Tag: ರಾಹುಲ್ ಗಾಂದಿ

  • ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯುತ್ತಾ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ?

    ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯುತ್ತಾ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ?

    ಬೆಂಗಳೂರು: ದೇಶಾದ್ಯಂತ ಲೋಕಸಭಾ ಚುನಾವಣೆಯ (Loksabha Elections 2024) ಕಾವು ರಂಗೇರಿದೆ. ಶುಕ್ರವಾರ ಮೊದಲ ಹಂತದ ಚುನಾವಣೆ ನಡೆಯಲಿದ್ದು, 14 ಕ್ಷೇತ್ರದಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಈ ನಡುವೆ ಕಾಂಗ್ರೆಸ್ ದೇಶದ ಜನರ ಸಮಸ್ಯೆಗಳನ್ನು ಆಲಿಸಲೆಂದು ವಿಭಿನ್ನವಾಗಿ ಯಾತ್ರೆಗಳನ್ನು ಕೈಗೊಂಡಿತ್ತು. ಈ ಯಾತ್ರೆಯಿಂದ ಕರ್ನಾಟಕದಲ್ಲಿ ಯಶಸ್ಸು ಸಿಕ್ಕಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಈ ಯಾತ್ರೆಗಳು ಕೈ ಹಿಡಿಯುತ್ತಾ ಎಂಬುದರ ಬಗ್ಗೆ ನೋಡೋಣ..

    ಹೌದು. ಕಳೆದ 10 ವರ್ಷಗಳಿಂದ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಹವಾ ಇದೆ. ಹೀಗಾಗಿ ಹೇಗಾದರೂ ಮಾಡಿ ಮೋದಿಯನ್ನು ಹವಾವನ್ನು ಕಡಿಮೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ (Congress) ಪಣತೊಟ್ಟಿದೆ. ಅದಕ್ಕಾಗಿ ಸಾಕಷ್ಟು ಬಾರಿ ಮೋದಿ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತಿದೆ. ಆದರೆ ಕಾಂಗ್ರೆಸ್‍ನ ಪ್ರಯತ್ನಗಳು ಕೈಗೂಡಲಿಲ್ಲ. ಬಿಜೆಪಿ ವೈಫಲ್ಯಗಳ ಬಗ್ಗೆ ಹೇಳಿಕೊಂಡರೂ ಯಾವುದೇ ಫಲಪ್ರದವಾಗಲಿಲ್ಲ. ದೇಶದಲ್ಲಿ ಮೋದಿ ಅಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಮೊರೆ ಹೋಯಿತು.

    ಅಂತೆಯೇ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ಪಾದಯಾತ್ರೆ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಮಾಡಿತ್ತು. ಇದು ಕಾಂಗ್ರೆಸ್ ಪಕ್ಷದ ಇಮೇಜ್ ವೃದ್ಧಿಗೆ ಸಹಕಾರಿಯಾಗಿದೆ. ಆದರೆ ಇದು ಮತಗಳಾಗಿ ಪರಿವರ್ತನೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

    ಪಾದಯಾತ್ರೆಯಿಂದಾಗಿ ಎಲ್ಲೋ ಮೂಲೆಯಲ್ಲಿ ಬೆಚ್ಚಗೆ ಮಲಗಿದ್ದ ಕಾರ್ಯಕರ್ತರು ಮೈಕೊಡವಿ ನಿಂತಿದ್ದು ಸಹಜ. ಯಾಕೆಂದರೆ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ (Rahul Gandhi) ಜೊತೆ ಪಕ್ಷದ ಇತರ ನಾಯಕರು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜೊತೆಗೆ ಯಾತ್ರೆಯ ವೇಳೆ ಅಲ್ಲಲ್ಲಿ ಸಂವಾದ, ಚರ್ಚೆಗಳ ಮೂಲಕ ಜನಸಾಮಾನ್ಯರ ಕಷ್ಟಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಕಾಂಗ್ರೆಸ್‍ನಿಂದ ಇದೊಂದು ಹೊಸ ಪ್ರಯತ್ನವೇ ಸರಿ. ಇದನ್ನೂ ಓದಿ: ಲೋಸಮರದ ಹೊತ್ತಲ್ಲೇ ‘ಕೈ’ಗೆ ಶಾಕ್- ಬಿಜೆಪಿ ಸೇರಿದ ಡಾ.ಶುಶ್ರುತ್ ಗೌಡ

    ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatre) ಕರ್ನಾಟಕ್ಕೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿದೆ ಎಂದು ತಪ್ಪಾಗಲಾರದು. ಕೇರಳದಿಂದ ಚಾಮರಾಜನಗರ, ಮೈಸೂರು ಮಂಡ್ಯ, ತುಮಕೂರು ಚಿತ್ರದುರ್ಗ ಹಾಗೂ ಬಳ್ಳಾರಿ ಮೂಲಕ ಈ ಪಾದಯಾತ್ರೆ ಹಾದುಹೋಗಿದೆ. ಈ ಯಾತ್ರೆ ಎಲ್ಲಾ ಜಿಲ್ಲೆಗಳಿಗೆ ಹೋಗದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಟ್ಟುಗೂಡಿಸುವ ಮೂಲಕ ಹುರಿದುಂಬಿಸುವ ಕೆಲಸ ಮಾಡಿತ್ತು. ಅಲ್ಲದೇ ಮಂಡ್ಯದ ಪಾಂಡವಪುರದಲ್ಲಿ ಸ್ವತಃ ಸೋನಿಯಾ ಗಾಂಧಿಯವರೇ ಬಂದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಜನರನ್ನು ಮತ್ತಷ್ಟು ಹುರಿದುಂಬಿಸಿದರು. ಒಟ್ಟಿನಲ್ಲಿ ಯಾತ್ರೆಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡ ಪರಿಣಾಮ 2023ರ ವಿಧಾನಸಭಾ ಚುನಾವಣೆಯಲ್ಲಿ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು.

    ದ್ವೇಷದ ಅಂಗಡಿಯಲ್ಲಿ ಪ್ರೀತಿ ಹಂಚುವ ವ್ಯಾಖ್ಯಾನ, ಇದು ಸರ್ವಜನಾಂಗದ ಶಾಂತಿಯ ತೋಟ ಎಂದು ಬಿಜೆಪಿಯ ವಿರುದ್ಧ ಭ್ರಷ್ಟಾಚಾರ, ಕೋಮುದ್ರೋಹಿ ವಿಚಾರಗಳನ್ನು ಬಳಸಿಕೊಂಡರು. ಒಟ್ಟಿನಲ್ಲಿ 2023ರಲ್ಲಿ ಪಕ್ಷದ ಸಂಘಟನೆಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದ್ದು ನಿಜ. ಕರ್ನಾಟಕ, ತೆಲಂಗಾಣ ವಿಧಾನಸಭಾ ಚುನಾವಣೆಗೆ ಕೂಡ ಸ್ವಲ್ಪ ಮಟ್ಟಿಗೆ ಲಾಭವಾಯಿತು.

    ಉತ್ತರ ಭಾರರತದಲ್ಲಿಯೂ ಕಾರ್ಯಕರ್ತರನ್ನು ಮರುಸಂಘಟಿಸಲು ಈ ಯಾತ್ರೆ ಸಹಕಾರಿಯಾಗಿದೆ ಅಂತಾನೇ ಹೇಳಬಹುದು. ಆದರೆ ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಕೈಹಿಡಿದಿಲ್ಲ. ಇಡೀ ದೇಶದ ಮತದಾರರ ಮೇಲೆ ಪರಿಣಾಮ ಬೀರಿ ಅವುಗಳನ್ನು ಮತಗಳನ್ನಾಗಿ ಪರಿವರ್ತಿಸುವವಲ್ಲಿ ಭಾರತ್ ಜೋಡ್ ಯಾತ್ರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಮಲಗಿದ್ದ ಬಹುತೇಕ ಕಾರ್ಯಕರ್ತರು ಎದ್ದು ಬೀದಿಗೆ ಬರುವಂತೆ ಮಾಡಿದ್ದು ಮಾತ್ರ ಇತಿಹಾಸ. ಇದು ಕಾಂಗ್ರೆಸ್‍ನ ಹೊಸ ಮೈಲಿಗಲ್ಲು, ಈ ಮೂಲಕ ಪಕ್ಷ ಇತಿಹಾಸ ನಿರ್ಮಿಸಿರುವುದು ಸುಳ್ಳಲ್ಲ. ಒಟ್ಟಿನಲ್ಲಿ ರಾಹುಲ್ ಗಾಂಧಿ ವರ್ಚಸ್ಸನ್ನು ಈ ಯಾತ್ರೆ ಹೆಚ್ಚಿಸಿದೆ ಎಂಬ ವಿಶ್ಲೇಷಣೆ ಬಂದಿದೆ.

    ಎರಡೇ ಪಾದಯಾತ್ರೆ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ (Bharat Jodo Nyay Yatre) ಈಶಾನ್ಯ ರಾಜ್ಯಗಳಲ್ಲಿ ಪ್ರತಿರೋಧಗಳು ವ್ಯಕ್ತವಾಯಿತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಹಕಾರ ದೊರೆಯದೆ ಪಕ್ಷಕ್ಕೆ ಸ್ವಲ್ಪ ಇರಿಸುಮುರುಸಾಯಿತು. ಆದರೆ ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ನಿರಿಕ್ಷಿತ ಬೆಂಬಲ ದೊರೆಯದಿದ್ದರೂ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬೆಂಬಲವಾಗಿ ನಿಂತಿದ್ದು, ಸ್ವಲ್ಪ ನಿರಾಳವಾಗುವಂತೆ ಮಾಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಸಿಕ್ಕಿದಂತಾಗಿದೆ.

    ಬಿಹಾರದಲ್ಲಿ ಆರ್ ಜೆಡಿ, ಯುಪಿಯಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ (Akhilesh Yadav) ಬೆಂಬಲ ಸ್ವಲ್ಪ ಮಟ್ಟಿಗೆ ಸಹಕಾರಿಯಾಯಿತು. ಆದರೆ ಗುಜರಾತ್ ಸೇರಿದಂತೆ ಹಲವೆಡೆ ನಿರೀಕ್ಷಿತ ಬೆಂಬಲ ಪಡೆಯುವಲ್ಲಿ ವಿಫಲವಾಯಿತು. ಹಲವಾರು ವಿಚಾರಗಳು ನ್ಯಾಯಯಾತ್ರೆಯ ಮೂಲಕ ಬಿಂಬಿಸಲು ಪ್ರಯತ್ನಿಸಿದರೂ ನಿರೀಕ್ಷಿತ ಜನಬೆಂಬಲ ಪಡೆಯುವಲ್ಲಿ ಕಾಂಗ್ರೆಸ್‍ಗೆ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಲಿಲ್ಲ.

    ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಪ್ರಣಾಳಿಕೆ ರಚಿಸಲು ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯ ಅನುಭವಗಳು ನೆರವಾಗಿವೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಪಾದಯಾತ್ರೆಯ ವೇಳೆ ಜನರ ಕೊಟ್ಟ ಸಲಹೆಗಳನ್ನೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಕೈ ಹಿಡಿದಿರುವ ಕಾಂಗ್ರೆಸ್ ಯಾತ್ರೆ ಇಡೀ ದೇಶದಲ್ಲಿ ಕೈ ಹಿಡಿಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

  • ರಾಗಾಗೆ ಮತ್ತೆ ಸಂಕಷ್ಟ – ಜ.6ರಂದು ವಿಚಾರಣೆಗೆ ಹಾಜರಾಗುವಂತೆ UP ಕೋರ್ಟ್‌ನಿಂದ ಸಮನ್ಸ್‌

    ರಾಗಾಗೆ ಮತ್ತೆ ಸಂಕಷ್ಟ – ಜ.6ರಂದು ವಿಚಾರಣೆಗೆ ಹಾಜರಾಗುವಂತೆ UP ಕೋರ್ಟ್‌ನಿಂದ ಸಮನ್ಸ್‌

    – ಅಪರಾಧ ಸಾಬೀತಾದರೆ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದು – ವಕೀಲ ಸಂತೋಷ್ ಪಾಂಡೆ

    ಲಕ್ನೋ: 2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ʻಮೋದಿ ಉಪನಾಮʼ ಬಳಸಿ ಟೀಕಿಸಿ ಸಂಕಷ್ಟಕ್ಕೆ ಗುರಿಯಾಗಿದ್ದ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2018ರಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸುಲ್ತಾನ್‌ಪುರದ MP/MLA ಕೋರ್ಟ್‌ (MP-MLA Court) ಸಮನ್ಸ್‌ (Court Summoned) ಜಾರಿಗೊಳಿಸಿದೆ.

    ಜನವರಿ 6ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ ತಿಳಿಸಿರುವುದಾಗಿ ವಕೀಲರಾದ ವಕೀಲ ಸಂತೋಷ್ ಪಾಂಡೆ ಖಚಿತಪಡಿಸಿದ್ದಾರೆ. 2018ರ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ ಆರಂಭದಲ್ಲೇ ಸಮನ್ಸ್‌ ನೀಡಿತ್ತು. ಆದ್ರೆ ಅವರು ಹಾಜರಾಗದ ಕಾರಣ 2ನೇ ಬಾರಿಗೆ ಸಮನ್ಸ್‌ ಜಾರಿಗೊಳಿಸಿರುವುದಾಗಿ ವಕೀಲರು ಹೇಳಿದ್ದಾರೆ.

    ರಾಗಾ ಹೇಳಿದ್ದೇನು?
    2018ರ ಪತ್ರಿಕಾಗೋಷ್ಠಿಯೊಂದರಲ್ಲಿ ರಾಹುಲ್‌ ಗಾಂಧಿ ಅವರು ಮಾತನಾಡುತ್ತಿದಾಗ, ಬಿಜೆಪಿ ಅಧ್ಯಕ್ಷ ಕೊಲೆ ಆರೋಪಿ ಎಂಬುದನ್ನು ದೇಶದ ಜನ ಮರೆತುಬಿಡುತ್ತಾರೆ, ಆದ್ರೆ ಅದೇ ಸತ್ಯ. ಸದಾ ಪ್ರಾಮಾಣಿಕತೆ ಮತ್ತು ಸಭ್ಯತೆಯ ಬಗ್ಗೆ ಮಾತನಾಡುವ ಪಕ್ಷವು ಕೊಲೆ ಆರೋಪ ಹೊತ್ತ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡುತ್ತದೆ ಎಂದು ಟೀಕಿಸಿದ್ದರು. ಇದನ್ನೂ ಓದಿ: ಪೆಂಟಗನ್‌ ಮೀರಿಸುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ʻಸೂರತ್ ಡೈಮಂಡ್ ಬೋರ್ಸ್ʼ – ಭಾನುವಾರ ಪ್ರಧಾನಿ ಮೋದಿಯಿಂದ ಉದ್ಘಾಟನೆ

    2005 ರಲ್ಲಿ ಸೊಹ್ರಾಬುದ್ದೀನ್ ಶೇಖ್ ಎಂಬ ಕ್ರಿಮಿನಲ್ ಹತ್ಯೆಯಲ್ಲಿ ಅಮಿತ್‌ ಶಾ (Amit Shah) ಅವರ ಪಾತ್ರದ ಆರೋಪದ ಬಗ್ಗೆ ಮಾತನಾಡಿದ್ದ ರಾಗಾ, ಅಮಿತ್‌ ಶಾ ಅವರ ಮೇಲೆ ಕೊಲೆ ಆರೋಪ ಇದೇ ಅಲ್ಲವೇ? ಹಾಗಾಗಿ ಅಮಿತ್ ಶಾ ಅವರಿಗೆ ಹೆಚ್ಚಿನ ವಿಶ್ವಾಸಾರ್ಹತೆ ಇದೆ ಎಂದು ನಾನು ಭಾವಿಸುವುದಿಲ್ಲ. ಈತ ಯಾವ ರೀತಿ ರಾಜಕೀಯ ಮಾಡ್ತಾನೋ ನೋಡೋಣ, ಕೊಲೆ ಆರೋಪಿ ಅನ್ನೋದನ್ನ ಮರೆಯಬೇಡಿ ಎಂದು ವಾಗ್ದಾಳಿ ನಡೆಸಿದ್ದರು.

    ಈ ಹೇಳಿಕೆ ಬಳಿಕ ಅಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಿಜಯ್‌ ಮಿಶ್ರಾ ಅವರು ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಅಮಿತ್‌ ಶಾ ಅವರನ್ನು ಕೊಲೆಗಾರ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಈ ಆರೋಪಗಳನ್ನು ಕೇಳಿ ನನಗೆ ನೋವಾಯಿತು ಎಂದು ಹೇಳಿ ವಕೀಲರ ಮೂಲಕ ಕೇಸ್‌ ದಾಖಲಿಸಿದ್ದರು. ಇದು 5 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಸಂಸತ್‌ನಲ್ಲಿನ ಭದ್ರತಾ ಲೋಪಕ್ಕೂ, ಸಂಸದರ ಅಮಾನತಿಗೂ ಸಂಬಂಧವಿಲ್ಲ: ಲೋಕಸಭಾ ಸ್ಫೀಕರ್‌ ಸ್ಪಷ್ಟನೆ

