Tag: ರಾಯಣ್ಣ ಬ್ರಿಗೇಡ್

  • ಅಮಿತ್ ಶಾ ಮಾತು ಕೇಳಿದ್ದೇ ತಪ್ಪಾಯ್ತಾ? – ಈಶ್ವರಪ್ಪ ಬೇಸರ

    ಅಮಿತ್ ಶಾ ಮಾತು ಕೇಳಿದ್ದೇ ತಪ್ಪಾಯ್ತಾ? – ಈಶ್ವರಪ್ಪ ಬೇಸರ

    ಬಾಗಲಕೋಟೆ: ಅಮಿತ್ ಶಾ (Amit shah) ಮಾತು ಕೇಳಿದ್ದೇ ತಪ್ಪಾಯ್ತಾ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಬೇಸರ ವ್ಯಕ್ತಪಡಿಸಿದ್ದಾರೆ.

    ಬಾಗಲಕೋಟೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಳೆದ ಬಾರಿ ರಾಯಣ್ಣ ಬ್ರಿಗೇಡ್‌ಗೆ(Rayanna Brigade) ಹಿಂದುಳಿದವರು, ದಲಿತರು ಹಾಗೂ ಸಮಸ್ತ ಹಿಂದೂ ಸಮಾಜ ಬೆಂಬಲ ಕೊಟ್ಟಿತ್ತು. ಅಲ್ಲದೇ ಎಲ್ಲಾ ಪಕ್ಷದವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಇದನ್ನು ಸಹಿಸದ ಕೆಲವರು ಅಮಿತ್ ಶಾ ಅವರನ್ನು ಭೇಟಿಯಾಗಿ ನನ್ನ ಬಗ್ಗೆ ಹಾಗೂ ಈ ಕಾರ್ಯಕ್ರಮದ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದರು.

    ಆಗ ಕೇಂದ್ರ ನಾಯಕರಾದ ಅಮಿತ್ ಶಾ ನನ್ನನ್ನು ಕರೆದು ರಾಯಣ್ಣ ಬ್ರಿಗೇಡ್ ಯಾಕೆ ಬೇಕು? ಇದೆಲ್ಲ ಬೇಡ ಅಂತ ನನಗೆ ಹೇಳಿದ್ರ. ಆದ್ರೆ ನಾನು ಯಾಕೆ ಬೇಡ ಅಂತ ಅವರ ಜೊತೆ ವಾದ ಮಾಡಿದೆ. ಆದರೆ ಅವರ ಬಳಿ ಇದಕ್ಕೆ ಉತ್ತರ ಸಿಗಲಿಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.

    ಹಿರಿಯರ ಮಾತನ್ನು ಕೇಳಬೇಕು ಎಂಬುದು ನನಗೆ ಮುಂಚೆಯಿಂದ ಬಂದ ಸ್ವಭಾವ. ಆದರೆ ಈಗ ಅವರ ಮಾತನ್ನು ನಾನು ಕೇಳಿದ್ದೇ ತಪ್ಪಾಯ್ತಾ ಅಂತ ಅನಿಸುತ್ತಿದೆ ಎಂದರು.

    ಈ ಸಂಘಟನೆ ಹೀಗೆ ಮುಂದುವರೆದಿದ್ದರೆ ದಲಿತರಿಗೆ ಹಿಂದುಳಿದವರಿಗೆ ನ್ಯಾಯ ಸಿಗುತ್ತಿತ್ತು ಎನ್ನುವ ಭಾವನೆ ನನ್ನದು. ಅಷ್ಟೇ ಅಲ್ಲದೆ ಈ ಸಂಘಟನೆಗೆ ಹಿಂದುಳಿದವರಿಗೆ ನ್ಯಾಯ ಕೊಡಿಸುವ ಶಕ್ತಿ ಇರುತ್ತಿತ್ತು. ಆದರೆ ಕಾರಣಾಂತರಗಳಿಂದ ಈ ಸಂಘಟನೆ ನಿಂತುಹೋಯಿತು. ಆದರೆ ಈಗ ಆರಂಭವಾಗಿರುವ ಬ್ರಿಗೇಡ್‌ ಅನ್ನು ನಾವು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂಬ ಭರವಸೆಯನ್ನು ನೀಡಿದರು.

    ನೀವು ಬಿಜೆಪಿಗೆ ಮತ್ತೆ ಹೋಗುವಿರಾ ಎಂದು ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ನಾನು ಈಗ ಬಿಜೆಪಿಯಲ್ಲಿಲ್ಲ. ಬನ್ನಿ ಎಂದು ಅನೇಕ ನಾಯಕರು ನನ್ನನ್ನು ಬಿಜೆಪಿಗೆ ಕರೆಯುತ್ತಿದ್ದಾರೆ. ಸದ್ಯ ಬಿಜೆಪಿಗೆ ಹೋಗುವ ಚಿಂತನೆಯಲ್ಲಿ ನಾನಿಲ್ಲ ಎಂದರು. ಅಲ್ಲದೇ ನನಗೆ ಅಲ್ಲಿ ನನಗೆ ಸಾಕಷ್ಟು ಅನ್ಯಾಯವಾಗಿದೆ. ಬಿಜೆಪಿಯಲ್ಲಿರುವ ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ ಎಂದು ಗುಡುಗಿದರು. ಇದನ್ನೂ ಓದಿ: ಚುನಾವಣೆ ನೀತಿ ಸಂಹಿತೆ ಕಾರಣದಿಂದ ಪಂಚಮಸಾಲಿ ಮೀಸಲಾತಿ ನಿರ್ಧಾರ ಸಾಧ್ಯವಿಲ್ಲ: ಸಿದ್ದರಾಮಯ್ಯ

    ಜಾತಿ ಗಣತಿಯ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ನಾನು ಪರಿಷತ್ತಿನಲ್ಲಿ ಇದ್ದಾಗಲೇ ಕಾಂತರಾಜ್ ವರದಿಯನ್ನ ಬಿಡುಗಡೆ ಮಾಡಬೇಕು ಅಂತ ಹೇಳಿದ್ದೆ. ಆಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಇದ್ದರು. ಈ ಸರ್ಕಾರದಲ್ಲಿ ಬಿಡುಗಡೆ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು. ಈಗಿನಂತೆ ಆಗಲು ಸಿದ್ದರಾಮಯ್ಯ ಉತ್ತರ ಕುಮಾರನ ಪೌರುಷ ತೋರಿದ್ದರು ಎಂದರು.

    ಸಂಪುಟ ಸಭೆಯಲ್ಲಿ ಜಾತಿ ಗಣತಿ ಜಾರಿಗೆ ತಂದೆ ತರುತ್ತೇವೆ ಅಂತ ಹೇಳಿದ್ದಾರೆ. ಈಗ ಮತ್ತೆ ಅನಿವಾರ್ಯ ಕಾರಣಗಳಿಂದ 25ನೇ ತಾರೀಕು ಅಂತ ಮುಂದೆ ಹಾಕುತ್ತಿದ್ದಾರೆ. ಇವರಿಗೆ ಹಿಂದುಳಿದವರು ಬಗ್ಗೆ ಯಾವುದೇ ಕಳಕಳಿ ಇಲ್ಲ. ಅಹಿಂದ ಪದ ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಯಾವುದನ್ನು ಮಾಡಲ್ಲ. ಇದು ನನಗೆ ಗೊತ್ತು ಆದರೂ ಜಾತಿ ವಿಚಾರದಲ್ಲಿ ಸ್ವಲ್ಪ ಆಸೆ ಇದೆ ಎಂದು ಹೇಳಿದರು.

    ಕಾಂಗ್ರೆಸ್‌ ಪಕ್ಷದಲ್ಲೇ ಕೆಲವರು ಮುಖ್ಯಮಂತ್ರಿ ಸ್ಥಾನ ಹೋದರೂ ಪರವಾಗಿಲ್ಲ ಜಾತಿಗಣತಿಯನ್ನ ಜಾರಿಗೆ ತನ್ನಿ ಎಂದು ಹೇಳುತ್ತಿದ್ದಾರೆ. ಆದರೆ ನಾನು ಸಿದ್ದರಾಮಯ್ಯನವರ (Siddaramaiah) ಸಿಎಂ ಸ್ಥಾನ ಹೋಗಲಿ ಎನ್ನುವ ಅಪೇಕ್ಷೆ ಪಡಲ್ಲ. ಮುಡಾ ಪ್ರಕರಣದಲ್ಲಿ ಅವರು ರಾಜೀನಾಮೆ ಕೊಟ್ಟು ಮತ್ತೆ ಕ್ಲೀನ್ ಚಿಟ್ ತೆಗೆದುಕೊಂಡು ಬರಲಿ ಅಂತ ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಆದರೆ ಅವರು ಅಹಿಂದ ಜನರನ್ನು ರಾಜಕಾರಣಕ್ಕೆ ಬಳಕೆ ಮಾಡುತ್ತಿರುವುದು ನನಗೆ ಇಷ್ಟವಿಲ್ಲ ಎಂದು ತಿಳಿಸಿದರು.

    ಇದೆ ವೇಳೆ ಒಳ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಸಿ, ಸುಪ್ರೀಂ ಕೋರ್ಟ್ ಆದೇಶಕ್ಕೆ ಯಾರು ಅಡ್ಡಿ ಬರಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶದ ಪ್ರಕಾರ ಒಳ ಮೀಸಲಾತಿ ಜಾರಿಗೆ ತಂದೇ ತರಬೇಕು. ತಮಗೆ ಅನುಕೂಲ ಆದಾಗ ಸತ್ಯಮೇವ ಜಯತೆ ಅಂದ್ರೆ ಅದು ನಡೆಯಲ್ಲ ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: Russia – Ukraine War | ರಷ್ಯಾ ಪರ 12,000 ಸೈನಿಕರನ್ನು ಕಳುಹಿಸಿದ ಉತ್ತರ ಕೊರಿಯಾ

    ಮುಡಾ ಕೇಸ್ ವಿಚಾರದಲ್ಲಿ ಕೋರ್ಟ್ ತಮ್ಮ ಪರ್ವಾಗಿಲ್ಲ ಅಂದಾಗ, ಬಿಜೆಪಿಯ ಕೆಲ ನಾಯಕರು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಅಂತಾರೆ. ಆದ್ರೆ ಸಿಎಂ ರೇಸ್ ನಲ್ಲಿರುವ ಸಂಪುಟದ ಸದಸ್ಯರೇ ಅವರಿಗೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ರೇಸ್‌ಲ್ಲಿರುವ ಸಚಿವರ ವಿರುದ್ಧ ಕುಟುಕಿದರು.

    ಬಾಗಲಕೋಟೆಯಲ್ಲಿ 20 ರಂದು ನಡೆಯುವ ಬ್ರಿಗೆಡ್ ಸಭೆಯ ಬಗ್ಗೆ ಮಾತನಾಡಿ, ಈ ಸಭೆಯಲ್ಲಿ ಅನೇಕ ಧಾರ್ಮಿಕ ಮುಖಂಡರು, ಸ್ವಾಮೀಜಿಗಳು, ಮಠಾಧೀಶರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಗಣ್ಯರು ಹಾಗೂ ಹಿಂದುಳಿದ ದಲಿತ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿಯೇ ಇದರ ಬಗ್ಗೆ ಚರ್ಚೆ ಮಾಡಿ ಸಂಘಟನೆಗೆ ಒಂದು ಹೆಸರಿಡುತ್ತೇವೆ ಎಂದು ತಿಳಿಸಿದರು.

     

  • ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸದಸ್ಯರ ಮನವೊಲಿಕೆಗೆ ಮುಂದಾದ ಈಶ್ವರಪ್ಪ!

    ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸದಸ್ಯರ ಮನವೊಲಿಕೆಗೆ ಮುಂದಾದ ಈಶ್ವರಪ್ಪ!

    ಬೆಂಗಳೂರು: ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸದ್ಯ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸಭೆ ಕರೆದಿದ್ದು, ಕಮಲ ಪಾಳಯದಲ್ಲಿ ಸಂಚಲನವನ್ನು ಸೃಷ್ಟಿಸಿದೆ.

    ಜೂನ್ 25ರಂದು ಬಾಗಲಕೋಟೆ ನಗರದಲ್ಲಿ ಊಟದ ನೆಪದಲ್ಲಿ ಸಂಗೊಳ್ಳಿರಾಯಣ್ಣ ಸದಸ್ಯರನ್ನು ಕೆ.ಎಸ್.ಈಶ್ವರಪ್ಪ ಅವರು ಸಭೆಗೆ ಆಹ್ವಾನಿಸಿದ್ದಾರೆ. ಈ ಮೂಲಕ ಬ್ರಿಗೇಡ್ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ವಿಧಾನ ಪರಿಷತ್ ಚುನಾವಣೆಯಲ್ಲಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸದಸ್ಯರ ಹೆಸರನ್ನು ಪರಿಗಣಿಸದ ಕಾರಣ ಸದಸ್ಯರು ಭಾರೀ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಅವರ ಮನವೊಲಿಕೆಗಾಗಿ ಕೆ.ಎಸ್.ಈಶ್ವರಪ್ಪ ಅವರು ಸಭೆಯ ನಿರ್ಧಾರ ಕೈಗೊಂಡಿದ್ದಾರಂತೆ. ಈ ಮೂಲಕ ತಣ್ಣಗಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತೆ ಚುರುಕಾಗಲಿದೆಯೇ ಎನ್ನುವ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಮೂಡಿದೆ.

    ಸಭೆಯಲ್ಲಿ ಪರಿಷತ್ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯ ಅಸಮಾಧನವನ್ನು ಸದಸ್ಯರು ಹೊರ ಹಾಕುವ ಸಾಧ್ಯತೆಗಳಿವೆ. ಅಲ್ಲದೇ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಯಾವ ಕಾರಣಕ್ಕೆ ಕೆ.ಎಸ್.ಈಶ್ವರಪ್ಪ ಅವರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಕುರಿತು ಚರ್ಚೆ ನಡೆಯಲಿದೆ ಎಂದು ಬ್ರಿಗೇಡ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ!

    ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ!

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕ ಅಧಿಕಾರ ಕಳೆದುಕೊಂಡ ಬಿಜೆಪಿಯಲ್ಲಿ ಇದೀಗ ಅಸಮಾಧಾನ ಸ್ಫೋಟವಾಗಿದೆ.

    ಈಶ್ವರಪ್ಪ ಆಪ್ತನಾಗಿರುವ ಭಾನುಪ್ರಕಾಶ್ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಲು ವಿರೋಧ ವ್ಯಕ್ತವಾಗಿದೆ. ಭಾನುಪ್ರಕಾಶ್ ಅವರು ರಾಯಣ್ಣ ಬ್ರಿಗೇಡ್ ಬೆಂಬಲಕ್ಕೆ ನಿಂತಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ವಕ್ತಾರ ವಾಮಾನಚಾರ್ಯ, ಸುಬ್ಬ ನರಸಿಂಹ ಆಯ್ಕೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

    ಭಾನುಪ್ರಕಾಶ್ ಜೊತೆಗೆ ಕುರುಬ ಸಮುದಾಯದ ಅಭ್ಯರ್ಥಿ ಆಯ್ಕೆಗೆ ಪಟ್ಟು ಹಿಡಿಯಲಾಗಿದೆ. ಈ ಮೂಲಕ ಬಿಜೆಪಿ ನಾಯಕರು ಈಶ್ವರಪ್ಪ ಮಾತಿಗೆ ಮಣೆ ಹಾಕಿಲ್ಲ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಈಶ್ವರಪ್ಪ ಅವರು ಇಂದು ಸಂಜೆ ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಗೂ ಗೈರು ಹಾಜರಿಯಾಗುವ ಸಾಧ್ಯತೆ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಸದ್ಯ ಭಾನುಪ್ರಕಾಶ್ ಮೇಲ್ಮನೆಗೆ ಆಯ್ಕೆಯಾಗುವುದು ಅನುಮಾನವಾಗಿದೆ.

  • ನಾನೆಂದೂ ಬ್ರಿಗೇಡ್, ಬಿಜೆಪಿಗೆ ಕೈ ಕೊಟ್ಟಿಲ್ಲ, ಅವರೇ ನನ್ನನ್ನು ಬಿಟ್ಟಿದ್ದಾರೆ- ಕೆ ವಿರೂಪಾಕ್ಷಪ್ಪ

    ನಾನೆಂದೂ ಬ್ರಿಗೇಡ್, ಬಿಜೆಪಿಗೆ ಕೈ ಕೊಟ್ಟಿಲ್ಲ, ಅವರೇ ನನ್ನನ್ನು ಬಿಟ್ಟಿದ್ದಾರೆ- ಕೆ ವಿರೂಪಾಕ್ಷಪ್ಪ

    ಬೆಂಗಳೂರು: ನಾನು ಬ್ರಿಗೇಡ್ ಹಾಗೂ ಬಿಜೆಪಿಗೆ ಯಾವತ್ತೂ ಕೈಕೊಟ್ಟಿಲ್ಲ. ಬಿಜೆಪಿಯವರೇ ನನ್ನನ್ನ ಕೈಬಿಟ್ಟಿದ್ದಾರೆ. ಹೀಗಾಗಿ ಇಂದು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿ, ಔಪಚಾರಿಕವಾಗಿ ಕಾಂಗ್ರೆಸ್ ಸೇರಿರುವುದಾಗಿ ಕೆ ವಿರೂಪಾಕ್ಷಪ್ಪ ಹೇಳಿದ್ದಾರೆ.

    ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಅವರು, ಹಿಂದುಳಿದ ವರ್ಗದವರಿಗೆ ಬಿಜೆಪಿಯಲ್ಲಿ ಉಳಿಗಾಲವಿಲ್ಲ. ಈಶ್ವರಪ್ಪ ನಮ್ಮನ್ನು ಕೈ ಬಿಟ್ಟಿದ್ದಾರೆ. ಅವರೇನು ಅಂತಾ ನಿಮಗೆ ಗೊತ್ತಿದೆ. ನಾನು ಆಸೆ ಇಟ್ಟುಕೊಂಡಿದ್ದು ಅಲ್ಲಿ ಸಿಗಲಿಲ್ಲ. ಅದಕ್ಕೆ ಕಾಂಗ್ರೆಸ್ ಸೇರಿದ್ದೇನೆ. ನಾನು ಮತ್ತು ಶಿವರಾಮೇ ಗೌಡ ಇಂದು ಮಧ್ಯಾಹ್ನ ಅಧಿಕೃತವಾಗಿ ಪಕ್ಷದ ಕಚೇರಿಯಲ್ಲಿ ಸೇರ್ಪಡೆಯಾಗುತ್ತೇವೆ ಅಂದ್ರು.

    ರಾಯಣ್ಣ ಬ್ರಿಗೇಡ್ ಸ್ವಲ್ಪ ಕಾಲ ತಟಸ್ಥವಾಗಿತ್ತು. ಇದೀಗ ಮತ್ತೆ ಬ್ರಿಗೇಡ್ ಗೆ ಚಾಲನೆ ಸಿಗಲಿದೆ. ಬ್ರಿಗೇಡ್ ಒಂದು ಸ್ವಯಂ ಸಂಘಟನೆಯಾಗಿದೆ. ಚುನಾವಣೆ ಅಂತಾ ರಾಯಣ್ಣ ಬ್ರಿಗೇಡ್ ಸಭೆ ಮಾಡಿಲ್ಲ. ಚುನಾವಣೆ ಮುಗಿದ ಬಳಿ ಸಭೆ ಮಾಡ್ತೀವಿ ಅದಕ್ಕೆ ಈಶ್ವರಪ್ಪಗೂ ಆಹ್ವಾನ ಮಾಡ್ತೇವೆ. ಸಭೆಗೆ ಬರೋದು ಬಿಡೋದು ಅವರಿಗೆ ಬಿಟ್ಟಿದ್ದು ಅಂದ್ರು.

    ಕೊಪ್ಪಳ, ರಾಯಚೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತೇನೆ. ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಿ, ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಅಂತ ವಿರೂಪಾಕ್ಷಪ್ಪ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ ವಿರೂಪಾಕ್ಷಪ್ಪ ಅವರು ಸಿಂಧನೂರಿನಿಂದ ಟಿಕೆಟ್ ಬೇಡಿಕೆ ಇಟ್ಟಿದ್ದರು. ಆದ್ರೆ ಇದೀಗ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಸೇರಿದ್ದಾರೆ. ಇವರು ಈಶ್ವರಪ್ಪರ ಸಲಹೆಯಂತೆ ರಾಯಣ್ಣ ಬ್ರಿಗೇಡ್ ಮುನ್ನಡೆಸಿದ್ದರು. ಇವರ ಜೊತೆ ಶಿವರಾಮೇ ಗೌಡ ಕೂಡ ಕಾಂಗ್ರೆಸ್ ಸೇರಿದ್ದಾರೆ.

  • ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಸದಸ್ಯತ್ವ ಪಡೆದಿಲ್ಲ: ಕೆ.ವಿರುಪಾಕ್ಷಪ್ಪ

    ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಸದಸ್ಯತ್ವ ಪಡೆದಿಲ್ಲ: ಕೆ.ವಿರುಪಾಕ್ಷಪ್ಪ

    ರಾಯಚೂರು: ಕೆ.ಎಸ್.ಈಶ್ವರಪ್ಪನವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನ ಸದಸ್ಯತ್ವವನ್ನೇ ಪಡೆದಿಲ್ಲ, ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಅಂತ ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ.ವಿರುಪಾಕ್ಷಪ್ಪ ಹೇಳಿದ್ದಾರೆ.

    ರಾಯಚೂರಿನ ಹೊರವಲಯದ ಹರ್ಷಿತಾ ಗಾರ್ಡನ್‍ನಲ್ಲಿ ನಡೆಯುತ್ತಿರುವ ಬ್ರಿಗೇಡ್ ಅಭ್ಯಾಸ ವರ್ಗದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಏನ್ ಹೇಳಿದೆಯೋ ಗೊತ್ತಿಲ್ಲ. ಈಶ್ವರಪ್ಪನವರು ಕಾರ್ಯಕ್ರಮಕ್ಕೆ ಬರುವುದಿಲ್ಲ. ಬ್ರಿಗೇಡ್ ಯಾವುದೇ ಪಕ್ಷ, ವ್ಯಕ್ತಿಗೆ ಸಂಬಂಧಿಸಿದ್ದಲ್ಲ ಎಂದರು.

    ಇನ್ನೂ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಮೀಸಲಾತಿ ವಿರೋಧಿ. ಈಗ ಜನರಲ್ಲಿ ಗೊಂದಲ ಮೂಡಿಸಲು ಶೇಕಡಾ 70 ರಷ್ಟು ಮೀಸಲಾತಿಗಾಗಿ ಹೋರಾಟ ನಡೆಸುತ್ತೇನೆ ಅಂತಿದ್ದಾರೆ ಅಂತ ಆರೋಪಿಸಿದರು.

    ಇನ್ನೂ ಇದೇ ವೇಳೆ ಮಾತಾಡಿದ ಬ್ರಿಗೇಡ್ ರಾಜ್ಯ ಗೌರವಾಧ್ಯಕ್ಷ ಮುಕುಡಪ್ಪ ಯಡಿಯೂರಪ್ಪನವರು ಅಹಿಂದ ವರ್ಗವನ್ನ ಕಡೆಗಣಿಸಬಾರದು ಅಂತ ಹೇಳಿದರು. ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮಿ ಮಾತನಾಡಿ, ಸಂಗೊಳ್ಳಿರಾಯಣ್ಣ ಬ್ರಿಗೇಡ್ ಪಕ್ಷಾತೀತ ಸಂಘಟನೆ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದರು.

    ಕೆ.ಎಸ್.ಈಶ್ವರಪ್ಪ ಗೈರು ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಎಲ್ಲಿ ನೋಡಿದ್ರೂ ಈಶ್ವರಪ್ಪ ಭಾವಚಿತ್ರಗಳು ರಾರಾಜಿಸುತ್ತಿದ್ದರೂ ಕೂಡ ಪ್ರತಿಯೊಬ್ಬ ಮುಖಂಡರು ಇದು ಪಕ್ಷಾತೀತ ಕಾರ್ಯಕ್ರಮ ಅಂತ ಹೇಳುತ್ತಿದ್ದರು.

     

  • ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಇನ್ನೂ ಬಗೆಹರಿದಿಲ್ಲ: ಕೆ.ಎಸ್.ಈಶ್ವರಪ್ಪ ಬೇಸರ

    ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಇನ್ನೂ ಬಗೆಹರಿದಿಲ್ಲ: ಕೆ.ಎಸ್.ಈಶ್ವರಪ್ಪ ಬೇಸರ

    -ಯಡಿಯೂರಪ್ಪ ಕೆಜೆಪಿ ಕಟ್ಟದಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ

    ರಾಯಚೂರು: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಇನ್ನೂ ಬಗೆಹರಿದಿಲ್ಲ, ಗೊಂದಲ ಬಗೆಹರಿಸಲು ನೇಮಿಸಿದ್ದ ಸಮಿತಿ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡುತ್ತಿಲ್ಲ ಅಂತ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಾಯಚೂರಿನಲ್ಲಿ ಮೇ 8 ರಂದು ನಡೆಯಲಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಅಭ್ಯಾಸ ವರ್ಗದ ಕಾರ್ಯಕ್ರಮ ಸಿದ್ದತೆ ವೀಕ್ಷಣೆ ಮುನ್ನ ಈಶ್ವರಪ್ಪ ಮಾತನಾಡಿದರು. ಫೆ.10 ಕ್ಕೆ ವರದಿ ಸಿದ್ದಪಡಿಸಿ ಸಮಸ್ಯೆ ಬಗೆಹರಿಸಲು ಅಮಿತ್ ಶಾ ತಿಳಿಸಿದ್ದರು. ಆದ್ರೆ ಸಮಿತಿ ಯಾವ ಜಿಲ್ಲೆಗೂ ಭೇಟಿ ನೀಡಿ ಗೊಂದಲ ಬಗ್ಗೆ ಮಾಹಿತಿ ಪಡೆದಿಲ್ಲ. ಇದು ಅತೃಪ್ತಿ ಮುಂದುವರೆಯಲು ಕಾರಣವಾಗಿದೆ. ಇನ್ನೂ ಬ್ರಿಗೇಡ್‍ಗೆ ಹೋದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಕೆಲ ನಾಯಕರು ಹೇಳುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಅಂತ ಈಶ್ವರಪ್ಪ ಹೇಳಿದರು.

