Tag: ರಾಷ್ಟ್ರೀಯತೆ

  • ರಾಷ್ಟ್ರೀಯತೆ ಪರಿಕಲ್ಪನೆ ಸಂವಿಧಾನದಿಂದ ಬಂದಿಲ್ಲ, ಅದು ಪ್ರಾಚೀನ ಬೇರುಗಳನ್ನು ಹೊಂದಿದೆ: JNU ಕುಲಪತಿ

    ರಾಷ್ಟ್ರೀಯತೆ ಪರಿಕಲ್ಪನೆ ಸಂವಿಧಾನದಿಂದ ಬಂದಿಲ್ಲ, ಅದು ಪ್ರಾಚೀನ ಬೇರುಗಳನ್ನು ಹೊಂದಿದೆ: JNU ಕುಲಪತಿ

    ನವದೆಹಲಿ: ರಾಷ್ಟ್ರೀಯತೆ ಎಂಬ ಪರಿಕಲ್ಪನೆ ಸಂವಿಧಾನದಿಂದ ಬಂದಿಲ್ಲ. ಅದು ಭಾರತ ಪ್ರಾಚೀನತೆಯ ಬೇರುಗಳನ್ನು ಹೊಂದಿದೆ ಎಂದು ಜೆಎನ್‌ಯು ಕುಲಪತಿ ಸಾಂತಿಶ್ರೀ ಧೂಲಿಪುಡಿ ಪಂಡಿತ್‌ ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ಸೆಮಿನಾರ್‌ವೊಂದರಲ್ಲಿ ಮಾತನಾಡಿರುವ ಅವರು, ಕೇವಲ ಸಂವಿಧಾನಕ್ಕೆ ಬದ್ಧವಾಗಿರುವ ನಾಗರಿಕ ರಾಷ್ಟ್ರವಾಗಿ ಭಾರತವನ್ನು ಸೀಮಿತಗೊಳಿಸುವುದು ಅದರ ಇತಿಹಾಸ, ಪ್ರಾಚೀನ ಪರಂಪರೆ, ಸಂಸ್ಕೃತಿ ಮತ್ತು ನಾಗರಿಕತೆಯನ್ನು ಕಡೆಗಣಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಜಿಲ್ಲಾ ನ್ಯಾಯಾಲಯದಿಂದ ನಾಳೆ ಮಹತ್ವದ ಆದೇಶ

    ಭಾರತೀಯ ಸಾಂಸ್ಕೃತಿಕ ರಾಷ್ಟ್ರೀಯತೆಯು ಮಾನವಕೇಂದ್ರಿತ ಧರ್ಮಗಳಿಗಿಂತ ಬಹಳ ಭಿನ್ನವಾದ ಹಾದಿಯಲ್ಲಿದೆ. ಆದ್ದರಿಂದ ನಾವು ಭಾರತೀಯ ನಾಗರಿಕತೆಯ ಬಗ್ಗೆ ಮಾತನಾಡುವಾಗಲೆಲ್ಲಾ ಅದು ಅಭಿವೃದ್ಧಿ, ಪ್ರಜಾಪ್ರಭುತ್ವ, ವೈವಿಧ್ಯತೆ, ಭಿನ್ನಾಭಿಪ್ರಾಯವನ್ನು ಆಚರಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ.

    ಋಗ್ವೇದದಲ್ಲಿ ʼರಾಷ್ಟ್ರʼ ಎಂಬ ಪದದ ಉಲ್ಲೇಖವಿದೆ. ರಾಷ್ಟ್ರವು ಕೇವಲ ಭೌಗೋಳಿಕ ರಾಜಕೀಯ ಪರಿಕಲ್ಪನೆ ಮಾತ್ರವಲ್ಲ, ನಾಗರಿಕತೆಯ ಪರಿಕಲ್ಪನೆಯೂ ಆಗಿದೆ. ಸ್ವಾತಂತ್ರ್ಯ ಪೂರ್ವದಲ್ಲೂ ಅನೇಕ ರಾಷ್ಟ್ರಭಕ್ತರು ದೇಶಕ್ಕಾಗಿ ಹೋರಾಡಿದ್ದಾರೆ. ರಾಷ್ಟ್ರೀಯತೆಗೆ ಇವರೆಲ್ಲರ ಕೊಡುಗೆಯೂ ಇದೆ ಎಂದಿದ್ದಾರೆ. ಇದನ್ನೂ ಓದಿ: PFI ರ‍್ಯಾಲಿಯಲ್ಲಿ ಬಾಲಕನಿಂದ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ – ಪೊಲೀಸರಿಂದ ತನಿಖೆ

  • ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ

    ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ

    ಬೆಂಗಳೂರು: ಕುಮಾರಸ್ವಾಮಿ ಆರ್‌ಎಸ್‌ಎಸ್‌ಗೆ ಬೈಯುವುದು ಹೊಸದೆನಲ್ಲ. ಯಾವಾಗ ಮಾಧ್ಯಮಗಳಲ್ಲಿ ತನ್ನ ಪ್ರಚಾರ ಕಡಿಮೆಯಾಗುತ್ತಿದೆ ಎಂದು ಅನಿಸಿದಾಗ ಮಾಜಿ ಸಿಎಂ ಕುಮಾರಸ್ವಾಮಿ ಆರ್‌ಎಸ್‌ಎಸ್‌, ಮೋದಿಯನ್ನು ಬೈಯುತ್ತಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ಕೇಂದ್ರದಲ್ಲಿ ಇರುವುದು ಆರ್‌ಎಸ್‌ಎಸ್‌ ಸರ್ಕಾರ, ಆರ್‌ಎಸ್‌ಎಸ್‌ಗೆ ಸೇರಿದ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಆರ್‌ಎಸ್‌ಎಸ್‌ ರಾಷ್ಟ್ರೀಯತೆಯನ್ನು ಬೆಳೆಸುತ್ತದೆ ಎನ್ನುವುದು ನಿಜ. ಹಾಗೆಂದ ಮಾತ್ರಕ್ಕೆ ರಾಷ್ಟ್ರೀಯತೆ ಚಿಂತನೆಯನ್ನು ಬೆಳೆಸಿಕೊಂಡಿದವರು ಎಲ್ಲ ಆರ್‌ಎಸ್‌ಎಸ್‌ನವರು ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.

    ರಾಷ್ಟ್ರೀಯತೆಯ ಚಿಂತನೆಯನ್ನು ಹೊಂದಿದರೆ ಯಾವುದೇ ಸಮಸ್ಯೆ ಇಲ್ಲ. ಆಟೋ ಡ್ರೈವರ್ ಅವರನ್ನು ತೆಗೆದುಕೊಂಡರೆ ಆತನೂ ರಾಷ್ಟ್ರೀಯವಾದಿ ಎಂದು ಹೇಳುತ್ತಾನೆ. ಅದೇ ರೀತಿಯಾಗಿ ಐಪಿಎಸ್, ಐಎಎಸ್‍ನಲ್ಲೂ ರಾಷ್ಟ್ರೀಯ ಚಿಂತನೆಯನ್ನು ಬೆಳೆಸಿದವರು ಇರುತ್ತಾರೆ. ಜನರಿಗೆ ಎಲ್ಲವೂ ಗೊತ್ತಿದೆ. ಯಾವುದು ಸರಿ ಇದೆಯೋ ಅದನ್ನು ಜನ ಒಪ್ಪುತ್ತಾರೆ ಎಂದು ತಿರುಗೇಟು ನೀಡಿದರು.

    ರಾಷ್ಟ್ರೀಯ ಗೌರವ ಇಟ್ಟುಕೊಂಡರೆ ಜನರು ಹೆಮ್ಮೆ ಪಡುತ್ತಾರೆ. ಹೀಗಿರುವಾಗ ಕುಮಾರಸ್ವಾಮಿ ಅವರಿಗೆ ರಾಷ್ಟ್ರೀಯತೆ ವಿಚಾರ ಬಂದಾಗ ಹೊಟ್ಟೆ ಉರಿ ಯಾಕೆ? ನಾನು ಭಾರತದ ಪರ ಎಂದು ಹೇಳಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ 

    ನರೇಂದ್ರ ಮೋದಿ ಆರ್‌ಎಸ್‌ಎಸ್‌ ಕೈಗೊಂಬೆ ಎಂಬ ಎಚ್‍ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸೂಲಿಬೆಲೆ, ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಅವರ ಕೈಗೊಂಬೆಯಾಗಿದ್ದರು. ಆದರೆ ಅವರು ಸೋನಿಯಾ ಗಾಂಧಿ ಅವರ ವಿಚಾರಧಾರೆಯ ಕೈಗೊಂಬೆಯಾಗಿರಲ್ಲ. ಅವರು ವ್ಯಕ್ತಿಯ ಕೈಗೊಂಬೆಯಾಗಿದ್ದರು. ಆದರೆ ಆರ್‌ಎಸ್‌ಎಸ್‌ ಎನ್ನುವುದು ವ್ಯಕ್ತಿಯ ಕೈಗೊಂಬೆಯಲ್ಲ. ಅದೊಂದು ವಿಚಾರಧಾರೆ. ಒಂದು ವ್ಯಕ್ತಿಯನ್ನು ಅನುಸರಿಸಿ, ಒಂದು ಪರಿವಾರವನ್ನು ಅನುಸರಿಸಿ, ಅದಕ್ಕೆ ಜೀತ ಮಾಡಿಕೊಂಡು ಸಿಎಂ, ಪಿಎಂ ಆಗಿದ್ದೇನೆ ಎಂದು ಹೇಳುವುದು ತಪ್ಪಲ್ಲ ಅನ್ನುವುದಾದರೆ ಇಡೀ ರಾಷ್ಟ್ರ ಒಪ್ಪಿರುವ ಚಿಂತನೆಯಿಂದ ನಾನು ಬಂದಿದ್ದೇನೆ ಎಂದು ಹೇಳಿದರೆ ಅದು ಯಾಕೆ ತಪ್ಪಾಗಬೇಕು ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.

  • ಭಾರತ್ ಮಾತಾ ಕೀ ಜೈ ಘೋಷಣೆ ನಮ್ಮದು ಎಂದ ಕಾಂಗ್ರೆಸ್

    ಭಾರತ್ ಮಾತಾ ಕೀ ಜೈ ಘೋಷಣೆ ನಮ್ಮದು ಎಂದ ಕಾಂಗ್ರೆಸ್

    ಗಾಂಧಿನಗರ: ಭಾರತ್ ಮಾತಾ ಕೀ ಜೈ… ಇದು ಪ್ರತಿಯೊಬ್ಬ ಭಾರತೀಯರು ಎದೆಯುಬ್ಬಿಸಿ ಮೊಳಗಿಸೋ ಘೋಷಣೆ. ಆದರೆ ಈ ಘೋಷಣೆಗೂ ಪೇಟೆಂಟ್ ಅಥವಾ ಕಾಪಿರೈಟ್ ಆಗ್ಬಿಟ್ರೇ ಏನಾಗ್ಬೇಡ.

    ಗುಜರಾತ್‍ನ ಗಾಂಧಿನಗರದದಲ್ಲಿ ನಡೆದ ಸಮಾವೇಶದಲ್ಲಿ ಮಾತಾಡುವಾಗ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಕ್ತಿಸಿನ್ಹಾ ಗೋಯಲ್ ಅವರು, `ಭಾರತ್ ಮಾತಾಕೀ ಜೈ’ ಎನ್ನುವುದು ನಮ್ಮ ಘೋಷಣೆ. ಸ್ವಾತಂತ್ರ್ಯ ಹೋರಾಟದ ವೇಳೆ ಮೊದಲಿಗೆ ನಾವು ಈ ಘೋಷಣೆಯನ್ನು ಬಳಸಿದ್ದು ಅಂತ ಪ್ರತಿಪಾದಿಸಿದ್ದಾರೆ. ಈ ಮೂಲಕ ರಾಷ್ಟ್ರೀಯತೆಯನ್ನು ಬಿತ್ತಲು ಯತ್ನಿಸಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಾರೆ.

    ಕಾಂಗ್ರೆಸಿಗರ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ಭಾರತ್ ಮಾತಾಕೀ ಜೈ ಎನ್ನುವುದು ಈಗ ನೆನಪಿಗೆ ಬಂತಾ ಎಂದು ಕೇಳಿದೆ. 2018ರ ರಾಜಸ್ಥಾನ ಚುನಾವಣೆ ವೇಳೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾರ್ಯಕರ್ತನೋರ್ವ ಈ ಘೋಷಣೆ ಕೂಗಿದ್ದಕ್ಕೆ ಅಲ್ಲಿದ್ದ ನಾಯಕರು ಅವರ ಬಾಯಿ ಮುಚ್ಚಿಸಿದ್ದರು. ಅಂದಹಾಗೆ, ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ಅಂತ್ಯದಲ್ಲಿ ಎಲ್ಲಿ ಹೋದರೂ `ಭಾರತ್ ಮಾತಾ ಕೀ ಜೈ’ ಎಂದು ಹೇಳಿ ಭಾಷಣವನ್ನು ಮುಗಿಸುತ್ತಾರೆ.

    ಈ ಸುದ್ದಿಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv