Tag: ರಾಮ ಮಂದಿರ

  • 2024 ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ: ಗೋಪಾಲ್ ಜೀ

    2024 ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ: ಗೋಪಾಲ್ ಜೀ

    ಬೆಂಗಳೂರು: ಭಾರತೀಯರ ಬಹುದಿನದ ಕನಸು ಅಯೋಧ್ಯೆ(Ayodhya) ರಾಮ ಮಂದಿರ(Ram Mandir)  ಮೊದಲ ಹಂತದ ನಿರ್ಮಾಣ ಕಾರ್ಯ 2024ರಲ್ಲಿ ಮುಕ್ತಾಯವಾಗಲಿದೆ. ಜನವರಿ 2024 ಸಂಕ್ರಾಂತಿ(Makar Sankranti) ವೇಳೆಗೆ  ಬಾಲ ರಾಮನ ಪ್ರತಿಷ್ಠಾಪನೆ ಆಗಲಿದೆ ಎಂದು ಕನ್ನಡಿಗ ರಾಮ ಮಂದಿರ ನಿರ್ಮಾಣ ಸಮಿತಿ ಸದಸ್ಯ ಗೋಪಾಲ್ ಜೀ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಭರದಿಂದ ರಾಮ ಮಂದಿರ ನಿರ್ಮಾಣ ಕೆಲಸ ಸಾಗುತ್ತಿದೆ. ಭೂಮಿಯಿಂದ 20 ಅಡಿ ಮೇಲಿನವರೆಗೂ ನಿರ್ಮಾಣದ ಕೆಲಸ ಪೂರ್ಣವಾಗಿದೆ. 2024 ಸಂಕ್ರಾಂತಿಗೆ ರಾಮನ ಪ್ರಾಣ ಪ್ರತಿಷ್ಠಾಪನೆ(Pran Pratishtha) ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ 200 ಕೋಟಿ ನಿಧಿ ಸಂಗ್ರಹ

    ಗೋಪಾಲ್‌ ಜೀ ತಿಳಿಸಿದ್ದೇನು?
    ಸದ್ಯ ರಾಮ ಮಂದಿರಕ್ಕೆ ಬುನಾದಿ ಹಾಕುವ ಕೆಲಸ ಸಂಪೂರ್ಣವಾಗಿ ಮುಗಿದಿದೆ. ಭೂಮಿಯ 45 ಅಡಿ ಆಡಿ ಆಳದಲ್ಲಿ  ಸಿಮೆಂಟ್ ಕಾಂಕ್ರೀಟ್ ಕೆಲಸ ಆಗಿದೆ. ಈಗ ಅದರ‌‌ ಮೇಲೆ ಬೆಂಗಳೂರಿನ 1700 ಗ್ರಾನೈಟ್ ಕಲ್ಲು  ಇಡುವ ಕಾರ್ಯ ಬಹುತೇಕ ಮುಗಿದಿದೆ.

    ಇನ್ನೊಂದು ವಾರದಲ್ಲಿ ಈ ಕಾರ್ಯ ಸಂಪೂರ್ಣವಾಗಿ ಮುಗಿಯಲಿದೆ. ಮುಂದೆ ಅದರ ಮೇಲೆ ರಾಜಸ್ಥಾನದ ಭರತ್ ಪುರ ಜಿಲ್ಲೆಯ ಗುಲಾಬಿ ಬಣ್ಣದ ಕಲ್ಲು ಕೆತ್ತನೆಯನ್ನು ಇಡಲಾಗುತ್ತದೆ. 1 ಲಕ್ಷ ಕಲ್ಲುಗಳು ಕೆತ್ತನೆಯಾಗಿ ಅಯೋಧ್ಯೆಗೆ ಬಂದಿದೆ. ಈಗಾಗಲೇ ಕೆಲಸ ಪ್ರಾರಂಭ ಆಗಿದ್ದು, 600 ಕಲ್ಲು ಇಡಲಾಗಿದೆ. ಈಗ ನೆಲದಿಂದ 20 ಅಡಿ ಮೇಲಿನ ಮಟ್ಟದವರೆಗೂ ರಾಮಮಂದಿರ ಕೆಲಸ ಪೂರ್ಣವಾಗಿದೆ. ಇದನ್ನೂ ಓದಿ: PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್

    2024 ಜನವರಿ ಸಂಕ್ರಾಂತಿಯ ಉತ್ತಮ ಮುಹೂರ್ತದಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಾಣ ಪ್ರತಿಷ್ಠಾಪನೆ‌ ಅ ಸಮಯದಲ್ಲಿ ನಡೆಯಲಿದೆ. ಒಂದು ಮಹಡಿಯ ಕಾರ್ಯ 2024 ಜನವರಿ ವೇಳೆ ಮುಗಿಯಲಿದೆ. ಇನ್ನೊಂದು ಮಹಡಿಗೆ 6-8 ತಿಂಗಳು ಮತ್ತೆ ಸಮಯ ಬೇಕಾಗುತ್ತದೆ. ಇಂದಿನಿಂದ 2 ವರ್ಷಗಳ ಒಳಗೆ ರಾಮಮಂದಿರ ಕೆಲಸ ಸಂಪೂರ್ಣವಾಗಲಿದೆ. ಇದನ್ನೂ ಓದಿ: ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು

    ಮಂದಿರ ಹೊರಗೆ ಪ್ರಕಾರದ ನಿರ್ಮಾಣ ಮಾಡಲಾಗುತ್ತದೆ. ಇದು ದೇವಸ್ಥಾನದಷ್ಟು ದೊಡ್ಡದು ಇರಲಿದೆ. ಇದಕ್ಕೆ ಬೇಕಾದ ಕೆಲಸವೂ ರಾಮ ಮಂದಿರದ ಜೊತೆ ಜೊತೆಗೆ ನಡೆಯಲಿದೆ. ರಾಮ ಮಂದಿರದಲ್ಲಿ ದರ್ಶನ ಮಾಡುವವರಿಗೆ ಪೆನ್ನು, ಮೊಬೈಲ್ ಫೋನ್, ಸೇರಿದಂತೆ ಎಲೆಕ್ಟ್ರಿಕ್ ವಸ್ತುಗಳು, ಇನ್ನಿತರ ವಸ್ತುಗಳು ನಿಷೇಧ ಇರಲಿದೆ. ಭಕ್ತರಿಗೆ ಇದೆಲ್ಲವನ್ನೂ ಇಡಲು ಪ್ರಾಥಮಿಕ ಕೆಲಸಗಳಿಗಾಗಿ ಯಾತ್ರಿಗಳ ವ್ಯವಸ್ಥೆ ಮಾಡಲಾಗುತ್ತದೆ. ಇದೆಲ್ಲವನ್ನು ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಮಾಡಲಾಗುತ್ತದೆ. 2024ರ ಅಂತ್ಯದ ವೇಳೆಗೆ  ಈ ಕಾರ್ಯ ಮುಗಿಯಲಿದೆ ಎಂದು ಗೋಪಾಲ್ ಜೀ ಮಾಹಿತಿ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದ ಭಕ್ತರಿಂದ ರಾಮಮಂದಿರಕ್ಕೆ ಚಿನ್ನದ ಶಿಖರ: ಪೇಜಾವರ ಶ್ರೀ

