Tag: ರಾಯ್ಪರ

  • ಛತ್ತೀಸ್‍ಗಢ ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸ

    ಛತ್ತೀಸ್‍ಗಢ ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸ

    ರಾಯ್ಪರ: ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಗಣರಾಜ್ಯೋತ್ಸವ ಅಂಗವಾಗಿ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯನ್ನು ಕೊಟ್ಟಿದ್ದಾರೆ. ಸರ್ಕಾರಿ ಕಚೇರಿಗಳು ವಾರದಲ್ಲಿ 5 ದಿನ ಮಾತ್ರ ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಸರ್ಕಾರಿ ನೌಕರರ ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ, ಛತ್ತೀಸ್‍ಗಢ ಸರ್ಕಾರವು ವಾರದಲ್ಲಿ ಐದು ದಿನ ಕೆಲಸ ನಿಯಮವನ್ನು ಜಾರಿಗೊಳಿಸುತ್ತಿದೆ. ಪಿಂಚಣಿ ಯೋಜನೆಯಲ್ಲಿ ರಾಜ್ಯ ಸರ್ಕಾರದ ಕೊಡುಗೆಯನ್ನು ಸಹ ಶೇಕಡಾ 10 ರಿಂದ ಶೇಕಡಾ 14 ಕ್ಕೆ ಹೆಚ್ಚಿಸಲಾಗುವುದು ಎಂದು ಬಘೇಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ಮಹಿಳೆಯರ ಸುರಕ್ಷತೆಯನ್ನು ಬಲಪಡಿಸಲು ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಸುರಕ್ಷತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ವಸತಿ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿರುವ ಸಣ್ಣ ವಾಣಿಜ್ಯ ಚಟುವಟಿಕೆಗಳಿಗೆ ನ್ಯಾಯ ಒದಗಿಸುವ ಮಸೂದೆಯನ್ನು ರಾಜ್ಯ ಸರ್ಕಾರವು ಪರಿಚಯಿಸುತ್ತಿದೆ. ಇದು ಸಾವಿರಾರು ಸಣ್ಣ ಉದ್ಯಮಿಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

    ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವಂತೆ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯ ಸಾರಿಗೆ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗುವುದು. ಇದಕ್ಕೆ ಪೂರಕವಾಗಿ ಕಲಿಕಾ ಚಾಲನಾ ಪರವಾನಗಿ ನೀಡುವ ನಿಯಮಗಳನ್ನು ಸರಳೀಕರಿಸಲಾಗುವುದು. ಛತ್ತೀಸ್‍ಗಢವು ದಟ್ಟವಾದ ಅರಣ್ಯ ಪ್ರದೇಶವಾಗಿದ್ದು, ಬಹುಪಾಲು ಬುಡಕಟ್ಟು ಜನಸಂಖ್ಯೆಯ ಜೀವನೋಪಾಯವು ಅರಣ್ಯಗಳ ಮೇಲೆ ಅವಲಂಬಿತವಾಗಿದೆ. ಈ ಅರಣ್ಯವಾಸಿಗಳಿಗೆ ಕೆಲವು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ತರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

  • ಹೆದ್ದಾರಿಯಲ್ಲಿ ಉರುಳಿ ಬಿದ್ದ ಲಾರಿ- ಮೀನಿಗಾಗಿ ಮುಗಿಬಿದ್ದ ಜನರು

    ಹೆದ್ದಾರಿಯಲ್ಲಿ ಉರುಳಿ ಬಿದ್ದ ಲಾರಿ- ಮೀನಿಗಾಗಿ ಮುಗಿಬಿದ್ದ ಜನರು

    ರಾಯ್ಪುರ: ಹೆದ್ದಾರಿಯಲ್ಲಿ ಮೀನು ತುಂಬಿದ ಲಾರಿಯೊಂದು ಉರುಳಿ ಬಿದ್ದ ಪರಿಣಾಮ ಬೆಳ್ಳಂಬೆಳಗ್ಗೆ ತಾಜಾ ಮೀನುಗಳಿಗಾಗಿ ಜನ ಮುಗಿಬಿದ್ದು ಬಾಚಿಕ್ಕೊಳ್ಳುತ್ತಿರುವ ಘಟನೆ ರಾಯ್‍ಪುರದಲ್ಲಿ ಕಂಡು ಬಂದಿದೆ.

    ಮೀನುಗಳನ್ನು ತುಂಬಿಕೊಂಡು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಆಗ ಲಾರಿಯಲ್ಲಿದ್ದ ಮೀನುಗಳು ರಸ್ತೆ ತುಂಬಾ ಬಿದ್ದಿವೆ. ನೀರಿನಿಂದ ಹೊರ ಬಂದು ಚಡಪಡಿಸುತ್ತಿದ್ದ ತಾಜಾ ಮೀನುಗಳನ್ನು ಕಂಡು ನೂರಾರು ಜನರು ದೌಡಾಯಿಸಿದ್ದಾರೆ. ಮೀನುಗಳಿಗಾಗಿ ಮುಗಿಬಿದ್ದು ಬಾಚಿಕೊಳ್ಳುತ್ತಿರುವ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ವಿಡಿಯೋದಲ್ಲಿ ಏನಿದೆ?
    ಹೆದರಾರಿಯಲ್ಲಿ ರಭಸವಾಗಿ ಚಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಂತ್ರಣ ತಪ್ಪಿ ಉರುಳಿ ಬಿದ್ದಿದೆ. ಆಗ ಲಾರಿಯಲ್ಲಿ ತಾಜಾ ಮೀನುಗಳು ರಸ್ತೆ ತುಂಬಾ ಬಿದ್ದಿದೆ. ಸುತ್ತಮುತ್ತಲಿನ ಜನರು ಮೀನಿಗಳು ಬಾಚಿ ತಮ್ಮ ಬ್ಯಾಗ್‍ಗಳಿಗೆ ಹಾಕಿಕೊಳ್ಳುತ್ತಿದ್ದಾರೆ. ಲಾರಿ ಬಿದ್ದ ಕೆಲವೇ ಕ್ಷಣದಲಿ ಜನರು ಸಿಕ್ಕ ಬ್ಯಾಗ್, ಪಾತ್ರೆ ಹಿಡಿದು ಸ್ಥಳಕ್ಕೆ ಓಡಿ ಬಂದು ಮೀನುಗಳನ್ನು ತುಂಬಿಸಿಕೊಂಡು ಖುಷಿಪಟ್ಟಿದ್ದಾರೆ.

    ಮೀನು ತುಂಬಿದ್ದ ಲಾರಿ ಉರುಳಿಬಿದ್ದು ಅಪಾರಪ್ರಮಾಣವಾದ ನಷ್ಟವಾಗಿದೆ. ಈ ವಿಚಾರವನ್ನು ತಿಳಿದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಸ್ಥಳೀಯರ ಸಹಾಯದಿಂದ ಲಾರಿಯನ್ನು ಮೇಲಕ್ಕೆ ಎತ್ತಲಾಗಿದೆ. ಉಳಿದ ಕೆಲವು ಮೀನುಗಳನ್ನು ಲಾರಿಗೆ ತುಂಬಿ ರಾಯ್ಪುರಕ್ಕೆ ಕಳುಹಿಸಲಾಗಿದೆ.

  • ಹೈ ಪ್ರೊಫೈಲ್ ಸೆಕ್ಸ್ ರ‌್ಯಾಕೆಟ್  – ನಗ್ನವಾಗಿ ಸಿಕ್ಕಿ ಬಿದ್ದ 12 ಜೋಡಿ

    ಹೈ ಪ್ರೊಫೈಲ್ ಸೆಕ್ಸ್ ರ‌್ಯಾಕೆಟ್ – ನಗ್ನವಾಗಿ ಸಿಕ್ಕಿ ಬಿದ್ದ 12 ಜೋಡಿ

    ರಾಯ್ಪುರ: ರಾಯ್ಪುರದ ಬೋರಿಯಾಕಲಾದಲ್ಲಿ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ಮಾಡಿದ್ದು, 12 ಮಂದಿಗೂ ಹೆಚ್ಚು ಹುಡುಗಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಭಾನುವಾರ ರಾತ್ರಿ ನಗರದ ಪ್ರಸಿದ್ಧ ಪ್ರದೇಶದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ಮಾರುವೇಷದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಹುಡುಗ ಮತ್ತು ಹುಡುಗಿಯನ್ನು ನಗ್ನ ಸ್ಥಿತಿಯಲ್ಲಿ ಬಂಧಿಸಿದ್ದಾರೆ.

    ಪೊಲೀಸರು ಬಂಧಿಸಿದ ಹುಡುಗಿಯರು ಮುಂಬೈ ಹಾಗೂ ಕೊಲ್ಕತ್ತಾದವರಾಗಿದ್ದು, ಇವರೆಲ್ಲಾ ರಾಯ್ಪುರಕ್ಕೆ ಒಂದು ತಿಂಗಳ ಒಪ್ಪಂದದ ಮೇಲೆ ಮೇರೆಗೆ ಬಂದಿದ್ದರು ಎನ್ನಲಾಗಿದೆ. ಈ ಹುಡುಗಿಯರು ಈಗಾಗಲೇ 28 ದಿನಗಳನ್ನು ಪೂರೈಸಿದ್ದರು. ಆದರೆ ಕೊನೆಯ ದಿನ ಹುಡುಗಿಯರು ಗ್ರಾಹಕರ ಜೊತೆಗಿದ್ದ ವೇಳೆ ಪೊಲೀಸರು ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದಾರೆ.

    ಪೊಲೀಸರು ಮಾಹಿತಿ ಬಂದ ಪ್ರಕಾರ ಬೋರಿಯಾಕಲಾದ ವಸತಿ ಬೋರ್ಡ್ ಕಾಲೊನೀಯ ಒಂದು ಮನೆಯ ಮೇಲೆ ದಾಳಿ ಮಾಡಿದ್ದಾರೆ. ಸುತ್ತಾಮುತ್ತಾ ಪೊಲೀಸರು ಮುತ್ತಿಗೆ ಹಾಕಿದ್ದರಿಂದ ಎಲ್ಲರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಹಿಳೆಯೊಬ್ಬಳು ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದಳು.

    ಈ ತಂಡ ತಮ್ಮದೆ ಆಗ ವ್ಯಾಟ್ಸಪ್ ಗುಂಪನ್ನು ಸೃಷ್ಟಿಸಿದ್ದು, ಅದರಲ್ಲಿ ಮುಂಬೈ, ದೆಹಲಿ ಮತ್ತು ಕೊಲ್ಕತ್ತಾ ಸೇರಿದಂತೆ ಇತರೆ ನಗರಗಳ ಯುವತಿಯರ ಫೋಟೋಗಳು ಮತ್ತು ದರಗಳು ಹಾಕಲಾಗುತ್ತಿತ್ತು. ನಂತರ ಗ್ರಾಹಕರನ್ನು ಇಷ್ಟಪಟ್ಟ ಹುಡುಗಿಯನ್ನ ಬೋರಿಯಾಕಲಾಕ್ಕೆ ಕರೆಸಿಕೊಳ್ಳಲಾಗುತ್ತಿತ್ತು.

    ಬಂಧಿತ ಹುಡುಗಿಯರಿಂದ 61,000 ನಗದು, 8 ಮೊಬೈಲ್ ಫೋನ್ ಗಳು, ಟ್ಯಾಬ್ಲೆಟ್, ಕಾಂಡೋಮ್ ಮತ್ತು ಅಕೌಂಟಿಂಗ್ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗ್ರಾಹಕರು ಮತ್ತು ಹುಡುಗಿಯರರ ವಿರುದ್ಧ ದೂರು ದಾಖಲಿಸಿಕೊಂಡು ಎಲ್ಲರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಯುವತಿಯರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

    ಮುಂಬೈ, ದೆಹಲಿ ಮತ್ತು ಕೋಲ್ಕತಾದಿಂದ ಹುಡುಗಿಯರನ್ನು ಕರೆಸಿಕೊಂಡು ಈ ದಂಧೆ ನಡೆಸುತ್ತಿದ್ದ ದಲ್ಲಾಳಿ ತಪ್ಪಿಸಿಕೊಂಡಿದ್ದಾನೆ. ಜಾರ್ಖಂಡ್ ನ ಮಹಿಳೆಯೊಬ್ಬರಿಂದ ಬ್ರೋಕರ್ ಬಗ್ಗೆ ಮಾಹಿತಿ ಪಡೆದಿದ್ದೇವೆ. ಆತನ ಪತ್ತೆಗೆ ನಾವು ಬಲೆ ಬೀಸಿದ್ದು, ಶೀಘ್ರವೇ ಆತನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.