Tag: ರಾಹುಲ್

  • ಧನ್ಯಾ ಹೊಸ ಸಿನಿಮಾಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್

    ಧನ್ಯಾ ಹೊಸ ಸಿನಿಮಾಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್

    ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟ ಡಾ.ರಾಜ್ ಕುಟುಂಬದ ಕುಡಿ ಧನ್ಯಾ ರಾಮ್‌ಕುಮಾರ್ (Dhanya Ramkuma) ಇದೀಗ ಡಿಫರೆಂಟ್ ಪಾತ್ರಗಳನ್ನ ಒಪ್ಪಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ. ಧನ್ಯಾ ಹೊಸ ಸಿನಿಮಾಗೆ ನಟ ಶ್ರೀಮುರಳಿ (Srimurali) ಸಾಥ್ ನೀಡಿದ್ದಾರೆ.

    ಕಾಲಾಪತ್ಥರ್, ಹೈಡ್ & ಸೀಕ್, ದಿ ಜಡ್ಜ್‌ಮೆಂಟ್ ಸಿನಿಮಾಗಳು ಧನ್ಯಾ ಲಿಸ್ಟ್ನಲ್ಲಿದೆ. ಈ ಬೆನ್ನಲ್ಲೇ ಕಾಶಿ ನಿರ್ದೇಶನದ ‘ಎಲ್ಲಾ ನಿನಗಾಗಿ’ ಚಿತ್ರದಲ್ಲಿ ಹೊಸ ಪ್ರತಿಭೆ ರಾಹುಲ್‌ಗೆ (Rahul) ಧನ್ಯಾ ಜೋಡಿಯಾಗಿ ನಟಿಸುತ್ತಿದ್ದಾರೆ. ಡಿಫರೆಂಟ್ ಪಾತ್ರದಲ್ಲಿ ಧನ್ಯಾ ನಟಿಸಲಿದ್ದಾರೆ.

    ನೈಜ ಕಥೆ ಆಧರಿಸಿದ ಸಿನಿಮಾವಾಗಿದೆ. ರಿಯಲ್ ಕಥೆಯನ್ನ ಸಿನಿಮಾ ಮಾಡಲು ನಿರ್ದೇಶಕ ಕಾಶಿ ರೆಡಿಯಾಗಿದ್ದಾರೆ. ಶ್ರೀಮುರಳಿ ಅವರ ಆಪ್ತ ರಾಹುಲ್ ಈ ಚಿತ್ರಕ್ಕೆ ನಾಯಕನಾಗಿ ಸೆಲೆಕ್ಟ್ ಆಗಿದ್ದು, ಕಥೆ ಕೇಳಿ ಶ್ರೀಮುರಳಿ ಮೆಚ್ಚಿದ್ದಾರೆ. ಈ ವೇಳೆ ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಶ್ರೀಮುರಳಿ ಅವರು ಧನ್ಯಾ ಅವರ ಹೆಸರನ್ನ ಸೂಚಿಸಿದ್ದರಂತೆ. ಕಥೆಗೆ ಧನ್ಯಾ ಸೂಟ್ ಆಗುವ ಕಾರಣ, ಧನ್ಯಾ ಅವರನ್ನೇ ನಾಯಕಿಯಾಗಿ ಫೈನಲ್ ಮಾಡಲಾಯಿತು. ಇದನ್ನೂ ಓದಿ:2ನೇ ಮಗುವಿನ ನಿರೀಕ್ಷೆಯಲ್ಲಿ ಅರ್ಜುನ್ ರಾಮ್‌ಪಾಲ್- ಗೇಬ್ರಿಯೆಲ್ಲಾ ಜೋಡಿ

    ‘ಎಲ್ಲಾ ನಿನಗಾಗಿ’ ಸಿನಿಮಾ ಟೈಟಲ್‌ನ ನಟ ಶ್ರೀಮುರಳಿ ಅವರಿಂದ ಅನಾವರಣ ಮಾಡಿದ್ದಾರೆ. ಬಳಿಕ ಚಿತ್ರತಂಡಕ್ಕೆ ಶ್ರೀಮುರಳಿ ಶುಭಹಾರೈಸಿದ್ದಾರೆ.  ಈ ವೇಳೆ ಚಿತ್ರತಂಡದ ಜೊತೆ ಪೂರ್ಣಿಮಾ ರಾಮ್‌ಕುಮಾರ್‌ ಕೂಡ ಭಾಗಿಯಾಗಿದ್ದರು. ಇನ್ನೂ ಎಂದೂ ಕಾಣಿಸಿಕೊಂಡಿರದ ವಿಭಿನ್ನ ಪಾತ್ರದಲ್ಲಿ ಧನ್ಯಾ ಕಾಣಿಸಿಕೊಳ್ತಿದ್ದಾರೆ. ಇದೇ ಮೇ 20ರಿಂದ 50 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಮೊದಲ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

    ‘ನಿನ್ನ ಸನಿಹಕೆ’ ಎಂಬ ಲವ್‌ಸ್ಟೋರಿ ಚಿತ್ರದ ಮೂಲಕ ನಟಿ ಕಮಾಲ್ ಮಾಡಿದ್ದರು. ‘ಎಲ್ಲಾ ನಿನಗಾಗಿ’ ಎಂಬ ಭಿನ್ನ ಪ್ರೇಮಕಥೆಯ ಮೂಲಕ ರಾಹುಲ್- ಧನ್ಯಾ ಜೋಡಿ ಅದ್ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ – ಪಾಪರಾಜಿಗಳಿಗೆ ಸುನೀಲ್ ಶೆಟ್ಟಿ ಭರವಸೆ

    ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ – ಪಾಪರಾಜಿಗಳಿಗೆ ಸುನೀಲ್ ಶೆಟ್ಟಿ ಭರವಸೆ

    ಬಾಲಿವುಡ್  (Bollywood) ನಟ ಸುನೀಲ್ ಶೆಟ್ಟಿ (Suniel Shetty) ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಪುತ್ರಿ ಅಥಿಯಾ ಶೆಟ್ಟಿ ಮತ್ತು ರಾಹುಲ್ ಮದುವೆಗೆ ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಮದುವೆ ನಡೆಯುವ ಸುನೀಲ್ ಶೆಟ್ಟಿ ಫಾರ್ಮ್ ಹೌಸ್ ಮುಂಭಾಗದಲ್ಲಿ ಅನೇಕ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಿದ್ದಾರೆ. ಈ ವೇಳೆ ಪಾಪರಾಜಿಗಳಿಗೆ ನಟ ಸುನೀಲ್ ಶೆಟ್ಟಿ ಭರವಸೆ ನೀಡಿದ್ದಾರೆ.

    ಚಿತ್ರರಂಗದಲ್ಲಿ ಸದ್ಯ ಗಟ್ಟಿಮೇಳದ ಸದ್ದು ಜೋರಾಗಿದೆ. ಖಂಡಾಲದಲ್ಲಿ ಬಂಗಲೆ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ (Athiya Shetty) ಮದುವೆ (Wedding) ಕಾರ್ಯಗಳು ನಡೆಯುತ್ತಿವೆ. ಫಾರ್ಮ್ ಹೌಸ್ ಮುಂಭಾಗದಲ್ಲಿ ಅನೇಕ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಿದ್ದಾರೆ. ಅವರನ್ನು ನೋಡಿದ ಸುನೀಲ್ ಶೆಟ್ಟಿ ಅವರು ಕಾರಿನಿಂದ ಕೆಳಗೆ ಇಳಿದು ಬಂದು ಮಾತನಾಡಿದ್ದಾರೆ. ನಾವು ನಾಳೆ ಬರುತ್ತೇವೆ. ಮಕ್ಕಳನ್ನು ನಾನು ಕರೆದುಕೊಂಡು ಬರುತ್ತೇನೆ ಎಂದು ಪಾಪರಾಜಿಗಳಿಗೆ ವಿನಯತೆಯಿಂದ ಸುನೀಲ್ ಶೆಟ್ಟಿ ಹೇಳಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದು ಸಿಹಿಸುದ್ದಿ ಕೊಟ್ಟ ನಟ ನಿಖಿಲ್ ಕುಮಾರಸ್ವಾಮಿ

    ಮಗಳ ಮದುವೆಯ ಸಂಭ್ರಮದ ನಡುವೆ ಸುನೀಲ್ ಶೆಟ್ಟಿಗೆ ಪಾಪರಾಜಿಗಳು ಧನ್ಯವಾದಗಳನ್ನ ತಿಳಿಸಿದ್ದಾರೆ. ಅವರೆಲ್ಲರಿಗೂ ಸುನೀಲ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಮೇಲೆ ನೀವೆಲ್ಲ ಪ್ರೀತಿ ತೋರಿಸಿದ್ದಕ್ಕೆ ಬಹಳ ಥ್ಯಾಂಕ್ಸ್ ಎಂದು ಅವರು ಹೇಳಿದ್ದಾರೆ. ಪಾಪರಾಜಿಗಳ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

     

    View this post on Instagram

     

    A post shared by Viral Bhayani (@viralbhayani)

    ಕ್ರಿಕೆಟಿಗ ರಾಹುಲ್ (Kl Rahul) ಮತ್ತು ಅಥಿಯಾ ಶೆಟ್ಟಿ ಅವರು ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ಸಪ್ತಪದಿ ತುಳಿದು ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಜನವರಿ 23ಕ್ಕೆ ಹಸೆಮಣೆ ಏರುತ್ತಿದ್ದಾರೆ. ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಈ ಜೋಡಿಯ ಮದುವೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶೀಘ್ರದಲ್ಲೇ ಕ್ರಿಕೆಟಿಗ ರಾಹುಲ್ ಜತೆ ಸುನಿಲ್ ಶೆಟ್ಟಿ ಮಗಳ ಮ್ಯಾರೇಜ್

    ಶೀಘ್ರದಲ್ಲೇ ಕ್ರಿಕೆಟಿಗ ರಾಹುಲ್ ಜತೆ ಸುನಿಲ್ ಶೆಟ್ಟಿ ಮಗಳ ಮ್ಯಾರೇಜ್

    ಗುಜರಾತ್ ಜೈಟ್ಸ್ ತಂಡದ ನಾಯಕ, ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಲವ್ವಿಡ‍ವ್ವಿಗೆ ತೆರೆ ಬೀಳುವ ಸಮಯ ಬಂದಿದೆ. ಮೊನ್ನೆಯಷ್ಟೇ ರಾಹುಲ್ ಜತೆ ಇರುವ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದ ಅತಿಯಾ ಶೆಟ್ಟಿ, ತಮ್ಮಿಬ್ಬರ ಪ್ರೀತಿಯ ಕುರಿತಾಗಿ ಹಂಚಿಕೊಂಡಿದ್ದರು. ಈ ಮೂಲಕ ರಾಹುಲ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ನೀಡಿದ್ದರು. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಅಲ್ಲದೇ, ಈ ಹಿಂದೆಯೂ ರಾಹುಲ್ ಜತೆ ಅತಿಯಾ ಓಡಾಡುವ ದೃಶ್ಯಗಳು ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದವು. ತಡರಾತ್ರಿ ಈ ಜೋಡಿಗಳು ಕಾಣಿಸಿಕೊಂಡು ಕ್ಯಾಮೆರಾಗಳಿಗೆ ಆಹಾರವಾಗಿದ್ದರು. ಇದೀಗ ಈ ಜೋಡಿ ಮದುವೆ ಆಗುವ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಕ್ರಿಕೆಟಿಗೆ ರಾಹುಲ್ ಜತೆ ಮಗಳ ಮದುವೆಗೆ ಸುನಿಲ್ ಶೆಟ್ಟಿ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ಇದೇ ವರ್ಷದ ಕೊನೆಯಲ್ಲಿ ರಾಹುಲ್ ಮತ್ತು ಅತಿಯಾ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಮೊದ ಮೊದಲ ರಾಹುಲ್ ಮತ್ತು ಅತಿಯಾ ಸ್ನೇಹಿತರು ಎಂದು ಬಿಂಬಿಸಲಾಯಿತು. ರಾಹುಲ್ ಕ್ರಿಕೆಟ್ ಪಂದ್ಯ ಆಡುವಾಗೆಲ್ಲ ಅತಿಯಾ ಕ್ರೀಡಾಂಗಣದಲ್ಲಿ ಹಾಜರಿರುತ್ತಿದ್ದರು. ಅವರನ್ನು ಹುರುದುಂಬಿಸುತ್ತಿದ್ದರು. ಸ್ನೇಹಿತನನ್ನು ಹುರಿದುಂಬಿಸಲು ಅತಿಯಾ ಬರುತ್ತಿದ್ದಾರೆ ಎಂದೇ ಹೇಳಲಾಯಿತು. ಈ ಜೋಡಿ ತಡರಾತ್ರಿಯ ಪಾರ್ಟಿಗಳಲ್ಲಿ ಸಿಗುತ್ತಿದ್ದಂತೆಯೇ ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದು ಬಿಟೌನ್ ಮಾತಾಡಿಕೊಂಡಿತು. ಆನಂತರ  ತಾವಿಬ್ಬರೂ ಪ್ರೀತಿಸುವ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ಇಬ್ಬರೂ ಹೇಳಿಕೊಂಡರು. ಇದೀಗ ಈ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

  • ಐಪಿಎಲ್‌ನಲ್ಲೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ರಾಹುಲ್‌ಗೆ ಕ್ಯಾಪ್ಟನ್‌ ಪಟ್ಟ ಕಟ್ಟಿದ ಲಕ್ನೋ

    ಐಪಿಎಲ್‌ನಲ್ಲೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ರಾಹುಲ್‌ಗೆ ಕ್ಯಾಪ್ಟನ್‌ ಪಟ್ಟ ಕಟ್ಟಿದ ಲಕ್ನೋ

    ಮುಂಬೈ:  ಐಪಿಎಲ್‌ ಇತಿಹಾಸದಲ್ಲಿ ದುಬಾರಿ ಬೆಲೆ ನೀಡಿ ಕನ್ನಡಿಗ ಕೆಎಲ್‌ ರಾಹುಲ್‌ ಅವರನ್ನು ಲಕ್ನೋ ತಂಡ ಖರೀದಿಸಿ ನಾಯಕ ಪಟ್ಟ ನೀಡಿದೆ.