    ನನ್ನ ರಕ್ತದ ಕಣಕಣದಲ್ಲೂ ಬಿಜೆಪಿಯಿದೆ: ಯಡಿಯೂರಪ್ಪ ಅವರು ಕೆಜೆಪಿ ಕಟ್ಟದಿದ್ದರೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ ಅಂತ ಬಿಎಸ್‍ವೈ ವಿರುದ್ದ ಈಶ್ವರಪ್ಪ ಕಿಡಿಕಾರಿದ್ರು. ನನ್ನ ರಕ್ತದ ಕಣಕಣದಲ್ಲೂ ಬಿಜೆಪಿಯಿದೆ ಅದಕ್ಕೆ ನಾನು ಅಪ್ಪ ಅಮ್ಮನಿಗೆ ಹುಟ್ಟಿದ್ದು ಅಂತ ಹೇಳಿದ್ದು ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತಿನಂತೆ ಬಡವರು, ಧೀನ ದಲಿತರಿಗಾಗಿ ಬ್ರಿಗೇಡ್ ಮುಂದುವರೆಸುತ್ತಿದ್ದೇವೆ. ಯಾವುದೇ ರಾಜಕೀಯ ಚಟುವಟಿಕೆ ನಡೆಸುತ್ತಿಲ್ಲ. ಆದ್ರೆ ಸಂಘಟನೆ ಉಳಿಸೋಣ ಬನ್ನಿ ಕಾರ್ಯಕ್ರಮದಲ್ಲಿ ಬ್ರಿಗೇಡ್ ಹಿಂದೆ ಸಂತೋಷ್ ಇದ್ದಾರೆ ಅಂತ ಯಡಿಯೂರಪ್ಪ ಹೇಳಿರುವುದು ನೋವು ತಂದಿದೆ. ಕಾಂಗ್ರೆಸ್, ಜೆಡಿಎಸ್ ನಿಂದ ಹಣ ತೆಗೆದುಕೊಂಡು ಅವರಿಗೆ ಬೆಂಬಲಿಸುತ್ತಿದ್ದೇನೆ ಅಂತ ಕೆಲ ನಾಯಕರು ಸುಳ್ಳು ಹಬ್ಬಿಸುತ್ತಿರುವುದು ಸರಿಯಲ್ಲ ಎಂದರು.

    ರಾಷ್ಟ್ರಾಧ್ಯಕ್ಷರು ಹೇಳಿರುವಂತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ, ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಆದ್ರೆ ಎಂಥಹ ಮುಖ್ಯಮಂತ್ರಿ ನಮಗೆ ಬೇಕು ಅನ್ನೋದು ಗೊಂದಲದಲ್ಲಿದೆ ಎಂದರು. ರೆಸಾರ್ಟ್ ರಾಜಕಾರಣ ಮಾಡುವ ಶಾಸಕರಿಂದ ಆಯ್ಕೆಯಾಗುವ ಮುಖ್ಯಮಂತ್ರಿ ಬೇಡ, ಸಂಘಟನೆ ಹೋರಾಟದ ಮೂಲಕ ಬಂದ ಶಾಸಕರಿಂದ ಆಯ್ಕೆಯಾಗುವ ಮುಖ್ಯಮಂತ್ರಿ ಬೇಕು ಎಂದು ಹೇಳಿದರು.

    ಮೇ 6 ಮತ್ತು 7ರಂದು ಮೈಸೂರಿನಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಬಂದಮೇಲೆ ಹೋಗುವುದರ ಬಗ್ಗೆ ಯೋಚಿಸುತ್ತೇನೆ ಅಂತ ಈಶ್ವರಪ್ಪ ತಿಳಿಸಿದ್ದಾರೆ. ರಾಯಚೂರಿಗೆ ಆಗಮಿಸುವ ಮುನ್ನ ಮಂತ್ರಾಲಯಕ್ಕೆ ತೆರಳಿದ್ದ ಈಶ್ವರಪ್ಪ ರಾಯರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

    ಬ್ರಿಗೇಡ್‍ಗೆ ಶಕ್ತಿ: ವಿವಾದಗಳ ನಡುವೆಯೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗೆ ಶಕ್ತಿ ತುಂಬಲು ರಾಯಚೂರಿನಲ್ಲಿ ಮೇ 8 ರಂದು ಅಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಬ್ರಿಗೇಡ್ ಹಾಗೂ ಯುವ ಬ್ರಿಗೇಡ್‍ನ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಭ್ಯಾಸ ವರ್ಗದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಸೂದೆ ಕುರಿತು ಹಾಗೂ ಬ್ರಿಗೇಡ್‍ನ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.

