Tag: ರಿಂಕು ಸಿಂಗ್

  • ಅದ್ಧೂರಿ ನಿಶ್ಚಿತಾರ್ಥ – ರಿಂಕುಗೆ ರಿಂಗು ಹಾಕಿದ ಸಂಸದೆ ಪ್ರಿಯಾ ಸರೋಜ್

    ಅದ್ಧೂರಿ ನಿಶ್ಚಿತಾರ್ಥ – ರಿಂಕುಗೆ ರಿಂಗು ಹಾಕಿದ ಸಂಸದೆ ಪ್ರಿಯಾ ಸರೋಜ್

    ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್‌ (Rinku Singh) ಅವರಿಂದು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜಾ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಿನ್ನ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳು, ಮದುವೆ ಎಂಬ ಪವಿತ್ರ ಬಂಧನದಲ್ಲಿ ಒಂದಾಗುತ್ತಿರುವುದು ವಿಶೇಷ.

    ಲಕ್ನೋದಲ್ಲಿ (Lucknow) ನಡೆದ ಅದ್ಧೂರಿ ಸಮಾರಂಭದಲ್ಲಿ ರಿಂಕು ಸಿಂಗ್, ಮಚ್ಲಿಶಹರ್ ಕ್ಷೇತ್ರ ಪ್ರತಿನಿಧಿಸುವ ಕಿರಿಯ ಸಂಸದರಲ್ಲಿ ಒಬ್ಬರಾದ ಪ್ರಿಯಾ ಸರೋಜ್‌ ಅವರೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ಫೋಟೋಗಳು ಹರಿದಾಡುತ್ತಿವೆ. ಅದ್ಧೂರಿ ಸಮಾರಂಭದಲ್ಲಿ ಕುಟುಂಬಸ್ಥರು ಮಾತ್ರವಲ್ಲದೇ ಖ್ಯಾತ ಕ್ರಿಕೆಟ್‌ ತಾರೆಯರು, ಕೆಕೆಆರ್‌ ಫ್ರಾಂಚೈಸಿಯ ಸಹ ಆಟಗಾರರು ಹಾಗೂ ಹಿರಿಯ ರಾಜಕೀಯ ನಾಯಕರೂ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್‌ ಕೊಹ್ಲಿಗೆ ಕನ್ನಡದ ಬಾವುಟ ನೀಡಿದ ಡಿಕೆಶಿ – ಧ್ವಜ ಹಾರಿಸಿ ಸಂಭ್ರಮಿಸಿದ ವಿರಾಟ್‌

    ಇತ್ತೀಚೆಗಷ್ಟೇ ಪ್ರಿಯಾ ಅವರ ತಂದೆ ಇಬ್ಬರ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ್ದರು. ಸಮಾಜವಾದಿ ಪಕ್ಷದ ಹಾಲಿ ಶಾಸಕರೂ ಆಗಿರುವ ತುಫಾನಿ, ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಇಬ್ಬರೂ ತಮ್ಮ ಮದುವೆಗಾಗಿ ಅನುಮತಿ ಕೋರಿದ್ದಾರೆ ಎಂದು ತಿಳಿಸಿದ್ದರು. ಆ ಬಳಿಕ ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್‌ ಮೀಡಿಯಾಗಳಲ್ಲೂ ಚರ್ಚೆಗಳು ನಡೆದಿತ್ತು. ಇದೀಗ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವದಂತಿಗಳಿಗೆ ತೆರೆ ಎಳೆದಿದ್ದಾರೆ.

    ಪ್ರಿಯಾ ಸರೋಜ್ ಯಾರು?
    ಉತ್ತರ ಪ್ರದೇಶದ ವಾರಣಾಸಿಯ ಕಾರ್ಖಿಯಾನ್ ಗ್ರಾಮದ ಪ್ರಿಯಾ ಸರೋಜ್, 2024ರಲ್ಲಿ ಮಚ್ಲಿಶಹರ್‌ನ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಬಿಜೆಪಿಯ ಅನುಭವಿ ಬಿಪಿ ಸರೋಜ್ ಅವರನ್ನು 35,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದ ಪ್ರಿಯಾ, ದೇಶದ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಈಗ ಆರ್‌ಸಿಬಿಯ ಯಶಸ್ವಿ ನಾಯಕ 

    ಪ್ರಿಯಾ ರಾಜಕೀಯ ಕುಟುಂಬದ ಹಿನ್ನಲೆ ಹೊಂದಿದ್ದರೂ, ತಮ್ಮ ಕಾನೂನು ವೃತ್ತಿ ಮುಂದುವರಿಸಿದ್ದರು. ನವದೆಹಲಿಯ ವಾಯುಪಡೆಯ ಸುವರ್ಣ ಮಹೋತ್ಸವ ಸಂಸ್ಥೆಯಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿದ ಪ್ರಿಯಾ ಸರೋಜ್‌, ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿಯನ್ನು ಪಡೆದುಕೊಂಡಿದ್ದಾರೆ. ಕಾನೂನು ಪದವಿಯ ನಂತರ, ಸರೋಜ್ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಆರಂಭದಲ್ಲಿ ರಾಜಕೀಯವು ಅವರ ವೃತ್ತಿಜೀವನದ ಯೋಜನೆಗಳ ಭಾಗವಾಗಿರಲಿಲ್ಲ. ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಮೂರು ಬಾರಿ ಸಂಸದರಾಗಿದ್ದು, ಪ್ರಸ್ತುತ ಉತ್ತರ ಪ್ರದೇಶದ ಕೆರಕತ್‌ನಿಂದ ಶಾಸಕರಾಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಿಯಾ ಸರೋಜ್ ರಾಜಕೀಯ ಪ್ರವೇಶದ ಮೂಲಕ ತಮ್ಮ ತಂದೆಯ ರಾಜಕೀಯ ಪರಂಪರೆಯನ್ನ ಮುಂದುವರಿಸಿದ್ದಾರೆ. ‌

    ರಿಂಕು ಬಗ್ಗೆ ಹೇಳೋದಾದ್ರೆ…
    ಪ್ರಿಯಾ ಸರೋಜ್‌ ಅವರ ಭಾವಿ ಪತಿಯಾಗಲಿರುವ ರಿಂಕು ಸಿಂಗ್, ಉತ್ತರ ಪ್ರದೇಶದ ಅಲಿಗಢದವರು. ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್‌)ನ ಪ್ರಮುಖ ಆಟಗಾರನಾಗಿ ಹಾಗೂ ಟೀಂ ಇಂಡಿಯಾದ ಟಿ20 ತಂಡದಲ್ಲೂ ರಿಂಕು ಸಿಂಗ್‌ ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ. 2023ರಲ್ಲಿ ಐಪಿಎಲ್ ಪಂದ್ಯದ ಕೊನೆಯ ಓವರ್‌ನಲ್ಲಿ, ಸತತ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಿಂಕು ಸಿಂಗ್ ಜನಪ್ರಿಯತೆ ಪಡೆದುಕೊಂಡಿದ್ದರು. ಇದನ್ನೂ ಓದಿ: IPL Champions | ಚುಟುಕು ಕದನದಲ್ಲಿ ಈವರೆಗೆ ಚಾಂಪಿಯನ್ಸ್‌ ಪಟ್ಟ ಗೆದ್ದವರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ…

    ಇನ್ನೂ ಟೀ ಇಂಡಿಯಾ ಪರ 30 ಟಿ20ಐ ಪಂದ್ಯಗಳು ಮತ್ತು 22 ಇನ್ನಿಂಗ್ಸ್‌ಗಳಲ್ಲಿ ರಿಂಕು 507 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳಿವೆ. ಅವರು ಇನ್ನೂ ತಮ್ಮ ಚೊಚ್ಚಲ ಟಿ20ಐ ಶತಕವನ್ನು ಬಾರಿಸಿಲ್ಲ. 27 ವರ್ಷದ ಅವರು 2023 ರಲ್ಲಿ ಐರ್ಲೆಂಡ್ ವಿರುದ್ಧ ಟಿ20ಐಗೆ ಪಾದಾರ್ಪಣೆ ಮಾಡಿದರು. ರಿಂಕು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಲಿಸ್ಟ್-ಎ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 52 ಇನ್ನಿಂಗ್ಸ್‌ಗಳಲ್ಲಿ 1,899 ರನ್ ಗಳಿಸಿದ್ದಾರೆ.

