Tag: ರಾಮ ಮಂದಿರ

  • ಜ.22 ರಂದು ಅಯೋಧ್ಯೆಗೆ ಸೋನಿಯಾ ಗಾಂಧಿ ಹೋಗ್ತಾರಾ? – ಉತ್ತರ ನೀಡಿದ ಜೈರಾಂ ರಮೇಶ್‌

    ಜ.22 ರಂದು ಅಯೋಧ್ಯೆಗೆ ಸೋನಿಯಾ ಗಾಂಧಿ ಹೋಗ್ತಾರಾ? – ಉತ್ತರ ನೀಡಿದ ಜೈರಾಂ ರಮೇಶ್‌

    ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅಯೋಧ್ಯೆ ರಾಮ ಮಂದಿರ (Ayodhya Ram Mandir) ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೋ ಇಲ್ಲವೋ ಎನ್ನುವುದನ್ನು ಸರಿಯಾದ ಸಮಯದಲ್ಲಿ ಬಹಿರಂಗಪಡಿಸಲಾಗುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ (Jairam Ramesh) ಹೇಳಿದ್ದಾರೆ.

    ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ಬಂದಿದೆ ಎಂದು ಅವರು ತಿಳಿಸಿದರು.  ಇದನ್ನೂ ಓದಿ: ಆ ’84 ಸೆಕೆಂಡ್‌’ ನಡುವೆಯೇ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಯಾಕೆ?

    ಗುರುವಾರ, ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಅಯೋಧ್ಯೆಯಲ್ಲಿ ಭಗವಾನ್ ರಾಮನ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ವೈಯಕ್ತಿಕ ಆಯ್ಕೆಯಾಗಿದೆ ಎಂದು ಹೇಳಿದ್ದರು.

    ಅಯೋಧ್ಯೆಯಲ್ಲಿ ಜನವರಿ 16 ರಿಂದ ಧಾರ್ಮಿಕ ಕಾರ್ಯಗಳು ಆರಂಭವಾಗಲಿದ್ದು ಜ.22 ರಂದು ರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ. ರಾಮ ಮಂದಿರ ಟ್ರಸ್ಟ್‌ ಅಥವಾ ಸರ್ಕಾರ ಯಾರಿಗೆ ಅಧಿಕೃತ ಆಹ್ವಾನ ನೀಡಿದೆಯೋ ಅವರಿಗೆ ಮಾತ್ರ ಜ.22ರಂದು ಅಯೋಧ್ಯೆಗೆ ಅನುಮತಿ ನೀಡಲಾಗುತ್ತದೆ. ಇದನ್ನೂ ಓದಿ: ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?

    ಪ್ರಧಾನಿ ನರೇಂದ್ರ ಮೋದಿ (PM Narendra Modi), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಸೇರಿದಂತೆ ಒಟ್ಟು 6 ಸಾವಿರ ಗಣ್ಯರು ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

     

  • ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತ 50,000 ಕೋಟಿ ರೂ. ವಹಿವಾಟು ಸಾಧ್ಯತೆ

    ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತ 50,000 ಕೋಟಿ ರೂ. ವಹಿವಾಟು ಸಾಧ್ಯತೆ

    ಅಯೋಧ್ಯೆ (ರಾಮಮಂದಿರ): ರಾಮ ಜನ್ಮಭೂಮಿ ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಜನವರಿ ತಿಂಗಳು ಶ್ರೀರಾಮ ಭಕ್ತರಿಗಷ್ಟೇ ಅಲ್ಲ, ವ್ಯಾಪಾರಸ್ಥರು ಹಾಗೂ ಉದ್ಯಮಿಗಳಿಗೂ ಹಬ್ಬದ ಸಂದರ್ಭ. ರಾಮಮಂದಿರ (Ram Mandir) ಉದ್ಘಾಟನೆಯೊಂದಿಗೆ ಜನವರಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯಲಿದೆ.

    ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿಯಲ್ಲಿ 50,000 ಕೋಟಿ ರೂ. ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಅಂದಾಜಿಸಿದೆ. ರಾಮಮಂದಿರ ಮತ್ತು ಭಗವಾನ್‌ ರಾಮನಿಗೆ ಸಂಬಂಧಿಸಿದ ಉತ್ಪನ್ನಗಳ ಖರೀದಿ ಹೆಚ್ಚಾಗಲಿದೆ. ಅದಕ್ಕಾಗಿ ಉದ್ಯಮಿಗಳು ಸಹ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ ಎಂದು CAIT ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಗೆ ಮೋದಿ ಭೇಟಿ- ಶನಿವಾರದ ಕಾರ್ಯಕ್ರಮಗಳೇನು?

    ಈ ಹೆಚ್ಚುವರಿ ವ್ಯಾಪಾರದ ಬೇಡಿಕೆಯನ್ನು ಪೂರೈಸಲು ಎಲ್ಲಾ ರಾಜ್ಯಗಳ ವ್ಯಾಪಾರಿಗಳು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ದೊಡ್ಡ ಪ್ರಮಾಣದ ವಿಶೇಷ ಬಟ್ಟೆಯ ಹೂಮಾಲೆಗಳು, ಲಾಕೆಟ್‌ಗಳು, ಕೀ ಚೈನ್‌ಗಳು, ರಾಮ್ ದರ್ಬಾರ್‌ನ ಚಿತ್ರಗಳು, ರಾಮ ಮಂದಿರದ ಮಾದರಿಗಳು, ಭಗವಾನ್ ರಾಮಧ್ವಜ, ಭಗವಾನ್ ರಾಮನ ಅಂಗವಸ್ತ್ರ, ಭಗವಾನ್ ರಾಮನ ಚಿತ್ರವಿರುವ ಫೋಟೋಗಳು.. ಹೀಗೆ ಬಗೆಬಗೆಯ ವಸ್ತುಗಳನ್ನು ಮಾರಾಟ ಮಾಡಲಾಗುವುದು.

