Tag: ರಿಕಿ ಕೇಜ್

  • ಪದ್ಮ ಪ್ರಶಸ್ತಿ; ಕನ್ನಡದ ಹಿರಿಯ ನಟ ಅನಂತ್‌ ನಾಗ್‌, ರಿಕಿ ಕೇಜ್‌ ಸೇರಿ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ

    ಪದ್ಮ ಪ್ರಶಸ್ತಿ; ಕನ್ನಡದ ಹಿರಿಯ ನಟ ಅನಂತ್‌ ನಾಗ್‌, ರಿಕಿ ಕೇಜ್‌ ಸೇರಿ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ

    – ಪ್ರಶಸ್ತಿ ಪಡೆದ ಕನ್ನಡದ ಸಾಧಕರಿವರು..

    ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡದ ಹಿರಿಯ ನಟ ಅನಂತ್‌ ನಾಗ್‌‌ (Anant Nag), ರಿಕಿ ಕೇಜ್‌ (Ricky Kej), ಪ್ರಶಾಂತ್‌ ಪ್ರಕಾಶ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌ ಸೇರಿದಂತೆ ದೇಶಾದ್ಯಂತ 68 ಸಾಧಕರಿಗೆ ಪದ್ಮ ಪುರಸ್ಕಾರ ಪ್ರದಾನ ಮಾಡಿದರು.

    ಕನ್ನಡದ ಹಿರಿಯ ನಟ ಅನಂತ ನಾಗ್‌, ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್‌, ಉದ್ಯಮಿ ಪ್ರಶಾಂತ್‌ ಪ್ರಕಾಶ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌ ಪ್ರಶಸ್ತಿ ಸ್ವೀಕರಿಸಿದರು. ಇದನ್ನೂ ಓದಿ: ಹಿರಿಯ ನಟ ಅನಂತ್ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

    ಅನಂತ್ ನಾಗ್
    ಕನ್ನಡ ಚಲನಚಿತ್ರ ರಂಗದ ಹಿರಿಯ ನಟರಾಗಿ ಅನಂತ್‌ ನಾಗ್‌ ಖ್ಯಾತಿ ಗಳಿಸಿದ್ದಾರೆ. ಕಳೆದ 5 ದಶಕಗಳಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಮತ್ತು ತಮ್ಮ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ. ಸಿನಿಮಾ ರಂಗದಲ್ಲಿ ಸಾಧನೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿತು.

    ರಿಕಿ ಕೇಜ್‌
    ಡಾ. ರಿಕಿ ಗ್ಯಾನ್‌ ಕೇಜ್ ಜಾಗತಿಕ ಸಂಗೀತ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿ. ಅವರು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರು ಮತ್ತು ನಾಲ್ಕು ಬಾರಿ ಗ್ರ್ಯಾಮಿ ನಾಮನಿರ್ದೇಶಿತರು.

    ಪ್ರಶಾಂತ್‌ ಪ್ರಕಾಶ್‌
    90ರ ದಶಕದ ಮಧ್ಯಭಾಗದಿಂದ ಭಾರತದ ಉದ್ಯಮಶೀಲತೆ ಮತ್ತು ಲೋಕೋಪಕಾರಿ ಭೂದೃಶ್ಯವನ್ನು ವ್ಯಾಖ್ಯಾನಿಸುವಲ್ಲಿ ಪ್ರಶಾಂತ್ ಪ್ರಕಾಶ್ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶೇಷವಾಗಿ ನವೋದ್ಯಮ ಕ್ಷೇತ್ರದಲ್ಲಿನ ಕಾರ್ಯತಂತ್ರದ ಮಧ್ಯಪ್ರವೇಶಗಳಿಗೆ ಹೆಸರುವಾಸಿಯಾಗಿದ್ದಾರೆ. ಇಂದು ಶತಕೋಟಿ ಮೌಲ್ಯದ ಸ್ವದೇಶಿ, ಉನ್ನತ-ಬೆಳವಣಿಗೆಯ ಉದ್ಯಮಗಳನ್ನು ಬೆಂಬಲಿಸುತ್ತಿದ್ದಾರೆ.

