Tag: ರಾಹುಲ್ ನಾರ್ವೇಕರ್

  • ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಅವಿರೋಧ ಆಯ್ಕೆ

    ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಅವಿರೋಧ ಆಯ್ಕೆ

    ಮುಂಬೈ: ಮಹಾರಾಷ್ಟ್ರದ (Maharashtra) 15ನೇ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ (Rahul Narwekar) ಸೋಮವಾರ (ಡಿ.09) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಭಾನುವಾರ (ಡಿ.08) ರಾಹುಲ್ ನಾರ್ವೇಕರ್ ಸ್ಪೀಕರ್ ಹುದ್ದೆಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇನ್ನೂ ಮಹಾವಿಕಾಸ್ ಅಘಾಡಿಯೂ (MVC) ಯಾವುದೇ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿರಲಿಲ್ಲ. ಹೀಗಾಗಿ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ 2ನೇ ಬಾರಿಗೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.ಇದನ್ನೂ ಓದಿ: ಮಧ್ಯಂತರ ಜಾಮೀನು ಅವಧಿ ಅಂತ್ಯದ ದಿನವೇ ದರ್ಶನ್‌ಗೆ ಸರ್ಜರಿ – ಸದ್ಯಕ್ಕೆ ʻದಾಸʼನಿಗೆ ರಿಲೀಫ್‌!

    1960ರಲ್ಲಿ ಮಹಾರಾಷ್ಟ್ರ ರಾಜ್ಯ ರಚನೆಯಾದ ಬಳಿಕ ಬಾಳಾಸಾಹೇಬ್ ಭರಡೆ ಅವರು ಎರಡು ಬಾರಿ ವಿಧಾನಸಭಾ ಸ್ಪೀಕರ್ ಆಗಿದ್ದ ಏಕೈಕ ಸದಸ್ಯರಾಗಿದ್ದರು. ಅದಾದ ಬಳಿಕ ರಾಹುಲ್ ನಾರ್ವೇಕರ್ ಎರಡನೇ ಬಾರಿ ಸ್ಪೀಕರ್ ಆಗಿ ಹೊರಹೊಮ್ಮಿದ್ದಾರೆ.

    ಈ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಮಾತನಾಡಿ, 1960ರಲ್ಲಿ ರಾಜ್ಯ ರಚನೆಯಾದ ನಂತರ ಈ ಹುದ್ದೆಗೆ ಮರು ಆಯ್ಕೆಯಾದ ಕೆಳಮನೆಯ ಎರಡನೇ ಸದಸ್ಯ ನಾರ್ವೇಕರ್ ಎಂದು ಸಂತೋಷ ವ್ಯಕ್ತಪಡಿಸಿದರು. ಎರಡೂವರೆ ವರ್ಷಗಳ ಕಾಲ 14ನೇ ವಿಧಾನಸಭೆ ಸ್ಪೀಕರ್ ಆಗಿದ್ದ ನಾರ್ವೇಕರ್, ನ.20ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಂಬೈನ ಕೊಲಾಬಾ ವಿಧಾನಸಭಾ ಸ್ಥಾನದಿಂದ ಗೆಲುವು ಸಾಧಿಸಿದರು.

    ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಮಹಾಯುತಿ (Mahayuti) ಒಕ್ಕೂಟವು 288 ಸ್ಥಾನಗಳಲ್ಲಿ 230ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿತ್ತು. ಇನ್ನೂ ಮಹಾವಿಕಾಸ್ ಅಘಾಡಿಯು 46 ಸ್ಥಾನಗಳನ್ನು ಮಾತ್ರ ತಮ್ಮದಾಗಿಸಿಕೊಂಡಿತ್ತು.ಇದನ್ನೂ ಓದಿ: New Delhi| ರಜೌರಿ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ

  • ಏಕನಾಥ್‌ ಶಿಂಧೆ ಬಣ ನಿಜವಾದ ಶಿವಸೇನೆ – ಮಹಾರಾಷ್ಟ್ರ ಸ್ಪೀಕರ್‌

    ಏಕನಾಥ್‌ ಶಿಂಧೆ ಬಣ ನಿಜವಾದ ಶಿವಸೇನೆ – ಮಹಾರಾಷ್ಟ್ರ ಸ್ಪೀಕರ್‌

    – ಉದ್ಧವ್ ಠಾಕ್ರೆಗೆ ಏಕನಾಥ್ ಶಿಂಧೆಯನ್ನು ಅನರ್ಹ ಮಾಡುವ ಅಧಿಕಾರ ಇಲ್ಲ

    ಮುಂಬೈ: ಏಕನಾಥ್‌ ಶಿಂಧೆ (Eknath Shinde) ಬಣ ನಿಜವಾದ ಶಿವಸೇನೆ. ಏಕನಾಥ್ ಶಿಂಧೆ ನಾಯಕತ್ವ ಸಾಂವಿಧಾನಿಕವಾಗಿದೆ ಎಂದು ಮಹಾರಾಷ್ಟ್ರ‌ (Maharashtra) ವಿಧಾನಸಭಾ ಸ್ಪೀಕರ್‌ ರಾಹುಲ್ ನಾರ್ವೇಕರ್ (Rahul Narwekar) ತಿಳಿಸಿದ್ದಾರೆ.

    ಶಿವಸೇನೆ ಅನರ್ಹತೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಆದೇಶ ಪ್ರಕಟಿಸಿದ್ದಾರೆ. ಉದ್ಧವ್ ಠಾಕ್ರೆಗೆ ಏಕನಾಥ್ ಶಿಂಧೆಯನ್ನು ಅನರ್ಹ ಮಾಡುವ ಅಧಿಕಾರ ಇಲ್ಲ. ಉದ್ಧವ್ ಠಾಕ್ರೆ ನಾಯಕತ್ವ ಅವರ ಪಕ್ಷದ ಇಚ್ಛೆಯಂತೆ ಇಲ್ಲ. ಹೀಗಾಗಿ ಅವರ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಹೋಗಲ್ಲ: ಕಾಂಗ್ರೆಸ್

    1999 ಶಿವಸೇನೆ ಪಕ್ಷದ ಸಂವಿಧಾನವೇ ಅಧಿಕೃತ. ಉದ್ಧವ್ ಠಾಕ್ರೆಗೆ ಶಾಸಕರ ಬೆಂಬಲ ಇಲ್ಲ. 2018 ರ ಪಕ್ಷದ ಹೊಸ ಸಂವಿಧಾನ ಚುನಾವಣಾ ಆಯೋಗದಲ್ಲಿಲ್ಲ. ಹೀಗಾಗಿ ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ 1999 ಸಂವಿಧಾನ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

    ಏಕನಾಥ್‌ ಶಿಂಧೆ ಬಣ ನಿಜವಾದ ಶಿವಸೇನೆ. ಏಕನಾಥ್ ಶಿಂಧೆ ನಾಯಕತ್ವ ಸಾಂವಿಧಾನಿಕವಾಗಿದೆ. ಯಾವ ಬಣವೂ ಗುರುತಿಸಿಕೊಳ್ಳದ ಶಾಸಕರನ್ನು ಅನರ್ಹ ಮಾಡಿರುವುದು ಸರಿಯಲ್ಲ. ಏಕನಾಥ್‌ ಶಿಂಧೆ ಬಣದ ಸಚೇತಕ (ವಿಪ್) ಆಯ್ಕೆಯೂ ಮಾನ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆ 2024 – ಶಾಸಕರು, ಮಾಜಿ ಸಚಿವರಿಗೆ ಟಿಕೇಟ್ ನೀಡಲು SP ಪ್ಲ್ಯಾನ್

    ಸ್ಪೀಕರ್‌ ನಾರ್ವೇಕರ್‌ ಹೇಳಿಕೆ ವಿರುದ್ಧ ಮಾಜಿ ಸಿಎಂ ಉದ್ಧವ್‌ ಠಾಕ್ರೆ (Uddhav Thackeray) ಕಿಡಿಕಾರಿದ್ದಾರೆ. ನಾರ್ವೇಕರ್‌ ಹೇಳಿಕೆ ಸುಪ್ರೀಂ ಕೋರ್ಟ್‌ಗೆ ಮಾಡಿದ ಅಪಮಾನ. ಪ್ರಜಾಪ್ರಭುತ್ವದ ಕಗ್ಗೊಲೆ. ಕಳನನ್ನು (ಸಭಾಪತಿ) ಸದನದ ಯಜಮಾನನನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

  • ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?

    ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?

    ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ (Maharashtra Assembly Speaker) ಆಗಿ ಬಿಜೆಪಿಯ ರಾಹುಲ್ ನಾರ್ವೇಕರ್ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸ್ಪೀಕರ್ ಆಯ್ಕೆ ಪ್ರಕ್ರಿಯೆಯಲ್ಲಿ ರಾಹುಲ್ ನಾರ್ವೇಕರ್ (Rahul Narwekar) 164 ಮತಗಳನ್ನು ಪಡೆದರು.

    ರಾಹುಲ್ ನಾರ್ವೇಕರ್ ಯಾರು?: ರಾಹುಲ್ ನಾರ್ವೇಕರ್ ಮಹಾರಾಷ್ಟ್ರದ ಕೊಲಾಬಾ (Colaba) ವಿಧಾನಸಭಾ ಕ್ಷೇತ್ರದ ಶಾಸಕ. ರಾಜಕೀಯ ಕುಟುಂಬಕ್ಕೆ ಸೇರಿದ ವ್ಯಕ್ತಿ. ಮಹಾರಾಷ್ಟ್ರ ರಾಜಕೀಯದಲ್ಲಿ ಚಿರಪರಿಚಿತ ವ್ಯಕ್ತಿ. ವೃತ್ತಿಯಲ್ಲಿ ವಕೀಲರಾಗಿರುವ ರಾಹುಲ್ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

    ಈ ಹಿಂದೆ ಶಿವಸೇನೆ ಹಾಗೂ ಎನ್‍ಸಿಪಿ ಜೊತೆಗೂ ಗುರುತಿಸಿಕೊಂಡಿದ್ದರು. ಶಿವಸೇನೆ ಯೂತ್ ವಿಂಗ್‍ನ ವಕ್ತಾರರಾಗಿಯೂ ಕಾರ್ಯನಿರ್ವಹಿಸಿದ್ದರು.  ಇದನ್ನೂ ಓದಿ: ಸಿದ್ದರಾಮಯ್ಯಗೆ ನಾಯಕತ್ವ ಘೋಷಣೆ ವದಂತಿ – ಅಖಾಡಕ್ಕೆ ಇಳಿದ ಡಿಕೆಶಿ

    ಕೌಟುಂಬಿಕ ಹಿನ್ನೆಲೆ: ರಾಹುಲ್ ನಾರ್ವೇಕರ್ ತಂದೆ ಸುರೇಶ್ ನಾರ್ವೇಕರ್ ಕೌನ್ಸಿಲರ್ ಆಗಿದ್ದರು. 2014ರಲ್ಲಿ ರಾಹುಲ್ ಶಿವಸೇನೆ ಪಕ್ಷದಲ್ಲಿದ್ದರು. ಈ ವೇಳೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ.

    ಮಹಾರಾಷ್ಟ್ರ ವಿಧಾನ ಪರಿಷತ್ ಸಭಾಪತಿ ರಾಮ್ ರಾಜೇ ನಾಯ್ಕ್ ನಿಂಬಾಳ್ಕರ್ ರಾಹುಲ್ ನಾರ್ವೇಕರ್ ಅವರ ಮಾವ. ಶಿವಸೇನೆ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಎನ್‍ಸಿಪಿ ಸೇರಿದ್ದರು. ಮಾವಲ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದರೂ ರಾಹುಲ್ ಚುನಾವಣೆಯಲ್ಲಿ ಸೋತರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದ ನೂತನ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

    ಕಾಂಗ್ರೆಸ್ ನಾಯಕ ನಾನಾ ಪಟೋಲೆ 2021ರ ಫೆಬ್ರವರಿ ತಿಂಗಳಲ್ಲಿ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನ ತೆರವಾಗಿತ್ತು. ಕಳೆದ ಗುರುವಾರ ಏಕನಾಥ್ ಶಿಂಧೆ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ವಿಧಾನಸಭೆ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ.

    Live Tv

  • ಮಹಾರಾಷ್ಟ್ರದ ನೂತನ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

    ಮಹಾರಾಷ್ಟ್ರದ ನೂತನ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

    ಮುಂಬೈ: ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಭಾನುವಾರ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ.

    ಮೊದಲ ಬಾರಿಗೆ ಬಿಜೆಪಿ ಶಾಸಕ ಮತ್ತು ಕೊಲಾಬಾ ಶಾಸಕ ನಾರ್ವೇಕರ್ ಶಿವಸೇನಾ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಆಗಿದ್ದ ರಾಜನ್ ಸಾಲ್ವಿ ಅವರನ್ನು ಸ್ಪೀಕರ್ ಚುನಾವಣೆಯಲ್ಲಿ ಸೋಲಿಸಿದರು. ಶಿಂಧೆ ಬಣದ ಬಿಜೆಪಿ ಅಭ್ಯರ್ಥಿಯಾದ ನಾರ್ವೇಕರ್ 164 ಮತಗಳನ್ನು ಪಡೆದರೆ, ಸಲ್ವಿ 107 ಮತಗಳನ್ನಷ್ಟೇ ಗಳಿಸಲು ಸಾಧ್ಯವಾದರು.

    ಈ ಬಗ್ಗೆ ಉಪಸಭಾಪತಿ ನರಹರಿ ಜಿರ್ವಾಲ್ ಮಾತನಾಡಿ, ಶಿಂಧೆ ಬಣ ಪಕ್ಷದ ವಿಪ್ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದಾಗಿ ಬಿಜೆಪಿ ಜಯ ದಾಖಲಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಂಧೆಯನ್ನು ಶಿವಸೇನೆಯಿಂದ ವಜಾಗೊಳಿಸಿದ ಠಾಕ್ರೆ

    ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ಶನಿವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಶಿವಸೇನೆಯಿಂದ ಉಚ್ಚಾಟಿಸಿದ್ದರು.

    ಶಿವಸೇನೆ ಪಕ್ಷದ ಅಧ್ಯಕ್ಷನಾಗಿ ನನಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಪಕ್ಷ ಸಂಘಟನೆಯಲ್ಲಿನ ಶಿವಸೇನೆ ನಾಯಕನ ಸ್ಥಾನದಿಂದ ತೆಗೆದುಹಾಕುತ್ತೇನೆ ಎಂದು ಠಾಕ್ರೆ ಅವರು ಬಂಡಾಯ ಸೇನೆಯ ಶಾಸಕರ ಬಣದ ನೇತೃತ್ವ ವಹಿಸಿದ್ದ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿದ್ದಾರೆ.

    ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಿಂಧೆ ಅವರು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ. ಇದನ್ನೂ ಓದಿ: 4 ರಾಜ್ಯಗಳಲ್ಲಿ 9 ಎಫ್‌ಐಆರ್ – ಬಿಜೆಪಿ ಮಾಜಿ ವಕ್ತಾರೆ ನೂಪುರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?

    Live Tv