    ಹರಾಜಿಗೂ ಮೊದಲು ಲಕ್ನೋ ತಂಡ ಮೂವರು ಆಟಗಾರರನ್ನು ಆರಿಸಿಕೊಂಡಿದೆ. ಕೆಎಲ್‌ ರಾಹುಲ್‌ ಜೊತೆ ಆಸ್ಟ್ರೇಲಿಯದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಭಾರತದ ಯುವ ಆಟಗಾರ ರವಿ ಬಿಷ್ಣೋಯ್ ಅವರನ್ನು ಲಕ್ನೋ ತಂಡ ಖರೀದಿಸಿದೆ.

    ರಾಹುಲ್ ಅವರಿಗೆ ಬರೋಬ್ಬರಿ 17 ಕೋಟಿ ರೂ. ನೀಡಿದೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಆಟಗಾರನಾಗಿ ರಾಹುಲ್‌ ಹೊರಹೊಮ್ಮಿದ್ದಾರೆ.  ಸ್ಟೊಯಿನಿಸ್ 9.2 ಕೋಟಿ ರೂ. ಬಿಷ್ಣೋಯ್ ಅವರನ್ನು 4 ಕೋಟಿ ರೂ. ನೀಡಿ ಲಕ್ನೋ ತಂಡ ಖರೀದಿ ಮಾಡಿದೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

    ಈ ಹಿಂದೆ ದಕ್ಷಿಣ ಆ‍ಫ್ರಿಕಾದ ಕ್ರಿಸ್‌ ಮೋರಿಸ್‌ ಅವರನ್ನು 16.25 ಕೋಟಿ ನೀಡಿ ರಾಜಸ್ಥಾನ ತಂಡ ಖರೀದಿಸಿತ್ತು. ಈ ಬಾರಿ ಐಪಿಎಲ್‌ನಲ್ಲಿ ಚೆನ್ನೈ ತಂಡ ರವೀಂದ್ರ ಜಡೇಜಾ ಅವರಿಗೆ 16 ಕೋಟಿ ರೂ., ಧೋನಿಗೆ 12 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡರೆ, ಆರ್‌ಸಿಬಿ 15 ಕೋಟಿ ರೂ. ನೀಡಿ ಕೊಹ್ಲಿ ಅವರನ್ನು ಉಳಿಸಿಕೊಂಡಿದೆ.

    ಮೆಗಾ ಹರಾಜಿನ ಮೊದಲು ಡ್ರಾಫ್ಟ್ ಪಿಕ್‌ನ ಭಾಗವಾಗಿ ಲಭ್ಯವಿರುವ ಆಟಗಾರರ ಪೈಕಿ ಇಬ್ಬರು ಭಾರತೀಯ, ಒಬ್ಬ ವಿದೇಶಿ ಆಟಗಾರನನ್ನು ಆರಿಸಿಕೊಳ್ಳಲು  ಲಕ್ನೋ ಮತ್ತು ಅಹಮದಾಬಾದ್‌ ತಂಡಕ್ಕೆ  ಐಪಿಎಲ್‌ ಆಡಳಿತ ಮಂಡಳಿ  ಅವಕಾಶ ನೀಡಿತ್ತು.

    ರಾಹುಲ್ ಕಳೆದ ಎರಡು ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಹುಲ್‌ ಮುನ್ನಡೆಸಿದ್ದರು. ಸ್ಟೊಯಿನಿಸ್ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದರೆ ಬಿಷ್ಣೋಯ್ ಪಂಜಾಬ್ ತಂಡದಲ್ಲಿ ಆಡಿದ್ದರು. ಇದನ್ನೂ ಓದಿ: ಒಂದೇ ರೈಡ್‍ನಲ್ಲಿ 8 ಅಂಕ – ವಿವಾದಾತ್ಮಕ ತೀರ್ಪು, ಸೋತ ಬುಲ್ಸ್

    ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಐಪಿಎಲ್‌ ಆಟ ಆರಂಭಿಸಿದ್ದ ರಾಹುಲ್‌ 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಸೇರಿದ್ದರು. 2018ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 11 ಕೋಟಿ ರೂ. ನೀಡಿ ರಾಹುಲ್‌ ಅವರನ್ನು ಖರೀದಿಸಿತ್ತು.

  • ರಾಹುಲ್, ಪ್ರಿಯಾಂಕಾ ನನ್ನ ಮಕ್ಕಳಿದ್ದಂತೆ, ಅವರಿಗೆ ಅನುಭವ ಇಲ್ಲ: ಕ್ಯಾ.ಅಮರೀಂದರ್ ಸಿಂಗ್

    ರಾಹುಲ್, ಪ್ರಿಯಾಂಕಾ ನನ್ನ ಮಕ್ಕಳಿದ್ದಂತೆ, ಅವರಿಗೆ ಅನುಭವ ಇಲ್ಲ: ಕ್ಯಾ.ಅಮರೀಂದರ್ ಸಿಂಗ್

    ಚಂಡೀಗಢ: ತಮ್ಮ ರಾಜೀನಾಮೆಗೆ ಕಾರಣರಾದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತು ಸಿಧು ವಿರುದ್ಧ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದ್ದು, ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಅನುಭವದ ಕೊರತೆ ಇದೆ ಇದನ್ನು ಸಿಧು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!

