Tag: ರಾಷ್ಟ್ರ ಧ್ವಜ

  • ಮಾನವ ಸರಪಳಿ: ಗಡಿ ಜಿಲ್ಲೆಯಲ್ಲಿ 1 ಕಿಮೀ ಧ್ವಜ, ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಅನಾವರಣ

    ಮಾನವ ಸರಪಳಿ: ಗಡಿ ಜಿಲ್ಲೆಯಲ್ಲಿ 1 ಕಿಮೀ ಧ್ವಜ, ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಅನಾವರಣ

    ಚಾಮರಾಜನಗರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ (International Democracy Day) ಅಂಗವಾಗಿ ಹಮ್ಮಿಕೊಂಡಿರುವ ಬೀದರ್‌ನಿಂದ (Bidar) ಚಾಮರಾಜನಗರದವರೆಗೆ (Chamarajnagar) ರಾಜ್ಯದ ಅತಿ ಉದ್ದದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಧ್ವಜವನ್ನು ಹಿಡಿದು ಏಕತೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದಾರೆ.

    ಚಾಮರಾಜನಗರ ಮತ್ತು ಮೈಸೂರು (Mysuru) ಗಡಿ ಭಾಗವಾದ ಮೂಗೂರು ಕ್ರಾಸ್‌ನಲ್ಲಿ ಆರಂಭಗೊಂಡ ಮಾನವ ಸರಪಳಿ ಚಾಮರಾಜನಗರದ ರಾಮಸಮುದ್ರದ ಅಂಬೇಡ್ಕರ್ ಪ್ರತಿಮೆ ಬಳಿ ಕೊನೆಗೊಂಡಿತು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮಾನವ ಸರಪಳಿ ಹಾದು ಹೋಗಿದ್ದ ಮಾರ್ಗದಲ್ಲಿ ಭಾರತದ ಒಂದೊಂದು ರಾಜ್ಯದ ಸಾಂಸ್ಕೃತಿಕ ಧಿರಿಸು ಧರಿಸಿ ವಿವಿಧೆತೆಯಲ್ಲಿ ಏಕತೆಯನ್ನು ಮೆರೆದಿದ್ದಾರೆ.ಇದನ್ನೂ ಓದಿ: ನಮ್ಮ ಸರ್ಕಾರ ಸಮಾನತೆ ಸಾಧಿಸುವ ದಾರಿಯಲ್ಲಿ ಸಾಗುತ್ತಿದೆ: ಸಿಎಂ

    ಮಾನವ ಸರಪಳಿಯ ಪ್ರಮುಖ ವೃತ್ತಗಳಲ್ಲಿ ಜಾನಪದ ನೃತ್ಯ ಪ್ರಸ್ತುತ ಪಡಿಸಲಾಯಿತು. ಸೋಲಿಗರ ಗೊರುಕನ, ಜೇನುಕುರುಬರ ನೃತ್ಯ, ಗೊರವರ ಕುಣಿತ, ಹುಲಿ ವೇಷ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಗಮನ ಸೆಳೆದವು. ಪ್ರಜಾಪ್ರಭುತ್ವದ ಸಂಭ್ರಮಾಚರಣೆ ಹಿನ್ನೆಲೆ ಸರ್ಕಾರಿ ನೌಕರರು, ಕಾಲೇಜಿನ ಉಪನ್ಯಾಸಕರು, ಸಾರ್ವಜನಿಕರು, ರೈತರು, ಕನ್ನಡಪರ ಹೋರಾಟಗಾರರು ಪ್ರತಿನಿಧಿಸಿದರು. ಮಹಿಳೆಯರು ಹಸಿರು ಸೀರೆ, ಪುರುಷರು ಬಿಳಿ ಪಂಚೆ, ಶರ್ಟ್, ಶಲ್ಯ ಧರಿಸಿ ಮಿಂಚಿದರು. ರೈತರು ಹಸಿರು ಟವೆಲ್, ಕನ್ನಡಪರ ಹೋರಾಟಗಾರರು ನಾಡ ಧ್ವಜ, ಹೋರಾಟಗಾರರು ನೀಲಿ ಶಲ್ಯ ಹೊದ್ದಿದ್ದರು. ರಾಮಸಮುದ್ರದಲ್ಲಿ 1 ಕಿಮೀ ಉದ್ದದ ಭಾರತ ಧ್ವಜ ಹಿಡಿದು ರಾಷ್ಟ್ರಗೀತೆ ಹಾಡಿದ್ದು ಎಲ್ಲರ ಮನ ಗೆದ್ದಿತು. ಗಡಿ ಜಿಲ್ಲೆ ಚಾಮರಾಜನಗರಲ್ಲಿ 25 ಕಿಮೀ ಉದ್ದದ ಮಾನವ ಸರಪಳಿ 19,700 ಮಂದಿ ಸೇರುತ್ತಾರೆ ಎನ್ನಲಾಗಿತ್ತು. ಆದರೆ, ಜಿಲ್ಲಾಡಳಿತದ ನಿರೀಕ್ಷೆ ಹುಸಿಯಾಗಿ ಮಾನವ ಸರಪಳಿ ಅಲ್ಲಲ್ಲಿ ನಿರೀಕ್ಷಿತ ಪ್ರಮಾಣದ ಜನರು ಸೇರದೇ ಇದ್ದದ್ದು ಕಂಡುಬಂದಿತು.ಇದನ್ನೂ ಓದಿ: ‘ಗಿಚ್ಚಿ ಗಿಲಿಗಿಲಿ’ ಫಿನಾಲೆಯಲ್ಲಿ ರಿವೀಲ್ ಆಗ್ತಿದೆ Bigg Boss ಬಿಗ್ ಅಪ್‌ಡೇಟ್- ಏನದು?