  • ಸಂಸದೆ ಜೊತೆ ಎಂಗೇಜ್‌ಮೆಂಟ್‌ ಆಗ್ತಿದ್ದಾರೆ ರಿಂಕು ಸಿಂಗ್‌ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?

    ಸಂಸದೆ ಜೊತೆ ಎಂಗೇಜ್‌ಮೆಂಟ್‌ ಆಗ್ತಿದ್ದಾರೆ ರಿಂಕು ಸಿಂಗ್‌ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?

    ಮುಂಬೈ: ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್‌ (Rinku Singh) ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜಾ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.

    ಕೋಲ್ಕತ್ತಾ ನೈಟ್ ರೈಡರ್ಸ್ (KKR) ಜೊತೆಗಿನ ರಿಂಕು ಅವರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಅಭಿಯಾನ ಈಗಾಗಲೇ ಮುಗಿದಿದೆ. ಬ್ಯಾಟ್ಸ್‌ಮನ್ ತಮ್ಮ ವೈಯಕ್ತಿಕ ಜೀವನದ ಕೆಲವು ಪ್ರಮುಖ ಬೆಳವಣಿಗೆಗಳತ್ತ ಗಮನ ಹರಿಸಿದ್ದಾರೆ. ಇದನ್ನೂ ಓದಿ: ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

     

    View this post on Instagram

     

    A post shared by PRIYA SAROJ (@ipriyasarojmp)

    ಜೂನ್ 8 ರಂದು ಲಕ್ನೋದ ಹೋಟೆಲ್‌ನಲ್ಲಿ ರಿಂಕು ಮತ್ತು ಸಂಸದೆ ಪ್ರಿಯಾ ನಿಶ್ಚಿತಾರ್ಥ ಆಗಲಿದ್ದಾರೆ ಎಂದು ತಿಳಿದುಬಂದಿದೆ. ರಿಂಕು ಮತ್ತು ಪ್ರಿಯಾ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದವು. ಆಗಲೇ ಅವರು ಪರಸ್ಪರ ಮದುವೆಯಾಗಲು ಬಯಸುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಅಧಿಕೃತ ನಿಶ್ಚಿತಾರ್ಥ ಸಮಾರಂಭವು ಈ ತಿಂಗಳು ನಡೆಯಲಿದೆ ಎಂದು ಈಗ ತಿಳಿದುಬಂದಿದೆ.

    ಕೆಲವು ತಿಂಗಳ ಹಿಂದೆ ಪ್ರಿಯಾಳ ತಂದೆ ತುಫಾನಿ ಸರೋಜ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸಮಾಜವಾದಿ ಪಕ್ಷದ ಹಾಲಿ ಶಾಸಕರೂ ಆಗಿರುವ ತುಫಾನಿ, ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಇಬ್ಬರೂ ಮದುವೆಯಾಗಲು ನಮ್ಮ ಅನುಮತಿ ಕೋರಿದರು. ನಿಶ್ಚಿತಾರ್ಥ ಇನ್ನೂ ನಡೆದಿಲ್ಲ. ಆರಂಭಿಕ ಮಾತುಕತೆಗಳು ಮಾತ್ರ ನಡೆದಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೋ’ಹಿಟ್‌’ ಆಟಕ್ಕೆ ಗಿಲ್‌ ಪಡೆ ಡಲ್‌; ಮುಂಬೈಗೆ 20 ರನ್‌ಗಳ ಜಯ – ಫೈನಲ್‌ ಸ್ಥಾನಕ್ಕೆ ಪಂಜಾಬ್‌ ವಿರುದ್ಧ ಫೈಟ್‌

    2025ರ ಐಪಿಎಲ್‌ನಲ್ಲಿ ಕೆಕೆಆರ್‌ ತಂಡದ ರಿಂಕು ಸಿಂಗ್‌ ಅಷ್ಟಾಗಿ ಗಮನ ಸೆಳೆಯಲಿಲ್ಲ. 29.42 ರ ಸರಾಸರಿಯಲ್ಲಿ 206 ರನ್ ಗಳಿಸಿದ್ದಾರೆ. 153.73 ರ ಸ್ಟ್ರೈಕ್-ರೇಟ್ ಹೊಂದಿದ್ದಾರೆ.

    ಭಾರತದ ಟಿ20ಐ ತಂಡದ ಪ್ರಮುಖ ಆಟಗಾರನಾಗಿ ರಿಂಕು ಹೊರಹೊಮ್ಮಿದ್ದಾರೆ. 30 ಟಿ20ಐ ಪಂದ್ಯಗಳು ಮತ್ತು 22 ಇನ್ನಿಂಗ್ಸ್‌ಗಳಲ್ಲಿ ರಿಂಕು 507 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳಿವೆ. ಅವರು ಇನ್ನೂ ತಮ್ಮ ಚೊಚ್ಚಲ ಟಿ20ಐ ಶತಕವನ್ನು ಬಾರಿಸಿಲ್ಲ. 27 ವರ್ಷದ ಅವರು 2023 ರಲ್ಲಿ ಐರ್ಲೆಂಡ್ ವಿರುದ್ಧ ಟಿ20ಐಗೆ ಪಾದಾರ್ಪಣೆ ಮಾಡಿದರು. ರಿಂಕು ಭಾರತ ಪರ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಲಿಸ್ಟ್-ಎ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 52 ಇನ್ನಿಂಗ್ಸ್‌ಗಳಲ್ಲಿ 1,899 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಎರಡೆರಡು ದಾಖಲೆ ಬರೆದ ಹಿಟ್‌ಮ್ಯಾನ್‌

  • ಎಸ್‌ಪಿ ಸಂಸದೆಯ ಜೊತೆ ಕ್ರಿಕೆಟಿಗ ರಿಂಕು ಸಿಂಗ್‌ ಎಂಗೇಜ್‌, ಶೀಘ್ರವೇ ಮದ್ವೆ

    ಎಸ್‌ಪಿ ಸಂಸದೆಯ ಜೊತೆ ಕ್ರಿಕೆಟಿಗ ರಿಂಕು ಸಿಂಗ್‌ ಎಂಗೇಜ್‌, ಶೀಘ್ರವೇ ಮದ್ವೆ

    ಲಕ್ನೋ: ಟೀಂ ಇಂಡಿಯಾದ ಟಿ20 ಆಟಗಾರ ರಿಂಕು ಸಿಂಗ್‌ (Rinku Sigh) ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ (Priya Saroj) ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರವೇ ಇಬ್ಬರ ಮದುವೆ (Marriage) ನಡೆಯಲಿದೆ ಎಂಬ ಸುದ್ದಿ ಈಗ ವೈರಲ್‌ ಆಗಿದೆ.

    ಈ ಸುದ್ದಿಯ ಬಗ್ಗೆ ಪ್ರಿಯಾ ಅವರ ತಂದೆ ತುಫಾನಿ ಸರೋಜ್‌ ಪ್ರತಿಕ್ರಿಯಿಸಿ, ರಿಂಕು ಅವರ ಕುಟುಂಬ ಮದುವೆ ಪ್ರಸ್ತಾಪ ಕಳುಹಿಸಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ತಿಳಿಸಿದರು.

    ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಈ ಸುದ್ದಿಯ ಬಗ್ಗೆ ಇಲ್ಲಿಯವರೆಗೆ ರಿಂಕು ಸಿಂಗ್‌ ಆಗಲಿ ಸಂಸದೆ ಪ್ರಿಯಾ ಸರೋಜ್‌ ಖಚಿತಪಡಿಸಿಲ್ಲ.

    ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ (Team India) ಸದಸ್ಯರಾಗಿದ್ದ ರಿಂಕು ಮುಂದಿನ ವಾರದಿಂದ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

    27 ವರ್ಷದ ರಿಂಕು ಆಗಸ್ಟ್ 2023 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ ಇಲ್ಲಿಯವರೆಗೆ ಎರಡು ಏಕದಿನ ಮತ್ತು 30 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಇಲ್ಲಿಯವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 562 ರನ್ ಗಳಿಸಿದ್ದಾರೆ.

    ತಮ್ಮ ಫಿನಿಶಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ರಿಂಕು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಪ್ರತಿನಿಧಿಸುತ್ತಾರೆ. ಇದನ್ನೂ ಓದಿ: ಎಸ್‌ಪಿ ಸಂಸದೆಯ ಜೊತೆ ಕ್ರಿಕೆಟಿಗ ರಿಂಕು ಸಿಂಗ್‌ ಎಂಗೇಜ್‌, ಶೀಘ್ರವೇ ಮದ್ವೆ

    ಪ್ರಿಯಾ ಅವರು ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆ ಆಗಿದ್ದಾರೆ.  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿಪಿ ಸರೋಜ್ ಅವರನ್ನು 35,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.

    ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಅವರು ಮೂರು ಬಾರಿ ಸಂಸದರಾಗಿದ್ದಾರೆ ಮತ್ತು ಹಾಲಿ ಕೆರಕಟ್‌ ಕ್ಷೇತ್ರದ ಶಾಸಕರಾಗಿದ್ದಾರೆ.

  • ಕೆಕೆಆರ್‌ನಿಂದ 13 ಕೋಟಿಗೆ ರಿಟೇನ್‌ ಬೆನ್ನಲ್ಲೇ ಐಷಾರಾಮಿ ಬಂಗಲೆ ಖರೀದಿಸಿದ ರಿಂಕು ಸಿಂಗ್‌

    ಕೆಕೆಆರ್‌ನಿಂದ 13 ಕೋಟಿಗೆ ರಿಟೇನ್‌ ಬೆನ್ನಲ್ಲೇ ಐಷಾರಾಮಿ ಬಂಗಲೆ ಖರೀದಿಸಿದ ರಿಂಕು ಸಿಂಗ್‌

    ನವದೆಹಲಿ: ಸ್ಟಾರ್‌ ಇಂಡಿಯಾ ಬ್ಯಾಟರ್‌ ರಿಂಕು ಸಿಂಗ್‌ ಅವರನ್ನು ಇತ್ತೀಚೆಗೆ ಕೋಲ್ಕತ್ತಾ ನೈಟ್‌ ರೈಡರ್ಸ್‌ 13 ಕೋಟಿಗೆ ಉಳಿಸಿಕೊಂಡಿದೆ. ಇದರ ಬೆನ್ನಲ್ಲೇ ಐಷಾರಾಮಿ ಬಂಗಲೆಯನ್ನು ಕ್ರಿಕೆಟರ್‌ ಖರೀಸಿದ್ದಾರೆಂದು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ವೈರಲ್‌ ಆಗಿದೆ.

    ಐಪಿಎಲ್ 2023 ರಲ್ಲಿ ಯಶ್ ದಯಾಳ್ ಬೌಲಿಂಗ್‌ಗೆ ಐದು ಸಿಕ್ಸರ್‌ಗಳನ್ನು ಚಚ್ಚಿದ ರಿಂಕು ಪವರ್-ಹಿಟ್ಟರ್ ಎಂದು ಖ್ಯಾತಿ ಗಳಿಸಿದರು. ರಿಂಕು ಸಿಂಗ್‌ ಈಗ ತಂಡದ ಅಗ್ರ ರೀಟೈನ್ ಆಗಿದ್ದಾರೆ. ಐಪಿಎಲ್ ಧಾರಣೆಯನ್ನು ಘೋಷಿಸಿದ ನಂತರ, ಅಲಿಘರ್‌ನ ಓಝೋನ್ ಸಿಟಿಯಲ್ಲಿರುವ ದಿ ಗೋಲ್ಡನ್ ಎಸ್ಟೇಟ್‌ನಲ್ಲಿ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇದು 500 ಚದರ ಗಜದ ಮನೆ ಮತ್ತು 3.5 ಕೋಟಿ ರೂ. ಮೌಲ್ಯದ್ದು ಎಂಬ ಸುದ್ದಿ ಹರಿದಾಡಿದೆ.

    IPL ವಿಜೇತ ನಾಯಕ ಶ್ರೇಯಸ್ ಅಯ್ಯರ್‌ನನ್ನು ಈ ವರ್ಷ ತನ್ನ ಫ್ರಾಂಚೈಸಿ KKR ಗೆ ಪ್ರಶಸ್ತಿಯನ್ನು ಗೆದ್ದ ನಂತರವೂ ಕೈ ಬಿಡಲಾಗಿದೆ. 14 ಇನ್ನಿಂಗ್ಸ್‌ಗಳಲ್ಲಿ 146.86 ಸ್ಟ್ರೈಕ್ ರೇಟ್‌ನಲ್ಲಿ ಎರಡು ಅರ್ಧಶತಕಗಳೊಂದಿಗೆ 351 ರನ್ ಗಳಿಸಿದ ಅವರ ಬ್ಯಾಟಿಂಗ್ ಅಂಕಿಅಂಶಗಳು ಅಯ್ಯರ್‌ ಬಿಡುಗಡೆಯ ಹಿಂದಿನ ಕಾರಣವಾಗಿರಬಹುದು ಎಂಬ ವಾದವಿದೆ.

    ಎಲ್ಲಾ ಫ್ರಾಂಚೈಸಿಗಳಲ್ಲಿ ಉಳಿಸಿಕೊಂಡಿರುವ ಒಟ್ಟು 46 ಆಟಗಾರರ ಪೈಕಿ 36 ಆಟಗಾರರು ಭಾರತೀಯರಾಗಿದ್ದಾರೆ. ಈ ಪೈಕಿ 10 ಆಟಗಾರರು ಅನ್‌ಕ್ಯಾಪ್ಡ್ ಇಂಡಿಯನ್ಸ್ ಸ್ಟಾರ್‌ಗಳು. ಅವರೆಂದರೆ, ಅಭಿಷೇಕ್ ಪೊರೆಲ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಶಶಾಂಕ್ ಸಿಂಗ್, ಪ್ರಭ್‌ಸಿಮ್ರಾನ್ ಸಿಂಗ್, ಯಶ್ ದಯಾಲ್.

  • ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

    ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

    – ಮೀಸಲು ಆಟಗಾರನಾಗಿ ರಿಂಕು ಆಯ್ಕೆ ಬಗ್ಗೆ ರೋಹಿತ್‌, ಅಗರ್ಕರ್‌ ನೀಡಿದ ಸ್ಪಷ್ಟನೆ ಏನು?

    ಮುಂಬೈ: ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ ಆಯ್ಕೆ ಕುರಿತು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಹಾಗೂ ರೋಹಿತ್‌ ಶರ್ಮಾ (Rohit Sharma) ಸ್ಪಷ್ಟನೆ ನೀಡಿದ್ದಾರೆ. ಕೊಹ್ಲಿ ಸ್ಟ್ರೈಕ್‌ರೇಟ್‌? ಮೀಸಲು ಆಟಗಾರನಾಗಿ ರಿಂಕು ಆಯ್ಕೆ, ತಂಡದಿಂದ ಕೆ.ಎಲ್‌ ರಾಹುಲ್‌ (KL Rahul) ಅವರನ್ನು ಕೈಬಿಟ್ಟಿದ್ದೇಕೆ? ಈ ಎಲ್ಲ ವಿಚಾರಗಳ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಮ್ಯಾಚ್‌ ಫಿನಿಷರ್‌ ರಿಂಕು ಸಿಂಗ್‌ಗೆ ಏಕೆ ಅವಕಾಶ ನೀಡಲಾಗಿಲ್ಲ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

    ಕೆ.ಎಲ್‌ ರಾಹುಲ್‌ ಕೈಬಿಟ್ಟಿದ್ದೇಕೆ?
    ಸದ್ಯ ಐಪಿಎಲ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕೆ.ಎಲ್‌ ರಾಹುಲ್‌ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಆದರೆ ನಮಗೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಗತ್ಯತ್ತು. ಆದ್ದರಿಂದ ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ. ರಾಹುಲ್‌ಗೆ ಮುಂದೆ ಉತ್ತಮ ಅವಕಾಶಗಳಿವೆ ಎಂದು ರೋಹಿತ್‌, ಅಗರ್ಕರ್‌ ತಿಳಿಸಿದ್ದಾರೆ.

    ರಿಂಕು ಸಿಂಗ್‌ ಅವರನ್ನು ಕಡೆಗಣಿಸಿದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್ ಮಾತನಾಡಿ, ರಿಂಕು ಸಿಂಗ್‌ ಅವರನ್ನು ಕೈ ಬಿಟ್ಟ ನಿರ್ಧಾರ ಕಠಿಣವಾಗಿತ್ತು. ಏಕೆಂದರೆ, ವೆಸ್ಟ್ ಇಂಡೀಸ್‌ ಹಾಗೂ ಅಮೆರಿಕ ಕಂಡೀಷನ್ಸ್ ಬಗ್ಗೆ ನಮಗೆ ಗೊತ್ತಿಲ್ಲ. ಈ ಕಾರಣದಿಂದ ನಾವು ಹೆಚ್ಚಿನ ಬೌಲಿಂಗ್‌ ಆಯ್ಕೆಗಳನ್ನು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ.

    ರಿಂಕು ತಪ್ಪು ಮಾಡಿಲ್ಲ:
    ಆಯ್ಕೆಯ ಸಂಧರ್ಭದಲ್ಲಿ ನಾವು ಕೆಲ ಕಠಿಣ ಸಂಗತಿಗಳನ್ನು ಎದುರಿಸಿದ್ದೇವೆ. ರಿಂಕು ಸಿಂಗ್‌ (Rinku Singh) ಯಾವುದೇ ತಪ್ಪು ಮಾಡಿಲ್ಲ ಹಾಗೂ ಶುಭಮನ್ ಗಿಲ್‌ ಕೂಡ ಅಷ್ಟೇ. ಇಲ್ಲಿ ಸಂಯೋಜನೆ ಪ್ರಮುಖ ಸಂಗತಿಯಾಗಿದೆ. ಅಲ್ಲಿನ ಕಂಡೀಷನ್ಸ್ ಹೇಗಿದೆ? ಎಂದು ನಮಗೆ ಇನ್ನೂ ಗೊತ್ತಿಲ್ಲ ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ. ಟಿ20 ವಿಶ್ವಕಪ್‌ ಭಾರತ ತಂಡದಿಂದ ರಿಂಕು ಸಿಂಗ್‌ ಅವರನ್ನು ಕೈ ಬಿಟ್ಟಿರುವುದು ಅನಿರೀಕ್ಷಿತ ಕರೆ. ಏಕೆಂದರೆ, ಹೆಚ್ಚುವರಿ ಬೌಲರ್ ಇದ್ದರೆ, ನಮಗೆ ಟೂರ್ನಿಯಲ್ಲಿ ನೆರವಾಗಬಹುದು ಎಂಬುದು ನಮ್ಮ ತಂತ್ರವಾಗಿದೆ ಹಾಗಾಗಿ ನಾಲ್ವರು ಸ್ಪಿನ್ನರ್‌ಗಳನ್ನು ಉಳಿಸಿಕೊಂಡಿದ್ದೇವೆ ಎಂದು ಅಗರ್ಕರ್‌ ಹೇಳಿದ್ದಾರೆ.

    ರಿಂಕು ಸಿಂಗ್ ರೀತಿ ಬ್ಯಾಕೆಂಡ್‌ನಲ್ಲಿ ಸ್ಪೋಟಕ ಬ್ಯಾಟ್‌ ಮಾಡುವ ಆಟಗಾರ ಇಲ್ಲವೆಂದು ನಾನು ನಂಬುತ್ತೇನೆ. ರಿಂಕು ಆಯ್ಕೆಯಾಗದೇ ಇರಲು ಅವರದು ಯಾವುದೇ ತಪ್ಪಿಲ್ಲ. ಗರಿಷ್ಠ 15 ಆಟಗಾರರಲ್ಲಿ ಇಬ್ಬರು ವಿಕೆಟ್‌ ಕೀಪರ್‌ಗಳೇ ಭಯಾನಕ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಈ ಕಾರಣದಿಂದಾಗಿಯೇ ಹಚ್ಚುವರಿ ಬೌಲರ್‌ಗಳನ್ನು ತೆಗೆದುಕೊಂಡಿದ್ದೇವೆ. ಆದರೆ, ಮೀಸಲು ಆಟಗಾರನಾಗಿ ಅವರು ತಂಡದ ಜೊತೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ, ದಿನದಾಂತ್ಯಕ್ಕೆ ತಂಡಕ್ಕೆ ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬೇಕಾಗುತ್ತದೆ ಎಂದು ಅಜಿತ್‌ ಅಗರ್ಕರ್‌ (Ajit Agarkar) ತಿಳಿಸಿದ್ದಾರೆ.

    ಕೊಹ್ಲಿ ಸಮರ್ಥಿಸಿಕೊಂಡ ಅಗರ್ಕರ್‌:
    ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ದೊಡ್ಡ ಮಟ್ಟದ ಸ್ಕೋರ್ ಮಾಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರ ಸ್ಟ್ರೈಕ್ ರೇಟ್​ ಕಾರಣಕ್ಕೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವರದಿಗಳ ಪ್ರಕಾರ ಆಯ್ಕೆದಾರರು ಈ ವರ್ಷದ ಆರಂಭದಲ್ಲಿ ಅವರನ್ನು ಟಿ20ಐ ತಂಡಕ್ಕೆ ಮರಳಿ ಕರೆಸಿಕೊಳ್ಳುವ ಮೊದಲು ತಂಡದ ಬೇಡಿಕೆಗಳಿಗೆ ಅನುಗುಣವಾಗಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಹೇಳಲಾಗಿತ್ತು. ಅದೇ ಷರತ್ತಿನ ಮೇರೆಗೆ ಅವರಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ರೋಹಿತ್‌ ಅವರನ್ನೂ ಕೇಳಲಾಗಿತ್ತು. ಆದರೆ, ಅವರು ಜೋರಾಗಿ ನಕ್ಕು ಇದೊಂದು ಚರ್ಚೆಯ ವಿಷಯವೇ ಅಲ್ಲ ಎಂಬುದಾಗಿ ಹೇಳಿದ್ದಾರೆ.

  • BCCI ವಾರ್ಷಿಕ ಆಟಗಾರರ ರಿಟೈನರ್‌ಶಿಪ್ ಪಟ್ಟಿ ರಿಲೀಸ್‌ – ಯಶಸ್ವಿ, ರಿಂಕು ಪಡೆಯೋ ಸಂಬಳ ಎಷ್ಟು ಗೊತ್ತಾ?

    BCCI ವಾರ್ಷಿಕ ಆಟಗಾರರ ರಿಟೈನರ್‌ಶಿಪ್ ಪಟ್ಟಿ ರಿಲೀಸ್‌ – ಯಶಸ್ವಿ, ರಿಂಕು ಪಡೆಯೋ ಸಂಬಳ ಎಷ್ಟು ಗೊತ್ತಾ?

    – ರಣಜಿಯಲ್ಲಿ ಕಳ್ಳಾಟ ಆಡಿದ ಅಯ್ಯರ್‌, ಇಶಾನ್‌ ಕಿಶನ್‌ಗೆ ಬಿಸಿಮುಟ್ಟಿಸಿದ ಬಿಸಿಸಿಐ

    ಮುಂಬೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು 2023-24ರ ಋತುವಿನ (ಅಕ್ಟೋಬರ್ 1, 2023 ರಿಂದ ಸೆಪ್ಟೆಂಬರ್ 30, 2024 ರವರೆಗೆ) ಟೀಂ ಇಂಡಿಯಾದ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟ ಮಾಡಿದೆ.

    ನಿರೀಕ್ಷೆಯಂತೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (Virat Kohli), ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರನ್ನ ಎ+ ವರ್ಗದಲ್ಲಿ ಇರಿಸಲಾಗಿದೆ. ಆದ್ರೆ ಬಿಸಿಸಿಐನ ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರರು ಐಪಿಎಲ್‌ಗಿಂತ ರಣಜಿ ಟ್ರೋಫಿಯನ್ನೇ ಮುಖ್ಯವಾಗಿ ಆಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ಅವರ ಸೂಚನೆಯನ್ನು ನಿರ್ಲಕ್ಷ್ಯ ಮಾಡಿದ್ದ ಶ್ರೇಯಸ್‌ ಅಯ್ಯರ್‌ (Shreyas Iyer) ಹಾಗೂ ಇಶಾನ್‌, ಕಿಶನ್‌ ಅವರಿಗೆ ಕೊಕ್‌ ನೀಡಿದೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿದ್ದ ಶಮಿ ಕಾಲಿಗೆ ಶಸ್ತ್ರಚಿಕಿತ್ಸೆ – ಐಪಿಎಲ್‌ನಿಂದ ಹೊರಗೆ?

