Tag: ರಾಮ ಮಂದಿರ

  • ಮನೆಯ ಮುಂದೆ ರಾಮಮಂದಿರದ ಪ್ರತಿಕೃತಿ ನಿರ್ಮಿಸಿದ ಎಂಜಿನಿಯರ್

    ಮನೆಯ ಮುಂದೆ ರಾಮಮಂದಿರದ ಪ್ರತಿಕೃತಿ ನಿರ್ಮಿಸಿದ ಎಂಜಿನಿಯರ್

    ಮುಂಬೈ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ರಾಮನ ಪ್ರಾಣ ಪ್ರತಿಷ್ಠಾಪನೆ (Pran Pratishtha) ದೇಶದೆಲ್ಲೆಡೆ ಸಂಭ್ರಮಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ರಾಮನ ಭಕ್ತರು ತಮ್ಮ ಭಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ತೋರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದೇ ರೀತಿ ನಾಗ್ಪುರದ (Nagpur) ಸಿವಿಲ್ ಎಂಜಿನಿಯರ್ ಒಬ್ಬರು ತಮ್ಮ ಮನೆಯಲ್ಲಿ 11 ಅಡಿ ಎತ್ತರದ ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ.

    ಸಿವಿಲ್ ಇಂಜಿನಿಯರ್ ಪ್ರಫುಲ್ಲ ಮೇಟಗಾಂವಕರ್ ಎಂಬವರು ತಮ್ಮ ಮನೆಯ ಅಂಗಳದಲ್ಲಿ ರಾಮಮಂದಿರದ ಭವ್ಯವಾದ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಈ ತಿಂಗಳ 22ರಂದು ರಾಮನ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆ ಈ ಪ್ರತಿಕೃತಿ ನಿರ್ಮಿಸಲಾಗಿದೆ. ಪ್ರತಿಯೊಂದು ಮನೆಯಲ್ಲೂ ಇಂತಹ ಒಂದು ಪ್ರತಿಕೃತಿ ಇರಬೇಕು ಎಂದು ನಾನು ಭಾವಿಸುತ್ತೇನೆ. ಇದೇ ಉದ್ದೇಶದಿಂದ ಮಂದಿರದ ಪ್ರತಿಕೃತಿಯನ್ನು ನಾನಿಲ್ಲಿ ನಿರ್ಮಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

    ಅಯೋಧ್ಯೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ, ಪ್ರತಿಕೃತಿಯ ದೇವಾಲಯದಲ್ಲಿ ಭಗವಾನ್ ರಾಮನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

    ಹಿಂದೆ ರಾಮ ಮಂದಿರ ನಿರ್ಮಾಣಕ್ಕಾಗಿ 1990ರಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಕರೆ ನೀಡಿದ್ದಾಗ ಅವರ ಪತ್ನಿ ಕರಸೇವಕರಾಗಿ ಭಾಗವಹಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ಕರಸೇವೆಗೆ ಹಾಜರಾಗಿದ್ದಾಗ ತನ್ನ ಪತ್ನಿ 10ನೇ ತರಗತಿಯನ್ನು ಆಗಷ್ಟೇ ಮುಗಿಸಿದ್ದಳು. ಈ ವೇಳೆ ಆಕೆ ಕರಸೇವಕರಾಗಿ ಭಾಗಿಯಾಗಿದ್ದಕ್ಕೆ 16 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದಳು. ನಾನು ಆ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅದೇ ಕಾರಣಕ್ಕೆ ಈ ಪ್ರತಿಕೃತಿ ನಿರ್ಮಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ.

    ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜನವರಿ 22ರ ಮಧ್ಯಾಹ್ನ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ದೇಶದ ಪ್ರಮುಖ ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ

  • ಹೈಕಮಾಂಡ್ ಹೇಳಿದ್ರೆ ಮಾತ್ರ ರಾಮ ಮಂದಿರಕ್ಕೆ ಹೋಗ್ತೀವಿ: ಪರಮೇಶ್ವರ್

    ಹೈಕಮಾಂಡ್ ಹೇಳಿದ್ರೆ ಮಾತ್ರ ರಾಮ ಮಂದಿರಕ್ಕೆ ಹೋಗ್ತೀವಿ: ಪರಮೇಶ್ವರ್

    ಬೆಂಗಳೂರು: ಹೈಕಮಾಂಡ್‌ನವರು (High Command) ಹೇಳಿದ್ರೆ ಮಾತ್ರ ಜನವರಿ 22ರ ನಂತರವೂ ರಾಮ ಮಂದಿರಕ್ಕೆ (Ram Mandir) ಹೋಗುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಸ್ಪಷ್ಟಪಡಿಸಿದ್ದಾರೆ.

    ಜನವರಿ 22 ನಂತರ ರಾಮ ಮಂದಿರಕ್ಕೆ ಹೋಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ‌ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ. ಸರ್ಕಾರದ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆದಿಲ್ಲ. ಹೈಕಮಾಂಡ್ ಈಗಾಗಲೇ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ನಿಲುವು ತೆಗೆದುಕೊಂಡಿದೆ. ಒಂದು ವೇಳೆ ಜನವರಿ 22 ನಂತರ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾವು ಹೋಗುತ್ತೇವೆ ಎಂದರು. ಇದನ್ನೂ ಓದಿ: ರಾಮ ಪ್ರತಿಷ್ಠಾಪನೆ ವೀಕ್ಷಣೆಗೆ ಮಾರಿಷಸ್ ಉದ್ಯೋಗಿಗಳಿಗೆ 2 ಗಂಟೆ ವಿಶೇಷ ಬ್ರೇಕ್

    ಎಲ್ಲವನ್ನೂ ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯಬೇಕು. ಅವರು ಹೋಗುವುದು ಬೇಡ ಎಂದು ಹೇಳಿದಾಗ ನಾವು ಅದರ ವಿರುದ್ದ ನಿಲುವು ‌ತೆಗೆದುಕೊಳ್ಳಲು ಆಗುವುದಿಲ್ಲ. ಹೈಕಮಾಂಡ್ ಹೇಳಿದರೆ ಮಾತ್ರ ಹೋಗುತ್ತೇವೆ ಎಂದರು. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ

     

  • ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?

    ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?

    ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದಿನಿಂದ 11 ದಿನಗಳ ಉಪವಾಸವನ್ನು ಮಹಾರಾಷ್ಟ್ರದ ನಾಸಿಕ್‌ನಿಂದ (Nashik) ಆರಂಭಿಸಿದ್ದಾರೆ. ಮೋದಿ ಅವರು ನಾಸಿಕ್‌ನಲ್ಲಿರುವ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಸ್ಥಾನದಲ್ಲಿ (Kalaram Temple) ದೇವರ ದರ್ಶನ ಮತ್ತು ವಿಶೇಷ ಪೂಜೆ ಮಾಡುವ ವ್ರತ ಆರಂಭಿಸಿದ್ದಾರೆ.

    ಪಂಚವಟಿ ವಿಶೇಷ ಏನು?
    ನಾಸಿಕ್‌ನಿಂದ ಮೋದಿ ಉಪವಾಸ ಆರಂಭಿಸಲು ಕಾರಣವಿದೆ. 14 ವರ್ಷಗಳ ವನವಾಸ ಆರಂಭಿಸಿದ ರಾಮ, ಲಕ್ಷ್ಮಣ, ಸೀತೆ ಹೆಚ್ಚಿನ ಸಮಯವನ್ನು ದಂಡಾಕರಣ್ಯದಲ್ಲಿ ಕಳೆದಿದ್ದರು. ಅದರಲ್ಲೂ ಪಂಚವಟಿಯಲ್ಲಿ (Panchvati) ಪರ್ಣ ಕುಟೀರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಐದು ಆಲದಮರಗಳು ಇದ್ದ ಕಾರಣ ಈ ಜಾಗಕ್ಕೆ ಪಂಚವಟಿ ಎಂಬ ಹೆಸರು ಬಂದಿತ್ತು. ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಈ ಜಾಗದಲ್ಲಿ ಕಳೆದಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?

     

    ವಾಲ್ಮೀಕಿ ರಾಮಾಯಣದ ಎಲ್ಲಾ ಘಟನೆಗಳಗೆ ಇಬ್ಬರು ಮೂಲ ಪ್ರೇರಣೆಯಾಗುತ್ತಾರೆ. ಕೈಕೇಯಿಂದ ರಾಮ 14 ವರ್ಷಗಳ ವನವಾಸಕ್ಕೆ ತೆರಳಿದರೆ ಶೂರ್ಪನಖಿ ಪ್ರಸಂಗದಿಂದಲೇ ರಾಮ ಲಂಕೆಗೆ ಯುದ್ಧಕ್ಕೆ ಹೋಗಬೇಕಾಗುತ್ತದೆ.

    ರಾಮಾಯಣ ಕಥೆಯಲ್ಲಿ ಮಹತ್ವದ ತಿರುವ ನೀಡುವ ಶೂರ್ಪನಖಿ (Surpanakha) ದಂಡಾಕರಣ್ಯದಲ್ಲಿ ನೆಲೆಸಿದ್ದಳು. ವಿಶ್ರವಸನಿಂದ ಕೈಕಸಿಯೆಂಬ ರಕ್ಕಸಿಯಲ್ಲಿ ಜನಿಸಿದ ಈಕೆಗೆ ರಾವಣ, ಕುಂಭಕರ್ಣರು ಅಣ್ಣಂದಿರು. ರಾವಣ (Ravana) ಈಕೆಯನ್ನು ವಿದ್ಯುಜ್ಜಿಹ್ವನೆಂಬ ರಾಕ್ಷಸನಿಗೆ ಕೊಟ್ಟು ಮದುವೆ ಮಾಡಿದ್ದ. ರಾವಣ ಒಮ್ಮೆ ದಿಗ್ವಿಜಯಕ್ಕೆ ಹೋಗಿದ್ದಾಗ ವಿದ್ಯುಜ್ಜಿಹ್ವ ಶತ್ರು ಪಕ್ಷವನ್ನು ಸೇರಿದ್ದ. ಇದರಿಂದ ಸಿಟ್ಟಾದ ರಾವಣ ವಿದ್ಯುಜ್ಜಿಹ್ವನನ್ನು ಕೊಂದು ಹಾಕಿದ್ದ. ಈ ವಿಚಾರ ತಿಳಿದು ಶೂರ್ಪನಖಿ ರಾವಣನ ಬಳಿ ಪರಿಪರಿಯಾಗಿ ಬೇಡಿಕೊಂಡ ಬಳಿಕ ಆಕೆಯನ್ನು 14 ಸಾವಿರ ಸೈನಿಕರ ಜೊತೆ ದಂಡಕಾರಣ್ಯಕ್ಕೆ ಕಳುಹಿಸುತ್ತಾನೆ. ಇದನ್ನೂ ಓದಿ: ಜೀವನದಲ್ಲಿ ಮೊದಲ ಬಾರಿಗೆ ಭಾವುಕನಾಗಿದ್ದೇನೆ – 11 ದಿನಗಳ ವ್ರತ ಆರಂಭಿಸಿದ ಮೋದಿ

