ಬೆಂಗಳೂರು/ಉಡುಪಿ: ಇಲ್ಲಿನ ಖಾಸಗಿ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ (Udupi Video Case) ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಆರೋಪಿ ಸ್ಥಾನದಲ್ಲಿರುವ ವಿದ್ಯಾರ್ಥಿನಿಯರ ಮೊಬೈಲ್ ಅನ್ನು ಗುಜರಾತ್‌ನ ವಿಧಿವಿಜ್ಞಾನ ಪ್ರಯೋಗಾಲಯ (FSL)ಗೆ ರವಾನೆ ಮಾಡಲಾಗಿದೆ.
ಉಡುಪಿ ಖಾಸಗಿ ಕಾಲೇಜೊಂದರ ಲೇಡಿಸ್ ಟಾಯ್ಲೆಟ್‌ನಲ್ಲಿ ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿದ್ದು, ಮೊಬೈಲ್‌ನಲ್ಲಿ ಯಾವುದೇ ವಿಡಿಯೋ, ಫೋಟೋಗಳು ಲಭ್ಯವಾಗಿಲ್ಲ. ಪೊಲೀಸರು ವಶಕ್ಕೆ ಪಡೆದಿದ್ದ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನೆ ಮಾಡಲಾಗಿತ್ತು. ಆದ್ರೆ ಈವರೆಗೆ ಯಾವುದೇ ಫಲಿತಾಂಶ ಬಂದಿಲ್ಲ. ಹಾಗಾಗಿ ಗುಜರಾತ್‌ನ ಪ್ರಯೋಗಾಲಯಕ್ಕೆ ಮೊಬೈಲ್‌ಗಳನ್ನ ರವಾನಿಸಲಾಗಿದೆ. ಇದನ್ನೂ ಓದಿ: ಉಡುಪಿ ಕೇಸಲ್ಲಿ ಸಂತ್ರಸ್ತೆ, ಆರೋಪಿಗಳ ವಿಚಾರಣೆ- ಪ್ರಕರಣಕ್ಕೆ ಕೇರಳ ಲಿಂಕ್ ಕೊಟ್ಟು ಬಿಜೆಪಿ ಪ್ರತಿಭಟನೆ
ಈ ನಡುವೆ ವಿದ್ಯಾರ್ಥಿನಿಯರು ಐ-ಫೋನ್ (iPhone) ಅಲ್ಲಿ ದೃಶ್ಯಾವಳಿ ಸೆರೆ ಹಿಡಿದಿದ್ರು ಎಂದೂ ಹೇಳಲಾಗುತ್ತಿದೆ. ಮೊಬೈಲ್‌ನಲ್ಲಿ ಡಿಲೀಟ್ ಮಾಡಿದ್ದರೂ ಐ-ಕ್ಲೌಡ್‌ನಲ್ಲಿ ದೃಶ್ಯಾವಳಿ ಇರುತ್ತೆ. ಕೋರ್ಟ್ ನ ಅನುಮತಿ ಪಡೆದು, ಸಂಬಂಧಪಟ್ಟ ಮೊಬೈಲ್ ಕಂಪನಿಯಿಂದ ಮಾಹಿತಿ ಹೊರ ತೆಗೆಯಬಹುದು ಎಂದು ತಜ್ಞರು ಹೇಳಿದ್ದಾರೆ. ಸದ್ಯ ಮೊಬೈಲ್‌ನ ಎಫ್‌ಎಸ್‌ಎಲ್ ರಿಟ್ರೀವ್ ಮಾಡ್ತಾರಾ? ಮೊಬೈಲ್‌ನಲ್ಲಿ ದೃಶ್ಯಾವಳಿ ಇದ್ಯಾ? ಅನ್ನೋದು ತನಿಖೆಯ ಕುತೂಹಲ ಆಗಿದೆ. ಈಗಾಗಲೇ ಆರೋಪಿತ ಯುವತಿಯರಿಂದ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರು/ಉಡುಪಿ: ರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಉಡುಪಿ ಕಾಲೇಜಿನ (Udupi College) ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದೆ.
ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ (Mobile Video Recording) ಮಾಡಿದ್ದಾರೆ ಎನ್ನಲಾಗುತ್ತಿದೆಯಾದರೂ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ, ಫೋಟೋಗಳು ಲಭ್ಯವಾಗಿಲ್ಲ.
