Tag: ರಾಮ ಮಂದಿರ

  • ರಾಮಮಂದಿರ ನಿರ್ಮಾಣ ಸಾಧ್ಯವಾಗದಿದ್ದರೆ ಅಧಿಕಾರದಿಂದ ಕೆಳಗಿಳಿಸಿ – ಆರ್‌ಎಸ್‌ಎಸ್‌ಗೆ ಠಾಕ್ರೆ ತಾಕೀತು

    ರಾಮಮಂದಿರ ನಿರ್ಮಾಣ ಸಾಧ್ಯವಾಗದಿದ್ದರೆ ಅಧಿಕಾರದಿಂದ ಕೆಳಗಿಳಿಸಿ – ಆರ್‌ಎಸ್‌ಎಸ್‌ಗೆ ಠಾಕ್ರೆ ತಾಕೀತು

    ಮುಂಬೈ: ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣ ಮಾಡಲು ವಿಫಲವಾದಲ್ಲಿ ಅಧಿಕಾರದಿಂದ ಕೆಳಗಿಳಿಸುವಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಗುಡುಗಿದ್ದಾರೆ.

    ಮುಂಬೈನಲ್ಲಿ ಮಾತನಾಡಿದ ಅವರು ಆರ್‌ಎಸ್‌ಎಸ್‌ ಎದುರು ಈ ಬೇಡಿಕೆ ಇಟ್ಟಿದ್ದು, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿದೆ. ಒಂದೇ ಸಿದ್ಧಾಂತ ಹೊಂದಿರುವ ಪಕ್ಷವಾಗಿ ಬಿಜೆಪಿ ರಾಮ ಮಂದಿರ ನಿರ್ಮಾಣ ಮಾಡಲೇ ಬೇಕಿದೆ. ಇಲ್ಲವಾದಲ್ಲಿ ಸರ್ಕಾರ ಅಧಿಕಾರದಲ್ಲಿ ಇರಲು ಬೇರೆ ಕಾರಣವೇ ಉಳಿದಿಲ್ಲ ಎಂದು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಗಿರುವ ಆರ್‌ಎಸ್‌ಎಸ್‌ ತಾಕೀತು ಮಾಡಿದ್ದಾರೆ.

    ಪ್ರಧಾನಿ ಮೋದಿ ಅವರಿಗೆ ರಾಮ ಮಂದಿರ ನಿರ್ಮಾಣದ ಕುರಿತು ನೆನಪು ಮಾಡಲು ಠಾಕ್ರೆ ಅವರು ನ.25 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ಶಿವಸೇನಾ ಪಕ್ಷ ಮಾತ್ರವೇ ಈ ಕುರಿತು ಎಚ್ಚರಿಕೆ ನೀಡಲಿದೆ. ಕೋರ್ಟ್ ಮೂಲಕ ಈ ವಿವಾದವನ್ನು ಬಗೆಹರಿಸಲು ಚಿಂತಿಸಿದರೆ 1 ಸಾವಿರ ವರ್ಷ ತೆಗೆದುಕೊಳ್ಳುತ್ತದೆ ಎಂದು ಶಿವಸೇನಾ ಮುಖಂಡ, ಸಂಸದ ಸಂಜಾಯ್ ರವೌತ್ ಹೇಳಿದ್ದಾರೆ.

    ಮಹಾರಾಷ್ಟ್ರ ಚುನಾವಣೆ ಸಮಯದಿಂದಲೂ ಶಿವಸೇನಾ ಪದೇ ಪದೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬರುತ್ತಿದೆ. ಆದರೆ ಇತ್ತ ಬಿಜೆಪಿ ಮಾತ್ರ ಮತ್ತೆ ಶಿವಸೇನಾ ಪಕ್ಷದೊಂದಿಗೆ ಮೈತ್ರಿ ನಡೆಸುವ ಕುರಿತು ಮಾತನಾಡಿದೆ. ಬಿಜೆಪಿ ಮಾತಿಗೆ ತಿರುಗೇಟು ನೀಡಿರುವ ಶಿವಸೇನೆ ತನ್ನ ಮುಖವಾಣಿ `ಸಾಮ್ನಾ’ ಪತ್ರಿಕೆಯಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿತ್ತು. ಅಲ್ಲದೇ ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುವಂತೆ ರಾಜ್ಯ ಸರ್ಕಾರಕ್ಕೂ ಹಾಗೂ ಬಿಜೆಪಿ ಪಕ್ಷಕ್ಕೂ ಸವಾಲು ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು: ಪೇಜಾವರ ಶ್ರೀ

    ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು: ಪೇಜಾವರ ಶ್ರೀ

    – ರಾಮ ಮಂದಿರಕ್ಕೆ ವಿರುದ್ಧ ತೀರ್ಪು ಬಂದ್ರೆ ಮೊದಲು ನಾನೇ ವಿರೋಧಿಸುತ್ತೇನೆ

    ಉಡುಪಿ: ಕೆಲದಿನಗಳ ಹಿಂದೆಯಷ್ಟೇ ಶಬರಿಮಲೆ ತೀರ್ಪು ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದಿದ್ದ ಉಡುಪಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಇಂದು, ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು ಎಂದು ಗುಡುಗಿದ್ದಾರೆ.

