Tag: ರಾಯರು

  • ರಾಯರ ಸನ್ನಿಧಾನದಲ್ಲಿ ಹರಿಪ್ರಿಯಾ-ವಸಿಷ್ಠ ದಂಪತಿ

    ರಾಯರ ಸನ್ನಿಧಾನದಲ್ಲಿ ಹರಿಪ್ರಿಯಾ-ವಸಿಷ್ಠ ದಂಪತಿ

    ನ್ನಡದ ಹೆಸರಾಂತ ತಾರಾ ಜೋಡಿ ವಸಿಷ್ಠ ಸಿಂಹ (Vasishtha Simha) ಮತ್ತು ಹರಿಪ್ರಿಯಾ (Haripriya) ದಂಪತಿ ಮಂತ್ರಾಲಯಕ್ಕೆ (Mantralaya) ತೆರಳಿ ರಾಯರ ದರ್ಶನ ಪಡೆದಿದ್ದಾರೆ. ಮದುವೆಯ ನಂತರ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಈ ತಾರಾ ಜೋಡಿಯು ಮಂತ್ರಾಲಯಕ್ಕೂ ಬಂದು ರಾಯರ ಮೂಲ ಬೃಂದಾವನದ ದರ್ಶನದ ಮಾಡಿದ್ದಾರೆ.

    ಎರಡೂವರೆ ವರ್ಷಗಳು ಪ್ರೀತಿಸಿದ್ದ ಸಿಂಹಪ್ರಿಯಾ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಬಳಿಕ ಮೈಸೂರಿನಲ್ಲಿ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಮದುವೆ ಬಳಿಕ ವಸಿಷ್ಠ ಸಿಂಹ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದರೆ, ಹರಿಪ್ರಿಯಾ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಹಾಗಾಗಿ ಸಹಜವಾಗಿಯೇ ಸಿನಿಮಾ ರಂಗದಿಂದ ಅವರು ದೂರ ಉಳಿಯಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಮತ್ತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗುತ್ತಾರಾ ಅಥವಾ ಇಲ್ಲವಾ ಎನ್ನುವುದು ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಳೆಕಟ್ಟಿದ ರಾಯರ ಆರಾಧನೆ

    ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಳೆಕಟ್ಟಿದ ರಾಯರ ಆರಾಧನೆ

    ರಾಯಚೂರು: ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರು ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಅದ್ದೂರಿಯಾಗಿ ಜರುಗುತ್ತಿದೆ. ಪೂರ್ವಾರಾಧನೆ ಹಿನ್ನೆಲೆ ಇಂದು ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

    ಇಂದು ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಣ್ಯರಿಗೆ ಅಭಿನಂದನಾ ಸನ್ಮಾನ ನಡೆಯಿತು. ವಿವಿಧ ಕಲಾವಿದರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಾಳೆ ಆಗಸ್ಟ್ 24 ರಂದು ರಾಯರ ಮಧ್ಯಾರಾಧನೆ ನಡೆಯಲಿದೆ. ಇದನ್ನೂ ಓದಿ: ಶ್ರೀಗುರು ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ: ಮಂತ್ರಾಲಯದಲ್ಲಿ ಪೂರ್ವಾರಾಧನೆ ಸಂಭ್ರಮ

    ರಾಯರು ಸಶರೀರವಾಗಿ ವೃಂದಾವನಸ್ಥರಾಗಿ 350 ವರ್ಷಗಳಾಗಲಿವೆ. ರಾಯರು 700 ವರ್ಷ ಕಾಲ ವೃಂದಾವನದಲ್ಲಿರುತ್ತಾರೆ ಎನ್ನುವ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದ 350ನೇ ಆರಾಧನಾ ಮಹೋತ್ಸವಕ್ಕೆ ವಿಶೇಷತೆಯಿದ್ದು, 700 ವರ್ಷ ಅವಧಿಯ ಮಧ್ಯಭಾಗವೇ ಈ ವರ್ಷದ ಮಧ್ಯಾರಾಧನೆಯಾಗಿದೆ. ಮಧ್ಯಾರಾಧನೆ ಹಿನ್ನೆಲೆ ತಿರುಮಲ ತಿರುಪತಿ ದೇವಾಲಯದಿಂದ ರಾಯರಿಗೆ ಶೇಷವಸ್ತ್ರ ಸಮರ್ಪಣೆ ನಡೆಯಲಿದೆ. ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಯಲಿದೆ. ಇದನ್ನೂ ಓದಿ: ಮಂತ್ರಾಲಯ ಶ್ರೀಗಳಿಂದ ಹೊಸ ಸಂಪ್ರದಾಯಕ್ಕೆ ನಾಂದಿ – ಸ್ವಾಮೀಜಿಗಳ ರಕ್ಷಣೆಗೆ ಬೌನ್ಸರ್​​​ಗಳ ನೇಮಕ