    ಕರ್ನಾಟಕದ ಭಕ್ತರಿಂದ ರಾಮಮಂದಿರಕ್ಕೆ ಚಿನ್ನದ ಶಿಖರ: ಪೇಜಾವರ ಶ್ರೀ

    ಉಡುಪಿ: ರಾಮಂದಿರಕ್ಕೆ ಕರ್ನಾಟಕದ ಭಕ್ತರಿಂದ ಚಿನ್ನದ ಶಿಖರವನ್ನು ಅರ್ಪಿಸುವುದಾಗಿ ಪೇಜಾವರ ಶ್ರೀ (Pejawara Sri) ಹೇಳಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಮ ಮಂದಿರ (Rama Mandir) ದ ಗರ್ಭಗುಡಿಯ ಮೇಲೆ ಬಂಗಾರದ ಶಿಖರ ಸ್ಥಾಪಿಸಲಾಗುವುದು. ಕರ್ನಾಟಕದ ಭಕ್ತರು ಹೊಸದಾಗಿ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಭಕ್ತರಿಂದ ದೇಣಿಗೆ ಸಂಗ್ರಹಿಸಿ ಸ್ವರ್ಣ ಶಿಖರ ಮಾಡಲಾಗುವುದು ಎಂದರು.

    ಮಂದಿರ ಪ್ರತಿಷ್ಠಾಪನೆಯ ನಾಲ್ಕು ತಿಂಗಳ ಮೊದಲು ರಥಯಾತ್ರೆ ನಡೆಯುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಕ್ತರನ್ನು ಒಗ್ಗೂಡಿಸಬೇಕು. ಇಡೀ ದೇಶದ ಜನ ದೇಗುಲದ ಜೊತೆ ಭಾವನಾತ್ಮಕ ಸಂಬಂಧ ಬೆಳೆಸಬೇಕು. ರಾಜ್ಯಕ್ಕೆ ರಥಯಾತ್ರೆ ಬಂದಾಗ ಚಿನ್ನದ ಶಿಖರದ ಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.  ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಹಿಂದೂ ಮಹಿಳೆಯರಿಗೆ ಗೆಲುವು, ಅರ್ಜಿ ವಿಚಾರಣೆಗೆ ಯೋಗ್ಯ

    ಅಯೋಧ್ಯೆ (Ayodhya) ಯ ಮಂದಿರ ನಿರ್ಮಾಣ ಕಾರ್ಯ ವೇಗದಲ್ಲಿ ನಡೆಯುತ್ತಿದೆ. ರಾಮದೇವರ ಗರ್ಭಗುಡಿಯ ತಳದಲ್ಲಿ ಪೀಠದ ನಿರ್ಮಾಣ ಆಗಿದೆ. ರಾಮದೇವರ ಮೈಬಣ್ಣದ ಅಮೃತ ಶಿಲೆಯಲ್ಲೇ ಮೂರ್ತಿ ನಿರ್ಮಾಣ ಆಗಲಿದೆ. ಹೆಬ್ಬಾಗಿಲು ಸಾಗುವಾನಿ ಮರದಲ್ಲಿ ಆಗಲಿದೆ. ತೇಗದ ಮರ ಖರೀದಿ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆಯಾಗಿದೆ ಎಂದರು.

    ರಾಮಮಂದಿರ 1,300 ಕೋಟಿ ರೂ. ವೆಚ್ಚದಲ್ಲಿ ಮಂದಿರ ನಿರ್ಮಾಣ ಆಗಲಿದೆ. ಪ್ರತಿ ವರ್ಷ ನೂರು ಕೋಟಿಯಷ್ಟು ದೇಣಿಗೆ ಬರುತ್ತಿದೆ. ಮಂದಿರ ನಿರ್ಮಾಣದ ಪೂರ್ಣವಾಗಿ ಸುತ್ತಲ ಪರಿಸರದ ನಿರ್ಮಾಣ ಆಗಲಿದೆ. ರಾಮಮಂದಿರ ನಿರ್ಮಾಣ ನಂತರ ಅಯೋಧ್ಯೆಯ ಸಂಪೂರ್ಣ ಅಭಿವೃದ್ಧಿ ನಡೆಯುತ್ತದೆ ಎಂದು ಪೇಜಾವರ ಶ್ರೀ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಕಬ್ರಿಸ್ತಾನ್‌ಗಲ್ಲ.. ಜನರ ಹಣವನ್ನು ದೇಗುಲಗಳ ನಿರ್ಮಾಣಕ್ಕೆ ಬಿಜೆಪಿ ಬಳಸುತ್ತಿದೆ: ಯೋಗಿ ಆದಿತ್ಯನಾಥ್‌

    ಕಬ್ರಿಸ್ತಾನ್‌ಗಲ್ಲ.. ಜನರ ಹಣವನ್ನು ದೇಗುಲಗಳ ನಿರ್ಮಾಣಕ್ಕೆ ಬಿಜೆಪಿ ಬಳಸುತ್ತಿದೆ: ಯೋಗಿ ಆದಿತ್ಯನಾಥ್‌

    ಲಕ್ನೋ: ರಾಜ್ಯದಲ್ಲಿ ಹಿಂದಿನ ಸರ್ಕಾರಗಳು ಸಾರ್ವಜನಿಕ ಹಣವನ್ನು ಕಬ್ರಿಸ್ತಾನ್‌ಗೆ ವಿನಿಯೋಗಿಸುತ್ತಿದ್ದವು. ಆದರೆ ನಮ್ಮ ಬಿಜೆಪಿ ಸರ್ಕಾರ ಹಣವನ್ನು ದೇವಾಲಯಗಳ ನಿರ್ಮಾಣಕ್ಕೆ ಬಳಸುತ್ತಿದೆ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

    ದೀಪೋತ್ಸವ ಆಚರಣೆ ಹಿನ್ನೆಲೆಯಲ್ಲಿ ರಾಮ ಕಥಾ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜೊತೆಗೆ ಉತ್ತರ ಪ್ರದೇಶದಲ್ಲಿರುವ 500 ದೇವಾಲಯಗಳು ಹಾಗೂ ಇತರ ಧಾರ್ಮಿಕ ಸ್ಥಳಗಳ ನವೀಕರಣಕ್ಕಾಗಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೋ ಪಟಾಕಿ ಎಂದವ್ರು 3 ದಿನ ಕಾರ್ ಬಳಸಬೇಡಿ, ನಡೆದುಕೊಂಡು ಹೋಗಿ: ಕಂಗನಾ ರಣಾವತ್

