Tag: ರಾಯಚೂರ

  • ‘ನೋ ಕ್ಯಾಶ್’ ಬೋರ್ಡ್ ಹಾಕಿರುವ ATMಗಳ ತಿಥಿ ಮಾಡಿದ ಜನರು

    ‘ನೋ ಕ್ಯಾಶ್’ ಬೋರ್ಡ್ ಹಾಕಿರುವ ATMಗಳ ತಿಥಿ ಮಾಡಿದ ಜನರು

    ರಾಯಚೂರು: ಒಂದು ತಿಂಗಳಿಂದ ಸರಿಯಾಗಿ ಕೆಲಸ ಮಾಡದೇ ನೋ ಕ್ಯಾಶ್ ಬೋರ್ಡ್ ಹಾಕಿರುವ ಎಟಿಂಎಂಗಳು ಸತ್ತಿವೆ ಅಂತಾ ರಾಯಚೂರಿನಲ್ಲಿ ಸಾರ್ವಜನಿಕರು ತಿಥಿ ಕಾರ್ಯ ಮಾಡುವ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದಾರೆ.

    ನಗರದ ಅಂಬೇಡ್ಕರ್ ವೃತ್ತದ ಬಳಿಯಿರುವ ವಿವಿಧ ಬ್ಯಾಂಕ್ ಎಟಿಎಂಗಳ ಮುಂದೆ ಜನಾಂದೋಲನ ಮಹಾಮೈತ್ರಿ ಸಂಘಟನೆ ತಿಥಿ ಕಾರ್ಯ ಮಾಡಿದೆ. ಸಾರ್ವಜನಿಕರು ಒಂದು ತಿಂಗಳಿಂದ ಎಟಿಂಎಂ ನಲ್ಲಿ ಹಣವಿಲ್ಲದೆ ಇರುವದರಿಂದ ಪರದಾಡುವಂತಾಗಿದೆ. ಕೇಂದ್ರ ಸರ್ಕಾರದ ನಿಲುವುಗಳಿಂದಾಗಿ ಕಾರ್ಪೋರೇಟ್ ಸಂಸ್ಥೆಗಳು ಹಣ ಲೂಟಿ ಮಾಡುತ್ತಿವೆ, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಜನಸಂಗ್ರಾಮ ಪರಿಷತ್ ಮುಖಂಡ ಡಾ.ವಿ.ಎ.ಮಾಲೀಪಾಟೀಲ್ ಆರೋಪಿಸಿದ್ರು.

    ಕೇಂದ್ರ ಸರ್ಕಾರವು ಸುಮಾರು 2 ಲಕ್ಷ ಕೋಟಿ ರೂ. ಕಾರ್ಪೋರೇಟ್ ಸಾಲವನ್ನು ಮನ್ನಾ ಮಾಡಿದ್ದು, ಅದರ ಜೊತೆಗೆ ಲಲಿತ್ ಮಹಲ್ 6 ಸಾವಿರ ಕೋಟಿ ರೂ., ವಿಜಯ್ ಮಲ್ಯ 9 ಸಾವಿರ ಕೋಟಿ ರೂ. ಮತ್ತು ನೀರವ್ ಮೋದಿ 11 ಸಾವಿರದ 700 ಕೋಟಿ ರೂ. ಸಾಲವನ್ನ ತೆಗೆದುಕೊಂಡು ದೇಶದಿಂದ ಓಡಿಹೋಗಿದ್ದಾರೆ. ಆದ್ದರಿಂದ ಬ್ಯಾಂಕ್ ನಲ್ಲಿ ಹಣ ಕಡಿಮೆಯಾಗಿ ಈ ರೀತಿ ಸಮಸ್ಯೆಯಾಗುತ್ತಿದೆ ಅಂತಾ ಮಾಲೀಪಾಟೀಲ್ ಹೇಳಿದ್ರು.

