Tag: ರಿಂಗ್

  • ನಿಶ್ಚಿತಾರ್ಥಕ್ಕೆ ದುಬಾರಿ ರಿಂಗ್ ಖರೀದಿಸಿದ ನಟಿ ಪರಿಣಿತಿ ಚೋಪ್ರಾ

    ನಿಶ್ಚಿತಾರ್ಥಕ್ಕೆ ದುಬಾರಿ ರಿಂಗ್ ಖರೀದಿಸಿದ ನಟಿ ಪರಿಣಿತಿ ಚೋಪ್ರಾ

    ನಿನ್ನೆಯಷ್ಟೇ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ. ಎಂಗೇಜ್ ಮೆಂಟ್ ಗಾಗಿ ಅವರು ದುಬಾರಿ ರಿಂಗ್ (Ring) ಖರೀದಿ ಮಾಡಿದ್ದು, ವಜ್ರಸಹಿತ ಉಂಗುರ ಅದಾಗಿದೆ ಎಂದು ವರದಿಯಾಗಿದೆ. ತಮ್ಮ ಬಾಳಸಂಗಾತಿಗೆ ನಿನ್ನೆ ಪರಿಣಿತಾ ಚೋಪ್ರಾ ತೊಡಿಸಿರುವ ರಿಂಗಿನ ಬೆಲೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗುತ್ತಿದ್ದು, ಅದು ಸಾಲಿಟೇರ್ ವಜ್ರದಿಂದ ನಿರ್ಮಾಣವಾಗಿದೆಯಂತೆ.

    ಪರಿಣಿತಿ ಚೋಪ್ರಾ (Parineeti Chopra) ಹಾಗೂ ಸಂಸದ ರಾಘವ್ ಚಡ್ಡಾ (Raghav Chadha) ಎಂಗೇಜ್ ಮೆಂಟ್ (Engagement) ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿರುವ ವಿಷಯ ಈ ಸುದ್ದಿಗೆ ಪುಷ್ಠಿ ಕೊಟ್ಟಿತ್ತು. ಆದರೆ, ಅವರು ಈ ವಿಷಯವನ್ನು ನಿರಾಕರಿಸುತ್ತಲೇ ಬಂದಿದ್ದರು. ಇದೀಗ ಸದ್ದಿಲ್ಲದೇ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿದ್ದಾರೆ.

    ಈ ಜೋಡಿಯ ನಿಶ್ಚಿತಾರ್ಥ ಸಮಾರಂಭಂದಲ್ಲಿ ರಾಜಕೀಯ ಗಣ್ಯರು, ಸಿನಿ ತಾರೆಯರು ಹಾಗೂ ಕ್ರೀಡಾಪಟುಗಳ ಭಾಗಿಯಾಗಿದ್ದರು. ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ, ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ಇಡೀ ಸಮಾರಂಭದಲ್ಲಿ ಮಿಂಚಿದ್ದಾರೆ. ದೆಹಲಿಯ (Delhi) ಇಂಡಿಯಾ ಗೇಟ್ ಬಳಿಯ ಕಪುರ್ತಲ ಹೌಸ್ ನಲ್ಲಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

    ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬದಿಂದ 150 ಜನರಷ್ಟೇ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪರಿಣಿತಿ, ಮನೀಷ್ ಮಲ್ಹೋತ್ರಾ ಬಳಿ ಸರಳವಾಗಿ ಡ್ರೆಸ್ ಮಾಡಿಸಿದ್ದರು. ರಾಘವ್, ಅವರ ಚಿಕ್ಕಪ್ಪ ಪವನ್ ಸಚ್‌ದೇವ್ ಬಳಿ ನಿಶ್ಚಿತಾರ್ಥಕ್ಕೆ ಔಟ್ ಫಿಟ್ ಡಿಸೈನ್ ಮಾಡಿಸಲಾಗಿತ್ತು.‌

    ನಟಿ ಪರಿಣಿತಿ(Parineeti Chopra), ರಾಜಕಾರಣಿ ರಾಘವ್ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ, ಆಲಿಯಾ ಭಟ್, ಕತ್ರಿನಾ ಕೈಫ್, ನಟ ಅಕ್ಷಯ್‌ ಕುಮಾರ್ ಸೇರಿದಂತೆ ಹಲವು ಸಿನಿಮಾ ಸ್ಟಾರ್‌ಗಳು, ರಾಜಕೀಯ ಗಣ್ಯರು ಭಾಗಿಯಾಗಿದ್ದರು.

    ಹರಿಯಾಣದಲ್ಲಿ ನಡೆದ ಶೂಟಿಂಗ್ ವೇಳೆ ಇಬ್ಬರೂ ಪರಿಚಯವಾಗಿ ಆನಂತರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಪೋಷಕರ ಒಪ್ಪಿಗೆ ಪಡೆದುಕೊಂಡೇ ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಘವ್ ಚಡ್ಡಾ ಆಪ್ ಪಕ್ಷದಿಂದ ಎಂಪಿ ಆಗಿದ್ದರೆ, ಪರಿಣಿತಿ ಲೇಡಿಸ್ ವರ್ಸಸ್ ರಿಕ್ಕಿ ಬೇಲ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಈಗಲೂ ಸಿನಿಮಾ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ

  • ದಿವ್ಯಾ ನನ್ನನ್ನು ಈಗಾಗಲೇ ಚೂಸ್ ಮಾಡಿ ಆಯ್ತು – ರಿಂಗ್ ತೋರಿಸಿದ ಅರವಿಂದ್

    ದಿವ್ಯಾ ನನ್ನನ್ನು ಈಗಾಗಲೇ ಚೂಸ್ ಮಾಡಿ ಆಯ್ತು – ರಿಂಗ್ ತೋರಿಸಿದ ಅರವಿಂದ್

    ಬಿಗ್‍ಬಾಸ್ ರಿಯಾಲಿಟಿ ಶೋ ಮುಕ್ತಾಯಗೊಂಡ ನಂತರ ಕೆ.ಪಿ ಅರವಿಂದ್ ಮೊದಲ ಬಾರಿಗೆ ಫೇಸ್‍ಬುಕ್ ಲೈವ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅರವಿಂದ್‍ಗೆ ಅಭಿಮಾನಿಗಳು ಹಲವಾರು ಕೆಲವೊಂದು ಪ್ರಶ್ನೆ ಕೇಳಿದ್ದಾರೆ.

    ಈ ಮಧ್ಯೆ ಅಭಿಮಾನಿಯೊಬ್ಬರು ದಿವ್ಯಾ ಉರುಡುಗ ಅಥವಾ ಬಿಗ್‍ಬಾಸ್ ಶೋನಲ್ಲಿ ಗೆಲ್ಲುವುದು ಈ ಎರಡರ ಮಧ್ಯೆ ನೀವು ಯಾವುದನ್ನು ಆಯ್ಕೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

    ಇದಕ್ಕೆ ಅರವಿಂದ್ ದಿವ್ಯಾ ಉರುಡುಗರವರು ನನ್ನನ್ನು ಚೂಸ್ ಮಾಡಿಬಿಟ್ಟಿದ್ದಾರೆ. ಹಾಗಾಗಿ ನಾನು ಅವರನ್ನು ಚೂಸ್ ಮಾಡುವುದೇನಿಲ್ಲ. ಬಿಗ್‍ಬಾಸ್ ಮನೆಗೆ ಎಲ್ಲರೂ ಬರುವುದು ಗೆಲ್ಲುವುದಕ್ಕೆ, ನಾನು ಹೋಗಿದ್ದು ಒಳಗಡೆ ಅಲ್ಲಿ ಯಾರನ್ನು ಫ್ರೆಂಡ್ ಮಾಡಿಕೊಳ್ಳುವುದಕ್ಕೆ ಅಲ್ಲ. ಆಟ ಆಡುವ ವೇಳೆ ನಿಮಗೆ ಗೊತ್ತಾಗುತ್ತದೆ. ಇದು ಬಿಗ್‍ಬಾಸ್. ಡಿ ಯೂ ನನ್ನನ್ನು ಈಗಾಗಲೇ ಚೂಸ್ ಮಾಡಿ ಬಿಟ್ಟಿದ್ದಾರೆ ಎಂದು ಉತ್ತರಿಸಿದ್ದಾರೆ.

    ನಂತರ ಇದೇ ಲೈವ್‍ನಲ್ಲಿ ಅರವಿಂದ್ ನಾನು ಈಚೆ ಬಂದ ಮೇಲೆ ದಿವ್ಯಾ ಉರುಡುಗಗೆ ಕರೆ ಮಾಡಿದ್ದೆ. ಅವರು ನಿನ್ನೆ ತಾನೇ ಮನೆಗೆ ತೆರಳಿದ್ದಾರೆ. ಚೇತರಿಸಿಕೊಂಡಿದ್ದಾರೆ ಮತ್ತು ಖುಷಿಯಾಗಿದ್ದಾರೆ. ಆದರೆ ಅವರಿಗೆ ಹುಷಾರಾಗಲು ಕೊಂಚ ಸಮಯ ಬೇಕಾಗುತ್ತದೆ. ಇನ್ನೂ ಅವರು ಕೊಟ್ಟಿರುವ ರಿಂಗ್ ನನ್ನ ಕೈನಲ್ಲಿಯೇ ಇದೆ ಅದನ್ನು ಯಾವಾಗಲೂ ತೆಗೆಯುವುದಿಲ್ಲ. ಅವರು ನನಗೆ ಒಲವಿನ ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಬಹಳ ವಾಲ್ಯೂ ಇದೆ. ಅದನ್ನು ಎಂದಿಗೂ ಬಿಚ್ಚಿ ಇಡುವುದಿಲ್ಲ. ಆದರೆ ಸ್ವಲ್ಪ ಟೈಟ್ ಇದೆ ಅದನ್ನು ಯಾವಾಗ ಆಗುತ್ತದೆಯೋ ಅವಾಗ ಸರಿಮಾಡಿಸಿಕೊಳ್ಳುತ್ತೇನೆ ಎಂದಿದ್ದಾರೆ.

  • ಸೇತುವೆ ಮೇಲೆಯೇ ಪ್ರೇಯಸಿಗೆ ಪ್ರಪೋಸ್ – ಅಚ್ಚರಿಗೊಂಡ ಗೆಳತಿ

    ಸೇತುವೆ ಮೇಲೆಯೇ ಪ್ರೇಯಸಿಗೆ ಪ್ರಪೋಸ್ – ಅಚ್ಚರಿಗೊಂಡ ಗೆಳತಿ

    – ಪ್ರೇಮಿಗಳಿಗೆ ಪ್ರೀತಿಯ ಸಂಕೇತವೇ ಈ ಸೇತುವೆ
    – ಬ್ರಿಡ್ಜ್ ಮೇಲೆ ಪ್ರಪೋಸ್ ಮಾಡಲು ಕಾರಣ ಇದೆ

    ಲಂಡನ್: ಪ್ರೇಮಿಗಳ ದಿನಾಚರಣೆ ಹತ್ತಿರ ಬರುತ್ತಿದೆ. ಹೀಗಾಗಿ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಕಾಯುತ್ತಿದ್ದಾರೆ. ಅದರಲ್ಲೂ ಕೆಲವರು ಸುಂದರವಾದ ಸ್ಥಳದಲ್ಲೇ ಪ್ರಪೋಸ್ ಮಾಡಬೇಕೆಂಬ ಕನಸು ಕಂಡಿರುತ್ತಾರೆ. ಆದರೆ ಇಲ್ಲೊಬ್ಬ ಸಿವಿಲ್ ಎಂಜಿನಿಯರ್ ವಿಭಿನ್ನವಾಗಿ ತಮ್ಮ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾರೆ.