    ಕಬ್ರಿಸ್ತಾನ್‌ ಮೇಲೆ ಪ್ರೀತಿ ಇರುವವರು ಸಾರ್ವಜನಿಕ ಹಣವನ್ನು ಅಲ್ಲಿ ಖರ್ಚು ಮಾಡುತ್ತಾರೆ. ಆದರೆ ಧರ್ಮ ಮತ್ತು ಸಂಸ್ಕೃತಿ ಮೇಲೆ ಪ್ರೀತಿ ಇರುವವರು ಜನರ ಹಣವನ್ನು ಅವರಿಗಾಗಿಯೇ ಖರ್ಚು ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    30 ವರ್ಷಗಳ ಹಿಂದೆ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರೆ ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು. ಆಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಈಗಿನ ವಿರೋಧ ಪಕ್ಷಗಳು ತಮಗೆ ಬೇಕಾದವರಿಗೆ ಗನ್‌ ತರಬೇತಿ ನೀಡಿದ್ದರು ಎಂದು ಆರೋಪಿಸಿದ್ದಾರೆ.

    2023ರ ಹೊತ್ತಿಗೆ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಬ್ಲೂಟೂತ್ ಬಳಸಿ ಕಾನ್‍ಸ್ಟೇಬಲ್ ಪರೀಕ್ಷೆ ಬರೆಯಲು ಯತ್ನ – ಸಿಐಡಿಗೆ ತನಿಖೆ ವಹಿಸಿದ ರಾಜ್ಯ ಗೃಹ ಇಲಾಖೆ

    ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಕುರಿತು ಮಾತನಾಡಿ, ರಾಜ್ಯದಲ್ಲಿ ಈ ಯೋಜನೆಯನ್ನು ಮುಂದುವರಿಸಲಾಗುವುದು. ಈ ಯೋಜನೆಯಿಂದ ರಾಜ್ಯದ ಬಡ ಜನರು ಮುಂದಿನ ವರ್ಷದ ಹೋಳಿ ಹಬ್ಬದವರೆಗೂ ಉಚಿತವಾಗಿ ಪಡಿತರ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

    ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಬಡ ಜನರಿಗೆ ಸಹಕಾರಿಯಾಗುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ನವೆಂಬರ್‌ಗೆ ಉಚಿತ ಪಡಿತರ ವಿತರಣೆ ಕೊನೆಗೊಳ್ಳಬೇಕಿತ್ತು. ಆದರೆ ಸಾಂಕ್ರಾಮಿಕ ಇನ್ನೂ ಕೊನೆಯಾಗಿಲ್ಲ. ಹೀಗಾಗಿ ನಮ್ಮ ಸರ್ಕಾರ ಮುಂದಿನ ವರ್ಷದ ಮಾರ್ಚ್‌ವರೆಗೂ ಉಚಿತವಾಗಿ ಪಡಿತರ ವಿತರಿಸಲಿದೆ ಎಂದು ಹೇಳಿದ್ದಾರೆ.

    ಈ ಯೋಜನೆ ವಿಸ್ತರಣೆಯಿಂದ ರಾಜ್ಯದ 15 ಕೋಟಿ ಬಡಜನರಿಗೆ ಅನುಕೂಲವಾಗಲಿದೆ. ಪಡಿತರದೊಂದಿಗೆ ಉಪ್ಪು, ಸಕ್ಕರೆ, ಬೇಳೆ ಮತ್ತು ಅಡುಗೆ ಎಣ್ಣೆಯನ್ನೂ ಜನರಿಗೆ ನೀಡಲಾಗುತ್ತಿದೆ ಎಂದಿದ್ದಾರೆ.

    ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, 661 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

  • ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

    ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

    ಲಕ್ನೋ: ವಿರೋಧ ಪಕ್ಷಗಳು ಭಗವಾನ್ ರಾಮನ ವಿರುದ್ಧವಾಗಿವೆ, ಅಂತರ ಕಾಯ್ದುಕೊಳ್ಳಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ

    ರಾಮ ದ್ರೋಹಿಗಳು ಕೇವಲ ನಂಬಿಕೆಗಷ್ಟೇ ಘಾಸಿಯುಂಟುಮಾಡುತ್ತಿಲ್ಲ ಬದಲಾಗಿ ಸಾಮಾಜಿಕ ಸಂರಚನೆಗೆ ಧಕ್ಕೆಯುಂಟು ಮಾಡುವುದರ ಜೊತೆಗೆ ಅಭಿವೃದ್ಧಿಗೂ ಅಡ್ಡಿಪಡಿಸುತ್ತಿದ್ದಾರೆ, ಇವರ ಆಳ್ವಿಕೆಯಲ್ಲಿ ರಾಜ್ಯವನ್ನು ದಂಗೆಯ ಬೆಂಕಿಗೆ ಎಸೆದಿದ್ದರು ಎಂದೂ ವಿರೋಧ ಪಕ್ಷದ ವಿರುದ್ಧವಾಗಿ ಕಿಡಿ ಕಾರಿದ್ದಾರೆ.

    ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ವಿಶ್ವಕರ್ಮ ಸಮುದಾಯದವರ ಸಭೆಯಲ್ಲಿ ಮಾತನಾಡಿದ ಅವರು, ರಾಮನ ಹಿತೈಷಿಗಳಾಗದವರು ಎಂದಿಗೂ ನಿಮ್ಮ ಹಿತೈಷಿಗಳಾಗಲು ಸಾಧ್ಯವಿಲ್ಲ. ಭಯೋತ್ಪಾದಕರನ್ನು ರಕ್ಷಿಸುವ, ಗಲಭೆಕೋರರನ್ನು ಅಪ್ಪಿಕೊಳ್ಳುವ ರಾಮ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳುವುದು ಈಗಿನ ಹಾಗೂ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ಅತ್ಯಗತ್ಯ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್‍ಪೂಲ್‍ನಲ್ಲಿ ಐರಾ, ಯಥರ್ವ್ ಮೋಜು ಮಸ್ತಿ

  • ಅಯೋಧ್ಯೆಯ ರಾಮನಿಗೆ ತೂಗುಯ್ಯಾಲೆ ಸೇವೆ- ಬೆಳ್ಳಿಯ ತೊಟ್ಟಿಲು ಮಾಡಿಸಿದ ಟ್ರಸ್ಟ್

    ಅಯೋಧ್ಯೆಯ ರಾಮನಿಗೆ ತೂಗುಯ್ಯಾಲೆ ಸೇವೆ- ಬೆಳ್ಳಿಯ ತೊಟ್ಟಿಲು ಮಾಡಿಸಿದ ಟ್ರಸ್ಟ್

    ಲಕ್ನೋ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಕಾರ್ಯ ನಿರಂತರವಾಗಿ ಸಾಗುತ್ತಿದೆ. ಭಗವಂತನ ಮೂರ್ತಿಯನ್ನು ತಾತ್ಕಾಲಿಕ ಮಂದಿರದ ಒಳಗೆ ಇಟ್ಟು ಪೂಜಿಸಲಾಗುತ್ತದೆ. ಇದೀಗ ರಾಮಲಲ್ಲಾ ಮೂರ್ತಿಯನ್ನು ಬೆಳ್ಳಿಯ ಉಯ್ಯಾಲೆಯಲ್ಲಿ ಇಟ್ಟು ತೂಗುವ ವಿಶೇಷ ಸೇವೆಯನ್ನು ಆರಂಭಿಸಲಾಗಿದೆ.