    ಡಾ. ವೆಂಕಪ್ಪ ಅಂಬಾಜಿ ಸುಗಟೇಕರ್
    ಡಾ.ವೆಂಕಪ್ಪ ಅಂಬಾಜಿ ಸುಗಟೇಕರ್ ಅವರು ಕರ್ನಾಟಕದ ವಿಶಿಷ್ಟ ಗೋಂಧಳಿ ಜಾನಪದ ಕಲಾವಿದರು. ಅವರು ಏಳು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಗೊಂಧಳಿ ಜಾನಪದ ಸಂಗೀತ ಸಂಪ್ರದಾಯವನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ನೀಡಿದ ಅಪಾರ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಅಸಾಧಾರಣ ಸ್ಮರಣ ಶಕ್ತಿಯನ್ನು ಹೊಂದಿದ್ದಾರೆ. ದಾಸರ ಪದ, ಸಂತ ಶಿಶುನಾಳ ಶರೀಫರ ಪದ, ವಚನ ಸಾಹಿತ್ಯ, ದೇವಿ ಪದ ಸೇರಿದಂತೆ ಸಾವಿರಾರು ಜಾನಪದ ಹಾಡುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉರ್ದುಗೆ 100 ಕೋಟಿ – ಕನ್ನಡಕ್ಕೆ ಬರೀ 32 ಕೋಟಿನಾ..? – ಬಿಜೆಪಿ ಪೋಸ್ಟರ್ ತಂತ್ರಕ್ಕೆ ಸಿಎಂ ಕೆಂಡ

  • ರಿಕಿ ಕೇಜ್ ಒಂದೇ ಟ್ವೀಟ್‌ಗೆ ಕೈ ಸೇರಿದ ಗ್ರ್ಯಾಮಿ ಪದಕ : ಎರಡು ತಿಂಗಳಿಂದ ಕಸ್ಟಮ್ ಗೂಡಿನಲ್ಲಿತ್ತು ಗ್ರ್ಯಾಮಿ

    ರಿಕಿ ಕೇಜ್ ಒಂದೇ ಟ್ವೀಟ್‌ಗೆ ಕೈ ಸೇರಿದ ಗ್ರ್ಯಾಮಿ ಪದಕ : ಎರಡು ತಿಂಗಳಿಂದ ಕಸ್ಟಮ್ ಗೂಡಿನಲ್ಲಿತ್ತು ಗ್ರ್ಯಾಮಿ

    ನಿನ್ನೆಯಷ್ಟೇ ತಮ್ಮ ಗ್ರ್ಯಾಮಿ ಪ್ರಶಸ್ತಿ ಪದಕವು ಎರಡು ತಿಂಗಳಿಂದ ಕಸ್ಟಮ್‌ನಲ್ಲಿದೆ. ಕೊರಿಯರ್ ಮತ್ತು ಕಸ್ಟಮ್ ಅಧಿಕಾರಿಗಳ ಅಸಹಕಾರದಿಂದಾಗಿ ಇನ್ನೂ ನನ್ನ ಕೈಗೆ ಪದಕ ಸಿಕ್ಕಿಲ್ಲವೆಂದು ರಿಕಿ ಟ್ವೀಟ್‌ ಮಾಡಿದ್ದರು. ಟ್ವೀಟ್ ಮಾಡುತ್ತಿದ್ದಂತೆಯೇ ರಿಕಿ ಅಭಿಮಾನಿಗಳು ಕಸ್ಟಮ್ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದರು. ರಿಕಿ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕಸ್ಟಮ್ ಅಧಿಕಾರಿಗಳು, ಆಗಿರುವ ಸಮಸ್ಯೆಯನ್ನು ಬೇಗ ಸರಿಪಡಿಸಿ ಪದಕ ತಲುಪಿಸಲಾಗುವುದು ಎಂದಿದ್ದರು.

    ಕಸ್ಟಮ್ಸ್ ಅಧಿಕಾರಿಗಳಿಗೆ ಅದರಲ್ಲಿ ಗ್ರ್ಯಾಮಿ ಅವಾರ್ಡ್ ಇರುವುದು ಗೊತ್ತಿರದೇ ಇರುವ ಕಾರಣಕ್ಕಾಗಿ ತಮ್ಮ ನಿಯಮಗಳನ್ನು ಅನುಸರಿಸಿದ್ದಾರೆ. ಈಗ ಪ್ರಕ್ರಿಯೆ ಎಲ್ಲ ಮುಗಿದಿದೆ. ಹಾಗಾಗಿ ಶೀಘ್ರದಲ್ಲೇ ಪದಕಗಳು ಕೈ ಸೇರಲಿವೆ ಎಂದು ಸಂಜೆ ಮತ್ತೆ ರಿಕಿ ಟ್ವಿಟ್ಟರ್‌ ಮೂಲಕ ಸ್ಪಷ್ಟನೆ ನೀಡಿದ್ದರು. ಕಸ್ಟಮ್ ಅಧಿಕಾರಿಗಳು ಅಂದುಕೊಂಡಂತೆ ನಡೆದುಕೊಂಡಿದ್ದಾರೆ. ಆಗಿದ್ದ ಸಮಸ್ಯೆಯನ್ನು ಸರಿಪಡಿಸಿ ಇಂದು ಗ್ರ್ಯಾಮಿ ಪದಕವನ್ನು ರಿಕಿ ಕೇಜ್ ಅವರಿಗೆ ಮುಟ್ಟಿಸಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿ, ಧನ್ಯವಾದಗಳನ್ನು ಕೂಡ ಹೇಳಿದ್ದಾರೆ.  ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪರ್ ಶರ್ಮಾ ಪರ ಧ್ವನಿ ಎತ್ತಿದ ಕಂಗನಾ ರಣಾವತ್