    ಪ್ರಸಕ್ತ ವರ್ಷದಿಂದಲೇ ಟಿ20 ವಿಶ್ವಕಪ್‌ (T20 World Cup) ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡಿರುವ ಬಿಸಿಸಿಐ, ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಸಾಮರ್ಥ್ಯ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಮಣೆ ಹಾಕಿದೆ. ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ಜಿತೇಶ್ ಶರ್ಮಾ, ಮುಕೇಶ್‌ ಕುಮಾರ್ ಅವರನ್ನು ಸಿ-ವರ್ಗಕ್ಕೆ ಸೇರಿಸಲಾಗಿದೆ. ಇದರೊಂದಿಗೆ ಕಳೆದ ವರ್ಷ ಏಷ್ಯಾಕಪ್‌, ಏಕದಿನ ವಿಶ್ವಕಪ್‌ ಟೂರ್ನಿ ಆಯ್ಕೆಯಿಂದ ವಂಚಿರಾದ ಸಂಜು ಸ್ಯಾಮ್ಸನ್‌ ಅವರನ್ನೂ ಸಿ ವರ್ಗಕ್ಕೆ ಸೇರಿಸಲಾಗಿದೆ. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ʻಪೆನಾಲ್ಟಿ ಟೈಮ್‌ʼ, ʻಟರ್ನಿಂಗ್‌ ಟ್ರ್ಯಾಕ್‌ʼ ಕುತೂಹಲ!

    ಗ್ರೇಡ್-A+ (4 ಕ್ರೀಡಾಪಟುಗಳು)
    ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.

    ಗ್ರೇಡ್-A (6 ಕ್ರೀಡಾಪಟುಗಳು)
    ಆರ್. ಅಶ್ವಿನ್, ಮೊಹಮ್ಮದ್‌ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

    ಗ್ರೇಡ್-B (5 ಕ್ರೀಡಾಪಟುಗಳು)
    ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

    ಗ್ರೇಡ್-C (15 ಕ್ರೀಡಾಪಟುಗಳು)
    ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್‌ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್. ಇದನ್ನೂ ಓದಿ: WPL 2024: ಆರ್‌ಸಿಬಿ ಸ್ಟಾರ್‌ ಶ್ರೇಯಾಂಕ ಪಾಟೀಲ್‌ಗೆ ಮದುವೆ ಪ್ರಪೋಸಲ್‌ ಕೊಟ್ಟ ಅಭಿಮಾನಿ

    ಆಟಗಾರರಿಗೆ ವಾರ್ಷಿಕ ಸಂಬಳ ಎಷ್ಟು?
    ಗ್ರೇಡ್ A+: 7 ಕೋಟಿ ರೂ.
    ಗ್ರೇಡ್ A: 5 ಕೋಟಿ ರೂ.
    ಗ್ರೇಡ್ ಬಿ: 3 ಕೋಟಿ ರೂ.
    ಗ್ರೇಡ್ ಸಿ: 1 ಕೋಟಿ ರೂ.

    ಪ್ರತಿ ಪಂದ್ಯಕ್ಕೆ ನಿಗದಿಯಾಗಿರುವ ವೇತನ ಎಷ್ಟು?
    ಟೆಸ್ಟ್ ಪಂದ್ಯ ಶುಲ್ಕ: ಪ್ಲೇಯಿಂಗ್‌-11ನಲ್ಲಿ ಸ್ಥಾನ ಪಡೆದಿದ್ದರೆ 15 ಲಕ್ಷ ರೂ., ಪಡೆಯದಿದ್ದರೇ 7.5 ಲಕ್ಷ ರೂ.
    ಏಕದಿನ ಪಂದ್ಯದ ಶುಲ್ಕ: ಪ್ಲೇಯಿಂಗ್‌-11ನಲ್ಲಿ ಸ್ಥಾನ ಪಡೆದಿದ್ದರೆ 6 ಲಕ್ಷ ರೂ., ಪಡೆಯದಿದ್ದರೇ 3 ಲಕ್ಷ ರೂ.
    T20I ಪಂದ್ಯ ಶುಲ್ಕ: ಪ್ಲೇಯಿಂಗ್‌-11ನಲ್ಲಿ ಸ್ಥಾನ ಪಡೆದಿದ್ದರೆ, 3 ಲಕ್ಷ ರೂ., ಪಡೆಯದಿದ್ದರೇ 1.5 ಲಕ್ಷ ರೂ.

    ಅಲ್ಲದೇ ಬಿಸಿಸಿಐ ವಾರ್ಷಿಕ ಒಪ್ಪಂದದ ಪ್ರಕಾರ, ನಿಗದಿತ ಅವಧಿಯೊಳಗೆ ಕನಿಷ್ಠ 3 ಟೆಸ್ಟ್‌ ಅಥವಾ 8 ಏಕದಿನ ಪಂದ್ಯ ಅಥವಾ 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡುವ ಮಾನದಂಡ ಪೂರೈಸುವ ಆಟಗಾರನನ್ನು ಸಹಜವಾಗಿಯೇ ಗ್ರೇಡ್-ʻಸಿʼಗೆ ಸೇರಿಸಲಾಗುತ್ತದೆ. ಉದಾಹರಣೆಗೆ, ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರು ಇಲ್ಲಿಯವರೆಗೆ 2 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ, ಅವರು ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದರೆ ಮಾನದಂಡ ಪೂರ್ಣಗೊಳಿಸಿದಂತಾಗುತ್ತದೆ. ನಂತರ ಗ್ರೇಡ್‌-ಸಿ ವರ್ಗಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅಲ್ಲದೇ ಈ ಸುತ್ತಿನ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ಸೂಚಿಸಿದೆ.

  • 95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ – ವಿಶ್ವದಾಖಲೆ ನಿರ್ಮಿಸಿದ ರಿಂಕು-ರೋಹಿತ್‌ ಜೊತೆಯಾಟ

    95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ – ವಿಶ್ವದಾಖಲೆ ನಿರ್ಮಿಸಿದ ರಿಂಕು-ರೋಹಿತ್‌ ಜೊತೆಯಾಟ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ (Afghanistan) ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಹಾಗೂ ರಿಂಕು ಸಿಂಗ್‌ 190 ರನ್‌ಗಳ ಜೊತೆಯಾಟ ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

    4.3 ಓವರ್‌ಗಳಲ್ಲಿ 22 ರನ್‌ಗಳಿಸಿದ್ದ ಭಾರತ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಅಲ್ಲದೇ ಮೊದಲ 10 ಓವರ್‌ಗಳಲ್ಲಿ 61 ರನ್‌ಗಳನ್ನಷ್ಟೇ ಗಳಿಸಿತ್ತು. ಇದರಿಂದ ಭಾರತ 150 ರನ್‌ ಗಳಿಸುವುದೂ ಕಷ್ಟವಾಗಿತ್ತು. ಬಳಿಕ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ್ದ ರೋಹಿತ್‌-ರಿಂಕು (Rohit – Rinku) 95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ಗಳ ಜೊತೆಯಾಟವಾಡಿದ (Highest Partnership) ಹಾಗೂ 5ನೇ ವಿಕೆಟ್‌ಗೆ ಅತಿಹೆಚ್ಚು ರನ್‌ಗಳ ಜೊತೆಯಾಟ ನೀಡಿದ ದಾಖಲೆ ನಿರ್ಮಿಸಿದರು. ಇದನ್ನೂ ಓದಿ: ನೂತನ ಸಾಯಿಕೃಷ್ಣನ್ ಸ್ಟೇಡಿಯಂ ಲೋಕಾರ್ಪಣೆ; ಸತ್ಯಸಾಯಿ ಗ್ರಾಮದಲ್ಲಿ ಸಚಿನ್-ಯುವಿ ತಂಡಗಳ ನಡುವೆ ಕ್ರಿಕೆಟ್ ಕಾಳಗ

    T20I ಪಂದ್ಯವೊಂದರಲ್ಲಿ ವೈಯಕ್ತಿಕವಾಗಿ ಅತಿಹೆಚ್ಚು ರನ್‌ ಗಳಿಸಿದವರು:
    * ಶುಭಮನ್ ಗಿಲ್ 126 ರನ್‌ – VS ನ್ಯೂಜಿಲೆಂಡ್‌
    * ಋತುರಾಜ್‌ ಗಾಯಕ್ವಾಡ್‌ 123 ರನ್‌ – VS ಆಸ್ಟ್ರೇಲಿಯಾ
    * ವಿರಾಟ್‌ ಕೊಹ್ಲಿ 122 ರನ್‌ – VS ಅಫ್ಘಾನಿಸ್ತಾನ
    * ರೋಹಿತ್‌ ಶರ್ಮಾ 121 ರನ್‌ – VS ಅಫ್ಘಾನಿಸ್ತಾನ

