Tag: ರಿಕಿ ಕ್ರೇಜ್

  • ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ  ಕೇಜ್

    ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ಹೆಮ್ಮೆಯ ಕನ್ನಡಿಗ, ಭಾರತೀಯ ಸಂಗೀತ ಸಂಯೋಜಕ ರಿಕಿ  ಕೇಜ್ ಮೊನ್ನೆಯಷ್ಟೇ ಎರಡನೇ ಬಾರಿಗೆ ಗ್ರ್ಯಾಮಿ ಆವಾರ್ಡ್ ಪಡೆದುಕೊಂಡಿದ್ದಾರೆ. ಎಮ್.ಜಿ.ಎಂ ಗ್ರ್ಯಾಂಡ್ ಗಾರ್ಡನ್ ಅರೇನಾ ಲಾಸ್ ವೇಗಾಸ್ ನಲ್ಲಿ ನಡೆದ ಪ್ರತಿಷ್ಠಿತ 2022 ರ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದ ರಿಕಿ  ಕೇಜ್ ನಂತರ ಭಾರತಕ್ಕೆ ಆಗಮಿಸಿದ್ದರು. ಇದೀಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ರಿಕಿ ಕೇಜ್ ಅವರಿಗೆ ಮೊದಲ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರು ರಿಕಿಗೆ ಶುಭಾಶಯ ಕೋರಿದ್ದರು. ಎರಡನೇ ಬಾರಿಯೂ ಟ್ವಿಟರ್ ಮೂಲಕ ವಿಶ್ ಮಾಡಿದ್ದರು. ಹೀಗಾಗಿ ಮೋದಿ ಅವರನ್ನು ರಿಕಿ ಭೇಟಿ ಮಾಡಿ, ಗ್ರ್ಯಾಮಿ ಅವಾರ್ಡ್ ಅನ್ನು ತೋರಿಸಿದ್ದಾರೆ.

     

    ರಿಕಿ  ಭೇಟಿ ನಂತರ ಪ್ರಧಾನಿಗಳು ಟ್ವಿಟ್ ಮಾಡಿದ್ದು’ಸಂಗೀತದ ಬಗೆಗಿನ ನಿಮ್ಮ ಒಲವು ಮತ್ತು ಬಲವು ಈ ಪ್ರತಿಷ್ಠಿತ ಪ್ರಶಸ್ತಿಯಿಂದಾಗಿ ಮತ್ತಷ್ಟು ಬಲಗೊಳ್ಳಲಿ. ನಿಮ್ಮನ್ನು ಭೇಟಿಯಾಗಿದ್ದು ಖುಷಿ ಆಯಿತು. ನಿಮ್ಮ ಮುಂದಿನ ಎಲ್ಲ ಕಾರ್ಯಗಳಿಗೂ ಯಶಸ್ಸು ದೊರೆಯಲಿ’ ಎಂದು ಟ್ವಿಟ್ ಮೂಲಕ ಹಾರೈಸಿದ್ದಾರೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಪ್ರತಿಯಾಗಿ ರಿಕಿ ಕೂಡ ಪ್ರಧಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ‘ಮೊದಲ ಬಾರಿಗೆ ನನಗೆ ಗ್ರ್ಯಾಮಿ ಅವಾರ್ಡ್ ಬಂದಾಗಲೂ ನೀವು ನನಗೆ ಹಾರೈಸಿದ್ದೀರಿ. ನಾನು ಆಗ ನಿಮ್ಮನ್ನು ಭೇಟಿ ಕೂಡ ಮಾಡಿದ್ದೆ. ಏಳು ವರ್ಷಗಳ ಹಿಂದಿನ ಭೇಟಿಯನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ನಾನು ಈ ಪ್ರಶಸ್ತಿಯನ್ನು ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಅರ್ಪಿಸುವೆ. ಭಾರತಕ್ಕಾಗಿ ಎರಡನೇ ಗ್ರ್ಯಾಮಿ ಅವಾರ್ಡ್ ಬಂದಾಗಲೂ ನೀವು ನನಗೆ ಹಾರೈಸಿದ್ದನ್ನು ಮರೆಯುವುದಿಲ್ಲ’ ಎಂದು ರಿಕಿ ಟ್ವೀಟ್ ಮಾಡಿದ್ದಾರೆ.

    ಲಹರಿ ಸಂಸ್ಥೆಯ ಮೂಲಕ ಹೊರ ಬಂದ ‘ಡಿವೈನ್ ಟೈಡ್ಸ್’ ಆಲ್ಬಂಗೆ ಈ ಬಾರಿ ರಿಕಿ ಗ್ರ್ಯಾಮಿ ಅವಾರ್ಡ್ ಪಡೆದಿದ್ದಾರೆ. ಏಳು ವರ್ಷಗಳ ನಂತರ ಮತ್ತೊಂದು ಗ್ರ್ಯಾಮಿ ಕೈಯಲ್ಲಿ ಹಿಡಿದುಕೊಂಡು ಸಂಭ್ರಮಿಸಿದ್ದಾರೆ.