Tag: ರಾಹುಲ್ ಡ್ರಾವಿಡ್

  • ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ- ಅರ್ಹತೆಗಳೇನು?

    ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ- ಅರ್ಹತೆಗಳೇನು?

    ನವದೆಹಲಿ: ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ವಿಸ್ತೃತ ಅಧಿಕಾರಾವಧಿಯು ಪೂರ್ಣಗೊಳ್ಳುತ್ತಿದ್ದಂತೆ ಮುಖ್ಯ ಕೋಚ್ ಹುದ್ದೆಗೆ (Head Coach) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಅರ್ಜಿಗಳನ್ನು ಆಹ್ವಾನಿಸಿದೆ.

    ಭಾರತೀಯ ಕ್ರಿಕೆಟ್ ಮಂಡಳಿಯು ಸೋಮವಾರ ರಾತ್ರಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತರು ಮೇ 27 ರಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯು ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಬಳಿಕ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತದೆ.

    ಅಧಿಕಾರಾವಧಿ: ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್‌ನ ಅವಧಿಯು ಮೂರೂವರೆ ವರ್ಷಗಳಾಗಿರುತ್ತದೆ. ಅಂದರೆ 2024ರ ಜುಲೈ 1 ರಿಂದ 2027 ರ ಡಿಸೆಂಬರ್ 31 ರವರೆಗೆ ಇರುತ್ತದೆ. ಭಾರತ ಪುರುಷರ ಪ್ರದರ್ಶನ ಮತ್ತು ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯ ಕೋಚ್ ಹೊಂದಿರುತ್ತಾರೆ. ಇದನ್ನೂ ಓದಿ: ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ ರೇಸ್‌ನಿಂದ ಗುಜರಾತ್‌ ಔಟ್‌

    ಅರ್ಹತೆ:
    * ಕನಿಷ್ಠ 30 ಟೆಸ್ಟ್ ಪಂದ್ಯಗಳನ್ನು ಅಥವಾ 50 ODI ಗಳನ್ನು ಆಡಿರಬೇಕು.
    * ಕನಿಷ್ಠ ಎರಡು ವರ್ಷಗಳ ಅವಧಿಯವರೆಗೆ ಟೆಸ್ಟ್ ಆಡುವ ರಾಷ್ಟ್ರದ (ಐಸಿಸಿ ಪೂರ್ಣ-ಸದಸ್ಯ) ಹಿಂದಿನ ಮುಖ್ಯ ಕೋಚ್ ಆಗಿರಬೇಕು.
    * ಅಸೋಸಿಯೇಟ್ ಸದಸ್ಯ/ಐಪಿಎಲ್ ತಂಡ ಅಥವಾ ತತ್ಸಮಾನ ಅಂತರಾಷ್ಟ್ರೀಯ ಲೀಗ್/ಪ್ರಥಮ ದರ್ಜೆ ತಂಡಗಳ ಮುಖ್ಯ ತರಬೇತುದಾರ/ರಾಷ್ಟ್ರೀಯ A ತಂಡಗಳು, ಕನಿಷ್ಠ ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಮುಖ್ಯ ಕೋಚ್ ಆಗಿರಬೇಕು.
    *‌ BCCI ಲೆವೆಲ್ 3 ಪ್ರಮಾಣೀಕರಣವನ್ನು ಹೊಂದಿರಬೇಕು.
    * 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

    ಸದ್ಯ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಇದೇ ಜೂನ್‌ಗೆ ಅಂತ್ಯವಾಗಲಿದೆ. 2024ರ T20 ವಿಶ್ವಕಪ್ ಮಗಿದ ಬಳಿಕ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಸೇವೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಅರ್ಜಿ ಆಹ್ವಾನಿಸಲಾಗಿದೆ.

  • ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ಶಕ್ತಿ ತುಂಬಲು ರಾಹುಲ್ ದ್ರಾವಿಡ್ ಸಲಹೆ!

    ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ಶಕ್ತಿ ತುಂಬಲು ರಾಹುಲ್ ದ್ರಾವಿಡ್ ಸಲಹೆ!

    ಮುಂಬೈ: ಟೀಂ ಇಂಡಿಯಾ ಅಂಡರ್ 19 ತಂಡವನ್ನು ಮತ್ತಷ್ಟು ಬಲಗೊಳಿಸಲು ಕೋಚ್ ರಾಹುಲ್ ದ್ರಾವಿಡ್ ಆಯ್ಕೆ ಸಮಿತಿಗೆ ಕೆಲ ಸಲಹೆಗಳನ್ನು ನೀಡಿದ್ದು, ಈ ಹಿಂದೆ ತಾವು ಮಾಡಿದ್ದ ವಾದಕ್ಕೆ ವಿರುದ್ಧವಾಗಿ ಸಲಹೆ ನೀಡಿದ್ದಾರೆ.