    ರಿಕಿ ಕೇಜ್ ಅವರಿಗೆ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ನಾಡಿನ ಸಾಕಷ್ಟು ದಿಗ್ಗಜರು ರಿಕಿ ಕೇಜ್‌ಗೆ ಅಭಿನಂದಿಸಿದ್ದಾರೆ. ಅದರಲ್ಲೂ ಕನ್ನಡದ ನೆಲೆ ರಿಕಿ ಕೇಜ್ ಬಗ್ಗೆ ಗುಣಗಾನ ಕೂಡ ಮಾಡಿದೆ. ಗ್ರ್ಯಾಮಿ ಪ್ರಶಸ್ತಿ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕರ್ನಾಟಕದ ಸಾಕಷ್ಟು ಗಣ್ಯರು ರಿಕಿಯನ್ನು ಅಭಿನಂದಿಸಿದ್ದಾರೆ.

  • ಬೆಂಗಳೂರು ಕಸ್ಟಮ್ಸ್‌ನಲ್ಲಿ ಸಿಲುಕಿ, ರಿಕಿ ಕೇಜ್ ಕೈಗೆ ಸಿಕ್ಕಿರಲಿಲ್ಲ ಗ್ರ್ಯಾಮಿ ಪದಕ : 2 ತಿಂಗಳ ನಿರಂತರ ಪರದಾಟ

    ಬೆಂಗಳೂರು ಕಸ್ಟಮ್ಸ್‌ನಲ್ಲಿ ಸಿಲುಕಿ, ರಿಕಿ ಕೇಜ್ ಕೈಗೆ ಸಿಕ್ಕಿರಲಿಲ್ಲ ಗ್ರ್ಯಾಮಿ ಪದಕ : 2 ತಿಂಗಳ ನಿರಂತರ ಪರದಾಟ

    ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದು ಬೀಗುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ನಾಡಿನ ಸಾಕಷ್ಟು ದಿಗ್ಗಜರು ರಿಕಿ ಕೇಜ್‌ಗೆ ಅಭಿನಂದಿಸಿದ್ದರು. ಅದರಲ್ಲೂ ಕನ್ನಡದ ನೆಲೆ ರಿಕಿ ಕೇಜ್ ಬಗ್ಗೆ ಗುಣಗಾನ ಕೂಡ ಮಾಡಿತ್ತು. ಆದರೆ ಎರಡು ತಿಂಗಳಿಂದ ಗ್ರ್ಯಾಮಿ ಅವಾರ್ಡ್ ಅವರ ಕೈಗೆ ಬಂದಿರಲಿಲ್ಲ ಎನ್ನುವುದು ಅಚ್ಚರಿ ಸಂಗತಿ.  ಇದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್

    ಗ್ರ್ಯಾಮಿ ಪ್ರಶಸ್ತಿ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕರ್ನಾಟಕದ ಸಾಕಷ್ಟು ಗಣ್ಯರು ರಿಕಿಯನ್ನು ಅಭಿನಂದಿಸಿದ್ದರು. ಆದರೆ ಎರಡು ತಿಂಗಳುಗಳ ಕಾಲ ಗ್ರ್ಯಾಮಿ ಪದಕವು ಬೆಂಗಳೂರಿನ ಕಸ್ಟಮ್ಸ್ ಇಲಾಖೆಯಲ್ಲಿ ಸಿಲುಕಿಕೊಂಡಿತ್ತು ಎನ್ನುವುದು ನೋವಿನ ಸಂಗತಿಯಾಗಿತ್ತು. ಹಾಗಾಗಿ ಅವರು ಇಂದು ಈ ಕುರಿತು ಟ್ವೀಟ್ ಮಾಡಿದ್ದರು. ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲೇ ಆಗಿರುವ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಅವರು ಮತ್ತೆ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