  • BRICS ಶೃಂಗಸಭೆ: ನೆಲದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕೈಗೆತ್ತಿಕೊಂಡು ಗೌರವ ತೋರಿದ ಮೋದಿ

    BRICS ಶೃಂಗಸಭೆ: ನೆಲದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕೈಗೆತ್ತಿಕೊಂಡು ಗೌರವ ತೋರಿದ ಮೋದಿ

    ಕೇಪ್‌ಟೌನ್: ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಕ್ಷಿಣ ಆಫ್ರಿಕಾದ (South Africa) ಜೋಹನ್ಸ್‌ಬಗ್‌ಗೆ (Johannesburg) ತೆರಳಿದ್ದಾರೆ. ಪ್ರವಾಸದಲ್ಲಿರುವ ಮೋದಿಯವರು ಭಾರತದ ತ್ರಿವರ್ಣ ಧ್ವಜಕ್ಕೆ (Tricolor) ಗೌರವ ತೋರಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

    ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ನಾಯಕರನ್ನು ಗ್ರೂಪ್ ಫ್ರೋಟೋ ಕ್ಲಿಕ್ಕಿಸಿಕೊಳ್ಳಲು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಅವರು ವೇದಿಕೆಯ ನೆಲದ ಮೇಲೆ ತಾವು ನಿಲ್ಲಬೇಕಾಗಿದ್ದ ಸ್ಥಳದಲ್ಲಿ ಪುಟ್ಟ ತ್ರಿವರ್ಣ ಧ್ವಜವನ್ನು ಗಮನಿಸಿದ್ದಾರೆ.

    ತಕ್ಷಣ ಮೋದಿ ಧ್ವಜದ ಮೇಲೆ ತಾವು ಕಾಲಿಡದಂತೆ ನೋಡಿಕೊಂಡು, ಪುಟ್ಟ ರಾಷ್ಟ್ರ ಧ್ವಜವನ್ನು ಕೈಗೆತ್ತಿಕೊಂಡು, ತಮ್ಮ ಜೇಬಿನಲ್ಲಿ ಇರಿಸಿಕೊಂಡರು. ಇದನ್ನು ಗಮನಿಸಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲೆ ರಾಮಾಫೋಸಾ ಕೂಡಾ ಮೋದಿಯವರನ್ನು ಅನುಸರಿಸಿ, ನೆಲದ ಮೇಲೆ ಇಡಲಾಗಿದ್ದ ದಕ್ಷಿಣ ಆಫ್ರಿಕಾದ ಧ್ವಜವನ್ನು ಎತ್ತಿಕೊಂಡರು. ಇದನ್ನೂ ಓದಿ: ಆ.26ಕ್ಕೆ ಬೆಂಗಳೂರಿಗೆ ಮೋದಿ – ಇಸ್ರೋ ಕೇಂದ್ರ ಕಚೇರಿಗೆ ಭೇಟಿ

