Tag: ರಿಂಕು ಸಿಂಗ್

  • ಭರ್ಜರಿ 5 ಸಿಕ್ಸ್‌ – ಮಹಿ ದಾಖಲೆ ಉಡೀಸ್‌ ಮಾಡಿದ ರಿಂಕು ಕಿಂಗ್‌!

    ಭರ್ಜರಿ 5 ಸಿಕ್ಸ್‌ – ಮಹಿ ದಾಖಲೆ ಉಡೀಸ್‌ ಮಾಡಿದ ರಿಂಕು ಕಿಂಗ್‌!

    ಅಹಮದಾಬಾದ್‌: ಒಂದೇ ಓವರ್‌ನಲ್ಲಿ ಭರ್ಜರಿ 5 ಸಿಕ್ಸರ್‌ ಸಿಡಿಸುವ ಮೂಲಕ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಆಟಗಾರ ರಿಂಕು ಸಿಂಗ್‌ (Rinku Singh), ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ (MS Dhoni) ಹೆಸರಿನಲ್ಲಿದ್ದ ಐಪಿಎಲ್‌ (IPL 2023) ದಾಖಲೆಯೊಂದನ್ನ ಉಡೀಸ್‌ ಮಾಡಿದ್ದಾರೆ.

    ಭಾನುವಾರ ಗುಜರಾತ್‌ ಟೈಟಾನ್ಸ್‌ (Gujarat Taitans) ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ 6 ಎಸೆತಗಳಲ್ಲಿ ಕೆಕೆಆರ್‌ಗೆ 29 ರನ್‌ಗಳ ಅಗತ್ಯವಿತ್ತು. ಆದರೆ ರಿಂಕು ಸಿಂಗ್ ಬ್ಯಾಟಿಂಗ್‌ ಬಲದಿಂದ ಕೆಕೆಆರ್ ತಂಡವು 31 ರನ್ ಗಳಿಸಿ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ 6, 6, 6, 6, 6 – ನಂಬೋಕಾಗ್ತಿಲ್ಲ ರಿಂಕು ಕಿಂಗ್‌ ಎಂದ ಅನನ್ಯ ಪಾಂಡೆ

    ಇದು ಟಿ20 ಇತಿಹಾಸದಲ್ಲೇ ಚೇಸಿಂಗ್ ವೇಳೆ ಕೊನೆಯ ಓವರ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ರನ್ ದಾಖಲೆಯಾಗಿದೆ. 2016ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿದ್ದ ಮಹೇಂದ್ರ ಸಿಂಗ್ ಧೋನಿ, ಕಿಂಗ್ಸ್‌-XI ಪಂಜಾಬ್ ವಿರುದ್ಧ ಅಕ್ಷರ್‌ ಪಟೇಲ್‌ ಬೌಲಿಂಗ್‌ನಲ್ಲಿ 23 ರನ್ ಗಳಿಸಿದ್ದರು. ಇದು ಐಪಿಎಲ್‌ನಲ್ಲಿ ಕೊನೆಯ ಓವರ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆಯಾಗಿತ್ತು. ಆದರೆ, ರಿಂಕು ಸಿಂಗ್‌ 30 ರನ್‌ ಭಾರಿಸುವ ಮೂಲಕ ಕೊನೆಯ ಓವರ್‌ನಲ್ಲಿ ಕೆಕೆಆರ್‌ಗೆ 31 ರನ್‌ ಲಭ್ಯವಾಗಿದ್ದು, ಐಪಿಎಲ್‌ನಲ್ಲಿ ಹೊಸ ದಾಖಲೆಯಾಗಿದೆ. ಈ ಮೂಲಕ ಧೋನಿ ಅವರ ದಾಖಲೆಯಲ್ಲ ರಿಂಕು ಮುರಿದಿದ್ದಾರೆ. ಇದನ್ನೂ ಓದಿ: IPL 2023: ಪಂಜಾಬ್‌ಗೆ ಪಂಚ್‌ ಕೊಟ್ಟ ಸನ್‌ ರೈಸರ್ಸ್‌ – ಹೈದರಾಬಾದ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ರಿಂಕು ಸಿಂಗ್ ಸೇರಿದಂತೆ ಐಪಿಎಲ್ ಇತಿಹಾಸದಲ್ಲಿ ಈವರೆಗೆ 4 ಮಂದಿ ಬ್ಯಾಟರ್‌ಗಳು ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಸಿಡಿಸಿದ ಸಾಧನೆ ಮಾಡಿದ್ದಾರೆ. 2012ರಲ್ಲಿ ಕ್ರಿಸ್‌ಗೇಲ್‌ ರಾಹುಲ್‌ ಶರ್ಮಾನ ಅವರ ಬೌಲಿಂಗ್‌ಗೆ, 2020ರಲ್ಲಿ ರಾಹುಲ್ ತೆವಾಟಿಯಾ, ಶೆಲ್ಡನ್ ಕಾಟ್ರೆಲ್ ಅವರ ಬೌಲಿಂಗ್‌ನಲ್ಲಿ, 2021ರಲ್ಲಿ ರವೀಂದ್ರ ಜಡೇಜಾ, ಹರ್ಷಲ್‌ ಪಟೇಲ್‌ ಅವರ ಬೌಲಿಂಗ್‌ನಲ್ಲಿ 5 ಸಿಕ್ಸರ್‌ ಚಚ್ಚಿ ದಾಖಲೆ ಮಾಡಿದ್ದರು. ಇದೀಗ ರಿಂಕು ಸಿಂಗ್‌ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಬಾರಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.