ಹೌದು. ಈಗಾಗಲೇ ಕಾಲೇಜು ಆಡಳಿತ ಮಂಡಳಿಯ ಮೂಲಗಳ ಪ್ರಕಾರ, ಮೊಬೈಲ್‌ನಲ್ಲಿ ವಿಡಿಯೋ ಡಿಲೀಟ್ ಮಾಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು ಎನ್ನಲಾಗ್ತಿದೆ. ಪೊಲೀಸರು ವಶಕ್ಕೆ ಪಡೆದಿರೋ ಮೊಬೈಲ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನೆ ಮಾಡಲಾಗಿದೆ. FSL ಮೊಬೈಲ್ ಅನ್ನು ರಿಟ್ರೀವ್ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ರಿಟ್ರೀವ್ ಆಗದೇ ಇದ್ದರೆ ಕ್ಲೌಡ್‌ನಿಂದ ಮಾಹಿತಿ ಕಲೆಹಾಕಬಹುದು. ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ವೀಡಿಯೋ ಶೂಟಿಂಗ್ ಯಾವ ರೀತಿ ಪ್ರ್ಯಾಂಕ್: ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ ಪ್ರಶ್ನೆ
ವಿದ್ಯಾರ್ಥಿನಿಯರು ಐ-ಫೋನ್ (iPhone) ಅಲ್ಲಿ ದೃಶ್ಯಾವಳಿ ಸೆರೆ ಹಿಡಿದಿದ್ರು ಎನ್ನಲಾಗಿದೆ. ಮೊಬೈಲ್‌ನಲ್ಲಿ ಡಿಲೀಟ್ ಮಾಡಿದ್ರೂ ಕೂಡ ಐ-ಕ್ಲೌಡ್‌ನಲ್ಲಿ ದೃಶ್ಯಾವಳಿ ಇರುತ್ತೆ. ಕೋರ್ಟ್ ನ ಅನುಮತಿ ಪಡೆದು, ಸಂಬಂಧ ಪಟ್ಟ ಮೊಬೈಲ್ ಕಂಪನಿಯಿಂದ ಮಾಹಿತಿ ಹೊರ ತೆಗೆಯಬಹುದು. ಸದ್ಯ ಮೊಬೈಲ್‌ನ ಎಫ್‌ಎಸ್‌ಎಲ್ ರಿಟ್ರೀವ್ ಮಾಡ್ತಾರಾ? ಮೊಬೈಲ್‌ನಲ್ಲಿ ದೃಶ್ಯಾವಳಿ ಇದ್ಯಾ? ಅನ್ನೋದು ತನಿಖೆಯ ಕುತೂಹಲ ಆಗಿದೆ. ಇದನ್ನೂ ಓದಿ: ಲೇಡಿಸ್ ಟಾಯ್ಲೆಟ್‌ನಲ್ಲಿ ಸ್ಪೈ ಕ್ಯಾಮೆರಾ ಇಟ್ಟಿಲ್ಲ, ಮೊಬೈಲ್‌ನಲ್ಲಿ ಫೋಟೋ-ವೀಡಿಯೋ ಸಿಕ್ಕಿಲ್ಲ: ಖುಷ್ಬು ಸುಂದರ್
ನಿನ್ನೆಯಷ್ಟೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ (Khusboo Sundar), ಲೇಡಿಸ್ ಟಾಯ್ಲೆಟ್‌ನಲ್ಲಿ ಯಾವುದೇ ಸ್ಪೈ ಕ್ಯಾಮೆರಾ ಇಟ್ಟಿಲ್ಲ. ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿ ಯಾವುದೇ ಫೋಟೋ, ವೀಡಿಯೋಗಳು ಸಿಕ್ಕಿಲ್ಲ. ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಫೇಕ್ ವೀಡಿಯೋ. ಇಂತಹ ಫೇಕ್ ವೀಡಿಯೋಗಳನ್ನ ಜನರು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದರು.