    2 ವರ್ಷ ಜೈಲು ಶಿಕ್ಷೆ ವಿಧಿಸಬಹುದು:
    ಪ್ರಕರಣದ ಕುರಿತು ಕಾನೂನು ಪರಿಣಾಮಗಳನ್ನು ವಿವರಿಸಿದ ವಕೀಲ ಸಂತೋಷ್ ಪಾಂಡೆ ಅವರು, ರಾಹುಲ್‌ ಗಾಂಧಿ ವಿರುದ್ಧ ಸಾಕ್ಷಿಗಳು ಕಂಡುಬಂದರೆ, ಅಪರಾಧ ಸಾಬೀತಾದರೆ ಗರಿಷ್ಠ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು ಎಂದು ಎಚ್ಚರಿಸಿದ್ದಾರೆ.

  • ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬುಲೆಟ್ ಸವಾರಿ – ವೀಡಿಯೋ ವೈರಲ್

    ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬುಲೆಟ್ ಸವಾರಿ – ವೀಡಿಯೋ ವೈರಲ್

    ಭೋಪಾಲ್: ಮಧ್ಯಪ್ರದೇಶದ ಮೊವ್‍ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Congress MP Rahul Gandhi) ಅವರು ಮೋಟಾರ್ ಬೈಕ್ (Motorbike) (ರಾಯಲ್ ಎನ್‍ಫೀಲ್ಡ್ ಬುಲೆಟ್) (Royal Enfield Bullet) ಚಲಾಯಿಸುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಆಕರ್ಷಿಸಿದ್ದಾರೆ.

    ಈ ವೀಡಿಯೋವನ್ನು ಕಾಂಗ್ರೆಸ್ (Congress) ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಾಹುಲ್ ಗಾಂಧಿ ಬೈಕ್ ಮೇಲೆ ಬರುತ್ತಿದ್ದರೆ, ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರು ಅವರನ್ನು ಹುರಿದುಂಬಿಸುತ್ತಿರುವುದನ್ನು ಹಾಗೂ ಹೋಗಲು ದಾರಿ ಮಾಡಿಕೊಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬಿಜೆಪಿಯ ಕಲ್ಲು ತೂರಾಟದಿಂದ ಬಾಲಕನಿಗೆ ಗಾಯ – ಎಎಪಿ ಗುಜರಾತ್ ಮುಖ್ಯಸ್ಥನಿಂದ ಆರೋಪ

    ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶನಿವಾರ ಮಧ್ಯಪ್ರದೇಶದ ಮೊರ್ಟಕ್ಕ ಗ್ರಾಮದಿಂದ ಪುನಾರಂಭವಾಯಿತು. ಗುರುವಾರ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪತಿ ರಾಬರ್ಟ್ ವಾದ್ರಾ ಅವರು ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ : ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್‌ ಸಿಂಗ್

    ಮಧ್ಯಪ್ರದೇಶದ ಭಾರತ್ ಜೋಡೋ ಪಾದಯಾತ್ರೆ ನಡುವೆ ಶನಿವಾರ ಚಹಾ ವಿರಾಮಕ್ಕೆಂದು ರಸ್ತೆಬದಿಯ ರೆಸ್ಟೋರೆಂಟ್‍ಗೆ ಚಲಿಸುತ್ತಿದ್ದಾಗ ದಿಗ್ವಿಜಯ್ ಸಿಂಗ್ ಅವರು ಕೆಳಗೆ ಬಿದ್ದು, ಗಾಯಗೊಂಡಿದ್ದಾರೆ. ಈ ವೇಳೆ ತಕ್ಷಣವೇ ಕಾಂಗ್ರೆಸ್ ಕಾರ್ಯಕರ್ತರು ದಿಗ್ವಿಜಯ್ ಸಿಂಗ್ ಅವರ ಕೈ ಹಿಡಿದು ಮೇಲಕ್ಕೆತ್ತಿ ಸಹಾಯ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಎರಡು ದಿನ ಮಡಿಕೇರಿಯಲ್ಲಿ ಸೋನಿಯಾ, ರಾಹುಲ್ ವಾಸ್ತವ್ಯ

    ಎರಡು ದಿನ ಮಡಿಕೇರಿಯಲ್ಲಿ ಸೋನಿಯಾ, ರಾಹುಲ್ ವಾಸ್ತವ್ಯ

    ಮೈಸೂರು : ಭಾರತ್ ಜೋಡೋ ಪಾದಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಳ್ಳಲು ರಾಹುಲ್ ಗಾಂಧಿ (Rahul Gandhi) ಜೊತೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಮಡಿಕೇರಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಲಿದ್ದಾರೆ.

    ಇಂದು ಮೈಸೂರಿಗೆ ಆಗಮಿಸುತ್ತಿರುವ ಸೋನಿಯಾ ಗಾಂಧಿ ಅವರು ವಸ್ತು ಪ್ರದರ್ಶನಾ ಮೈದಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಮೈಸೂರು ನಗರದಿಂದ Ts ಛತ್ರದವರೆಗೂ ಸಾಗಲಿರುವ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. ನಂತರ ಎಸಿಸಿಸಿ ಅಧ್ಯಕ್ಷ ಚುನಾವಣೆ ಕುರಿತು ಮಗನ ಜೊತೆ ಚರ್ಚೆ ನಡೆಸಲು ಮಡಿಕೇರಿಗೆ ಸೋಮವಾರ ಮಧ್ಯಾಹ್ನ 12.30ಕ್ಕೆ ಬರಲಿದ್ದಾರೆ. ಇದನ್ನೂ ಓದಿ: 29 ವರ್ಷಗಳ ನಂತ್ರ ವೈಷಮ್ಯ ಶಮನ – ವೀರಶೈವ, ದಲಿತರೊಂದಿಗೆ ರಾಹುಲ್ ಸಹಭೋಜನ

    ಸೋನಿಯಾಗಾಂಧಿ ಅವರು ಸೋಮವಾರದ ಯಾತ್ರೆ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಮಡಿಕೇರಿಗೆ (Madikeri) ಪ್ರಯಾಣಿಸಲಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Vidhan Sabha Election) ಬೆರಳಣಿಕೆ ತಿಂಗಳು ಉಳಿದಿದೆ. ಈ ಸಮಯದಲ್ಲಿ ಸೋನಿಯಾ ಗಾಂಧಿ ಅವರ ಆಗಮನದಿಂದ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಇದನ್ನೂ ಓದಿ: ಟಿಪ್ಪು ಹಿಂದೂಗಳ ರಕ್ತ ಹರಿಸಿದ ನೆಲದಿಂದಲೇ ರಾಹುಲ್ ಯಾತ್ರೆ – ಕಾಂಗ್ರೆಸ್‌ಗೆ ರಾಹುಕಾಲ ಎಂದ BJP

    ಬಿಜೆಪಿ ನೀತಿಗಳು, ಆಡಳಿತ ವೈಖರಿ, ಸಂಘರ್ಷದ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಸೆ.30 ರಂದು ಗುಂಡ್ಲುಪೇಟೆ ಮೂಲಕ ಆರಂಭವಾಗಿದ್ದು, ಕೇರಳದ ವೈನಾಡು (ರಾಹುಲ್ ಗಾಂಧಿ ಪ್ರತಿನಿಧಿಸುವ ಸಂಸತ್ ಕ್ಷೇತ್ರ) ಮೂಲಕ ಕರ್ನಾಟಕದ ಗಡಿ ಭಾಗ ಗುಂಡ್ಲುಪೇಟೆ ತಲುಪಿದ ಭಾರತ್ ಜೋಡೋ ಯಾತ್ರೆ, ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಮೀ ಕೈಪಡೆ ಪಾದಯಾತ್ರೆ ನಡೆಸಲಿದೆ.

    Live Tv
    [brid partner=56869869 player=32851 video=960834 autoplay=true]

  • ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್

    ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್

    ತುಮಕೂರು: ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಭಿಮಾನಿಯೋರ್ವ ದೂರದಿಂದಲೇ ಗುರಿಯಿಟ್ಟು ಕೊರಳಿಗೆ ಹೂವಿನ ಹಾರ ಹಾಕಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಬುಧವಾರ ತುಮಕೂರಿನ ಬಿಎಚ್ ರಸ್ತೆಯ ರೋಡ್ ಶೋ ವೇಳೆ ಈ ಘಟನೆ ನಡೆದಿದೆ. ಅಭಿಮಾನಿ ಹಾರ ಎಸೆದ ದೃಶ್ಯವನ್ನು ಆತನ ಹಿಂದುಗಡೆಯಿದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಹುಲ್ ಗಾಂಧಿಯವರು ವಾಹನದ ಮೇಲೇರಿ ಜನಸಾಮಾನ್ಯರತ್ತ ಕೈ ಬೀಸಿ ಬರುತ್ತಿದ್ದಂತೆಯೇ ರಸ್ತೆಬದಿ ನಿಂತಿದ್ದ ಅಭಿಮಾನಿ ರಾಹಲ್ ನತ್ತ ಹೂವಿನ ಹಾರ ಎಸೆದಿದ್ದಾರೆ. ಈ ಹಾರ ನೇರವಾಗಿ ರಾಹುಲ್ ಅವರ ಕೊರಳಿಗೆ ಬಿದ್ದಿದೆ. ಕೂಡಲೇ ಅವರು ಕೊರಳಿಂದ ಹಾರ ತೆಗೆದು ತನ್ನ ಭದ್ರತಾ ಸಿಬ್ಬಂದಿ ಕೈಗೆ ನೀಡಿದ್ದಾರೆ.