    ಅಯೋಧ್ಯಾದಲ್ಲಿ 493 ವರ್ಷಗಳ ನಂತರ ರಾಮಲಲ್ಲಾ ಬೆಳ್ಳಿ ಉಯ್ಯಾಲೆಯಲ್ಲಿ ತೂಗುತ್ತಿದ್ದಾನೆ. ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ದೀರ್ಘಕಾಲ ತಾತ್ಕಾಲಿಕ ಮಂದಿರದಲ್ಲಿ ಕುಳಿತಿರುವ ರಾಮಲಲ್ಲಾ ಸಹಿತ ನಾಲ್ವರು ಸಹೋದರರನ್ನು ಹೊಸದಾಗಿ ತಯಾರು ಮಾಡಿದ ರಜತ ಉಯ್ಯಾಲೆಯ ಮೇಲೆ ಕೂರಿಸಿ ತೂಗಲಾಗುತ್ತಿದೆ.

    ಈ ಹಿಂದೆಯೂ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಜೂಲನೋತ್ಸವ (ಉಯ್ಯಾಲೆ ಸೇವೆ)ದಲ್ಲಿ ಉಯ್ಯಾಲೆಯಲ್ಲಿ ತೂಗಲಾಗುತ್ತಿತ್ತು. ಆದರೆ ಆ ಉಯ್ಯಾಲೆ ಮಾತ್ರ ಮರದ್ದಾಗಿತ್ತು. ಈ ಬಾರಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬೆಳ್ಳಿಯ ಉಯ್ಯಾಲೆಯನ್ನು ಸಿದ್ಧಪಡಿಸಿದೆ. ಶ್ರಾವಣ ಶುಕ್ಲ ಪಂಚಮಿಯಂದು ಬಾಲರಾಮನಿಗೆ ಐದು ತಿಂಗಳು. ಈ ಸಮಯದಲ್ಲಿ ರಾಮನೂ ಸಹಿತ ನಾಲ್ವರು ಸಹೋದರರನ್ನು ತೊಟ್ಟಿಲಿಗೆ ಹಾಕುವ ಸಂಭ್ರಮ. ಇದನ್ನೂ ಓದಿ: ರಾಮ ಮಂದಿರ ನಿರ್ಮಾಣವಾಗುತ್ತಿದ್ದಂತೆ ಹಿರಿಯರಿಗೆ ಉಚಿತ ಪ್ರಯಾಣ: ಕೇಜ್ರಿವಾಲ್ ಭರವಸೆ

    ಟ್ರಸ್ಟ್ ಮುತುವರ್ಜಿಯಿಂದ ಬೆಳ್ಳಿಯ ತೊಟ್ಟಿಲನ್ನು ರಾಮಲಲ್ಲಾಗೆ ಅರ್ಪಿಸಲಾಯಿತು. ಈ ವೇಳೆ ವಿಶೇಷ ಪೂಜೆಯನ್ನು ನಡೆಸಲಾಯಿತು. ಮಂದಿರ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ ರಾಮಲಲ್ಲಾ ಸಹಿತ ನಾಲ್ವರು ಸಹೋದರರನ್ನು ಉಯ್ಯಾಲೆಯಲ್ಲಿ ಸ್ಥಾಪಿಸಿದರು. ಬಳಿಕ ಮಂಗಳ ಗೀತೆಗಳ ಜೊತೆಗೆ ಉಯ್ಯಾಲೆಯನ್ನು ತೂಗಲಾಯಿತು. ರಾಮಲಲ್ಲಾನ ಈ ಜೂಲನೋತ್ಸವವು ಶ್ರಾವಣ ಹುಣ್ಣಿಮೆ ಅಂದರೆ ಆಗಸ್ಟ್ 22ರವರೆಗೆ ಮುಂದುವರಿಯಲಿದೆ. ಇದನ್ನೂ ಓದಿ: ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಪೂರ್ಣ- ವಿಎಚ್‌ಪಿಯಿಂದ ಕೃತಜ್ಞತೆ

  • ರಾಮ ಮಂದಿರ ಭೂಮಿ ಖರೀದಿಯಲ್ಲಿ ಅಕ್ರಮ ಆರೋಪ – ಪತ್ರಕರ್ತನ ಮೇಲೆ ಕೇಸ್

    ರಾಮ ಮಂದಿರ ಭೂಮಿ ಖರೀದಿಯಲ್ಲಿ ಅಕ್ರಮ ಆರೋಪ – ಪತ್ರಕರ್ತನ ಮೇಲೆ ಕೇಸ್

    ಲಕ್ನೋ: ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರಾಗಿರುವ ಚಂಪತ್ ರಾಯ್ ವಿರುದ್ಧ ಭೂ ಅಕ್ರಮ ಆರೋಪ ಹೊರಿಸಿದ ಪತ್ರಕರ್ತ ಮತ್ತು ಇಬ್ಬರ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಪತ್ರಕರ್ತ ವಿನೀತ್ ನರೈನ್, ಅಲ್ಕಾ ಲಾಹೋತಿ, ರಜನೀಶ್ ಅವರ ವಿರುದ್ಧ ಚಂಪತ್ ರಾಯ್ ಅವರ ಸಹೋದರ ಸಂಜಯ್ ಬನ್ಸಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಜ್ನೋರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ವಿಶ್ವ ಹಿಂದೂ ಪರಿಷತ್ ಮುಖಂಡರಾಗಿರುವ ಚಂಪತ್ ರಾಯ್ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ನಲ್ಲಿ ಕಾರ್ಯದರ್ಶಿಯಾಗಿದ್ದು ಇವರು ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವಿನೀತ್ ನರೈನ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಇದನ್ನೂ ಓದಿ: ರಾಮ ಮಂದಿರ ಜಮೀನು ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ- ಎಸ್‍ಪಿ, ಆಪ್ ಆರೋಪ

    ಈ ಮೂವರೂ ವಿಎಚ್‍ಪಿ ನಾಯಕನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಸಂಚು ರೂಪಿಸಿ ದೇಶಾದ್ಯಂತ ಇರುವ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಮೂರು ದಿನಗಳ ಹಿಂದೆ ಫೇಸ್‍ಬುಕ್ ನಲ್ಲಿ ವಿನೀತ್ ನರೈನ್, ಚಂಪತ್ ರಾಯ್ ಅವರ ಸಹೋದರರು ಬಿಜ್ನೋರ್ ನಲ್ಲಿ ಭೂ ಕಬಳಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಪೋಸ್ಟ್ ಪ್ರಕಟಿಸಿದ್ದರು.