    2022ರ ವಿಧಾನಸಭೆ ಚುನಾವಣೆಯಲ್ಲಿ ಸಿಧು ಸೋಲಿಸಲು ಪ್ರಬಲ ಅಭ್ಯರ್ಥಿಯನ್ನು ಹಾಕಲಿದ್ದೇನೆ. ಸಿಧು ಸಿಎಂ ಅಭ್ಯರ್ಥಿಯಾಗುವುದನ್ನು ತಪ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇನೆ, ಅವನೊಬ್ಬ ಅಪಾಯಕಾರಿ ವ್ಯಕ್ತಿಯಾಗಿದ್ದು, ಅವನಿಂದ ರಾಜ್ಯವನ್ನು ರಕ್ಷಿಸಬೇಕಿದೆ ಎಂದು ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 17 ವರ್ಷದ ದಾಂಪತ್ಯ ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ ಮಹಿಳೆ

    ಮೂರು ವಾರಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೆ, ಆದರೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹುದ್ದೆಯಲ್ಲಿ ಮುಂದುವರಿಯಲು ಸೂಚಿಸಿದ್ದರು. ಸೈನಿಕನಾಗಿ ನಾನು ಹೇಗೆ ಕೆಲಸ ಮಾಡಬೇಕು, ಹೇಗೆ ಹಿಂತಿರುಗಬೇಕು ಎಂದು ಗೊತ್ತಿದೆ ಎಂದರು. ಇನ್ನೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನನ್ನ ಮಕ್ಕಳಿದ್ದಾಗೆ, ಅವರಿಗೆ ಅನುಭವ ಇಲ್ಲ, ಅವರಿಗೆ ತಪ್ಪು ಸಲಹೆಗಳನ್ನು ನೀಡಲಾಗುತ್ತಿದೆ. ಯಾವುದು ಹೀಗೆ ಆಗಬಾರದು, ಇದರಿಂದ ನನಗೆ ದುಃಖವಾಗಿದೆ ಎಂದು ಹೇಳಿದ್ದಾರೆ.

  • ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು

    ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು

    – ರಸ್ತೆಯಲ್ಲಿ ಕಣ್ಣೀರಿಟ್ಟ ಪೋಷಕರು
    – ರಕ್ಷಾ ಬಂಧನದಂದು ನಾನು ಯಾರಿಗೆ ರಾಖಿ ಕಟ್ಟಲಿ?

    ಬೆಂಗಳೂರು: ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು ಎಂದು ಹೇಳಿ ಮೃತ ರಾಹುಲ್ ಪೋಷಕರು ಕಣ್ಣೀರಿಟ್ಟರೆ ಸಹೋದರಿ ರಕ್ಷಾ ಬಂಧನದ ದಿನ ನಾನು ಯಾರಿಗೆ ರಾಖಿ ಕಟ್ಟಲಿ ಎಂದು ಹೇಳಿ ದು:ಖ ತೋಡಿಕೊಂಡಿದ್ದಾರೆ.


    17 ವರ್ಷದ ವಿದ್ಯಾರ್ಥಿ ರಾಹುಲ್ ಇಂದು ಬೆಳಗ್ಗೆ ಸದಾಶಿವನಗರ ವ್ಯಾಪ್ತಿಯಲ್ಲಿ ಪಿಸ್ತೂಲಿನಿಂದ ಗುಂಡು ಹರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಈ ಸುದ್ದಿ ತಿಳಿದ ತಕ್ಷಣ ಭಗತ್ ಸಿಂಗ್, ಬಾಬ್ನಾ ದಂಪತಿ ಸ್ಥಳಕ್ಕೆ ಆಗಮಿಸಿ ಕಣ್ಣೀರಿಟ್ಟಿದ್ದಾರೆ.

    ರಾಹುಲ್ ತಂದೆ ಮಧ್ಯ ರಸ್ತೆಯಲ್ಲಿ ಕುಳಿತುಕೊಂಡು ಫೋನ್ ನಲ್ಲಿ ತನ್ನ ಮಗನ ಫೋಟೋವನ್ನು ನೋಡಿಕೊಂಡು ‘ನನ್ನ ಮಗ, ಅಯ್ಯೋ ನನ್ನ ಮಗ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಈ ವೇಳೆ ಅಲ್ಲಿದ್ದ ಪೊಲೀಸರು ಸಮಾಧಾನ ಮಾಡಿ ರಸ್ತೆಬದಿಗೆ ಕರೆದುಕೊಂಡುಹೋಗಿ ಕೂರಿಸಿದ್ದಾರೆ. ಈ ವೇಳೆ ತಂದೆಯವರೆಗೆ ಎದ್ದು ನಿಲ್ಲಲು ಸಹ ಶಕ್ತಿ ಇರಲಿಲ್ಲ. ಇದನ್ನೂ ಓದಿ:  ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

    ಭಗತ್ ಸಿಂಗ್ ಮಾತನಾಡಿ, ನಾನು ಆರ್ಮಿಯಿಂದ ನಿವೃತ್ತಿಯನ್ನು ಪಡೆದಿದ್ದೇನೆ. ನಾವು ಎಂದೂ ಅವನಿಗೆ ಇದು ಮಾಡು ಇಷ್ಟು ಓದು ಎಂದು ಹೇಳಿಲ್ಲ. ಅವನಿಗೆ ಒಳ್ಳೆಯ ಕೆಲಸ ಸಿಕ್ಕಿ ಒಂದು ಕಡೆ ನೆಲೆ ನಿಂತರೆ ಸಾಕಾಗಿತ್ತು. ಆದರೆ ಈ ರೀತಿ ಮಾಡಿಕೊಳ್ಳುತ್ತಾನೆ ಎಂದು ನಾವು ಊಹಿಸಿರಲಿಲ್ಲ. ಅವನಿಗೆ ವ್ಯಾಯಾಮ ಮಾಡುವ ಅಭ್ಯಾಸವಿತ್ತು. ಯಾವುದೇ ರೀತಿಯ ತೊಂದರೆಗಳನ್ನು ನಾವು ಅವನಿಗೆ ಕೊಟ್ಟಿರಲಿಲ್ಲ. ಈ ಕುರಿತು ಅವರ ಗೆಳಯರಿಂದ ಏನಾದರೂ ತಿಳಿಯಬಹುದೇ? ಏಕೆಂದರೆ ಸ್ನೇಹಿತರ ಜೊತೆ ಯಾವಾಗಲೂ ಮಾತನಾಡುತ್ತಿದ್ದ ಅವರಿಂದ ಏನಾದರೂ ಸುಳಿವು ಸಿಗಬಹುದು ಎಂದು ಹೇಳಿ ದು:ಖ ಹೊರಹಾಕಿದರು.

    ರಾಹುಲ್ ತಾಯಿ ಬಾಬ್ನ, ತನ್ನ ಸಂಬಂಧಿಕರಿಗೆ ಕರೆ ಮಾಡಿ ನಡೆದಿದ್ದ ಪರಿಸ್ಥಿತಿಯನ್ನು ಹೇಳಿ ಗೋಳಾಡುತ್ತಿದ್ದರು. ಸಿಕ್ಕ ಪೊಲೀಸರಿಗೆಲ್ಲ ಅಣ್ಣ ಇವನನ್ನು ಯಾರು ಸಾಯಿಸಿದ್ದರೆ ಎಂದು ತಿಳಿಯಿತಾ ಎಂದು ಪ್ರಶ್ನೆ ಮಾಡುತ್ತಿದ್ದರು. ಅಯ್ಯೋ ದೇವರೇ ನಾನು ಏನು ಮಾಡಿದೆ ನಮಗೆ ಏಕೆ ಈ ರೀತಿಯ ಪರಿಸ್ಥಿತಿಯನ್ನು ಕೊಟ್ಟೆ ಎಂದು ದೇವರನ್ನು ಶಪಿಸುತ್ತ ಒಂದು ಕಡೆ ನಿಲ್ಲಲಾರದೇ ಕಣ್ಣೀರು ಹಾಕುತ್ತಿದ್ದರು. ಇದನ್ನೂ ಓದಿ:  ಮುಂದಿನ ದಿನಗಳಲ್ಲಿ ಕ್ಷೇತ್ರವಾರು ಶಾಸಕರ ಜೊತೆ ಸಭೆ ಮಾಡಿ ಲಸಿಕೆ ಅಭಿಯಾನ ಮಾಡ್ತೇವೆ: ಆರ್.ಅಶೋಕ್

    ಕುಸಿದು ಬಿದ್ದ ಸಹೋದರಿ!

