Tag: ರಾಯನ್ ರಾಜ್ ಸರ್ಜಾ ಫೋಟೋ

  • ಕ್ಯೂಟ್ ಡ್ರೆಸ್ ಧರಿಸಿ ಬೊಂಬೆಯಂತೆ ರಾಯನ್ ಪೋಸ್

    ಕ್ಯೂಟ್ ಡ್ರೆಸ್ ಧರಿಸಿ ಬೊಂಬೆಯಂತೆ ರಾಯನ್ ಪೋಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಪ್ರೀತಿಯ ಪುತ್ರ ರಾಯನ್ ರಾಜ್ ಸರ್ಜಾ ಕ್ಯೂಟ್ ಡ್ರೆಸ್ ಧರಿಸಿ ಕೈಯಲ್ಲಿ ಪುಟ್ಟಗೊಂಬೆ ಹಿಡಿದುಕೊಂಡು ಗೊಂಬೆಯಂತೆ ಫೋಟೋಗೆ ಪೋಸ್ ನೀಡಿದ್ದಾನೆ.

    ಸದಾ ಒಂದಲ್ಲಾ ಒಂದು ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಮೇಘನಾ ರಾಜ್, ಹೆಚ್ಚಾಗಿ ರಾಯನ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    Raayan Raj Sarja

    ಸದ್ಯ ಚಳಿಗಾಲ ಆರಂಭವಾಗುತ್ತಿದ್ದು, ಬೆಂಗಳೂರಿನಲ್ಲಿ ವಿಪರೀತ ಚಳಿಯ ವಾತವಾರಣ ಇದೆ. ಈ ಮಧ್ಯೆ ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಯನ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ರಾಯನ್ ಕೆಂಪು ಬಣ್ಣದ ಸ್ವೆಟರ್‌, ಟೋಪಿ, ಕಾಲಿಗೆ ಸಾಕ್ಸ್ ಧರಿಸಿ, ಕೈಯಲ್ಲಿ ಪುಟ್ಟ ಗೊಂಬೆಯೊಂದನ್ನು ಹಿಡಿದುಕೊಂಡು ಬೆಚ್ಚಗೆ ಕುಳಿತುಕೊಂಡಿದ್ದಾನೆ. ಇದರ ಜೊತೆಗೆ ಮೇಘನಾ ಕ್ಯಾಮೆರಾಗೆ ಪೋಸ್ ನೀಡಿರುವಂತೆಯೇ ತಾನು ಕೂಡ ನಾಲಿಗೆಯನ್ನು ತೋರಿಸುತ್ತಾ ಕ್ಯಾಮೆರಾಗೆ ಸಖತ್ ಕ್ಯೂಟ್ ಆಗಿ ಪೋಸ್ ನೀಡಿದ್ದಾನೆ.

    ಫೋಟೋ ಜೊತೆಗೆ, ಯಾರು ತಾನೇ ಈ ರೀತಿ ಹೆಣೆದ ಬಟ್ಟೆಗಳನ್ನು ಪ್ರೀತಿಸುವುದಿಲ್ಲ. ಈ ಉಡುಪನ್ನು ಉಲ್ಲನ್‍ನಿಂದ ಹೆಣೆಯಲಾಗಿದೆ. ನನ್ನ ಬಟ್ಟೆಗಳನ್ನು ನನ್ನ ಅಜ್ಜಿ ಹೋಲಿಯುತ್ತಿದ್ದದ್ದನ್ನು ನೆನಪಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಸಿದ್ಧತೆ

    Raayan Raj sarja

    ಇತ್ತೀಚೆಗಷ್ಟೇ ಮೇಘನಾ ರಾಜ್ ದೀಪಾವಳಿ ಹಬ್ಬದ ವಿಶೇಷವಾಗಿ ರಾಯನ್ ಕ್ಯೂಟ್ ಆಗಿ ಎಕ್ಸ್‌ಪ್ರೆಶನ್‌ ನೀಡಿದ್ದ ಹಲವಾರು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.