    ಭದ್ರತೆಯ ದೃಷ್ಟಿಯಿಂದ ಎಸ್‍ಪಿಇಜಿಯವರು ರಾಹುಲ್ ಗಾಂಧಿಯವರಿಗೆ ಹಾರ ಹಾಕಲು ಗಣ್ಯರಿಗೂ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿ ಕಾರ್ಯಕರ್ತನೋರ್ವ ದೂರದಿಂದಲೇ ರಾಹುಲ್ ಕೊರಳಿಗೆ ಹಾರ ಎಸೆಯುವ ಮೂಲಕ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

  • ಕಾಂಗ್ರೆಸ್ಸಿನಿಂದ #DeleteNaMoApp ಅಭಿಯಾನ- ದಿಢೀರ್ ಏರಿಕೆ ಆಯ್ತು ಮೋದಿ ಆ್ಯಪ್ ಡೌನ್‍ಲೋಡ್ ಸಂಖ್ಯೆ!

    ಕಾಂಗ್ರೆಸ್ಸಿನಿಂದ #DeleteNaMoApp ಅಭಿಯಾನ- ದಿಢೀರ್ ಏರಿಕೆ ಆಯ್ತು ಮೋದಿ ಆ್ಯಪ್ ಡೌನ್‍ಲೋಡ್ ಸಂಖ್ಯೆ!

    ನವದೆಹಲಿ: ನರೇಂದ್ರ ಮೋದಿ ಅವರ `ನಮೋ’ ಆ್ಯಪ್ ವಿರುದ್ಧ ಕಾಂಗ್ರೆಸ್ ಮಾಹಿತಿ ಸೋರಿಕೆ ಆರೋಪದ ಮಾಡಿದ ಬಳಿಕ ಆ್ಯಪ್ ಡೌನ್‍ಲೋಡ್ ಮಾಡುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ.

    ರಾಹುಲ್ ಗಾಂಧಿ ಭಾನುವಾರ ನಮೋ ಆ್ಯಪ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, ಈ ಮಾಹಿತಿಯನ್ನು ಅಮೆರಿಕ ಕಂಪೆನಿಗಳಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ, ಆ್ಯಪ್ ಡೌನ್‍ಲೋಡ್ ಮಾಡುವವರ ಸಂಖ್ಯೆ ಏರಿಕೆಯಾಗಿರುವ ಗ್ರಾಫ್ ಬಿಡುಗಡೆ ಮಾಡಿದೆ.

    ಮಾಹಿತಿ ಸೋರಿಕೆ ಕುರಿತು ಕೇಂಬ್ರಿಡ್ಜ್ ಅನಾಲಿಟಿಕಾ ವಿಶ್ಲೇಷಣಾ ವರದಿಯನ್ನು ಆಧಾರಿಸಿ ರಾಹುಲ್ ಈ ಟ್ವೀಟ್ ಮಾಡಿದ್ರು. ಅಲ್ಲದೇ ನಮೋ ಆ್ಯಪ್ ಬಳಕೆ ಮಾಡುತ್ತಿರುವವರ ಧ್ವನಿ, ವಿಡಿಯೋ, ಫೋಟೋ ಹಾಗೂ ಅವರ ಲೋಕೆಷನ್ ಸಮೇತ ಮಾಹಿತಿ ಪಡೆಯಲಾಗುತ್ತಿದೆ ಎಂದು ಆರೋಪಿದ್ದರು. ಅಲ್ಲದೇ ಇಂದು ತಮ್ಮ ಆರೋಪಗಳನ್ನು ಮುಂದುವರೆಸಿರುವ ರಾಹುಲ್ ಮೋದಿ `ಬಿಗ್‍ಬಾಸ್’ ರೀತಿ ವರ್ತನೆ ಮಾಡುತ್ತಿದ್ದಾರೆ. ಈಗ 13 ಲಕ್ಷ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಈ ಆ್ಯಪ್ ಬಳಕೆ ಮಾಡುವಂತೆ ಒತ್ತಡ ಹಾಕಿರುವುದಾಗಿ ತಿಳಿಸಿದ್ದರು.