    ಎಂಜಿಎಂ ಮೈದಾನದಲ್ಲಿ ನಡೆದ ಧರ್ಮ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಧಾರ್ಮಿಕ ವಿಚಾರಗಳು ಕೋರ್ಟ್ ಗೆ ಯಾಕೆ? ಶಬರಿಮಲೆ ಹಿಂದೂ ಸಮಾಜದ ಕೇಂದ್ರ ಬಿಂದು. ಇಲ್ಲಿನ ಸಂಪ್ರದಾಯ ಬೇರೆ ಯಾವ ಕ್ಷೇತ್ರದಲ್ಲಿಯೂ ಇಲ್ಲ. ಧಾರ್ಮಿಕ ಶಿಸ್ತಿನ ಶಿಕ್ಷಣವನ್ನು ಅಯ್ಯಪ್ಪ ಕಲಿಸಿದ್ದಾನೆ. ನಿಯಮಬದ್ಧ ದೇವಾಲಯದ ವಿಚಾರದಲ್ಲಿ ಆಂದೋಲನ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನು ಓದಿ: ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸುಗ್ರಿವಾಜ್ಞೆ ಹೊರಡಿಸಲಿ: ಪೇಜಾವರ ಶ್ರೀ

    ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು. ಇಂತಹ ನಿರ್ಣಯವನ್ನು ಸಂತರು, ಭಕ್ತರು ಮಾಡಬೇಕು. ದೇವಸ್ಥಾನಗಳಿಗೆ ದಲಿತರ ಪ್ರವೇಶಕ್ಕೆ ಹಿಂದೂ ಸಮಾಜದ ಬೆಂಬಲವಿದೆ. ಆದರೆ ಕೋರ್ಟ್ ಧಾರ್ಮಿಕ ಪರಿವರ್ತನೆಯನ್ನು ಮಾಡಬಾರದು ಎಂದ ಶ್ರೀಗಳು, ಕೇರಳ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಪ್ರಜೆಗಳನ್ನು ಧಮನ ಮಾಡುತ್ತಿದೆ. ಇತ್ತ ಕೇರಳ ಸರ್ಕಾರವು ಸರ್ವಾಧಿಕಾರಿ ಧೋರಣೆ ತಾಳಿದೆ ಎಂದು ಆರೋಪಿಸಿದರು.

    ಪಂದಳ ರಾಜರು, ಭಕ್ತರು, ಅರ್ಚಕರ ಅಭಿಪ್ರಾಯಕ್ಕೆ ಕೋರ್ಟ್ ಮನ್ನಣೆ ನೀಡಲಿ. ಹಿಂದೂ ಸಮಾಜ ಮಹಿಳೆಯರನ್ನು ತಿರಸ್ಕಾರ ಮಾಡಿಲ್ಲ. ನಮ್ಮ ಸಂಪ್ರದಾಯವನ್ನು ಮಹಿಳೆಯರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನು ಓದಿ: ಭಾರತದಲ್ಲಿ ರಾಮ ಮಂದಿರ ಕಟ್ಟಿಲ್ಲ ಅಂದ್ರೆ ಪಾಕಿಸ್ತಾನದಲ್ಲಿ ಕಟ್ಟಲು ಆಗುತ್ತಾ: ರೋಷನ್ ಬೇಗ್ ಪ್ರಶ್ನೆ

    ರಾಮ ಮಂದಿರ ನಿರ್ಮಾಣದ ವಿರುದ್ಧವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದರೆ, ನಾನೇ ಮೊದಲು ವಿರೋಧಿಸುತ್ತೇನೆ. ಹಿಂದೂ ಸಮಾಜದವರು ದೇಶಾದ್ಯಂತ ಸಂಘಟಿತರಾಗಬೇಕು ಎಂದು ಪೇಜಾವರ ಶ್ರೀ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತದಲ್ಲಿ ರಾಮ ಮಂದಿರ ಕಟ್ಟಿಲ್ಲ ಅಂದ್ರೆ ಪಾಕಿಸ್ತಾನದಲ್ಲಿ ಕಟ್ಟಲು ಆಗುತ್ತಾ: ರೋಷನ್ ಬೇಗ್ ಪ್ರಶ್ನೆ

    ಭಾರತದಲ್ಲಿ ರಾಮ ಮಂದಿರ ಕಟ್ಟಿಲ್ಲ ಅಂದ್ರೆ ಪಾಕಿಸ್ತಾನದಲ್ಲಿ ಕಟ್ಟಲು ಆಗುತ್ತಾ: ರೋಷನ್ ಬೇಗ್ ಪ್ರಶ್ನೆ

    ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಪೇಜಾವರ ಶ್ರೀಗಳ ಹೇಳಿಕೆ ನೀಡಿದ್ದ ಬೆನ್ನಲ್ಲೇ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಅವರು, ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವರು, ಭಾರತದಲ್ಲಿ ರಾಮ ಮಂದಿರ ಕಟ್ಟಿಲ್ಲ ಅಂದರೆ, ಪಾಕಿಸ್ತಾನದಲ್ಲಿ ನಿರ್ಮಿಸಲು ಸಾಧ್ಯವೇ? ಈ ವಿವಾದ ಈಗ ಸುಪ್ರೀಂಕೋರ್ಟ್ ನಲ್ಲಿದೆ. ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಂದ ವಿರೋಧವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸುಗ್ರಿವಾಜ್ಞೆ ಹೊರಡಿಸಲಿ: ಪೇಜಾವರ ಶ್ರೀ

    ರಾಮ ಮಂದಿರ ಭಾರತದಲ್ಲಷ್ಟೇ ನಿರ್ಮಾಣವಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿಯರು ಸುಗ್ರೀವಾಜ್ಞೆ ಹೊರಡಿಸಿ ರಾಮಮಂದಿರ ನಿರ್ಮಿಸಲು ಮುಂದಾಗುತ್ತಿದ್ದಾರೆ. ಆದರೆ ಇಂತಹ ನಿರ್ಧಾರಕ್ಕೆ ಮುಂದಾಗಿರುವ ಅವರು ನಾಲ್ಕೂವರೆ ವರ್ಷಗಳಿಂದ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿ ಕುಟುಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಹುಸಂಖ್ಯಾತ ಹಿಂದೂಗಳು ರಾಮ ಮಂದಿರವನ್ನ ಬಾಬ್ರಿ ಮಸೀದಿಯ ಜಾಗದಲ್ಲಿ ನೋಡಲು ಇಷ್ಟಪಡಲ್ಲ: ಶಶಿ ತರೂರ್

    ಬಹುಸಂಖ್ಯಾತ ಹಿಂದೂಗಳು ರಾಮ ಮಂದಿರವನ್ನ ಬಾಬ್ರಿ ಮಸೀದಿಯ ಜಾಗದಲ್ಲಿ ನೋಡಲು ಇಷ್ಟಪಡಲ್ಲ: ಶಶಿ ತರೂರ್

    ನವದೆಹಲಿ: ಬಹುಸಂಖ್ಯಾತ ಹಿಂದೂಗಳು ರಾಮ ಮಂದಿರವನ್ನ ಬಾಬ್ರಿ ಮಸೀದಿಯ ಜಾಗದಲ್ಲಿ ನೋಡಲು ಇಷ್ಟಪಡುವುದಿಲ್ಲ ಎಂದು ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಎಂದು ಹೇಳಿದ್ದಾರೆ.

    ಚೆನ್ನೈನಲ್ಲಿ ನಡೆದ “ದ ಹಿಂದೂ ಲಿಟ್ ಫಾರ್ ಲೈಫ್” ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ರಾಮಮಂದಿರ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ತರೂರ್, ಬಹುಸಂಖ್ಯಾತ ಹಿಂದೂಗಳು ಅಯೋಧ್ಯೆ ರಾಮ ಜನ್ಮ ಭೂಮಿ ಸ್ಥಳವೆಂದು ನಂಬಿರುತ್ತಾರೆ. ಆದರೆ ನಿಜವಾದ ಹಿಂದು ಬೇರೆಯವರ ಪೂಜಾ ಸ್ಥಳವನ್ನ ಧ್ವಂಸ ಮಾಡಿದ ಜಾಗದಲ್ಲಿ ರಾಮ ಮಂದಿರವನ್ನ ನೋಡಲು ಇಷ್ಟ ಪಡುವುದಿಲ್ಲ ಎಂದು ಉತ್ತರಿಸಿದ್ದಾರೆ.

    ಈ ಹೇಳಿಕೆಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದ್ದಂತೆ ತರೂರ್, ಸಾಹಿತ್ಯ ಉತ್ಸವಲ್ಲಿ ಕೇಳಿದ ಪ್ರಶ್ನೆಗೆ ಪ್ರತ್ಯುತ್ತರವಾಗಿ ನಾನು ಈ ಹೇಳಿಕೆಯನ್ನ ನೀಡಿದ್ದು, ಇದು ನನ್ನ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಪ್ರತಿಕ್ರಿಯಿಸಿ, ಪ್ರತಿದಿನ ಪೂಜೆ ಮಾಡಲು ತಾತ್ಕಾಲಿಕವಾಗಿ ನಿರ್ಮಿಸಿರುವ ದೇವಾಲಯದ ಟೆಂಟ್ ಅನ್ನು ತೆಗೆದು ಹಾಕಬೇಕೆನ್ನುವುದು ಇವರ ವಾದವೇ? ಇದೂವರೆಗೂ ಯಾರು ಈ ರೀತಿಯ ಬೇಡಿಕೆಯನ್ನು ಇಟ್ಟಿಲ್ಲ ಪ್ರಶ್ನಿಸಿದ್ದಾರೆ.

    ಕೆಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಅವರು, ನಿಜವಾದ ಹಿಂದುಗಳಿಗೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನ ನೋಡಲು ಬಯಸುವುದಿಲ್ಲ ಎಂದು ಹೇಳಿಕೆ ಕೊಟ್ಟಿರುವ ಶಶಿ ತರೂರ್ ರ ನೋಡಿ ನನಗೆ ಬಹಳ ಆಶ್ಚರ್ಯವಾಗಿದೆ. ನೈಜತೆಯಿಂದ ಎಷ್ಟು ದೂರವಿದ್ದಾರೆ ಎಂದು ಇದರಿಂದ ತಿಳಿಯುತ್ತೆ. ಇದು ಕೇವಲ ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಅವರ ನಿಲುವಾಗಿದ್ದು, ಜನರದ್ದಲ್ಲ. ಇವರೆಲ್ಲಾ ಚುನಾವಣೆಯ ಸಮಯದಲ್ಲಿ ಮಾತ್ರ ಹಿಂದೂಗಳಾಗಿರುತ್ತಾರೆ ಎಂದು ಟೀಕಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮಮಂದಿರ ನಿರ್ಮಾಣ ಖಚಿತ, ಸುಪ್ರೀಂ ಕೋರ್ಟ್ ನಮ್ಮದೇ: ಯುಪಿ ಸಚಿವ

    ರಾಮಮಂದಿರ ನಿರ್ಮಾಣ ಖಚಿತ, ಸುಪ್ರೀಂ ಕೋರ್ಟ್ ನಮ್ಮದೇ: ಯುಪಿ ಸಚಿವ

    ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂತ್ರಿಮಂಡಲದ ಸಚಿವರೊಬ್ಬರು ಅಯೋಧ್ಯೆ ರಾಮಮಂದಿರ ನಿರ್ಮಾಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಸಹಕಾರ ಸಚಿವ ಮುಕುಟ್ ಬಿಹಾರಿ ವರ್ಮಾ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಸುಪ್ರೀಂ ಕೋರ್ಟ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇನ್ನು ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಲಿದೆ ಎಂದು ಅರಿತ ಸಚಿವರು, ಹೇಳಿಕೆಗೆ ಸ್ಪಷ್ಟನೆ ನೀಡಿದರು.

    ಸಚಿವ ಮುಕುಟ್ ಹೇಳಿದ್ದು ಏನು?
    ಮಾಧ್ಯಮಗಳ ಜೊತೆ ಮಾತನಾಡಿದ ಸಹಕಾರ ಸಚಿವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ. ಅಭಿವೃದ್ಧಿಯ ಉದ್ದೇಶದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಅಯೋಧ್ಯೆದಲ್ಲಿ ರಾಮಮಂದಿರ ನಿರ್ಮಾಣವೇ ನಮ್ಮ ಪ್ರಮುಖ ಗುರಿಯಾಗಿದೆ. ಈ ವಿವಾದವು ಈಗ ನ್ಯಾಯಾಲಯದಲ್ಲಿದ್ದು, ಸುಪ್ರೀಂ ಕೋರ್ಟ್ ನಮ್ಮದೆ. ದೇಶದ ನ್ಯಾಯಾಂಗ, ಆಡಳಿತ, ರಾಷ್ಟ್ರ ಹಾಗೂ ರಾಮ ಮಂದಿರ ನಮಗೆ ಸೇರಿದ್ದು ಎಂದು ಸಚಿವರು ಹೇಳಿದ್ದಾರೆ.

    ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಎಚ್ಚೆತ್ತುಕೊಂಡ ಸಚಿವರು, ಸುಪ್ರೀಂ ಕೋರ್ಟ್ ನಮ್ಮದೆ ಎಂದರೆ, ಸುಪ್ರೀಂ ಕೋರ್ಟ್ ನಮ್ಮ ಸರ್ಕಾರಕ್ಕೆ ಸೇರಿದೆ ಎಂದರ್ಥವಲ್ಲ. ಅದು ದೇಶದ ಪ್ರತಿಯೊಬ್ಬ ಜನತೆಗೆ ಸೇರಿದೆ ಎನ್ನುವುದಾಗಿ ನಾನು ಹೇಳಿರುವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಳ್ಮೆಯಿಂದಿರಿ, ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣಕ್ಕೆ ಬದ್ಧ: ಯೋಗಿ ಆದಿತ್ಯನಾಥ್

    ತಾಳ್ಮೆಯಿಂದಿರಿ, ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣಕ್ಕೆ ಬದ್ಧ: ಯೋಗಿ ಆದಿತ್ಯನಾಥ್

    ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣ ಮಾಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಸೋಮವಾರ ಅಯೋಧ್ಯೆಯಲ್ಲಿ ನಡೆದ `ಸಂತ ಸಮ್ಮೇಳನದಲ್ಲಿ’ ಪಾಲ್ಗೊಂಡ ಅವರು, 2019ರ ಲೋಕಸಭಾ ಚುನಾವಣೆಯೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ. ನಾವು ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ನ್ಯಾಯಾಂಗ, ಶಾಸಕಾಂಗ ತಮ್ಮದೇ ಆದ ಅಧಿಕಾರವನ್ನು ಹೊಂದಿವೆ. ಆದ್ದರಿಂದ ಇವುಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ. ಸಾಧು-ಸಂತರು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಡಿ ಎಂದು ಹೇಳಿದ್ದಾರೆ.

    ಮರ್ಯಾದಾ ಪುರುಷೋತ್ತಮ ಶ್ರೀರಾಮ ಬ್ರಹ್ಮಾಂಡದ ಒಡೆಯನಾಗಿದ್ದಾನೆ. ಅವನ ದಯೆಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ಶತಸಿದ್ಧ. ಇದರ ಬಗ್ಗೆ ಯಾವುದೇ ಗೊಂದಲವಿಲ್ಲ. ಈ ಬಗ್ಗೆ ಸಾಧು-ಸಂತರಲ್ಲಿ ಅನುಮಾನವಿದ್ದು, ಪ್ರಪಂಚವು ಆಶಾವಾದದ ಮೇಲೆ ನಿಂತಿದೆ. ಆದ್ದರಿಂದ ಎಲ್ಲರೂ ಸ್ವಲ್ಪ ಸಮಯದವರೆಗೆ ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ಪ್ರಕರಣ – ಅಡ್ವಾಣಿ, ಉಮಾಭಾರತಿ ಸೇರಿ 12 ಮಂದಿಗೆ ಜಾಮೀನು

    ಬಿಜೆಪಿಯ ಮಾಜಿ ಸಂಸದ ರಾಮ್ ವಿಲಾಸ್ ವೆಂದಾತಿಯವರು ಹೇಳಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಮೊಗಲ್ ಚಕ್ರವರ್ತಿ ಬಾಬರನು ಯಾವುದೇ ಹಿಂದೂ ದೇವಾಲಯಗಳನ್ನು ಕೆಡವಲು ಯಾವ ನ್ಯಾಯಾಲಯಗಳ ಅಪ್ಪಣೆ ಕೇಳಿದ್ದಿಲ್ಲ. ಹೀಗಾಗಿ ನ್ಯಾಯಾಲಯದ ಅಪ್ಪಣೆ ಕೇಳದೆ 1992ರಲ್ಲಿ ಬಾಬ್ರಿ ಮಸೀದಿಯನ್ನು ಒಡೆದು ಹಾಕಲಾಗಿದೆ. ಅಲ್ಲದೇ ಸ್ಥಳದಲ್ಲಿ ಸಿಕ್ಕ ರಾಮನ ಮೂರ್ತಿಯಿಂದ ಪ್ರೇರೇಪಣೆಗೊಂಡು ಒಂದೇ ದಿನದಲ್ಲಿ ದೇವಾಲಯ ನಿರ್ಮಾಣಕ್ಕೆ ಮುಂದಾದ ವಿಚಾರವನ್ನು ಪ್ರಸ್ತಾಪಿಸಿದ್ರು. ಇದನ್ನೂ ಓದಿ: ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಇದೇ ವೇಳೆ ವಿಶ್ವ ಹಿಂದೂ ಪರಿಷತ್ ರಾಮ ಮಂದಿರ ನಿರ್ಮಾಣ ಕುರಿತು ಪ್ರಸ್ತಾಪಿಸಿ, ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ರಾಮ ಮಂದಿರ ವಿಚಾರವಾಗಿ ಸುಪ್ರೀಂ ಕೋರ್ಟ್ ಯಾವುದೇ ತೀರ್ಮಾನ ತೆಗೆದುಕೊಳ್ಳದಿದ್ದರೆ, ಭವಿಷ್ಯದ ಉಳಿವಿಗಾಗಿ ಮತ್ತೊಮ್ಮೆ ರಾಮಮಂದಿರ ನಿರ್ಮಾಣ ಚಳುವಳಿಯನ್ನು ಪ್ರಾರಂಭಿಸಬೇಕೆಂದು ಸಾಧು-ಸಂತರಿಗೆ ಕರೆ ನೀಡಿದ್ರು. ಇದೇ ಗುರುವಾರ ರಾಮಮಂದಿರ ಹಾಗೂ ಬಾಬ್ರಿ ಮಸೀದಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ಮುಂದುವರೆಯಲಿದೆ. ಈ ಮೊದಲು ನಡೆದ ವಿಚಾರಣೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಶಂಕೆ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರುಗಳಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ಇನ್ನೂ ಅನೇಕ ಮುಖಂಡರನ್ನು ಕೋರ್ಟ್ ವಿಚಾರಣೆ ನಡೆಸಿತ್ತು. ಇದನ್ನೂ ಓದಿ:ರಾಮಮಂದಿರ ಕಟ್ಟೋವರೆಗೂ ನಿದ್ರಿಸಬೇಡಿ, ನಾನೂ ನಿದ್ರಿಸಲ್ಲ- ಪೇಜಾವರ ಶ್ರೀ

  • ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಉಡುಪಿ/ಮೈಸೂರು: ಮೋದಿ ಸರ್ಕಾರದ ಅವಧಿ ಮುಗಿಯುವ ಮೊದಲೇ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುವ ನಿರ್ಣಯವನ್ನು ಧರ್ಮ ಸಂಸದ್ ನಲ್ಲಿ ಕೈಗೊಳ್ಳಲಾಗಿದೆ.

    ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ 2019 ರ ಒಳಗಡೆ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವ ನಿರ್ಧಾರವನ್ನು ಈ ಧರ್ಮಸಂಸದ್ ನಲ್ಲಿ ಕೈಗೊಳ್ಳಲಾಗಿದೆ ಎಂದು ವಿಎಚ್‍ಪಿ ಮೂಲಗಳು ತಿಳಿಸಿವೆ.

    ರಾಮಮಂದಿರ ನಿರ್ಮಾಣವಾಗಲಿರುವುದರಿಂದಲೇ ಮುಂದಿನ ಧರ್ಮ ಸಂಸದ್ ಆಯೋಧ್ಯೆಯನ್ನು ನಡೆಸಲು ವಿಎಚ್‍ಪಿ ಈಗಾಗಲೇ ನಿಶ್ಚಯಿಸಿದೆ. ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾದ ಹಿನ್ನೆಲೆಯಲ್ಲಿ 2019 ರ ಒಳಗಡೆ ಮಂದಿರ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ಈ ಧರ್ಮ ಸಂಸದ್‍ನಲ್ಲಿ ವ್ಯಕ್ತವಾಗಿದೆ.

    ಈಗಾಗಲೇ ಹೋರಾಟಗಳು ಪೂರ್ಣವಾಗಿದ್ದು, ಈಗ ಅಂತಿಮ ಹೋರಾಟದಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ ಜಾತಿ, ಮತದ ಭೇದ ಬಿಟ್ಟು, ಎಲ್ಲರೂ ಒಟ್ಟಾಗಿ ರಾಮನ ಸೈನಿಕರಾಗಿ ಮುಂದುವರಿಯಬೇಕು ಎಂದು ಚಿನ್ಮಯಾನಂದಜಿ ಮಹಾರಾಜ್ ತಿಳಿಸಿದ್ದರು.

    4 ತಿಂಗಳಿನಲ್ಲಿ ಪ್ರಕರಣ ಇತ್ಯರ್ಥ: ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ವಿರಾಟ್ ಹಿಂದೂಸ್ಥಾನ್ ಸಂಗಮ ಸಂಘಟನೆ ಶನಿವಾರ ಆಯೋಜಿಸಿದ್ದ ರಾಮಮಂದಿರ ಮುಂದಿನ ನಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಿಜೆಪಿ ಮುಖಂಡ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಮುಂದಿನ 4 ತಿಂಗಳಲ್ಲಿ ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ಪ್ರಕರಣ ಇತ್ಯರ್ಥವಾಗಲಿದೆ ಎಂದು ಹೇಳಿದ್ದಾರೆ.

    ಮುಂದಿನ ದೀಪಾವಳಿ ವೇಳೆಗೆ ಸುಪ್ರೀಂಕೋರ್ಟ್ ಆದೇಶ ಬರಲಿದೆ. ಬಹುಶಃ ರಾಮಮಂದಿರ ನಿರ್ಮಾಣ ವಿಷಯವನ್ನು ದೀಪಾವಳಿಯಲ್ಲಿ ಆಚರಿಸಬಹುದು. ಜನವರಿ ಫೆಬ್ರವರಿಯಲ್ಲಿ ನ್ಯಾಯಾಲಯದಲ್ಲಿ ನಡೆಯುವ ನನ್ನ ವಾದ ಬರಿ ಉತ್ತರವಾಗುವುದಿಲ್ಲ. ರಾಮಮಂದಿರಕ್ಕಾಗಿ ಅದು ನನ್ನ ಬ್ರಹ್ಮಾಸ್ತ್ರ ಎಂದು ತಿಳಿಸಿದರು.

