Tag: ರಾಮ ಮಂದಿರ

  • ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಕೈಗೊಂಡಿದ್ದ 11 ದಿನಗಳ ವ್ರತದ ಟೀಕೆಗೆ ಮೋದಿ ಉತ್ತರ

    ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಕೈಗೊಂಡಿದ್ದ 11 ದಿನಗಳ ವ್ರತದ ಟೀಕೆಗೆ ಮೋದಿ ಉತ್ತರ

    – ತಮ್ಮ ವಿವಿಧ ಧಿರಿಸಿನ ಬಗ್ಗೆ ವ್ಯಂಗ್ಯವಾಡಿದವರಿಗೆ ತಿರುಗೇಟು

    ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ 11 ದಿನಗಳ ಕಾಲ ನರೇಂದ್ರ ಮೋದಿಯವರು ವ್ರತದಲ್ಲಿದ್ದರು. ಪ್ರಧಾನಿಗಳ ಈ ಕ್ರಮಕ್ಕೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದವು. ಈ ಟೀಕೆಗಳಿಗೆ ಮೋದಿಯವರು ಇಂದು ತಕ್ಕ ಉತ್ತರ ಕೊಟ್ಟಿದ್ದಾರೆ.

    ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ರಾಮಮಂದಿರಕ್ಕೆ ರಾಜಕೀಯ ತಿರುವು ಕೊಟ್ಟ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಪ್ರಧಾನಿಯವರು, ಈ ಪ್ರಕರಣದ ಇತ್ಯರ್ಥಕ್ಕೆ ಸಾಕಷ್ಟು ಅವಕಾಶಗಳಿದ್ದವು. ಇದು 500 ವರ್ಷಗಳ ನಿರಂತರ ಹೋರಾಟ, ಬಲಿದಾನ, ಕಾನೂನು ಹೋರಾಟವಾಗಿತ್ತು. ಕೆಲವರಿಗೆ ಮತಬ್ಯಾಂಕ್ ಗಾಗಿ ಇದೊಂದು ಅಸ್ತ್ರವಾಗಿತ್ತು. ಮಂದಿರ ನಿರ್ಮಾಣ ಮಾಡಿದ್ರೆ ಸಮಸ್ಯೆ ಎಂದು ಹೆಸರಿಸಲಾಯಿತು. ಇಂದು ನಾವು ಮಂದಿರ ನಿರ್ಮಾಣ ಮಾಡಿದೆವು, ಏನಾಯಿತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಳನೀರು ಸೇವನೆ, ನೆಲದಲ್ಲೇ ನಿದ್ದೆ, ಸಾತ್ವಿಕ ಆಹಾರ- ರಾಮನ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿ ಕಠಿಣ ವ್ರತ

    ಇದು ನನಗೆ ಇವೆಂಟ್‌ ಆಗಿರ್ಲಿಲ್ಲ: ರಾಮ ಮಂದಿರ ಉದ್ಫಾಟನೆಗೂ ಮುನ್ನ ವೃತ ಆರಂಭಿಸಿದೆ. ರಾಮ ಎಲ್ಲೆಲ್ಲಿ ಹೋಗಿದ್ದರು ನಾನು ಅಲ್ಲಿಗೆ ಹೋಗಲು ಪ್ರಯತ್ನಿಸಿದೆ. ದಕ್ಷಿಣ ಭಾರತದಲ್ಲೂ ಶ್ರೀರಾಮನ ಬಗ್ಗೆ ಅಪಾರ ಪ್ರೀತಿ ಇದೆ. ಅವರ ಭಾವನೆಯಲ್ಲಿ ನನಗೆ ಅರಿವಾಗುತ್ತಿತ್ತು. ಈ 11 ದಿನಗಳ ಬಹಳಷ್ಟು ಗಂಭೀರವಾಗಿ ಪರಿಗಣಿಸಿದ್ದೆ. ಇದು ನನಗೆ ಇವೆಂಟ್ ಆಗಿರಲಿಲ್ಲ ಎಂದು ಟೀಕೆಗಳಿಗೆ ಮೋದಿ ತಕ್ಕ ಉತ್ತರ ಕೊಟ್ಟರು. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?

    ರಾಮ ಮಂದಿರದ ಆಹ್ವಾನವನ್ನು ತಿರಸ್ಕರಿಸಲಾಯಿತು. ಇದನ್ನು ಹೆಮ್ಮೆ ಪಡೆಬೇಕಿತ್ತು. ಆದರೆ ಮತಬ್ಯಾಂಕ್ ಅವರಿಗೆ ಅನಿವಾರ್ಯವಾಗಿತ್ತು. ರಾಮ ಮಂದಿರ ಮುಂದಿನ ಪೀಳಿಗೆಗೆ ಪ್ರೇರಣೆ ಎಂದು ಪ್ರಧಾನಿ ಮೋದಿ (Narendra Modi) ಹೇಳಿದರು. ಇದನ್ನೂ ಓದಿ: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?

    ಧಿರಿಸಿನ ವ್ಯಂಗ್ಯಕ್ಕೆ ತಿರುಗೇಟು: ನಾನು ಯಾವ ರಾಜ್ಯಕ್ಕೆ ಹೊಗ್ತೀನೋ ಅಲ್ಲಿಯ ಜನರು ಪ್ರೀತಿಯಿಂದ ಅಲ್ಲಿನ ಧಿರಸು ಧರಿಸಲು ನೀಡುತ್ತಾರೆ. ಆದರೆ ಇದನ್ನೂ ವ್ಯಂಗ್ಯ ಮಾಡುತ್ತಾರೆ. ಇಷ್ಟು ದ್ವೇಷ ಹರಡುವುದು ಒಳಿತಲ್ಲ ಎಂದು ವಿರೋಧಿಗಳ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು.

  • ರಾಮ ಭಕ್ತರಿದ್ದ ರೈಲಿಗೆ ಬೆದರಿಕೆ – ಬಂಧಿತ ವ್ಯಕ್ತಿ ಸಿ ಗ್ರೂಪ್‌ ನೌಕರ

    ರಾಮ ಭಕ್ತರಿದ್ದ ರೈಲಿಗೆ ಬೆದರಿಕೆ – ಬಂಧಿತ ವ್ಯಕ್ತಿ ಸಿ ಗ್ರೂಪ್‌ ನೌಕರ

    ಬೆಂಗಳೂರು: ಹೊಸಪೇಟೆಯಲ್ಲಿ (Hosapete) ರಾಮ ಭಕ್ತರಿಂದ ರೈಲಿಗೆ (Indian Railways) ಬೆಂಕಿ ಹಚ್ಚುತ್ತೇನೆಂದು ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಶೇಖ್ ಸಾಬ್ ಬಂಧಿತ ಆರೋಪಿ. ಈತ ರೈಲ್ವೇಯಲ್ಲಿ ಗ್ರೂಪ್ ಸಿ (Group C) ನೌಕರನಾಗಿದ್ದಾನೆ ಎಂದು ಪಬ್ಲಿಕ್ ಟಿವಿಗೆ ರೈಲ್ವೇಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಒಕ್ಕಲಿಗ ಸಚಿವರ ನಡುವೆ ಕೋಲ್ಡ್ ವಾರ್!