    ಕೇಂದ್ರ ಸರ್ಕಾರ ಜನಸಾಮಾನ್ಯರು ದುಡಿದ ಶ್ರಮದ ಹಣವನ್ನು ಬ್ಯಾಂಕ್ ಗೆ ಕಟ್ಟಿಸಿಕೊಂಡು ಅದನ್ನು ದೊಡ್ಡ ಜನರಿಗೆ ನೀಡುತ್ತದೆ. ಆದ್ರೆ ಅವರು ತಪ್ಪಿಸಿಕೊಂಡು ವಿದೇಶಕ್ಕೆ ಓಡಿಹೋಗುತ್ತಾರೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗಿತ್ತಿದೆ. ನೋಟು ರದ್ದತಿಯಾದಾಗಲೂ ಎಟಿಎಂನಲ್ಲಿ ಹಣ ಇರಲಿಲ್ಲ, ಈಗಲೂ ಹಣವಿಲ್ಲದೆ ಬಾಗಿಲು ಮುಚ್ಚಿವೆ. ಅದಕ್ಕೆ ಈ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸಬೇಕೆಂದು ತಿಥಿ ಕಾರ್ಯ ಮಾಡಿದ್ದೇವೆಂದು ಅಂತಾ ಮಹಾಮೈತ್ರೆದ ಸಂಚಾಲಕ ಎಂ.ಆರ್.ಭೇರಿ ತಿಳಿಸಿದ್ರು.

    https://www.youtube.com/watch?v=f394ewblo58

  • ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು ರಾಯಚೂರು ಕೃಷಿ ವಿವಿ ವಿದ್ಯಾರ್ಥಿಗಳಿಂದ ಕರಾಳ ದಿನಾಚರಣೆ

    ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು ರಾಯಚೂರು ಕೃಷಿ ವಿವಿ ವಿದ್ಯಾರ್ಥಿಗಳಿಂದ ಕರಾಳ ದಿನಾಚರಣೆ

    -ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕೈಬಿಟ್ಟ ಹಿನ್ನೆಲೆ ಹೋರಾಟ

    ರಾಯಚೂರು: ನಾಡಿನೆಲ್ಲಡೆ ರಂಗುರಂಗಿನ ಬಣ್ಣ ಹಚ್ಚಿ ಹೋಳಿ ಹಬ್ಬವನ್ನ ಸಂಭ್ರಮಿಸಿದ್ರೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಬಿಟೆಕ್ ವಿದ್ಯಾರ್ಥಿಗಳು ಮಾತ್ರ ಮುಖಕ್ಕೆ ಕಪ್ಪುಬಣ್ಣ ಬಳಿದುಕೊಂಡು ಕರಾಳ ದಿನ ಆಚರಿಸಿದರು.

    ಕಳೆದ 27 ದಿನಗಳಿಂದ ಹೋರಾಟ ನಡೆಸಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸರ್ಕಾರದ ಧೋರಣೆ ಖಂಡಿಸಿ ಕಪ್ಪು ಬಣ್ಣ ಬಳಿದುಕೊಂಡು ಪ್ರತಿಭಟಿಸಿದರು. ಕಾಮದಹನ ಮಾಡದೇ ಕಾಮಣ್ಣನ ಪ್ರತಿಕೃತಿ ಮುಂದೆ ಇಟ್ಟುಕೊಂಡು ಹೋರಾಟ ಮುಂದುವರೆಸಿದ್ದಾರೆ.

    ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ತಾಂತ್ರಿಕ ವಿದ್ಯಾರ್ಥಿಗಳನ್ನ ಕೈಬಿಟ್ಟಿರುವುದನ್ನ ಖಂಡಿಸಿ ವಿದ್ಯಾರ್ಥಿಗಳು ನಿರಂತರ ಹೋರಾಟ ನಡೆಸಿದ್ದಾರೆ. ಆದ್ರೆ ಇದುವರೆಗೂ ಸರ್ಕಾರ ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಮ್ಮನ್ನ ಹುದ್ದೆಗಳಿಗೆ ಪರಿಗಣಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

     