    ರಾಹುಲ್ ಸಹೋದರಿ ಸಹ ಸ್ಥಳಕ್ಕೆ ಆಗಮಿಸಿದ್ದು, ವಿಷಯ ತಿಳಿದು ಅಲ್ಲೇ ಕುಸಿದ್ದಿದ್ದಾರೆ. ಅದು ತನ್ನ ತಮ್ಮನಾ. ಇಲ್ಲಾ ಅದು ಸಾಧ್ಯನೇ ಇಲ್ಲ ಎಂದು ಸತ್ಯವನ್ನು ಅರಗಿಸಿಕೊಳ್ಳಲು ಒದ್ದಾಡುತ್ತಿದ್ದರು.

    ಪೋಷಕರು ಅದು ರಾಹುಲ್. ಅವನ ತಲೆಯಲ್ಲಿ ಏನಾದರೂ ಇತ್ತ ಏಕೆ ಈ ರೀತಿ ಮಾಡಿಕೊಂಡ ಎಂದು ಪೋಷಕರು ಆತನ ಅಕ್ಕನನ್ನು ಕೇಳುತ್ತಿದ್ದರು. ಆದರೆ ಇದರ ಪರಿವೇ ಇಲ್ಲದೆ ಆಕೆ ಮಾತ್ರ ತನ್ನ ತಮ್ಮ ಮೃತನಾದ ಸ್ಥಳವನ್ನು ದಿಟ್ಟಿಸುತ್ತ ನಿಂತಿದ್ದರು. ಇಲ್ಲ ಅವನಿಗೆ ಏನೂ ಆಗಿಲ್ಲ. ಅವನು ಚೆನ್ನಾಗಿಯೇ ಇದ್ದಾನೆ. ನಾನು ಇಲ್ಲಿಂದ ಎಲ್ಲಿಯೂ ಹೋಗಲ್ಲ. ಅವನು ನನ್ನ ತಮ್ಮ ಅವನಿಗೆ ಏನೂ ಆಗುವುದಿಲ್ಲ. ಅಮ್ಮ ಅವನು ಚೆನ್ನಾಗಿ ಇದ್ದ. ಈಗ ಏನಾಯಿತು ಎಂದು ಸತ್ಯವನ್ನು ಒಪ್ಪಿಕೊಳ್ಳಲಾದೆ ಒದ್ದಾಡುತ್ತಿದ್ದರು. ಅಮ್ಮ ರಕ್ಷಾಬಂಧನ ದಿನ ಯಾರಿಗೆ ರಾಖಿಯನ್ನು ಕಟ್ಟಲಿ ಎಂದು ಕೇಳಿ ತಾಯಿಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಅಳುತ್ತಿದ್ದರು. ಇದನ್ನೂ ಓದಿ:  10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ

    ಉತ್ತರಾಖಂಡ್ ಮೂಲದ ಕುಟುಂಬ ಕಳೆದ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದಿತ್ತು. ತಂದೆ ಭಗತ್ ಸಿಂಗ್ ಹವಾಲ್ದಾರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು.

  • ಸಹ ಆಟಗಾರನ ಫುಟ್‍ಬಾಲ್ ಆಟಕಂಡು ನೆಲದಲ್ಲಿ ಹೊರಳಾಡಿ ನಕ್ಕ ಕೊಹ್ಲಿ

    ಸಹ ಆಟಗಾರನ ಫುಟ್‍ಬಾಲ್ ಆಟಕಂಡು ನೆಲದಲ್ಲಿ ಹೊರಳಾಡಿ ನಕ್ಕ ಕೊಹ್ಲಿ

    ಲಂಡನ್: ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಈ ನಡುವೆ ಅಭ್ಯಾಸದ ವೇಳೆ ಸಹ ಆಟಗಾರನ ಫುಟ್‍ಬಾಲ್ ಆಟಕಂಡು ತಂಡದ ನಾಯಕ ವಿರಾಟ್ ಕೊಹ್ಲಿ ನೆಲದಲ್ಲಿ ಬಿದ್ದು ಹೊರಳಾಡಿ ನಕ್ಕಿದ್ದಾರೆ.

    ಇಂಗ್ಲೆಂಡ್‍ನಲ್ಲಿ ನಡೆದ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಬಳಿಕ ಸ್ವಲ್ಪ ವಿರಾಮದಲ್ಲಿದ್ದ ಭಾರತ ತಂಡ ಮತ್ತೆ ಇದೀಗ ಇಂಗ್ಲೆಂಡ್ ಸರಣಿಗೆ ಅಭ್ಯಾಸ ಆರಂಭಿಸಿದೆ. ಈ ನಡುವೆ ತಂಡದ ಸಹ ಆಟಗಾರರಲ್ಲಿ ಕೊರೊನಾ ದೃಢಪಟ್ಟಿರುವ ಆತಂಕದ ನಡುವೆ ಭಾರತ ತಂಡದ ಸದಸ್ಯರು ಡರ್ಹಾಮ್‍ಗೆ ತೆರಳಿ ಅಭ್ಯಾಸ ಅರಂಭಿಸಿದ್ದಾರೆ.

    ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಸಹಿತ ಎಲ್ಲ ಆಟಗಾರರು ಫುಟ್‍ಬಾಲ್ ಆಟದಲ್ಲಿ ತೊಡಗಿದ್ದಾರೆ. ಈ ವೇಳೆ ಸಹ ಆಟಗಾರರು ಕಾಲು ಮತ್ತು ತಲೆಯಲ್ಲಿ ಬಾಲ್‍ನ್ನು ಒದೆಯುತ್ತಿದ್ದರು. ಈ ಸಂದರ್ಭ ಕನ್ನಡಿಗ ಪ್ರಸಿದ್ಧ್ ಕೃಷ್ಣ ಫುಟ್‍ಬಾಲ್ ಆಡುವುದನ್ನು ಕಂಡು ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅಣಕಿಸಿದ್ದಾರೆ.