    ನರೈನ್ ಮತ್ತು ಇತರರು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ, ಉದ್ದೇಶಪೂರ್ವಕ ಸುಳ್ಳು ವರದಿ ಇತ್ಯಾದಿ ಆರೋಪಗಳನ್ನು ಎಫ್‍ಐಆರ್ ನಲ್ಲಿ ಹೊರಿಸಲಾಗಿದೆ.

    ಬಿಜ್ನೋರ್ ಪೊಲೀಸ್ ಮುಖ್ಯಸ್ಥರು ಈಗಾಗಲೇ ಚಂಪತ್ ರಾಯ್ ಮತ್ತು ಅವರ ಸಹೋದರರಿಗೆ ಈ ಆರೋಪಕ್ಕೆ ಸಂಬಂಧಿಸಿದಂತೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕ್ಲೀನ್ ಚಿಟ್ ನೀಡಿದ್ದು ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.

  • ರಾಮಜನ್ಮ ಭೂಮಿ ಹಗರಣ ಇಡೀ ದೇಶಕ್ಕೆ ಮಾಡಿದ ಅಪಮಾನ – ಡಿ.ಕೆ ಶಿವಕುಮಾರ್ ಕಿಡಿ

    ರಾಮಜನ್ಮ ಭೂಮಿ ಹಗರಣ ಇಡೀ ದೇಶಕ್ಕೆ ಮಾಡಿದ ಅಪಮಾನ – ಡಿ.ಕೆ ಶಿವಕುಮಾರ್ ಕಿಡಿ

    ಮಂಡ್ಯ: ರಾಮಮಂದಿರ ಭೂಮಿ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಇದು ಇಡೀ ದೇಶ ಹಾಗೂ ಜನರ ಭಾವನೆಗೆ ಮಾಡಿರುವ ಅಪಮಾನ. ಈ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

    ಮಂಡ್ಯದಲ್ಲಿ ಮಂಗಳವಾರ ನಡೆದ 100 ನಾಟ್ ಔಟ್ ಆಂದೋಲನದ ಅಂತಿಮ ದಿನದ ಪ್ರತಿಭಟನೆಯಲ್ಲಿ ಮಾತನಾಡಿದರು. ರಾಮ ಮಂದಿರ ನಿರ್ಮಾಣಕ್ಕೆ ಜನಸಾಮಾನ್ಯರು ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದರು. ಇಟ್ಟಿಗೆಗಳನ್ನು ಕೊಟ್ಟಿದ್ದಾರೆ. ಆದರೆ ರಾಮಮಂದಿರ ನಿರ್ಮಾಣದಲ್ಲೇ ಅಕ್ರಮ ಎಸಗಿರುವುದು ದೇಶಕ್ಕೇ ದೊಡ್ಡ ಅಪಮಾನ. ಭಾರತೀಯ ಸಂಸ್ಕೃತಿಗೆ  ನಮ್ಮ ಭಾವನೆಗೆ, ಧರ್ಮಕ್ಕೆ ಮಾಡಿದ ಅಪಚಾರ ಎಂದರು. ಇದನ್ನೂ ಓದಿ: ರಾಮ ಮಂದಿರ ಜಮೀನು ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ- ಎಸ್‍ಪಿ, ಆಪ್ ಆರೋಪ

    ರಾಮ ಮಂದಿರ ನಿರ್ಮಾಣಕ್ಕಾಗಿ ಹಳ್ಳಿ, ಹಳ್ಳಿಗಳಲ್ಲಿ ಜನ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಹೀಗಿರುವಾಗ ಇವರು ಭೂಮಿ ಖರೀದಿಯಲ್ಲಿ ಅವ್ಯವಹಾರ ಮಾಡಿ ದ್ರೋಹ ಬಗೆದಿದ್ದಾರೆ. ಇದನ್ನು ಇಡೀ ದೇಶ ಖಂಡಿಸಬೇಕು. ಜನ ಕೊಟ್ಟಿರುವ ದೇಣಿಗೆಯನ್ನು ಹಿಂದಿರುಗಿಸಬೇಕು. ಈ ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸಿ, ಶಿಕ್ಷೆ ನೀಡಬೇಕು ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರವನ್ನು ಆಗ್ರಹಿಸಿದರು.

    ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ಜನಸಾಮಾನ್ಯರ ಕಾರ್ಯಕ್ರಮ. ಇದು ರೈತರು, ವರ್ತಕರ ಕಾರ್ಯಕ್ರಮ. ಹೈರಾಣಾಗಿರುವ ಜನರ ಬದುಕು ಬದಲಿಸಲು ಈ ಹೋರಾಟ. 35 ರೂ ಬೆಲೆಯ ಪೆಟ್ರೋಲಿಗೆ 65 ರೂ. ತೆರಿಗೆ ಸೇರಿಸಲಾಗಿದೆ. ಎಲ್ಲ ಪಕ್ಷದವರೂ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸಿಕ್ಕಿದೆ. ಕೆಲವು ಕಡೆ ಬೆಲೆ ವ್ಯತ್ಯಾಸ ಕುರಿತು ಜನರಿಗೆ ಅರಿವು ಮೂಡಿಸಲು, ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಕಿಸಿಕೊಂಡವರಿಗೆ 50 ರುಪಾಯಿ ನೀಡಿ ಪ್ರತಿಭಟಿಸುತ್ತಿದ್ದಾರೆ. ಕೆಲವರು ಸಿಹಿ ಹಂಚಿದರೆ, ಮತ್ತೆ ಕೆಲವರು ಜಾಗಟೆ ಬಾರಿಸಿ ಪ್ರತಿಭಟಿಸಿದ್ದಾರೆ ಎಂದರು.