     

    ಶೇಖ್ ಸಾಬ್ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಲು ಅಯೋಧ್ಯಾ ಧಾಮ್ (Ayodhya Dham) ರೈಲಿನಿಂದ ಹೊಸಪೇಟೆ ಗುಂತಕಲ್‌ ರೈಲಿಗೆ ಹೋಗಲು ಯತ್ನಿಸಿದ್ದಾನೆ. ಈ ವೇಳೆ ರಾಮಭಕ್ತರಿಗೂ ಆತನಿಗೂ ಮಾತಿಗೆ ಮಾತು ಬೆಳೆದಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಕ್ಬರ್‌, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್‌ ಸೂಚನೆ

    ಏನಿದು ಘಟನೆ?
    ಮೈಸೂರಿನಿಂದ ಅಯೋಧ್ಯೆಗೆ ತೆರಳಿದ್ದ ರಾಮ ಭಕ್ತರು ಮರಳಿ ರೈಲಿನಲ್ಲಿ ಮೈಸೂರಿಗೆ ಬರುತ್ತಿದ್ದರು. ಈ ವೇಳೆಯಲ್ಲಿ ರಾಮ ಭಕ್ತರು ಮಾರ್ಗದುದ್ದಕ್ಕೂ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ. ಅಯೋಧ್ಯೆಯಿಂದ ಮೈಸೂರಿಗೆ ಬರುತ್ತಿದ್ದ ರೈಲು ಹೊಸಪೇಟೆಯಲ್ಲಿ ನಿಂತಾಗ ನಾಲ್ಕು ಮಂದಿ ಅನ್ಯಕೋಮಿನ ಯುವಕರು ರಾಮ ಭಕ್ತರ ಜೊತೆಯಲ್ಲಿ ವಾಗ್ವಾದ ಆರಂಭ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಅನ್ಯ ಕೋಮಿನ ಯುವಕರಲ್ಲಿ ಓರ್ವ ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿದ್ದಾನೆ. ಇದರಿಂದ ಕೆರಳಿದ ರಾಮ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ರೈಲು ಎರಡು ಗಂಟೆ ತಡವಾಗಿ ಹೊಸಪೇಟೆಯಿಂದ ಹೊರಟಿದೆ.

     

  • ಪಬ್ಲಿಕ್‌ ಟಿವಿಗೆ ದ್ವಾದಶಿ ಸಂಭ್ರಮ – ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರಿಗೆ ಅಭಿನಂದನೆ

    ಪಬ್ಲಿಕ್‌ ಟಿವಿಗೆ ದ್ವಾದಶಿ ಸಂಭ್ರಮ – ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರಿಗೆ ಅಭಿನಂದನೆ

    ಬೆಂಗಳೂರು: ದಿನದ 24 ಗಂಟೆಯೂ ಜಗತ್ತಿನ ಆಗುಹೋಗುಗಳನ್ನು ನಿಮ್ಮ ಮನೆಯಂಗಳಕ್ಕೆ ತಲುಪಿಸುವ ಧಾವಂತದಲ್ಲೇ ಇರುವ ಪಬ್ಲಿಕ್ ಟಿವಿ (PUBLiC TV) ಪರಿವಾರದಲ್ಲಿ ಇಂದು ಹಬ್ಬದ ಸಂಭ್ರಮ. ಸುದ್ದಿಲೋಕದ ಲೆಕ್ಕವಿಲ್ಲದಷ್ಟು ಜಂಜಾಟಗಳ ಮಧ್ಯೆ ಮತ್ತೊಂದು ವರುಷ ಕಳೆದದ್ದು ಗೊತ್ತಾಗಲೇ ಇಲ್ಲ. ಪಬ್ಲಿಕ್ ಟಿವಿಗೆ 12 ವರ್ಷ ತುಂಬಿದ್ದರೆ ಪಬ್ಲಿಕ್ ಮೂವೀಸ್‌ಗೂ ಇಂದು 6ರ ಸಡಗರ. ಈ ಸಡಗರವನ್ನು ಇಂದು ಪಬ್ಲಿಕ್‌ ಟಿವಿ ಕಚೇರಿಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರನ್ನು (Kannadigas) ಗೌರವಿಸುವ ಮೂಲಕ ಅಭಿನಂದಿಸಲಾಯಿತು.

     
    ರಾಮ ಲಲ್ಲಾನ ಪರ ಹಿಂದೆ ಅಲಹಾಬಾದ್ ಹೈಕೋರ್ಟ್​​ನಲ್ಲಿ ವಾದ ಮಂಡನೆ ಮಾಡಿದ್ದ ಕನ್ನಡಿಗ, ಸುಪ್ರೀಂ ಕೋರ್ಟ್​ ಹಿರಿಯ ವಕೀಲ, ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎನ್ ಭಟ್, ಬಾಲರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ ಮೈಸೂರಿನ ಅರುಣ್‌ ಯೋಗಿರಾಜ್‌, ರಾಮನ ಮೂರ್ತಿಗೆ ಮೂಲವಾದ ಕೃಷ್ಣ ಶಿಲೆಯನ್ನು ನೀಡಿದ ಜಾಗದ ಮಾಲೀಕ ರಾಮದಾಸ್‌, ರಾಮಮೂರ್ತಿ ನಿರ್ಮಾಣ ಮಾಡಿದ ಗಣೇಶ್‌ ಭಟ್‌, ಅಡಿಪಾಯ ಹಾಕುವುದರಿಂದ ಹಿಡಿದು ಕೆತ್ತನೆವರೆಗೂ ಎಲ್ಲಾ ಕಲ್ಲುಗಳ ಪರೀಕ್ಷೆಯನ್ನು ಮಾಡಿದ ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ (ಎನ್‌ಐಆರ್‌ಎಂ) ಪ್ರಾಂಶುಪಾಲ ಡಾ.ರಾಜನ್‌ ಬಾಬು, ಮುಹೂರ್ತ ನೀಡಿದ ವಿಜಯೇಂದ್ರ ಶರ್ಮಾ, ದೇಗುಲದ ಲೈಟಿಂಗ್ ಹೊಣೆ ಹೊತ್ತ ರಾಜೇಶ್‌ ಶೆಟ್ಟಿ, ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ರಚಿಸಿದ ಗಜಾನನ ಶರ್ಮಾ, ಲೋಗೋ ವಿನ್ಯಾಸಗಾರ ರಮೇಶ್‌ ಜಿ ಅವರನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ, ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌, ಲಹರಿ ಕಂಪನಿಯ ಮುಖ್ಯಸ್ಥ ಮನೋಹರ್‌ ನಾಯ್ಡು ಅವರು ಅಭಿನಂದಿಸಿದರು.

    ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್‌ಆರ್‌ ರಂಗನಾಥ್‌ (HR Ranganath) ಅವರು, 12 ವರ್ಷದ ಹಿಂದೆ ಪಬ್ಲಿಕ್‌ ಟಿವಿ ಆರಂಭಗೊಂಡಾಗ ಉಳಿದುಕೊಳ್ಳುತ್ತಾ ಎಂದು ಪ್ರಶ್ನಿಸಿದಾಗ ಹಲವು ಮಂದಿ ಉಳಿದುಕೊಳ್ಳುತ್ತೆ ಎಂದು ಹೇಳುವ ಸ್ಟೇಜ್‌ನಲ್ಲಿ ಇರಲಿಲ್ಲ. ಆ ದಿನಮಾನಗಳನ್ನು ನೆನಪಿಸಿಕೊಂಡರೆ ಒಂದು ಮಾಯೆ ಥರ ಕಾಣುತ್ತದೆ. ಆ ದಿನಮಾನಗಳಲ್ಲಿ ಒಂದು ಭಯ ಇತ್ತು. ಆದರೆ ಈಗ ಆ ಭಯ ಇಲ್ಲ. ಯಾಕೆಂದರೆ ಕರ್ನಾಟಕ ನಾಡಿನ ಸಮಸ್ತ ಜನತೆ ನಮ್ಮ ಜೊತೆ ಇದ್ದಾರೆ ಎಂದರು.

    ನಾವು ಯಾವುದೇ ಬೆದರಿಕೆಗೆ ಬಗ್ಗಿಲ್ಲ, ಬಗ್ಗುವುದೂ ಇಲ್ಲ. ನ್ಯಾಯಪರವಾಗಿಯೇ ನಾವು ಇರುತ್ತೇವೆ. ಗೆಳೆತನಕ್ಕಾಗಿ ತಲೆಬಾಗಿದ್ದೇವೆ. ಆದರೆ ಭಯಕ್ಕೆ, ಬೆದರಿಕೆಗೆ ತಲೆ ಬಾಗಿಲ್ಲ. ಮುಂದೆಯೂ ನಾವು ಯಾರಿಗೂ ಬಗ್ಗುವುದಿಲ್ಲ ಎಂದು ಹೇಳಿದರು.

    ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪ್ರಹ್ಲಾದ್‌ ಜೋಷಿ, ಪ್ರಚಾರವೇ ಇಲ್ಲದೇ ಸಮಾಜಸೇವೆ ಮಾಡಿದ ಹಲವು ವ್ಯಕ್ತಿಗಳನ್ನು ತಮ್ಮ ಪಬ್ಲಿಕ್‌ ಹೀರೋ ಮೂಲಕ ರಂಗನಾಥ್‌ ಪರಿಚಯಿಸಿದ್ದಾರೆ. ಹಾಜಬ್ಬ ಅವರಿಗೆ ನಮ್ಮ ಸರ್ಕಾರ ಪದ್ಮಶ್ರೀ ನೀಡಿರಬಹುದು. ಆದರೆ ರಂಗನಾಥ್‌ ಅವರಿಂದ ಹಾಜಬ್ಬ ಮೊದಲು ರಾಜ್ಯಕ್ಕೆ ಪರಿಚಯವಾದರು. ಪಬ್ಲಿಕ್‌ ಹೀರೋ, ಬೆಳಕು ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಒಂದು ವೇಳೆ ನಾನು ಪಬ್ಲಿಕ್‌ ಹೀರೋ ನೋಡದೇ ಇದ್ದರೆ ಯೂಟ್ಯೂಬ್‌ ಮೂಲಕ ನಾನು ಕಾರ್ಯಕ್ರಮ ವೀಕ್ಷಣೆ ಮಾಡುತ್ತೇನೆ ಎಂದು ಹೇಳಿದರು.

  • ಸಂಸತ್ತಿನಲ್ಲಿ ಇಂದು ರಾಮ ಮಂದಿರ ಗೊತ್ತುವಳಿ: ಬಿಜೆಪಿ ಸಂಸದರಿಗೆ ವಿಪ್‌ ಜಾರಿ

    ಸಂಸತ್ತಿನಲ್ಲಿ ಇಂದು ರಾಮ ಮಂದಿರ ಗೊತ್ತುವಳಿ: ಬಿಜೆಪಿ ಸಂಸದರಿಗೆ ವಿಪ್‌ ಜಾರಿ

    ನವದೆಹಲಿ: ಇಂದಿನ ಲೋಕಸಭೆ (Lok Sabha) ಮತ್ತು ರಾಜ್ಯಸಭಾ (Rajya Sabha) ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ (BJP) ಸದಸ್ಯರಿಗೆ ವಿಪ್ (Whip) ಜಾರಿ ಮಾಡಲಾಗಿದೆ. ಅಯೋಧ್ಯೆಯ ರಾಮಮಂದಿರ (Ayodhya Ram Mandir) ನಿರ್ಮಿಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಭಿನಂದಿಸಿ ಸಂಸತ್ತಿನ ಉಭಯ ಸದನಗಳು ನಿರ್ಣಯ ಅಂಗೀಕರಿಸಲಿವೆ.

    ಬಿಜೆಪಿ ಸಂಸದ ಸತ್ಯಪಾಲ್‌ ಸಿಂಗ್‌ ಮತ್ತು ಶಿವಸೇನೆ ಸಂಸದ ಶ್ರೀಕಾಂತ್‌ ಅವರು ರಾಮಮಂದಿರದ ಬಗ್ಗೆ ಚರ್ಚೆ ಆರಂಭಿಸಲಿದ್ದಾರೆ. ವಿರೋಧ ಪಕ್ಷಗಳು ಈ ಚರ್ಚೆಗೆ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದು ಸದ್ಯದ ಕುತೂಹಲ. ರಾಮನು ಭಾರತದ ಸಂಕೇತ, ರಾಮ ಭಾರತದ ಸಂಸ್ಕೃತಿಯ ಪ್ರತೀಕ, ರಾಮ ಏಕ ಭಾರತ ಶ್ರೇಷ್ಠ ಭಾರತದ ಪ್ರತೀಕ ಎಂಬ ನಿರ್ಣಯಗಳು ಅಂಗೀಕಾರವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕೇಂದ್ರ ಸಚಿವರನ್ನು ಭೇಟಿಯಾದ 6 ವರ್ಷದ ʼರೈಲ್‌ ಮಂತ್ರಿʼ!

    ಯುಪಿಎ (UPA) ಅವಧಿ ಆರ್ಥಿಕ ವೈಫಲ್ಯದ ಬಗ್ಗೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಮಂಡಿಸಿದ ಶ್ವೇತ ಪತ್ರದ (White Paper) ಬಗ್ಗೆ ಇಂದು ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ.