    ಇಂಗ್ಲೆಂಡ್‍ನ ನ್ಯೂಹ್ಯಾಂಪ್‌ಶೈರ್‌ನಲ್ಲಿ ಡಾನ್ ಡೆಲ್ ತುಫೋ ತಮ್ಮ ಪ್ರಿಯತಮೆ ಜುಯಿಲಾ ಕಲ್ಮೆರ್ಟನ್‍ಗೆ ಪ್ರಪೋಸ್ ಮಾಡಿದ್ದಾರೆ. ಅದರಲ್ಲೂ ಬ್ರಿಡ್ಜ್ ಮೇಲೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿರುವುದು ವಿಶೇಷವಾಗಿದೆ. ಯಾಕೆಂದರೆ ಈ ಪ್ರೇಮಿಗಳು ಜೀವನದಲ್ಲಿ ಈ ಬ್ರಿಡ್ಜ್ ಗೆ ತುಂಬಾ ಮಹತ್ವದ ಸ್ಥಳವಾಗಿದೆ.

    ಡಾನ್ ಮತ್ತು ಜುಯಿಲಾ ಇಬ್ಬರು ಸಿವಿಲ್ ಎಂಜಿನಿಯರ್ ಮಾಡಿದ್ದು, ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಯಾಗಿ ಡಾನ್ ತನ್ನ ಪ್ರೇಯಸಿ ಜುಯಿಲಾಗೆ ಪ್ರಮೋಸ್ ಮಾಡಲು ನ್ಯೂಹ್ಯಾಂಪ್‌ಶೈರ್‌ನಲ್ಲಿರುವ ಸ್ಮಾರಕ ಸೇತುವೆ ಬಳಿ ಬರುವಂತೆ ಹೇಳಿದ್ದಾರೆ. ಜುಯಿಲಾ ಬಂದ ತಕ್ಷಣ ಡಾನ್ ಸೇತುವೆ ಮೇಲೆ ಮಂಡಿಯೂರಿ ಕುಳಿತು, “ನನ್ನ ಮುಂದಿನ ಬದುಕನ್ನು ನಿನ್ನ ಜೊತೆ ಕಳೆಯಬೇಕೆಂದು ನಾನು ಬಯಸಿದ್ದೇನೆ. ಹೀಗಾಗಿ ನೀನು ನನ್ನನ್ನು ಮದುವೆಯಾಗುತ್ತೀಯಾ?” ಎಂದು ಕೇಳಿದ್ದಾರೆ.

    ತಕ್ಷಣ ಜುಯಿಲಾ ಒಪ್ಪಿಗೆ ಸೂಚಿಸಿದ್ದಾರೆ. ನಂತರ ಡಾನ್ ಪ್ರೀತಿಯ ಸಂಕೇತವಾಗಿ ಸೇತುವೆಯ ಮೇಲೆಯೇ ಜುಯಿಲಾಗೆ ರಿಂಗ್ ತೊಡಿಸಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ಗೆಳತಿಗೆ ಸುರ್ಪ್ರೈಸ್ ಕೊಡಲು ಎರಡು ಕುಟುಂಬದವರನ್ನು ಸೇತುವೆ ಬಳಿ ಕರೆಸಿದ್ದರು. ಹೀಗಾಗಿ ಕುಟುಂಬದವರ ಮುಂದೆಯೇ ಪ್ರಪೋಸ್ ಮಾಡಿದ್ದಾರೆ.

    ಈ ಪ್ರೇಮಿಗಳಿಗೆ ಈ ಸೇತುವೆ ಬರೀ ಸೇತುವೆಯಾಗಿರಲಿಲ್ಲ. ಯಾಕೆಂದರೆ ಡಾನ್ ಮತ್ತು ಜುಯಿಲಾ ನ್ಯೂ ಹ್ಯಾಂಪ್‍ಶೈರ್ ವಿಶ್ವವಿದ್ಯಾನಿಲಯದಲ್ಲಿ ಒಟ್ಟಾಗಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಇದಾದ ನಂತರ ನ್ಯೂಹ್ಯಾಂಪ್‌ಶೈರ್‌ನಲ್ಲಿ ಸ್ಮಾರಕ ಸೇತುವೆ ನಿರ್ಮಾಣದ ಕೆಲಸದಲ್ಲೂ ಜೊತೆಯಾಗಿ ಕೆಲಸ ಮಾಡಿದ್ದಾರೆ. ಈ ಸೇತುವೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಮೂಡಿದೆ. ಹೀಗಾಗಿ ಡಾನ್ ಈ ಸೇತುವೆ ಮೇಲೆಯೇ ಪ್ರಿಯತಮೆ ಜುಯಿಲಾಗೆ ಪ್ರಪೋಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದರು.