    ವಿಶೇಷವಾಗಿ ರಾಮಮಂದಿರದ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಮಾದರಿಗಳನ್ನು ಹಾರ್ಡ್‌ಬೋರ್ಡ್, ಪೈನ್‌ವುಡ್, ಮರ ಇತ್ಯಾದಿಗಳಿಂದ ವಿವಿಧ ಗಾತ್ರಗಳಲ್ಲಿ ತಯಾರಿಸಲಾಗುತ್ತಿದೆ. ಗಮನಾರ್ಹ ವಿಷಯವೆಂದರೆ, ಇವುಗಳನ್ನು ತಯಾರಿಸುವಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉದ್ಯೋಗವನ್ನು ಪಡೆಯುತ್ತಿದ್ದಾರೆ. ಸ್ಥಳೀಯ ಕುಶಲಕರ್ಮಿಗಳು, ಕಲಾವಿದರು ಮತ್ತು ಕೆಲಸಗಾರರಿಗೆ ಎಲ್ಲಾ ರಾಜ್ಯಗಳಲ್ಲೂ ಉತ್ತಮ ವ್ಯಾಪಾರ ಆಗಲಿದೆ ಎಂದು ಪ್ರವೀಣ್‌ ತಿಳಿಸಿದ್ದಾರೆ. ಇದನ್ನೂ ಓದಿ: ಆ ’84 ಸೆಕೆಂಡ್‌’ ನಡುವೆಯೇ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಯಾಕೆ?

    ಮಣ್ಣಿನ ದೀಪ, ರಂಗೋಲಿ ಬಣ್ಣ, ಅಲಂಕಾರಕ್ಕಾಗಿ ಹೂವು ಮತ್ತು ಮಾರುಕಟ್ಟೆ-ಮನೆಗಳನ್ನು ಬೆಳಗಿಸಲು ವಿದ್ಯುತ್ ಅಲಂಕಾರಿಕ ವಸ್ತುಗಳು ಬೃಹತ್‌ ಪ್ರಮಾಣದ ವ್ಯಾಪಾರ ಪಡೆಯಲು ಸಿದ್ಧವಾಗಿವೆ. ಹೋರ್ಡಿಂಗ್‌, ಪೋಸ್ಟರ್‌, ಬ್ಯಾನರ್‌, ಕರಪತ್ರ, ಸಾಹಿತ್ಯ ಕೃತಿಗಳು, ಸ್ಟಿಕ್ಕರ್‌ಗಳು ಸೇರಿದಂತೆ ದೇಶಾದ್ಯಂತ ಪ್ರಚಾರ ಸಾಮಗ್ರಿಗಳು ಸಹ ಗಣನೀಯ ವ್ಯಾಪಾರ ವಹಿವಾಟಿಗೆ ಸಜ್ಜುಗೊಂಡಿವೆ. ಸೇವಾ ವಲಯವು ದೊಡ್ಡ ವ್ಯಾಪಾರ ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಸ್ಥಿತಿಯೊಂದಿಗೆ ಜ.22 ರಂದು ರಾಮಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭದಲ್ಲಿ 6,000 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?

  • ಅಯೋಧ್ಯೆ ಹೆಸರಿನಲ್ಲಿ ಒಂದು ಧರ್ಮಕ್ಕೆ ಮಿತಿಮೀರಿದ ಪ್ರಾಧಾನ್ಯತೆ ನೀಡಲಾಗುತ್ತಿದೆ: ಸ್ಯಾಮ್‌ ಪಿತ್ರೋಡಾ ಕಿಡಿ

    ಅಯೋಧ್ಯೆ ಹೆಸರಿನಲ್ಲಿ ಒಂದು ಧರ್ಮಕ್ಕೆ ಮಿತಿಮೀರಿದ ಪ್ರಾಧಾನ್ಯತೆ ನೀಡಲಾಗುತ್ತಿದೆ: ಸ್ಯಾಮ್‌ ಪಿತ್ರೋಡಾ ಕಿಡಿ

    ನವದೆಹಲಿ: ರಾಮಮಂದಿರ (Ram Mandir) ಲೋಕಾರ್ಪಣೆ ವಿಚಾರದಲ್ಲಿ ನಿರೀಕ್ಷೆಯಂತೆಯೇ ರಾಜಕೀಯ ಜೋರಾಗಿದೆ. ಅಯೋಧ್ಯೆ (Ayodhya) ಹೆಸರಿನಲ್ಲಿ ಒಂದು ಧರ್ಮಕ್ಕೆ ಮಿತಿಮೀರಿದ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ (Sonia Gandhi) ಕುಟುಂಬದ ಆಪ್ತ ಸ್ಯಾಮ್ ಪಿತ್ರೊಡಾ (Sam Pitroda) ಹೇಳಿದ್ದಾರೆ.

    ಪ್ರಧಾನಿ ಮೋದಿ ಬರೀ ಆಲಯಕ್ಕೆ ಪೂರ್ಣಪ್ರಮಾಣದಲ್ಲಿ ಸಮಯ ಕೊಟ್ಟಿದ್ದಾರೆ. ರಾಮಮಂದಿರದ ಸುತ್ತವೇ ದೇಶ ರಾಜಕೀಯ ಪ್ರದಕ್ಷಿಣೆ ಹಾಕಲಾರಂಭಿಸಿದೆ. ಪ್ರತಿಯೊಬ್ಬರು ಆಲಯದ ಬಗ್ಗೆ, ರಾಮನ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ನೋಡಿ ನನಗೆ ನೋವಾಗುತ್ತಿದ್ದು, ಹೀಗಾದರೆ ಆಧುನಿಕ ಭಾರತದ ನಿರ್ಮಾಣ ಹೇಗೆ ಸಾಧ್ಯ ಪಿತ್ರೋಡಾ ಪ್ರಶ್ನಿಸಿದ್ದಾರೆ.

     

    ಧರ್ಮ ಎನ್ನುವುದು ವೈಯಕ್ತಿಕ ವಿಚಾರ. ಆದರೆ ಇದನ್ನು ರಾಷ್ಟ್ರೀಯ ವಿಚಾರವಾಗಿಸಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ?

    ತಿರುವನಂತಪುರದ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ರಾಮಮಂದಿರ ವಿಚಾರದಲ್ಲಿ ಧರ್ಮ ರಾಜಕೀಯ ನಡೆಯುತ್ತಿದೆ. ರಾಜಕೀಯಕ್ಕಾಗಿ ಧರ್ಮದ ದುರ್ಬಳಕೆ ಸಲ್ಲದು ಎಂದಿದ್ದಾರೆ.