  • ಮೈಲುಗಟ್ಟಲೇ ನಡೆದರು ಸಿಗದ ಜೀವಜಲ: ಬಿಸಿಲನಾಡು ರಾಯಚೂರಲ್ಲಿ ಹನಿ ಹನಿಗೂ ಹಾಹಾಕಾರ

    ಮೈಲುಗಟ್ಟಲೇ ನಡೆದರು ಸಿಗದ ಜೀವಜಲ: ಬಿಸಿಲನಾಡು ರಾಯಚೂರಲ್ಲಿ ಹನಿ ಹನಿಗೂ ಹಾಹಾಕಾರ

    -ಗಬ್ಬು ವಾಸನೆಯ ಹಳ್ಳದ ಚಿಲುಮೆ ನೀರನ್ನೇ ನಂಬಿರುವ ಹಳ್ಳಿಜನ
    -ಜನರಿಗೆ ತಲುಪಲೇ ಇಲ್ಲಾ ಸರ್ಕಾರಗಳ ಸಾವಿರಾರು ಕೋಟಿ ರೂ.ಯೋಜನೆಗಳು

    ವಿಜಯ್ ಜಾಗಟಗಲ್

    ರಾಯಚೂರು: ಬಿಸಿಲನಾಡು ರಾಯಚೂರು ಕಳೆದ ಎಂಟತ್ತು ವರ್ಷಗಳಲ್ಲಿ ಕಂಡರಿಯದ ಭೀಕರ ಬರಗಾಲವನ್ನ ಅನುಭವಿಸುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ನೀರಿಗಾಗಿ ಪರದಾಟ ಶುರುವಾಗಿದೆ. ಮಾರ್ಚ್ ತಿಂಗಳಲ್ಲೇ ಇಡೀ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ. ಅವಶ್ಯಕತೆಗೆ ಅನುಗುಣವಾಗಿ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ಜಿಲ್ಲಾಡಳಿತ ವೈಫಲ್ಯ ಕಂಡಿದೆ. ಟ್ಯಾಂಕರ್ ಮೂಲಕ ನೀರನ್ನ ಸರಬರಾಜು ಮಾಡಲೇ ಬೇಕಾದ 68 ಗ್ರಾಮಗಳನ್ನ ಜಿಲ್ಲಾಡಳಿತ ಗುರುತಿಸಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

    ಜಿಲ್ಲೆಯ ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ, ಲಿಂಗಸುಗೂರು ತಾಲೂಕುಗಳಲ್ಲಿನ 268 ಕೆರೆಗಳಲ್ಲಿ ಅರ್ಧದಷ್ಟು ಕೆರೆಗಳು ಖಾಲಿಯಾಗಿವೆ. ಜಿಲ್ಲೆಯಲ್ಲಿ ಹರಿಯುವ ತುಂಗಭದ್ರೆ ಕೃಷ್ಣ ನದಿಗಳು ಹಾಗೂ ಹಳ್ಳಗಳು ಸಂಪೂರ್ಣ ಭತ್ತಿಹೋಗಿವೆ. ಹೀಗಾಗಿ ಜಿಲ್ಲೆಯ ಸಿಂಧನೂರು ನಗರಕ್ಕೆ ಅಲ್ಲಿನ ನಗರಸಭೆ ವಾರಕ್ಕೆ ಒಂದು ಬಾರಿ ನೀರನ್ನ ಕೊಡುತ್ತಿದೆ. ಉಳಿದ ನಗರ ಪಟ್ಟಣಗಳಲ್ಲಿ ಮೂರು ಅಥವಾ ನಾಲ್ಕು ದಿನಕ್ಕೆ ಒಂದು ಬಾರಿ ನೀರನ್ನ ಹರಿಸಲಾಗುತ್ತಿದೆ.