    ಡಾನ್ ಸೇತುವೆ ಮೇಲೆ ಪ್ರಪೋಸ್ ಮಾಡಲು ನ್ಯೂಹ್ಯಾಂಪ್‌ಶೈರ್‌ನ ಸಾರಿಗೆ ಇಲಾಖೆ ಅಧಿಕಾರಿಗಳ ಬಳಿ, ತಾತ್ಕಾಲಿಕವಾಗಿ ಸೇತುವೆಯ ಕೆಲಸವನ್ನು ನಿಲ್ಲಿಸಬೇಕು ಮನವಿ ಮಾಡಿಕೊಂಡಿದ್ದರು. ಅಧಿಕಾರಿಗಳು ಮೊದಲಿಗೆ ನಿರಾಕರಿಸಿದ್ದರು. ಆದರೆ ಈ ಸೇತುವೆ ನಿರ್ಮಾಣದಲ್ಲಿ ಡಾನ್ ಮತ್ತು ಜುಯಿಲಾ ತುಂಬಾ ಕೆಲಸ ಮಾಡಿದ್ದಾರೆ ಎಂದು ನಂತರ ಡಾನ್ ಮನವಿ ಒಪ್ಪಿಗೆ ಸೂಚಿಸಿದ್ದಾರೆ.

    ಡಾನ್ ತನಗೆ ಪ್ರಪೋಸ್ ಮಾಡಲು ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಸಣ್ಣ ಸುಳಿವು ಜುಯಿಲಾಗೆ ಇರಲಿಲ್ಲ. ಆದರೆ ಸೇತುವೆ ಮೇಲೆ ಪ್ರಪೋಸ್ ಮಾಡಿದ್ದಕ್ಕೆ ತುಂಬಾ ಸಂತಸಪಟ್ಟಿದ್ದಾರೆ. ನ್ಯೂಹ್ಯಾಂಪ್‌ಶೈರ್‌ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಟ್ವಿಟ್ಟರ್ ಖಾತೆಯಲ್ಲಿ ಈ ಜೋಡಿಗಳು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  • 2007ರಲ್ಲಿ ಕಳೆದೋಗಿದ್ದ ರಿಂಗ್ ಈಗ ಸೀನಿದಾಗ ಮೂಗಿನಲ್ಲಿ ಪತ್ತೆ

    2007ರಲ್ಲಿ ಕಳೆದೋಗಿದ್ದ ರಿಂಗ್ ಈಗ ಸೀನಿದಾಗ ಮೂಗಿನಲ್ಲಿ ಪತ್ತೆ

    ಲಂಡನ್: 12 ವರ್ಷಗಳ ವರ್ಷಗಳ ಹಿಂದೆ ಬೆರಳಿಗೆ ತೊಡಿಸಿದ್ದ ಉಂಗುರ ಕಳೆದು ಹೋಗಿದ್ದು, ಈಗ ಯುವತಿ ಸೀನಿದಾಗ ಮೂಗಿನಲ್ಲಿ ಪತ್ತೆಯಾಗಿರುವ ವಿಲಕ್ಷಣ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ.

    ಬ್ಯೂಟಿಷಿಯನ್ ಅಬಿಗೈಲ್ ಥಾಂಪ್ಸನ್ ಎಂಬಾಕೆ ತನ್ನ ಎಂಟನೇ ವಯಸ್ಸಿನಲ್ಲಿ ಬೆಳ್ಳಿಯ ರಿಂಗ್ ಕಳೆದುಕೊಂಡಿದ್ದಳು. ಉಂಗುರ ಕಳೆದು ಹೋದ ಬಳಿಕ ಮನೆಯಲ್ಲಿ ಹುಡುಕಾಡಿದ್ದಾರೆ. ಆದರೆ ಉಂಗುರ ಸಿಕ್ಕಿರಲಿಲ್ಲ. ಕೊನೆಗೆ ಯಾರೋ ಕಳ್ಳತನ ಮಾಡಿದ್ದಾರೆ ಎಂದು ಸುಮ್ಮನಾಗಿದ್ದರು. ಬಹುಕಾಲ ನಂತರ ಅಂದರೆ ಬರೋಬ್ಬರಿ 12 ವರ್ಷಗಳ ಬಳಿಕ ಥಮ್ಸ್ಪಾನ್ ಸೀನಿದಾಗ ಮೂಗಿನಿಂದ ಏನೋ ಹೊರಗೆ ಬಂದಿದೆ. ಆಗ ಅದನ್ನು ಎತ್ತಿಕೊಂಡು ನೋಡಿದಾಗ ಕಳೆದು ಹೋಗಿದ್ದ ಬೆಳ್ಳಿ ಉಂಗುರ ಅಚ್ಚರಿಯ ರೀತಿಯಲ್ಲಿ ಮರಳಿ ಸಿಕ್ಕಿದೆ.

    2017 ರಲ್ಲಿ ಎಂಟನೇ ವರ್ಷದ ಹುಟ್ಟುಹಬ್ಬಕ್ಕೆ ನನ್ನ ತಾಯಿ ಉಡುಗೊರೆಯಾಗಿ ಬೆಳ್ಳಿ ಉಂಗುರ ಕೊಟ್ಟಿದ್ದರು. ಆದರೆ ಬಾಲ್ಯದಲ್ಲಿಯೇ ಕೆಲವು ತಿಂಗಳ ಬಳಿಕ ಅದು ಕಳೆದು ಹೋಗಿತ್ತು. ಆದರೆ ಅದು ನನ್ನ ಮೂಗಿನಲ್ಲಿ ಸಿಕ್ಕಿಕೊಂಡಿರುತ್ತದೆ ಅಂತ ನಾನು ಎಂದಿಗೂ ಅಂದುಕೊಂಡಿರಲಿಲ್ಲ ಎಂದು ಅಬಿಗೈಲ್ ಥಾಂಪ್ಸನ್ ಹೇಳಿದ್ದಾರೆ.