    ವಿರಾಟ್ ಕೊಹ್ಲಿ ಮತ್ತು ರಾಹುಲ್ ತಲೆಯಲ್ಲಿ ಪ್ರಸಿದ್ಧ್ ಕೃಷ್ಣರಂತೆ ಆ್ಯಕ್ಷನ್ ಮಾಡುವ ಮೂಲಕ ನಗಲು ಆರಂಭಿಸಿದ್ದಾರೆ. ಕೊಹ್ಲಿ ನಕ್ಕು, ನಕ್ಕು ಕೊನೆಗೆ ಮೈದಾನದಲ್ಲಿ ಹೊರಳಾಡಿದ್ದಾರೆ. ಇದನ್ನೂ ಓದಿ: ಸಚಿನ್, ಸೆಹ್ವಾಗ್ ಬಳಿಕ ಆರಂಭಿಕನಾಗಿ ಶಿಖರ್ ಧವನ್ ನೂತನ ಮೈಲಿಗಲ್ಲು

    ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ  ಟೆಸ್ಟ್ ಸರಣಿ  ಆಗಸ್ಟ್ 4 ರಂದು ಆರಂಭವಾಗಲಿದೆ.

  • ಬಾಡಿ ಚೆಕ್‌ ಮಾಡಲು ಬಂದ ರಾಹುಲ್‌ಗೆ ಪಂಚ್‌ ಕೊಟ್ಟ ಫಿಂಚ್‌

    ಬಾಡಿ ಚೆಕ್‌ ಮಾಡಲು ಬಂದ ರಾಹುಲ್‌ಗೆ ಪಂಚ್‌ ಕೊಟ್ಟ ಫಿಂಚ್‌

    ಸಿಡ್ನಿ: ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌ ಅವರಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಆರನ್‌ ಫಿಂಚ್‌ ಅವರು ಕೈಯಿಂದ ಪಂಚ್‌ ಮಾಡಿದ್ದಾರೆ.

    ಎರಡನೇ ಪಂದ್ಯದಲ್ಲಿ ನವದೀಪ್‌ ಸೈನಿ 12ನೇ ಓವರ್‌ ಬೌಲ್‌ ಮಾಡುತ್ತಿದ್ದರು. ಗಂಟೆಗೆ 146 ಕಿ.ಮೀ ವೇಗದಲ್ಲಿ ಎಸೆದ 5ನೇ ಎಸೆತವನ್ನು ಹೊಡೆಯಲು ಫಿಂಚ್‌ ಪ್ರಯತ್ನ ಪಟ್ಟಿದ್ದರು. ಆದರೆ ಬಾಲ್‌ ಬ್ಯಾಟ್‌ಗೆ ಸಿಗದೇ ಹೊಟ್ಟೆಗೆ ಬಡಿಯಿತು. ಫುಲ್‌ ಟಾಸ್‌ ಆಗಿದ್ದ ಕಾರಣ ಅಂಪೈರ್‌ ನೋಬಾಲ್‌ ನೀಡಿದರು.

    ಬಳಿಕ ಫಿಂಚ್‌ ಮತ್ತು ವಾರ್ನರ್‌ ಮಾತನಾಡುತ್ತಿದ್ದರು. ಈ ವೇಳೆ ಹತ್ತಿರ ಬಂದ ರಾಹುಲ್‌ ಗ್ಲೌಸ್‌ ನೋಡಿ ಎಡಕೈಯಲ್ಲಿ ದೇಹ ಮುಟ್ಟಲು ಯತ್ನಿಸಿದಾಗ ಫಿಂಚ್‌ ಎರಡು ಕೈಯಲ್ಲಿ ರಾಹುಲ್‌ ಹೊಟ್ಟೆಗೆ ಮೆಲ್ಲಗೆ ಕೈಯಿಂದ ಪಂಚ್‌ ಮಾಡಿದ್ದಾರೆ. ನಂತರ ಇಬ್ಬರು ಆಟಗಾರರು ನಕ್ಕಿದ್ದಾರೆ.

    ಈ ಹಿಂದೆ ಆಸ್ಟ್ರೇಲಿಯಾದ ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕಿಚಾಯಿಸುತ್ತಿದ್ದರು. ಆದರೆ ಐಪಿಎಲ್‌ನಿಂದ ಆಟಗಾರರ ವರ್ತನೆಯೇ ಬದಲಾಗಿದ್ದು ಎಲ್ಲರೂ ಸ್ನೇಹಿತರಂತೆ ಆಡುತ್ತಿದ್ದಾರೆ.

    ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು 389 ರನ್‌ ಗಳಿಸಿದೆ.

    ಸ್ಮಿತ್‌ 104 ರನ್‌ (64 ಎಸೆತ, 14 ಬೌಂಡರಿ, 2 ಸಿಕ್ಸರ್‌), ಡೇವಿಡ್‌ ವಾರ್ನರ್‌ 83 ರನ್‌(77 ಎಸೆತ, 7ಬೌಂಡರಿ, 3 ಸಿಕ್ಸರ್‌) ಲಬುಶೇನ್‌ 70 ರನ್‌(61 ಎಸೆತ, 5 ಬೌಂಡರಿ) ಗ್ಲೇನ್‌ ಮ್ಯಾಕ್ಸ್‌ವೆಲ್‌ 63 ರನ್‌(29 ಎಸೆತ, 4 ಬೌಂಡರಿ, 4 ಸಿಕ್ಸರ್‌), ನಾಯಕ ಫಿಂಚ್‌ 60 ರನ್‌(69 ಎಸೆತ, 6 ಬೌಂಡರಿ, 1 ಸಿಕ್ಸರ್‌) ಹೊಡೆದರು.

    ಸೈನಿ 7ಓವರ್‌ ಮಾಡಿ 70 ರನ್‌ ನೀಡಿ ದುಬಾರಿಯಾದರು. 10 ಓವರ್‌ ಎಸೆದ ಬುಮ್ರಾ 79 ರನ್‌, ಶಮಿ 73 ರನ್‌ ನೀಡಿದರು. ಚಹಲ್‌ 9 ಓವರ್‌ ಎಸೆದು 71 ರನ್‌ ನೀಡಿದರು.

    https://twitter.com/Gajal_Dalmia/status/1332908132717142019

     