    ಇನ್ನೂ ಗ್ರಾಮೀಣ ಭಾಗದ ಪರಸ್ಥಿತಿ ಆ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಜಿಲ್ಲೆಯ ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕಿನಲ್ಲಿ ಎಂದೂ ಕಂಡರಿಯದಷ್ಟು ನೀರಿನ ಸಮಸ್ಯೆ ಎದುರಾಗಿದೆ. ದೇವದುರ್ಗದ ಸಲಿಕಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅಕ್ಷರಶಃ ಜಲಕ್ಷಾಮ ಎದುರಾಗಿದೆ. ಲಿಂಗಸುಗೂರು ತಾಲೂಕಿನ ದಂತೆರದೊಡ್ಡಿ, ಸೂರುಗುದೊಡ್ಡಿ, ಆಂಡಲಗೇರಿದೊಡ್ಡಿ, ಹುಬ್ಬಳ್ಳೋರಿದೊಡ್ಡಿ, ಮಕಾಶೆರ್ ದೊಡ್ಡಿ, ಕುರುಬರದೊಡ್ಡಿ, ಮುಸಲ್ಮಾನರ ದೊಡ್ಡಿಗಳು ಎಂದೂ ಸಮೃದ್ಧ ನೀರನ್ನ ನೋಡೆಯಿಲ್ಲ. ಮಳೆಗಾಲ, ಚಳಿಗಾಲದಲ್ಲಿ ಹಳ್ಳದಲ್ಲೇ ಹೆಚ್ಚು ನೀರು ಹರಿಯುವುದರಿಂದ ಅಷ್ಟೊಂದು ತೊಂದರೆಗಳನ್ನ ಅನುಭವಿಸುವುದಿಲ್ಲ. ಆದ್ರೆ ಬೇಸಿಗೆಯಲ್ಲಿ ಹಳ್ಳಗಳು ಬತ್ತುವುದರಿಂದ ನೀರಿಗಾಗಿ ಅಕ್ಕಪಕ್ಕದ ಊರುಗಳಿಗೆ ಮೈಲುಗಟ್ಟಲೆ ನಡೆದು ನೀರನ್ನ ತರಬೇಕಾಗುತ್ತದೆ. ಚಿಕ್ಕಮಕ್ಕಳು, ವಯೋವೃದ್ದರು ಕೊಡಗಳನ್ನ ಹಿಡಿದು ನೀರಿಗಾಗಿ ಬೆಳಿಗ್ಗೆಯಿಂದಲೇ ಶೋಧ ಆರಂಭಿಸುತ್ತಾರೆ.

    ಹಳ್ಳದ ನೀರು ಆಸರೆ: ಹಳ್ಳಗಳಲ್ಲೇ ಆಳವಾಗಿ ಚಿಲುಮೆಗಳನ್ನ ತೋಡಿ ನೀರು ತರುತ್ತಿದ್ದಾರೆ. ಆದ್ರೆ ನೀರು ಕೊಳಚೆ ವಾಸನೆ ಬೀರುವುದಲ್ಲನ್ನೆ ಹಲವಾರು ಆರೋಗ್ಯ ಸಮಸ್ಯೆಗಳನ್ನೂ ಉಂಟುಮಾಡುತ್ತಿದೆ. ಮತದಾನ ಗುರುತಿನ ಚೀಟಿ, ಆಧಾರ ಕಾರ್ಡ್‍ಹೊಂದಿರುವ ಇಲ್ಲಿನ ಜನರನ್ನ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮನುಷ್ಯರು ಅಂತ ಭಾವಿಸಿದ ಹಾಗೇ ಕಾಣಿಸುತ್ತಿಲ್ಲ. ಯಾಕಂದ್ರೆ ಇಲ್ಲಿನ ಬಹಳ ಗ್ರಾಮಗಳಿಗೆ ಕನಿಷ್ಠ ಮಟ್ಟದ ರಸ್ತೆಯೂ ಇಲ್ಲ. ಇನ್ನೂ ಉಳಿದ ಸೌಲಭ್ಯಗಳ ಮಾತು ತುಂಬಾನೇ ದೂರ. ಕೃಷಿ ಹಾಗೂ ಕಟ್ಟಿಗೆ ಸೌದೆ ಮಾರಾಟವನ್ನೇ ನಂಬಿ ಬದುಕುತ್ತಿರುವ ಈ ದೊಡ್ಡಿಗಳ ಜನರಿಗೆ ಪದೇ ಪದೇ ಅಪ್ಪಳಿಸುತ್ತಿರುವ ಬರಗಾಲದಿಂದ ಬರಸಿಡಿಲು ಬಡಿಬಡಿದಂತಾಗಿದೆ.