    ನಾನು ಯಾವಾಗಲೂ ಕೆಲವು ಸ್ನೇಹಿತರ ಜೊತೆ ನನ್ನ ಹಾಸಿಗೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದೆ. ಆಗ ಅವರಲ್ಲಿ ಒಬ್ಬರು ನನ್ನ ಉಂಗುರವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಭಾವಿಸಿದ್ದೆ. ನಾನು ಎಂದಿನಂತೆ ಸೋಪಾ ಮೇಲೆ ಕುಳಿತ್ತಿದ್ದೆ. ಆಗ ನನಗೆ ತೀವ್ರ ಶೀತವಾಗಿದ್ದ ಕಾರಣ ಜೋರಾಗಿ ಸೀನಿದೆ. ಆಗ ಮೂಗಿನಿಂದ ಯಾವುದೋ ವಸ್ತು ಬಂದಂತೆ ಅನ್ನಿಸಿತು. ಬಳಿಕ ಅದನ್ನು ಎತ್ತಿಕೊಂಡು ನಾನು ಸೂಕ್ಷ್ಮವಾಗಿ ಗಮನಿಸಿದೆ. ಆದರೆ ಅದೇನೆಂಬುದು ನನಗೆ ತಿಳಿಯಲಿಲ್ಲ. ಬಳಿಕ ನಾನು ನನ್ನ ತಾಯಿಯನ್ನು ಕರೆದು ತೋರಿಸಿದೆ. ಆಗ ಅವರು ಅದನ್ನು ಪರಿಶೀಲನೆ ಮಾಡಿ 12 ವರ್ಷಗಳ ಹಿಂದೆ ಕಳೆದು ಹೋಗಿದ್ದ ನಿನ್ನ ಉಂಗುರ ಮತ್ತೆ ಸಿಕ್ಕಿದೆ ಎಂದರು. ನಿಜಕ್ಕೂ ನನಗೆ ಅಚ್ಚರಿಯಾಯಿತು ಎಂದು ಥಾಂಪ್ಸನ್ ತಿಳಿಸಿದ್ದಾರೆ.

    ಬಾಲಕಿಯಾಗಿದ್ದ ಸಮಯದಲ್ಲಿ ಅಬಿಗೈಲ್ ಥಾಂಪ್ಸನ್ ಮೂಗಿನಲ್ಲಿ ಬೆರಳಿಟ್ಟುಕೊಂಡಿದ್ದ ವೇಳೆ ಉಂಗುರ ಒಳಗೆ ಸಿಕ್ಕಿ ಹಾಕಿಕೊಂಡಿರಬಹುದೆಂದು ಎಂದು ಹೇಳಲಾಗುತ್ತಿದೆ. ಅಚ್ಚರಿಯ ಎಂದರೆ 2007 ರಿಂದ ಇಲ್ಲಿವರೆಗೂ ಉಂಗುರ ಮೂಗಿನಲ್ಲೇ ಇದ್ದರೂ ಥಾಂಪ್ಸನ್ ಗೆ ಯಾವುದೇ ನೋವು ಮತ್ತು ಉಸಿರಾಟದ ತೊಂದರೆಯಾಗಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬಾಲ್ಯದ ಗೆಳತಿಗಾಗಿ ವಜ್ರದ ಉಂಗುರ

    ಬಾಲ್ಯದ ಗೆಳತಿಗಾಗಿ ವಜ್ರದ ಉಂಗುರ

    ಬೆಂಗಳೂರು: ಭಾನುವಾರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಅವರ ಬಾಲ್ಯದ ಗೆಳತಿಯ ಪ್ರೇರಣ ನಿಶ್ಚಿತಾರ್ಥ. ಈಗಾಗಲೇ ಕುಟುಂಬದವರು ಅದ್ಧೂರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ಧ್ರುವ ಸರ್ಜಾ ತನ್ನ ಬಾಲ್ಯದ ಗೆಳತಿಗೆ ನಿಶ್ಚಿತಾರ್ಥದಲ್ಲಿ ತೊಡಿಸಲು ಕೊಂಡಿರುವ ಉಂಗುರದ ಬೆಲೆ 21 ಲಕ್ಷ ರೂ. ಮೌಲ್ಯದ್ದಾಗಿದ್ದು, ಈ ಉಂಗುರ ವಜ್ರ ಖಚಿತವಾಗಿದೆ. ಇದರ ಸ್ಪೆಷಲ್ ಅಂದರೆ ಮಧ್ಯದಲ್ಲಿರುವ ವಜ್ರದ ಹರಳು 1.45 ಕ್ಯಾರೆಟ್‍ನ ಡೈಮಂಡ್ ಸಾಲಿಟೇರ್ ಇದ್ದು, ಉಂಗುರದ ಸುತ್ತಲಿನ ವಜ್ರದ ಹರಳುಗಳು 2.600 ಕ್ಯಾರೆಟ್ ಹೊಂದಿದೆ.

    ಧ್ರುವ ಸರ್ಜಾರ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಗೆ ಈ ಉಂಗುರ ತೊಡಿಸಿ ಮದುವೆ ನಿಶ್ಚಯ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಳಿಯ ಧರ್ಮಗಿರಿ ದೇವಾಲಯದ ಆವರಣದಲ್ಲಿ ಧ್ರುವ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆ ನಡೆದಿದೆ. ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ಸೆಟ್ ನಿರ್ಮಾಣದಲ್ಲಿ ತೊಡಗಿದ್ದಾರೆ.