    ದ್ರಾವಿಡ್ ಕೋಚ್ ಆಗಿ ನೇಮಕವಾದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆಟಗಾರರು ಟೀಂ ಇಂಡಿಯಾ `ಎ’ ತಂಡದಲ್ಲಿ ಕಡ್ಡಾಯವಾಗಿ ಆಡಲೇಬೇಕು ಅಷ್ಟೇ ಅಲ್ಲದೇ ವಿಶ್ವ ಕಪ್ ಆಡಿದ ಆಟಗಾರರು ನಂತರ ಆಯೋಜನೆಗೊಳ್ಳಲಿರುವ ಟೂರ್ನಿಗಳಲ್ಲಿ ಅವರಿಗೆ ಅವಕಾಶ ನೀಡಬಾರದು. ಇದು ಅಂಡರ್ 19 ತಂಡಕ್ಕೆ ಆಯ್ಕೆ ಆಗುವ ಆಟಗಾರರ ವಯಸ್ಸಿನ ಕುರಿತು ಉಂಟಾಗುವ ಗೊಂದಲಗಳ ನಿವಾರಣೆಗೆ ಸಹಕಾರಿ ಆಗಲಿದೆ ಎಂದು ಸಲಹೆ ನೀಡಿದ್ದರು.

    ಆದರೆ ಈಗ ದ್ರಾವಿಡ್ ಸಲಹೆ ಮೇರೆಗೆ ಮುಂದಿನ ಶ್ರೀಲಂಕಾ ವಿರುದ್ಧದ 4 ದಿನ ಹಾಗೂ ಏಕದಿನ ಪಂದ್ಯ ಟೂರ್ನಿ ಬಿಸಿಸಿಐ ತಂಡವನ್ನು ಆಯ್ಕೆ ಮಾಡಿದೆ. ಈ ಬಾರಿಯ ಅಂಡರ್ 19 ವಿಶ್ವಕಪ್ ಟೂರ್ನಿಯ ಮೂಲಕ ತಮ್ಮ ಜರ್ನಿಯನ್ನು ಆರಂಭಿಸಿದ್ದ ವಿಕೆಟ್ ಕೀಪರ್ ಆರ್ಯನ್ ಜುಯಾಲ್ ರನ್ನು ಏಕದಿನ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದ್ದು, ನಾಲ್ಕು ದಿನಗಳ ಪಂದ್ಯದ ಟೂರ್ನಿಗೆ ಅನುಜ್ ರಾವತ್ ರನ್ನು ಆಯ್ಕೆ ಮಾಡಲಾಗಿದೆ. ಅಂದಹಾಗೇ ರಾವತ್ ಸಹ ವಿಕೆಟ್ ಕೀಪರ್ ಆಗಿದ್ದು, ಅಂಡರ್ 19 ವಿಶ್ವಕಪ್ ತಂಡದಲ್ಲಿ ಆಡಿದ್ದರು.

    ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಸದಸ್ಯರು ಜಂಟಿಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದರ ಪರಿಣಾಮವಾಗಿ ಕಿರಿಯ ಆಟಗಾರರು ಬಹುಬೇಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಆದರೆ ಅಂಡರ್ 19 ವಿಶ್ವಕಪ್ ಗೆ ಮರು ಆಯ್ಕೆ ಮಾಡಬಾರದು ಎಂಬ ಯಾವುದೇ ಕಠಿಣ ನಿಯಮಗಳು ಇಲ್ಲ. ಇನ್ನು ತಂಡದ ಕೆಲ ಆಟಗಾರರು ತಮ್ಮಷ್ಟು ತರಬೇತಿ ಪಡೆಯುವ ಅಗತ್ಯವಿದ್ದು ಅವರನ್ನು ಹಿರಿಯ ತಂಡಕ್ಕೆ ಆಯ್ಕೆ ಮಾಡುವ ಮುನ್ನ ಮತ್ತಷ್ಟು ಶಕ್ತಿ ತುಂಬಬೇಕಿದೆ ಎಂಬ ಅಭಿಪ್ರಾಯ ಸಮಿತಿ ವ್ಯಕ್ತಪಡಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ರಾಹುಲ್ ಈ ಹಿಂದೆ ಒಮ್ಮೆ ಆಟಗಾರರ ರಾಜ್ಯ ತಂಡಿಂದ ಬ್ರೇಕಪ್ ಆದರೆ ಆತ ಕಿರಿಯ ತಂಡವನ್ನು ಕಡಿಮೆ ಪ್ರಮಾಣದಲ್ಲಿ ಆಡಬೇಕಿದೆ ಎಂದು ತಿಳಿಸಿದ್ದರು. 2016 ರಲ್ಲಿ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದ ಲೆಗ್ ಸ್ಪಿನರ್ ಝೀಶನ್ ಅನ್ಸಾರಿ, ಮುಂಬೈ ಬ್ಯಾಟ್ಸ್ ಮನ್ ಅರ್ಮಾನ್ ಜಾಫರ್, ರಾಜಸ್ಥಾನದ ಅಲ್‍ರೌಂಡರ್ ಮಹಿಪಾಲ್, ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಮುಂದಿನ ಟೂರ್ನಿಯನ್ನು ಆಡಲು ಆರ್ಹರಾಗಿದ್ದಾರೆ. ಅಲ್ಲದೇ ಈ ಎಲ್ಲಾ ಆಟಗಾರರು ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ಕೆಲ ಅವಧಿಯನ್ನು ತೆಗೆದುಕೊಂಡರು.