     

  • ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

    ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

    – ಡಿ. 30 ರಂದು ಪ್ರಧಾನಿಯಿಂದ ಉದ್ಘಾಟನೆ

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ವಿಗ್ರಹ ಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನಗಳಿರುವ ಹೊತ್ತಿನಲ್ಲಿ ಉತ್ತರಪ್ರದೇಶದ (Uttar Pradesh) ಸ್ವರೂಪ ಸಂಪೂರ್ಣ ಬದಲಾಗುತ್ತಿದೆ. ರಾಜ್ಯದ ಪ್ರಮುಖ ಸ್ಥಳಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಇದೀಗ ಅಯೋಧ್ಯೆಯ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಜಂಕ್ಷನ್ (Ayodhya Dham) ಎಂದು ಮರುನಾಮಕರಣ ಮಾಡಲಾಗಿದೆ.

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸದ ಲುಲ್ಲು ಸಿಂಗ್, ಇದೇ ತಿಂಗಳ 30ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) `ಅಯೋಧ್ಯಾ ಧಾಮ್’ ರೈಲ್ವೇ ನಿಲ್ದಾಣ ಉದ್ಘಾಟಿಸಲಿದ್ದಾರೆ. ರೈಲ್ವೇ ನಿಲ್ದಾಣದ ಎಸ್ಕಲೇಟರ್‌ಗಳು ಮತ್ತು ಗೋಡೆಗಳ ಮೇಲೆ ಭಗವಾನ್ ರಾಮನ ಭಿತ್ತಿಚಿತ್ರಗಳನ್ನು ಚಿತ್ರಿಸಲಾಗಿದೆ. ರೈಲು ನಿಲ್ದಾಣದಲ್ಲಿ ಲಿಫ್ಟ್‌ಗಳು, ಪ್ರವಾಸಿ ಮಾಹಿತಿ ಕೇಂದ್ರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗಿದೆ. ಜನರ ನಿರೀಕ್ಷೆಯಂತೆ ಈ ಹೆಸರನ್ನು ಬದಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?

    ನಿಲ್ದಾಣದ ಮುಖ್ಯ ಕಟ್ಟಡವು ರಾಮ ಮಂದಿರವನ್ನು ಹೋಲುತ್ತದೆ. ಕಟ್ಟಡದ ನಿರ್ಮಾಣಕ್ಕೆ ರಾಮ ಮಂದಿರದ ನಿರ್ಮಾಣದಲ್ಲಿ ಬಳಸಿದ ರಾಜಸ್ಥಾನದಿಂದ ತಂದ ಗುಲಾಬಿ ಬನ್ಸಿ ಪಹರ್ಪುರ್ ಕಲ್ಲುಗಳನ್ನು ಬಳಸಲಾಗಿದೆ. 10,000 ಚದರ ಮೀಟರ್‌ಗಳಷ್ಟು ವ್ಯಾಪಿಸಿರುವ ಈ ನಿಲ್ದಾಣವು ಮೂರು ಪ್ಲಾಟ್‍ಫಾರ್ಮ್‍ಗಳನ್ನು ಒಳಗೊಂಡಿದೆ. 240 ಕೋಟಿ ರೂ. ಬಜೆಟ್‍ನಲ್ಲಿ ಈ ರೈಲ್ವೇ ನಿಲ್ದಾಣ ಪೂರ್ಣಗೊಂಡಿದೆ.

    ಕೇಂದ್ರ ಸರ್ಕಾರದ ಒಂದು ಅಂಗವಾದ ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ಸ್ ಸರ್ವಿಸ್ ಇದರ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದೆ. ಮುಂಬರುವ ಎರಡನೇ ಹಂತದ ನಿರ್ಮಾಣ ಕಾಮಗಾರಿಗೆ 480 ಕೋಟಿ ರೂ. ಬಜೆಟ್ ಮೀಸಲಿಡಲಾಗಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ಒಳಗಿನ ಚಿತ್ರಣ ಹೇಗಿದೆ? ಇಲ್ಲಿದೆ ಕೆಲವು ಫೋಟೋಸ್

  • ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಸಿಪಿಎಂ

    ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಸಿಪಿಎಂ

    ನವದೆಹಲಿ: ರಾಮಮಂದಿರ ಲೋಕಾರ್ಪಣೆ (Ram Mandir Inauguration) ಕಾರ್ಯಕ್ರಮವನ್ನು ಬಹಿಷ್ಕರಿಸಲು ಸಿಪಿಐ-ಎಂ (CPI-M) ತೀರ್ಮಾನಿಸಿದೆ.

    ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ (Sitaram Yechury) ಪ್ರತಿಕ್ರಿಯಿಸಿ, ಧರ್ಮವು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆಯ ನಿರ್ದಿಷ್ಟ ಸ್ವರೂಪವನ್ನು ಆಯ್ಕೆ ಮಾಡುವ ಹಕ್ಕನ್ನು ನಾವು ಗೌರವಿಸುತ್ತೇವೆ ಮತ್ತು ರಕ್ಷಿಸುತ್ತೇವೆ. ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರತಿಪಾದಿಸಿ ಅಥವಾ ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಬಹುದು. ಆದರೆ ಉದ್ಘಾಟನಾ ಸಮಾರಂಭ ರಾಜ್ಯ ಪ್ರಾಯೋಜಿತ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದ್ದಾರೆ.

     

    ಭಾರತೀಯ ಸಂವಿಧಾನ (Constitution) ಮತ್ತು ಸುಪ್ರೀಂ ಕೋರ್ಟ್‌ಗೆ (Supreme Court) ಸಂಬಂಧಿಸಿದಂತೆ, ರಾಜ್ಯ ಈ ರೀತಿಯ ಕಾರ್ಯಕ್ರಮ ಮಾಡಬಾರದು. ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಇತರರು ಸಾಂವಿಧಾನಿಕ ಸ್ಥಾನಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Ayodhya Ram Mandir – ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರ ಕಂಪ್ಲೀಟ್‌ ಲಿಸ್ಟ್‌

    ಬಿಜೆಪಿ (BJP) ಧಾರ್ಮಿಕ ರಾಜಕೀಯದಲ್ಲಿ ತೊಡಗಿದೆ. ಇದು ಸರಿಯಲ್ಲ. ಅದಕ್ಕೆ ನಾವು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ನಮ್ಮ ಪಕ್ಷ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತದೆ ಎಂದು ಮಾಜಿ ರಾಜ್ಯಸಭಾ ಸದಸ್ಯೆ, ಬೃಂದಾ ಕಾರಟ್‌ (Brinda Karat) ಸ್ಪಷ್ಟಪಡಿಸಿದ್ದಾರೆ.