    ಶುಕ್ರವಾರ ಅಂತ್ಯವಾಗಬೇಕಿದ್ದ ಬಜೆಟ್ ಅಧಿವೇಶನವನ್ನು ಕೇಂದ್ರ ಸರ್ಕಾರ ಒಂದು ದಿನ ವಿಸ್ತರಣೆ ಮಾಡಿದ್ದು, ಇದೀಗ ಕಲಾಪದ ಅಂತಿಮ ದಿನ ತನ್ನೆಲ್ಲಾ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ಕಡ್ಡಾಯವಾಗಿ ಕಲಾಪದಲ್ಲಿ ಹಾಜರಿರುವಂತೆ ವಿಪ್ ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಇಂದಿನ ಕಲಾಪದಲ್ಲಿ ಮೋದಿ ಸರ್ಕಾರದ ನಡೆಯತ್ತ ಕುತೂಹಲ ಕೆರಳಿಸುವಂತೆ ಮಾಡಿದೆ.

    ಬಜೆಟ್ ಅಧಿವೇಶನದ ಕೊನೆಯ ದಿನ ಅಂದರೆ ಇಂದು ಫೆಬ್ರವರಿ 10 ಕೆಲ ಪ್ರಮುಖ ಶಾಸಕಾಂಗ ವ್ಯವಹಾರಗಳ ಕುರಿತು ಸದನದಲ್ಲಿ ಚರ್ಚೆ ನಡೆಸಲಾಗುತ್ತದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಹಾಜರಾತಿ ಇರಬೇಕು ಎಂದು ಬಿಜೆಪಿ ಮುಖ್ಯ ಸಚೇತಕ ಲಕ್ಷ್ಮೀಕಾಂತ್ ಬಾಜ್‌ಪೇಯ್ ವಿಪ್ ಹೊರಡಿಸಿದ್ದಾರೆ.

    ಲೋಕಸಭಾ ಚುನಾವಣೆ ಅಖಾಡಕ್ಕಿಳಿಯುವ ಮೊದಲು ನಡೆಯುತ್ತಿರುವ ಕೊನೆಯ ಅಧಿವೇಶನ ಇದಾಗಿದೆ. ಹೀಗಾಗಿ ಪ್ರಧಾನಿ ಮೋದಿ ಸರ್ಕಾರ ಕೆಲ ಅಚ್ಚರಿ ನೀಡುವ ಸಾಧ್ಯತೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

  • ಶ್ರೀರಾಮ ಭಕ್ತಿಗೋಸ್ಕರ ಇರಬೇಕೇ ಹೊರತು ವೋಟಿಗೋಸ್ಕರ ಇರಬಾರದು: ದಿನೇಶ್ ಗುಂಡೂರಾವ್

    ಶ್ರೀರಾಮ ಭಕ್ತಿಗೋಸ್ಕರ ಇರಬೇಕೇ ಹೊರತು ವೋಟಿಗೋಸ್ಕರ ಇರಬಾರದು: ದಿನೇಶ್ ಗುಂಡೂರಾವ್

    ಬೆಂಗಳೂರು: ಶ್ರೀರಾಮ ಭಕ್ತಿಗೋಸ್ಕರ ಇರಬೇಕೇ ಹೊರತು ವೋಟಿಗೋಸ್ಕರ ಇರಬಾರದು. ಸ್ವಾರ್ಥಕ್ಕೋಸ್ಕರ ಶ್ರೀರಾಮನ ಬಳಸಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮದ ವಿಚಾರದಲ್ಲಿ ಅನಾವಶ್ಯಕ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ಬಹಳ ಕೆಲಸ ಮಾಡಿದೆ. ಒಂದು ದೇವಸ್ಥಾನ (Temple) ಮಾತ್ರ ಮುಖ್ಯ ಅಲ್ಲ, ಎಲ್ಲಾ ದೇವಸ್ಥಾನವೂ ಕೂಡ ಮುಖ್ಯ. ಧರ್ಮ ಎಲ್ಲರನ್ನೂ ಉಳಿಸುತ್ತಿದೆ. ಯಾರೋ ಒಬ್ಬರಿಂದ ಧರ್ಮ ಅಲ್ಲ. ಧರ್ಮ ಎಲ್ಲರನ್ನೂ ಒಳಗೊಳ್ಳಬೇಕು ಎಂದರು. ಇದನ್ನೂ ಓದಿ: ರಾಜ್ಯದ 21 ಅಧಿಕಾರಿಗಳಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ

    ಸ್ವಾರ್ಥಕ್ಕೋಸ್ಕರ ಶ್ರೀರಾಮನ ಬಳಸಬಾರದು. ಭಕ್ತಿ, ನಂಬಿಕೆ, ವಿಶ್ವಾಸದಿಂದ ಮಾಡಿದರೆ ಎಲ್ಲರೂ ಗೌರವಿಸುತ್ತಾರೆ. ಅಯೋಧ್ಯೆಗೆ (Ayodhya) ನಾವು ಹೋಗುವುದಕ್ಕೆ ಯಾರ ಪರ್ಮಿಷನ್ ಬೇಕಾಗಿಲ್ಲ. ಭವ್ಯವಾದ ರಾಮ ಮಂದಿರ ಕಟ್ಟಿದ್ದಾರೆ, ಅದನ್ನು ನೋಡಬೇಕು. ಅಯೋಧ್ಯೆಗೆ ಹೋಗುತ್ತೇವೆ ಎಂದು ನಾವು ಹೇಳಿಕೊಳ್ಳಬೇಕಿಲ್ಲ, ತೋರಿಸಿಕೊಳ್ಳಬೇಕಿಲ್ಲ. ರಾಮ ರಾಜ್ಯ ಅಂದ್ರೆ ಏನರ್ಥ? ಹಿಂಸೆ ಸೃಷ್ಟಿ ಮಾಡುವುದು, ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕುವುದು ಯಾವ ರಾಮ ರಾಜ್ಯದ ಪರಿಕಲ್ಪನೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಇಂದು ಭಾರತಕ್ಕೆ ಭೇಟಿ

    ಇನ್ನು ನಿಗಮ, ಮಂಡಳಿ ನೇಮಕಕ್ಕೆ ಸಚಿವರನ್ನು ಪರಿಗಣಿಸಿಲ್ಲ ಎಂಬ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಪಕ್ಷದ ತೀರ್ಮಾನ. ನಿಗಮ ಮಂಡಳಿಗೆ ಯಾರಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಡಬೇಕು ಎಂದು ಪಕ್ಷ ತೀರ್ಮಾನಿಸುತ್ತದೆ. ಎಲ್ಲರನ್ನೂ ಕೇಳಿಕೊಂಡು ಹಂಚಿಕೆ ಮಾಡೋದಿಲ್ಲ. ಪರಮೇಶ್ವರ್ ಅವರ ಅಭಿಪ್ರಾಯ ನೀಡಿದ್ದಾರೆ. ನನ್ನ ಸಲಹೆಯನ್ನೂ ನೀಡಿದ್ದೇನೆ. ನೇಮಕ ಸಂಬಂಧ ಸಿಎಂ, ಡಿಸಿಎಂ, ಉಸ್ತುವಾರಿಗಳು ಕುಳಿತು ಚರ್ಚಿಸುತ್ತಾರೆ ಎಂದರು. ಇದನ್ನೂ ಓದಿ: ತೆಲಂಗಾಣ ಅಧಿಕಾರಿಯ ಮನೆ, ಕಚೇರಿಗಳಿಗೆ ACB ದಾಳಿ- 100 ಕೋಟಿಗೂ ಅಧಿಕ ಆಸ್ತಿ ಪತ್ತೆ