    ಇದಾದ ಬಳಿಕ ಮೋದಿ ಅವರು ವೇದಿಕೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

    ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ರಾಷ್ಟ್ರಧ್ವಜಕ್ಕೆ ತೋರಿದ ಗೌರವದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಈಗ ಕರ್ನಾಟಕಕ್ಕೂ ಚಂದ್ರನಿಗೂ ನೇರ ಸಂಪರ್ಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಷ್ಟ್ರಕ್ಕಾಗಿ ಖಾದಿ, ಆದ್ರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್ : ಮೋದಿ ವಿರುದ್ಧ ರಾಹುಲ್ ಟೀಕೆ

    ರಾಷ್ಟ್ರಕ್ಕಾಗಿ ಖಾದಿ, ಆದ್ರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್ : ಮೋದಿ ವಿರುದ್ಧ ರಾಹುಲ್ ಟೀಕೆ

    ನವದೆಹಲಿ: ಪ್ರಧಾನಿ ಮೋದಿ ಅವರ ಮಾತುಗಳಿಗೂ ಮತ್ತು ಅವರು ಮಾಡುವ ಕೆಲಸಗಳಿಗೂ ಒಂದಕ್ಕೊಂದು ಹೊಂದಾಣಿಕೆಯೇ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ಶನಿವಾರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಖಾದಿ ಮಹತ್ವವನ್ನು ನೆನಪಿಸಿಕೊಳ್ಳುವ ಸಲುವಾಗಿ ಸಾಬರಮತಿ ನದಿ ತೀರದಲ್ಲಿಂದು ಆಯೋಜಿಸಿದ್ದ `ಖಾದಿ ಉತ್ಸವ’ದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಕನಸಿಗೆ ಖಾದಿ ಪ್ರಮುಖ ಶಕ್ತಿಯಾಗಿದೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಇದೀಗ ಈ ಹೇಳಿಕೆಗೆ ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

    ‘ಖಾದಿ ಫಾರ್ ನೇಷನ್’ ಆದರೆ ಚೈನೀಸ್ ಪಾಲಿಸ್ಟರ್ ರಾಷ್ಟ್ರಧ್ವಜಕ್ಕೆ. ಪ್ರಧಾನಿಯವರು ಆಡುವ ಮಾತಿಗೂ ಮತ್ತು ಮಾಡುವ ಕೆಲಸಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಿದವರಿಗೆ 5 ಸಾವಿರ ರೂ. ದಂಡ – ಶ್ರೀನಗರ ಕಾಲೇಜು ಆದೇಶ

    ರಾಷ್ಟ್ರಧ್ವಜವನ್ನು ಕೈಯಿಂದ ನೇಯ್ದು ಅಥವಾ ಯಂತ್ರದಿಂದ ತಯಾರಿಸಲಾಗುತ್ತದೆ. ಹತ್ತಿ / ಪಾಲಿಸ್ಟರ್ / ಉಣ್ಣೆ / ರೇಷ್ಮೆ ಖಾದಿ ಬಂಟಿಂಗ್‍ನಿಂದ ಮಾಡಲು ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವುದಕ್ಕೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿದೆ. ಮೊದಲು, ಯಂತ್ರದಿಂದ ತಯಾರಿಸಿದ ಮತ್ತು ಪಾಲಿಯೆಸ್ಟರ್ ಧ್ವಜಗಳನ್ನು ಬಳಸಲು ಅನುಮತಿ ನೀಡಲಾಗಿರಲಿಲ್ಲ. ಇದನ್ನೂ ಓದಿ: ಇಂತಹ ಸುರಂಗಗಳನ್ನು ನಿರ್ಮಿಸಬಹುದಾ?: ಗಡ್ಕರಿಗೆ ಆನಂದ್ ಮಹೀಂದ್ರಾ ಮನವಿ

    Live Tv
    [brid partner=56869869 player=32851 video=960834 autoplay=true]