    ಮುಂಜಾನೆ ಟ್ವೀಟ್‌ ಮಾಡಿದ್ದ ರಿಕಿ, ‘ನನಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಆದರೆ, ಮೆಡಲ್ 2 ತಿಂಗಳ ಕಾಲದಿಂದ ಬೆಂಗಳೂರು ಕಸ್ಟಮ್ಸ್‌ನಲ್ಲಿದೆ. ಸಂಬಂಧಪಟ್ಟವರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ’ ಎಂದು ಬರೆದು, ಸಂಬಂಧಪಟ್ಟ ಸಂಸ್ಥೆಗಳಿಗೆ ಟ್ಯಾಗ್ ಮಾಡಿದ್ದರು. ಟ್ವೀಟ್ ಮಾಡುತ್ತಿದ್ದಂತೆಯೇ ಕಸ್ಟಮ್ಸ್‌ ಅಧಿಕಾರಿಗಳನ್ನು ನೆಟ್ಟಿಗರು ತರಾಟೆಗೆ ತಗೆದುಕೊಂಡರು. ಆನಂತರ ಸಮಸ್ಯೆ ಸರಿ ಹೋಗಿದೆ ಎಂದು ರಿಕಿ ಮರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ

    ಕಸ್ಟಮ್ಸ್ ಅಧಿಕಾರಿಗಳಿಗೆ ಅದರಲ್ಲಿ ಗ್ರ್ಯಾಮಿ ಅವಾರ್ಡ್ ಇರುವುದು ಗೊತ್ತಿರದೇ ಇರುವ ಕಾರಣಕ್ಕಾಗಿ ತಮ್ಮ ನಿಯಮಗಳನ್ನು ಅನುಸರಿಸಿದ್ದಾರೆ. ಈಗ ಪ್ರಕ್ರಿಯೆ ಎಲ್ಲ ಮುಗಿದಿದೆ. ಹಾಗಾಗಿ ಶೀಘ್ರದಲ್ಲೇ ಪದಕಗಳು ಕೈ ಸೇರಲಿವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

  • ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿಯ ಮೂಲಕ ಇಡೀ ದೇಶಕ್ಕೆ ಗೌರವ ತಂದಿದ್ದಾರೆ: ರವಿಚಂದ್ರನ್

    ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿಯ ಮೂಲಕ ಇಡೀ ದೇಶಕ್ಕೆ ಗೌರವ ತಂದಿದ್ದಾರೆ: ರವಿಚಂದ್ರನ್

    ಬೆಂಗಳೂರು: ಲಹರಿ ಸಂಸ್ಥೆಗೆ ದೊಡ್ಡ ಇತಿಹಾಸ ಇದೆ. ಇಂದು ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅವರು ಇಡೀ ದೇಶಕ್ಕೆ ಗೌರವ ತಂದಿದ್ದಾರೆ ಎಂದು ನಟ ರವಿಚಂದ್ರನ್ ಹೇಳಿದರು.

    ಲಹರಿ ಆಡಿಯೋ ಸಂಸ್ಥೆ ಬಗ್ಗೆ ಮಾತನಾಡಿದ ಅವರು, ಲಹರಿ ಸಂಸ್ಥೆ ಸಂಗೀತಕ್ಕೆ ಕೋಟಿ ಕೋಟಿ ಸುರಿದಿದ್ದಾರೆ. ಲಹರಿ ಸಂಸ್ಥೆಯ ಮಾಲೀಕ ಮನೋಹರ್ ಅವರು ಅಳೆದು ತೂಗಿ ವ್ಯವಹಾರ ಮಾಡುತ್ತಾರೆ. ಅಪ್ಪ ಕೊಟ್ಟ ಕೈ ಇದು, ಆ ಕೈಯಿಂದ ಯಾರನ್ನು ಬೆನ್ನು ತಟ್ಟಿದ್ರೋ ಅವರು ಎತ್ತರಕ್ಕೆ ಹೋಗುತ್ತಾರೆ ಎಂದರು.