  • ಭಾಸ್ಕರ್ ರಾವ್ ಜೊತೆಗೂ ರಾಹುಲ್ ಫೋಟೋ ಇದೆ, ಅವರು ಅಪರಾಧಿನಾ: ಅಶೋಕ್ ಪ್ರಶ್ನೆ

    ಭಾಸ್ಕರ್ ರಾವ್ ಜೊತೆಗೂ ರಾಹುಲ್ ಫೋಟೋ ಇದೆ, ಅವರು ಅಪರಾಧಿನಾ: ಅಶೋಕ್ ಪ್ರಶ್ನೆ

    – ಪ್ರಶಾಂತ್ ಸಂಬರಗಿ ಜೊತೆಯೂ ರಾಹುಲ್ ಫೋಟೊ ಇದೆ
    – ಮೈ ಕ್ಯಾಪ್ಟಮ್ ಈಸ್ ಯಡಿಯೂರಪ್ಪ

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ರಾಹುಲ್ ಜೊತೆ ತಮ್ಮ ಫೋಟೋ ಇರುವುದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಈ ವಿಚಾರವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪದ್ಮನಾಭನಗರದ ನಾಮಕರಣದ ವೇಳೆ ಫೋಟೋ ತೆಗೆಸಿಕೊಂಡಿದ್ದಾನೆ. ನಾನು ನಮ್ಮ ಕಾರ್ಯಕರ್ತನ ನಾಮಕರಣಕ್ಕೆ ಹೋಗಿದ್ದೆ ಅಷ್ಟೇ. ಈ ವೇಳೆ ಆತ ಫೋಟೋ ತೆಗೆಸಿಕೊಂಡಿದ್ದಾನೆ. ಆದರೆ ನನಗೂ ಅವನಿಗೂ ಸಂಬಂಧವಿಲ್ಲ. ಬೆಂಗಳೂರು ಮಾಜಿ ಕಮಿಷನರ್ ಭಾಸ್ಕರ್ ರಾವ್ ಅವರ ಜೊತೆಯೂ ಫೋಟೋ ಇದೆ ಅದಕ್ಕೆ ಅವರು ಅಪರಾಧಿನಾ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.

    ರಾಗಿಣಿ ಜೊತೆಯೂ ನಮ್ಮ ಫೋಟೋ ಇದೆ. ಮಾಸ್ಕ್ ಅರಿವು ಮೂಡಿಸೋ ಜಾಗೃತಿ ಅಭಿಯಾನದ ಕಾರ್ಯಕ್ರಮಕ್ಕೆ ರಾಗಿಣಿ ಬಂದಿದ್ದರು. ಈ ವೇಳೆ ಸಿಎಂ ಮತ್ತು ನಮ್ಮ ಜೊತೆ ರಾಗಿಣಿ ಫೋಟೋ ತೆಗಿಸಿಕೊಂಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಸೇರಿದಂತೆ ಹಲವಾರು ನಾಯಕರ ಜೊತೆ ಅವರ ಫೋಟೋ ಇದೆ. ಹಾಗಾದರೆ ಅವರು ಅಪರಾಧಿನಾ. ರಾಹುಲ್ ಫೋಟೋ ಪ್ರಶಾಂತ್ ಸಂಬರಗಿ ಜೊತೆಯೂ ಇದೆ ಎಂದು ಹೇಳಿದ್ದಾರೆ.

    ಸಾರ್ವಜನಿಕ ಬದುಕಿನಲ್ಲಿ ಇದ್ದಾಗ ಫೋಟೋ ತೆಗೆಸಿಕೊಳ್ಳುತ್ತಾರೆ. ತೆಗೆಸಿಕೊಳ್ಳದಿದ್ದರೆ ಗರ್ವ ಅಂತಾರೆ. ನಮಗೂ ಅವರಿಗೂ ಸಂಬಂಧವಿಲ್ಲ. ರಾಹುಲ್ ಜೊತೆಗೆ ಇರುವ ಫೋಟೋ ನಾಲ್ಕು ವರ್ಷದ ಹಿಂದಿನ ಫೋಟೋ ಇರಬೇಕು. ಕೊರೊನಾ ಬಂದಾಗಿನಿಂದ ಯಾವುದೇ ನಾಮಕರಣಕ್ಕೆ ನಾನು ಹೋಗಿಲ್ಲ ಎಂದು ಹೇಳುವ ಮೂಲಕ ಆರ್ ಅಶೋಕ್ ಅವರು ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

    ನಾನು ಇಸ್ಪೀಟ್ ಎಲೆಯನ್ನೇ ನೋಡಿಲ್ಲ. ನನ್ನ ಲೈಫಲ್ಲೇ ಸುಮ್ನೆನೂ ಇಸ್ಪೀಟು ಎಲೆಯನ್ನ ನೋಡಿಲ್ಲ. ಇನ್ನು ಕ್ಯಾಸಿನೋ ಏನ್ ನೋಡಲಿ. ಜಮೀರ್ ಗೆ ಮುಸ್ಲಿಂ ನಾಯಕನಾಗಬೇಕೆಂಬ ಆಸೆ. ಎಲ್ಲ ವಿಚಾರದಲ್ಲಿಯೂ ಮುಂದೆ ಬರಬೇಕು ಎಂದು ಬರುತ್ತಾರೆ. ಕೆಜೆ.ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲೂ ಅವರೇ ಕಾಣಿಸಿಕೊಳ್ಳುತ್ತಾರೆ. ಜಾಫರ್ ಷರೀಫ್ ನಂತರ ಲೀಡರ್ ಆಗಬೇಕು ಎಂಬ ಆಸೆ ಅವರಿಗಿದೆ. ವಿದೇಶಕ್ಕೆ ಹೋಗೋದು ತಪ್ಪಲ್ಲ. ಆದರೆ ಕ್ಯಾಸಿನೋ ವಿಚಾರದಲ್ಲಿ, ಹವಾಲಾ ನಡೆದಿದ್ದರೆ ತಪ್ಪಾಗುತ್ತೆ ಎಂದರು.

    ಇದೇ ವೇಳೆ ಬಿಜೆಪಿಯಲ್ಲಿ ನಾಯಕ್ವದ ಬದಲಾವಣೆ ವಿಚಾರವಾಗಿ ಮಾತನಾಡಿ, ಮೈ ಕ್ಯಾಪ್ಟನ್ ಈಸ್ ಯಡಿಯೂರಪ್ಪ. ಯಾವುದೇ ಬಾಲ್ ಹಾಕಿದರೂ ಯಡಿಯೂರಪ್ಪ ಅರಾಮಾವಾಗಿ ಸಿಕ್ಸ್, ಫೋರ್ ಹೊಡೆಯುತ್ತಾರೆ. ಸ್ಪಿನ್ ಹಾಕಲಿ, ನೋಬಾಲ್ ಹಾಕಲಿ ಹೊಡೆಯುತ್ತಾರೆ. ಯಡಿಯೂರಪ್ಪ ಸೀಸನ್ ರಾಜಕಾರಣಿ, ಅಗ್ರಗಣ್ಯರು. ಅವರ ಅಗ್ರಗಣ್ಯ ಪದವಿ ಹಾಗೆ ಇರುತ್ತೆ. ಮೂರು ವರ್ಷ ಸಿಎಂ ಆಗಿಯೇ ಇರುತ್ತಾರೆ. ಬಿಜೆಪಿ ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

  • ಆರ್ ಅಶೋಕ್, ಕೆ ಮಂಜು, ಉಪೇಂದ್ರ ಜೊತೆ ಡ್ರಗ್ ಡೀಲರ್ ರಾಹುಲ್

    ಆರ್ ಅಶೋಕ್, ಕೆ ಮಂಜು, ಉಪೇಂದ್ರ ಜೊತೆ ಡ್ರಗ್ ಡೀಲರ್ ರಾಹುಲ್

    – ಹಲವು ಸೆಲೆಬ್ರಿಟಿಗಳ ಜೊತೆ ಇತ್ತು ರಾಹುಲ್‍ಗೆ ನಂಟು

    ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಡ್ರಗ್ ಡೀಲರ್ ರಾಹುಲ್ ಜೊತೆ ಕಂದಾಯ ಸಚಿವರಾದ ಆರ್ ಅಶೋಕ್ ಇರುವ ಫೋಟೋ ಪಬ್ಲಿಕ್ ಟಿವಿಗೆ ದೊರಕಿದೆ.