  • ಕೊನೆಯ ಓವರ್‌ನಲ್ಲಿ 6, 6, 6, 6, 6 – ನಂಬೋಕಾಗ್ತಿಲ್ಲ ರಿಂಕು ಕಿಂಗ್‌ ಎಂದ ಅನನ್ಯ ಪಾಂಡೆ

    ಕೊನೆಯ ಓವರ್‌ನಲ್ಲಿ 6, 6, 6, 6, 6 – ನಂಬೋಕಾಗ್ತಿಲ್ಲ ರಿಂಕು ಕಿಂಗ್‌ ಎಂದ ಅನನ್ಯ ಪಾಂಡೆ

    ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾನುವಾರ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR), ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ ರೋಚಕ ಜಯ ಸಾಧಿಸಿತು.

    ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್‌ (Rinku Singh) ಸಿಡಿಸಿದ 5 ಭರ್ಜರಿ ಸಿಕ್ಸರ್‌ ನೆರವಿನಿಂದ ಕೆಕೆಆರ್‌, ಗುಜರಾತ್‌ ಜೈಂಟ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿ, ತವರಿನಲ್ಲೇ ಹಾಲಿ ಚಾಂಪಿಯನ್ಸ್‌ಗೆ ಮುಖಭಂಗ ಉಂಟುಮಾಡಿತು. ಇದನ್ನೂ ಓದಿ: IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    ರಿಂಕು ಸಿಂಗ್‌ ಅಮೋಘ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಬಾಲಿವುಡ್‌ ತಾರೆಯರೂ ಪ್ರಸಂಶೆ ವ್ಯಕ್ತಪಡಿಸಿದ್ದಾರೆ. ಹಾಟ್‌ ತಾರೆ ಅನನ್ಯ ಪಾಂಡೆ (Ananya Pandey) ಹಾಗೂ ಶಾರುಖ್‌ ಪುತ್ರಿ ಸುಹಾನಾ ಖಾನ್‌ (Suhana Khan) ತಮ್ಮ ಸ್ಟೇಟಸ್‌ನಲ್ಲಿ ರಿಂಕು ಸಿಂಗ್‌ ಬ್ಯಾಟಿಂಗ್‌ ಮಾಡುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: RCB ಅಭಿಮಾನಿಗಳೇ ಎಚ್ಚರ – ಬ್ಲ್ಯಾಕ್‌ನಲ್ಲಿ ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಮೋಸ ಹೋಗದಿರಿ

    `ಖಾರೂಖ್‌ ಖಾನ್‌ ಪುತ್ರಿ ಇದನ್ನೂ ಊಹಿಸಲು ಅಸಾಧ್ಯ ಎಂದರೆ, ಅನ್ಯನ್ಯ ಪಾಂಡೆ ನಿಜಕ್ಕೂ ನಂಬಲಾಗುತ್ತಿಲ್ಲ ರಿಂಕು ಕಿಂಗ್‌ʼ ಎಂದು ತಮ್ಮ ಇನ್ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 204 ರನ್‌ ಗಳಿಸಿತ್ತು. 205 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ನಿಗದಿತ ಓವರ್‌ಗಳಲ್ಲಿ 207 ರನ್‌ ಗಳಿಸಿ ಗೆಲುವು ಸಾಧಿಸಿತು.

  • ವಿರೋಚಿತ ಸೋಲು – ಕಣ್ಣೀರಿಟ್ಟ ರಿಂಕು ಸಿಂಗ್

    ವಿರೋಚಿತ ಸೋಲು – ಕಣ್ಣೀರಿಟ್ಟ ರಿಂಕು ಸಿಂಗ್

    ಮುಂಬೈ: ಲಕ್ನೋ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ರಿಂಕು ಸಿಂಗ್ ತಮ್ಮ ಏಕಾಂಗಿ ಹೋರಾಟದಿಂದ ಇನ್ನೇನು ತಂಡಕ್ಕೆ ಗೆಲುವು ತಂದು ಕೊಟ್ಟರು ಎನ್ನುವಷ್ಟರಲ್ಲಿ ವಿಕೆಟ್ ಕೈಜೆಲ್ಲಿಕೊಂಡರು. ಇದರೊಂದಿಗೆ ಗೆಲುವಿನ ಹೊಸ್ತಿಲಲ್ಲಿದ್ದ ಕೆಕೆಆರ್ ವಿರೋಚಿತ 2 ರನ್‍ಗಳಿಂದ ಸೋಲುಕಂಡಿತು.