– ಫೇಕ್ ವೀಡಿಯೋಗಳನ್ನ ಉಡುಪಿ ವಿದ್ಯಾರ್ಥಿನಿಯರ ವೀಡಿಯೋ ಅಂತಾ ಶೇರ್ ಮಾಡ್ಬೇಡಿ
ಉಡುಪಿ: ಖಾಸಗಿ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ಯಾವುದೇ ಸ್ಪೈ ಕ್ಯಾಮೆರಾ (Spy Camera) ಇಟ್ಟಿಲ್ಲ. ವಿದ್ಯಾರ್ಥಿನಿಯರ (Students) ಮೊಬೈಲ್‌ನಲ್ಲಿ ಯಾವುದೇ ಫೋಟೋ, ವೀಡಿಯೋಗಳು ಸಿಕ್ಕಿಲ್ಲ. ಫೇಕ್ ವೀಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇಂತಹ ಫೇಕ್ ವೀಡಿಯೋಗಳನ್ನ ಜನರು ಹಂಚಿಕೊಳ್ಳಬೇಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ (Khusboo Sundar) ಮನವಿ ಮಾಡಿದ್ದಾರೆ.
ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ (Video Recording) ವಿವಾದ ಸಂಬಂಧ `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಅವರು, ನಾವು ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳನ್ನ ಭೇಟಿಯಾಗುತ್ತೇವೆ. ಫೇಕ್ ವೀಡಿಯೋಗಳು ಹರಿದಾಡುತ್ತಿವೆ. ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿ ಯಾವುದೇ ಫೋಟೋ, ವೀಡಿಯೋಗಳು ಸಿಕ್ಕಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ನೀಡುವಂತೆ ಪೊಲೀಸರಿಗೆ ತಿಳಿಸಿದ್ದೇವೆ. ಫೇಕ್ ವೀಡಿಯೋಗಳನ್ನ ಉಡುಪಿ ವಿದ್ಯಾರ್ಥಿನಿಯರ ವೀಡಿಯೋ ಅಂತಾ ಶೇರ್ ಮಾಡಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಡುಪಿ ಹೆಸರಿನಲ್ಲಿ ಹರಿದಾಡುತ್ತಿರುವ ಎಲ್ಲಾ ವಿಡಿಯೋಗಳು ಸುಳ್ಳು: ಖುಷ್ಬು ಸುಂದರ್
ರಾಜಕೀಯ ಆರೋಪಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ನಾನಿಲ್ಲಿಗೆ ಬಂದಿದ್ದೇನೆ. ಘಟನೆ ಯಾಕೆ ನಡೀತು? ಅನ್ನೋದು ಮುಖ್ಯ. ಉಡುಪಿಯ ಶೌಚಾಲಯದಲ್ಲಿ ಚಿತ್ರೀಕರಣ ಪ್ರಕರಣದ ಬಗ್ಗೆ ಪೊಲೀಸರ ತನಿಖೆಯ ಮಾಹಿತಿ ಪಡೆದುಕೊಂಡಿದ್ದೇನೆ. ಆಡಳಿತ ಮಂಡಳಿಯಿಂದಲೂ ಮಾಹಿತಿ ಪಡೆದುಕೊಳ್ಳುತ್ತೇವೆ. ಏನು ತಪ್ಪಾಗಿದೆ..? ಎಲ್ಲಿ ತಪ್ಪಾಗಿದೆ..? ಅನ್ನೋದನ್ನ ಪತ್ತೆ ಮಾಡುತ್ತೇವೆ. ಅದಕ್ಕೂ ಮುನ್ನ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಪೊಲೀಸರಿಂದ 40 ಗಂಟೆ ತಪಾಸಣೆ:
ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದು ಫೇಕ್ ವೀಡಿಯೋಗಳು. ಯಾವುದೇ ಸ್ಪೈ ಕ್ಯಾಮೆರಾ ಟಾಯ್ಲೆಟ್‌ನಲ್ಲಿ ಇಟ್ಟಿಲ್ಲ. ಪೊಲೀಸರು ಸತತ 40 ಗಂಟೆಗಳ ಕಾಲ ಮೊಬೈಲ್ ತಪಾಸಣೆ ಮಾಡಿದ್ದಾರೆ. ಎಫ್‌ಎಸ್‌ಎಲ್ ವಿಭಾಗ ತಪಾಸಣೆ ಮಾಡಿ ರಿಪೋರ್ಟ್ ಕೊಡಲಿದೆ. ಅಲ್ಲಿವರೆಗೆ ಫೇಕ್ ವೀಡಿಯೋ ಶೇರ್ ಮಾಡೋದನ್ನ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ವಿವಾದ – ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ನಾನು ಪಕ್ಷದ ಪರವಾಗಿ ಬಂದಿಲ್ಲ:
ರಾಜಕೀಯ ಪಕ್ಷಗಳಿಗೆ ಏನು ಬೇಕಾದ್ರೂ ಹೇಳುವ ಸ್ವಾತಂತ್ರ‍್ಯ ಇದೆ, ಪ್ರತಿಭಟನೆ ಮಾಡಲು ಹಕ್ಕಿದೆ. ಆದ್ರೆ ನಾನು ರಾಜಕೀಯ ಪಕ್ಷದ ಸದಸ್ಯಯಾಗಿ ಬಂದಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ (Congress-BJP) ಪರ-ವಿರುದ್ಧವಾಗಿ ಬಂದಿಲ್ಲ. ಈ ಪ್ರಕರಣದಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ದಾಖಲೆಗಳು, ಹೇಳಿಕೆಗಳು ಸಿಕ್ಕಾಗ ಮಾತ್ರ ತನಿಖೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಉಡುಪಿ: ಖಾಸಗಿ ಕಾಲೇಜಿನ ಶೌಚಾಲಯದಲ್ಲಿ (Washroom) ವಿಡಿಯೋ (Video) ಚಿತ್ರೀಕರಿಸಿದ ಪ್ರಕರಣ ತನಿಖೆಗೆ ರಾಷ್ಟ್ರೀಯ ಮಹಿಳಾ ಆಯೋಗ (National Commission for Women) ಎಂಟ್ರಿ ಕೊಟ್ಟಿದೆ. ದಕ್ಷಿಣ ಭಾರತದ ಮಹಿಳಾ ಸದಸ್ಯೆ ಖುಷ್ಬು ಸುಂದರ್ (Khushboo Sundar) ಉಡುಪಿಗೆ (Udupi) ಆಗಮಿಸಿದ್ದು, ಮೊದಲ ದಿನ ಇಡೀ ಪ್ರಕರಣದ ಸಮಗ್ರ ಮಾಹಿತಿಯನ್ನು ಉಡುಪಿಯ ಎಸ್‌ಪಿ ಹಾಗೂ ಡಿಸಿಯಿಂದ ಪಡೆದುಕೊಂಡಿದ್ದಾರೆ.
ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸಿದ ವಿಚಾರ ರಾಜ್ಯ, ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಎಫ್‌ಐಆರ್ (FIR) ದಾಖಲಿಸಿ ತನಿಖೆಯನ್ನು ಶುರು ಮಾಡಿದ್ದಾರೆ. ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗದ ದಕ್ಷಿಣ ಭಾರತದ ಸದಸ್ಯೆ ಖುಷ್ಬು ಸುಂದರ್ ಉಡುಪಿಗೆ ಆಗಮಿಸಿದ್ದು, ಪ್ರಕರಣದ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಹೆಸರಿನಲ್ಲಿ ಹರಿದಾಡುತ್ತಿರುವ ಎಲ್ಲಾ ವಿಡಿಯೋಗಳು ಸುಳ್ಳು ಎಂದಿದ್ದಾರೆ. ಇದನ್ನೂ ಓದಿ: ಸೌಜನ್ಯ ಕೇಸ್ ಮರು ತನಿಖೆ ನಡೆಸಿ: ಸಿಎಂಗೆ ಕುಟುಂಬ ಸದಸ್ಯರ ಮನವಿ
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಘಟನೆ ಹಿಂದೆ ಯಾವುದೋ ಒಂದು ಬಿಗ್ ಸ್ಟೋರಿ ಇದೆ ಎಂದು ಯಾರೂ ಕಲ್ಪಿಸುವ ಅಗತ್ಯ ಇಲ್ಲ. ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಇರುವುದರಿಂದ ಸರಿಯಾದ ಹಾದಿಯಲ್ಲಿ ತನಿಖೆ ನಡೆಯುತ್ತದೆ. ರಾಜಕೀಯ ಒತ್ತಡ, ಕೋಮು ಪ್ರಭಾವ ಇಲ್ಲದೆ ರಾಷ್ಟ್ರೀಯ ಮಹಿಳಾ ಆಯೋಗ ತನಿಖೆ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಇಲ್ಲಿದ್ದುಕೊಂಡೇ ಹೆಚ್‌ಡಿಕೆ ಏನೂ ಮಾಡಲ್ಲ, ಸಿಂಗಾಪುರಕ್ಕೆ ಹೋಗಿ ಏನು ಮಾಡುತ್ತಾರೆ: ಬಿ.ನಾಗೇಂದ್ರ ಲೇವಡಿ
ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೊಬೈಲ್‌ಗಳನ್ನು ಪೊಲೀಸರು ರೆಟ್ರೀವ್ ಮಾಡಿದ್ದಾರೆ. 40 ಗಂಟೆಗಳ ಕಾಲ ರೆಟ್ರೀವ್ ಮಾಡಿದರೂ ಏನು ಪತ್ತೆಯಾಗಿಲ್ಲ. ಮೂರು ಮೊಬೈಲ್‌ಗಳ ಡೇಟಾ ಸಂಗ್ರಹ ಮಾಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಬೇಕಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಾಕ್ಷ್ಯ ಲಭ್ಯವಾದರೆ ವಿಡಿಯೋ ಬಗ್ಗೆ ಸ್ಪಷ್ಟತೆ ಸಿಗಬಹುದು ಎಂದರು. ಇದನ್ನೂ ಓದಿ: ಮುಸ್ಲಿಂ ಯುವಕ, ಯುವತಿಯರನ್ನು ಬಚಾವ್ ಮಾಡಲು ಪ್ರಕರಣ ಮುಚ್ಚಿಡಲಾಗ್ತಿದ್ಯಾ – ಮುತಾಲಿಕ್ ಪ್ರಶ್ನೆ
ಸೂಕ್ತ ಸಾಕ್ಷಿ ಸಿಗದೇ ಹೋದರೆ ಚಾರ್ಜ್‌ಶೀಟ್ ಮಾಡಲು ಸಾಧ್ಯವಿಲ್ಲ. ಸಾಕ್ಷ್ಯವಿಲ್ಲದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸದ್ಯ ಆ ವಿದ್ಯಾರ್ಥಿನಿಯರನ್ನು ನಾವು ಆರೋಪಿತರು ಎಂದು ಕರೆಯಬಹುದು ಅಷ್ಟೇ. ಈ ಪ್ರಕರಣದಲ್ಲಿ ಭಾಗಿಯಾದ ಮೂರು ವಿದ್ಯಾರ್ಥಿನಿಯರ ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಟೆರರ್ ಲಿಂಕ್ ಇದೆ ಎಂದು ವಾಟ್ಸಪ್ ಸಂದೇಶಗಳು ಹರಿದಾಡುತ್ತಿವೆ. ಪ್ರಕರಣದ ಹಿಂದೆ ಅನೇಕ ಸಂಶಯಾಸ್ಪದ ಸಂಗತಿಗಳನ್ನು ಹರಿಯ ಬಿಡಲಾಗಿದೆ. ಘಟನೆಯ ಹಿಂದೆ ಬಿಗರ್ ಥಿಯರಿ ಅಥವಾ ಬಿಗ್ಗರ್ ಸ್ಟೋರಿ ಇದೆ ಎಂದು ಸದ್ಯ ಭಾವಿಸುವುದು ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ವೀಡಿಯೋ ಶೂಟಿಂಗ್ ಯಾವ ರೀತಿ ಪ್ರ್ಯಾಂಕ್: ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ ಪ್ರಶ್ನೆ
ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಅಗತ್ಯವಿಲ್ಲ. ಮಹಿಳಾ ಆಯೋಗ ಮತ್ತು ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಒಳಗೊಂಡಿವೆ. ಸರಿಯಾದ ಹಾದಿಯಲ್ಲಿ ಪ್ರಕರಣದ ತನಿಖೆ ಆಗಬೇಕು. ತನಿಖೆಗೆ ಮೊದಲೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ. ಮಹಿಳಾ ಆಯೋಗ ಪ್ರತಿಭಟನೆ ಮಾಡಲು ಇರುವ ಸಂಸ್ಥೆಯಲ್ಲ. ಮಹಿಳಾ ಆಯೋಗ ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಲು ಬಂದಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಮಹಿಳೆಯರ ರಕ್ಷಣೆಗೆ ಇರುವ ಸಂಸ್ಥೆ ಎಂದರು. ಇದನ್ನೂ ಓದಿ: ವಿಡಿಯೋ ಚಿತ್ರೀಕರಣ ಏಳೆಂಟು ತಿಂಗಳಿಂದ ನಡೆಯುತ್ತಿದೆ, ಯುವಕರು ಭಾಗಿ: ಸುರೇಶ್ ನಾಯಕ್
ಉಡುಪಿ ಎಸ್‌ಪಿ ಅಕ್ಷಯ್ ಮಚ್ಚೀಂದ್ರ ಹಾಕೆ, ಡಿಸಿ ಡಾ.ವಿದ್ಯಾಕುಮಾರಿ, ಎಡಿಸಿ ವೀಣಾ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿಯನ್ನು ಖುಷ್ಬು ಪಡೆದುಕೊಂಡಿದ್ದಾರೆ. ಸಂತ್ರಸ್ತೆ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿ ಜೊತೆ ಖುಷ್ಬು ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲ ಕುಂದರ್, ಖುಷ್ಬು ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದು, ಕೆಲ ದಾಖಲೆಗಳನ್ನು ನೀಡಿದ್ದಾರೆ. ಮುಂದಿನ ಎರಡು ದಿನ ಖುಷ್ಬು ಉಡುಪಿಯಲ್ಲಿ ಇರಲಿದ್ದು, ಸಮಗ್ರ ಮಾಹಿತಿ ಮತ್ತು ದಾಖಲೆಗಳ ಸಂಗ್ರಹ ಮಾಡಲಿದ್ದಾರೆ. ಇದನ್ನೂ ಓದಿ: ಯಾವ ಕೋಮಿನ ಬಗ್ಗೆಯೂ ಹೇಳಿಲ್ಲ, ಅಮಾಯಕರ ಬಿಡುಗಡೆಗೆ ಪ್ರಸ್ತಾಪ: ತನ್ವೀರ್ ಸೇಠ್
ಚೆನ್ನೈ: ತಮಿಳುನಾಡಿನ (Tamil Nadu) ಪ್ರತಿಷ್ಠಿತ ಶಾಸ್ತ್ರೀಯ ಕಲೆಗಳ ಸಂಸ್ಥೆಯಾದ ಕಲಾಕ್ಷೇತ್ರದ (Kalakshetra) ಪ್ರೊಫೆಸರ್ (Professor) ಒಬ್ಬರ ಮೇಲೆ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ.
ಸಂಸ್ಥೆಯ ಮಾಜಿ ವಿದ್ಯಾರ್ಥಿನಿಯೊಬ್ಬರು ತಮ್ಮ ಮೇಲೆ ಪ್ರೊಫೆಸರ್ ಒಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದೂರಿನಡಿ ಚೆನ್ನೈ (Chennai) ಪೊಲೀಸರು ಪ್ರೊಫೆಸರ್ ಹರಿ ಪದ್ಮನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಲ್ಲದೆ ಮೂವರ ರೆಪರ್ಟರಿ ಕಲಾವಿದರಿಂದ ನಿಂದನೆ ಹಾಗೂ ಬಾಡಿ ಶೇಮಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ. 200ಕ್ಕೂ ಹೆಚ್ಚೂ ವಿದ್ಯಾರ್ಥಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ
ಕಲಾಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ, ಬಣ್ಣದ ಆಧಾರದ ಮೇಲೆ ತಾರತಮ್ಯ ಹಾಗೂ ನಿಂದನೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ. ಸಂಸ್ಥೆಯ ನಿರ್ದೇಶಕಿ ರೇವತಿ ರಾಮಚಂದ್ರನ್ ಅವರನ್ನು ವಜಾಗೊಳಿಸಬೇಕು. ಸಂಸ್ಥೆಯ ಆಂತರಿಕ ದೂರು ಸಮಿತಿಯನ್ನು ಪುನರ್ ರಚಿಸಬೇಕು ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ (G.Kishan Reddy) ಹಾಗೂ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಪ್ರತಿಭಟನಾಕಾರರು ಪತ್ರ ಬರೆದು ಒತ್ತಾಯಿಸಿದ್ದಾರೆ.
90 ವಿದ್ಯಾರ್ಥಿಗಳು ಶುಕ್ರವಾರ ಮಹಿಳಾ ಆಯೋಗದ ಮುಖ್ಯಸ್ಥರಿಗೆ ದೂರು ನೀಡಿದ್ದರು. ತಪ್ಪಿತಸ್ಥರು ಯಾರೇ ಆಗಿದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಮ್.ಕೆ ಸ್ಟಾಲಿನ್ (M.K Stalin) ಭರವಸೆ ನೀಡಿದ್ದಾರೆ. ಈ ಹಿಂದೆ ರಾಷ್ಟ್ರೀಯ ಮಹಿಳಾ ಆಯೋಗ (National Commission for Women) ಈ ಆರೋಪಗಳನ್ನು ಸುಳ್ಳು ಮಾಹಿತಿ ಎಂದು ನಿರಾಕರಿಸಿತ್ತು. ಇದನ್ನೂ ಓದಿ: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನ – ಭಾರತೀಯರು ಸೇರಿ 8 ಮಂದಿ ಸಾವು
ನವದೆಹಲಿ: ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಮೊದಲನೆಯದಾಗಿ ಇದು ಕುರಾನ್ ಪ್ರಕಾರ ಧಾರ್ಮಿಕ ಆಚರಣೆಯಲ್ಲ. ಎರಡನೆಯದಾಗಿ, ವಿದ್ಯಾರ್ಥಿಯು ಸಂಸ್ಥೆಯನ್ನು ಪ್ರವೇಶಿಸಿದಾಗ ಅಲ್ಲಿನ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ಶರ್ಮ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಿಜಬ್ ಕುರಿತ ಹೈಕೋರ್ಟ್ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್ ಮಾಡಿದ ಓವೈಸಿ
ನಾನು ಮಹಿಳಾ ಹಕ್ಕುಗಳ ಕಟ್ಟಾ ಬೆಂಬಲಿಗಳಾಗಿದ್ದೇನೆ. ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು. ಆದರೆ ಸಂಸ್ಥೆಯಲ್ಲಿ ಏಕರೂಪದ ಸಂಹಿತೆ ಇದ್ದರೆ, ಅದನ್ನು ಅನುಸರಿಸಬೇಕು ಎಂಬುದನ್ನು ನಾನು ಬಲವಾಗಿ ಪ್ರತಿಪಾದಿಸುತ್ತೇನೆ. ವಿದ್ಯಾರ್ಥಿಗಳನ್ನು ಧರ್ಮ, ಜಾತಿ, ಪಂಥ ಎಂದು ವಿಂಗಡಿಸಬಾರದು. ಪ್ರತಿಭಟನಾನಿರತ ವಿದ್ಯಾರ್ಥಿಗಳು ತರಗತಿಗಳಿಗೆ ಹಿಂತಿರುಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಹಿಜಬ್ ವಿವಾದ ಕುರಿತು ಹೈಕೋರ್ಟ್ ತೀರ್ಪಿನ ಬಗ್ಗೆ ಎಲ್ಲೆಡೆ ಪರ-ವಿರೋಧದ ಚರ್ಚೆ ಎದ್ದಿದೆ. ಅನೇಕರು ತೀರ್ಪನ್ನು ಬೆಂಬಲಿಸಿಯೂ ಇನ್ನೂ ಅನೇಕರು ತೀರ್ಪಿನ ವಿರುದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆಯೇ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ವಕ್ಫ್ ಬೋರ್ಡ್ ಹಾಗೂ ಇತರೆ ಸಂಘಟನೆಗಳು ಮುಂದಾಗಿವೆ. ಇದನ್ನೂ ಓದಿ: ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶಾ ಪ್ರಯತ್ನ ಇದಾಗಿತ್ತು: ಕೈ ವಿರುದ್ಧ ಬಿಜೆಪಿ ವಾಗ್ದಾಳಿ
ನವದೆಹಲಿ: ಯುವ ಜನತೆಯನ್ನು ಟಿಕ್‍ಟಾಕ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್‍ಟಾಕನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಮನರಂಜನೆಗಾಗಿ ಆರಂಭವಾದ ಟಿಕ್‍ಟಾಕ್ ಇಂದು ಹಿಂಸೆಯನ್ನು ಪ್ರೇರೆಪಿಸುತ್ತಿದೆ. ಮಹಿಳೆಯ ಮೇಲಿನ ಅತ್ಯಾಚಾರ, ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ವಿಡಿಯೋಗಳು ಟಿಕ್‍ಟಾಕ್‍ನಲ್ಲಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕ ತಾಜೀಂದರ್ ಸಿಂಗ್ ಮಾಡಿರುವ ಟ್ವೀಟ್‍ಗೆ ರೇಖಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಓದಿ: ಟಿಕ್‍ಟಾಕ್ ಬಳಕೆಯಲ್ಲಿ ವಿಶ್ವದಲ್ಲೇ ಭಾರತ ನಂಬರ್ 1
I am of the strong openion that this @TikTok_IN should be banned totally and will be writting to GOI. It not only has these objectionable videos but also pushing youngsters towards unproductive life where they are living only for few followers and even dying when no. Decline. https://t.co/MyeuRbjZAy
ಆ್ಯಸಿಡ್ ದಾಳಿಗೆ ಪ್ರೇರಣೆ ನೀಡುವ ರೀತಿ ಟಿಕ್‍ಟಾಕ್ ವಿಡಿಯೋ ಮಾಡಿ ಹರಿಬಿಡಲಾಗಿದೆ. ಇತ್ತೀಚೆಗೆ ಟಿಕ್‍ಟಾಕ್‍ನಲ್ಲಿ 1.34 ಕೋಟಿ ಹಿಂಬಾಲಕರನ್ನು ಹೊಂದಿದ್ದ ಫೈಜಲ್ ಸಿದ್ದಿಕಿ ಇಂತಹ ವಿಡಿಯೋ ಮಾಡಿದ್ದ. ಇಂತಹ ವಿಡಿಯೋಗಳು ಸಮಾಜದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಡಿಜಿಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ರೇಖಾ ಶರ್ಮಾ ಮಾಹಿತಿ ನೀಡಿದ್ದಾರೆ.
ಹಿಂಸೆಗೆ ಪ್ರಚೋದಿಸುವ ವಿಡಿಯೋಗಳನ್ನು ಕೂಡಲೇ ಆ್ಯಪ್‍ನಿಂದ ತೆಗೆದು ಹಾಕುವಂತೆ ಆಗ್ರಹಿಸಿರುವ ಅವರು, ಇಂತಹ ಆಕ್ಷೇಪರ್ಹ ವಿಡಿಯೋಗಳು ಮಾತ್ರವಲ್ಲದೇ ಮಾತ್ರವಲ್ಲದೇ ಟಿಕ್‍ಟಾಕ್ ಯುವ ಜನತೆಯನ್ನು ಅನುತ್ಪಾದಕ ಜೀವನ ಹಾಗೂ ಕೆಲ ಹಿಂಬಾಲಕರನ್ನು ಪಡೆಯವತ್ತ ತಳ್ಳುತ್ತಿದೆ. ಅನುಯಾಯಿಗಳು ಸಿಕ್ಕದಿದ್ದಾಗ ಕೆಲವರು ಸಾವಿಗೂ ಶರಣಾಗುತ್ತಿದ್ದಾರೆ ಎಂದು ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.
ಸದ್ಯ ಸಾಕಷ್ಟು ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಮೇಲೆ ಆ್ಯಸಿಡ್ ದಾಳಿ ಮಾಡುವುದನ್ನು ವೈಭವಿಕರಿಸಲಾಗಿದೆ. ಅಲ್ಲದೇ ಅತ್ಯಾಚಾರಿಗಳನ್ನು ವೈಭವಿಕರಿಸಿ ತೋರಿಸಲಾಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲೂ #BanTikToklnlndia ಹ್ಯಾಶ್ ಟ್ಯಾಗ್ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಭಾರತದಲ್ಲಿ ಟಿಕ್‍ಟಾಕ್ ನಿಷೇಧ ಮಾಡಬೇಕು ಎಂಬ ಆಗ್ರಹ ಮತ್ತೊಮ್ಮೆ ಜೋರಾಗಿದೆ.