Tag: ರಾಷ್ಟ್ರಪತಿ ದ್ರೌಪದಿ ಮುರ್ಮು

  • ಇರುಮುಡಿ ಕಟ್ಟು ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ರಾಷ್ಟ್ರಪತಿ ಮುರ್ಮು

    ಇರುಮುಡಿ ಕಟ್ಟು ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ರಾಷ್ಟ್ರಪತಿ ಮುರ್ಮು

    – ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ 

    ತಿರುವನಂತಪುರಂ: ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಶಬರಿಮಲೆಗೆ (Sabarimala) ಭೇಟಿ ನೀಡಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

    ಇರುಮುಡಿ ಕಟ್ಟು ಹೊತ್ತು ಶಬರಿಮಲೆಗೆ ಭೇಟಿ ನೀಡಿದ ದ್ರೌಪದಿ ಮುರ್ಮು ಅವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

    ಸೋಮವಾರದಿಂದ ಸಂಜೆ 6:20ರ ಸುಮಾರಿಗೆ ತಿರುವನಂತಪುರಂಕ್ಕೆ ಆಗಮಿಸಿದ ಮುರ್ಮು ಅವರಿಂದು ಹೆಲಿಕಾಪ್ಟರ್ ಮೂಲಕ ಕೇರಳದ ಪ್ರಮಾಡಂ ಇನ್‌ಡೋರ್ ಸ್ಟೇಡಿಯಂಗೆ ಬಂದಿಳಿದರು, ಈ ವೇಳೆ ಹೆಲಿಕಾಪ್ಟರ್ ಟೈರ್ ಕಾಂಕ್ರೀಟ್‌ನಲ್ಲಿ ಹೂತುಹೋಯಿತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್‌ನ್ನು ತಳ್ಳಿ ಬದಿಸರಿಸಿದರು. ನಂತರ ಅಲ್ಲಿಂದ ಶಬರಿಮಲೆಗೆ ತೆರಳಿ ತುಲಾ ಮಾಸ ಪೂಜೆಯ ಕೊನೆಯ ದಿನದಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

    ಬಳಿಕ ಅ.23ರಂದು ತಿರುವನಂತಪುರದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

    ಅದೇ ದಿನ ಪಲೈನಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರೋಪ ಸಮಾರಂಭದಲ್ಲಿಯೂ ಭಾಗಿಯಾಗಲಿದ್ದಾರೆ. ಅ.24ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

  • ಇಂದಿನಿಂದ ನಾಲ್ಕು ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳ ಪ್ರವಾಸ

    ಇಂದಿನಿಂದ ನಾಲ್ಕು ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳ ಪ್ರವಾಸ

    -ನಾಳೆ ಶಬರಿಮಲೆಗೆ ಭೇಟಿ ನೀಡಲಿರುವ ಮುರ್ಮು

    ತಿರುವನಂತಪುರಂ: ಇಂದಿನಿಂದ (ಅ.21) ನಾಲ್ಕು ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳ ಪ್ರವಾಸ ಕೈಗೊಂಡಿದ್ದಾರೆ.

    ಇಂದು ಸಂಜೆ 6:20ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ತಿರುವನಂತಪುರಂಕ್ಕೆ ಆಗಮಿಸಲಿದ್ದು, ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.ಇದನ್ನೂ ಓದಿ: ದೀಪಾವಳಿ ಹಬ್ಬ | ಪಟ್ಟಕ್ಕಾಗಿ ಕೈ ಶಾಸಕರಿಂದ ಎರಡೂ ಪವರ್ ಸೆಂಟರ್ ಬ್ಯಾಲೆನ್ಸ್‌!

    ಅ.22ರಂದು ತಿರುವನಂತಪುರದಿಂದ ಹೆಲಿಕಾಪ್ಟರ್ ಮೂಲಕ ನೀಲಕ್ಕಲ್‌ಗೆ ಆಗಮಿಸಿ ಬಳಿಕ ರಸ್ತೆ ಮಾರ್ಗದಲ್ಲಿ ಪಂಪಾಗೆ ಆಗಮಿಸಲಿದ್ದಾರೆ. ಬಳಿಕ ಪಂಪಾದಿಂದ ಗೂರ್ಖಾ ಫೋರ್ಸ್ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಲಿದ್ದಾರೆ. ತುಲಾ ಮಾಸ ಪೂಜೆಯ ಕೊನೆಯ ದಿನದಂದು ಶಬರಿಮಲೆಗೆ ತೆರಳಿ, ಮಧ್ಯಾಹ್ನ 12:20 ರಿಂದ 1 ಗಂಟೆಯ ಅಯ್ಯಪ್ಪ ಸ್ವಾಮಿಯ ವಿಶೇಷ ದರ್ಶನ ಪಡೆದು, ಆರತಿ ನೆರವೇರಿಸಲಿದ್ದಾರೆ. ಈ ಮೂಲಕ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ ಭಾರತದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

    ಬಳಿಕ ಅ.23ರಂದು ತಿರುವನಂತಪುರದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

    ಅದೇ ದಿನ ಪಲೈನಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರೋಪ ಸಮಾರಂಭದಲ್ಲಿಯೂ ಭಾಗಿಯಾಗಲಿದ್ದಾರೆ. ಅ.24ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

    ಕಾರ್ಯಕ್ರಮದ ಬಳಿಕ ಕೊಚ್ಚಿನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹಿಂದಿರುಗಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ Vs ಆರ್‌ಜೆಡಿ Vs ಸಿಪಿಐ Vs ಜೆಎಂಎಂ ಮಧ್ಯೆ ಬಿಹಾರದಲ್ಲಿ ಕುಸ್ತಿ

  • ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

    ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

    ನವದೆಹಲಿ: ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.

    ಅನಾರೋಗ್ಯದ ಕಾರಣ ನೀಡಿ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದು, ಅವರ ಅನುಮೋದನೆಯ ನಂತರ ಗೃಹ ಸಚಿವಾಲಯವು ಜಗದೀಪ್ ಧನಕರ್ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಿದೆ.ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

    ಇಂದು ಅಧಿವೇಶನದಲ್ಲಿ ಜಗದೀಪ್ ಧನಕರ್ ಅವರು ರಾಜ್ಯಸಭಾ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿಲ್ಲ. ಹೀಗಾಗಿ ಉಪರಾಷ್ಟ್ರಪತಿಗಳ ಅಧಿಕಾರಾವಧಿಯ ಬಗ್ಗೆ ತಿಳಿಸುವ ಸಂವಿಧಾನದ 67ನೇ ವಿಧಿಯ ಅಡಿಯಲ್ಲಿ, ಹೊಸ ಉಪಾಧ್ಯಕ್ಷರ ಆಯ್ಕೆಯಾಗುವವರೆಗೂ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕಾರ್ಯನಿರ್ವಹಿಸುತ್ತಾರೆ.

    ರಾಜ್ಯಸಭಾ ಅಧ್ಯಕ್ಷರಾಗಿ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದ ಅಧ್ಯಕ್ಷತೆ ವಹಿಸಿದ ನಂತರ ಸೋಮವಾರ (ಜು.21) ರಾಜೀನಾಮೆ ಘೋಷಿಸಿದ್ದರು. ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದ ಪತ್ರದಲ್ಲಿ, ಆರೋಗ್ಯ ದೃಷ್ಟಿಯಿಂದ ಹಾಗೂ ವೈದ್ಯಕೀಯ ಸಲಹೆಗಳನ್ನು ಪಾಲಿಸುವ ನಿಟ್ಟಿನಲ್ಲಿ ರಾಜೀನಾಮೆ ಘೋಷಿಸಿರುವುದಾಗಿ ಉಲ್ಲೇಖಿಸಿದ್ದರು.

    ಕೆಲ ದಿನಗಳ ಹಿಂದೆ ಉತ್ತರಾಖಂಡದ ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೂರ್ಛೆ ಹೋಗಿದ್ದರು. ಸೋಮವಾರ ಬೆಳಿಗ್ಗೆ ಕೂಡ ತಮ್ಮ ಕಚೇರಿಯಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ.ಇದನ್ನೂ ಓದಿ: ತಿಂಗಳ ಬಳಿಕ ಹಾರಿದ ಬ್ರಿಟನ್‌ ಬಾನಾಡಿ – ಕೇರಳದಿಂದ ಆಸ್ಟ್ರೇಲಿಯಾಗೆ ಜಿಗಿದ F-35B ಜೆಟ್

  • ಶಬರಿಮಲೆಗೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

    ಶಬರಿಮಲೆಗೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

    – ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಭೇಟಿ ನೀಡುತ್ತಿರುವುದು ಇದೇ ಮೊದಲು

    ತಿರುವನಂತಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಮೇ 19ರಂದು ಕೇರಳದಲ್ಲಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ(Sabarimala Ayyappa Temple) ಭೇಟಿ ನೀಡುವ ಮೂಲಕ ಭಾರತದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

    ಮೇ 18ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳಕ್ಕೆ(Kerala) ಆಗಮಿಸಲಿದ್ದು, ಬಳಿಕ ಕೊಟ್ಟಾಯಂ ಜಿಲ್ಲೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 19ರಂದು ಬೆಳಗ್ಗೆ ಶಬರಿಮಲೆಯ ಬಳಿಯಿರುವ ನೀಲಕ್ಕಲ್ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದು, ಬಳಿಕ ಪಂಪಾ ಬೇಸ್ ಕ್ಯಾಂಪ್‌ಗೆ ತೆರಳಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ 33 ಜಡ್ಜ್‌ ಪೈಕಿ 21 ಮಂದಿಯ ಆಸ್ತಿ ಬಹಿರಂಗ

    ಪಂಪಾ ಬೇಸ್ ಕ್ಯಾಂಪ್‌ನಿಂದ ದೇವಾಲಯಕ್ಕೆ ತೆರಳುವ ಪ್ರಯಾಣ ವಿಧಾನದ ಕುರಿತು ಅಂತಿಮ ನಿರ್ಧಾರವನ್ನು ಭದ್ರತಾ ವ್ಯವಸ್ಥೆಯ ವಿಶೇಷ ರಕ್ಷಣಾ ಗುಂಪು ತೆಗೆದುಕೊಳ್ಳಲಿದೆ. ರಾಷ್ಟ್ರಪತಿಯೊಬ್ಬರು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು ಇದೇ ಮೊದಲು ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಮದ್ದುಗುಂಡುಗಳ ಸಹಿತ ಇಬ್ಬರು ಉಗ್ರರು ಅರೆಸ್ಟ್‌

    ರಾಷ್ಟ್ರಪತಿ ಅವರ ಭೇಟಿಯ ಬಗ್ಗೆ ಕೆಲವು ವಾರಗಳಿಂದ ಗಾಳಿ ಸುದ್ದಿ ಹರಿದಾಡುತ್ತಿದ್ದವು. ಅಧಿಕೃತ ಮಾಹಿತಿ ಬಂದ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಅವರು ಸಭೆಯನ್ನು ಕರೆಯಲಿದ್ದಾರೆ. ಅಲ್ಲದೇ ನಾವು ದೇವಾಲಯಕ್ಕೆ ತೆರಳುವ ರಸ್ತೆಯ ತುರ್ತು ದುರಸ್ತಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ರಾಷ್ಟ್ರಪತಿ ಭೇಟಿಯ ಕುರಿತು ಬಹಿರಂಗಪಡಿಸಿದರು.

  • ನಾರಿ ಶಕ್ತಿಗೆ ನನ್ನ ನಮನ – ಮಹಿಳೆಯರಿಗೆ ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

    ನಾರಿ ಶಕ್ತಿಗೆ ನನ್ನ ನಮನ – ಮಹಿಳೆಯರಿಗೆ ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

    ನವದೆಹಲಿ: ಮಹಿಳೆಯರ ದಿನದಂದು ನಾರಿ ಶಕ್ತಿಗೆ ನನ್ನ ನಮನಗಳು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಹಿಳೆಯರಿಗೆ ಶುಭಕೋರಿದ್ದಾರೆ.

    ದೇಶ್ಯಾದ್ಯಂತ ಇಂದು ಮಹಿಳಾ ದಿನಾಚರಣೆ ಸಂಭ್ರಮ ಜೋರಾಗಿದ್ದು, ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಶುಭಾಶಯಗಳನ್ನು ತಿಳಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಎರಡು ಬಣಗಳಿವೆ – ಪಕ್ಷದ ವೇದಿಕೆಯಲ್ಲೇ ರಾಹುಲ್ ಗಾಂಧಿ ಅಸಮಾಧಾನ

    ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಮಹಿಳಾ ದಿನದಂದು ನಾರಿ ಶಕ್ತಿಗೆ ನನ್ನ ನಮನಗಳು. ನಮ್ಮ ಸರ್ಕಾರ ಯಾವಾಗಲೂ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಿದ್ದು, ಇದರ ಪ್ರತಿಫಲ ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಎದ್ದುಕಾಣಿಸುತ್ತದೆ. ಮನ್ ಕಿ ಬಾತ್‌ನಲ್ಲಿ ಭರವಸೆ ನೀಡಿದ ಹಾಗೇ ಇಂದು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಿರುವ ಮಹಿಳೆಯರಿಗೆ ಹಸ್ತಾಂತರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಶುಭಕೋರಿದ ರಾಷ್ಟ್ರಪತಿ ಮುರ್ಮು ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಇಂದು ನಾವೆಲ್ಲರು ಮಹಿಳೆಯರ ಸಾಧನೆ, ದೇಶಕ್ಕೆ, ಜಗತ್ತಿಗೆ ಮಹಿಳೆಯರ ಕೊಡುಗೆಗಳೇನು ಎನ್ನುವುದನ್ನು ಕೊಂಡಾಡುತ್ತೇವೆ. ಜೊತೆಗೆ ಮಹಿಳಾ ಹಕ್ಕುಗಳು, ಸಮಾನತೆ ಮತ್ತು ಸಬಲೀಕರಣದ ಉದ್ದೇಶಗಳನ್ನು ಬಲಪಡಿಸಬೇಕೆಂದು ನಾವೆಲ್ಲರು ಸಂಕಲ್ಪ ಮಾಡಿಕೊಳ್ಳುತ್ತೇವೆ.

    ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಚೌಕಟ್ಟಿನ ಗಡಿಯನ್ನು ದಾಡಿ ಮುನ್ನೆಲೆಗೆ ಬರುತ್ತಿದ್ದಾರೆ. ಈ ಮಹಿಳಾ ದಿನದಂದು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುತ್ತೇವೆ ಎಂದು ಪ್ರತಿಜ್ಞೆ ಮಾಡೋಣ. ಯಾವುದೇ ಹಿಂಜರಿಕೆಯಿಲ್ಲದೆ ಲಿಂಗ ಸಮಾನ ಜಗತ್ತನ್ನು ಕಟ್ಟೋಣ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಇನ್ನೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಭಕೋರಿದ್ದು, ಮಹಿಳೆಯರು ನಮ್ಮ ಸಮಾಜದ ಬೆನ್ನೆಲುಬು. ಅವರ ಶಕ್ತಿ, ಧ್ವನಿ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ನಾನು ನಿಮ್ಮೊಂದಿಗೆ ಮತ್ತು ನಿಮ್ಮ ಪರವಾಗಿ ನಿಲ್ಲುತ್ತೇನೆ. ಪ್ರತಿಯೊಬ್ಬ ಮಹಿಳೆ ತನ್ನ ಹಣೆಬರಹವನ್ನು ಸ್ವತಃ ರೂಪಿಸಿಕೊಳ್ಳಲು, ಕನಸುಗಳ ಬೆನ್ನಟ್ಟಲು ಮತ್ತು ಉನ್ನತ ಸ್ಥಾನಕ್ಕೇರಿ, ಸ್ವತಂತ್ರಳಾಗುವವರೆಗೂ ಅವರ ಎಲ್ಲಾ ಏಳು-ಬೀಳುಗಳಲ್ಲಿ ನಾವು ಜೊತೆಯಾಗಿರುತ್ತೇವೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾಗೆ ಮತ್ತೊಂದು ಸಂಕಷ್ಟ – ಸಿಬಿಐನಿಂದ ಪ್ರತ್ಯೇಕ FIR ದಾಖಲು

  • ಬ್ರಿಟಿಷ್ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ 3 ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

    ಬ್ರಿಟಿಷ್ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ 3 ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

    ನವದೆಹಲಿ: ಕಳೆದ ವಾರ ಸಂಸತ್ತು ಅಂಗೀಕರಿಸಿದ ಮೂರು ಹೊಸ ಕ್ರಿಮಿನಲ್ ನ್ಯಾಯ ಮಸೂದೆಗಳಿಗೆ (Criminal Laws) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸೋಮವಾರ ಅಂಕಿತ ಹಾಕಿದ್ದಾರೆ.

    ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872 ರ ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಾಯಿಸಿದ್ದು, ಮೂರು ಹೊಸ ಕಾನೂನುಗಳಾಗಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಅಂಗೀಕರಿಸಲಾಗಿತ್ತು. ಇದನ್ನೂ ಓದಿ:‌ ಲೋಕಸಭೆಯಲ್ಲಿ ಮೂರು ಕ್ರಿಮಿನಲ್ ಮಸೂದೆ ಅಂಗೀಕಾರ

    ಸಂಸತ್ತಿನಲ್ಲಿ ಮೂರು ವಿಧೇಯಕಗಳ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷೆ ನೀಡುವ ಬದಲು ನ್ಯಾಯ ಒದಗಿಸುವತ್ತ ಗಮನ ಹರಿಸಲಾಗಿದೆ ಎಂದು ಹೇಳಿದ್ದರು.

    ಆಗಸ್ಟ್‌ನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಗಳನ್ನು ಮೊದಲು ಮಂಡಿಸಲಾಗಿತ್ತು. ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ಹಲವಾರು ಶಿಫಾರಸುಗಳನ್ನು ಮಾಡಿದ ನಂತರ, ಸರ್ಕಾರವು ಬಿಲ್‌ಗಳನ್ನು ಹಿಂಪಡೆಯಲು ನಿರ್ಧರಿಸಿತು. ಕಳೆದ ವಾರ ಅವುಗಳ ಮರುರೂಪಿಸಿದ ಆವೃತ್ತಿಗಳನ್ನು ಪರಿಚಯಿಸಿತ್ತು. ಇದನ್ನೂ ಓದಿ: ಗೆಳತಿ ಮೇಲೆ ಪ್ರೀತಿ; ಲಿಂಗ ಬದಲಿಸಿಕೊಂಡ್ರೂ ಮದುವೆಗೆ ಒಪ್ಪದ ಮಹಿಳಾ ಟೆಕ್ಕಿಯನ್ನ ಜೀವಂತ ಸುಟ್ಟು ಹತ್ಯೆ

    ಭಾರತೀಯ ನ್ಯಾಯ ಸಂಹಿತಾವು ಪ್ರತ್ಯೇಕತೆಯ ಕೃತ್ಯಗಳು, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು, ಸಾರ್ವಭೌಮತ್ವ ಅಥವಾ ಏಕತೆಗೆ ಅಪಾಯವನ್ನುಂಟುಮಾಡುವಂತಹ ಅಪರಾಧಗಳನ್ನು ಪಟ್ಟಿಮಾಡುತ್ತದೆ.

    ಭಾರತೀಯ ನ್ಯಾಯ ಸಂಹಿತೆಯಲ್ಲಿ ಮೊದಲ ಬಾರಿಗೆ ಭಯೋತ್ಪಾದನೆ ಪದವನ್ನು ವ್ಯಾಖ್ಯಾನಿಸಲಾಗಿದೆ. ಐಪಿಸಿಯಲ್ಲಿ ಅದು ಇರಲಿಲ್ಲ. ಹೊಸ ಕಾನೂನುಗಳ ಅಡಿಯಲ್ಲಿ, ದಂಡವನ್ನು ವಿಧಿಸುವ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಆಕ್ಸಿಡೆಂಟ್ ಆಗಿ ಕಟ್ ಆದ ತಲೆ ಮೂರೂವರೆ ಗಂಟೆ ಶೋಧದ ಬಳಿಕ ಸಿಕ್ತು..!

  • ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ‘ಸಿಟಾಡೆಲ್’ ಜೋಡಿ

    ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ‘ಸಿಟಾಡೆಲ್’ ಜೋಡಿ

    ಸೌತ್ ನಟಿ ಸಮಂತಾ- ಬಾಲಿವುಡ್ ನಟ ವರುಣ್ ಧವನ್ ಅವರು ಸದ್ಯ ಸಿಟಾಡೆಲ್ ವೆಬ್ ಸಿರೀಸ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ದೇಶ-ವಿದೇಶದಲ್ಲಿ ಸಿಟಾಡೆಲ್ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಸೆರ್ಬಿಯಾದಲ್ಲಿ ಬೀಡು ಬಿಟ್ಟಿರುವ ಸಿಟಾಡೆಲ್ ತಂಡ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಭೇಟಿಯಾಗಿದ್ದಾರೆ. ಈ ಬಗ್ಗೆ ‘ಸಿಟಾಡೆಲ್’ ಜೋಡಿ ಸ್ಯಾಮ್- ವರುಣ್ ಫೋಟೋ ಖುಷಿಯಿಂದ ಹಂಚಿಕೊಂಡಿದ್ದಾರೆ.

    ಮೊದಲ ಬಾರಿಗೆ ವರುಣ್ ಧವನ್- ಸಮಂತಾ ಒಟ್ಟಾಗಿ ನಟಿಸುತ್ತಿದ್ದಾರೆ. ಹಾಲಿವುಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ ನಿರ್ವಹಿಸಿದ್ದ ಕಥೆಯಲ್ಲಿ ಇಂಡಿಯನ್ ವರ್ಷನ್‌ನಲ್ಲಿ ಸ್ಯಾಮ್- ವರುಣ್ ಕಾಣಿಸಿಕೊಳ್ತಿದ್ದಾರೆ. ಇದಕ್ಕಾಗಿ ಸೆರ್ಬಿಯಾದಲ್ಲಿ ಸಿನಿಮಾ ತಂಡ ಬೀಡು ಬಿಟ್ಟಿದೆ. ಈ ಸಂದರ್ಭಕ್ಕೆ ಸರಿಯಾಗಿ ಸೆರ್ಬಿಯಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದ್ದಾರೆ. ಹಾಗಾಗಿ ಅವರನ್ನ ಭೇಟಿಯಾಗುವ ಅವಕಾಶ ಸ್ಯಾಮ್ ತಂಡಕ್ಕೆ ಸಿಕ್ಕಿದೆ. ಖುಷಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಸಿಟಾಡೆಲ್ ಟೀಂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

     

    View this post on Instagram

     

    A post shared by VarunDhawan (@varundvn)

    ವರುಣ್ ಧವನ್ ಅಪ್‌ಲೋಡ್ ಮಾಡಿರುವ ಫೋಟೋವನ್ನು ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಖಾತೆಯ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಮೇಡಂ ಪ್ರೆಸಿಡೆಂಟ್’ ಎಂಬ ಕ್ಯಾಪ್ಷನ್ ಜೊತೆಗೆ ಕೈ ಮುಗಿಯುತ್ತಿರುವ ಇಮೋಜಿಯನ್ನು ಅವರು ಪೋಸ್ಟ್ ಮಾಡಿದ್ದಾರೆ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ಸೆರ್ಬಿಯಾದಲ್ಲಿ ಭೇಟಿಯಾಗುವ ಅವಕಾಶ ನಮ್ಮ ‘ಸಿಟಾಡೆಲ್’ ತಂಡಕ್ಕೆ ಸಿಕ್ಕಿತು. ಅವರನ್ನು ಭೇಟಿಯಾಗಿದ್ದಕ್ಕೆ ಹೆಮ್ಮೆ ಮತ್ತು ಖುಷಿ ಆಗಿದೆ ಎಂದು ವರುಣ್ ಧವನ್ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸಿನಿಮಾ ಸೋಲಿನ ಬಳಿಕ ನಿವೃತ್ತಿ ಘೋಷಿಸಿದ್ದ ಆಮೀರ್ ಖಾನ್ ಇದೀಗ ಟಾಲಿವುಡ್‌ನತ್ತ

    ‘ಸಿಟಾಡೆಲ್’ ಹಾಲಿವುಡ್ ವರ್ಷನ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಹಸಿಬಿಸಿ ದೃಶ್ಯದಲ್ಲಿ ನಟಿಸಿದ್ದಾರೆ. ಸಮಂತಾ ಇಂಡಿಯನ್ ವರ್ಷನ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರಾ.? ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ. ಎಲ್ಲದ್ದಕ್ಕೂ ಕಾದುನೋಡಬೇಕಿದೆ.