    ಪೆಟ್ರೋಲ್ ಬೆಲೆ 52 ರುಪಾಯಿ ಆದಾಗ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ಸೈಕಲ್ ತುಳಿದಿದ್ದ ಫೋಟೋ ನಮ್ಮ ಬಳಿ ಇದೆ. ಅದನ್ನು ಈಗ ಅವರಿಗೆ ಗಿಫ್ಟ್ ಆಗಿ ಕಳುಹಿಸಿ ಕೊಡುತ್ತೇನೆ. ಶೋಭಾ ಕರಂದ್ಲಾಜೆ ಅವರು ಗ್ಯಾಸ್ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತುಕೊಂಡು ಹೋರಾಟ ಮಾಡಿದ್ದೇ ಮಾಡಿದ್ದು. ಈಗ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

    ಮಂಡ್ಯ ಸಿಎಂ ಯಡಿಯೂರಪ್ಪನವರು ಹುಟ್ಟಿದ ಜಿಲ್ಲೆಯಾದ ಕಾರಣ ನಾನು ಅಂತಿಮ ದಿನದ ಪ್ರತಿಭಟನೆಗೆಂದಯ ಇಲ್ಲಿಗೇ ಬಂದಿದ್ದೇನೆ. ಇಂಧನ ಬೆಲೆ ಏರಿಕೆಯಿಂದ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ದಿನಬಳಕೆ ವಸ್ತುಗಳಿಂದ ಹಿಡಿದು ಕಬ್ಬಿಣ, ಸಿಮೆಂಟ್, ರಸಗೊಬ್ಬರ ಎಲ್ಲದರ ಬೆಲೆಯೂ ಹೆಚ್ಚಾಗಿದೆ. ಹೀಗೆ ಬೆಲೆ ಏರಿಕೆ ಮಾಡಿದವರು ಜನರ ಆದಾಯವನ್ನು ಮಾತ್ರ ಹೆಚ್ಚಳ ಮಾಡಲಿಲ್ಲ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನರ ಜೇಬನ್ನು ಪಿಕ್ ಪಾಕೆಟ್ ಮಾಡುವ ಸರ್ಕಾರಗಳಾಗಿವೆ. ನೆರೆ ರಾಷ್ಟ್ರಗಳಂತೆ ನಮ್ಮ ದೇಶದ ಸರ್ಕಾರವೂ ತೆರಿಗೆ ಕಡಿಮೆ ಮಾಡಿ ಜನರ ಹೊರೆ ಇಳಿಸಬೇಕು. ಸರ್ಕಾರ ಜನರ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಳ್ಳದೇ ಈ ರೀತಿ ಬೆಲೆ ಏರಿಕೆ ಮಾಡುತ್ತಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.

    ಮಂಡ್ಯದಲ್ಲಿ ಇಂದು 5ನೇ ದಿನದ 100 ನಾಟ್ ಔಟ್ ಪ್ರತಿಭಟನಾ ಆಂದೋಲನ ನಡೆಸಲಾಗುತ್ತಿದೆ. ಒಟ್ಟು 5 ಸಾವಿರ ಕಡೆಗಳಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. ನಿನ್ನೆ ವೇಳೆಗೆ 4300ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಭಟನೆ ಮಾಡಲಾಗಿತ್ತು, ಇಂದು 5 ಸಾವಿರ ಗಡಿ ದಾಟಲಿದೆ. ಈ ಪ್ರತಿಭಟನೆಗೆ ಸಹಕರಿಸಿದ ಸಾರ್ವಜನಿಕರು, ನಾಯಕರು ಜಿಲ್ಲಾ, ತಾಲೂಕು, ಹೋಬಳಿ, ಪಂಚಾಯಿತಿ ಮಟ್ಟದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ತಿಂಗಳು 17 ಬಾರಿ ಏರಿಕೆ ಮಾಡಿದ್ದಾರೆ. ಈ ವರ್ಷ ಒಟ್ಟು 51 ಬಾರಿ ಹೆಚ್ಚಳ ಮಾಡಿದ್ದಾರೆ. ಮಾರ್ಚ್, ಏಪ್ರಿಲ್ ನಲ್ಲಿ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಮಾಡಿರಲಿಲ್ಲ ಎಂದು ಹೇಳಿದರು.

    ಮಾತನಾಡಲ್ಲ: ಈಶ್ವರಪ್ಪನವರ ಹೇಳಿಕೆ ಬಗ್ಗೆ ನಾನ್ಯಾಕೆ ಮಾತನಾಡಲಿ. ಅವರ ಪಕ್ಷದ ಕತೆ, ಅವರ ಪರಿಸ್ಥಿತಿಯೇ ದೊಡ್ಡ ಕತೆಯಾಗಿದೆ. ಅದರ ಬಗ್ಗೆ ವ್ಯಾಖ್ಯಾನ ಮಾಡಲೂ ಸಾಧ್ಯವಿಲ್ಲ. ನಾಯಕತ್ವ ಬದಲಾವಣೆ ಅವರ ಪಕ್ಷದ ವಿಚಾರ, ನಾವು ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.

  • ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ  200 ಕೋಟಿ ನಿಧಿ ಸಂಗ್ರಹ

    ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ 200 ಕೋಟಿ ನಿಧಿ ಸಂಗ್ರಹ

    – ಕರ್ನಾಟಕದಲ್ಲಿ 95 ಲಕ್ಷ, ದೇಶದಲ್ಲಿ 12 ಕೋಟಿ ಮನೆ ತಲುಪಿದ ರಾಮ ಅಭಿಯಾನ
    – ಶೇ.80 ರಷ್ಟು ಮನೆಗಳನ್ನು ತಲುಪಿದ ಅಭಿಯಾನ

    ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ನಡೆದ ಅಭಿಯಾನದಲ್ಲಿ ಕರ್ನಾಟಕದ 95 ಲಕ್ಷ ಮನೆಗಳನ್ನು ತಲುಪಲಾಗಿದ್ದು, ಕರ್ನಾಟಕದಲ್ಲಿ ಸುಮಾರು 200 ಕೋಟಿ ರೂ. ಸಂಗ್ರಹವಾಗಿದೆ.

    ಜನವರಿ-ಫೆಬ್ರವರಿಯಲ್ಲಿ 45 ದಿನ ನಡೆದ ಅಭಿಯಾನದಲ್ಲಿ ಗುರಿ ಇರಿಸಿಕೊಂಡಿದ್ದ ಶೇಕಡಾ 80 ಮನೆಗಳನ್ನು ತಲುಪಲಾಗಿದೆ. ಕರ್ನಾಟಕದಲ್ಲಿ ಮನೆಗಳಿಗೆ ತೆರಳಿ ನಿಧಿ ಸಂಗ್ರಹಿಸಲು 1,250 ಸ್ವಾಮೀಜಿಗಳು ಭಾಗವಹಿಸಿದ್ದರು ಎಂದು ಅಭಿಯಾನದ ಕಾರ್ಯದರ್ಶಿ ನಾ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

    ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ ಸಮಾರೋಪ ಸಮಾರಂಭ ಸದಾಶಿವ ನಗರದ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ  ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು, ಶ್ರೀರಾಮ ಮಂದಿರ ನಿರ್ಮಾಣ ರಾಜ್ಯ ಸಮಿತಿಯ ಸದಸ್ಯರು ಒಳಗೊಂಡಂತೆ ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ದೇಶದಲ್ಲಿ 5.5 ಲಕ್ಷ ಗ್ರಾಮ, ನಗರ ಪ್ರದೇಶಗಳಲ್ಲಿ 12 ಕೋಟಿ ಮನೆಗಳನ್ನು ತಲುಪಲಾಗಿದೆ. ಶೇಕಡಾ ನೂರು ಕ್ರೈಸ್ತರಿರುವ ಕೇಂದ್ರಾಡಳಿತ ಪ್ರದೇಶಗಳೂ ಸೇರಿ ಎಲ್ಲರೂ ಶ್ರೀರಾಮನ ಕಾರ್ಯಕ್ಕೆ ಸ್ಪಂದನೆ ನೀಡಿದ್ದಾರೆ‌ ಎಂದು ನಾ. ತಿಪ್ಪೇಸ್ವಾಮಿ ಹೇಳಿದರು.