    T20I ಕ್ರಿಕೆಟ್ ನಲ್ಲಿ 5ನೇ ವಿಕೆಟ್‌ಗೆ ಅತಿಹೆಚ್ಚು ರನ್‌ಗಳ ಜೊತೆಯಾಟ
    * 190* ರನ್- ರೋಹಿತ್ ಶರ್ಮಾ- ರಿಂಕು ಸಿಂಗ್- ಭಾರತ VS ಅಫಘಾನಿಸ್ತಾನ-2024
    * 145 ರನ್- ಕುಶಾಲ್ ಮಲ್ಲ- ಡಿ.ಎಸ್ ಏರ್ರೇ- ನೇಪಾಳ VS ಹಾಂಗ್ ಕಾಂಗ್-2023
    * 121* ರನ್ – ಮಾರ್ಕ್ ಚಾಪ್ಮನ್- ಜೇಮ್ಸ್ ನಿಶಮ್- ನ್ಯೂಜಿಲೆಂಡ್ VS ಪಾಕಿಸ್ತಾನ-2023
    * 119* ರನ್- ಶೋಯೆಬ್ ಮಲ್ಲಿಕ್- ಮಿಸ್ಬಾ ಉಲ್ ಹಕ್- ಪಾಕಿಸ್ತಾನ VS ಆಸ್ಟ್ರೇಲಿಯಾ-2007
    * 119* ರನ್-ಕರ್ಟಿಸ್ ಕ್ಯಾಂಫರ್ – ಜಾರ್ಜ್ ಡಾಕ್ರೆಲ್- ಐರ್ಲೆಂಡ್ VS ಸ್ಕಾಟ್ಲೆಂಡ್-2022

    ಟಿ20 ಕ್ರಿಕೆಟ್ ನಲ್ಲಿ ಯಾವುದೇ ವಿಕೆಟ್ ಗೆ ಗರಿಷ್ಠ ಜೊತೆಯಾಟ
    * 190 ರನ್- ರೋಹಿತ್ ಶರ್ಮಾ – ರಿಂಕು ಸಿಂಗ್ – ಅಫಘಾನಿಸ್ತಾನ ವಿರುದ್ಧ- 2024
    * 176 ರನ್ – ಸಂಜು ಸ್ಯಾಮ್ಸನ್ – ದೀಪಕ್ ಹೂಡ – ಐರ್ಲೆಂಡ್ ವಿರುದ್ಧ- 2022
    * 165 ರನ್ – ರೋಹಿತ್ ಶರ್ಮಾ – ಕೆಎಲ್ ರಾಹುಲ್ – ಶ್ರೀಲಂಕಾ ವಿರುದ್ಧ- 2017
    * 165 – ಯಶಸ್ವಿ ಜೈಸ್ವಾಲ್ – ಶುಭ್ಮನ್ ಗಿಲ್ – ವೆಸ್ಟ್ ಇಂಡೀಸ್ ವಿರುದ್ಧ- 2023

    ಒಂದೇ ಓವರ್‌ನಲ್ಲಿ 36 ರನ್‌ ಚಚ್ಚಿದ ರಿಂಕು-ರೋಹಿತ್‌:
    ಪಂದ್ಯದ 19ನೇ ಓವರ್ ಅಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 176 ಕಲೆ ಹಾಕಿತ್ತು. ಆದ್ರೆ 20ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್ ಪೈಪೋಟಿಗೆ ಬಿದ್ದಂತೆ ಬ್ಯಾಟ್ ಬೀಸಿದರು. ಕರೀಮ್ ಜನ್ನತ್ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ರೋಹಿತ್‌ ಒಂದು ಬೌಂಡರಿ, ನೋಬಾಲ್‌ ಸೇರಿ ಎರಡು ಸಿಕ್ಸರ್, ಒಂದು ರನ್‌ ಸಿಡಿಸಿದರೇ, ಇನ್ನಿಂಗ್ಸ್‌ನ ಕೊನೆಯ 3 ಎಸೆತಗಳಲ್ಲಿ ರಿಂಕು ಸಿಂಗ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ 36 ರನ್ ಕಲೆಹಾಕಿದರು. ಇದರೊಂದಿಗೆ ತಂಡದ ಮೊತ್ತವನ್ನು 212 ರನ್‌ಗಳಿಗೆ ಏರಿಸಿದರು. ಇದನ್ನೂ ಓದಿ: ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್‌ ಶರ್ಮಾ 

  • ಲೆಕ್ಕಕ್ಕಿಲ್ಲ ರಿಂಕು ಸಿಕ್ಸರ್‌ – ಕೊನೇ ಎಸೆತದಲ್ಲಿ 7 ರನ್‌ ಗಳಿಸಿದ್ರೂ ಭಾರತಕ್ಕೆ ಸಿಕ್ಕಿದ್ದು 1 ರನ್‌, ಏಕೆ ಗೊತ್ತೇ?

    ಲೆಕ್ಕಕ್ಕಿಲ್ಲ ರಿಂಕು ಸಿಕ್ಸರ್‌ – ಕೊನೇ ಎಸೆತದಲ್ಲಿ 7 ರನ್‌ ಗಳಿಸಿದ್ರೂ ಭಾರತಕ್ಕೆ ಸಿಕ್ಕಿದ್ದು 1 ರನ್‌, ಏಕೆ ಗೊತ್ತೇ?

    ವಿಶಾಖಪಟ್ಟಣಂ: ಸದ್ಯ ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಪೈಕಿ ಭಾರತ ಮೊದಲ ಪಂದ್ಯದಲ್ಲೇ ರೋಚಕ ಜಯ ಸಾಧಿಸಿದೆ.

    ಸೂರ್ಯಕುಮಾರ್‌ ಯಾದವ್‌ (Suryakumar Yadav), ಇಶಾನ್‌ ಕಿಶನ್‌, ರಿಂಕು ಸಿಂಗ್‌ (Rinku Singh) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ ಆಸೀಸ್‌ ವಿರುದ್ಧ ಗೆದ್ದು ಬೀಗಿದೆ. ಆದ್ರೆ ಕೊನೇ ಎಸೆತದಲ್ಲಿ 1 ರನ್‌ ಬೇಕಿದ್ದಾಗ ಸಿಕ್ಸರ್‌ ಸಿಡಿಸಿ ಭಾರತ ಒಟ್ಟು 214 ರನ್‌ ಕಲೆಹಾಕಿದರೂ ತಂಡಕ್ಕೆ ಸೇರ್ಪಡೆಯಾಗಿದ್ದು 209ರನ್‌ ಮಾತ್ರ. ಆದ್ರೆ ಕೊನೆಯಲ್ಲಿ 7 ರನ್‌ ಬಾರಿಸಿದರೂ ಭಾರತಕ್ಕೆ ಒಂದೇ ಒಂದು ರನ್‌ ಸಿಕ್ಕಿತು. ಅದು ಟೀಂ ಇಂಡಿಯಾ (Team India) ಖಾತೆಗಾಗಲಿ ಅಥವಾ ರಿಂಕು ಸಿಂಗ್‌ ಅವರ ಖಾತೆಯಾಗಲಿ ಸೇರಲಿಲ್ಲ. ಯಾಕೆ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ…

    ರಿಂಕು ಭರ್ಜರಿ ಸಿಕ್ಸ್‌ ಲೆಕ್ಕಕ್ಕಿಲ್ಲದಂತಾಗಿದ್ದೇಕೆ?
    ಅಂತಿಮ ಓವರ್‌ನಲ್ಲಿ ಭಾರತಕ್ಕೆ 7 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲೇ ರಿಂಕು ಬೌಂಡರಿ ಬಾರಿಸಿ, 2ನೇ ಎಸೆತದಲ್ಲಿ 1 ರನ್‌ ಬೈಸ್‌ ಕದ್ದರು. ಆದ್ರೆ 3 ಮತ್ತು 4ನೇ ಎಸೆತಗಳಲ್ಲಿ ಸತತ 2 ವಿಕೆಟ್‌ ಉರುಳಿತು. ಈ ವೇಳೆ ಮತ್ತೊಂದು ವೈಡ್‌ ತಂಡಕ್ಕೆ ಸೇರ್ಪಡೆಯಾಯಿತು. ಕೊನೆಯ ಒಂದು ಎಸೆತದಲ್ಲಿ ಇನ್ನೊಂದು ರನ್‌ ಗೆಲುವಿಗೆ ಅಗತ್ಯವಿತ್ತು. ಸೇನ್‌ ಅಬಾಟ್‌ ಫುಲ್‌ ಲೆಂತ್‌ ಬೌಲಿಂಗ್‌ಗೆ ರಿಂಕು ಸಿಂಗ್‌, ಲಾಂಗ್‌ ಆನ್‌ಗೆ ಸಿಕ್ಸರ್‌ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಇದರಿಂದ ಟೀಂ ಇಂಡಿಯಾ ಕೊನೇ ಎಸೆತದಲ್ಲಿ 7 ರನ್‌ ಗಳಿಸಿದರೂ ಒಂದೇ ಒಂದು ರನ್‌ ಸೇರ್ಪಡೆಯಾಯಿತು. ಇದನ್ನೂ ಓದಿ: ಸೆಹ್ವಾಗ್ ಶತಕದ ವೇಳೆ ಲಂಕಾ ಕುತಂತ್ರ – ಇದೇನಾ ನಿಮ್ಮ ಕ್ರೀಡಾ ಸ್ಫೂರ್ತಿ?

    ಏಕೆಂದರೆ ಸೇನ್‌ ಅಬ್ಬಾಟ್‌ ಕೊನೇ ಎಸೆತವನ್ನು ಓವರ್‌ ಕ್ರೀಸ್‌ ನೋಬಾಲ್‌ ಎಸೆದಿದ್ದರು. ನೋಬಾಲ್‌ನಲ್ಲಿ ಗೇಮ್ ಕೊನೆಯಾದರೆ ಕೇವಲ ಒಂದು ರನ್ ಸಿಗುತ್ತದೆ ಹೊರತು ಬ್ಯಾಟರ್ ಖಾತೆಗೆ ಆ ರನ್ ಸೇರ್ಪಡೆಯಾಗುವುದಿಲ್ಲ. ಆ ಕ್ಷಣದಲ್ಲಿ ಬ್ಯಾಟ್, ಲೆಗ್-ಬೈ ಅಥವಾ ಬೈಗಳ ಮೂಲಕ ಗಳಿಸಿದ ರನ್‌ ಕೂಡ ತಂಡದ ಖಾತೆಗೆ ಸೇರ್ಪಡೆಯಾಗುವುದಿಲ್ಲ. ನೋಬಾಲ್‌ ಸಿಕ್ಸರ್‌ ಸಿಡಿಸುವುದಕ್ಕೂ ಮುಂಚಿತವಾಗಿ ಆಗಿತ್ತು. ಭಾರತದ ಗೆಲುವಿಗೆ 1 ರನ್‌ಗಳಷ್ಟೇ ಅಗತ್ಯವಿದ್ದ ಕಾರಣ ರಿಂಕು ಸಿಂಗ್‌ ಅವರ ಸಿಕ್ಸರ್‌ ಸ್ಕೋರ್‌ ಅವರ ಖಾತೆಗಾಗಲಿ ಅಥವಾ ತಂಡದ ಖಾತೆಗಾಗಲಿ ಸೇರ್ಪಡೆಯಾಗುವುದಿಲ್ಲ. ಒಂದು ವೇಳೆ ಒಂದು ರನ್‌ಗಿಂತಲೂ ಹೆಚ್ಚು ರನ್‌ಗಳ ಅಗತ್ಯವಿದ್ದಿದ್ದರೇ ಮಾತ್ರ ಆ ರನ್‌ ಸೇರ್ಪಡೆಯಾಗುತ್ತದೆ. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

    ಸೆಹ್ವಾಗ್ ಅವರಿಗೂ ಇದೇ ರೀತಿ ಆಗಿತ್ತು?
    ಟೀಂ ಇಂಡಿಯಾಕ್ಕೆ ಈ ಘಟನೆ ಇದೇ ಮೊದಲೇನಲ್ಲ. 2010ರಲ್ಲಿ ಶ್ರೀಲಂಕಾ, ಭಾರತ, ನ್ಯೂಜಿಲೆಂಡ್ ಮಧ್ಯೆ ಶ್ರೀಲಂಕಾದಲ್ಲಿ ತ್ರಿಕೋನ ಏಕದಿನ ಸರಣಿ ಆಯೋಜನೆಗೊಂಡಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಶ್ರೀಲಂಕಾ 170 ರನ್‌ಗಳಿಗೆ ಆಲೌಟ್ ಆಗಿತ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 34 ಓವರ್‌ಗಳಲ್ಲಿ 166 ರನ್‌ಗಳಿಸಿತ್ತು. ಸೆಹ್ವಾಗ್ 99 ರನ್‌ಗಳಿಸಿದ್ದರೆ ಧೋನಿ 23 ರನ್‌ಗಳಿಸಿ ಕ್ರೀಸ್‌ನಲ್ಲಿದ್ದರು. ಭಾರತದ ಗೆಲುವಿಗೆ ಕೇವಲ 5 ರನ್ ಬೇಕಿತ್ತು. ರಂದೀವ್ 35ನೇ ಓವರ್ ಎಸೆಯಲು ಬಂದಾಗ ಸೆಹ್ವಾಗ್ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನು ಸೆಹ್ವಾಗ್ ಬ್ಯಾಟಿನಿಂದ ತಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟಿಗೆ ಸಿಗಲಿಲ್ಲ. ಈ ಚೆಂಡನ್ನು ನಾಯಕನಾಗಿದ್ದ ಕುಮಾರ ಸಂಗಕ್ಕಾರ ಸಹ ಹಿಡಿಯದ ಕಾರಣ ಬೌಂಡರಿಗೆ ಹೋಗಿತ್ತು. ಬೈ ಮೂಲಕ ಇತರೇ 4 ರನ್ ಸೇರ್ಪಡೆಯಾದ ಕಾರಣ ಸ್ಕೋರ್ ಸಮವಾಗಿತ್ತು. ಹೀಗಿದ್ದರೂ ಸೆಹ್ವಾಗ್ 1 ರನ್ ಗಳಿಸಿ ಶತಕ ಹೊಡೆಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ನಂತರ ಎರಡು ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. 4ನೇ ಎಸೆತವನ್ನು ಸೆಹ್ವಾಗ್ ಲಾಂಗ್ ಅಫ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದ್ದರು. ಸೆಹ್ವಾಗ್ ಸಿಕ್ಸ್ ಸಿಡಿಸಿದ್ದರೂ ಶತಕ ಪೂರ್ಣಗೊಂಡಿರಲಿಲ್ಲ. ಏಕೆಂದರೆ ರಂದೀವ್ ನೋಬಾಲ್ ಎಸೆದಿದ್ದರು.

  • T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

    T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

    ವಿಶಾಖಪಟ್ಟಣಂ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಬಳಿಕ‌ ಭಾರತದಲ್ಲಿ ಕ್ರಿಕೆಟ್‌ ಕ್ರೇಜ್‌ ಮತ್ತಷ್ಟು ಹೆಚ್ಚಾಗಿದೆ. ಜಿಯೋಸಿನಿಮಾದಲ್ಲಿ (Jiocinema) ಅತ್ಯಧಿಕ ವೀಕ್ಷಕರ (Viewership) ಸಂಖ್ಯೆ ತಲುಪಿ ದಾಖಲೆ ಬರೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

    ಗುರುವಾರ ನಡೆದ ಭಾರತ-ಆಸ್ಟ್ರೇಲಿಯಾ (Ind vs Aus) ನಡುವಿನ ಮೊದಲ ಟಿ20 ಪಂದ್ಯವನ್ನು ಏಕಕಾಲಕ್ಕೆ 8.6 ಕೋಟಿಗಿಂತಲೂ ಅಧಿಕ ಕ್ರಿಕೆಟ್‌ ಅಭಿಮಾನಿಗಳು ವೀಕ್ಷಣೆ ಮಾಡಿದ್ದು, ಕ್ರಿಕೆಟ್‌ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ. ಇತ್ತೀಚೆಗೆ ಭಾರತ ಮತ್ತು ಆಸೀಸ್‌ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯವನ್ನು 5.9 ಕೋಟಿ ಮಂದಿ ವೀಕ್ಷಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಆದ್ರೆ ಜಿಯೋಸಿನಿಮಾ ಏಕಕಾಲಕ್ಕೆ 8.6 ಕೋಟಿಗೂ ಅಧಿಕ ವೀಕ್ಷಕರನ್ನ ಕಂಡಿದ್ದು, ಹೊಸ ದಾಖಲೆ ನಿರ್ಮಿಸಿದೆ.