  • ನಾನು ಕ್ರಿಶ್ಚಿಯನ್; ಧ್ವಜಾರೋಹಣ ಮಾಡಲ್ಲ: ಮುಖ್ಯ ಶಿಕ್ಷಕಿ

    ನಾನು ಕ್ರಿಶ್ಚಿಯನ್; ಧ್ವಜಾರೋಹಣ ಮಾಡಲ್ಲ: ಮುಖ್ಯ ಶಿಕ್ಷಕಿ

    ಚೆನ್ನೈ: ಸ್ವಾತಂತ್ರ್ಯೋತ್ಸವದಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಧ್ವಜಾರೋಹಣ ಮಾಡಲು ಹಾಗೂ ಧ್ವಜಕ್ಕೆ ನಮಿಸಲು ನಿರಾಕರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ತಮಿಳ್‌ ಸೆಲ್ವಿ ಈ ವರ್ಷ ನಿವೃತ್ತಿ ಹೊಂದಲಿದ್ದು, ಅವರಿಗೆ ಅಭಿನಂದಿಸುವ ಸಲುವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜೊತೆಗೆ ಧ್ವಜಾರೋಹಣವನ್ನು ನೆರವೇರಿಸಲು ಅವರಿಗೆ ತಿಳಿಸಲಾಗಿತ್ತು. ಆದರೆ ಮುಖ್ಯಶಿಕ್ಷಕಿ ತಮಿಳ್‌ ಸೆಲ್ವಿ ಅವರು, ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಾಯಕ ಮುಖ್ಯ ಶಿಕ್ಷಕಿಯೇ ಧ್ವಜಾರೋಹಣ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಬಗ್ಗೆ ಮುಖ್ಯ ಶಿಕ್ಷಕಿ ಮಾತನಾಡಿದ್ದು, ತಾವು ಯಾಕೋಬಾ ಕ್ರಿಶ್ಚಿಯನ್ ಆಗಿದ್ದಕ್ಕೆ ಧ್ವಜಾರೋಹಣ ಮಾಡಲಾಗುವುದಿಲ್ಲ. ಅಷ್ಟೇ ಅಲ್ಲದೇ ತಾನು ಧ್ವಜಕ್ಕೆ ಯಾವುದೇ ಅಗೌರವವನ್ನು ತೋರುತ್ತಿಲ್ಲ. ಆದರೆ ನಾನು ದೇವರಿಗೆ ಮಾತ್ರ ನಮಸ್ಕರಿಸುತ್ತೇನೆ. ಬೇರೆ ಯಾರಿಗೂ ನಮಸ್ಕರಿಸುವುದಿಲ್ಲ. ಆದ್ದರಿಂದ ನಾವು ಧ್ವಜಾರೋಹಣ ಮಾಡಲು ಸಹಾಯಕ ಶಿಕ್ಷಕರ ಸಹಾಯ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜನರನ್ನು ದಾರಿ ತಪ್ಪಿಸಬೇಡಿ: ಬಾಬಾ ರಾಮದೇವ್‌ ವಿರುದ್ಧ ದೆಹಲಿ ಹೈಕೋರ್ಟ್‌ ಕಿಡಿ

    ಘಟನೆಗೆ ಸಂಬಂಧಿಸಿ ಧರ್ಮಪುರಿಯ ಮುಖ್ಯ ಶಿಕ್ಷಣಾಧಿಕಾರಿಗಳಿಗೆ ಸ್ಥಳೀಯರು ದೂರನ್ನು ನೀಡಿದ್ದಾರೆ. ದೂರಿನನ್ವಯ ಈ ಹಿಂದಿನ ಸ್ವಾತಂತ್ರ್ಯೋತ್ಸವದಲ್ಲಿಯೂ ಮುಖ್ಯ ಶಿಕ್ಷಕಿಯು ರಜೆಯನ್ನು ತೆಗೆದುಕೊಂಡಿದ್ದರು. ತಮಿಳ್‌ ಸೆಲ್ವಿ ಅವರು ಸರ್ಕಾರಿ ಸಂಸ್ಥೆಯಲ್ಲಿ ಒಂದು ಧರ್ಮದ ಬಗ್ಗೆ ಒಲವು ಪ್ರದರ್ಶಿಸಿದ್ದಾರೆ ಜೊತೆಗೆ ಆಚರಣೆಗೆ ತಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಫಿಫಾ ಜೊತೆ 2 ಬಾರಿ ಸಭೆ ಮಾಡಲಾಗಿದೆ: ಸುಪ್ರೀಂಗೆ ಕೇಂದ್ರ

    Live Tv
    [brid partner=56869869 player=32851 video=960834 autoplay=true]

  • ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ

    ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ

    ನವದೆಹಲಿ: ಭಾರತ ತನ್ನ ಸ್ವಾತಂತ್ರ‍್ಯದ 75 ವರ್ಷಗಳನ್ನು ಪೂರೈಸಿದ್ದು, ಎಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸಿ ಸಂಭ್ರಮಿಸಲಾಗುತ್ತಿದೆ. ಈ ಕ್ಷಣಕ್ಕೆ ಇನ್ನೂ ಹೆಚ್ಚಿನ ವಿಶೇಷತೆ ನೀಡಲು ಭೂಮಿಯಿಂದ ಸುಮಾರು 30 ಕಿ.ಮೀ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿದೆ.

    ಸ್ಪೇಸ್ ಕಿಡ್ಜ್ ಇಂಡಿಯಾವು ಭೂಮಿಯಿಂದ ಸುಮಾರು 30 ಕಿ.ಮೀ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿದೆ. ಧ್ವಜವನ್ನು ಭೂಮಿಯಿಂದ ಸುಮಾರು 1,06,000 ಅಡಿ ಎತ್ತರಕ್ಕೆ ಬಲೂನ್‌ನಲ್ಲಿ ಕಳುಹಿಸಲಾಗಿದೆ. ಇದನ್ನೂ ಓದಿ: ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಹಾಗೂ ಐತಿಹಾಸಿಕ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ಸ್ಪೇಸ್ ಕಿಡ್ಜ್ ಇಂಡಿಯಾ ಬಾನಿನಲ್ಲಿ ಬಾವುಟವನ್ನು ಹಾರಿಸಿದೆ.

    ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆಯು ದೇಶಕ್ಕಾಗಿ ಯುವ ವಿಜ್ಞಾನಿಗಳನ್ನು ಸೃಷ್ಟಿಸುತ್ತದೆ ಹಾಗೂ ಪ್ರಪಂಚದಾದ್ಯಂತ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಈ ಸಂಸ್ಥೆ ಇತ್ತೀಚೆಗೆ ಉಪಗ್ರಹವನ್ನು ಲೋ ಅರ್ಥ್ ಆರ್ಬಿಟ್‌ಗೆ ಉಡಾಯಿಸಿತು. 75ನೇ ಸ್ವಾತಂತ್ರ್ಯವನ್ನು ಗುರುತಿಸಲು ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಸೇರಿ ಆಜಾದಿಸ್ಯಾಟ್ ಅನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಉಪಗ್ರಹವನ್ನು ಉಡಾವಣೆ ಮಾಡಲು ಬಳಸಿದ್ದ ಎಸ್‌ಎಸ್‌ಎಲ್‌ವಿ ರಾಕೆಟ್‌ನ ಮಿಷನ್ ವಿಫಲವಾಗಿತ್ತು. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ 5 ಹೊಸ ಯೋಜನೆಗಳನ್ನು ಘೋಷಣೆ ಮಾಡಿದ ಸಿಎಂ

    Live Tv

  • NDRF ತಂಡದಿಂದ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ

    NDRF ತಂಡದಿಂದ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ

    ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಅಭಿಯಾನದ ಜಾಗೃತಿಯನ್ನು ನಗರದ ಎನ್‍ಡಿಆರ್‌ಎಫ್‍ನ 10ನೇ ಬೆಟಾಲಿಯನ್ ತಂಡ ಮಾಡಿತು.

    ಎನ್‍ಡಿಆರ್‌ಎಫ್ 10 ನೇ ಬೆಟಾಲಿಯನ್‍ನ ಸಿ ಕಂಪನಿ, ಯಲಹಂಕದ ಮಾರುತಿ ನಗರದಲ್ಲಿ ರಾಷ್ಟ್ರ ಬಾವುಟದ ಬಗ್ಗೆ ಜಾಗೃತಿ ಮೂಡಿಸಿತು. ಎನ್‍ಡಿಆರ್‌ಎಫ್‍ನ ಅಸಿಸ್ಟೆಂಟ್ ಕಮಂಡೆಂಟ್ ಜೆ ಸೆಂಥಿಲ್ ಕುಮಾರ್ ನೇತೃತ್ವದಲ್ಲಿ ಈ ಜಾಗೃತಿ ಅಭಿಯಾನ ನಡೆಸಲಾಯಿತು. ಇದನ್ನೂ ಓದಿ: ವೆಂಟಿಲೇಟರ್‌ನಲ್ಲಿ ಸಲ್ಮಾನ್ ರಶ್ದಿ – ಆರೋಗ್ಯ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

