Tag: ರಾಶಾ

  • ಶ್ರೀಲೀಲಾಗೆ ಗೇಟ್‌ ಪಾಸ್‌- ರವೀನಾ ಟಂಡನ್‌ ಪುತ್ರಿಗೆ ಚಾನ್ಸ್‌

    ಶ್ರೀಲೀಲಾಗೆ ಗೇಟ್‌ ಪಾಸ್‌- ರವೀನಾ ಟಂಡನ್‌ ಪುತ್ರಿಗೆ ಚಾನ್ಸ್‌

    ‘ಕಿಸ್ಸಿಕ್’ ಬೆಡಗಿ ಶ್ರೀಲೀಲಾ (Sreeleela) ಲಕ್ ಕೈಕೊಟ್ಟಿದೆ. ಈಗಾಗಲೇ ಒಪ್ಪಿಕೊಂಡಿದ್ದ ಬಾಲಿವುಡ್ ಚಿತ್ರದಿಂದ ಅವರನ್ನು ಕೈಬಿಡಲಾಗಿದೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಶ್ರೀಲೀಲಾ ಕೈಬಿಟ್ಟ ಚಿತ್ರದಲ್ಲಿ ಸ್ಟಾರ್ ನಟಿಯ ಪುತ್ರಿಯನ್ನು ಆಯ್ಕೆ ಮಾಡಲಾಗಿದೆ ಎನ್ನಲಾದ ವಿಚಾರ ಈಗ ಹಾಟ್ ಟಾಪಿಕ್ ಆಗಿದೆ. ಇದನ್ನೂ ಓದಿ:ಮತ್ತೆ ಪ್ರಭಾಸ್‌ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

    ತೆಲುಗಿನಲ್ಲಿ ಶ್ರೀಲೀಲಾ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದಂತೆ ಬಾಲಿವುಡ್‌ನಿಂದ ಬಂಪರ್ ಆಫರ್‌ಗಳು ಅರಸಿ ಬಂದಿತ್ತು. ಕಾರ್ತಿಕ್ ಆರ್ಯನ್ ನಟನೆಯ ‘ಆಶಿಕಿ 3’ ಮತ್ತು ‘ಪತಿ ಪತ್ನಿ ಔರ್ ಓ 2’ ಸಿನಿಮಾಗೆ ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿತ್ತು. ಅದರಲ್ಲಿ ‘ಪತಿ ಪತ್ನಿ ಔರ್ ಓ 2’ ಚಿತ್ರದಿಂದ ಶ್ರೀಲೀಲಾರನ್ನು ಕೈಬಿಡಲಾಗಿದೆಯಂತೆ. ಇದನ್ನೂ ಓದಿ:ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್

    ಪ್ರಸ್ತುತ ಕಾರ್ತಿಕ್‌ ನಟನೆಯ ‘ಆಶಿಕಿ 3’ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಹೊಸ ಸಿನಿಮಾದಲ್ಲೂ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸೋದು ಬೇಡ ಎಂದು ತಂಡ ನಿರ್ಧರಿಸಿದೆಯಂತೆ. ಈ ಜೋಡಿಯನ್ನೇ ರಿಪೀಟ್ ಮಾಡೋದಕ್ಕಿಂತ ಹೊಸ ನಟಿಯನ್ನೇ ಆಯ್ಕೆ ಮಾಡೋಣ ಎಂದು ರವೀನಾ ಪುತ್ರಿ ರಾಶಾರನ್ನು (Rasha Thadani) ಚಿತ್ರತಂಡ ಆಯ್ಕೆ ಮಾಡಿದೆ ಎನ್ನಲಾಗಿದೆ. ಕಿಸ್ಸಿಕ್‌ ಬೆಡಗಿ ಬದಲು ಕಾರ್ತಿಕ್‌ಗೆ ರಾಶಾ ನಾಯಕಿಯಾಗಲಿದ್ದಾರೆ ಎಂಬುದು ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ.

    ಉಸ್ತಾದ್ ಭಗತ್ ಸಿಂಗ್, ಜ್ಯೂನಿಯರ್, ಮಾಸ್ ಜಾತ್ರಾ, ಆಶಿಕಿ 3 ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ.

  • ರಾಮ್ ಚರಣ್‌ಗೆ ನಾಯಕಿಯಾದ ರವೀನಾ ಟಂಡನ್ ಪುತ್ರಿ ರಾಶಾ

    ರಾಮ್ ಚರಣ್‌ಗೆ ನಾಯಕಿಯಾದ ರವೀನಾ ಟಂಡನ್ ಪುತ್ರಿ ರಾಶಾ

    ‘ಆರ್‌ಆರ್‌ಆರ್’ (RRR) ಚಿತ್ರದ ಸ್ಟಾರ್ ರಾಮ್ ಚರಣ್ (Ram Charan) ಇದೀಗ ‘ಉಪ್ಪೇನ’ ನಿರ್ದೇಶಕನ ಜೊತೆ ಕೈಜೋಡಿಸಿದ್ದಾರೆ. ಹೊಸ ಪ್ರಾಜೆಕ್ಟ್‌ಗೆ ರಾಮ್ ಚರಣ್‌ಗೆ ಜೋಡಿಯಾಗಿ ಸ್ಟಾರ್ ನಟಿಯ ಪುತ್ರಿ ಟಾಲಿವುಡ್‌ಗೆ ಪರಿಚಿತರಾಗುತ್ತಿದ್ದಾರೆ. ಇದನ್ನೂ ಓದಿ:ದೊಡ್ಮನೆ ಆಟಕ್ಕೆ ಜೊತೆಯಾಗ್ತಾರಾ ಮೇಘಾ ಶೆಟ್ಟಿ? ಕೊನೆಗೂ ಸಿಕ್ತು ಉತ್ತರ

    ಗೇಮ್ ಜೇಂಜರ್ ಸಿನಿಮಾದಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಉಪ್ಪೇನ ಡೈರೆಕ್ಟರ್ ಬುಚ್ಚಿಬಾಬು ಹೊಸ ಚಿತ್ರದ ಕಥೆ ಕೇಳಿ, ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಪುತ್ರಿ ರಾಶಾ (Rasha) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ರಾಮ್ ಚರಣ್‌ಗೆ ನಾಯಕಿಯಾಗುವ ಮೂಲಕ ರಾಶಾ ತೆಲುಗಿಗೆ (Tollywood) ಎಂಟ್ರಿ ಕೊಡುತ್ತಿದ್ದಾರೆ. ಚಿತ್ರತಂಡದಿಂದ ಯಾವುದೇ ಅಧಿಕೃತ ಅಪ್‌ಡೇಟ್ ಹೊರಬಿದ್ದಿಲ್ಲ. ಆದರೆ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರವೀನಾರಂತೆಯೇ ರಾಶಾ ಕೂಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುತ್ತಾರಾ? ಕಾಯಬೇಕಿದೆ.

    ಒಂದು ಕಾಲದಲ್ಲಿ ಸೌತ್ ಸಿನಿಮಾ ಅಂದರೆ ಕಡೆಗಣಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಲು ಬಾಲಿವುಡ್ ನಟಿಯರು ಆಸಕ್ತಿ ತೋರುತ್ತಿದ್ದಾರೆ. ಹಿಂದಿ ಸಿನಿಮಾಗಿಂತ ಸೌತ್ ಸಿನಿಮಾಗಳೇ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    ಬಾಲಿವುಡ್‌ನ (Bollywood) ಸ್ಟಾರ್ ಕಲಾವಿದರ ಮಕ್ಕಳು ಒಬ್ಬಬ್ಬರೇ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಈ ಸಾಲಿಗೆ ʻಕೆಜಿಎಫ್‌ 2ʼ ಖ್ಯಾತಿಯ ರವೀನಾ ಟಂಡನ್ (Raveena Tandon) ಮುದ್ದಿನ ಮಗಳು ರಾಶಾ (Rasha) ಬಿಟೌನ್‌ಗೆ ಲಗ್ಗೆ ಇಡ್ತಿದ್ದಾರೆ.

    ಚಿತ್ರರಂಗದಲ್ಲಿ ನಟ- ನಟಿಯರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿವೆ. ಇದೀಗ ಮತ್ತೊಬ್ಬ ಸ್ಟಾರ್‌ಕಿಡ್ ನಟನೆಗೆ ಪದಾರ್ಪಣೆ ಮಾಡುವ ಸುದ್ದಿ ಕೇಳಿ ಬರುತ್ತಿದೆ. ಬಾಲಿವುಡ್‌ನ ಜನಪ್ರಿಯ ನಟಿ ರವೀನಾ ಟಂಡನ್ (Raveena Tandon) ಮತ್ತು ಅನಿಲ್ ಥಡಾನಿ (Anil Thadani) ಅವರ ಪುತ್ರಿ ರಾಶಾ ಶೀಘ್ರದಲ್ಲಿಯೇ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

     

    View this post on Instagram

     

    A post shared by Rasha (@rashathadani)

    ರಾಶಾಗೆ ಈಗ 17ರ ಹರೆಯ. ಈಕೆ ಈಗ ತಾಯಿ ರವೀನಾ ಅವರಂತೆಯೇ ಸಾಗಲು ಸಿದ್ಧತೆ ನಡೆಸಿದ್ದಾಳೆ. ರವೀನಾ ಅವರ ಮಗಳು ಸದ್ಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಈಕೆಗೆ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳು ಇದ್ದಾರೆ. ಇದನ್ನೂ ಓದಿ: ಬಳ್ಳಾರಿ ಉತ್ಸವದಲ್ಲಿ ಮಂಗ್ಲಿ ಕಾರು ಒಡೆದ ಕಿಡಿಗೇಡಿಗಳು- ಮೇಕಪ್‌ ರೂಂಗೆ ನುಗ್ಗಿ ದಾಂಧಲೆ

    ನಿರ್ದೇಶಕ ಅಭಿಷೇಕ್ ಕಪೂರ್ (Abhishek Kapoor) ತಮ್ಮ ಮುಂದಿನ ಚಿತ್ರದಲ್ಲಿ, ರವೀನಾ ಟಂಡನ್ ಮತ್ತು ಅನಿಲ್ ಥಡಾನಿ ಅವರ ಪುತ್ರಿ ರಾಶಾ ಅವರನ್ನು ಪರಿಚಯಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಇನ್ನೂ ಹೆಸರಿಡಲಿಲ್ಲ. ಆದರೆ ಇದೊಂದು ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಅಜಯ್ ದೇವಗನ್ (Ajay Devgan) ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ (Aman Devgan) ಕೂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅಜಯ್ ದೇವಗನ್ ಅವರು ಹಿಂದೆಂದೂ ಮಾಡಿರದಂಥ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ರಾಶಾ ಮತ್ತು ಅಮನ್ ದೇವಗನ್ ಸಿನಿಮಾ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ಮೂಲಕ  ಬಾಲಿವುಡ್‌ಗೆ ಪಾದಾರ್ಪಾಣೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k