    ಭಾರತ ಮತ್ತು ಆಸೀಸ್‌ (Ind vs Aus) ಟಿ20 ಆರಂಭದಿಂದಲೇ ಪ್ರೇಕ್ಷಕರು ಓಟಿಟಿ ವೇದಿಕೆಗೆ ಲಗ್ಗೆಯಿಡಲು ಶುರು ಮಾಡಿದರು. ಆಸೀಸ್‌ ಬ್ಯಾಟಿಂಗ್‌ ಮುಗಿದು, ಟೀಂ ಇಂಡಿಯಾ ತನ್ನ ಇನ್ನಿಂಗ್ಸ್‌ ಆರಂಭಿಸುತ್ತಿದ್ದಂತೆ ವೀಕ್ಷಕರ ಸಂಖ್ಯೆ 8 ಕೋಟಿ ಮೀರಿತ್ತು. ಭಾರತ ತನ್ನ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ 1 ವಿಕೆಟ್‌ ಕಳೆದುಕೊಂಡು 11 ರನ್‌ ಗಳಿಸಿತ್ತು. ಇಶಾನ್‌ ಕಿಶನ್‌ ಕ್ರೀಸ್‌ನಲ್ಲಿದ್ದರು, ಈ ಸಂದರ್ಭದಲ್ಲಿ ವೀಕ್ಷಕರ ಸಂಖ್ಯೆ 8.6 ಕೋಟಿ ತಲುಪಿತ್ತು, ಅಲ್ಲದೇ ಜಿಯೋಸಿನಿಮಾ ಆ್ಯಪ್‌ ಕೂಡ ಕ್ರ್ಯಾಶ್‌ ಆಗಿತ್ತು.

    ಈ ಹಿಂದೆ ವಿಶ್ವಕಪ್‌ನಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಕಿವೀಸ್‌ ಪಂದ್ಯವನ್ನು 4.3 ಕೋಟಿ ಮಂದಿ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆ ಮಾಡಿದ್ದರು. ಅದಕ್ಕೂ ಮುನ್ನ 2023ರ IPL ಆವೃತ್ತಿಯಲ್ಲಿ ಜಿಯೋಸಿನಿಮಾ 2.53 ಕೋಟಿ ವೀಕ್ಷಣೆ ಕಾಣುವ ಮೂಲಕ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆ ಮುರಿದಿತ್ತು. ಆದ್ರೆ ಇಂಡೋ-ಆಸೀಸ್‌ ಟಿ20 ಕದನ ಹಿಂದಿನ ಎಲ್ಲಾ ದಾಖಲೆಗಳನ್ನ ನುಚ್ಚುನೂರು ಮಾಡಿದೆ.

    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ಆರಂಭಗೊಂಡಿದ್ದು, ಮೊದಲ ಟಿ20ರಲ್ಲಿ ಭಾರತ ಅಮೋಘ ಜಯ ಸಾಧಿಸಿದೆ. ಗುರುವಾರ ನಡೆದ ಪಂದ್ಯವು ಕೊನೇ ಕ್ಷಣದವರೆಗೂ ರೋಚಕತೆಯಿಂದ ಕೂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 3 ವಿಕೆಟ್‌ಗೆ 208 ರನ್‌ ಗಳಿಸಿದ್ರೆ, ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ 19.5 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 209 ರನ್‌ಗಳ ಜಯ ಸಾಧಿಸಿತು. ಕೊನೇ ಎಸೆತದಲ್ಲಿ ರಿಂಕು ಸಿಂಗ್‌ ಸಿಕ್ಸರ್‌ ಸಿಡಿಸಿದರೂ, ನೋಬಾಲ್‌ ಆದ ಕಾರಣ ಕೇವಲ 1 ರನ್‌ ಮಾತ್ರವೇ ಸೇರ್ಪಡೆಯಾಯಿತು.

  • ರಿಂಕು, ಸಂಜು ಸ್ಫೋಟಕ ಬ್ಯಾಟಿಂಗ್‌ – 33  ರನ್‌ಗಳ ಜಯ, ಸರಣಿ ಗೆದ್ದ ಟೀಂ ಇಂಡಿಯಾ

    ರಿಂಕು, ಸಂಜು ಸ್ಫೋಟಕ ಬ್ಯಾಟಿಂಗ್‌ – 33 ರನ್‌ಗಳ ಜಯ, ಸರಣಿ ಗೆದ್ದ ಟೀಂ ಇಂಡಿಯಾ

    ಡಬ್ಲಿನ್‌: ಐರ್ಲೆಂಡ್‌ (Ireland) ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ (Team India) 33 ರನ್‌ಗಳಿಂದ ಜಯಗಳಿಸುವ  ಮೂಲಕ ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.

    ಗೆಲ್ಲಲು 186 ರನ್‌ಗಳ ಗುರಿಯನ್ನು ಪಡೆದ ಐರ್ಲೆಂಡ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ತಮ್ಮ ಮೊದಲ ನಾಯಕತ್ವದಲ್ಲಿ ಬುಮ್ರಾ ವಿದೇಶಿ ನೆಲದಲ್ಲಿ ಸರಣಿ ಗೆದ್ದಿದ್ದಾರೆ.

    ಐರ್ಲೆಂಡ್‌ 63 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಾಗ ಭಾರತ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಆದರೆ 5ನೇ ವಿಕೆಟಿಗೆ ಆಂಡಿ ಬಾಲ್ಬಿರ್ನಿ ಮತ್ತು ಜಾರ್ಜ್ ಡಾಕ್ರೆಲ್ 30 ಎಸೆತಗಳಲ್ಲಿ 52 ರನ್‌ ಜೊತೆಯಾಟವಾಡಿ ಬಿಸಿ ಮುಟ್ಟಿಸಿದರು.

    ತಂಡದ ಮೊತ್ತ 115 ರನ್‌ ಆಗಿದ್ದಾಗ ಜಾರ್ಜ್ ಡಾಕ್ರೆಲ್ ಎರಡನೇ ರನ್‌ ಓಡಲು ಯತ್ನಿಸಿದಾಗ ರನೌಟ್‌ ಆದರು. ಜಾರ್ಜ್ ಡಾಕ್ರೆಲ್ 13 ರನ್‌ ಗಳಿಸಿ ಔಟಾದರು. ಕೇವಲ 39 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಆಂಡಿ ಬಾಲ್ಬಿರ್ನಿ 72 ರನ್‌ (51 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಔಟಾದರು. ಇವರಿಬ್ಬರು ಔಟಾದ ಬೆನ್ನಲ್ಲೇ ತಂಡದ ರನ್‌ ವೇಗ ಇಳಿಕೆಯಾಯಿತು. ಬುಮ್ರಾ, ಪ್ರಸಿದ್ಧ್‌ ಕೃಷ್ಣ, ರವಿ ಬಿಷ್ಣೋಯಿ ತಲಾ ಎರಡು ವಿಕೆಟ್‌ ಪಡೆದರೆ ಅರ್ಶ್‌ದೀಪ್‌ ಸಿಂಗ್‌ 1 ವಿಕೆಟ್‌ ಪಡೆದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 34 ರನ್‌ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್‌ ಮತ್ತು ತಿಲಕ್‌ ವರ್ಮಾ ಅವರ ವಿಕೆಟ್‌ ಕಳೆದುಕೊಂಡಿತ್ತು. ಮೂರನೇ ವಿಕೆಟಿಗೆ ಸಂಜು ಸ್ಯಾಮ್ಸನ್‌ (Sanju Samson) ಮತ್ತು ಋತ್‌ರಾಜ್‌ ಗಾಯಕ್ವಾಡ್‌ (Ruturaj Gaikwad ) 49 ಎಸೆತಗಳಿಗೆ 71 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

    ಸ್ಯಾಮ್ಸನ್‌ 40 ರನ್‌ (26 ಎಸೆತ, 5 ಬೌಂಡರಿ, 1 ಸಿಕ್ಸರ್‌), ಗಾಯಕ್ವಾಡ್‌ 58 ರನ್‌ (43 ಎಸೆತ, 6 ಬೌಂಡರಿ 1 ಸಿಕ್ಸರ್‌) ಹೊಡೆದು ಔಟಾದರು. ನಂತರ ಶಿವಂ ದುಬೆ ಮತ್ತು ರಿಂಕು ಸಿಂಗ್‌ (Rinku Singh) 5ನೇ ವಿಕೆಟಿಗೆ 28 ಎಸೆತಗಳಲ್ಲಿ 55 ರನ್‌ ಜೊತೆಯಾಟವಾಡಿದರು. ರಿಂಕು ಸಿಂಗ್‌ 38 ರನ್‌ (21‌ ಎಸೆತ, 2 ಬೌಂಡರಿ, 3 ಸಿಕ್ಸರ್) ಶಿವಂ ದುಬೆ ಔಟಾಗದೇ 22 ರನ್‌(16 ಎಸೆತ, 2 ಸಿಕ್ಸರ್‌) ಹೊಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]