    ಅಯೋಧ್ಯೆಯಲ್ಲಿ 21 ಮಸೀದಿಗಳಿವೆ. ಅಲ್ಲಿಗೆ ಯಾರು ಸಹ ನಮಾಜ್ ಮಾಡಲು ಹೋಗುವುದೇ ಇಲ್ಲ. ಆದರೆ ರಾಮಮಂದಿರ ಇದ್ದ ಜಾಗದಲ್ಲಿ ಮಾತ್ರ ನಮಾಜ್‍ಗೆ ಹೋಗುತ್ತಾರೆ. ರಾಮಮಂದಿರ ಇದ್ದ ಜಾಗದಲ್ಲಿ ದೇವಾಲಯ ಇತ್ತು ಅಂತ ಸಾಕ್ಷಿಗಳೇ ಹೇಳಿವೆ. ದಾಖಲೆಗಳೇ ರಾಮಮಂದಿರವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

    ದೇವಾಲಯ ಹಾಗೂ ಮಸೀದಿ ಒಂದೇ ಅಲ್ಲ. ಮಸೀದಿಯಲ್ಲಿ ಮಾತ್ರ ನಮಾಜ್ ಮಾಡಬೇಕೆಂದಿಲ್ಲ. ನಮಾಜ್ ಅನ್ನು ಎಲ್ಲಿ ಬೇಕಾದರೂ ಮಾಡಬಹುದು. ಇಸ್ಲಾಮ್ ನಲ್ಲಿ ನಮಾಜ್‍ಗೆ ಕಡ್ಡಾಯ ಸ್ಥಳ ನಿಗದಿ ಮಾಡಿಲ್ಲ. ರಸ್ತೆ, ಏರ್ ಪೋರ್ಟ್, ಕೋಣೆ ಎಲ್ಲಿ ಬೇಕಾದರೂ ಮಾಡಬಹುದು. ಆದರೆ ದೇವರನ್ನ ಎಲ್ಲಿ ಬೇಕಾದರೂ ಪೂಜಿಸಲು ಆಗುವುದಿಲ್ಲ ಎಂದರು.

    ಈ ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಹಿಂದೂ ಮುಖಂಡ ಜಗದೀಶ್ ಶೆಟ್ಟಿ. ಮಾಜಿ ರಾಮದಾಸ್, ನಟಿ ಮಾಳವಿಕ ಭಾಗಿಯಾಗಿದ್ದರು.

     

     

     

     

  • 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

    2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

    – ಧರ್ಮಸಂಸದ್ ನಲ್ಲಿ ರಾಮಮಂದಿರ ಕಹಳೆ
    – ಪರ್ಯಾಯ ನಂತರ ನಾನು ದೈಹಿಕವಾಗಿಯೂ ಹೊರಾಟಕ್ಕಿಳಿಯುತ್ತೇನೆಂದ ಪೇಜಾವರ ಶ್ರೀ

    ಉಡುಪಿ: ಬಾಬ್ರೀ ಮಸೀದಿ ಧ್ವಂಸವಾಗಿ 25 ವರ್ಷಗಳೇ ಕಳೆದಿವೆ. ಇನ್ನೂ ನಾವು ಕಾಯುವುದರಲ್ಲಿ ಅರ್ಥವಿಲ್ಲ. ಸಂಘ ಪರಿವಾರದ ಸ್ವಯಂ ಸೇವಕರು ತುಂಬಾ ಆಸೆಯಿಂದ ರಾಮ ಮಂದಿರ ಕಟ್ಟೋದು ಯಾವಾಗ ಅಂತಾ ಕೇಳ್ತಾರೆ. ಸ್ವಯಂ ಸೇವಕರ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗಿದೆ. ಒಂದು ವರ್ಷದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ. 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ಆರ್‍ಎಸ್‍ಎಸ್ ಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

    ರಾಮಮಂದಿರದ ವಿಜಯ ನಿಶ್ಚಿತವಾಗಿದ್ದು, ಹಿಂದೂ ದೇಶದ ದಿಗ್ಧರ್ಶನ ಉಡುಪಿಯಲ್ಲಿ ಆಗಿದೆ. ಧರ್ಮ ಸಂಸದ್ ನಂತರ ಹಿಂದೂ ಸಮಾಜ ಒಂದು ಹೆಜ್ಜೆ ಮುಂದಿಟ್ಟು, ನಮ್ಮ ಹೋರಾಟ ವಿಜಯದತ್ತ ಸಾಗಬೇಕಿದೆ. ಮಂದಿರದ ವಿಜಯ ಸಾಧಿಸದೇ ನಾವು ಸುಮ್ಮನೆ ಕೂರುವವರಲ್ಲ. ಸಾಮಾಜಿಕ ಸಾಮರಸ್ಯ ನಮ್ಮ ಮೇಲೆ ಮಾತ್ರವಲ್ಲದೇ ಎಲ್ಲ ವರ್ಗಕ್ಕೂ ಸೀಮಿತವಾಗಬೇಕಿದೆ. ಗೋರಕ್ಷಣೆಯ ಮಹತ್ವದ ಜವಾಬ್ದಾರಿ ನಮ್ಮ ಮೇಲಿದ್ದು, ಗೋ ಹತ್ಯೆ ನಿಷೇಧ ಆಗುವರೆಗೂ ನಮಗೆಲ್ಲರಿಗೂ ನೆಮ್ಮದಿ ಇಲ್ಲ. ಮತಾಂತರ ನಿರಂತರವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಡಬೇಕಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

