ಬೆಳಗಾವಿ: ಗ್ರಾಮ ಪಂಚಾಯತ್ ಒಳಚರಂಡಿ (Sewerage) ಸ್ವಚ್ಛಗೊಳಿಸದ್ದಕ್ಕೆ ವೃದ್ಧ ದಂಪತಿಯೇ ಗಟಾರಕ್ಕೆ ಇಳಿದು ಸ್ವಚ್ಛಗೊಳಿಸುವ ಮೂಲಕ ಸುದ್ದಿಯಾಗಿದ್ದಾರೆ.
ರಾಯಬಾಗ (Rayabhagh) ತಾಲೂಕಿನ ಇಟನಾಳ (Itanal) ಗ್ರಾಮದಲ್ಲಿ ಸೊಳ್ಳೆ ಕಾಟ ವಿಪರೀತವಾಗಿದೆ ಇದರ ಜೊತೆ ಕೆಟ್ಟ ಕೊಳೆತ ವಾಸನೆ ಬರುವುದು ಈಗ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮದ ಹಲವು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದನ್ನೂ ಓದಿ: ಚಾಮರಾಜನಗರ | ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು
ಗ್ರಾಮದಲ್ಲಿ ಹೆಚ್ಚಾದ ಸಾಂಕ್ರಾಮಿಕ ರೋಗಗಳ (Infectious Diseases) ಭೀತಿಯಿಂದ ಗ್ರಾಮಸ್ಥರು ಪಂಚಾಯತ್‌ಗೆ ಹಲವು ಬಾರಿ ಒಳಚರಂಡಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿದ್ದರು. ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಪಿಡಿಓಗೆ ಮನವಿ ಮಾಡಿದರೂ ಕ್ಯಾರೇ ಅಂದಿಲ್ಲ. ಅಷ್ಟೇ ಅಲ್ಲದೇ ಗಟಾರಗಳ ಸ್ವಚ್ಚತೆಗಾಗಿ ಸಿಬ್ಬಂದಿಗೆ 200 ರೂ. ನೀಡಬೇಕೆಂದು ಹೇಳಿದ್ದಾರೆ.
ಇದರಿಂದ ಸಿಟ್ಟಾದ ಗ್ರಾಮದ ವೃದ್ಧ ದಂಪತಿ ಲಕ್ಷ್ಮಣ ಭಜಂತ್ರಿ ಹಾಗೂ ಮಹಾದೇವಿ ಅವರು ಟ್ಟಿ, ಸಣಿಕೆ ತೆಗೆದುಕೊಂಡು ಗಟಾರ ಸ್ವಚ್ಛಗೊಳಿಸುತ್ತಿದ್ದಾರೆ.
ಚಿಕ್ಕೋಡಿ: ತಾನೇ ಸಾಕಿ ಸಲುಹುತ್ತಿದ್ದ ಮಾವುತನನ್ನು ಆನೆಯೊಂದು (Elephant) ಸೊಂಡಿಲಿನಿಂದ ತಿವಿದು ಕೊಂದಿರುವ ಮನಕಲಕುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ನಡೆದಿದೆ.
ಅಲಖನೂರ ಗ್ರಾಮದ ಕರಿಯಪ್ಪ ಬೇವನೂರ (30) ಮೃತ ದುರ್ದೈವಿ. ಅಲಖನೂರ ಶ್ರೀ ಕರಿಸಿದ್ದೇಶ್ವ ದೇವಸ್ಥಾನದ 21 ವರ್ಷದ ಧ್ರುವ ಹೆಸರಿನ ಆನೆ ತನ್ನ ಮಾವುತನನ್ನೆ ಸಾಯಿಸಿದೆ. ಇದನ್ನೂ ಓದಿ: ಖ್ಯಾತ ಚಲನಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ ಇನ್ನಿಲ್ಲ
ಭಾನುವಾರ ರಾತ್ರಿ ಆನೆಗೆ ಮದ ಬಂದಿತ್ತು. ಇಂದು ಬೆಳಗ್ಗೆ ಕರಿಯಪ್ಪ ಮೇವು ಹಾಕಲು ಹೋದಾಗ ಗಂಡಾನೆ ಸೊಂಡಿಲಿನಿಂದ ಹಾಗೂ ದಂತಗಳಿಂದ ತಿವಿದು ಹತ್ಯೆ ಮಾಡಿದೆ.
ಕಳೆದ 10 ದಿನದ ಹಿಂದೆಯಷ್ಟೇ ಕರಿಯಪ್ಪಗೆ ಗಂಡು ಮಗು ಜನಿಸಿತ್ತು. ಕರಿಯಪ್ಪ ಸಾವಿನ ವಿಷಯ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕೋಡಿ: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ (Raibag) ತಾಲೂಕಿನ ನಿಡಗುಂದಿ (Nidagundi) ಗ್ರಾಮದಲ್ಲಿ ನಡೆದಿದೆ.
ರಮ್ಯಾಶ್ರೀ ಬಸವರಾಜ ಹಂಪನ್ನವರ (25) ಮೃತ ಮಹಿಳೆ. ಅನಾರೋಗ್ಯದ ಸಮಸ್ಯೆಯಿಂದ ಮಹಿಳೆ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ರಮ್ಯಾಶ್ರೀ ಕಳೆದ ನಾಲ್ಕು ವರ್ಷದ ಹಿಂದೆ ಬೇರೆ ಮದುವೆ ಆಗಿ ಪತಿಯಿಂದ ಬೇರ್ಪಟ್ಟಿದ್ದಳು. ಬಳಿಕ ಮೂರು ತಿಂಗಳ ಹಿಂದೆ ನಿಡಗುಂದಿ ಗ್ರಾಮದ ಬಸವರಾಜ ಹಂಪನ್ನವರ ಎಂಬವರನ್ನು ಮದುವೆ ಆಗಿದ್ದಳು. ಮೊದಲನೆ ಮದುವೆಯಾಗಿ ನಾಲ್ಕು ವರ್ಷ ಸಂಸಾರ ನಡೆಸಿದ್ದಳು. ಬಳಿಕ ಮತ್ತೊಂದು ಮದುವೆ ಆಗಿ ಕೇವಲ ಮೂರೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ ರಮ್ಯಾಶ್ರೀ ಶವ ಪತ್ತೆಯಾಗಿದೆ. ಇದನ್ನೂ ಓದಿ: ಟೆಕ್ಕಿ ಅತುಲ್ ಆತ್ಮಹತ್ಯೆ ಕೇಸ್ – ತಲೆಮರೆಸಿಕೊಂಡಿದ್ದ ಪತ್ನಿ ಬಂಧನ
ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿ ಕಂಡು ಪತಿ ಬಸವರಾಜ ಕೂಡ ಆತ್ನಹತ್ಯೆಗೆ ಯತ್ನಿಸಿದ್ದಾರೆ. ಭಯಗೊಂಡು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಸದ್ಯ ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಪತಿ ಬಸವರಾಜ್ ಹಂಪನ್ನವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಿತ್ರದುರ್ಗ| ಲಾರಿ, 2 ಕಾರುಗಳ ನಡುವೆ ಸರಣಿ ಅಪಘಾತ – 4 ಎಮ್ಮೆಗಳು ಸಾವು
ಚಿಕ್ಕೋಡಿ: ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬೆಳಗಾವಿಯ (Belagavi) ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ನಡೆದಿದೆ.
ಜು.8ರ ರಾತ್ರಿ ಹಿಡಕಲ್ ಗ್ರಾಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಡಿಯಲು ಹಣ ಕೇಳುತ್ತಿದ್ದ ಸೋಮಯ್ಯ ಹಿರೇಮಠ (24) ಹತ್ಯೆಗೊಳಗಾದ ವ್ಯಕ್ತಿ. ಸೋಮಯ್ಯ ಕೆಲಸ ಮಾಡದೇ ಮನೆಯಲ್ಲೇ ಇರುತ್ತಿದ್ದ. ಅಲ್ಲದೇ ವಿಪರೀತ ಮದ್ಯ ಕುಡಿಯುತ್ತಿದ್ದ. ಕುಡಿಯಲು ಹಣಕ್ಕಾಗಿ ಜುಲೈ 8ರ ರಾತ್ರಿ ಬಳಿ ಗಲಾಟೆ ಮಾಡಿದ್ದಾನೆ. ಈ ವೇಳೆ ಆತನ ತಂದೆ ತಂದೆ ಮಹಾಲಿಂಗಯ್ಯ, ಸೋದರ ಬಸಯ್ಯ ಸೇರಿ ತಲೆಗೆ ಬೆತ್ತದಲ್ಲಿ ಹೊಡೆದು ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ – ಲಾಠಿಚಾರ್ಜ್‌ಗೆ ಬಿಜೆಪಿ ನಾಯಕ ಬಲಿ
ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ನಾಟಕ ಮಾಡಿದ್ದರು. ಬಳಿಕ ಸಾಕ್ಷಿ ನಾಶ ಮಾಡಲು ಶವ ಮಣ್ಣು ಮಾಡುವ ಬದಲು ತಮ್ಮ ಜಮೀನಿನಲ್ಲಯೇ ಸುಟ್ಟು ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು ಸೋಮಯ್ಯನ ಶವದ ತಲೆಯಲ್ಲಿ ಗಾಯವಾಗಿದ್ದನ್ನು ಗಮನಿಸಿದ್ದರು. ಆ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಕೊಲೆಯ ವಿಚಾರ ಬಯಲಾಗಿದೆ. ಆರೋಪಿ ಮಹಾಲಿಂಗಯ್ಯ ಹಿರೇಮಠ(54), ಬಸಯ್ಯ ಹಿರೇಮಠ(26) ಬಂಧಿಸಲಾಗಿದೆ. ಈ ಸಂಬಂಧ ಹಾರೂಗೇರಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ್ರು!
ಬೆಳಗಾವಿ: ರಾಯಬಾಗ ಮತಕ್ಷೇತ್ರ ಎಸ್‍ಸಿ ಮೀಸಲು ಕ್ಷೇತ್ರ. ಶಾಸಕ ದುರ್ಯೋಧನ ಐಹೊಳೆ ಸತತವಾಗಿ ಇಲ್ಲಿ 3 ಬಾರಿಯಿಂದಲೂ ಗೆದ್ದು ಬೀಗುತ್ತಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್‍ನ ಬಂಡಾಯ. ಪಕ್ಷ ಒಬ್ಬರಿಗೆ ಟಿಕೆಟ್ ಘೋಷಣೆ ಮಾಡಿದರೆ, ಇನ್ನೊಬ್ಬರು ಸದಸ್ಯರು ಇಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪ್ರದೀಪ್ ಮಾಳಗಿಯವರಿಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಹಾವೀರ ಮೊಹಿತೆಯವರು ಸ್ಪರ್ಧೆ ಮಾಡಿ ಪ್ರದೀಪ್ ಮಾಳಗಿಯವರ ಗೆಲುವಿಗೆ ಬ್ರೇಕ್ ಹಾಕಿದ್ದರು. ಇದು ಸಹಜವಾಗಿಯೇ ದುರ್ಯೋಧನ ಐಹೊಳೆಯವರ ಗೆಲುವಿಗೆ ಕಾರಣವಾಗಿತ್ತು.
ಈ ಬಾರಿ 4 ಜನರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಇಷ್ಟು ದಿನ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಮಾತ್ರ ಪೈಪೋಟಿಯಿತ್ತು. ಆದರೆ ಈ 2 ಪಕ್ಷಗಳ ಜೊತೆಗೆ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ನಿವೃತ್ತ ಐಎಎಸ್ ಅಧಿಕಾರಿಯಿಬ್ಬರು ಪೈಪೋಟಿ ನೀಡಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮತಗಳು ವಿಭಜನೆಯಾಗಿ ಯಾರು ಗೆಲ್ಲುತ್ತಾರೆ ಎನ್ನುವುದೇ ರಾಯಬಾಗ ಕ್ಷೇತ್ರದಲ್ಲಿ ಇದೀಗ ಕುತೂಹಲ ಮೂಡಿಸಿದೆ.
ರಾಯಬಾಗ ಎಸ್‍ಸಿ ಮೀಸಲು ಮತಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಪ್ರದೀಪ್ ಮಾಳಗಿ ವಿರುದ್ಧ ಬಿಜೆಪಿ ಅಭ್ಯರ್ಥಿ ದುರ್ಯೋಧನ ಐಹೊಳೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಕಳೆದ ಬಾರಿ ಕೈ ರೆಬೆಲ್ ಅಭ್ಯರ್ಥಿಯಾಗಿದ್ದ ಮಹಾವೀರ ಮೋಹಿತೆಗೆ ಈ ಬಾರಿ ‘ಕೈ’ ಪಕ್ಷ ಟಿಕೆಟ್ ನೀಡಿದೆ. ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ ಪ್ರಬಲ ‘ಕೈ’ ಟಿಕೆಟ್ ಆಕಾಂಕ್ಷಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಬಲ ತುಂಬಿದ್ದರು. ಆದರೆ ಅವರು ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಫೈಟ್ ನೀಡುವಷ್ಟು ಪ್ರಭಾವವನ್ನು ಕಲ್ಲೋಳಕರ ಹೊಂದಿದ್ದಾರೆ. ಇನ್ನೂ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಮಾಳಗಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಪ್ರದೀಪ್ ಮಾಳಗಿಗೆ ರಾಯಬಾಗದ ಪ್ರತಿಷ್ಠಿತ ವಿ.ಎಲ್ ಪಾಟೀಲ್ ಕುಟುಂಬದ ಬಲ ಇದೆ.
ಇಲ್ಲಿ ಪ್ರತಿ ಬಾರಿಯೂ ಸಹ ನೇರ ಹಣಾಹಣೆ ನಡೆಯುವುದು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆಯಾಗಿದೆ. ಈ ಬಾರಿ 4 ಜನ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ. ಬಿಜೆಪಿಯಿಂದ ದುರ್ಯೋಧನ ಐಹೊಳೆ ಚುನಾವಣೆಗೆ ನಿಂತರೆ ಅತ್ತ ಪಾಟೀಲ್ ಮನೆತನದ ಪರ ಇರುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಲಾಗುತ್ತೆ. ಇದರಿಂದ ನೇರವಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಕಾಂಗ್ರೆಸ್ಸಿನ ಬಂಡಾಯ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯ ನಡುವೆಯೇ ಸ್ಪರ್ಧೆ ಉಂಟಾಗುತ್ತಿದೆ. ಇದರ ಲಾಭ ಇಲ್ಲಿಯವರೆಗೂ ಬಿಜೆಪಿ ಪಡೆಯುತ್ತಲೇ ಬಂದಿದೆ. ಹೀಗಾಗಿಯೇ ಇಲ್ಲಿ ಕಳೆದ 3 ಅವಧಿಯಿಂದ ನಿರಾಯಾಸವಾಗಿ ದುರ್ಯೋಧನ ಐಹೊಳೆ ಗೆಲುವು ಸಾಧಿಸುತ್ತಿದ್ದಾರೆ.
ಬಿಜೆಪಿಗೆ ಧನಾತ್ಮಕ ಅಂಶಗಳು: ಕಳೆದ 3 ಅವಧಿಗಳಿಂದಲೂ ದುರ್ಯೋಧನ ಐಹೊಳೆ ಶಾಸಕರಾಗಿದ್ದಾರೆ. ಇದರ ಜೊತೆಗೆ ಕ್ಷೇತ್ರದ ಜನರಿಗೆ ಪಕ್ಷದ ಮೇಲೆ ವಿಶ್ವಾಸವು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಿಂದ ಇಬ್ಬರ ಜಗಳದಲ್ಲಿ ಐಹೊಳೆ ಲಾಭವಾಗುತ್ತಿದ್ದು, ಐಹೊಳೆ ಸೌಮ್ಯ ಸ್ವಭಾವದ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.
ಬಿಜೆಪಿಗೆ ಋಣಾತ್ಮಕ ಅಂಶಗಳು: ಕೇಂದ್ರ ಸರ್ಕಾರದ ಬೆಲೆ ಏರಿಕೆ ಬಿಸಿ ಹಾಗೂ ಹಾಲಿ ನಾಯಕರ ಆಡಳಿತದಿಂದ ಜನತೆ ಬೇಸತ್ತಿರುವುದು ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿ ಮುಖಂಡರನ್ನು ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಸೆಳೆದಿರುವುದು ಪಕ್ಷಕ್ಕೆ ತೊಂದರೆ ಆಗಬಹುದು.
ಕಾಂಗ್ರೆಸ್‍ಗೆ ಧನಾತ್ಮಕ ಅಂಶಗಳು: ಶಾಸಕರ ಆಡಳಿತಕ್ಕೆ ಕ್ಷೇತ್ರದ ಜನತೆ ಬೇಸತ್ತಿರುವುದು ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಬಹುದು. ಕ್ಷೇತ್ರದಲ್ಲಿ ಅಹಿಂದ ವರ್ಗಗಳ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಪ್ರಭಾವ ಈ ಕ್ಷೇತ್ರದ ಮೇಲೆ ಬೀಳುವ ಸಾಧ್ಯತೆಯಿದೆ.
ಕಾಂಗ್ರೆಸ್‍ಗೆ ಋಣಾತ್ಮಕ ಅಂಶಗಳು: ಸ್ಥಳೀಯ ಮಟ್ಟದಲ್ಲಿ ನಾಯಕತ್ವದ ಕೊರತೆಯಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಗ್ಗಟ್ಟಿನ ಕೊರತೆಯಿದೆ. ಬಂಡಾಯ ಅಭ್ಯರ್ಥಿ ಸ್ಪರ್ಧೆ ಮಾಡುತ್ತಿರುವುದು ಪಕ್ಷದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
ಜೆಡಿಎಸ್ ಧನಾತ್ಮಕ ಅಂಶಗಳು: ಕಳೆದ 3 ಬಾರಿ ಸೋಲುತ್ತಿರುವ ಜೆಡಿಎಸ್ ಅಭ್ಯರ್ಥಿ ಮೇಲೆ ಅನುಕಂಪದ ವಾತಾವರಣವಿದೆ. ಪ್ರಬಲ ವಿ.ಎಲ್. ಪಾಟೀಲ್ ಕುಟುಂಬದ ಆಶೀರ್ವಾದವಿದೆ. ಹಾಲುಮತ ಸಮಾಜದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬರುವ ಸಾಧ್ಯತೆಯಿದೆ.
ಜೆಡಿಎಸ್ ಋಣಾತ್ಮಕ ಅಂಶಗಳು: ಚುನಾವಣೆಯಲ್ಲಿ ಮಾತ್ರ ಕಾಣಸಿಗುವ ಅಭ್ಯರ್ಥಿ ಪ್ರದೀಪ ಮಾಳಗಿ ಎಂಬುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕ್ಷೇತ್ರದಲ್ಲಿ ವಿ.ಎಲ್ ಪಾಟೀಲ್ ಕುಟುಂಬ ಬಿಟ್ಟು ಬೇರೆ ಸಮಾಜದ ನಾಯಕರ ಕೊರತೆಯ ಜೊತೆಗೆ ಸಂಘಟನೆಯ ಕೊರತೆಯೂ ಇದೆ.
ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಧನಾತ್ಮಕ ಅಂಶಗಳು: ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಕ್ಷೇತ್ರದಲ್ಲಿ ಕೆಲವೇ ದಿನಗಳಲ್ಲಿ ತನ್ನದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವುದು ಶಂಭು ಕಲ್ಲೋಳಕರ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಸೌಮ್ಯ ಸ್ವಭಾವದವರಾಗಿದ್ದು, ಬಹುತೇಕ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ.
ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಋಣಾತ್ಮಕ ಅಂಶಗಳು: ಪಕ್ಷೇತರ ಅಭ್ಯರ್ಥಿ ಆದ ಕಾರಣ ಜನರಿಗೆ ಚಿಹ್ನೆ ಕುರಿತು ಗೊಂದಲವಿದೆ. ಪಕ್ಷದ ಮೂಲ ಮತಗಳ ಕೊರತೆ ಆಗುವ ಸಾಧ್ಯತೆಯಿದೆ.
ರಾಯಬಾಗ ವಿಧಾನಸಭಾ ಕ್ಷೇತ್ರದ ಲೆಕ್ಕಾಚಾರ:
ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 20,3179 ಮತದಾರರಿದ್ದಾರೆ. ಅದರಲ್ಲಿ 1,04,483 ಪುರುಷರು ಹಾಗೂ 98,696 ಮಹಿಳೆಯರಿದ್ದಾರೆ.
ಯಾರ ವೋಟು ಎಷ್ಟು?: ಲಿಂಗಾಯತರು: 55,000 ಬ್ರಾಹ್ಮಣ: 2,200 ಎಸ್ ಸಿ, ಎಸ್ ಟಿ; 30,000 ಕುರುಬರು: 45,000 ಮುಸ್ಲಿಂ: 30,000 ಜೈನ್: 10,000 ಮರಾಠ: 15,000
ಚಿಕ್ಕೋಡಿ: ಹೆಡ್ ಮಾಸ್ಟರ್ ಕಿರುಕುಳದಿಂದ ಬೇಸತ್ತು ರೈಲಿಗೆ ತಲೆ ಒಡ್ಡಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ (Raibag) ರೈಲು ನಿಲ್ದಾಣ ಸಮೀಪ ನಡೆದಿದೆ.
ಅನ್ನಪೂರ್ಣ ಖಾಸಗಿ ಶಿಕ್ಷಣ ಸಂಸ್ಥೆಯ ಹೆಡ್ ಮಾಸ್ಟರ್ ಕಿರುಕುಳದಿಂದ ಆತ್ಮಹತ್ಯೆ (Sucide) ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಡೆತ್ ನೋಟ್ ನಲ್ಲಿ ಹೆಡ್ ಮಾಸ್ಟರ್ ಹೆಸರು ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ಶಾಲೆ ಮುಖ್ಯ ಶಿಕ್ಷಕ ಕಾರಣ ಎಂದು ಉಲ್ಲೇಖಿಸಿರುವ ಪತ್ರ ಪತ್ತೆಯಾಗಿದೆ.
ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದದ್ದು ಗೊತ್ತೇ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದ ಚಿತ್ರ ಮಾರ್ಚ್ 4ರಂದು ರಾಜ್ಯಾದ್ಯಂತ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರ ಬಿಡುಗಡೆಯಾಗಿ ಆರನೇ ವಾರಕ್ಕೆ ಕಾಲಿಟ್ಟಿದ್ದು, ಉತ್ತರಕರ್ನಾಟಕ ಭಾಗದಲ್ಲಿ ಯಶಸ್ವಿ ಆರನೇ ವಾರ ಪ್ರದರ್ಶನ ಕಾಣುತ್ತಿದೆ.
ಉತ್ತರ ಕರ್ನಾಟಕದ ಜನರ ಪ್ರೀತಿಗೆ ಪಾತ್ರವಾದ ಈ ಚಿತ್ರ ಆ ಭಾಗದ ಜನರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದೆ. ನೆಲದ ಸೊಗಡು, ಪ್ರಸ್ತುತ ಎನಿಸುವ ಕಥೆ, ಪಾತ್ರವರ್ಗದ ಅಭಿನಯ, ನೀನಾಸಂ ಮಂಜು ಕಥೆ ಕಟ್ಟಿಕೊಟ್ಟ ಪರಿಯನ್ನು ಮೆಚ್ಚಿಕೊಂಡಿದ್ದಾರೆ. ರಾಯಬಾ ಗದತ್ತ ಚಿತ್ರಮಂದಿರದಲ್ಲಿ ಆರನೇ ವಾರ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದರಿಂದ ಚಿತ್ರದ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ. ಚಿತ್ರದ ಮೇಲೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಕಂಡು ‘ಕನ್ನೇರಿ’ ಚಿತ್ರತಂಡ ಕೂಡ ಸಂತಸ ವ್ಯಕ್ತಪಡಿಸಿದೆ.ಇದನ್ನೂ ಓದಿ: ಕೆಜಿಎಫ್ 2 : ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್? ಪಕ್ಕಾ ಲೆಕ್ಕ
‘ಕನ್ನೇರಿ’ ನೀನಾಸಂ ಮಂಜು ನಿರ್ದೇಶನದ ಎರಡನೇ ಸಿನಿಮಾ. ಕಾಡು ಜನರನ್ನು ಒಕ್ಕಲೆಬ್ಬಿಸಿದ ನಂತರ ಅವರ ಬದುಕು ಹೇಗೆಲ್ಲ ಶೋಷಣೆಗೆ ಒಳಪಡುತ್ತೆ. ಪ್ರಮುಖವಾಗಿ ಅಲ್ಲಿನ ಹೆಣ್ಣು ಮಕ್ಕಳು ಯಾವೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈಗಲೂ ಹೇಗೆ ಎದುರಿಸುತ್ತಿದ್ದಾರೆ ಅನ್ನೋದರ ಬಗ್ಗೆ ಬೆಳಕು ಚೆಲ್ಲುವ ಕಥೆ ಚಿತ್ರದಲ್ಲಿದೆ. ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅರ್ಚನಾ ಮಧುಸೂದನ್ ನಟಿಸಿದ್ದಾರೆ.
ಕರಿಸುಬ್ಬು, ಎಂ.ಕೆ.ಮಠ, ಅರುಣ್ ಸಾಗರ್, ಅನಿತಾ ಭಟ್ ಚಿತ್ರದ ತಾರಾಬಳಗದಲ್ಲಿ ಅಭಿನಯಿಸಿದ್ದಾರೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಪಿ.ಪಿ.ಹೆಬ್ಬಾರ್ ಸಿನಿಮಾ ನಿರ್ಮಾಣ ಮಾಡಿದ್ದು, ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನ, ಗಣೇಶ್ ಹೆಗ್ಡೆ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಇದನ್ನೂ ಓದಿ: ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ
ಚಿಕ್ಕೋಡಿ(ಬೆಳಗಾವಿ): ಒಂದು ಕಡೆ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡುತ್ತಿದ್ದರೆ ಮತ್ತೊಂದು ಕಡೆ ಶಾಸಕರಿಗೆ ನೀಡಿದ ಸರ್ಕಾರಿ ಕಾರಿನಲ್ಲಿ ಅವರ ಮಕ್ಕಳು ಅಂಧಾ ದರ್ಬಾರ್ ನಡೆಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಂದ ಸರ್ಕಾರಿ ವಾಹನ ದುರ್ಬಳಕೆಯಾಗುತ್ತಿದ್ದು, ಪುತ್ರ ಅರುಣ್ ಶಾಸಕರಿಗೆ ನೀಡಿದ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಈ ಮೂಲಕ ಸರ್ಕಾರದಿಂದ ನೀಡಿದ ಕಾರನ್ನು ಶಾಸಕರ ಪುತ್ರ ದುರಪಯೋಗ ಪಡಿಸಿಕೊಳ್ಳುತ್ತಿದ್ದು ತಮ್ಮ ಖಾಸಗಿ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಜನರ ಭಾವನೆಗಳನ್ನ ಕೆಡವಿದವರು ಈಗ ದೇವಸ್ಥಾನ ಕೆಡವಿದ್ದಾರೆ: ಯು.ಟಿ.ಖಾದರ್
ಆದಿ ಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಹಿನ್ನೆಲೆ ಸರ್ಕಾರದಿಂದ ಕಾರು ಮಂಜೂರಾಗಿದೆ. ಆದರೆ ಜನರ ತೆರಿಗೆ ಹಣದಲ್ಲಿ ಸರ್ಕಾರದಿಂದ ಭರಿಸುವ ಡಿಸೇಲ್ ಹಾಕಿಕೊಂಡು ಕ್ಷೇತ್ರದಲ್ಲಿ ಅವರ ಪುತ್ರ ಓಡಾಡುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು – ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಶಾಸಕರ ಹಿರಿಯ ಪುತ್ರ ಅರುಣ್ ಐಹೊಳೆ ಸರ್ಕಾರಿ ಕಾರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರದಲ್ಲಿರುವ ನಿಗಮದ ಅಧ್ಯಕ್ಷರು ಮಾತ್ರ ಸರ್ಕಾರದ ಕಾರು ಬಳಕೆ ಮಾಡಬೇಕು ಎಂಬ ನಿಯಮವಿದೆ. ನಿಯಮವಿದ್ದರೂ ಡೋಂಟ್ ಕೇರ್ ಎಂದು ಸರ್ಕಾರಿ ವಾಹನವನ್ನು ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳುವ ಕುರಿತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿಕ್ಕೋಡಿ (ಬೆಳಗಾವಿ): ಚಿಕನ್ ತರಲು ಹೋದ ವೃದ್ಧನೋರ್ವ ನಾಪತ್ತೆಯಾಗಿರುವ ಘಟನೆ ರಾಯಬಾಗ ತಾಲೂಕಿನಲ್ಲಿ ನಡೆದಿದ್ದು, ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ.
ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮಪ್ಪ ತಿಪ್ಪಣ್ಣ ಭಜಂತ್ರಿ (80) ಕಾಣೆಯಾದ ವೃದ್ಧ. ರಾಮಪ್ಪ ಅವರು ಏಪ್ರಿಲ್ 28ರಂದು ಸಂಜೆ 4 ಗಂಟೆ ಸುಮಾರಿಗೆ ಸೈಕಲ್ ತೆಗೆದುಕೊಂಡು ಬೂದಿಹಾಳ ಗ್ರಾಮಕ್ಕೆ ಹೋಗಿ ಚಿಕನ್ ತರುತ್ತೇನೆ ಎಂದು ಹೇಳಿ ಹೋಗಿದ್ದರು. ರಾತ್ರಿಯಾದರೂ ಮನೆಗೆ ಮರಳಿ ಬಂದಿಲ್ಲ. ಎಲ್ಲಿದ್ದಾರೆ ಎನ್ನುವ ಸುಳಿವು ಕೂಡ ಸಿಗುತ್ತಿಲ್ಲ ಎಂದು ರಾಮಪ್ಪ ಅವರ ಮಗ ಯಲ್ಲಪ್ಪ ಭಜಂತ್ರಿ ಹೇಳಿದ್ದಾರೆ.
ಈವರೆಗೂ ನಮ್ಮ ಮಾವನವರ ಸುಳಿಯೂ ಸಿಕ್ಕಿಲ್ಲ. ಬೂದಿಹಾಳದಿಂದ ಕೋಳಿ ಖರೀದಿಸಿದವರನ್ನ ವಿಚಾರಿಸಿದಾಗ ನಮ್ಮ ಮಾವ ರಾತ್ರಿ 8:30ಕ್ಕೆ ಕೋಳಿ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಮಾವನವರನ್ನು ಆದಷ್ಟು ಬೇಗ ಹುಡಕಿ ಕೊಡಿ ಎಂದು ಸೊಸೆ ಲಕ್ಕವ್ವ ಅಳಲು ತೊಡಿಕೊಂಡಿದ್ದಾರೆ.
ಈ ಸಂಬಂಧ ಯಲ್ಲಪ್ಪ ಭಜಂತ್ರಿ ರಾಯಬಾಗ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಏಪ್ರಿಲ್ 30ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.
ಚಿಕ್ಕೋಡಿ (ಬೆಳಗಾವಿ): ಕೊಳವೆ ಬಾವಿಗೆ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.
ಸುಲ್ತಾನಪೂರ ಗ್ರಾಮದ ಲಕ್ಕಪ್ಪ ಸಂಗಪ್ಪ ದೊಡಮನಿ (38) ಕೊಳವೆ ಬಾವಿಯಲ್ಲಿ ಸಿಲುಕಿ ಮೃತಪಟ್ಟ ರೈತ. ಕೊಳವೆ ಬಾವಿಗೆ ಸಿಲುಕಿದ್ದ ಮಾಹಿತಿ ತಿಳಿಯುತ್ತಿದ್ದಂತೆ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ತಕ್ಷಣವೇ 2 ಜೆಸಿಬಿಗಳನ್ನು ಕರೆಯಿಸಿ ಕಾರ್ಯಾಚರಣೆ ಆರಂಭಿಸಿದರು.
ಸುಮಾರು 18ರಿಂದ 20 ಅಡಿ ಆಳದಲ್ಲಿ ಸಿಲುಕಿದ್ದ ಲಕ್ಕಪ್ಪ ಅವರ ದೇಹವನ್ನ ಕ್ಯಾಮೆರಾದಿಂದ ಗಮನಿಸಿ ಜೆಸಿಬಿ ಮೂಲಕ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಕೊಳವೆ ಬಾವಿಯಿಂದ ಶವವನ್ನ ಹೊರ ತೆಗೆದು ರಾಯಬಾಗ ತಾಲೂಕಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಕಳೆದ ವಾರ ತನ್ನ ಜಮೀನಿನಲ್ಲಿ ಕೊಳವೆ ಬಾವಿ ಕೊರಿಸಿದ್ದ ಲಕ್ಕಪ್ಪ, ಕಡಿಮೆ ನೀರು ಬಂದಿದ್ದರಿಂದ ಮನನೊಂದ ಆತ್ಮಹತ್ಯೆಗೆ ಯತ್ನ ಮಾಡಿಕೊಂಡಿರಬಹದು ಎಂಬ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯ ಮಾಹಿತಿ ತಿಳಿದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಡಿಸಿ ಬೊಮ್ಮನಹಳ್ಳಿ, ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಹೇಳಿದ್ದೇನೆ. ಇದು ಆತ್ಮಹತ್ಯೆ ಅಥವಾ ಕೊಲೆಯೇ ಎನ್ನುವ ತಿಳಿಯುತ್ತದೆ ಎಂದು ಹೇಳಿದರು.