    ಗಂಡನಿಲ್ಲದ ಶೂರ್ಪನಖಿ ದಂಡಕಾರಣ್ಯದಲ್ಲಿ ತಿರುಗಾಡುತ್ತಿದ್ದಾಗ ರಾಮನನ್ನು ನೋಡುತ್ತಾಳೆ. ರಾಮನ ಸುಂದರ ರೂಪಕ್ಕೆ ಮನಸೋತ ಶೂರ್ಪನಖಿ ಸುಂದರ ಹೆಣ್ಣಿನ ರೂಪ ಧರಿಸಿ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಾಳೆ. ಈ ವೇಳೆ ರಾಮ ನನಗೆ ಈಗಾಗಲೇ ಮದುವೆಯಾಗಿದೆ ನಾನು ಏಕ ಪತ್ನಿವ್ರತಸ್ಥ ಎಂದು ಹೇಳಿ ಲಕ್ಷ್ಮಣನ ಬಳಿ ಹೋಗುವಂತೆ ಆಕೆಯನ್ನು ಕಳುಹಿಸುತ್ತಾನೆ.

    ಲಕ್ಷ್ಮಣನ ಬಳಿ ಬಂದು ಮದುವೆಯಾಗುವಂತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಲಕ್ಷ್ಮಣ ಈಕೆಯ ಬೇಡಿಕೆಯನ್ನು ತಿರಸ್ಕರಿಸುತ್ತಾನೆ. ರಾಮ ನನ್ನ ಮನವಿಯನ್ನು ಒಪ್ಪದೇ ಇರಲು ಕಾರಣ ಸೀತೆ ಎಂದು ತಿಳಿದು ಶೂರ್ಪನಖಿ ಆಕೆಯನ್ನು ನುಂಗಲು ಹೋದಾಗ ಲಕ್ಷ್ಮಣ ಆಕೆಯನ್ನು ತಡೆಯುತ್ತಾನೆ. ಅಷ್ಟೇ ಅಲ್ಲದೇ ಲಕ್ಷ್ಮಣ ಆಕೆಯ ಕಿವಿ ಮೂಗುಗಳನ್ನು ಕತ್ತರಿಸುತ್ತಾನೆ. ಈ ಅವಮಾನ ತಾಳಲಾರದೇ ಶೂರ್ಪನಖಿ ರಾವಣನ ಬಳಿ ತೆರಳಿ ದೂರು ನೀಡುತ್ತಾಳೆ. ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸಲು ಪ್ರಚೋದನೆ ನೀಡುತ್ತಾಳೆ. ಸಹೋದರಿಗೆ ಅವಮಾನ ಮಾಡಿದ್ದಕ್ಕೆ ರಾವಣ ಮಾರು ವೇಷ ಧರಿಸಿ ಪಂಚವಟಿಯಿಂದಲೇ ಸೀತೆಯನ್ನು ಅಪಹರಣ ಮಾಡುತ್ತಾನೆ. ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್‌ ಮಾಡಿ: ಅಯೋಧ್ಯೆ ರಾಮ ಮಂದಿರ

    ಅಪಹರಣಕ್ಕೂ ಮೊದಲು ಸೀತೆಯ ಬಯಕೆಯಂತೆ ರಾಮ ಚಿನ್ನದ ಜಿಂಕೆಯನ್ನು ಬೆನ್ನಟ್ಟಿದ್ದು, ತನ್ನ ಬಾಣದಿಂದ ಎಳೆದ `ರಕ್ಷಾ ಗಡಿ’ (ಲಕ್ಷ್ಮಣ ರೇಖೆ) ದಾಟಬಾರದೆಂದು ಲಕ್ಷ್ಮಣ ತನ್ನ ಅತ್ತಿಗೆ ಸೀತೆಗೆ ಮನವಿ ಮಾಡಿದ್ದು ಈ ಜಾಗದಲ್ಲೇ. ಈ ಐದು ಆಲದಮರಗಳ ಉದ್ಯಾನವಿರುವ ಪರಿಸರವೇ ಸೀತಾಪಹರಣಕ್ಕೆ ಸಾಕ್ಷಿಯಾದ ಸ್ಥಳ.

    ರಾಮಾಯಣ ಮಹಾಕಾವ್ಯದಲ್ಲಿ ಲಂಕೆಯಷ್ಟೇ ಪಂಚವಟಿ ಪ್ರಾಮುಖ್ಯತೆ ಪಡೆದಿದೆ. ವನವಾಸದ 10 ವರ್ಷ ಪೂರ್ಣಗೊಂಡ ಬಳಿಕ ರಾಮ, ಸೀತೆ, ಲಕ್ಷ್ಮಣ ಸುಮಾರು ಎರಡೂವರೆ ವರ್ಷ ನೆಲೆಸಿರುತ್ತಾರೆ. ಪಂಚವಟಿ ಇರುವುದು ಇರುವುದು ನಾಸಿಕ್‌ನ ಉತ್ತರ ಭಾಗದಲ್ಲಿ. ʼನಾಸಿಕʼ ಎಂದರೆ ಸಂಸ್ಕೃತದಲ್ಲಿ ಮೂಗು. ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿ ಎಸೆದ ಸ್ಥಳವೇ ʼನಾಸಿಕ್ʼ ಎಂದು ಕಥೆ ಹೇಳುತ್ತದೆ.