    ಆದಷ್ಟು ಬೇಗ ನೇಮಕ ಮಾಡಬೇಕು ಎಂದು ಆಸಕ್ತಿ ಇದೆ.  ಆದರೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲರನ್ನೂ ತೃಪ್ತಿಪಡಿಸೋದು ಕಷ್ಟ. ಈ ಹಿಂದೆ ನಮ್ಮದೇ ಸರ್ಕಾರ ಇದ್ದಾಗ ವರ್ಷದ ನಂತರ ಹಂಚಿಕೆ ಮಾಡಲಾಗಿತ್ತು. ಈಗ ಆಕಾಂಕ್ಷಿಗಳು ಹೆಚ್ಚಾಗಿರುವ ಕಾರಣ ಸ್ವಲ್ಪ ತಡವಾಗುತ್ತಿದೆ. ಕೆಲವು ಕಡೆ ಸಚಿವರ ಹೆಸರು ಪ್ರಸ್ತಾಪವಾಗಿದೆ. ಗೆಲುವಿನ ಕಾರಣಕ್ಕೆ ಯಾರಿಗೇ ಸೂಚಿಸಿದರೂ ಸ್ಪರ್ಧಿಸಬೇಕಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳಿಂದ ಟೆಂಪಲ್ ರನ್

  • 11 ದಿನಗಳ ಕಾಲ ಮೋದಿ ಉಪವಾಸ ಮಾಡಿದ್ದೇ ಅನುಮಾನ: ವೀರಪ್ಪ ಮೊಯ್ಲಿ

    11 ದಿನಗಳ ಕಾಲ ಮೋದಿ ಉಪವಾಸ ಮಾಡಿದ್ದೇ ಅನುಮಾನ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಅಯೋಧ್ಯೆ (Ayodhya) ರಾಮಮಂದಿರ (Ram Mandir) ಲೋಕಾರ್ಪಣೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) 11 ದಿನಗಳ ಕಾಲ ಉಪವಾಸ (Fasting) ವ್ರತ ಮಾಡಿದ್ದೇ ಅನುಮಾನ ಎಂದು ಮಾಜಿ ಸಿಎಂ ವೀರಪ್ಪಮೊಯ್ಲಿ (Veerappa Moily) ಅನುಮಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಕಾಂಗ್ರೆಸ್ (Congress) ವತಿಯಿಂದ ಪ್ರತಿಭಟನೆ ನಡೆಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರೀ ಎಳನೀರು ಕುಡಿದು ಉಪವಾಸ ಮಾಡಿದ್ರೆ ಮನುಷ್ಯ ಒಂದೆರೆಡು ದಿನದಲ್ಲಿ ಕೆಳಗೆ ಬೀಳುತ್ತಾನೆ. 11 ದಿನಗಳ ಕಾಲ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿಯವರು ಬೀದಿ ಬೀದಿಯಲ್ಲಿ ರಾಮನನ್ನು ಆಟ ಆಡಿಸಿದ್ದಾರೆ: ಮಧು ಬಂಗಾರಪ್ಪ

    ನಾನು ಬೆಳಗ್ಗೆ ವಾಕಿಂಗ್ ಮಾಡಬೇಕಾದರೆ ವೈದ್ಯರ ಬಳಿ ಈ ಬಗ್ಗೆ ಚರ್ಚೆ ಮಾಡಿದೆ. ವೈದ್ಯರ ಅಭಿಪ್ರಾಯದ ಪ್ರಕಾರ ಮನುಷ್ಯ ಬದುಕೋದು ಅಸಾಧ್ಯ. ಹಾಗಾಗಿ ನರೇಂದ್ರ ಮೋದಿಯವರು ಉಪವಾಸ ವ್ರತ ಮಾಡಿರೋದು ಅನುಮಾನ. ಹಾಗೆ ಉಪವಾಸ ಮಾಡದೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ರೆ ಆ ಕ್ಷೇತ್ರಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ, ಅಯೋಧ್ಯೆಗೆ ಹೋಗಲ್ಲ: ಪ್ರಿಯಾಂಕ್ ಖರ್ಗೆ

  • ದೇವರನ್ನು ಗೊಂಬೆ ಎನ್ನುವ ಕಾಂಗ್ರೆಸ್ ಪಕ್ಷದ ಅವನತಿಗೆ ಈ ಹೇಳಿಕೆಯೇ ಅಡಿಗಲ್ಲು: ಆರ್.ಅಶೋಕ್

    ದೇವರನ್ನು ಗೊಂಬೆ ಎನ್ನುವ ಕಾಂಗ್ರೆಸ್ ಪಕ್ಷದ ಅವನತಿಗೆ ಈ ಹೇಳಿಕೆಯೇ ಅಡಿಗಲ್ಲು: ಆರ್.ಅಶೋಕ್

    ಬೆಂಗಳೂರು: ದೇವರನ್ನು ಆಟಿಕೆ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷ ಬಾಲಿಶತನ ತೋರಿದೆ. ಮಾತಿನಲ್ಲಿ ಹಿಡಿತವಿಲ್ಲದೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಕಾಂಗ್ರೆಸ್‌ನ (Congress) ಅವನತಿಗೆ ಅಡಿಗಲ್ಲಾಗಲಿದೆ. ಇದು ಮಾರಣಾಂತಿಕ ಕಲ್ಲಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಎಚ್ಚರಿಕೆ ನೀಡಿದ್ದಾರೆ.

    ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರಿಗೆ ರಾಮ, ಸೀತೆ ಎಲ್ಲರೂ ಟೂರಿಂಗ್ ಟಾಕೀಸ್ ಬೊಂಬೆಗಳಂತೆಯೇ ಕಾಣುತ್ತಾರೆ. ಹಿಂದೆ ಇವರೇ ರಾಮನನ್ನು ಕಾಲ್ಪನಿಕ ವ್ಯಕ್ತಿ, ಜನ್ಮ ಪ್ರಮಾಣ ಪತ್ರ ಇಲ್ಲ ಎಂದಿದ್ದರು. ಗುಜರಾತ್‌ನ ಸೋಮನಾಥ ದೇವಾಲಯ ಪುನರುಜ್ಜೀವನಗೊಂಡಾಗ ಅದಕ್ಕೆ ಪ್ರಧಾನಿ ನೆಹರು ಹೋಗಲಿಲ್ಲ. ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಂಡು, ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಗುಣ ಕಾಂಗ್ರೆಸ್‌ನ ರಕ್ತದಲ್ಲೇ ಇದೆ. ವಕೀಲರಾಗಿರುವ ಸಿಎಂ ಸಿದ್ದರಾಮಯ್ಯ ಅವರೇ ಸುಪ್ರಿಂ ಕೋರ್ಟ್ ತೀರ್ಪಿಗೆ ಬೆಲೆ ಕೊಡುವುದಿಲ್ಲ ಎನ್ನುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ತೆಲಂಗಾಣದಲ್ಲಿ 12,400 ಕೋಟಿ ಹೂಡಿಕೆ: ಅದಾನಿ ಗ್ರೂಪ್‌ ಘೋಷಣೆ