     

  • Ayodhya Shri Ram Airport: ಜ.6 ರಿಂದ ಬೆಂಗ್ಳೂರು ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಶುರು

    Ayodhya Shri Ram Airport: ಜ.6 ರಿಂದ ಬೆಂಗ್ಳೂರು ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಶುರು

    – ಮೊದಲ ಹಂತದಲ್ಲಿ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ

    ಲಕ್ನೋ (ಅಯೋಧ್ಯೆ): ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Maryada Purushottam Shri Ram International Airport) ಡಿಸೆಂಬರ್‌ 30 ರಂದು ಉದ್ಘಾಟನೆಯಾಗಲಿದ್ದು, ಜನವರಿ 6ರಿಂದ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಸಂಪರ್ಕ ಕಲ್ಪಿಸಲಾಗಿದೆ.

    ಡಿಸೆಂಬರ್‌ 30 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಅಂದು ದೆಹಲಿಗೆ ಏರ್‌ ಇಂಡಿಯಾದ (Air India) ಮೊದಲ ವಿಮಾನ ಹಾರಾಟ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಯೋಧ್ಯೆ ಏರ್ಪೋರ್ಟ್‌ನಲ್ಲಿ ಡಿಸೆಂಬರ್‌ 22ರಂದು ಭಾರತೀಯ ವಾಯುಪಡೆಯ ಏರ್‌ಬಸ್‌ A320 ಅನ್ನು ಇತ್ತೀಚೆಗೆ ಯಶಸ್ವಿಯಾಗಿ ಲ್ಯಾಂಡಿಂಗ್‌ ಮಾಡಲಾಗಿತ್ತು.

    ಜನವರಿ 6 ರಿಂದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಆ ನಂತರ ಇಂಡಿಗೋ ಏರ್‌ಲೈನ್ಸ್ ಕಂಪನಿ ದೆಹಲಿ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಗೋವಾದಂತಹ ಪ್ರಮುಖ ನಗರಗಳಿಗೆ ವಿಮಾನ ಒದಗಿಸಲಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಆಹ್ವಾನ- ಧನ್ಯವಾದವೆಂದ ಕಾಂಗ್ರೆಸ್

    ಈ ಕುರಿತು ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಅಯೋಧ್ಯೆಯ ವಿಮಾನ ನಿಲ್ದಾಣವು ನಗರದ ಐತಿಹಾಸಿಕ ಮಹತ್ವ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು. ದೇಶ-ವಿದೇಶಿ ಗಣ್ಯರು ಅಥವಾ ಪ್ರವಾಸಿಗರು ಭೇಟಿ ನೀಡಿದ್ರೆ, ಅವರಿಗೆ ನಗರದ ಐತಿಹಾಸಿಕ ಮಹತ್ವ ಕಣ್ಣಿಗೆ ರಾಚಬೇಕು. ಆದ್ದರಿಂದ ಅಯೋಧ್ಯೆ ಸಂಸ್ಕೃತಿಯನ್ನು ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರ ಕಣ್ಣಿಗೆ ಕಟ್ಟಿಕೊಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    6,500 ಚದರ ಅಡಿ ವಿಸ್ತೀರ್ಣ ಹೊಂದಿರುವ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗೆ 2 ರಿಂದ 3 ವಿಮಾನಗಳನ್ನ ಲ್ಯಾಂಡಿಂಗ್‌ ಮಾಡಬಹುದು. ಸದ್ಯ ಇರುವ 2,200 ಮೀಟರ್‌ ಉದ್ದದ ರನ್‌ವೇಯನ್ನು 3,700 ಮೀಟರ್‌ಗೆ ವಿಸ್ತರಿಸಲಾಗುತ್ತದೆ. ಇದರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ಅಯೋಧ್ಯೆಯಲ್ಲಿ ಲ್ಯಾಂಡಿಂಗ್‌ ಮಾಡಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:  ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ

    ಅಯೋಧ್ಯೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರವು 250 ಕೋಟಿ ರೂಪಾಯಿ ಮಂಜೂರು ಮಾಡಿತ್ತು, ಉತ್ತರ ಪ್ರದೇಶ ಸರ್ಕಾರ ಹೆಚ್ಚುವರಿ ಭೂಮಿಯನ್ನು ಖರೀದಿಸಲು 321 ಕೋಟಿ ರೂಪಾಯಿಗೆ ಅನುಮೋದನೆ ನೀಡಿತ್ತು. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 555.66 ಎಕರೆ ಹೆಚ್ಚುವರಿ ಭೂಮಿಯನ್ನು ಖರೀದಿಸಲು ಒಟ್ಟು 1,001.77 ಕೋಟಿ ರೂ. ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಬಜೆಟ್‍ನಲ್ಲಿ 101 ಕೋಟಿ ರೂ. ಮೀಸಲಿಡಲಾಗಿತ್ತು. ನವೆಂಬರ್ 2018 ರಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎ320 ಮತ್ತು ಬಿ737 ನಂತಹ ದೊಡ್ಡ ವಿಮಾನಗಳಿಗಾಗಿ ಅಯೋಧ್ಯೆಯಲ್ಲಿ ಏರ್‌ಸ್ಟ್ರಿಪ್‌ನ ಅಭಿವೃದ್ಧಿ ಮತ್ತು ಸೂಕ್ತವಾದ ರನ್‍ವೇ ಮತ್ತು ಟರ್ಮಿನಲ್ ಕಟ್ಟಡದ ನಿರ್ಮಾಣವನ್ನು ಘೋಷಿಸಿದ್ದರು.

  • ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಗದಗದ ಶಿಲ್ಪಿಗೆ ಆಹ್ವಾನ

    ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಗದಗದ ಶಿಲ್ಪಿಗೆ ಆಹ್ವಾನ

    ಗದಗ: ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ನಿರ್ಮಾಣ ಕಾರ್ಯಕ್ಕೆ ಗದಗ (Gadag) ಜಿಲ್ಲೆಯ ಶಿಲ್ಪಿಯೋರ್ವನಿಗೆ (Sculptor) ಆಹ್ವಾನ ಬಂದಿದೆ.

    ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಿ ನಾಗಮೂರ್ತಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಬರುವಂತೆ ಆಮಂತ್ರಣ ಬಂದಿದೆ. ನಾಗಮೂರ್ತಿ ಮೂಲತಃ ಕೊಪ್ಪಳ ಜಿಲ್ಲೆ ಕಾತರಕಿ ಗ್ರಾಮದ ನಿವಾಸಿ. ಮುಂಡರಗಿ ಪಟ್ಟಣದಲ್ಲಿ ಶಿಲ್ಪ ಕಲೆಯ ಶಾಪ್ ನಡೆಸುತ್ತಿದ್ದಾರೆ.

    ಇವರು ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆಯಲ್ಲಿ ದೊರೆಯುವ (ಕೃಷ್ಣ ಶಿಲೆ) ಕರಿಕಲ್ಲುಗಳನ್ನು ಬಳಸಿ ಮೂರ್ತಿ ತಯಾರಿಸುತ್ತಿದ್ದರು. ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಗಂಧ ಕಲಾ ಸಂಕಿರಣ ಕಲಾ ವಿದ್ಯಾಲಯ ವ್ಯಾಸಂಗ ಮಾಡಿದ್ದಾರೆ. ಐದಾರು ವರ್ಷಗಳಿಂದ ಶಿಲ್ಪ ಕಲೆಯ ಬಗ್ಗೆ ಮುಂಡರಗಿ ವೆಂಕಟೇಶ್ ಸುತಾರ ಎಂಬವರ ಹತ್ತಿರ ತರಬೇತಿ ಪಡೆದುಕೊಂಡು ಈಗ ತಾವೇ ಶಾಪ್ ಆರಂಭಿಸಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ನಿರ್ಮಾಣವಾಗದ ಸ್ಕೈವಾಕ್ – ಜೀವ ಭಯದಲ್ಲಿ ರಸ್ತೆ ದಾಟುವ ಸಾರ್ವಜನಿಕರು

    ಇವರ ಅದ್ಭುತ ಕಲಾ ಮೂರ್ತಿಗಳ ತಯಾರಿಕೆ ಗಮನಿಸಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಆಹ್ವಾನಿಸಲಾಗಿದೆ. ಸ್ಥಳೀಯರು ನಾಗಮೂರ್ತಿಯವರನ್ನು ಸನ್ಮಾನಿಸಿ ಗೌರವಿಸಿ ರಾಮ ಮಂದಿರ ಕಾರ್ಯಕ್ಕೆ ಕಳುಹಿಸಿದ್ದಾರೆ. ಈ ಸೌಭಾಗ್ಯ ಒದಗಿ ಬಂದಿರುವುದು ತುಂಬಾನೆ ಖುಷಿಯಾಗಿದೆ. ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನನಗೆ ಆಹ್ವಾನ ಬಂದಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದಿದ್ದಾರೆ ನಾಗಮೂರ್ತಿ. ಇದನ್ನೂ ಓದಿ: ಕರ್ನಾಟಕದ ರೈತರಿಗೆ ಪ್ರಧಾನಿ ಮೋದಿ ವಿಶೇಷ ಪ್ಯಾಕೇಜ್ ಘೋಷಿಸಬೇಕು – ಸುಮಲತಾ ಮನವಿ

  • 3,500 ಕಿ.ಮೀ ದೂರದ ಥೈಲ್ಯಾಂಡ್‌ನಿಂದ ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ವಿಶೇಷ ಮಣ್ಣು

    3,500 ಕಿ.ಮೀ ದೂರದ ಥೈಲ್ಯಾಂಡ್‌ನಿಂದ ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ವಿಶೇಷ ಮಣ್ಣು

    ನವದೆಹಲಿ: ಅಯೋಧ್ಯೆಯ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ಇನ್ನೊಂದು ತಿಂಗಳಷ್ಟೇ ಬಾಕಿಯಿದೆ. ಈ ಐತಿಹಾಸಿಕ ದಿನಕ್ಕಾಗಿ ಕೇವಲ ಭಾರತವಷ್ಟೇ ಅಲ್ಲ ವಿದೇಶಗಳೂ ಕಾತುರದಿಂದ ಕಾಯುತ್ತಿದೆ. ಇದೀಗ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್ (Thailand) ವಿಶೇಷ ಮಣ್ಣನ್ನು (Soil) ಕಳುಹಿಸುತ್ತಿದೆ.

    ಹೌದು, ಅಯೋಧ್ಯೆಯಿಂದ 3,500 ಕಿ.ಮೀ ದೂರದಲ್ಲಿರುವ ಥೈಲ್ಯಾಂಡ್‌ನ ಅಯುತಾಯ (Ayutthaya) ನಗರದಿಂದ ವಿಶೇಷ ಮಣ್ಣನ್ನು ತರಲಾಗುತ್ತಿದೆ. 2024ರ ಜನವರಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮ ಮಂದಿರಕ್ಕೆ ಥೈಲ್ಯಾಂಡ್ ಮಣ್ಣನ್ನು ಕಳುಹಿಸುತ್ತಿದೆ.