    ಕೆಜಿಎಫ್ 2 ಚಿತ್ರವನ್ನು ಸಿನಿಮಾ ಇಂದು ಇಡೀ ವಿಶ್ವ ಮಾತಾಡುತ್ತಿದೆ. ಕೆಜಿಎಫ್ ದಾಖಲೆ ಮುರಿಯೋದೆ ನಮ್ಮೆಲ್ಲರ ಗುರಿ ಆಗಿರಬೇಕು. ಕೆಜಿಎಫ್ ದಾಖಲೆ ಮಾಡಿದೆ. ಕೋಟಿ ಖರ್ಚು ಮಾಡಿದ್ದಾರೆ. ಅವರಿಗೆ ಟಿಕೆಟ್ 2 ಸಾವಿರ ತೆಗೆದುಕೊಳ್ಳುವ ಅಧಿಕಾರ ಇದೆ ಎಂದು ಸಿನಿಮಾ ಬಗ್ಗೆ ನಟ ಹೆಮ್ಮೆ ವ್ಯಕ್ತಪಡಿಸಿದರು.

    ಯಾವಾಗಲೂ ನಾವು ಅದೇ ತರ ದೊಡ್ಡದಾಗಿಯೇ ಯೋಚನೆ ಮಾಡಬೇಕು. 40 ವರ್ಷದ ಹಿಂದೆ ನಾನು ಇದಕ್ಕೆ ಯೋಚನೆ ಮಾಡಿದ್ದು, ಇಂದು ಕೆಜಿಎಫ್ ನಿಂದ ಇಡೀ ಪ್ರಪಂಚ ನಮ್ಮ ಕಡೆ ತಿರುಗಿ ನೋಡಿದೆ. ಕೆಜಿಎಫ್ ಯಶಸ್ಸನ್ನು ನಾವೆಲ್ಲಾ ಸಂಭ್ರಮಿಸೋಣ ಎಂದು ರವಿಚಂದ್ರನ್ ಕರೆ ನೀಡಿದರು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಇದೇ ವೇಳೆ ಲಹರಿ ಸಂಸ್ಥೆ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿ, ಲಹರಿ ಸಂಸ್ಥೆ ನಮ್ಮಲ್ಲೂ ಒಳ್ಳೆಯ ಬೆಲೆಗೆ ಆಡಿಯೋ ಕೊಂಡುಕೊಳ್ಳುತ್ತಿದ್ದರು. ಅವರು ಯಾಮಾರಿಸುತ್ತಿರಲಿಲ್ಲ, ಬಹಳ ಸುಲಭವಾಗಿ ಯಾಮಾರಿಸಬಹುದಿತ್ತು. ಆದರೆ ಅವರು ಹಾಗೆ ಮಾಡುತ್ತಿರಲಿಲ್ಲ ಎಂದರು. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ಬಳಿಕ ಶಿವಣ್ಣ ಜನುಮದ ಜೋಡಿ “ಇವಳ್ಯಾರೋ ಮಗಳೋ ಹಿಂಗಳವ್ಳಲ್ಲ” ಎಂಬ ಹಾಡು ಹಾಡಿ ರಂಜಿಸಿದರು. ಅಲ್ಲದೆ “ರಾಜ್ ಕುಮಾರ್ ಮಗನೋ ಶಿವರಾಜ್ ಕುಮಾರ್ “ಎಂದು ತಾವೇ ಲಿರಿಕ್ಸ್ ಬದಲಾಯಿಸಿಕೊಂಡು ಹಾಡಿದರು. ಇದನ್ನೂ ಓದಿ: ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ: ಅಜಯ್ ದೇವಗನ್

    ಕನ್ನಡದ ಪ್ರತಿಷ್ಠಿತ ಲಹರಿ ಸಂಸ್ಥೆ ‘ಗ್ರ್ಯಾಮಿ’ ಪ್ರಶಸ್ತಿ ಪಡೆದುಕೊಂಡಿದೆ. ಲಹರಿ ಸಂಸ್ಥೆಯಿಂದ ರಿಲೀಸ್ ಆಗಿದ್ದ “ಡಿವೈನ್ ಟ್ರೈಡ್ಸ್” ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದ್ದು, ಈ ವಿಶೇಷ ಆಲ್ಬಂ ಸಂಗೀತ ನಿರ್ದೇಶಕ ‘ರಿಕ್ಕಿಕೇಜ್’ ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಿತ್ತು. ಈ ಸಂಬಂಧ ಇಂದು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ರಿಕಿ ಕೇಜ್, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್ . ಆರ್ ರಂಗನಾಥ್ ಹಾಗೂ ಸಿಇಓ ಅರುಣ್, ಸಿಎಂ ಬಸವರಾಜ್ ಬೊಮ್ಮಾಯಿ ಲಹರಿಯ ಸಾಧನೆಯನ್ನ ಸ್ಮರಿಸಿದ್ರು.