    ಹಸಿರು ಥೀಮ್‍ನಲ್ಲಿ ತೆಂಗಿನ ಗರಿಗಳಿಂದ ನಿರ್ಮಾಣವಾಗುತ್ತಿರುವ ಸೆಟ್‍ಗೆ ಸಾಂಪ್ರದಾಯಿಕ ಪರಿಕರಗಳನ್ನೇ ಡೆಕೋರೇಷನ್‍ಗೆ ಉಪಯೋಗಿಸಲಾಗಿದೆ. ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತದಲ್ಲಿ ಧ್ರುವ ಸರ್ಜಾ 50 ಗೋವುಗಳನ್ನ ತರಿಸಿ ಗೋ ಪೂಜೆ ಮಾಡಿ ವಿಶೇಷ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಧ್ರುವ ಯೋಚಿಸಿದ್ದು, ಈ ಕಾರ್ಯಕ್ರಮಕ್ಕೆ ಸರ್ಜಾ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಸ್ಟಾರ್ ನಟರು ಆಗಮಿಸಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೊಂಟ ಉಳುಕಿಸಿಕೊಂಡ ರಾಖಿ ಸಾವಂತ್

    ಸೊಂಟ ಉಳುಕಿಸಿಕೊಂಡ ರಾಖಿ ಸಾವಂತ್

    ಚಂಡೀಗಢ: ಮಹಿಳಾ ಕುಸ್ತಿಪಟು ಚಾಲೆಂಜ್ ಸ್ವೀಕರಿಸಿ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಸೊಂಟವನ್ನ ಉಳುಕಿಸಿಕೊಂಡಿರುವ ಘಟನೆ ಹರಿಯಾಣದ ಪಂಚಕುಲ ತಾಊ ದೇವಿಲಾಲ್ ಕ್ರೀಡಾಂಗಣದಲ್ಲಿ ನಡೆದಿದೆ.

    ರಾಖಿ ಸಾವಂತ್ ಭಾನುವಾರ ನಡೆದ ಪಂಚಕುಲದಲ್ಲಿ ನಡೆದ ಸಿಡಬ್ಲ್ಯೂಇ ಕುಸ್ತಿ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ರೋಚಕ ಕುಸ್ತಿಯನ್ನು ವೀಕ್ಷಿಸಲು ಗ್ರೇಟ್ ಕಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಅಖಾಡಕ್ಕೆ ಧುಮುಕಿದ ಮಹಿಳಾ ಕುಸ್ತಿಪಟು ರೋಬೆಲ್, ಪಂಚಕುಲದಲ್ಲಿ ನನ್ನನ್ನು ಎದುರಿಸುವ ಯಾರದರೂ ಮಹಿಳೆ ಇದ್ದರೆ ಬನ್ನಿ ಎಂದು ಬಹಿರಂಗ ಸವಾಲು ಹಾಕಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವೀಕ್ಷಕರು ರೋಬೆಲ್ ಸಹವಾಸವೇ ಬೇಡ ಎಂದು ದೂರ ಉಳಿದಿದ್ದರು.

    ಅತಿಥಿಯಾಗಿ ಬಂದಿದ್ದ ರಾಖಿ ಸಾವಂತ್ ದಿಢೀರ್ ಅಂತಾ ಅಖಾಡಕ್ಕೆ ಧುಮುಕಿದ್ದಾರೆ. ಕುಸ್ತಿ ಆಡುವ ಮೊದಲು ರಾಖಿ ನೀನು ಡ್ಯಾನ್ಸ್ ಮಾಡಬೇಕೆಂದು ಚಾಲೆಂಜ್ ಹಾಕಿದರು. ರಾಖಿ ಚಾಲೆಂಜ್ ಸ್ವೀಕರಿಸಿದ ರೋಬೆಲ್ ವೇದಿಕೆಯಲ್ಲಿ ಹಾಕಿದ ಹಾಡಿಗೆ ಹೆಜ್ಜೆಯನ್ನು ಹಾಕಿದರು. ಇತ್ತ ಹಾಡು ಕೊನೆಗೊಳ್ಳುತ್ತಿದ್ದಂತೆ ರೋಬೆಲ್ ಎದುರು ನಿಂತಿದ್ದ ರಾಖಿಯನ್ನು ಭುಜದೆ ಮೇಲೆ ಎತ್ತಿ ನೆಲಕ್ಕೆ ಅಪ್ಪಳಿಸಿದರು.

    ನೆಲಕ್ಕೆ ಬಿದ್ದ ರಾಖಿ ಸಾವಂತ್ ಒಂದೆರೆಡು ನಿಮಿಷ ನರಳಾಡಿದ್ದಾರೆ. ಆದ್ರೆ ಮೇಲಕ್ಕೆಳಲಾಗದೇ ಕೊನೆಗೆ ಕಾರ್ಯಕ್ರಮ ಆಯೋಜಕರನ್ನು ಸಹಾಯಕ್ಕೆ ಕರೆದಿದ್ದಾರೆ. ಕೂಡಲೇ ಆಯೋಜಕರು ರಾಖಿಯನ್ನು ಹೊರಕ್ಕೆ ಕರೆದುಕೊಂಡು ಬಂದಿದ್ದಾರೆ. ಅಖಾಡದಿಂದ ಹೊರ ಬಂದ ನಂತರ ರಾಖಿ ಹೆಜ್ಜೆ ಇಡಲು ಅಶಕ್ತರಾಗಿದ್ದರು. ಕೊನೆಗೆ ಆಯೋಜಕರು ಇತರೆ ಮಹಿಳಾ ಕುಸ್ತಿಪಟು ಮತ್ತು ಪೊಲೀಸ್ ಸಿಬ್ಬಂದಿ ಸಹಾಯದಿಂದ ಹೆಗಲ ಮೇಲೆ ಕೈ ಹಾಕಿಕೊಂಡು ಕಾರಿನವರೆಗೂ ತಲುಪಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ದಿ ಗ್ರೇಟ್ ಕಲಿ, ರೋಬೆಲ್ ಎತ್ತರದಿಂದ ರಾಖಿಯನ್ನು ಅಪ್ಪಳಿಸಿದ್ದರಿಂದ ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಬೆನ್ನುಮೂಳೆ ಭಾಗದಲ್ಲಿ ನೋವುಂಟಾಗಿದ್ದು, ವೈದ್ಯರು ವಿಶ್ರಾಂತಿ ಸಲಹೆ ನೀಡಿದ್ದಾರೆಂದು ತಿಳಿಸಿದರು.