    ಭಾರತ-ಥೈಲ್ಯಾಂಡ್ ಸಂಬಂಧ:
    ಥೈಲ್ಯಾಂಡ್‌ನ ಸಿಯಾಮ್ ಸಾಮ್ರಾಜ್ಯದಲ್ಲಿರುವ ಅಯುತಾಯಾವನ್ನು 13ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಸಿಯಾಮ್ ಸಾಮ್ರಾಜ್ಯದ ರಾಜಧಾನಿ ಮತ್ತು ಆರ್ಥಿಕ ಕೇಂದ್ರವೂ ಆಗಿತ್ತು. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್‌ನಿಂದ ಈ ರೀತಿ ಕಳುಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ರಾಮ ಮಂದಿರಕ್ಕಾಗಿ ಥೈಲ್ಯಾಂಡ್‌ನಿಂದ ವಿಶೇಷ ನೀರನ್ನು ಕಳುಹಿಸಲಾಗಿತ್ತು. ಈ ಕ್ರಿಯೆಯು ಥೈಲ್ಯಾಂಡ್ ಮತ್ತು ಭಾರತದ ನಡುವಿನ ಅನನ್ಯ ಸಾಂಸ್ಕೃತಿಕ ಸಂಬಂಧಗಳಿಂದ ಹುಟ್ಟಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಆಳವಾಗಲಿದೆ. ವಿಶ್ವ ಹಿಂದೂ ಪರಿಷತ್ (VHP) ಕೈಗೊಂಡ ಉಪಕ್ರಮ ಮತ್ತು ವಿಎಚ್‌ಪಿಯ ಥೈಲ್ಯಾಂಡ್ ಅಧ್ಯಾಯದ ಅಧ್ಯಕ್ಷ ಸುಶೀಲ್‌ಕುಮಾರ್ ಸರಾಫ್ ಅವರ ಸಹಾಯದಿಂದ ಇದು ಸಾಧ್ಯವಾಗಿದೆ.

    ಭಾರತ ಮತ್ತು ಥೈಲ್ಯಾಂಡ್ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಥೈಲ್ಯಾಂಡ್‌ನ ಹಲವಾರು ರಾಜರು ರಾಮನ ವಂಶಸ್ಥರ ಭಾಗವಾಗಿದ್ದಾರೆ. ಇಲ್ಲಿರುವ ಪ್ರತಿಯೊಬ್ಬ ರಾಜನಿಗೂ ಅವರ ಹೆಸರಿನಲ್ಲಿ ರಾಮನ ಬಿರುದು ಇದೆ, ಇದು ಇಲ್ಲಿನ ಹಳೆಯ ಸಂಪ್ರದಾಯವಾಗಿದೆ ಎಂದು ವಿಶ್ವ ಹಿಂದೂ ಫೌಂಡೇಶನ್ (WHF) ಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷರಾದ ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.

    ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್ ಶ್ರೀಮಂತ ಹಿಂದೂ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ಸಾಕ್ಷಿಯಾಗುವ 51 ದೇಶಗಳನ್ನು ನಾವು ಗುರುತಿಸಿದ್ದೇವೆ. ಸಮಾರಂಭವನ್ನು ಬ್ಯಾಂಕಾಕ್‌ನಲ್ಲಿ ನೇರಪ್ರಸಾರ ಮಾಡಲಾಗುವುದು ಮತ್ತು ಪ್ರಪಂಚದಾದ್ಯಂತದ ಹಿಂದೂಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೀರ್ತನೆ, ಭಜನೆ, ಪೂಜೆ ಮತ್ತು ಪಾರಾಯಣದಲ್ಲಿ ತೊಡಗುತ್ತಾರೆ ಎಂದು ಸ್ವಾಮಿ ವಿಜ್ಞಾನಾನಂದ ಹೇಳಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ

    ಅಯೋಧ್ಯೆಯಿಂದ ಪ್ರಸಾದವನ್ನು ಆರ್ಡರ್ ಮಾಡಿದ್ದೇವೆ. ಇಲ್ಲಿ ಅಯೋಧ್ಯೆ ದೇಗುಲದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಅಯೋಧ್ಯೆಯಿಂದ ರಾಮ ಲಲ್ಲಾ ಜನ್ಮಸ್ಥಳದ ಚಿತ್ರವನ್ನು ಸಹ ತಂದಿದ್ದೇವೆ. ಚಿತ್ರದ ಪ್ರತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದರು.

    ಅಯುತಾಯ

    ರಾಮ – ಅಯುತಾಯಕ್ಕೆ ಸಂಪರ್ಕ ಏನು?
    ಅಯುತಾಯ ಥಾಯ್ಲೆಂಡ್‌ನ ಪ್ರಸಿದ್ಧ ನಗರ. ಅಲ್ಲಿನ ರಾಜರು ‘ರಾಮತಿಬೋಧಿ’ (ಲಾರ್ಡ್ ರಾಮ) ಎಂಬ ಬಿರುದನ್ನು ಹೊಂದಿದ್ದರು. ರಾಮಾಯಣದಲ್ಲಿ ಅಯೋಧ್ಯೆಯನ್ನು ಭಗವಾನ್ ರಾಮನ ರಾಜಧಾನಿ ಎಂದು ಉಲ್ಲೇಖಿಸಿರುವ ಸಂದರ್ಭಕ್ಕೆ ಅಯುತಾಯವನ್ನು ಜೋಡಿಸಲಾಗಿದೆ. ಕ್ರಿ.ಶ. 1351 ರಿಂದ ಸಯಾಮಿ ಆಡಳಿತಗಾರರ ರಾಜಧಾನಿಯಾಗಿದ್ದ ಅಯುತಾಯವನ್ನು 1767 ರಲ್ಲಿ ಬರ್ಮಾ ಪಡೆಗಳು ಲೂಟಿ ಮಾಡಿ ಸಂಪೂರ್ಣವಾಗಿ ನಾಶಪಡಿಸಿದವು. ರಾಮಕೀನ್ ಎಂದು ಕರೆಯಲ್ಪಡುವ ಥಾಯ್ ಧಾರ್ಮಿಕ ಪಠ್ಯ ಥಾಯ್ ರಾಮಾಯಣಕ್ಕೆ ಸಮಾನವಾದ ಸ್ಥಾನಮಾನವನ್ನು ಹೊಂದಿದೆ. ‘300 ರಾಮಾಯಣ’ ಪುಸ್ತಕ ಬರೆದ ರಾಮಾನುಜನ್ ಅವರು ರಾಮಕೀನಿತ್ ಹಾಗೂ ವಾಲ್ಮೀಕಿಯವರ ರಾಮಾಯಣವನ್ನು ಹೋಲಿಸಿದ್ದಾರೆ. ಇದನ್ನು 18ನೇ ಶತಮಾನದಲ್ಲಿ ಕಿಂಗ್ ರಾಮ 1 ಹೊಸದಾಗಿ ರಚಿಸಿದ್ದಾನೆ ಎಂದು ನಂಬಲಾಗಿದೆ. ಈ ಪುಸ್ತಕದಲ್ಲಿ ಮುಖ್ಯ ಖಳನಾಯಕ ತೋತ್ಸಕನ್ ಹಿಂದೂ ಗ್ರಂಥದ ಲಂಕಾ ರಾಜ ರಾವಣ ಎನ್ನಲಾಗಿದೆ. ರಾಮನ ಆದರ್ಶವನ್ನು ಈ ಪುಸ್ತಕದ ನಾಯಕನಲ್ಲಿ ಚಿತ್ರಿಸಲಾಗಿದೆ.