    ರಾಹುಲ್ ಅವರ ಆರೋಪಿಗಳಿಗೆ ತಿರುಗೇಟು ನೀಡಿರುವ ಬಿಜೆಪಿ ಪಕ್ಷ ನಾಯಕ ಅಮಿತ್ ಮಾಳವಿಯಾ ಕಾಂಗ್ರೆಸ್ ಪಕ್ಷ ಅಧಿಕೃತ ಆಪ್ ಯಾವ ಯಾವ ದೇಶಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ನನ್ನ ಹೆಸರು ರಾಹುಲ್ ಗಾಂಧಿ, ಭಾರತದ ಅತ್ಯಂತ ಹಳೆಯ ಪಕ್ಷ ಅಧ್ಯಕ್ಷ. ನೀವು ನಮ್ಮ ಅಧಿಕೃತ ಆ್ಯಪಿಗೆ ಪ್ರವೇಶ ಪಡೆದರೆ, ನಿಮ್ಮ ಎಲ್ಲಾ ಮಾಹಿತಿಯನ್ನು ಸಿಂಗಾಪುರದ ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದಾಗಿ ಬರೆದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಆರೋಪಕ್ಕೆ ಟಾಂಗ್ ನೀಡಿದ್ದಾರೆ.

    ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಕೂಡ ನಮೋ ಆ್ಯಪ್ ಬಳಕೆದಾರರ ಮಾಹಿತಿ ಸೋರಿಕೆ ಆಗಿದೆ ಎಂದು ಡೀಲಿಟ್ ನಮೋ ಆ್ಯಪ್ ಎಂಬ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು. ಅಲ್ಲದೇ ಬಿಜೆಪಿ ನಾಯಕರ ಆರೋಪಗಳನ್ನು ನಿರಾಕರಿಸಿರುವ ಅವರು, ನಾವು ಐಎನ್‍ಸಿ ಆ್ಯಪ್ ಮೂಲಕ ಯಾವುದೇ ಮಾಹಿತಿ ಪಡೆಯುತ್ತಿಲ್ಲ. ವೆಬ್‍ಸೈಟ್ ಮೂಲಕ ಕಾರ್ಯಕರ್ತರ ಮೆಂಬರ್ ಶಿಪ್ ಪಡೆಯುತ್ತಿದ್ದೇವೆ ಎಂಬ ಸ್ಪಷ್ಟನೆ ನೀಡಿದ್ದಾರೆ.

  • ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಬಾಗಲಕೋಟೆ: ಬಿಜೆಪಿಯಿಂದ ಇವಿಎಂ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಮತ್ತು ಅತಿಯಾದ ಸುಳ್ಳುಗಳೇ ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದ್ದಾರೆ.

    ಚುನಾವಣಾ ಫಲಿತಾಂಶದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ಜನರ ತೀರ್ಪಿಗೆ ತಲೆ ಬಾಗುತ್ತೇನೆ. ಹಿಮಾಚಲಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿಂದ ಸೋಲಾಗಿರೋದು ನಿಜ. ಗುಜರಾತ್ ದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳಿದ್ದು, ಬಿಜೆಪಿಯಿಂದ ಇವಿಎಮ್ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಹಾಗೂ ಬಿಜೆಪಿಯ ಅತಿಯಾದ ಸುಳ್ಳುಗಳೇ ಕಾಂಗ್ರೆಸ್ ಹಿನ್ನಡೆಗೆ ಕಾರಣ ಅಂತ ಅವರು ಗಂಭೀರ ಆರೋಪ ಮಾಡಿದ್ರು.

    ಆದ್ರೆ ಈ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2018ರ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಪಕ್ಷ. ಇವುಗಳ ಮಧ್ಯೆ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿದೆ. ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷಕ್ಕೆ ಹೋಗಲ್ಲ. ಒಂದು ವೇಳೆ ಹೋದ್ರೆ ರಾತ್ರಿ ನೀರಿಲ್ಲದ ಬಾವಿ ಕಂಡು ಹಗಲು ಬಿದ್ದಂತೆ ಅಂತ ಅವರು ಹೇಳಿದ್ರು.