    ಕೋಗಿಲು ಕ್ರಾಸ್, ಯಲಹಂಕ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಾಷ್ಟ್ರ ಬಾವುಟದ ಬಗ್ಗೆ ಜಾಗೃತಿ ಮೂಡಿಸಿ, ಮನೆ, ಮನೆಯಲ್ಲಿ ಧ್ವಜವನ್ನು ಹಾರಿಸುವಂತೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರ ಧ್ವಜ ಸುಟ್ಟ ಟಿಪ್ಪರ್ ಚಾಲಕ – ಹಿಡಿದು ಥಳಿಸಿದ ಸಾರ್ವಜನಿಕರು

    ರಾಷ್ಟ್ರ ಧ್ವಜ ಸುಟ್ಟ ಟಿಪ್ಪರ್ ಚಾಲಕ – ಹಿಡಿದು ಥಳಿಸಿದ ಸಾರ್ವಜನಿಕರು

    ಕೋಲಾರ: ಕನ್ನಡ ರಾಜ್ಯೋತ್ಸವದೊಂದೆ ರಾಷ್ಟ್ರ ಧ್ವಜ ಸುಟ್ಟು ಅಪಮಾನವೆಸಿಗಿದ್ದ ಟಿಪ್ಪರ್ ಚಾಲಕನಿಗೆ ಸಾರ್ವಜನಿಕರು ಥಳಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಗ್ರಾಮದ ತಿಮ್ಮಸಂದ್ರ ಬಳಿ ಉತ್ತರ ಭಾರತ ಮೂಲದ ಟಿಪ್ಪರ್ ಲಾರಿ ಡ್ರೈವರ್ ಸತ್ಯೇಂದ್ರ ಕುಮಾರ್ ಯಾದವ್ ರಾಷ್ಟ್ರ ಧ್ವಜಕ್ಕೆ ಅಪಮಾನವೆಸಿಗಿದ್ದ ಕಿಡಿಗೇಡಿ. ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಅಪಮಾನವೆಸಗಿದ್ದ ಕಿಡಿಗೇಡಿ ಕೈಗೆ ರಾಷ್ಟ್ರ ಧ್ವಜ ಮತ್ತು ಕನ್ನಡ ಧ್ವಜವನ್ನು ಕೊಟ್ಟು ಮೆರವಣೆಗೆ ಮಾಡಿದ ಸ್ಥಳೀಯರು ಭಾರತಾಂಭೆಗೆ ಜಯಕಾರಗಳನ್ನು ಹಾಕಿಸಿದ್ದಾರೆ. ಸ್ಥಳಕ್ಕೆ ಮಾಸ್ತಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಕಿಡಿಗೇಡಿಯನ್ನು ವಶಕ್ಕೆ ಪಡೆದಿದ್ದಾರೆ. ಸಧ್ಯ ಆರೋಪಿ ರಾಷ್ಟ್ರಧ್ವಜವನ್ನು ಸುಟ್ಟ ಹಿನ್ನೆಲೆಯಲ್ಲಿ ಆತನ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆದು ಹೆಚ್ಚಿನ ವಿಚಾರಣೆಯನ್ನು ಪೊಲೀಸರು ಕೈಗೊಂಡಿದ್ದಾರೆ.

  • ಉಲ್ಟಾ ಹಾರಾಡಿದ ಸಚಿವರ ವಾಹನದ ಮುಂಭಾಗದಲ್ಲಿ ಹಾಕಿದ್ದ ರಾಷ್ಟ್ರಧ್ವಜ!

    ಉಲ್ಟಾ ಹಾರಾಡಿದ ಸಚಿವರ ವಾಹನದ ಮುಂಭಾಗದಲ್ಲಿ ಹಾಕಿದ್ದ ರಾಷ್ಟ್ರಧ್ವಜ!

    ಹಾವೇರಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ ಅವರ ಸರ್ಕಾರಿ ವಾಹನದ ಧ್ವಜ ಉಲ್ಟಾ ಹಾರಿಡಿದ ಘಟನೆ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ನಡೆದಿದೆ.

    ಹಾವೇರಿ ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಸಚಿವ ಎನ್.ಮಹೇಶ ಅವರ ವಾಹನ ನಿಂತಿತ್ತು. ಬೆಳಗ್ಗೆ ವಾಹನದ ಮೇಲೆ ಧ್ವಜ ಹಾಕಿದ್ದಾರೆ. ಈ ವೇಳೆ ಧ್ವಜ ಹಾಕುವಾಗ ಹಸಿರು ಬಣ್ಣ ಮೇಲೆ ಬರುವಂತೆ ಉಲ್ಟಾ ಹಾಕಿದ್ದಾರೆ. ಆದರೆ ಶಿಕ್ಷಣ ಇಲಾಖೆ ಸಿಬ್ಬಂದಿ ಸೇರಿದಂತೆ ಕಾರ್ಯಕರ್ತರು ಮತ್ತು ಪೊಲೀಸರು ವಾಹನ ಮುಂದೆ ಓಡಾಡಿದರು ಉಲ್ಟಾ ಹಾರಿದ ಧ್ವಜವನ್ನ ಗಮನಿಸಲಿಲ್ಲ. ಇದನ್ನೂ ಓದಿ: ವಿಜಯಪುರದ ಉಸ್ತುವಾರಿ ಸಚಿವರ ಎದುರಲ್ಲೇ ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ!

    ಕೇಸರಿ, ಬಿಳಿ, ಹಸಿರಿನ ಬದಲಾಗಿ ಹಸಿರು, ಬಿಳಿ ಕೇಸರಿಯಾಗಿ ಧ್ವಜ ಹಾರಾಡುತ್ತಿತ್ತು. ಇದು ಮಾಧ್ಯಮದವರ ಕಣ್ಣೀಗೆ ಬಿದ್ದಿದ್ದು, ಚಿತ್ರೀಕರಣ ಮಾಡಲು ಮುಂದಾಗಿದ್ರು. ಈ ವೇಳೆ ಇದು ಸಚಿವರ ಕಣ್ಣಿಗೆ ಬಿದ್ದಿದೆ. ಕೂಡಲೇ ಸಚಿವರ ಚಾಲಕ ಜಬಿ ಕಾರಿನಿಂದ ಇಳಿದು ರಾಷ್ಟ್ರಧ್ವಜವನ್ನ ಸರಿಪಡಿಸಿದ್ದಾರೆ.

    ಈ ಹಿಂದೆ ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕಾಗಿ ಮನಗೂಳಿ ಅವರು ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ವಿದೇಶಿ ಅಧಿಕಾರಿಗಳ ಜೊತೆಗೆ ಚರ್ಚೆ ಸಂದರ್ಭದಲ್ಲಿ ಟೇಬಲ್ ಮೇಲೆ ತ್ರಿವರ್ಣ ಧ್ವಜವನ್ನು ತಲೆ ಕೆಳಗಾಗಿ ಇಡಲಾಗಿತ್ತು. ಚರ್ಚೆ ನಡೆಸುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಷ್ಟ್ರಧ್ವಜ ಹೇಗೆ ತಯಾರಾಗುತ್ತೆ? ಯಾವ ಹತ್ತಿ ಬಳಸುತ್ತಾರೆ? ವಿಡಿಯೋ ನೋಡಿ

    ರಾಷ್ಟ್ರಧ್ವಜ ಹೇಗೆ ತಯಾರಾಗುತ್ತೆ? ಯಾವ ಹತ್ತಿ ಬಳಸುತ್ತಾರೆ? ವಿಡಿಯೋ ನೋಡಿ

    ಹುಬ್ಬಳ್ಳಿ: ಇಷ್ಟು ದಿನ ಧಾರವಾಡದ ಗರಗದಲ್ಲಿ ರಾಷ್ಟ್ರಧ್ವಜವನ್ನು ತಯಾರಿಸಲಾಗುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡಡ್ರ್ಸ್(ಬಿಐಎಸ್) ಮಾನ್ಯತೆ ಪಡೆದ ರಾಷ್ಟ್ರಧ್ವಜವನ್ನ ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ತಯಾರಿಸಲಾಗುತ್ತಿದೆ.