    ಸೊಂಟ ಮುರಿದುಕೊಂಡು ಸುಮಾರು 5-8 ನಿಮಿಷಗಳ ಕಾಲ ಮೇಲೇಳು ಆಗದ ರಾಖಿ ಸಾವಂತ್‍ರನ್ನ ಕಾರ್ಯಕ್ರಮದ ಆಯೋಜಕರು ಕೆಲವು ಮಹಿಳಾ ಆಟಗಾರ್ತಿಯರ ಸಹಾಯದಿಂದ ರಾಖಿಯನ್ನ ಗಿರಾಕ್ಪುರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಖಿ ರಿಂಗ್ ಒಳಗೆ ಬಿದ್ದು ನರಳುತ್ತಿದ್ದಾಗ, ಅಲ್ಲಿದ್ದ ಕೆಲವು ಆಟಗಾರ್ತಿಯರು ಬಾಲಿವುಡ್ ನ ದಬಾಂಗ್ ಹಾಡಿಗೆ ನೃತ್ಯ ಮಾಡುತ್ತಿದ್ದರು ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎಂಗೇಜ್ ಮೆಂಟ್ ಅಲ್ಲ, ರಿಂಗ್ ಧರಿಸಿರುವ ಕೈ ಕೂಡ ಪ್ರೇಮಿದಲ್ಲ – ಫೋಟೋ ವೈರಲ್

    ಎಂಗೇಜ್ ಮೆಂಟ್ ಅಲ್ಲ, ರಿಂಗ್ ಧರಿಸಿರುವ ಕೈ ಕೂಡ ಪ್ರೇಮಿದಲ್ಲ – ಫೋಟೋ ವೈರಲ್

    ಕ್ಯಾನ್ಬೆರಾ: ಇತ್ತೀಚೆಗೆ ವಿಭಿನ್ನವಾದ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರೋದು ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕಾಗೆಯಂತೇ ಹೋಲುವ ಬೆಕ್ಕಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಅದೇ ರೀತಿ ಇದೀಗ ಜನರನ್ನು ಕನ್‍ಫ್ಯೂಸ್ ಮಾಡುವಂತಹ ಫೋಟೋವೊಂದು ಹರಿದಾಡುತ್ತಿದೆ.

    ಫೋಟೋದಲ್ಲಿ ಯುವಕ- ಯುವತಿ ಒಬ್ಬರನೊಬ್ಬರು ಕಿಸ್ ಮಾಡಿಕೊಳ್ಳುತ್ತಿದ್ದು, ಯುವತಿ ತನಗೆ ನಿಶ್ಚಿತಾರ್ಥವಾಗಿದೆ ಎಂಬಂತೆ ಬೆರಳಿಗೆ ರಿಂಗ್ ಹಾಕಿದ್ದ ಕೈಯನ್ನು ಎತ್ತಿ ತೋರಿಸುವ ಮೂಲಕ ಫೋಟೋಗೆ ಪೋಸ್ ನೀಡಿದಂತೆ ಭಾಸವಾಗುತ್ತದೆ. ಆದ್ರೆ ಈ ಫೋಟೋದ ಅಸಲಿ ಕಹಾನಿಯೇ ಬೇರೆಯದ್ದಾಗಿದೆ.

    ಹಾಗಾದ್ರೆ ರಿಯಲ್ ಸ್ಟೋರಿಯೇನು?
    ಮೆಲ್ಬರ್ನ್ ನ ಯುವತಿಯೊಬ್ಬಳು ಪ್ರೇಮಿಗಳ ಮುಖದ ಬಳಿ ತಾನು ರಿಂಗ್ ಧರಿಸಿದ್ದ ಕೈಯನ್ನು ಅಡ್ಡ ಹಿಡಿದು ಇಬ್ಬರ ಕೆಳಗೆ ಮೊಣಕಾಲು ಊರಿ ಫೋಟೋ ಕ್ಕಿಕ್ಕಿಸಿಕೊಂಡಿದ್ದಾಳೆ. ಜೆನ್ನಾ ಎಂಬ ಯುವತಿ ಈ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಬಳಿಕ ಟ್ಟಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾಳೆ. ಫೋಟೋ ಜೊತೆಗೆ “ನನ್ನ ಸೋದರ ಸಂಬಂಧಿ ಗೆಳೆಯ ಆತನ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾನೆ. ಆದರೆ ಅಲ್ಲಿರುವ ಕೈಬೆರಳು, ಉಂಗುರ ಅವಳದಲ್ಲ” ಎಂದು ಬರೆದು ಕೊಂಡಿದ್ದಾಳೆ.