    ಭಾರತ ಮತ್ತು ಥೈಲ್ಯಾಂಡ್ ನಡುವಿನ ಆಳವಾದ ಸಾಂಸ್ಕೃತಿಕ ಹೋಲಿಕೆಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಕಾರ್ತಿಕ ಪೂರ್ಣಿಮಾ ಮತ್ತು ದೀಪಾವಳಿಯನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಅದೇ ರೀತಿ ಥೈಲ್ಯಾಂಡ್‌ನಲ್ಲಿ ‘ಲಾಯ್ ಕ್ರಾಥೋಂಗ್’ ಹಬ್ಬವನ್ನು ದೀಪಗಳ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಭಾರತದ ದೀಪಾವಳಿಗೆ ಹೋಲುತ್ತದೆ. ಇದು ಥೈಲ್ಯಾಂಡ್‌ನ ಪ್ರಮುಖ ಹಬ್ಬವಾಗಿದೆ. ಈ ಸಮಯದಲ್ಲಿ ಜನರು ಶಿವ, ಪಾರ್ವತಿ, ಗಣೇಶ ಮತ್ತು ಇಂದ್ರನ ವಿಗ್ರಹಗಳನ್ನು ಪೂಜಿಸುತ್ತಾರೆ. ಇದನ್ನೂ ಓದಿ: ಮೇ ಕಳೆದ ಬಳಿಕ ಸರ್ಕಾರ ಪತನ ಖಚಿತ: ಹೆಚ್‍ಡಿಕೆ ಸ್ಫೋಟಕ ಭವಿಷ್ಯ

  • ರಾಮ ಮಂದಿರ ಲೋಕಾರ್ಪಣೆ – ಗಣ್ಯರ ಜೊತೆ ಸಾಮಾನ್ಯ ಜನರಿಗೆ ಆಹ್ವಾನ – ಆಹ್ವಾನ ಪತ್ರಿಕೆಯಲ್ಲಿ ಏನಿದೆ?

    ರಾಮ ಮಂದಿರ ಲೋಕಾರ್ಪಣೆ – ಗಣ್ಯರ ಜೊತೆ ಸಾಮಾನ್ಯ ಜನರಿಗೆ ಆಹ್ವಾನ – ಆಹ್ವಾನ ಪತ್ರಿಕೆಯಲ್ಲಿ ಏನಿದೆ?

    ನವದೆಹಲಿ: ಜನವರಿ 22 ರಂದು ಆಯೋಧ್ಯೆ ರಾಮಮಂದಿರ (Ram Mandir) ಲೋಕಾರ್ಪಣೆ, ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನಲೆ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಲಾಗುತ್ತಿದ್ದು ಇದರ ಬೆನ್ನಲ್ಲೇ ಸಾಮಾನ್ಯ ಜನರಿಗೂ ಆಹ್ವಾನ ಪತ್ರಿಕೆಯನ್ನು (Invitations) ಟ್ರಸ್ಟ್‌ ವತಿಯಿಂದ ಕಳುಹಿಸಿಕೊಡಲು ಆರಂಭಿಸಿದೆ.

    ಆಹ್ವಾನ ಪತ್ರಿಕೆಯಲ್ಲಿ ಏನಿದೆ?
    ಆಹ್ವಾನಪತ್ರಿಕೆಯ ಫೋಟೊ ಈಗ ಲಭ್ಯವಾಗಿದ್ದು ಇದರಲ್ಲಿ ಸುದೀರ್ಘ ಹೋರಾಟದ ನಂತರ ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂಬುದು ನಿಮಗೆ ತಿಳಿದಿದೆ. 22 ಜನವರಿ 2024, ರಾಮಲಲ್ಲನ ಹೊಸ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಮಹತ್ವದ ಘಟ್ಟಕ್ಕೆ ಸಾಕ್ಷಿಯಾಗಲು ಮತ್ತು ಮಹಾನ್ ಐತಿಹಾಸಿಕ ದಿನದ ಘನತೆಯನ್ನು ಹೆಚ್ಚಿಸಲು ನೀವು ಈ ಶುಭ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ (Ayodhya) ಉಪಸ್ಥಿತರಾಗಿರಬೇಕು ಎಂಬುದು ನಮ್ಮ ಬಲವಾದ ಬಯಕೆಯಾಗಿದೆ. ಇದಕ್ಕಾಗಿ ಜನವರಿ 21ರ ಮೊದಲು ಅಯೋಧ್ಯೆಗೆ ಭೇಟಿ ನೀಡಲು ನಿಮ್ಮನ್ನು ವಿನಂತಿಸುತ್ತಿದ್ದೇವೆ. ನೀವು ಅಯೋಧ್ಯೆಗೆ ಎಷ್ಟು ಬೇಗ ಬರುತ್ತೀರೋ ಅಷ್ಟು ಅನುಕೂಲವಾಗುತ್ತದೆ. ನೀವು ತಡವಾಗಿ ಬಂದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಸಾಧ್ಯವಾದಷ್ಟು ಮುನ್ನ ಅಯೋಧ್ಯೆಗೆ ಬರಬೇಕು ಎಂದು ಮನವಿ ಮಾಡಲಾಗಿದೆ.   ಇದನ್ನೂ ಓದಿ: 2000 ರೂ. ಮುಖಬೆಲೆಯ 9760 ಕೋಟಿ ರೂ. ವಿನಿಮಯವಾಗಿಲ್ಲ: ಆರ್‌ಬಿಐ

    ಆಮಂತ್ರಣ ಪತ್ರದ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್‌ನ ಅಧಿಕಾರಿಯೊಬ್ಬರು, ಈ ಅದ್ಧೂರಿ ಕಾರ್ಯಕ್ರಮಕ್ಕೆ ಸುಮಾರು 6 ಸಾವಿರ ಜನರಿಗೆ ಆಹ್ವಾನ ಕಳುಹಿಸಲಾಗುವುದು ಎಂದು ಹೇಳಿದರು. ಆರಂಭದ ಹಂತದಲ್ಲಿ ಆಮಂತ್ರಣ ಪತ್ರಿಕೆಯನ್ನು ಅರ್ಚಕರು, ದಾನಿಗಳು ಮತ್ತು ಹಲವಾರು ರಾಜಕಾರಣಿಗಳು ಸೇರಿದಂತೆ 6,000 ಅತಿಥಿಗಳಿಗೆ ಕಳುಹಿಸಲಾಗುತ್ತಿದೆ.

