Tag: ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ

  • ಕಂಗನಾ, ಧನುಶ್, ಮನೋಜ್ ಬಾಜ್‍ಪೇಯಿ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ

    ಕಂಗನಾ, ಧನುಶ್, ಮನೋಜ್ ಬಾಜ್‍ಪೇಯಿ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ

    ನವದೆಹಲಿ: 67 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು ನಿತೀಶ್ ತಿವಾರಿ ನಿರ್ದೇಶನದ ಹಿಂದಿಯ ಚಿಚೊರೇ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ.

    2019ರಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ‘ಮಣಿಕರ್ಣಿಕಾ’ ಮತ್ತು ‘ಪಂಗಾ’ ಸಿನಿಮಾದ ನಟನೆಗಾಗಿ ಕಂಗನಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದರೆ ‘ಭೋಂಸ್ಲೆ’ ಸಿನಿಮಾಕ್ಕೆ ಮನೋಜ್ ಬಾಜ್‍ಪೇಯಿ ಮತ್ತು ‘ಅಸುರನ್’ ಸಿನಿಮಾಕ್ಕೆ ಧನುಷ್‍ ಅವರಿಗೆ  ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.

    ರಕ್ಷಿತ್‌ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ವಿಕ್ರಂ ಮೊರ್‌ ಅವರು ಸಾಹಸ ನಿರ್ದೇಶನ ಮಾಡಿದ್ದರು.

    ಮನೋಜ್ ಕುಮಾರ್ ನಿರ್ದೇಶನದ ‘ಅಕ್ಷಿ’ಗೆ ಕನ್ನಡ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. ತುಳು ಭಾಷೆಯಲ್ಲಿ ಪ್ರೀತಂ ಶೆಟ್ಟಿ ನಿರ್ದೇಶನದ ‘ಪಿಂಗಾರ’ ಸಿನಿಮಾಗೆ ಸಿಕ್ಕಿದೆ.

    ಸಿನಿಮಾಗೆ ಸಂಬಂಧಿಸಿದ ಪುಸ್ತಕ ವಿಭಾಗದಲ್ಲಿ ಪಿ.ಆರ್. ರಾಮದಾಸ್ ನಾಯ್ಡು ಅವರು ಕನ್ನಡದಲ್ಲಿ ಬರೆದ ‘ಜಾಗತಿಕ ಸಿನಿಮಾ ವಿಕಾಸ-ಪ್ರಭಾವ’ ಕೃತಿಗೆ ಲಭಿಸಿದೆ.

    ಫೀಚರ್-ಅಲ್ಲದ ಚಲನಚಿತ್ರಗಳಿಗಾಗಿ ಅತ್ಯುತ್ತಮ ನಿರೂಪಣೆ  ಪ್ರಶಸ್ತಿ ಸರ್ ಡೇವಿಡ್ ಅಟೆನ್‍ಬರೋ ಅವರ ‘ವೈಲ್ಡ್ ಕರ್ನಾಟಕ’ಕ್ಕೆ (ಇಂಗ್ಲಿಷ್) ಸಿಕ್ಕಿದೆ.