    ಮೊದಲ ಫೋಟೋವು ಸಾಮಾನ್ಯವಾಗಿ ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡ ದಂಪತಿ ತಮ್ಮ ಸಂತಸದ ಕ್ಷಣಗಳನ್ನು ಅಪ್ಲೋಡ್ ಮಾಡಿರುವ ರೀತಿ ಭಾಸವಾಗುತ್ತದೆ. ಆದರೆ ಎರಡನೇ ಫೋಟೋ ನೋಡಿದರೆ ಮೊದಲನೇ ಫೋಟೋದಲ್ಲಿರುವ ಹಿಂದಿರುವ ವಾಸ್ತವತೆಯನ್ನು ತಿಳಿಯಬಹುದಾಗಿದೆ.

    https://twitter.com/goodgaljenjen/status/1058600806780329984

    ಜೆನ್ನಾ ತನ್ನ ರಿಂಗ್ ಇರುವ ಕೈಯನ್ನು ಪ್ರೇಮಿಗಳ ಮುಖದ ಬಳಿ ಅಡ್ಡಲಾಗಿ ಹಿಡಿದು ನೆಲದ ಮೇಲೆ ಮಂಡಿಯೂರಿ ಫೋಟೋವನ್ನು ತೆಗೆದಿರುವುದನ್ನು ಎರಡನೇ ಫೋಟೋದಲ್ಲಿ ಕಾಣಬಹುದಾಗಿದೆ. ಜೆನ್ನಾ ಈ ಫೋಟೋವನ್ನು ನವೆಂಬರ್ 3 ರಂದು ಈ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾಳೆ.

    ಈ ಫೋಟೋವನ್ನು ಟ್ಟಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ ತಕ್ಷಣ ಇದುವರೆಗೂ 2,20,0979 ಮಂದಿ ರೀ ಟ್ವೀಟ್ ಮಾಡಿದ್ದು, 9,11,921 ಲೈಕ್ಸ್ ಕಂಡಿದೆ. ಅನೇಕರು ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಮೊಗ್ಗದಲ್ಲಿ ಹಲವೆಡೆ ಸೂರ್ಯನ ಸುತ್ತ ಕಾಣಿಸಿಕೊಂಡ ಕಾಮನಬಿಲ್ಲು

    ಶಿವಮೊಗ್ಗದಲ್ಲಿ ಹಲವೆಡೆ ಸೂರ್ಯನ ಸುತ್ತ ಕಾಣಿಸಿಕೊಂಡ ಕಾಮನಬಿಲ್ಲು

    ಶಿವಮೊಗ್ಗ: ಜಿಲ್ಲೆಯ ಹಲವೆಡೆ ಸೂರ್ಯನ ಸುತ್ತ ಕಾಮನಬಿಲ್ಲು ಕಾಣಿಸಿಕೊಂಡಿದೆ.

    ಮಧ್ಯಾಹ್ನ 12 ಗಂಟೆಗೆ ಕಾಣಿಸಿಕೊಂಡ ಈ ರಿಂಗ್ ಒಂದೂವರೆ ಗಂಟೆ ಕಾಲ ಇತ್ತು. ಸೂರ್ಯನ ಸುತ್ತ ರಿಂಗ್ ಕಾಣಿಸಿಕೊಂಡ ಫೋಟೋ, ವಿಡಿಯೋ ವಾಟ್ಸಪ್ ನಲ್ಲಿ ವೈರಲ್ ಆಗುತ್ತಿದೆ. ಶಾಲಾ ಮಕ್ಕಳು, ಕಚೇರಿ ಸಿಬ್ಬಂದಿ, ಸಾರ್ವಜನಿಕರು ಅಲ್ಲಲ್ಲಿ ನಿಂತು ಖಗೋಳ ಕೌತುಕ ಕಣ್ತುಂಬಿಕೊಂಡರು.

    ಅಲ್ಲದೇ ಈ ರಿಂಗ್ ನೋಡಿ ಏನೋ ಆಪತ್ತು ಕಾದಿದೆ, ಸಿಕ್ಕಾಪಟ್ಟೆ ಮಳೆ ಸುರಿಯಲಿದೆ ಎಂದು ವಿಶ್ಲೇಷಣೆಗಳು ಈಗ ಆರಂಭವಾಗಿದೆ. ವೈಜ್ಞಾನಿಕವಾಗಿ 22 ಡಿಗ್ರಿ ಹ್ಯಾಲೋ ಎಂದು ಕರೆಯಲಾಗುವ ಇದು ಖಗೋಳದ ಸಾಮಾನ್ಯ ಪ್ರಕ್ರಿಯೆ. ನೆಲದಿಂದ ಸುಮಾರು 2 ಸಾವಿರ ಅಡಿ ಎತ್ತರದ ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಈ ವೃತ್ತಕಾರ ಕಾಣಿಸಿಕೊಳ್ಳುತ್ತದೆ.

    ಅಲ್ಲಿ ತೇವಾಂಶ ಹೆಚ್ಚಾಗಿ ನೀರಿನ ಶೈತ್ಯೀಕರಣದಿಂದ ಮಂಜು ಹರಳುಗಟ್ಟುತ್ತದೆ. ಈ ಪ್ರದೇಶವನ್ನು ಸೂರ್ಯನ ಕಿರಣಗಳು ಹಾದು ಬರುವಾಗ ಬೆಳಕಿನ ವಕ್ರೀಭವನ, ಬೆಳಕಿನ ಪ್ರತಿಫಲನ ಹಾಗೂ ಬೆಳಕಿನ ಚದುರುವಿಕೆ ನಡೆದು ವೃತ್ತಾಕಾರದ ಕಾಮಬಿಲ್ಲು ಕಾಣಿಸುತ್ತದೆ. ಒಟ್ಟಾರೆಯಾಗಿ ಖಗೋಳದ ವಿದ್ಯಾಮಾನ ಶಿವಮೊಗ್ಗ ಜನರಲ್ಲಿ ವಿಸ್ಮಯ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv