Tag: ರಾಯ್ ಪುರ

  • ದೇಶದ ಅತೀ ದೊಡ್ಡ ಸ್ಟೀಲ್ ತಯಾರಿಕಾ ಘಟಕದಲ್ಲಿ ಭಾರೀ ಅವಘಡ- 6 ಮಂದಿ ಸಜೀವ ದಹನ

    ದೇಶದ ಅತೀ ದೊಡ್ಡ ಸ್ಟೀಲ್ ತಯಾರಿಕಾ ಘಟಕದಲ್ಲಿ ಭಾರೀ ಅವಘಡ- 6 ಮಂದಿ ಸಜೀವ ದಹನ

    ರಾಯ್ಪುರ: ಛತ್ತೀಸ್‍ಗಢದ ಭಿಲಾಯಿನಲ್ಲಿರೋ ಸ್ಟೀಲ್ ತಯಾರಿಕಾ ಘಟಕ(ಉಕ್ಕು ಉತ್ಪಾದಕಾ ಘಟಕ)ದಲ್ಲಿ ಅನಿಲ ಪೈಪ್ ಸ್ಫೋಟಗೊಂಡ ಪರಿಣಾಮ 6 ಮಂದಿ ಸಜೀವ ದಹನವಾದ ಘಟನೆ ನಡೆದಿದೆ.

    ಈ ಘಟನೆ ಇಂದು ಮಧ್ಯಾಹ್ನ ರಾಜಧಾನಿ ರಾಯ್ ಪುರದಿಂದ 30 ಕಿಮೀ ದೂರದಲ್ಲಿ ನಡೆದಿದೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಕೋಕ್ ಓವನ್ ಸ್ಟೇಷನ್ ಬಳಿ ಇರುವ ಪೈಪ್ ಲೈನ್ ನಲ್ಲಿ ಈ ಸ್ಫೋಟ ಸಂಭವಿಸಿದೆ ಅಂತ ಪೊಲೀಸರು ಹೇಳಿದ್ದಾರೆ.

    ಘಟನೆಯ ಮಾಹಿತಿ ಪಡೆದ ಕೂಡಲೇ ಪೊಲೀಸರು ಹಾಗೂ ರಕ್ಷಣಾ ತಂಡ ದೌಡಾಯಿಸಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಸರಿ ಸುಮಾರು 6 ಮಂದಿ ಘಟನೆಯಿಂದಾಗಿ ಸಜೀವ ದಹನವಾಗಿದ್ದಾರೆ. ಇನ್ನು 14 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಅಂತ ಪೊಲೀಸ್ ಇನ್ಸ್ ಪೆಕ್ಟರ್ ಜಿಪಿ ಸಿಂಗ್ ತಿಳಿಸಿದ್ದಾರೆ.

    ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಗೆ ಸೇರಿದ ಉಕ್ಕಿನ ಘಟಕ ಇದಾಗಿದ್ದು, ಭಾರತದಲ್ಲೇ ಅತಿ ದೊಡ್ಡ ಉಕ್ಕಿನ ಘಟಕ ಎಂದೇ ಹೆಸರು ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv