ಮೂಡಿಸಿದೆ. ಭೂಗತ ಲೋಕದ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈ ಪುತ್ರನಿಗೆ ಸ್ಕೆಚ್ ಹಾಕಿದ್ದು ಯಾರು? ಯಾವ ಕಾರಣಕ್ಕಾಗಿ ಈ ಕೊಲೆ ಯತ್ನ ನಡೆದಿದೆ? ಎಂಬುದರ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ಯವಾಗ್ತಿವೆ. ಒಂದು ಕಾಲದಲ್ಲಿ ಮುತ್ತಪ್ಪ ರೈ ಆಪ್ತನಾಗಿದ್ದ ದಕ್ಷಿಣ ಕನ್ನಡ ಮೂಲದ ರಾಕೇಶ್ ಮಲ್ಲಿ, ಮುತ್ತಪ್ಪ ರೈ 2ನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್‌ನ ಮಾಲೀಕ ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥನ್ ಎಂಬುವವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?

    ತಂದೆ ಮುತ್ತಪ್ಪ ರೈ ಗಳಿಸಿದ್ದ ಆಸ್ತಿಗಳ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ರಿಕ್ಕಿ ನೋಡಿಕೊಳ್ತಿದ್ರು. ಪ್ರಕರಣವೊಂದರ ವ್ಯಾಜ್ಯ ಹಿನ್ನೆಲೆ ಕೋರ್ಟ್‌ಗೆ ಹಾಜರಾಗುವ ಸಲುವಾಗಿ ಕಳೆದೆರಡು ದಿನಗಳ ಹಿಂದೆ ರಿಕ್ಕಿ ರಷ್ಯಾದಿಂದ ವಾಪಸ್ ಬಂದಿದ್ದ, ಬಿಡದಿ ನಿವಾಸಕ್ಕೆ ಬಂದಿದ್ದ ರಿಕ್ಕಿ, ಬೆಂಗಳೂರಿಗೆ ಹೋಗುವಾಗ ಗುಂಡಿನ ದಾಳಿ ನಡೆದಿದೆ. ತಂದೆ ಸಾವಿನ ಬಳಿಕ ಮಲತಾಯಿ ಅನುರಾಧ ಜೊತೆ ಆಸ್ತಿ ವ್ಯಾಜ್ಯ ಹಾಗೂ ತಂದೆಯ ವ್ಯವಹಾರ ಪಾಲುದಾರರಾಗಿದ್ದವರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ರಿಕ್ಕಿ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿನ ದ್ವೇಷಕ್ಕೆ ಸುಫಾರಿ ಕಿಲ್ಲರ್ ಮೂಲಕ ರಿಕ್ಕಿ ಹತ್ಯೆಗೆ ಸ್ಕೆಚ್ ಹಾಕಿರುವ ಶಂಕೆ ವ್ಯಕ್ತವಾಗಿದೆ.  ಇದನ್ನೂ ಓದಿ: ಮೈಸೂರು | ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಮಹಿಳೆಗೆ 1.41 ಕೋಟಿ ವಂಚನೆ ಆರೋಪ

    ಅಲ್ಲದೇ ರಿಕ್ಕಿ ಕೊಲೆ ಯತ್ನದ ಹಿಂದೆ ಅಂಡರ್ ವರ್ಲ್ಡ್‌ ಕೈವಾಡ ಇದ್ಯಾ ಎಂಬುದರ ಬಗ್ಗೆಯೂ ಪೊಲೀಸರಿಗೆ ಅನುಮಾನ ಹುಟ್ಟಿಸಿದೆ. ಮುತ್ತಪ್ಪ ರೈ ಮೇಲಿನ ಸೇಡಿಗೆ ರಿಕ್ಕಿ ಮೇಲೆ ಅಟ್ಯಾಕ್ ಮಾಡಿಸಲಾಯ್ತಾ ಎನ್ನುವ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಅದರಲ್ಲೂ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಉನ್ನತ ತನಿಖಾ ಮೂಲಗಳು ತಿಳಿಸಿವೆ.  ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಫೈರಿಂಗ್ – ಕೂದಲೆಳೆ ಅಂತರದಲ್ಲಿ ಪಾರು

    ಇನ್ನೂ ಪ್ರಕರಣದ ತನಿಖೆ ಚುರುಕುಗೊಳಿಸಿರೋ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿ ಶ್ವಾನದಳ ಹಾಗೂ ಎಫ್‌ಎಸ್‌ಎಲ್ ಟೀಂ ಪರಿಶೀಲನೆ ನಡೆಸಿದ್ದಾರೆ. ಹಂತಕರು ಗುಂಡು ಹಾರಿಸಿರುವ ಕಾಂಪೌಂಡ್ ಬಳಿ ಬಂದೂಕಿನ ಎಂಟಿ ಸ್ಟಾಕ್ಸ್ ಹಾಗೂ ಸಿಮ್ ಕಾರ್ಡ್ ಇಲ್ಲದ ಬೇಸಿಕ್ ಮೊಬೈಲ್ ಸಿಕ್ಕಿದೆ. ಕಾರಿನೊಳಗೆ ಇದ್ದ ಗುಂಡನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?

    ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?

    ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ (Muthappa Rai) ಬೆಂಗಳೂರು (Bengaluru), ಬಿಡದಿ, ಕರಾವಳಿ ಪ್ರದೇಶ, ದುಬೈ, ರಷ್ಯಾ ಸೇರಿದಂತೆ ಹಲವು ಕಡೆಗಳಲ್ಲಿ ಸುಮಾರು 2,000 ಕೋಟಿಗೂ ಹೆಚ್ಚು ಆಸ್ತಿ ಮಾಡಿದ್ದಾರೆ ಎಂದು ಕೆಲ ಆಪ್ತ ಮೂಲಗಳು ತಿಳಿಸಿವೆ.

    ಮುತ್ತಪ್ಪ ರೈ ಮೊದಲ ಪತ್ನಿ ರೇಖಾ ರೈ ಸಾವನ್ನಪ್ಪಿದ ನಂತರ ಅನುರಾಧ ರೈ ಅನ್ನೋರನ್ನ 2ನೇ ಮದುವೆ ಮಾಡಿಕೊಂಡಿದ್ರು. ಆದರೆ ಮುತ್ತಪ್ಪ ರೈಗೆ ಅನಾರೋಗ್ಯ ಸಮಸ್ಯೆ ಶುರುವಾಗ್ತಿದ್ದಂತೆ. ಆಸ್ತಿ ಸಂಬಂಧ ಗಲಾಟೆಗಳು ಶುರುವಾಗಿದ್ದವು. ಕೋರ್ಟ್‌ನಲ್ಲಿ ರಾಜೀ ಆಗಿದ್ದರೂ ಮತ್ತೆ ಮತ್ತೆ ವಿವಾದ ನಡೆಯುತ್ತಲೇ ಇತ್ತು.

    ಮುತ್ತಪ್ಪ ರೈ ಅವರು ಸಾಯುವ ಮುನ್ನವೇ ತನ್ನ ಆಸ್ತಿಯ ಬಗ್ಗೆ ವಿಲ್ ಬರೆದು ಇಟ್ಟಿದ್ದರು. ಇದರಲ್ಲಿ ಅವರ ಆಸ್ತಿ ಯಾರಿಗೇ ಸೇರಬೇಕು ಮತ್ತು ಎಷ್ಟು ಸೇರಬೇಕು ಎಂದು ತಿಳಿಸಿದ್ದರು. ಹೀಗಿದ್ದರೂ ಅವರ ಸಾವಿನ ಬಳಿಕ ಅವರ ಎರಡನೇ ಪತ್ನಿ ಅನುರಾಧಾ ಪಾಲು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆಯೇ ಎರಡನೇ ಪತ್ನಿ ಅನುರಾಧಾಗೆ ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಹೆಚ್ ಡಿ ಕೋಟೆ ಆಸ್ತಿ, ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್‍ನಲ್ಲಿ ಉಲ್ಲೇಖವಾಗಿದೆ.

    ಆಸ್ತಿ ಎಷ್ಟಿದೆ?
    ವಿಲ್ ಪ್ರಕಾರ ಸುಮಾರು 2 ಸಾವಿರ ಕೋಟಿಗೂ ಅಧಿಕ ಆಸ್ತಿ ರೈ ಹೆಸರಿನಲ್ಲಿದೆ. ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ನೂರಾರು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿದೆ. ಸಕಲೇಶಪುರದಲ್ಲಿ 200 ಎಕರೆ ಜಮೀನಿದೆ.

    ಹಂಚಿಕೆ ಹೇಗೆ?
    ಒಟ್ಟು 600ಕ್ಕೂ ಅಧಿಕ ಎಕರೆ ಜಮೀನನ್ನು ತನ್ನಿಬ್ಬರು ಮಕ್ಕಳಾದ ರಿಕ್ಕಿ ಹಾಗೂ ರಾಖಿ ರೈಗೆ ಗಿಫ್ಟ್ ಡೀಡ್ ಮಾಡಿದ್ದಾರೆ. ಆಸ್ತಿಗಳ ಪೈಕಿ ಮೈಸೂರು, ಪುತ್ತೂರು, ಬಂಟ್ವಾಳ, ಮಂಗಳೂರು ಜಾಗವನ್ನು ರಾಖಿ ರೈಗೆ ನೀಡಿದ್ದರೆ, ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಚಿಕ್ಕ ಮಗ ರಿಕ್ಕಿ ರೈಗೆ ಹಂಚಿಕೆ ಮಾಡಿದ್ದಾರೆ. ಆಪ್ತರು, ಸಂಬಂಧಿಕರಿಗೆ ಶೇ.20 ರಷ್ಟು ಆಸ್ತಿ ನೀಡಬೇಕೆಂದು ಸೂಚಿಸಿದ್ದಾರೆ. ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳ ಜವಾಬ್ದಾರಿಯನ್ನು ಚಿಕ್ಕ ಮಗ ರಿಕ್ಕಿ ರೈಗೆ ನೀಡಿದ್ದು ಟ್ರೇಡಿಂಗ್ ವ್ಯವಹಾರ ಕಂಪನಿಯನ್ನು ದೊಡ್ಡ ಮಗ ರಾಖಿ ನೋಡಿಕೊಳ್ಳುವಂತೆ ಸೂಚಿಸಿದ್ದರು.

    ಕೆಲಸಗಾರರಿಗೆ ಸೈಟ್:
    ನಂಬಿಕೆಯಿಂದ 15 ವರ್ಷಗಳ ಕಾಲ ತನ್ನ ಬಳಿ ಕೆಲಸ ಮಾಡಿದ 25 ಕೆಲಸಗಾರರಿಗೆ ಒಂದೊಂದು ಸೈಟ್ ಹಾಗೂ ಕೈಲಾದಷ್ಟು ಹಣ ನೀಡುವಂತೆ ಕಿರಿಯ ಮಗ ರಿಕ್ಕಿ ರೈಗೆ ಸೂಚಿಸಿದ್ದರು. ತಂದೆಯ ಸೂಚನೆಯಂತೆ ರಿಕ್ಕಿ ತಲಾ ಒಬ್ಬೊಬ್ಬರಿಗೆ 3 ಲಕ್ಷ ರೂಪಾಯಿಗಳನ್ನು ಹಂಚಿಕೆ ಮಾಡಿದ್ದರು.