    ಈ ಸೋಲಿನಲ್ಲೂ ಕೂಡ ಕೆಕೆಆರ್ ತಂಡದ ಗೆಲುವಿಗಾಗಿ ಹೋರಾಡಿದ ರಿಂಕು ಸಿಂಗ್ ಎಲ್ಲರ ಮನಗೆದ್ದರು. 144 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ವೇಳೆ ಬ್ಯಾಟಿಂಗ್‍ಗೆ ಆಗಮಿಸಿದ ರಿಂಕು ಸಿಂಗ್ ಮುಂದೆ 24 ಎಸೆತಗಳಲ್ಲಿ 67 ರನ್ ಗುರಿ ಇತ್ತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ, ಇನ್ನೊಂದೆಡೆ ರಿಂಕು ಸಿಂಗ್ ಅಬ್ಬರಿಸಲು ಆರಂಭಿಸಿದರು. ಇದನ್ನೂ ಓದಿ: RCBಗೆ ಇಂದು ಅಗ್ನಿಪರೀಕ್ಷೆ – ಗೆದ್ದರಷ್ಟೇ ಪ್ಲೆ-ಆಫ್ ಕನಸು ಜೀವಂತ

    ಲಕ್ನೋ ಬೌಲರ್‌ಗಳ ಮೇಲೆ ಏಕಾಏಕಿ ಮುಗಿಬಿದ್ದ ರಿಂಕು ಸಿಂಗ್ ತಂಡದ ಗೆಲುವು ಖಚಿತ ಪಡಿಸಲು ಮುಂದಾದರು. 19 ಓವರ್‌ನಲ್ಲಿ ಕೋಲ್ಕತ್ತಾಗೆ 17 ರನ್ ಹರಿದುಬಂತು. ಕೊನೆಯ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 21 ರನ್ ಬೇಕಾಗಿತ್ತು. ಸ್ಟೋಯಿನಿಸ್ ಎಸೆದ ಮೊದಲ ಎಸೆತವನ್ನೇ ರಿಂಕು ಸಿಂಗ್ ಬೌಂಡರಿಗಟ್ಟಿದರು, ಆ ಬಳಿಕ ಸತತ ಎರಡು ಎಸೆತಗಳನ್ನು ಸಿಕ್ಸ್ ಬಾರಿಸಿದರು. 4 ನೇ ಎಸೆತದಲ್ಲಿ 2 ರನ್ ಬಂತು. ಆ ಬಳಿಕ ಎರಡು ಎಸೆತಗಳಲ್ಲಿ ಕೆಕೆಆರ್ ಗೆಲುವಿಗೆ 3 ರನ್ ಬೇಕಾಗಿತ್ತು. ಈ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ರಿಂಕು ಸಿಂಗ್ 5ನೇ ಎಸೆತದಲ್ಲಿ ಲೂಯಿಸ್ ಹಿಡಿದ ಅದ್ಭುತ ಕ್ಯಾಚ್‍ಗೆ ವಿಕೆಟ್ ಕೈಚೆಲ್ಲಿಕೊಂಡರು. ಈ ಮೂಲಕ ರಿಂಕ್ ಸಿಂಗ್ 40 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ಹೋರಾಟದ ಇನ್ನಿಂಗ್ಸ್ ಕೊನೆಗೊಂಡಿತು. ಇದನ್ನೂ ಓದಿ: ಸ್ಟೋಯಿನಿಸ್ ಸ್ಟನ್‌ ಬೌಲಿಂಗ್, ಡಿ ಕಾಕ್ ದರ್ಬಾರ್‌ – ಪ್ಲೇ ಆಫ್‍ಗೆ ಎರಡನೇ ತಂಡವಾಗಿ ಎಂಟ್ರಿಕೊಟ್ಟ ಲಕ್ನೋ

    ಇತ್ತ 1 ಎಸೆತದಲ್ಲಿ 3 ರನ್‍ಗಳ ಗುರಿ ಪಡೆದ ಕೋಲ್ಕತ್ತಾ ತಂಡ ಗೆಲುವು ದಾಖಲಿಸಲಾಗದೆ 2 ರನ್‍ಗಳಿಂದ ವಿರೋಚಿತ ಸೋಲು ಕಂಡಿತು. ಈ ಸೋಲು ಕಂಡ ರಿಂಗ್ ಸಿಂಗ್ ಮೈದಾನದಲ್ಲಿ ಕಣ್ಣೀರಿಟ್ಟರು. ಇದೀಗ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಿಂಕು ಸಿಂಗ್ ಬ್ಯಾಟಿಂಗ್ ಪರಾಕ್ರಮವನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.