    ಪಂಚವಟಿಯಲ್ಲಿ ವರುಣಿ, ತರುಣಿ ಮತ್ತು ಗೋದಾವರಿ ನದಿಗಳ ಸಂಗಮ
    ಪಂಚವಟಿಯಲ್ಲಿ ವರುಣಿ, ತರುಣಿ ಮತ್ತು ಗೋದಾವರಿ ನದಿಗಳ ಸಂಗಮ

    ತ್ರಿವೇಣಿ ಸಂಗಮ:
    ತ್ರಿವೇಣಿ ಸಂಗಮ (Triveni Sangam) ನಾಸಿಕ್‌ನ ಇನ್ನೊಂದು ವಿಶೇಷ. ವರುಣಿ, ತರುಣಿ ಮತ್ತು ಗೋದಾವರಿ ನದಿಗಳು ಇಲ್ಲಿ ಸಂಗಮವಾಗುತ್ತದೆ. ವರುಣಿ ಮತ್ತು ತರುಣಿ ನದಿಗಳು ಗುಪ್ತಗಾಮಿನಿಯಾಗಿ ಹರಿಯುತ್ತದೆ ಎನ್ನುವ ನಂಬಿಕೆಯಿದೆ. ಸಪ್ತ ಪವಿತ್ರ ನದಿಗಳಲ್ಲಿ ಒಂದಾದ ದಕ್ಷಿಣ ಗಂಗೆ ಎನಿಸಿದ ಗೋದಾವರಿ ನಾಸಿಕ್‌ ಸಮೀಪದ ತೃಯಂಬಕೇಶ್ವರಲ್ಲಿ ಹುಟ್ಟುತ್ತಾಳೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್‌ನಲ್ಲಿ ಬಂಧಿಸಿದ್ರು!

    ನಾಸಿಕ್‌ ಕುಂಭಮೇಳ
    ನಾಸಿಕ್‌ ಕುಂಭಮೇಳ

    ಕುಂಭಮೇಳ:
    ದೇಶದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ (Kumbh Mela) ನಡೆಯುವ ಸ್ಥಳಗಳಲ್ಲಿ ನಾಸಿಕ್ ಕೂಡ ಒಂದಾಗಿದೆ. ಸಮುದ್ರಮಥನದ ಸಂದರ್ಭದಲ್ಲಿ ರಾಕ್ಷಸರಿಗೆ ಅಮೃತ ದೊರೆಯದಂತೆ ಅದನ್ನು ಬಚ್ಚಿಡಲು ಪ್ರಯತ್ನಿಸಿದರಂತೆ. ಆ ಸಂದರ್ಭದಲ್ಲಿ ಅಮೃತಕುಂಭದಿಂದ ನಾಲ್ಕು ಹನಿಗಳು ಬಿದ್ದವು. ಆ ಪ್ರದೇಶಗಳೇ- ಅಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್. ಹೀಗಾಗಿ ಈ ನಾಲ್ಕೂ ಸ್ಥಳಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.

     

  • ರಾಮ ಮಂದಿರ ಉದ್ಘಾಟನೆ ದಿನವೇ ನಟ ಧ್ರುವ ಪುತ್ರಿಗೆ ನಾಮಕರಣ

    ರಾಮ ಮಂದಿರ ಉದ್ಘಾಟನೆ ದಿನವೇ ನಟ ಧ್ರುವ ಪುತ್ರಿಗೆ ನಾಮಕರಣ

    ಜನವರಿ 22ರ ದಿನಕ್ಕಾಗಿ ಇಡೀ ದೇಶಕ್ಕೆ ದೇಶವೇ ಕಾಯುತ್ತಿದೆ. ಅಂದು ಅಯೋಧ್ಯಯಲ್ಲಿ ರಾಮ ಮಂದಿರ (Rama Mandir) ಉದ್ಘಾಟನೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗಿ ಆಗುವುದಕ್ಕಾಗಿ ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ಕನ್ನಡ ಸಿನಿಮಾ ರಂಗದಿಂದಲೂ ಹಲವಾರು ಸಿಲೆಬ್ರಿಟಿಗಳು ಭಾಗಿ ಆಗುತ್ತಿದ್ದಾರೆ. ಈ ದಿನವೇ ನಟ ಧ್ರುವ ಸರ್ಜಾ (Dhruva Sarja) ತಮ್ಮ ಪುತ್ರಿಗೆ ನಾಮಕರಣ ಮಾಡಲಿದ್ದಾರೆ.

    ಧ್ರುವ ಸರ್ಜಾ ಅಂಡ್ ಫ್ಯಾಮಿಲಿ ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ. ಧ್ರುವ ಸಿನಿಮಾದಲ್ಲಿ ಹನುಮನ ಕುರಿತಾಗಿ ಸನ್ನಿವೇಶವೋ, ಹಾಡೋ ಇದ್ದೇ ಇರುತ್ತದೆ. ಹನುಮನ ಉಸಿರಾಗಿರುವ ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಪುತ್ರಿಗೆ ನಾಮಕರಣ ಮಾಡಲಿದ್ದಾರಂತೆ ಧ್ರುವ.

    ಧ್ರುವ ಸರ್ಜಾ ಮಗಳಿಗೆ ನಾಮಕರಣ ಮಾಡುತ್ತಿದ್ದರೆ, ಅನೇಕ ಮಹಿಳೆಯರು ಅಂದೇ ಹೆರಿಗೆ ಮಾಡಿಸುವಂತೆ ವೈದ್ಯರ ದುಂಬಾಲು ಬಿದ್ದಿರುವ ಘಟನೆಗಳು ನಡೆದಿವೆ. ರಾಮ ಮಂದಿರ ಉದ್ಘಾಟನೆ ದಿನವೇ ಹೆರಿಗೆ ಮಾಡಿಸಿಕೊಳ್ಳಲು ಹಲವರು ತಯಾರಿ ಕೂಡ ಮಾಡಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ರಾಮ ಜನರ ಮನಸ್ಸಲ್ಲಿ ಬೇರೂರಿದ್ದಾನೆ.

  • ಸಿದ್ಧವಾಗಿದೆ 3 ಲಕ್ಷ ರಾಮ ಧ್ವಜ – ದಕ್ಷಿಣದ 4 ರಾಜ್ಯಗಳಿಂದ ಆರ್ಡರ್‌

    ಸಿದ್ಧವಾಗಿದೆ 3 ಲಕ್ಷ ರಾಮ ಧ್ವಜ – ದಕ್ಷಿಣದ 4 ರಾಜ್ಯಗಳಿಂದ ಆರ್ಡರ್‌

    ಧಾರವಾಡ: ಜನವರಿ 22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ನಡೆದರೆ ಮನೆ ಮನೆಗಳಲ್ಲಿ ರಾಮನ ಧ್ವಜ (Ram Flag) ಹಾರಲಿದೆ. ಈ ಕಾರಣಕ್ಕೆ ವಿದ್ಯಾನಗರಿ ಧಾರವಾಡದಲ್ಲಿ (Dharawada) ರಾಮನ ಧ್ವಜದ ತಯಾರಿ‌ ಜೋರಾಗಿ ನಡೆಯುತ್ತಿದೆ.

    ನಗರದ ಮರಾಠ ಗಲ್ಲಿಯಲ್ಲಿರುವ ಪ್ರತೀಶ್ ಜಾಧವ್‌ ಅವರಿಗೆ ಈಗಾಗಲೇ ರಾಮ, ಹನುಮಂತನ 3 ಲಕ್ಷ ಧ್ವಜ ಬೇಕೆಂದು ಆರ್ಡರ್‌ ಬಂದಿದೆ. ಕಳೆದ 15 ದಿನಗಳಿಂದ ಈ ಪ್ರತೀಶ್ ಅವರು ಧ್ವಜ ತಯಾರಿ ಮಾಡುತ್ತಿದ್ದಾರೆ. ಈಗಾಗಲೇ 1.5 ಲಕ್ಷ ಧ್ವಜ ರವಾನೆಯಾಗಿದೆ. ಇದನ್ನೂ ಓದಿ: ರಾಮಮಂದಿರಕ್ಕೆ ಹರಿದುಬಂದ ದೇಣಿಗೆ ಎಷ್ಟು? ಅತಿ ಹೆಚ್ಚು ದೇಣಿಗೆ ಕೊಟ್ಟವರ‍್ಯಾರು ಗೊತ್ತಾ?

    ಮೊದಲಿನಿಂದಲೂ ಇದೇ ಕೆಲಸ ಮಾಡುತ್ತಿರುವ ಜಾಧವ್‌ ಅವರಿಗೆ ಈ ಪುಣ್ಯ ಕಾರ್ಯಕ್ರಮದಿಂದ ಈ ಬಾರಿ ಬಂಪರ್‌ ಆರ್ಡರ್ ಬಂದಿವೆ. ಕರ್ನಾಟಕ ಮಾತ್ರವಲ್ಲದೇ ಪಕ್ಕದ ಗೋವಾ, ತೆಲಂಗಾಣ ಹಾಗೂ ಆಂಧ್ರದಿಂದಲೂ ಬಂದಿದೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್‌ನಲ್ಲಿ ಬಂಧಿಸಿದ್ರು!

    4 ಗಾತ್ರದ ಧ್ವಜ ತಯಾರಿ ನಡೆದಿದ್ದು, ಸಣ್ಣ ಧ್ವಜದಿಂದ ಹಿಡಿದು 5 ಮೀಟರ್‌ವರೆಗೆ ಧ್ವಜ ಇವೆ.  5 ರೂ.ನಿಂದ ಹಿಡಿದು 350 ರೂ.ವರೆಗೆ ಧ್ವಜದ ಬೆಲೆ ಇವೆ.‌ ಸುಮಾರು 80 ಕಾರ್ಮಿಕರು ಕೆಲ ವಾರಗಳಿಂದ ಪ್ರತಿ ದಿನವೂ ಕೆಲಸ ಮಾಡುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್‌ ಮಾಡಿ – ಅಯೋಧ್ಯೆ ರಾಮ ಮಂದಿರ

    ಮಹಿಳೆಯರು ಹಗಲು ಕೆಲಸ ಮಾಡಿದರೆ, ಪುರುಷರು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಒಬ್ಬರು 2 ಸಾವಿರಕ್ಕೂ ಹೆಚ್ಚು ಧ್ವಜ ತಯಾರಿ‌ ಮಾಡುತ್ತಿದ್ದಾರೆ. ಅಯೋಧ್ಯೆ ಕಾರ್ಯಕ್ರಮದಿಂದಾಗಿ ಎಷ್ಟೋ ಬಡವರಿಗೆ ಈಗ ಕೆಲಸ ಸಿಕ್ಕಿದೆ.

  • ನಾವು ಶ್ರೀರಾಮಚಂದ್ರನನ್ನು ಪೂಜಿಸ್ತೀವಿ, ಬಿಜೆಪಿ ರಾಜಕೀಯಕ್ಕೆ ನಮ್ಮ ವಿರೋಧ: ಸಿಎಂ

    ನಾವು ಶ್ರೀರಾಮಚಂದ್ರನನ್ನು ಪೂಜಿಸ್ತೀವಿ, ಬಿಜೆಪಿ ರಾಜಕೀಯಕ್ಕೆ ನಮ್ಮ ವಿರೋಧ: ಸಿಎಂ

    ಬೆಂಗಳೂರು: ನಾವು ಶ್ರೀರಾಮಚಂದ್ರನ (Sri Ramachandra) ವಿರುದ್ಧ ಇಲ್ಲ. ಬಿಜೆಪಿ (BJP) ಅವರು ರಾಮ ಮಂದಿರವನ್ನು ರಾಜಕೀಯ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ಅದನ್ನು ನಾವು ಖಂಡಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಬೆಂಗಳೂರಲ್ಲಿ ಮಾತನಾಡಿದ ಅವರು, ನಾವು ಶ್ರೀರಾಮಚಂದ್ರನ ಭಕ್ತರು, ನಾವು ಶ್ರೀರಾಮಚಂದ್ರನ ಪೂಜೆ ಮಾಡುತ್ತೇವೆ. ಕೇದ್ರ ಸಚಿವರುಗಳು ರಾಜಕೀಯ ಮಾತನಾಡುತ್ತಿದ್ದಾರೆ ಅಷ್ಟೇ. ರಾಜಕೀಯ ಮಾತನಾಡೋರಿಗೆ ಔಷಧವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ

    ನಾವು ಶ್ರೀರಾಮಚಂದ್ರನ ವಿರುದ್ಧವಿಲ್ಲ. ಶ್ರೀರಾಮಚಂದ್ರನನ್ನ ನಾವು ಗೌರವಿಸುತ್ತೇವೆ, ಪೂಜೆ ಮಾಡುತ್ತೇವೆ. ಭಜನೆ ಮಾಡುತ್ತೇವೆ. ರಾಮಮಂದಿರಕ್ಕೆ ನಮ್ಮದು ವಿರೋಧವಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ವಿರೋಧ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಯಡಿಯೂರಪ್ಪನವರು ಆರೋಪಕ್ಕೆ ಕಿಡಿಕಾರಿದ ಅವರು, ಈಗ ಯಾಕೆ ಇವರು ಅಯೋಧ್ಯೆಗೆ ಹೋಗುತ್ತಿದ್ದಾರೆ. ಶ್ರೀರಾಮಚಂದ್ರ ಇಲ್ಲಿ ಇಲ್ವಾ? ಇಲ್ಲೂ ಎಲ್ಲಾ ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಎಂದು ಸಿಎಂ ತಿರುಗೇಟು ಕೊಟ್ಟರು.

    ರಾಜ್ಯ ಸರ್ಕಾರದಿಂದ 22 ರಂದು ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಆದೇಶ ಮಾಡಿರುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಿಎಂ ಹೇಳಿದರು. ಮುಜರಾಯಿ ಇಲಾಖೆಯ ಆದೇಶವೇ ಗೊತ್ತಿಲ್ಲ, ಆ ಹೇಳಿಕೆ ನಾನು ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದ ವಿಶೇಷ ಸುದ್ದಿಗಳನ್ನು ಓದಲು ಕ್ಲಿಕ್‌ ಮಾಡಿ: ರಾಮ ಮಂದಿರ

  • ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ

    ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ

    ಅಯೋಧ್ಯೆ: ರಾಮ ಮಂದಿರದಲ್ಲಿ (Ram Mandir) ರಾಮ ಪ್ರಾಣ ಪ್ರತಿಷ್ಠೆ ನಡೆಯುವ ಮೊದಲು ಅಯೋಧ್ಯೆಯ (Ayodhya) ಸರಯೂ ನದಿ ದಂಡೆಯಲ್ಲಿ 1008 ಶಿವಲಿಂಗಗಳನ್ನು ಸ್ಥಾಪಿಸುವ ಭವ್ಯವಾದ ರಾಮನಾಮ ಮಹಾ ಯಜ್ಞ (Ram Naam Maha Yagya) ಜನವರಿ 14 ರಿಂದ ಜನವರಿ 25 ರವರೆಗೆ ನಡೆಯಲಿದೆ.

    ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ನೇಪಾಳದಿಂದ 21,000 ಯತಿಗಳು ಆಗಮಿಸಲಿದ್ದಾರೆ. ಮಹಾಯಾಗವನ್ನು ನಡೆಸಿ, ಅದರಲ್ಲಿ ಶಿವಲಿಂಗಗಳನ್ನು (Shiva Linga) ಇರಿಸಲು ಈಗಾಗಲೇ 1008 ಯಜ್ಞ ಮಂಟಪವನ್ನು ನಿರ್ಮಿಸಲಾಗಿದೆ. ಈ ಪೈಕಿ ದೊಡ್ಡ ಯಾಗ ಶಾಲೆಯ ಛಾವಣಿ 11 ಪದರಗಳನ್ನು ಹೊಂದಿರುವುದು ವಿಶೇಷ.  ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದ ವಿಶೇಷ ಸುದ್ದಿಗಳನ್ನು ಓದಲು ಕ್ಲಿಕ್‌ ಮಾಡಿ: ರಾಮ ಮಂದಿರ

    ರಾಮಮಂದಿರದಿಂದ 2 ಕಿ.ಮೀ ದೂರದಲ್ಲಿರುವ ಸರಯೂ ನದಿಯ (Sarayu River) ಮರಳು ಘಾಟ್‌ನಲ್ಲಿರುವ 100 ಎಕರೆ ಪ್ರದೇಶದಲ್ಲಿ ಈ ಯಜ್ಞ ಮಂಟಪಗಳನ್ನು ಸ್ಥಾಪಿಸಲಾಗಿದೆ.

