Tag: ರಾಷ್ಟ್ರೀಯ ಉದ್ಯಾನವನ

  • ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಿ: ಪ್ರತಾಪ್ ಸಿಂಹ

    ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಿ: ಪ್ರತಾಪ್ ಸಿಂಹ

    ಮೈಸೂರು: ಮೈಸೂರು-ಕೊಡಗು ವ್ಯಾಪ್ತಿಯ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಮರುನಾಮಕರಣಕ್ಕೆ ಪ್ರಸ್ತಾವನೆ ಹಿನ್ನೆಲೆಯಲ್ಲಿ ಫಿಲ್ಡ್ ಮಾರ್ಷಲ್ ಕಾರ್ಯಪ್ಪನವರ ಹೆಸರಿಡಿ ಎಂದು ಸಂಸದ ಪ್ರತಾಪ್ ಸಿಂಹ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.

    ರಾಜ್ಯ ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿಗೆ ಮನವಿ ಪತ್ರ ನೀಡಿದ ಪ್ರತಾಪ್ ಸಿಂಹ, ರಾಷ್ಟ್ರೀಯ ಉದ್ಯಾನವನಕ್ಕೆ ಭಾರತೀಯ ಸೇನೆಯ ಮೊದಲ ಫೀಲ್ಡ್ ಮಾರ್ಷಲ್ ಜನರಲ್ ಕೆ. ಎಂ ಕಾರ್ಯಪ್ಪ ಹೆಸರಿಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್

    ಉದ್ಯಾನವನ ಮೈಸೂರು ಕೊಡಗು ಭಾಗಕ್ಕೆ ಸೇರಿದೆ. ಈ ಬಗ್ಗೆ ಈಗಾಗಲೇ ಆನ್‍ಲೈನ್ ಕ್ಯಾಂಪೇನ್ ಆರಂಭವಾಗಿದ್ದು, ಕೊಡಗಿನ ಜನಸಂಖ್ಯೆ ಬಹಳ ಕಡಮೆ ಇದ್ದರು, ಅದರಲ್ಲಿ ಬಹುತೇಕರು ಭಾರತೀಯ ಸೇನೆಯ ಸೇವೆಯಲ್ಲಿದ್ದಾರೆ. ಅವರಿಗೆ ಗೌರವ ಸಮರ್ಪಿಸಲು ಕಾರ್ಯಪ್ಪ ಅವರ ಹೆಸರು ಬಹಳ ಸೂಕ್ತ. ಅವರ ನಿಸ್ವಾರ್ಥ ಸೇವೆಗೆ ಗೌರವ ಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕೊಡವ ಭಾಷೆಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರನ್ನು ಸ್ಮರಿಸಿದ ರಾಷ್ಟ್ರಪತಿ

    ದೇಶದ ಹಲವು ಭಾಗದ ರಾಷ್ಟ್ರೀಯ ಉದ್ಯಾನವನಗಳಿಗೆ ನೆಹರು, ಗಾಂಧಿ ಕುಟುಂಬದ ಹೆಸರಿದೆ. ಇದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ಹೆಸರು ಸೂಕ್ತವಲ್ಲ. ಕೊಡಗಿನ ಜನರು ಭಾರತೀಯ ಸೇನೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದನ್ನು ಗೌರವಿಸಿ ಅವರ ಭಾವನೆಗಳಿಗೆ ಪೂರಕವಾಗಿ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಹೆಸರು ಇಡಬೇಕೆಂದು ಮನವಿಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆ

  • ಸಿಂಹವನ್ನು ಮುಟ್ಟುತ್ತಿರುವ ಪ್ರವಾಸಿಗರ ವಿಡಿಯೋ ವೈರಲ್!

    ಸಿಂಹವನ್ನು ಮುಟ್ಟುತ್ತಿರುವ ಪ್ರವಾಸಿಗರ ವಿಡಿಯೋ ವೈರಲ್!

    ಜೊಹಾನ್ಸ್ ಬರ್ಗ್: ಸಫಾರಿ ವೇಳೆ ಮಾರ್ಗ ಮಧ್ಯೆ ಅಡ್ಡ ಬಂದ ಸಿಂಹವನ್ನು ಪ್ರವಾಸಿಗರು ಮುಟ್ಟುತ್ತಿರುವ ಘಟನೆ ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

    ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಸಫಾರಿ ವೇಳೆ ಸಿಂಹವನ್ನು ಮುಟ್ಟುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

    ಪ್ರವಾಸಿಗರ ಸಫಾರಿ ವೇಳೆ ಸಿಂಹಗಳ ಗುಂಪೊಂದು ಮಾರ್ಗಮಧ್ಯೆ ಬಂದಿದೆ. ಈ ವೇಳೆ ಸಿಂಹಗಳು ವಾಹನಗಳ ಸುತ್ತ ಸುತ್ತುವರಿಯುತ್ತಿರುವಾಗ ಪ್ರವಾಸಿಗರು ಸಿಂಹಗಳನ್ನು ಮುಟ್ಟಿದ್ದಾರೆ. ಸಿಂಹವು ಪ್ರವಾಸಿಗರ ಕಡೆ ತಿರುಗಿ ಘರ್ಜಿಸಿದಾಗ ಹೆದರಿ ಸಫಾರಿ ವಾಹನದ ಕಿಟಕಿಗಳನ್ನು ಮುಚ್ಚಿಕೊಂಡಿದ್ದಾರೆ. ಅಲ್ಲದೇ ಸಿಂಹಗಳು ವಾಹನದ ನೆರಳಲ್ಲೇ ಮಲಗಿರುವ ವಿಡಿಯೋ ತೆಗೆದು ಸೋಶಿಯಲ್ ಮಿಡಿಯಾಗಳಲ್ಲಿ ಹಾಕಿದ್ದಾರೆ. ಸಿಂಹವನ್ನು ಮುಟ್ಟುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

    ಸಿಂಹಗಳು ಮೊದಲು ತಮ್ಮ ಪಾಡಿಗೆ ತಾವು ವಾಹನದ ಸುತ್ತ ಸುತ್ತುವರಿದಿದ್ದವು, ಪ್ರವಾಸಿಗರೂ ಮುಟ್ಟಿದ ಮೇಲೆಯೇ ಅವರ ಮೇಲೆ ಘರ್ಜಿಸಿವೆ.

    ವನ್ಯಜೀವಿ ಪ್ರದೇಶಗಳಾದ ಮರಾ ಹಾಗೂ ಸೆರೆಂಗೆಟಾ ಪ್ರದೇಶಗಳಲ್ಲಿ ಮರಗಳ ನಾಶದಿಂದ ಬಿಸಿಲಿನ ಬೇಗೆಗೆ ಪ್ರಾಣಿಗಳು ತತ್ತರಿಸಿವೆ. ಸಫಾರಿ ವೇಳೆ ವಾಹನಗಳ ಬಳಿ ಬಂದು ಅವುಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು ಸರ್ವೇಸಾಮಾನ್ಯ ವಿಷಯವಾಗಿದೆ ಎಂದು ವರದಿಯಾಗಿದೆ.

    https://www.youtube.com/watch?v=fpOh7OQpZ4g&feature=youtu.be

  • ಬನ್ನೇರುಘಟ್ಟದಲ್ಲಿ ಬೆಂಗಾಲ್ ಟೈಗರ್ ದಾಳಿಯಲ್ಲಿ ಗಾಯಗೊಂಡಿದ್ದ ಹುಲಿ ಸಾವು

    ಬನ್ನೇರುಘಟ್ಟದಲ್ಲಿ ಬೆಂಗಾಲ್ ಟೈಗರ್ ದಾಳಿಯಲ್ಲಿ ಗಾಯಗೊಂಡಿದ್ದ ಹುಲಿ ಸಾವು

    ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಗಾಲ್ ಹುಲಿಗಳ ಜೊತೆಗಿನ ಕಾದಾಟದಲ್ಲಿ ಗಂಭೀರ ಗಾಯಗೊಂಡಿದ್ದ ಬಿಳಿ ಹುಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯಲ್ಲಿ ಮೂರು ಬೆಂಗಾಲ್ ಹುಲಿಗಳು ಬಿಳಿ ಹುಲಿ ಮೇಲೆ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಿಳಿ ಹುಲಿ ಮೂರು ದಿನಗಳ ಬಳಿಕ ಮೃತಪಟ್ಟಿದೆ ಎಂದು ಪಾರ್ಕ್ ನ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

    ಆಗಿದ್ದು ಏನು?
    ಉದ್ಯಾನವನದ ಬೆಂಗಾಲ್ ಹುಲಿಗಳಿದ್ದ ಕೇಜ್‍ಗೆ ಹೋಗಲು ಬಿಳಿ ಹುಲಿಗೆ ಸಾಧ್ಯವಿಲ್ಲ. ಆದರೆ ಬಿಳಿ ಹುಲಿಯೊಂದು ದಾರಿ ತಪ್ಪಿ ಹೋಗಿತ್ತು ಈ ವೇಳೆಯಲ್ಲಿ ಮೂರು ಬೆಂಗಾಲ್ ಹುಲಿಗಳು ಬಿಳಿ ಹುಲಿಯ ಮೇಲೆ ದಾಳಿ ನಡೆಸಿತ್ತು. ಬಿಳಿ ಹುಲಿಯ ಬೆನ್ನಿಗೆ ಬಲವಾದ ಪೆಟ್ಟುಗಳಾಗಿದ್ದರಿಂದ ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತಿತ್ತು.

    ಅಧಿಕಾರಿಗಳ ನಿರ್ಲಕ್ಷ್ಯ: ಹತ್ತು ದಿನಗಳ ಹಿಂದೆ ಚಿರತೆಯೊಂದು ಸಾವನ್ನಪ್ಪಿತ್ತು. ಅಷ್ಟೇ ಅಲ್ಲದೇ ಒಂದು ತಿಂಗಳ ಹಿಂದೆ ಝೀಬ್ರಾ ಕೂಡ ಮೃತಪಟ್ಟಿತ್ತು ಆದರೆ ಈಗ ಬಿಳಿ ಹುಲಿ ಕೂಡ ಮೃತಪಟ್ಟಿದೆ. ಪಾರ್ಕ್ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಪ್ರಾಣಿಗಳು ಮೃತಪಡುತ್ತಿದ್ದು, ಹಿರಿಯ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಸುಮ್ಮನಿದ್ದಾರೆ ಎಂದು ಪ್ರಾಣಿ ಪ್ರಿಯರಿಂದ ಟೀಕೆ ವ್ಯಕ್ತವಾಗಿದೆ.

  • ವಿಡಿಯೋ: ಬನ್ನೇರುಘಟ್ಟದಲ್ಲಿ ಬಿಳಿ ಹುಲಿಯ ಮೇಲೆ 3 ಬೆಂಗಾಲ್ ಟೈಗರ್ ದಾಳಿ

    ವಿಡಿಯೋ: ಬನ್ನೇರುಘಟ್ಟದಲ್ಲಿ ಬಿಳಿ ಹುಲಿಯ ಮೇಲೆ 3 ಬೆಂಗಾಲ್ ಟೈಗರ್ ದಾಳಿ

    ಬೆಂಗಳೂರು: ಆನೇಕಲ್ ನಲ್ಲಿರೋ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅಧಿಕಾರಿಗಳ ಬೇಜಾವಾಬ್ದಾರಿಗೆ ಮತ್ತೊಂದು ಪ್ರಾಣಿ ಅಪಾಯದಲ್ಲಿದೆ.

    ಹೌದು. ಉದ್ಯಾನವನದ ಬೆಂಗಾಲ್ ಟೈಗರ್ಸ್ ಇದ್ದ ಕೇಜ್ ಗೆ ಬಿಳಿ ಹುಲಿಯೊಂದು ದಾರಿ ತಪ್ಪಿ ಬಂದಿದೆ. ಈ ವೇಳೆ ಮೂರು ಬೆಂಗಾಲ್ ಟೈಗರ್ಸ್ ಗಳು ಬಿಳಿ ಹುಲಿಯ ಮೇಲೆ ದಾಳಿ ನಡೆಸಿವೆ. ಪರಿಣಾಮ ಬಿಳಿ ಹುಲಿಗೆ ತೀವ್ರ ಗಾಯಗಳಾಗಿದೆ.

    ಬಿಳಿ ಹುಲಿಯ ಬೆನ್ನಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಸದ್ಯ ಹುಲಿ ಮಲಗಿದಲ್ಲಿಯೇ ಇದ್ದು, ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಕೇಜ್ ನಿಂದ ಕೇಜ್ ಗೆ ಸುಲಭವಾಗಿ ಹೋಗಲು ಸಾಧ್ಯವಿರುವುದಿಲ್ಲ. ಆದ್ರೂ ಬಿಳಿ ಹುಲಿ ಹೋದಾಗ ಅಧಿಕಾರಿಗಳು ಕ್ರಮವಹಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಈ ಘಟನೆ ನಡೆದಿದೆ.

    2 ತಿಂಗಳ ಹಿಂದಷ್ಟೇ ಗುಂಡಿಯೊಂದನ್ನು ತೋಡಿ ಅದರಲ್ಲಿ ಝೀಬ್ರಾವೊಂದು ಬಿದ್ದು ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಅದೇ ಡಿಎಫ್‍ಓನಿಂದ ಮತ್ತೊಂದು ಎಡವಟ್ಟು ಎದುರಾಗಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇದನ್ನೂ ಓದಿ: ಬನ್ನೇರುಘಟ್ಟದಲ್ಲಿ ಇಸ್ರೇಲ್ ನಿಂದ ತಂದಿದ್ದ ಗರ್ಭಿಣಿ ಜೀಬ್ರಾ ಸಾವು

    https://www.youtube.com/watch?v=8sATYADYfzc&feature=youtu.be

    ಇದನ್ನೂ ಓದಿ: ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ 3 ಹೊಸ ಅತಿಥಿಗಳ ಆಗಮನ

    ಇದನ್ನೂ ಓದಿ: ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!