    ಸದ್ಯ ಗಾಯದ ಸಮಸ್ಯೆಯಿಂದ ಅಫ್ಘಾನಿಸ್ತಾನದ ಐತಿಹಾಸಿಕ ಬೆಂಗಳೂರು ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ನಾಯಕರ ಕೊಹ್ಲಿ ಅವರ ಸ್ಥಾನಕ್ಕೆ ಕರಣ್ ನಾಯರ್ ರನ್ನು ಆಯ್ಕೆ ಮಾಡಲಾಗಿದೆ.

  • ನನ್ನ ಮೊದಲ ಕ್ರಷ್ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಅನುಷ್ಕಾ ಶೆಟ್ಟಿ

    ನನ್ನ ಮೊದಲ ಕ್ರಷ್ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಅನುಷ್ಕಾ ಶೆಟ್ಟಿ

    ಹೈದರಾಬಾದ್: ಮೊನ್ನೆಯಾಷ್ಟೇ 36ನೇ ಹುಟ್ಟುಹಬ್ಬ ಆಚರಿಸಿಕೊಂಡ ಅನುಷ್ಕಾ ಶೆಟ್ಟಿ ಈಗ ತಮ್ಮ ಮೊದಲ ಕ್ರಷ್ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

    ಹೌದು, ಇತ್ತೀಚೆಗೆ ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಮಯದಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುಷ್ಕಾ ಶೆಟ್ಟಿ, ರಾಹುಲ್ ದ್ರಾವಿಡ್ ಮೇಲೆ ಮೊದಲ ಕ್ರಷ್ ಆಗಿತ್ತು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅನುಷ್ಕಾ ಶೆಟ್ಟಿ

    ಮೂಲತಃ ಕರಾವಳಿ ಮೂಲದ ಅನುಷ್ಕಾ ಶೆಟ್ಟಿ ಅವರಿಗೆ ದ್ರಾವಿಡ್ ಅವರಲ್ಲಿರುವ ತಾಳ್ಮೆ, ಬ್ಯಾಟಿಂಗ್, ನಡವಳಿಕೆ, ನಾಯಕತ್ವ ಗುಣವನ್ನು ನೋಡಿ ಹುಚ್ಚು ಹಿಡಿಯುವಷ್ಟು ಅವರನ್ನು ಇಷ್ಟಪಟ್ಟಿದ್ದರಂತೆ.

    ರಾಜಮೌಳಿ ನಿರ್ದೇಶನದ ಬಾಹುಬಲಿಯಲ್ಲಿ ದೇವಸೇನಾ ಪಾತ್ರದಲ್ಲಿ ಮಿಂಚಿದ್ದ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಡುವೆ ಲವ್ ಇದೆ ಎನ್ನುವ ಸುದ್ದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಬಾಹುಬಲಿಯಲ್ಲಿ ಇವರಿಬ್ಬರ ಸ್ಕ್ರೀನ್ ಕೆಮೆಸ್ಟ್ರಿ ನೋಡಿ ಅಭಿಮಾನಿಗಳು ಸಹ ಇಬ್ಬರ ನಡುವೆ ಪ್ರೀತಿ ಇದೆ ಎಂದು ವದಂತಿ ಹಬ್ಬಿಸುತ್ತಿದ್ದರು. ಆದರೆ ಪ್ರಭಾಸ್ ಈ ಹಿಂದೆ ನಮ್ಮಿಬ್ಬರ ಮಧ್ಯೆ ಯಾವುದೇ ಲವ್ ಇಲ್ಲ ಎಂದು ಹೇಳಿಕೆ ನೀಡಿ ಗಾಸಿಪ್ ಗಳಿಗೆ ತೆರೆ ಎಳೆದಿದ್ದರು.

    ಸದ್ಯ ಅರುಂಧತಿ ಖ್ಯಾತಿಯ ಅನುಷ್ಕಾ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರ ‘ಭಾಗಮತಿ’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.

    ಇದನ್ನೂ ಓದಿ: ಹುಟ್ಟುಹಬ್ಬದ ದಿನದಂದು ಕಾರು ಡ್ರೈವರ್ ಗೆ ಕಾರು ಗಿಫ್ಟ್ ಕೊಟ್ಟ ಅನುಷ್ಕಾ – ಕಾರಿನ ಬೆಲೆ ಎಷ್ಟು ಗೊತ್ತಾ?

    ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?