    ಅಯೋಧ್ಯೆ ಮೂಲದ ಈಗ ನೇಪಾಳದಲ್ಲಿ (Nepal) ನೆಲೆಸಿರುವ ಆತ್ಮಾನಂದ ದಾಸ್ ಮಹಾತ್ಯಾಗಿ(ನೇಪಾಳಿ ಬಾಬಾ) ಅವರು ಈ ಯಾಗವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷದ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನಾನು ಈ ಯಾಗವನ್ನು ಮಾಡುತ್ತೇನೆ. ಆದರೆ ಈ ವರ್ಷ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಯಜ್ಞ ಮಂಟಪಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ ಎಂದು ಹೇಳಿದರು.  ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 KM ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

    ಈ ಯಾಗದಲ್ಲಿ ಪ್ರತಿದಿನ 50 ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ದಿನಕ್ಕೆ ಸುಮಾರು 1 ಲಕ್ಷ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಮಹಾ ಯಾಗ ಮುಗಿದ ನಂತರ 1008 ಶಿವಲಿಂಗಗಳನ್ನು ಸರಯೂ ನದಿಯಲ್ಲಿ ವಿಸರ್ಜಿಸಲಾಗುತ್ತದೆ.

    ಜನವರಿ 17 ರಿಂದ 24,000 ರಾಮಾಯಣದ ಶ್ಲೋಕಗಳ ಪಠಿಸಲಾಗುತ್ತದೆ. ಪ್ರತಿದಿನ 1008 ಶಿವಲಿಂಗಗಳಿಗೆ ಅಭಿಷೇಕ ನಡೆಯಲಿದೆ. ಶಿವಲಿಂಗಗಳ ಕೆತ್ತನೆಗಾಗಿ ಮಧ್ಯಪ್ರದೇಶದ ನರ್ಮದಾ ನದಿಯಿಂದ ಕಲ್ಲುಗಳನ್ನು ತರಲಾಗಿದೆ ಎಂದು ನೇಪಾಳಿ ಬಾಬಾ ಹೇಳಿದರು.  ಇದನ್ನೂ ಓದಿ: ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

  • ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

    ಅನ್ನ ಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಲ್ಲಿ ಮನೆ ಮನೆಗೆ ಅಕ್ಷತೆ: ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

    ಬೆಂಗಳೂರು: ಅನ್ನಭಾಗ್ಯ ಯೋಜನೆಗೆ (Anna Bhagya Scheme) ಅಕ್ಕಿ ನೀಡದ ಕೇಂದ್ರ ಸರ್ಕಾರ ಧರ್ಮದ ಹೆಸರಲ್ಲಿ ಅಕ್ಷತೆಯ (Mantrakshate) ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ (Mahadevappa) ಕಿಡಿಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ (Social Media) ಈ ಸಂಬಂಧ ಕೇಂದ್ರ ಸರ್ಕಾರ ನಡೆಯನ್ನು ವಿರೋಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ

    ಪೋಸ್ಟ್‌ನಲ್ಲಿ ಏನಿದೆ?
    ಹಸಿವು ಮುಕ್ತ ಕರ್ನಾಟಕದ (Karnataka) ಉದ್ದೇಶದಿಂದ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರದಿಂದ ಅಕ್ಕಿ ನೀಡದವರು ಈ ದಿನ ಧರ್ಮದ ಹೆಸರಲ್ಲಿ ಅಕ್ಷತೆಯ ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ. ಬಡವರ ಹಸಿವಿಗೆ ಅನ್ನ ನೀಡುವುದಕ್ಕಿಂತಲೂ ದೊಡ್ಡ ಧರ್ಮ ಇದೆಯೇ?

    ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ ಮಾಡುವಂತಹ ಅಮಾನವೀಯ ಪ್ರವೃತ್ತಿ ತೋರಿದ ಇವರು ಧರ್ಮದ ಕುರಿತಂತೆ ಮಾತನಾಡುತ್ತಿದ್ದರೆ ಅದನ್ನು ಕಂಡು ನಗಬೇಕೋ ಅಳಬೇಕೋ ಎಂದು ನನಗೆ ತಿಳಿಯುತ್ತಿಲ್ಲ.  ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

     

  • ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ: ಹೆಚ್‌ಡಿಕೆ

    ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ: ಹೆಚ್‌ಡಿಕೆ

    ಚಿಕ್ಕಮಗಳೂರು: ರಾಮ ಮಂದಿರ (Ram Mandir) ಉದ್ಘಾಟನೆ ಭಾರತದ ಹಬ್ಬ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ದೇಶದ ಜನರ ನಿರೀಕ್ಷೆ. ಹಲವು ವರ್ಷಗಳ ಗೊಂದಲಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ ಎಂದರು. ಇದನ್ನೂ ಓದಿ:ಗ್ರಾಮದ ಅಭಿವೃದ್ಧಿ ಕೆಲಸ ಮಾಡ್ಕೊಡಿ ಎಂದ ಮಹಿಳೆ ಮುಂದೆ JDS ಶಾಸಕ ಬೇಸರ

    ಕಾಂಗ್ರೆಸ್ಸಿಗರು (Congress) ರಾಮ ಮಂದಿರ ಉದ್ಘಾಟನೆಗೆ ಹೋಗದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ಯಾಕೆ ಹೋಗುವುದಿಲ್ಲ ಎಂದು ಅವರೇ ಹೇಳಬೇಕು. ಅವರ ತೀರ್ಮಾನ ನನಗೆ ಸಂಬಂಧವಿಲ್ಲ. ರಾಮ ಮಂದಿರ ನಿಜವಾದ ರಾಮ ರಾಜ್ಯದ ಕನಸು ಎಂದು ಹೇಳಿದರು.