    ಆಯೋಧ್ಯೆಯಲ್ಲಿ ಬೇರೆ ಕಟ್ಟಡಗಳು ಬೇಡ: ಆಯೋಧ್ಯೆಯಲ್ಲಿ ರಾಮಮಂದಿರ ಮಾತ್ರ ನಿರ್ಮಾಣವಾಗಬೇಕು. ಅಲ್ಲಿ ಬೇರೆ ಯಾವುದೇ ಕಟ್ಟಡಗಳು ಬರಬಾರದು. ಅದೇ ಕಲ್ಲುಗಳಿಂದ ರಾಮಮಂದಿರ ಕಟ್ಟಲಾಗುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ, ಹಿಂದೂ ದೇಶ ವಿಶ್ವಗುರುವಾಗುವತ್ತ ಸಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುವುದು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು, ಎಲ್ಲರೂ ಜೈಕಾರ ಕೂಗಲು ಸಿದ್ಧರಾಗಿರಿ ಎಂದು ಭಾಗವತ್ ಹೇಳಿದ್ರು.

    ಸುತ್ತೂರು ಶ್ರೀಗಳು ಮಾತನಾಡಿ, ಧರ್ಮ ಸಂಸದ್ ನ ಆಶಯಗಳು ಈಡೇರಬೇಕಾದರೆ ಸಂತರ ನಿರ್ಣಯಗಳು ಶೀಘ್ರ ಅನುಷ್ಠಾನಕ್ಕೆ ಬರಬೇಕು. ಭಾರತ ವಿಜ್ಞಾನಿ-ತತ್ವಜ್ಞಾನಿಗಳ ದೇಶ, ಭಾರತದ ಸಂಸ್ಕೃತಿ- ಭಾಷೆ ಅನನ್ಯವಾದದ್ದು. ನಾವೀಗ ನ್ಯೂಕ್ಲಿಯರ್ ಯುಗದಲ್ಲಿದ್ದೇವೆ. ಮಾತಿನಲ್ಲಿ ಬಗೆಹರಿಯುವ ವಿಚಾರ ಯುದ್ಧಕ್ಕೆ ತಿರುಗುತ್ತಿದೆ. ಅಸ್ಪೃಶ್ಯತೆ, ಜಾತಿಪದ್ಧತಿ ಹಿಂದೂ ಧರ್ಮದಿಂದ ದೂರವಾಗಿ ಮಹಿಳೆಯರ ಸ್ಥಿತಿ ಬದಲಾಗಬೇಕು ಎಂದರು.

    ಇದೇ ವೇಳೆ ಪೇಜಾವರ ಶ್ರೀಗಳು ಮಾತನಾಡಿ, ಇದು ಧರ್ಮ ಸಂಸದ್ ಮಾತವಲ್ಲ, ಕ್ಷೀರ ಸಮುದ್ರದ ಮಂಥನವಾಗುತ್ತಿದೆ. ಅಸ್ಪೃಶ್ಯತೆ ಎಂಬುದು ಕಾಲಕೂಟ ವಿಷ ಸರ್ಪ. ಅದರ ಉಚ್ಛಾಟನೆ ಮೊದಲು ಹಿಂದೂಗಳಲ್ಲಿ ಆಗಬೇಕಿದೆ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಒಂದು ನಿಯಮ, ಬಹುಸಂಖ್ಯಾತರಿಗೆ ಬೇರೆಯೇ ಕಾನೂನುಗಳಿವೆ. ಜಾತ್ಯಾತೀತ ಪಕ್ಷಗಳು ಸಮಾಜವನ್ನು ಒಡೆಯುತ್ತಿದ್ದು ಭಾರತದ ಸಂವಿಧಾನ ಬದಲಾಗಬೇಕಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ತರುವ ಸರ್ಕಾರ ಬರಬೇಕಿದೆ. 2019 ರೊಳಗೆ ರಾಮ ಮಂದಿರ ಆಗೋದು ನಿಶ್ಚಿತವಾಗಿದೆ. ದೇಶ ರಾಮಮಂದಿರ ನಿರ್ಮಾಣದ ವಾತಾವರಣವನ್ನು ಹೊಂದಿದೆ. ರಾಮಮಂದಿರ ನಿರ್ಮಾಣ ವಿಚಾರಕ್ಕೆ ಕೃಷ್ಣನ ಅನುಗ್ರಹವಿದೆ. ಪರ್ಯಾಯ ನಂತರ ನಾನು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಹೋರಾಟಕ್ಕೆ ಇಳಿಯುತ್ತೇನೆ ಎಂದು ಸ್ಪಷ್ಟನೆ ನೀಡಿದರು.