    ನಮ್ಮ ರಾಷ್ಟ್ರಧ್ವಜ ತಯಾರಾಗೋದು ಮಹಿಳೆಯರ ಕೈಯಲ್ಲಿ. 50ಕ್ಕೂ ಹೆಚ್ಚು ಮಹಿಳೆಯರು ವರ್ಷಪೂರ್ತಿ ಧ್ವಜ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    1957ರಲ್ಲಿ ಸಾತಂತ್ರ್ಯ ಹೋರಾಟಗಾರ ವೆಂಕಟೇಶ ಮಾಗಡಿ ಸ್ಥಾಪಿಸಿದ ಈ ಖಾದಿ ಕೇಂದ್ರ ಈಗ ದೇಶದ ಹೆಮ್ಮೆಯ ರಾಷ್ಟ್ರಧ್ವಜ ತಯಾರಿಸೋ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ತಯಾರಾಗೋ ಗುಣಮಟ್ಟದ ಖಾದಿ ಬಟ್ಟೆ ನೋಡಿ 2006 ಮತ್ತು 2007ರಲ್ಲಿ ಕೇಂದ್ರ ಸರ್ಕಾರ ಬಿಐಎಸ್ ಮಾನ್ಯತೆ ನೀಡಿದೆ.

    ಧ್ವಜ ಹೇಗೆ ತಯಾರಾಗುತ್ತೆ?: ಮೊದಲು ಸ್ಥಳೀಯವಾಗಿ ಬೆಳೆಯುವ ಜೈದರ್ ಮತ್ತು ಎಲ್‍ಎಲ್‍ಆರ್ ತಳಿಯ ಹತ್ತಿಯನ್ನೇ ಬಳಸಲಾಗುತ್ತದೆ. ಈ ಹತ್ತಿಯಿಂದ ತೆಗೆದ 42 ಎಳೆ ಮಾಡಿದ ದಾರದಿಂದ ರಾಷ್ಟ್ರ ಧ್ವಜದ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಒಂದು ಅಡಿ ದಾರ 28 ಗ್ರಾಂ ನಿಂದ 29 ಗ್ರಾಂ ಮೀರಬಾರದು. ಒಂದು ಸೆಂಟಿ ಮೀಟರ್ ಬಟ್ಟೆ 42 ದಾರದ ಎಳೆಗಳನ್ನು ಮಾತ್ರ ಹೊಂದಿರಬೇಕು. 1 ಮೀಟರ್ ಬಟ್ಟೆ 205 ಗ್ರಾಂ ತೂಕ ಮಾತ್ರ ಹೊಂದಿರಬೇಕು. ಇಷ್ಟೆಲ್ಲಾ ನಿಯಾಮಾವಳಿಗಳನ್ನು ಪಾಲಿಸಿ ನಮ್ಮ ರಾಷ್ಟ್ರ ಧ್ವಜವನ್ನು ತಯಾರಿಸಲಾಗುತ್ತದೆ.

    1984 ರಿಂದಲೂ ಧಾರವಾಡ ತಾಲೂಕಿನ ಗರಗದಲ್ಲಿ ಧ್ವಜವನ್ನು ತಯಾರು ಮಾಡಲಾಗುತಿತ್ತು. ಈಗ ಕೇವಲ ಧ್ವಜಕ್ಕೆ ಬೇಕಾಗುವ ಬಟ್ಟೆಯನ್ನು ತಯಾರಿಸಲು ಮಾತ್ರ ಮಾನ್ಯತೆ ನೀಡಿದ್ದು, ಬೆಂಗೇರಿಯಲ್ಲೇ 9 ಬಗೆಯ ಧ್ವಜಗಳನ್ನು ತಯಾರು ಮಾಡಲಾಗುತ್ತಿದೆ. ಹೀಗೆ ಇಲ್ಲಿ ತಯಾರಾದ ರಾಷ್ಟ್ರ ಧ್ವಜ ದೇಶದೆಲ್ಲೆಡೆ ಗರ್ವದಿಂದ ಹಾರಾಡುತ್ತದೆ. ಎಲ್ಲಾ ವಿಧಾನಸಭೆ, ಸರ್ಕಾರಿ ಕಚೇರಿಗಳು ಸೇರಿದಂತೆ ವಿದೇಶಿ ರಾಯಭಾರಿ ಕಚೇರಿಗಳಲ್ಲೂ ಹಾರಾಡುತ್ತೆ ಅನ್ನೋದೇ ಹೆಮ್ಮೆಯ ವಿಚಾರವಾಗಿದೆ.