    ಕಳೆದ ಬಾರಿಯ ಲೋಕಸಭೆ ಚುನಾವಣೆ (Lok Sabha Election) ಬೇರೆ. ಈ ಚುನಾವಣೆ ಬೇರೆ ಇರುತ್ತದೆ. ಇವತ್ತು ಮಂಡ್ಯದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತ ಗೆಲ್ಲುವ ವಾತಾವರಣ ಇದೆ. ಕಳೆದ ಬಾರಿ ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಈಗ ಮಂಡ್ಯದಲ್ಲಿ ಆ ವಾತಾವರಣ ಇಲ್ಲಎಂದು ಹೇಳಿದರು.

    ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಯಾರು? ಎಲ್ಲಿ ಎಂಬ ತೀರ್ಮಾನ ಆಗಿಲ್ಲ. ಹೊಂದಾಣಿಕೆಯ ಮಾತುಕತೆಯ ಬಳಿಕ ಎಲ್ಲಿ? ಯಾರು? ಎಂದು ತೀರ್ಮಾನ ಮಾಡುತ್ತೇವೆ. ತೀರ್ಮಾನದ ಬಳಿಕ ಎಲ್ಲಾ ಸರಿಯಾಗುತ್ತದೆ.  ಇದನ್ನೂ ಓದಿ: ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಸಿಎಂ, ಡಿಸಿಎಂ ಮಧ್ಯೆ ಭಿನ್ನಾಭಿಪ್ರಾಯ ಸ್ಫೋಟ!

     

  • ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

    ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

    ಗಾಂಧಿನಗರ: ದೇಶದ ಪ್ರಮುಖ ಜವಳಿ ಕೇಂದ್ರವಾಗಿರುವ ಗುಜರಾತ್‌ನ (Gujarat) ಸೂರತ್ (Surat) ನಗರದಲ್ಲಿ ಅಯೋಧ್ಯೆಯಲ್ಲಿ (Ayodhya) ನೆಲೆಸಿರುವ ಸೀತಾಮಾತೆಗೆ (Sita Mata) ಅರ್ಪಿಸಲು ವಿಶೇಷ ಸೀರೆಯೊಂದು (Saree) ಸಿದ್ಧವಾಗಿದೆ. ಈ ಸೀರೆಯನ್ನು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ (Ram Mandir) ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ಕಳುಹಿಸಲಾಗುವುದು ಎಂದು ಜವಳಿ ಉದ್ಯಮಿ ಲಲಿತ್ ಶರ್ಮಾ (Lalith Sharma)ತಿಳಿಸಿದ್ದಾರೆ.

    ಸೀರೆಯ ವಿಶೇಷತೆಯೇನು?
    ಸೀತಾಮಾತೆಗೆಂದು ತಯಾರಿಸಿರುವ ಈ ಸೀರೆಯಲ್ಲಿ ಭಗವಾನ್ ರಾಮನ ಚಿತ್ರಗಳು ಮತ್ತು ಅಯೋಧ್ಯೆಯ ದೇವಾಲಯದ ಮುದ್ರಣವಿದೆ. ಸೀರೆ ತಯಾರಿಯ ಮೊದಲ ಕಚ್ಚಾ ವಸ್ತುವಿನ ತುಣುಕನ್ನು ಸೂರತ್‌ನ ಸೀತಾ ದೇವಿಯ ದೇವಾಲಯಕ್ಕೆ ಅರ್ಪಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಚಿನ್ನದ ಬಾಗಿಲು – ಇನ್ನು 3 ದಿನದಲ್ಲಿ 13 ಬಾಗಿಲು ಅಳವಡಿಕೆ

    ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಭೌತಿಕವಾಗಿ ಇರಲು ಸಾಧ್ಯವಾಗದ ಭಕ್ತರು ತಮ್ಮದೇ ಆದ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಂಪರ್ಕ ಸಾಧಿಸಲು ಬಯಸಿದ ಕಾರಣ ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಲಲಿತ್ ಶರ್ಮ ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕಾಗಿ 30 ವರ್ಷಗಳಿಂದ ‘ಮೌನ ವ್ರತ’ – ಒಂದು ಮಾತೂ ಆಡದೇ ಇದ್ದ ಮಹಿಳೆ ಮುಖದಲ್ಲಿ ಮಂದಹಾಸ

    ನಾವು ಭಗವಾನ್ ರಾಮನ ಚಿತ್ರಗಳು ಮತ್ತು ಅಯೋಧ್ಯೆ ದೇವಸ್ಥಾನವನ್ನು ಮುದ್ರಿಸಿದ ವಿಶೇಷ ಸೀರೆಯನ್ನು ಸಿದ್ಧಪಡಿಸಿದ್ದೇವೆ. ನಾವು ಅದನ್ನು ಇಲ್ಲಿ ನೆಲೆಸಿರುವ ಸೀತಾಮಾತೆಯ ದೇವಸ್ಥಾನದಲ್ಲಿ ಅರ್ಪಿಸಿದ್ದೇವೆ. ಬಳಿಕ ಈ ಸೀರೆಯನ್ನು ಅಯೋಧ್ಯೆಯ ರಾಮಮಂದಿರಕ್ಕೆ ಕಳುಹಿಸುತ್ತೇವೆ. ಬೇಡಿಕೆ ಬಂದರೆ ಸೀತಾಮಾತೆ ನೆಲೆಸಿರುವ ಎಲ್ಲಾ ರಾಮನ ದೇವಾಲಯಗಳಿಗೆ ನಾವು ಅದನ್ನು ಉಚಿತವಾಗಿ ಕಳುಹಿಸುತ್ತೇವೆ ಎಂದು ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್‌