    ಡ್ರಗ್ ಪ್ರಕರಣದಲ್ಲಿ ನಟಿ ಸಂಜನಾ ಆಪ್ತನಾಗಿದ್ದ ರಾಹುಲ್ ನನ್ನು ಸಿಸಿಬಿ ಪೊಲೀಸರು ಸೆಪ್ಟಂಬರ್ 3ರಂದು ಬಂಧಿಸಿದ್ದರು. ಈ ಪ್ರಕರಣ ಈಗ ಬಗೆದಷ್ಟು ಬಯಲಾಗುತ್ತಿದ್ದು, ರಾಹುಲ್ ಶ್ರೀಮಂತ ಲೋಕ ಅನಾವರಣಕೊಂಡಿದೆ. ಸ್ಯಾಂಡಲ್‍ವುಡ್‍ನ ಬಹುತೇಕ ನಟ-ನಟಿಯರ ಜೊತೆಗೆ ರಾಹುಲ್‍ಗೆ ನಂಟಿರುವುದು ಬಟಾಬಯಲಾಗಿದೆ. ಇದನ್ನು ಓದಿ: ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

    ವೀಕೆಂಡ್‍ಗಳಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದ ರಾಹುಲ್, ಸ್ಯಾಂಡಲ್‍ವುಡ್‍ನ ಎಲ್ಲ ತಾರೆಯರನ್ನು ಆಹ್ವಾನ ಮಾಡುತ್ತಿದ್ದ. ಈತನ ಜೊತೆ ನಟ ಉಪೇಂದ್ರ ಮತ್ತು ಕ್ರಿಕೆಟಿಗ ಮತ್ತು ನಟ ಶ್ರೀಶಾಂತ್, ಶ್ರೀನಗರ ಕಿಟ್ಟಿ, ನಿರ್ಮಾಪಕ ಕೆ.ಮಂಜು, ರಘು ಮುಖರ್ಜಿ, ಸಂಗೀತ ನಿರ್ದೇಶಕ ಗುರುಕಿರಣ್, ನಟಿಯರಾದ ಐಂದ್ರಿತಾ ರೇ, ಪ್ರಿಯಾಂಕ ಉಪೇಂದ್ರ, ಹರ್ಷಿಕಾ ಪೂಣಚ್ಚ, ಸಂಜನಾ ಗಲ್ರಾನಿ, ನಿವೃತ್ತ ಐಜಿ ಬಿಎನ್‍ಎಸ್ ರೆಡ್ಡಿಯವರ ಜೊತೆಯೂ ರಾಹುಲ್ ಫೋಟೋ ತೆಗೆಸಿಕೊಂಡಿದ್ದಾರೆ.

    ಇದೇ ವೇಳೆ ನಿರ್ಮಾಪಕ ಕೆ. ಮಂಜು ಅವರು ರಾಹುಲ್‍ಗೆ ಕೈತುತ್ತು ತಿನ್ನಿಸುತ್ತಿರುವ ಫೋಟೋ ವೈರಲ್ ಆಗಿದ್ದು, ಇದರ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿರುವ ಕೆ.ಮಂಜು ಅವರು, ಆತ ನನಗೆ ಬಹಳ ವರ್ಷದಿಂದ ಪರಿಚಯ. ಆತ ನನ್ನ ಗೆಳೆಯರೊಬ್ಬರ ಆಫೀಸ್‍ನಲ್ಲಿ ಪರಿಚಯವಾಗಿದ್ದ. ಬಹಳ ಒಳ್ಳೆಯ ಹುಡುಗ, ಒಂದು ಪಾರ್ಟಿಗೆ ಹೋದಾಗ ಆತನ ಬಳಿ ಒಂದು ಫೋಟೋ ತೆಗೆಸಿಕೊಂಡಿದ್ದೆ ಎಂದು ಹೇಳಿದ್ದಾರೆ.

    ಇದರ ಜೊತೆಗೆ ರಾಹುಲ್ ಶ್ರೀಲಂಕಾದ ಕ್ಯಾಸಿನೋವೊಂದಕ್ಕೆ ಇಲ್ಲಿಂದ ಸೆಲೆಬ್ರಿಟಿಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ರಾಹುಲ್ ಜೊತೆಗೆ ಸಚಿವ ಆರ್ ಅಶೋಕ್ ಅವರ ಫೋಟೋ ಕೂಡ ವೈರಲ್ ಆಗಿದ್ದು, ಈ ಫೋಟೋದಲ್ಲಿ ರಾಹುಲ್‍ಗೆ ಅಶೋಕ್ ಕೇಕ್ ತಿನ್ನಿಸುತ್ತಿದ್ದಾರೆ. ಇನ್ನು ರ್ಯಾಪರ್ ಚಂದನ್ ಶೆಟ್ಟಿ, ನಟಿ ಕಾರಣ್ಯ ರಾವ್ ಅವರ ಜೊತೆ ಕೂಡ ರಾಹುಲ್ ಫೋಟೋ ಕ್ಲಿಕಿಸಿಕೊಂಡಿದ್ದಾನೆ. ಇದನ್ನು ಓದಿ: ಖನ್ನಾ ಪೂಲ್ ಪಾರ್ಟಿಯಲ್ಲಿ ಮತ್ಸ್ಯಕನ್ಯೆಯಂತೆ ಈಜಿದ್ದ ಸಂಜನಾ

    ಈ ಹಿಂದೆ ರಾಹುಲ್ ಬಗ್ಗೆ ಮಾತನಾಡಿದ್ದ ನಟಿ ಸಂಜನಾ, ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡುತ್ತಾನೆ. ಜೇಕರ್ಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ರಾಹುಲ್ ಸಣ್ಣ ಪಾತ್ರ ಮಾಡಿದ್ದಾನೆ. ರಾಹುಲ್‍ನನ್ನು ನಾನು ರಾಖೀ ಭಾಯ್ ಅಂತಾನೇ ಕರೆಯುತ್ತೇನೆ. ನಾವು ತುಂಬಾ ಕ್ಲೋಸ್ ಫ್ರೆಂಡ್ ಅವನು ನನ್ನ ರಾಖೀ ಅಣ್ಣ. ರಾಹುಲ್ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಂದ ಹೊರಗಡೆ ಬರುತ್ತಾನೆ ಎಂದು ಸಂಜನಾ ತಿಳಿಸಿದ್ದರು.