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿಮಾನ ನಿಲ್ದಾಣದ ಕಾರ್ಯಕ್ರಮದಲ್ಲಿ ಆರಾಮವಾಗಿ ಗೊರಕೆ ಹೊಡೆಯುತ್ತಿದ್ದರು. ಸಿದ್ದರಾಮಯ್ಯ ನಿದ್ರೆ ಮಾಡುವ ವ್ಯಂಗ್ಯಚಿತ್ರಗಳು ಹರಿದಾಡುತ್ತಿವೆ. ಆದರೆ ಪ್ರಧಾನಿ ಎಲ್ಲೂ ನಿದ್ರೆ ಮಾಡುವುದಿಲ್ಲ. ಮುಖ್ಯಮಂತ್ರಿ ಬರ ಪ್ರದೇಶಗಳಿಗೆ ಹೋಗಿ ಕೆಲಸ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ತಾವು ನಿದ್ರೆ ಮಾಡುವ ಚಿತ್ರವನ್ನು ಫ್ರೇಮ್ ಮಾಡಿಕೊಂಡು ಮನೆ ಮುಂದೆ ಹಾಕಿಕೊಳ್ಳಲಿ. ಇವರ ಹೆಸರೇ ನಿದ್ದೆರಾಮಯ್ಯ ಎಂದು ಬ್ರ‍್ಯಾಂಡ್ ಆಗಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮೂರ್ಖರಿಗೆ ಜನರು ಚಪ್ಪಾಳೆ ತಟ್ಟಬಾರದು- ಅನಂತ್ ಕುಮಾರ್ ವಿರುದ್ಧ ಸಿಎಂ ಕಿಡಿ

    ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಮಣಿಸಬೇಕಿದೆ. ಕಳೆದ ಏಳು ತಿಂಗಳಲ್ಲಿ ಕೊಲೆ, ಸುಲಿಗೆ ಹೆಚ್ಚಿದ್ದು, ಅಪರಾಧಿಗಳಿಗೆ ಪ್ರೀತಿ ತೋರಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ್ (DK Shivakumar) ಅವರೇ ಕುಕ್ಕರ್ ಬಾಂಬ್ ಸ್ಫೋಟ ಮಾಡಿದವರನ್ನು ಬ್ರದರ್ ಎಂದು ಹೇಳಿಕೊಳ್ಳುತ್ತಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವಾಪಸ್‌ನಂತಹ ಘಟನೆ ನಡೆಯುತ್ತಿದೆ. ಕಾಂಗ್ರೆಸ್‌ನ ಮೃದು ಧೋರಣೆಯಿಂದ ಅಪರಾಧಿಗಳು ಎದ್ದು ಕುಳಿತಿದ್ದಾರೆ. ಹಾನಗಲ್‌ನ ಅತ್ಯಾಚಾರ ಪ್ರಕರಣದಲ್ಲೂ ಕಠಿಣ ಕ್ರಮ ವಹಿಸಿಲ್ಲ. ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜ.18ರಂದು ಚಿಕ್ಕಬಳ್ಳಾಪುರದಲ್ಲಿ T20I ಲೀಗ್ – ಕಣದಲ್ಲಿ ಅಬ್ಬರಿಸಲಿದ್ದಾರೆ ಸಚಿನ್, ಯುವಿ, ಜಯಸೂರ್ಯ

    ಒಂದು ಕಡೆ ಡಿ.ಕೆ.ಶಿವಕುಮಾರ್, ಮತ್ತೊಂದು ಕಡೆ ಜಿ.ಪರಮೇಶ್ವರ್, ಇನ್ನೊಂದೆಡೆ ಸತೀಶ್ ಜಾರಕಿಹೊಳಿಗೆ ಜೈ ಎನ್ನುವ ಗ್ಯಾಂಗ್ ಇದೆ. ಅಭಿವೃದ್ಧಿಯ ಕಾರ್ಯ ಇಲ್ಲದೆ ಜನರು ರೊಚ್ಚಿಗೆದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮಗ ಶಾಸಕರೂ ಅಲ್ಲ. ಅವರು ತಂದೆಯ ಬಗ್ಗೆ ಕುರುಡು ಪ್ರೇಮ ತೋರಿಸಬೇಕಿಲ್ಲ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ: ವಾರದಲ್ಲಿ 4 ಬಾರಿ ವಿಮಾನ ಸಂಚಾರ ಆರಂಭ – ಜೋಶಿ ಮಾಹಿತಿ

    ಸರ್ಕಾರದ ಖಜಾನೆ ಖಾಲಿಯಾಗಿದ್ದು, ಎಲ್ಲಾ ಯೋಜನೆ ಮುಂದೂಡಲಾಗುತ್ತಿದೆ. ನೌಕರರ ವೇತನ ಹೆಚ್ಚಳ ಕೂಡ ಮಾಡಿಲ್ಲ. ಸರ್ಕಾರ ದಿವಾಳಿಯಾಗಿ ಜನರು ಇನ್ನಷ್ಟು ಕಷ್ಟ ಪಡಬೇಕಾಗುತ್ತದೆ. ಯುಪಿಎ ಸರ್ಕಾರವಿದ್ದಾಗ ಪರಿಹಾರ ಸಿಗಲು ಬಹಳ ತಡವಾಗಿದ್ದು, ಆಗ ಮಾತ್ರ ಕಾಂಗ್ರೆಸ್ ನಾಯಕರು ಸುಮ್ಮನಿದ್ದರು. ಈಗ ಕೇಂದ್ರದ ಮೇಲೆ ದೂರು ಹೇಳುತ್ತಿದ್ದಾರೆ. ಹಿಂದಿನ ಯುಪಿಎಗೆ ಹೋಲಿಸಿದರೆ ಮೋದಿ ಸರ್ಕಾರ ಶೇ.243 ರಷ್ಟು ಹೆಚ್ಚು ಪರಿಹಾರ ನೀಡಿದೆ ಎಂದರು. ಇದನ್ನೂ ಓದಿ: ಕೇರಳದ ಶ್ರೀಕೃಷ್ಣ ದೇವಾಲಯದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ

    ವರಿಷ್ಠರೊಂದಿಗೆ ಚರ್ಚೆ:
    ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಕುರಿತು ನೀಲಿನಕ್ಷೆ ತಯಾರಾಗಿದೆ. ಹಿರಿಯ ನಾಯಕರು ಇದಕ್ಕೆ ಅಗತ್ಯ ಕ್ರಮಗಳನ್ನು ವಹಿಸಿದ್ದಾರೆ. ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮುದ್ದಹನುಮೇಗೌಡ ಕಾಂಗ್ರೆಸ್ ‌ಸೇರ್ಪಡೆ ದಿನಾಂಕ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಸಚಿವ ಪರಮೇಶ್ವರ್

     

  • ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗಲಾಗ್ತಿಲ್ಲ, ಇದು ನನ್ನ ದುರದೃಷ್ಟ: ಜಗ್ಗಿ ವಾಸುದೇವ್

    ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗಲಾಗ್ತಿಲ್ಲ, ಇದು ನನ್ನ ದುರದೃಷ್ಟ: ಜಗ್ಗಿ ವಾಸುದೇವ್

    ಚಿಕ್ಕಬಳ್ಳಾಪುರ: ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ನನಗೆ ಅಹ್ವಾನ ಬಂದಿದೆ, ಆದರೆ ಹೋಗಲಾಗುತ್ತಿಲ್ಲ. ಇದು ದುರದೃಷ್ಟಕರ ಎಂದು ಈಶಾ ಸಂಸ್ಥಾಪಕ ಜಗ್ಗಿ ವಾಸುದೇವ್ (Sadhguru Jaggi Vasudev) ಹೇಳಿದರು.

    ಸಂಕ್ರಾಂತಿ ಹಬ್ಬದ ಅಂಗವಾಗಿ ಚಿಕ್ಕಬಳ್ಳಾಪುರದ ಈಶಾ ಆದಿಯೋಗಿ (Esha Foundation Chikkaballapur) ಕೇಂದ್ರದಲ್ಲಿ ನಂದಿ ವಿಗ್ರಹ ಹಾಗೂ ತ್ರಿಶೂಲ ಪ್ರತಿಷ್ಠಾಪನಾ ಕಾರ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ನನಗೆ ಈಗಾಗಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪೂರ್ವ ನಿಗದಿ ಕಾರ್ಯಕ್ರಮ ಇರುವ ಕಾರಣದಿಂದ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲಾಗುತ್ತಿಲ್ಲ.‌ ಇದು ನನ್ನ ದುರದೃಷ್ಟ, ನಾನು ಹೋಗಲಾಗುತ್ತಿಲ್ಲ ಅಂತ ಸ್ಪಷ್ಟಪಡಿಸಿದರು.

    ಇದೇ ವೇಳೆ ಅಪೂರ್ಣ ಮಂದಿರ ಉದ್ಘಾಟನೆ ಅಂತಾ ಕೆಲ ಮಠಾಧೀಶರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸದ್ಗುರು, ನಮಗೆ ಯಾರ ಮೇಲಾದರೂ ಬಹಳ ಪ್ರೀತಿ ಇದ್ರೆ ಎಷ್ಟು ಮಾಡಿದ್ರೂ ಸಾಕಾಗಲ್ಲ ಅನಿಸುತ್ತೆ. ಸ್ವಲ್ಪ ಮಾಡಿದರೂ ಬಹಳ ಮಾಡಿದೆ ಅಂತ ತಿಳಿದುಕೊಳ್ಳುವವರ ಹೃದಯದಲ್ಲಿ ಪ್ರೀತಿ ಇರಲ್ಲ. ಜಾಸ್ತಿ ಮಾಡಿದರೂ ಇನ್ನೂ ಮಾಡಬೇಕು ಎನ್ನುವವರ ಹೃದಯದಲ್ಲಿ ಪ್ರೀತಿ ಇರಲಿದೆ. ದೇವಾಲಯ ಅನ್ನೋದು ಎಂದೂ ಮುಗಿಯಲ್ಲ. ಮಾಡ್ತಾನೆ ಇದ್ರೆ ಮಾಡ್ತಾನೆ ಇರಬೇಕು. ಭಕ್ತನ ಆಶಯವೂ ಅದು. ಈಗ ಅದು ಮೂರು ಅಂತಸ್ತು ಇದೆ. ಒಂದು ಅಂತಸ್ತು ಕಂಪ್ಲೀಟ್ ಆಗಿದೆ. ರಾಮಲಲ್ಲಾ ಅಲ್ಲಿ ಪ್ರತಿಷ್ಠಾಪನೆ ಆಗಲಿದ್ದಾನೆ. ಮುಂದೆ ಉಳಿದ ಎಲ್ಲವೂ ಮಾಡಲಿದ್ದಾರೆ. ಹಾಗಾಗಿ ಅದು ಅಪೂರ್ಣ ಅಲ್ಲ ಅಂತ ಹೇಳಿದರು.

  • ಅಯೋಧ್ಯೆಯಲ್ಲಿ ಕರುನಾಡಿನ ರಾಮ – ಮೈಸೂರಿನ ಯೋಗಿರಾಜ್‌ ನಿರ್ಮಿಸಿದ ಮೂರ್ತಿ ಫೈನಲ್‌

    ಅಯೋಧ್ಯೆಯಲ್ಲಿ ಕರುನಾಡಿನ ರಾಮ – ಮೈಸೂರಿನ ಯೋಗಿರಾಜ್‌ ನಿರ್ಮಿಸಿದ ಮೂರ್ತಿ ಫೈನಲ್‌

    ಅಯೋಧ್ಯೆ:  ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ನಿರ್ಮಿಸಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದೆ.

    ಹೌದು. ನೂತನವಾಗಿ ನಿರ್ಮಾಣವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ಮೂರ್ತಿ ಯಾವುದು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.

    ಈಗಾಗಲೇ 3 ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದ್ದು ಡಿ.29 ರಂದು ಮತದಾನ ಪ್ರಕ್ರಿಯೆ ಮೂಲಕ ಆಯ್ಕೆ ನಡೆದಿತ್ತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿನ 11 ಸದಸ್ಯರು ಅತ್ಯುತ್ತಮ ಮೂರ್ತಿಯನ್ನು ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ ದೇಶದ ಮೊದಲ 7 ಸ್ಟಾರ್‌ ಸಸ್ಯಹಾರಿ ಹೋಟೆಲ್‌

    ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿದರೆ ಇನ್ನುಳಿದ ಎರಡು ಮೂರ್ತಿಯನ್ನು ರಾಮ ದೇಗುಲದ ಆವರಣದಲ್ಲಿಯೇ ಇಡುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹೇಳಿದೆ.

    ಮೂರು ಮೂರ್ತಿಯ ಮಾದರಿಗಳು ಈಗಾಗಲೇ ಪೂರ್ಣಗೊಂಡಿದ್ದರೂ ಅದರ ಫೋಟೋ ಮತ್ತು ವಿಡಿಯೋ ಎಲ್ಲಿಯೂ ಲಭ್ಯವಿಲ್ಲ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ 55 ರಾಷ್ಟ್ರಗಳ 100ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ – ಯಾವ್ಯಾವ ದೇಶಕ್ಕೆ ಆಮಂತ್ರಣ?

    ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಶಿಲ್ಪಿಗಳಾದ ಕರ್ನಾಟಕ ರಾಜ್ಯ ಮೈಸೂರು ಮೂಲದ ಅರುಣ್ ಯೋಗಿರಾಜ್ (Arun Yogiraj), ಗಣೇಶ್ ಭಟ್ ಮತ್ತು ಜೈಪುರದ ಸತ್ಯನಾರಾಯಣ ಪಾಂಡೆ ಅವರ ಮೂರ್ತಿಗಳನ್ನ ಕೆತ್ತನೆ ಮಾಡಿದ್ದಾರೆ. ಕರ್ನಾಟಕ ಇಬ್ಬರು ಶಿಲ್ಪಿಗಳು ಮೈಸೂರಿನ ಕೃಷ್ಣಶಿಲೆಯನ್ನು ಬಳಕೆ ಮಾಡಿ ಮೂರ್ತಿ ಕೆತ್ತನೆ ಮಾಡಿದ್ದಾರೆ. ಸತ್ಯನಾರಾಯಣಪಾಂಡೆ ಅವರು ರಾಜಸ್ಥಾನದಿಂದ ತರಿಸಲಾಗಿದ್ದ ಕಲ್ಲನ್ನು ಬಳಕೆ ಮಾಡಿದ್ದಾರೆ  ಇದನ್ನೂ ಓದಿ: ಅಯೋಧ್ಯೆಯ ಬಾಲ ರಾಮನ ಮೂರ್ತಿಗೆ ಬಳಸಿದ್ದು ಮೈಸೂರಿನ ಕೃಷ್ಣ ಶಿಲೆ

    ಅಂತಿಮವಾಗಿ ಪ್ರತಿಷ್ಠಾಪಿಸಬೇಕಾದ ರಾಮಲಲ್ಲಾ ಮೂರ್ತಿಯನ್ನು ಆಯ್ಕೆ ಮಾಡುವ ಮುನ್ನ ಅದರ ದೀರ್ಘಾವಧಿ ಬಾಳಿಕೆ ಕುರಿತು ತಾಂತ್ರಿಕ ವರದಿ ಪಡೆಯಲಾಗಿದೆ. ನಂತರ ಆಯ್ಕೆಯಾಗುವ ಮೂರ್ತಿಯನ್ನ ಜನವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

    ಬಾಲರಾಮನ ಆಯ್ಕೆಗೆ ಮಾನದಂಡ ಏನು?
    ವಿಗ್ರಹ ಕಡೆಯಲು ಬಳಸಿದ ಶಿಲೆಯ ಗುಣಮಟ್ಟ, ರಾಮನ ಬಾಲ್ಯದ ನೋಟ, ವಿಗ್ರಹಕ್ಕೆ ಇರುವ ಸೌಂದರ್ಯ, ಆಕರ್ಷಣೆ, ವಿಗ್ರಹಕ್ಕೆ ಇರುವ ದೈವತ್ವದ ಕಳೆ, ಭಾವ, ವಿಗ್ರಹದ ರಚನಾತ್ಮಕ ಸ್ವರೂಪ, ಕೆತ್ತನೆಯ ಗುಣಮಟ್ಟ ಎಲ್ಲವನ್ನು ಪರಿಗಣಿಸಲಾಗಿದೆ.

    ಈ ಹಿಂದೆ ಅರುಣ್ ಯೋಗಿರಾಜ್ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾದ ಶಂಕರಾಚಾರ್ಯರು ಹಾಗೂ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೂಡಾ ಕೆತ್ತುವ ಮೂಲಕ ಪ್ರಧಾನಿ ಮೋದಿ ಸೇರಿದಂತೆ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದರು

     

  • ಕೈ ನಾಯಕರಿಗೆ ರಾಮನ ಮೇಲಿನ ಭಕ್ತಿಗಿಂತ, ಹೈಕಮಾಂಡ್ ಮೇಲಿನ ಭಯವೇ ಜಾಸ್ತಿ: ಅಶೋಕ್‌ ವ್ಯಂಗ್ಯ

    ಕೈ ನಾಯಕರಿಗೆ ರಾಮನ ಮೇಲಿನ ಭಕ್ತಿಗಿಂತ, ಹೈಕಮಾಂಡ್ ಮೇಲಿನ ಭಯವೇ ಜಾಸ್ತಿ: ಅಶೋಕ್‌ ವ್ಯಂಗ್ಯ

    ಬೆಂಗಳೂರು: ಕಾಂಗ್ರೆಸ್ (Congress) ಪಕ್ಷದ ನಾಯಕರಿಗೆ ರಾಮನ (Rama) ಮೇಲಿನ ಭಕ್ತಿಗಿಂತ ಹೈಕಮಾಂಡ್ (High Command) ಮೇಲಿನ ಭಯವೇ ಜಾಸ್ತಿ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ (R Ashok) ಹೇಳಿದ್ದಾರೆ.

    ಹೈಕಮಾಂಡ್ ಹೇಳಿದರೆ ಮಾತ್ರ ರಾಮ ಮಂದಿರಕ್ಕೆ ಹೋಗುತ್ತೇವೆ ಎಂಬ ಗೃಹ ಸಚಿವ ಪರಮೇಶ್ವರ್‌ (Paraneshwar) ಹೇಳಿಕೆಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು ರಾಮಮಂದಿರದ ಬಗ್ಗೆ ಒಳ್ಳೆಯ ಮಾತನಾಡದಿದ್ದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುವ ಭಯ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್‌ ಜೋಶಿ

    ರಾಮಮಂದಿರದ ಬಗ್ಗೆ ಒಳ್ಳೆಯ ಮಾತಾಡಿದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಕುರ್ಚಿಗೆ ಕುತ್ತು ಬರುವ ಭಯ. ಒಟ್ಟಿನಲ್ಲಿ ಎಡಬಿಡಂಗಿ ಕಾಂಗ್ರೆಸ್‌ ನಾಯಕರ ಪಾಡು ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್‌

     

    ಪರಮೇಶ್ವರ್‌ ಹೇಳಿದ್ದೇನು?
    ಹೈಕಮಾಂಡ್ ಈಗಾಗಲೇ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ನಿಲುವು ತೆಗೆದುಕೊಂಡಿದೆ. ಒಂದು ವೇಳೆ ಜನವರಿ 22 ನಂತರ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾವು ಹೋಗುತ್ತೇವೆ.

    ಎಲ್ಲವನ್ನೂ ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯಬೇಕು. ಅವರು ಹೋಗುವುದು ಬೇಡ ಎಂದು ಹೇಳಿದಾಗ ನಾವು ಅದರ ವಿರುದ್ದ ನಿಲುವು ‌ತೆಗೆದುಕೊಳ್ಳಲು ಆಗುವುದಿಲ್ಲ. ಹೈಕಮಾಂಡ್ ಹೇಳಿದರೆ ಮಾತ್ರ ಹೋಗುತ್ತೇವೆ ಎಂದು ಹೇಳಿದ್ದರು.