    ಪೇಜಾವರ ಶ್ರೀಗಳು ಮಾತನಾಡಿ, ರಾಮ ಮಂದಿರ ನಿರ್ಮಾಣ ದೊಡ್ಡ ಕೆಲಸವಲ್ಲ ಅದನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಕೆಲಸ ಎಂದರು. ಮತ್ತು ಮಕ್ಕಳಿಗೆ ಸಂಸ್ಕೃತಿ,ಸಂಸ್ಕಾರ ಕೊಟ್ಟರೆ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ ಮತ್ತು ಯಾವುದೇ ಮತೀಯ ಶಕ್ತಿಗಳು ತೊಂದರೆ ಕೊಡಲು ಸಾಧ್ಯವಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಬಂದ ಪ್ರತಿಕ್ರಿಯೆಯಿಂದ ರಾಮ ಮಂದಿರದ ಮತ್ತು ರಾಮರಾಜ್ಯದ ಬಗ್ಗೆ ಜನಗಳಿಗಿರುವ ಮನೋಭಿಲಾಷೆ ತಿಳಿಸುತ್ತದೆ ಎಂದರು.

    ದೇಶದ ಜನರಲ್ಲಿ ಗೊಂದಲ ಉಂಟು ಮಾಡುತ್ತಿರುವ ಕಮ್ಯೂನಿಸ್ಟರ ಮಾತು ಕಸ ಎಂದು ಜನರೇ ನಿರೂಪಿಸಿದ್ದಾರೆ ಎಂದು ಕನ್ಹೇರಿಯ ಅದೃಷ ಕಾಡಸಿದ್ದೇಶ್ಚರ ಸ್ವಾಮೀಜಿ ಹೇಳಿದರು.  ತಮಿಳುನಾಡಿನಲ್ಲಿ ರಾಮನ ವಿರೋಧಿಗಳಿದ್ದಾರೆ ಎಂಬ ಭಾವನೆ ಮೂಡಿಸಿದ್ದರು. ಆದರೆ ಅಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ನೀಡಿದರು. ಒಂದು ಮನೆಯ ಸಂಗ್ರಹ ಮುಗಿಸುವ ವೇಳೆಗೆ ಇನ್ನೊಂದು ಮನೆಯಲ್ಲಿ ದೇಣಿಗೆ ನೀಡಲು ಸಿದ್ಧರಾಗಿರುತ್ತಿದ್ದರು. ಚಿಲ್ಲರೆ ಭಾಷಣ ಮಾಡಿಕೊಂಡು ಸಮಾಜ ಒಡೆಯುವವರಿಗೆ ಜನರು ಉತ್ತರ ನೀಡಿದ್ದಾರೆ. ಮುಂದೆ ಕಾಶಿ ಹಾಗೂ ಮಥುರಾದಲ್ಲಿ ಮಂದಿರ ಕಟ್ಟುವ ಕಾರ್ಯ ಸದ್ಯದಲ್ಲೇ ಲಭಿಸಲಿದೆ ಎಂದು ಈ ವೇಳೆ ಹೇಳಿದರು.

    ಕಾರ್ಯಕ್ರಮದಲ್ಲಿ ಇಸ್ಕಾನ್ ಅಧ್ಯಕ್ಷರಾದ ಮಧುಪಂಡಿತ್ ದಾಸ್ ಜಿ, ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ವಿಜಯನಗರ ಮಠದ ಸೋಮನಾಥ ಸ್ವಾಮೀಜಿ ,ಕನ್ಹೆರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ, ಕವಲಗುಡ್ಡ ಅಮಾರೇಶ್ವರ ಮಹಾರಾಜರು, ಸೇವಾಲಾಲ್ ಗುರುಪೀಠದ ಶ್ರೀಬಳಿರಾಮ್ ಮಹರಾಜ್ ಪಾಲ್ಗೊಂಡು ಆಶೀರ್ವಚನ ನೀಡಿದರು.

    ಕಾರ್ಯಕ್ರಮದಲ್ಲಿ ರಾಮಮಂದಿರ ಮಾದರಿಯನ್ನು ಪ್ರದರ್ಶಿಸಲಾಯಿತು. ಅಭಿಯಾನಕ್ಕೆ ಸಹಕಾರ ನೀಡಿದ ಎಲ್ಲಾ ಮಾಧ್ಯಮ ಮಿತ್ರರಿಗೆ ತಿಪ್ಪೇಸ್ವಾಮಿ ಅವರು ಅಭಿನಂದನೆಗಳನ್ನು ತಿಳಿಸಿದರು.

  • ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ 25,000 ಮಿಲಿಯನ್ ರೂ. ದೇಣಿಗೆ ಸಂಗ್ರಹ: ವಿಎಚ್‍ಪಿ

    ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ 25,000 ಮಿಲಿಯನ್ ರೂ. ದೇಣಿಗೆ ಸಂಗ್ರಹ: ವಿಎಚ್‍ಪಿ

    ನವದೆಹಲಿ: ಪ್ರಸ್ತುತ ಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಆದರೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವೆಬ್‍ಸೈಟ್ ನಲ್ಲಿ ಆನ್‍ಲೈನ್ ಮೂಲಕ ಇನ್ನೂ ಹಣ ನೀಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