    4 ಹಂತದಲ್ಲಿ ಕಾರ್ಯಕ್ರಮ
    ನಾಲ್ಕು ಹಂತದಲ್ಲಿ ಕಾರ್ಯಕ್ರಮ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಮೊದಲ ಹಂತವು ನವೆಂಬರ್ 19 ರಿಂದ ಈಗಾಗಲೇ ಪ್ರಾರಂಭವಾಗಿದ್ದು ಇದು ಡಿಸೆಂಬರ್ 20 ರವರೆಗೆ ಮುಂದುವರಿಯುತ್ತದೆ. ಇದರಲ್ಲಿ ಸಂಪೂರ್ಣ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಜತೆಗೆ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ 10-10 ಜನರ ತಂಡ ರಚಿಸಿ, ಜನರ ಸಂಪರ್ಕಕ್ಕೆ ಕೆಲಸ ಮಾಡಲಿದೆ.

    ಎರಡನೇ ಹಂತವು ಜನವರಿ 1 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ 10 ಕೋಟಿ ಕುಟುಂಬಗಳಿಗೆ ಪೂಜಿಸಿದ ಅಕ್ಷತೆ ಮತ್ತು ರಾಮ ವಿಗ್ರಹಗಳ ಕರಪತ್ರಗಳು ಮತ್ತು ಚಿತ್ರಗಳನ್ನು ವಿತರಿಸಲಾಗುತ್ತದೆ. ಅಲ್ಲದೆ ರಾಮನ ಜೀವನದ ಅದ್ಧೂರಿ ಆಚರಣೆಯನ್ನು ಆಚರಿಸಲು ಮನೆ-ಮನೆಗೆ ತೆರಳಿ ಜನರಲ್ಲಿ ಮನವಿ ಮಾಡಲಾಗುತ್ತದೆ.

    ಮೂರನೇ ಹಂತವು ಜನವರಿ 22 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಪ್ರಧಾನಿ ಮೋದಿ‌ (PM Narendra Modi) ಅವರು ಭವ್ಯವಾದ ರಾಮ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಅವಧಿಯಲ್ಲಿ ದೇಶಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ.

    ನಾಲ್ಕನೇ ಮತ್ತು ಕೊನೆಯ ಹಂತದಲ್ಲಿ ಭಗವಾನ್ ರಾಮನ ದರ್ಶನಕ್ಕಾಗಿ ದೇಶಾದ್ಯಂತ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಇದರಿಂದಾಗಿ ಹೆಚ್ಚು ಹೆಚ್ಚು ಜನರು ರಾಮನ ದರ್ಶನವನ್ನು ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

  • ಅಯೋಧ್ಯೆಗೆ ಜೋಧ್‌ಪುರದಿಂದ 600 ಕೆಜಿ ಪರಿಶುದ್ಧ ತುಪ್ಪ ರವಾನೆ

    ಅಯೋಧ್ಯೆಗೆ ಜೋಧ್‌ಪುರದಿಂದ 600 ಕೆಜಿ ಪರಿಶುದ್ಧ ತುಪ್ಪ ರವಾನೆ

    ಜೈಪುರ: ಜನವರಿಯಲ್ಲಿ ನಡೆಯಲಿರುವ ಅಯೋಧ್ಯೆ ರಾಮಮಂದಿರದ (Ayodhya Ram Mandir) ಲೋಕಾರ್ಪಣೆಗೆ ಭರದ ಸಿದ್ದತೆಗಳು ನಡೆದಿವೆ. ರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗಾಗಿ ರಾಜಸ್ಥಾನದ ಜೋಧ್‌ಪುರದಿಂದ (Jodhpur) 600 ಕೆಜಿಯಷ್ಟು ಪರಿಶುದ್ಧ ತುಪ್ಪವನ್ನು (Ghee) ಅಯೋಧ್ಯೆಗೆ ಕಳಿಸಲಾಗಿದೆ.

    ಈ ತುಪ್ಪವನ್ನು ವಿಶೇಷವಾಗಿ ತಯಾರಿಸಲಾದ 108 ಕಲಶಗಳಲ್ಲಿ 11 ರಥಗಳ ಮೂಲಕ ಅಯೋಧ್ಯೆಗೆ ಮಂತ್ರಘೋಷಗಳ ಮೂಲಕ ಕಳುಹಿಸಿಕೊಡಲಾಗಿದೆ. ಸಾಂದೀಪನಿ ರಾಮಧರ್ಮ ಗೋಶಾಲೆ ಈ ತುಪ್ಪವನ್ನು ಕಳುಹಿಸಿಕೊಟ್ಟಿದೆ.  ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

    ಪ್ರಾಣ ಪ್ರತಿಷ್ಠೆಯ ಸಮಯದಲ್ಲಿ ನಡೆಸಲಾಗುವ ಮಹಾಯಜ್ಞ ಮತ್ತು ಆರತಿಗಾಗಿ ವಿಶೇಷ ತುಪ್ಪವನ್ನು ಬಳಸಲಾಗುತ್ತದೆ. ಗೋಶಾಲೆಯಲ್ಲಿರುವ ದೇಸಿ ಹಸುವಿನಿಂದ ಈ ತುಪ್ಪವನ್ನು ತಯಾರಿಸಲಾಗಿದೆ.

    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024ರ ಜನವರಿ 22ರಿಂದ ಮಾರ್ಚ್ 10 ರವರೆಗೆ 48 ದಿನಗಳ ಕಾಲ ನಡೆಯಲಿದ್ದು, ಜನವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಜ.22 ರಂದು ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.