    ಇನ್ನೂ ಅಭ್ಯಾಸ ವರ್ಗ ಕಾರ್ಯಕ್ರಮ ಸಿದ್ದತೆ ವೀಕ್ಷಣೆಯಲ್ಲಿದ್ದ ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ.ವಿರುಪಾಕ್ಷಪ್ಪ ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಕಾರ್ಯಕಾರಣಿ ಸಭೆ ಮಾಡುತ್ತೇವೆ ಎಂದಿದ್ದಾರೆ. ಸಂತೋಷ್‍ಜೀ ಮೊದಲಿನಿಂದ ಪರಿಚಯವಿದ್ದಿದ್ದರಿಂದ ನಿನ್ನೆ ಭೇಟಿಯಾಗಿ ಬಂದಿದ್ದೇನೆ ಬ್ರಿಗೇಡ್ ಬಗ್ಗೆ ಚರ್ಚಿಸಿಲ್ಲ ಅಂತ ವಿರುಪಾಕ್ಷಪ್ಪ ತಿಳಿಸಿದ್ದಾರೆ.

  • ಮುರಳೀಧರ ರಾವ್ ನಮಗೆ ಬೇಡ- ಹೈಕಮಾಂಡ್‍ಗೆ ದೂರು ನೀಡಲು ರಾಜ್ಯ ನಾಯಕರು ಚಿಂತನೆ!

    ಮುರಳೀಧರ ರಾವ್ ನಮಗೆ ಬೇಡ- ಹೈಕಮಾಂಡ್‍ಗೆ ದೂರು ನೀಡಲು ರಾಜ್ಯ ನಾಯಕರು ಚಿಂತನೆ!

    – ಮೇ 20ಕ್ಕೆ ಮತ್ತೆ ಸಮಾವೇಶ ಕರೆದ ಈಶ್ವರಪ್ಪ!

    ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ದಿನೇ ದಿನೇ ಒಳಜಗಳದ ಕಾವು ಹೆಚ್ಚುತ್ತಿದೆ. ಇನ್ನು ರಾಜ್ಯದ ಕೆಲವು ಬಿಜೆಪಿ ನಾಯಕರು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವ್ರನ್ನೇ ವಜಾ ಮಾಡುವಂತೆ ಹೈಕಮಾಂಡ್‍ಗೆ ದೂರು ನೀಡಲು ನಿರ್ಧರಿಸಿದ್ದಾರೆ.

    ಯಡಿಯೂರಪ್ಪ ಮತ್ತು ಈಶ್ವರಪ್ಪ ಬಣದ ಇಬ್ಬರು ಮುಖಂಡರಿಗೆ ಬಿಸಿ ಮುಟ್ಟಿಸಿದ್ರೂ, ಈಶ್ವರಪ್ಪನವರು ಮಾತ್ರ ತಮ್ಮ ಸಿಟ್ಟನ್ನ ಬಿಟ್ಟಿಲ್ಲ. ಮೇ 6 ಮತ್ತು 7 ರಂದು ಮೈಸೂರಲ್ಲಿ ಬಿಜೆಪಿ ಸಮಾವೇಶ ನಡೆಯಲಿದೆ. ಆದರೆ ಮೇ 20ರಂದು ಮತ್ತೆ ಪಕ್ಷ ಉಳಿಸಿ ಸಮಾವೇಶ ನಡೆಸಲಾಗುವುದು ಎಂದು ಈಶ್ವರಪ್ಪ ಹೇಳಿದ್ದಾರೆ.

    ಯಾವುದೇ ಕಾರಣಕ್ಕೂ ಬ್ರಿಗೇಡ್ ನಿಲ್ಲಿಸಲ್ಲ. ಮೇ 10ರೊಳಗೆ ಸಭೆ ಕರೆದು ಪಕ್ಷದೊಳಗಿನ ಗೊಂದಲ ನಿವಾರಿಸದಿದ್ರೆ ಸಮಾವೇಶ ನಡೆಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ ಯಡಿಯೂರಪ್ಪ ಅವರು ಮಾತ್ರ ಎಲ್ಲವೂ ಸರಿಹೋಗುತ್ತೆ ಎನ್ನುವ ವಿಶ್ವಾಸದಲ್ಲಿದ್ದಾರೆ.