    ರಾಮ ಮಂದಿರ ನಿರ್ಮಾಣಕ್ಕೆ ಈ ವರೆಗೆ ಸಂಗ್ರಹವಾಗಿರುವ ಹಣ ಎಷ್ಟು ಎಂದು ಹಲವರು ಪ್ರಶ್ನೆ ಕೇಳುತ್ತಲೇ ಇದ್ದರು. ಇದಕ್ಕೆ ಇದೀಗ ಉತ್ತರ ಸಿಕ್ಕಿದ್ದು, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ದೇಣಿಗೆ ಸಂಗ್ರಹವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂದಿರದ ಮುಂದಿನ ಜಾಗವನ್ನು ಪಡೆಯುವ ಕುರಿತು ಮಾತುಕತೆ ನಡೆಯುತ್ತಿದ್ದು, ಇನ್ನೂ ನಿರ್ಧಾರವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಇನ್ನೂ ಕೇವಲ 3 ವರ್ಷದಲ್ಲಿ ಮಂದಿರ ನಿರ್ಮಾಣವಾಗಲಿದೆ. ಮಾರ್ಚ್ 4ರ ವರೆಗೆ ಬ್ಯಾಂಕ್ ರಿಸಿಪ್ಟ್ ಪ್ರಕಾರ 25,000 ಮಿಲಿಯನ್ ರೂ.(2,500 ಕೋಟಿ ರೂ.) ಹಣ ಸಂಗ್ರಹವಾಗಿದೆ. ಇತ್ತೀಚೆಗೆ ಟ್ರಸ್ಟ್ ಹೆಚ್ಚುವರಿ 7,285 ಚ.ಅಡಿಯಷ್ಟು ಭೂಮಿಯನ್ನು ಖರೀದಿಸಿದ್ದು, ಉದ್ದೇಶಿತ ಸಂಕೀರ್ಣದ ಪಕ್ಕದಲ್ಲಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್ ನೀಡಿದ 70 ಎಕರೆ ಪ್ರದೇಶದ ಪಕ್ಕದಲ್ಲೇ ಈ ಹೊಸ ಭೂಮಿ ಇದೆ ಎಂದು ಅವರು ತಿಳಿಸಿದರು.

    ವರದಿಗಳ ಪ್ರಕಾರ ಈ ಜಮೀನು ಸ್ಥಳೀಯ ನಿವಾಸಿಗಳಿಗೆ ಸೇರಿದ್ದು, ಅವರಿಗೆ ಟ್ರಸ್ಟ್‍ನಿಂದ 1 ಕೋಟಿ ರೂ.ನೀಡಲಾಗಿದೆ. ಉದ್ದೇಶಿತ ರಾಮ ಮಂದಿರದ 70 ಎಕರೆ ಜಾಗಕ್ಕಿಂತ ಹೆಚ್ಚುವರಿಯಾಗಿ ಜಮೀನು ಪಡೆದು 107 ಎಕರೆಗೆ ವಿಸ್ತರಿಸಲು ಟ್ರಸ್ಟ್ ಯೋಜನೆ ರೂಪಿಸಿದೆ. ಪ್ರಮುಖ ಮಂದಿರವೂ 5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದ್ದು, ಉಳಿದ 100 ಎಕರಿಗೂ ಹೆಚ್ಚು ಜಾಗವನ್ನು ವಸ್ತುಸಂಗ್ರಹಾಲಯ, ಗ್ರಂಥಾಲಯ, ಯಾಗಶಾಲೆ ಹಾಗೂ ರಾಮನ ಜೀವನದ ವಿವಿಧ ಪ್ರಮುಖ ಘಟನೆಗಳ ಫೋಟೋ ಗ್ಯಾಲರಿ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಬಳಸಿಕೊಳ್ಳಲು ಚಿಂತಿಸಲಾಗಿದೆ.

  • ರಾಜಕೀಯ ನಾಯಕರಿಗಿಂತ ಚಂಬಲ್ ಡಕಾಯಿತರು ವಾಸಿ- ಪಲಿಮಾರು ಶ್ರೀ

    ರಾಜಕೀಯ ನಾಯಕರಿಗಿಂತ ಚಂಬಲ್ ಡಕಾಯಿತರು ವಾಸಿ- ಪಲಿಮಾರು ಶ್ರೀ

    ಉಡುಪಿ: ಅಯೋಧ್ಯೆ ರಾಮ ಮಂದಿರ ವಿವಾದಿತ ಕ್ಷೇತ್ರ ಎಂದಿರುವ ಮಾಜಿ ಸಿಎಂ ಸಿದ್ಧರಾಮಯ್ಯಗೆ ಉಡುಪಿಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ತಿರುಗೇಟು ನೀಡಿದ್ದಾರೆ. ರಾಜಕೀಯ ನಾಯಕರಿಗಿಂತ ಚಂಬಲ್ ಡಕಾಯಿತರು ವಾಸಿ ಎಂದು ಹೇಳಿದ್ದಾರೆ.

    ಶ್ರೀರಾಮಜನ್ಮಭೂಮಿ ಉತ್ಖನನ ಮಾಡಿ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದ ಕೆ.ಕೆ ಡಾ. ಮೊಹಮ್ಮದ್ ಅವರಿಗೆ ಡಾ. ಪಾದೂರು ಗುರುರಾಜ್ ಭಟ್ ನೆನಪಿನ ಪ್ರಶಸ್ತಿ ನೀಡಿ ಸನ್ಮಾನ ಮಾಡಿ ಅವರು ಮಾತನಾಡಿದರು.

    ನ್ಯಾಯಾಲಯದ ಆದೇಶವನ್ನು ಒಪ್ಪುತ್ತಿಲ್ಲ ಎಂದರೆ ನಾಚಿಕೆಗೇಡು. ರಾಮಮಂದಿರಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳನ್ನು ಭೂಗರ್ಭದಿಂದ ಪಡೆಯಲಾಗಿದೆ. ಕೆ ಕೆ ಮಹಮ್ಮದ್ ಅವರ ನೇತೃತ್ವದಲ್ಲಿ ಉತ್ಖನನ ನಡೆದು ಸಾಕ್ಷಿಗಳು ಕಣ್ಣ ಮುಂದಿವೆ. ಕೆಲ ಜನನಾಯಕರು ಮಂದಿರಕ್ಕೆ ಹತ್ತು ರೂಪಾಯಿ ಕೊಡಬೇಕಿದ್ದರೆ, ಭೂಮಿ ವಿವಾದಗ್ರಸ್ತ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರಾಮಮಂದಿರ ಇದ್ದ ಬಗ್ಗೆ ಎಲ್ಲಾ ಪುರಾವೆಗಳನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಐವರು ನ್ಯಾಯಾಧೀಶರು ಸೇರಿ ತೀರ್ಪು ನೀಡಿದ್ದಾರೆ. ಅದರಲ್ಲೂ ಓರ್ವ ಮುಸ್ಲಿಂ ಸಮಾಜದ ನ್ಯಾಯಾಧೀಶರೇ ಇದ್ದರು. ಆದರೂ ಓರ್ವ ವಕೀಲರಾಗಿರುವ ಜನನಾಯಕ ಈ ತೀರ್ಪನ್ನು ಒಪ್ಪುತ್ತಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಚಂಬಲ್ ಕಣಿವೆಯ ಡಕಾಯತರಿಗಿಂತಲೂ ಇಂತಹಾ ಜನನಾಯಕರು ಅಪಾಯಕಾರಿ ಎಂದಿದ್ದಾರೆ.