    ಕುಡಿಯುವ ನೀರಿಗಾಗಿ ಜಿಲ್ಲಾಪಂಚಾಯ್ತಿ ಕಾರ್ಯಪಡೆಗೆ 3 ಕೋಟಿ 40 ಲಕ್ಷ , ನಗರಸಭೆ ಹಾಗೂ ಪುರಸಭೆಗಳಿಗೆ 3 ಕೋಟಿ 47 ಲಕ್ಷ ಹಾಗೂ ಸಿಆರ್‍ಎಫ್ ಅನುದಾನ 3 ಕೋಟಿ 60 ಲಕ್ಷ ಬಂದಿದೆ. ಕೂಡಲೇ ಕ್ರಿಯಾ ಯೋಜನೆ ರೂಪಿಸಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಅಂತ ರಾಯಚೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ. ಆದ್ರೆ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಜನ ಕುಡಿಯುವ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ. ಕನಿಷ್ಠ ಈಗಲಾದ್ರೂ ಅಧಿಕಾರಿಗಳು ಕಾರ್ಯಪ್ರವೃತ್ತರಾದ್ರೆ ಜನರ ಸಮಸ್ಯೆಗೆ ಪರಿಹಾರ ಸಿಗಬಹುದು.

     

  • ಅಶ್ಲೀಲ ಫೋಟೋ ವೀಕ್ಷಣೆ  ಪ್ರಕರಣ- ಸಿಐಡಿಯಿಂದ ತನ್ವೀರ್ ಸೇಠ್‍ಗೆ ಕ್ಲೀನ್‍ಚಿಟ್

    ಅಶ್ಲೀಲ ಫೋಟೋ ವೀಕ್ಷಣೆ ಪ್ರಕರಣ- ಸಿಐಡಿಯಿಂದ ತನ್ವೀರ್ ಸೇಠ್‍ಗೆ ಕ್ಲೀನ್‍ಚಿಟ್

    ಬೆಂಗಳೂರು: ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಂದು ಆಶ್ಲೀಲ ವಿಡಿಯೋ ನೋಡಿ ಸಿಕ್ಕಿ ಬಿದ್ದಿದ್ದ ಪ್ರಕರಣದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಿಐಡಿ ಅಧಿಕಾರಿಗಳು ಕ್ಲೀನ್‍ಚಿಟ್ ನೀಡಿದ್ದಾರೆ.

    ನವೆಂಬರ್ 10 2016 ರಂದು ರಾಯಚೂರಿನಲ್ಲಿ ಸರ್ಕಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ದಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಶ್ಲೀಲ ಫೋಟೋ ನೋಡಿ ಸುದ್ದಿಯಾಗಿದ್ರು. ಬಳಿಕ ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು. ಈಗ ಸಿಐಡಿ ವರದಿ ಕೊಟ್ಟಿದ್ದು ಸಚಿವರಿಗೆ ಕ್ಲೀನ್‍ಚಿಟ್ ನೀಡಿದೆ. ಸಚಿವರ ಸ್ನೇಹಿತ ಅರಸು ಅನ್ನೋರು ಈ ಫೋಟೋ ಕಳಿಸಿದ್ದು, ಕೇವಲ ಸಚಿವರಿಗೆ ಮಾತ್ರವಲ್ಲದೇ ಇತರೆ ವಾಟ್ಸಪ್‍ನ 8 ರಿಂದ 10 ಗ್ರೂಪ್‍ಗಳಿಗೆ ಫೋಟೋವನ್ನು ಕಳುಹಿಸಿದ್ದರು ಎಂದು ಹೇಳಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವರು, ವಾಟ್ಸಪ್‍ಗೆ ಫೋಟೋ ಬಂದಿರೋದು ನಿಜ. ಆದ್ರೆ ಡೌನ್‍ಲೋಡ್ ಮಾಡಿಲ್ಲ ಅಂತ ಹೇಳಿದ್ದರು. ಮಾತ್ರವಲ್ಲದೇ ತಾವಾಗಿಯೇ ಸರ್ಚ್ ಮಾಡಿ ಅಶ್ಲೀಲ ಫೋಟೋವನ್ನೂ ನೋಡಿಲ್ಲ. ಇದ್ರಲ್ಲಿ ಮಂತ್ರಿಗಳ ತಪ್ಪಿಲ್ಲ. ಅಪರಾಧನೂ ಅಲ್ಲ ಅಂತ ತನಿಖಾಧಿಕಾರಿಗಳು 30 ಪುಟಗಳ ವರದಿಯನ್ನು ಸಿಐಡಿ ಡಿಜಿಪಿ ಕಿಶೋರ್ ಚಂದ್ರರಿಗೆ ಕೊಟ್ಟಿದ್ದರು.