Tag: ರಾಮ ಮಂದಿರ

  • ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

    ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ

    – ನ.25 ರಂದು ಪ್ರಧಾನಿ ಮೋದಿ ಧ್ವಜಾರೋಹಣ

    ಲಕ್ನೋ: ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿದ್ದ ಶ್ರೀರಾಮ ಮಂದಿರ (Shri Ram Mandir) ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮುಖ್ಯ ಮಂದಿರ ಮತ್ತು ಆರು ಇತರೆ ಮಂದಿರಗಳ ನಿರ್ಮಾಣ ಕಾರ್ಯ ಪೂರ್ಣವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

    ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಟ್ರಸ್ಟ್, ಮಂದಿರದ ನಿರ್ಮಾಣ ಕಾರ್ಯ ಮುಗಿದಿದೆ ಎಂದು ಪ್ರಭು ಶ್ರೀರಾಮನ ಭಕ್ತರಿಗೆ ತಿಳಿಸಲು ಸಂತೋಷವಾಗುತ್ತದೆ. ಮುಖ್ಯಮಂದಿರದ ಜೊತೆಗೆ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಮಾ ಭಗವತಿ ಮತ್ತು ಮಾ ಅನ್ನಪೂರ್ಣ ಜೊತೆಗೆ ಶೇಷಾವತಾರ ಮಂದಿರವೂ ನಿರ್ಮಾಣ ಕಾರ್ಯ ಪೂರ್ಣವಾಗಿದೆ. ಈ ಮಂದಿರಗಳ ಮೇಲೆ ಧ್ವಜಗಳು ಮತ್ತು ಕಲಶವನ್ನು ಸ್ಥಾಪಿಸಲಾಗಿದೆ.

    ಹೆಚ್ಚುವರಿಯಾಗಿ, ಋಷಿ ವಾಲ್ಮೀಕಿ, ಋಷಿ ವಶಿಷ್ಠ, ಋಷಿ ವಿಶ್ವಾಮಿತ್ರ, ಋಷಿ ಅಗಸ್ತ್ಯ, ನಿಷಾದರಾಜಅಯೋ, ಶಬರಿ ಮತ್ತು ದೇವಿ ಅಹಲ್ಯರಿಗೆ ಸಮರ್ಪಿತವಾದ ಏಳು ಮಂಟಪಗಳು ಸಹ ಪೂರ್ಣಗೊಂಡಿವೆ. ಸಂತ ತುಳಸಿದಾಸ ಮಂದಿರವೂ ಪೂರ್ಣಗೊಂಡಿದೆ. ಜಟಾಯು ಮತ್ತು ಅಳಿಲಿನ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿದೆ.

    ಭಕ್ತರ ಅನುಕೂಲತೆ ಮತ್ತು ವ್ಯವಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಗಿದೆ. ರಸ್ತೆ ನಿರ್ಮಾಣ ಮತ್ತು ಕಲ್ಲಿನ ನೆಲಹಾಸು ಹಾಕುವ ಕೆಲಸವನ್ನು ಎಲ್&ಟಿ ಕಂಪನಿ ನಿರ್ವಹಿಸುತ್ತಿದೆ. ಅಲ್ಲದೇ ಮಂದಿರದ ಸುತ್ತ ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಮತ್ತು 10 ಎಕ್ರೆಗೂ ಹೆಚ್ಚು ವಿಸ್ತೀರ್ಣದ ‘ಪಂಚವಟಿ’ಯ (ಶ್ರೀರಾಮ, ಸೀತೆ, ಲಕ್ಷ್ಮಣ ವನವಾಸದ ಸಮಯದಲ್ಲಿ ನೆಲೆಸಿದ್ದ ಜಾಗದ ಹೆಸರು) ಅಭಿವೃದ್ಧಿ ಕಾರ್ಯವು ತ್ವರಿತಗತಿಯಲ್ಲಿ ಸಾಗುತ್ತಿದೆ. 3.5 ಕಿ.ಮೀ ಉದ್ದದ ತಡೆಗೋಡೆ, ಟ್ರಸ್ಟ್ ಕಚೇರಿ, ಅತಿಥಿ ಗೃಹ, ಸಭಾಂಗಣ ಮುಂತಾದ ಕಾಮಗಾರಿಗಳು ಮಾತ್ರ ನಡೆಯುತ್ತಿವೆ ಎಂದು ಮಾಹಿತಿ ನೀಡಿದೆ.

    ನವೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯೆಗೆ ಭೇಟಿ ನೀಡಲಿದ್ದು, ಶ್ರೀರಾಮ ಮಂದಿರದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವ 6,000 ದಿಂದ 8,000 ರಿಂದ ಆಹ್ವಾನಿತರು ಭಾಗವಹಿಸಲಿದ್ದಾರೆ. ರಾಮ ಪರಿವಾರವನ್ನು ದೇವಾಲಯದ ಮೊದಲ ಮಹಡಿಯಲ್ಲಿ ನಿರ್ಮಿಸಿದೆ. ಪ್ರಧಾನಿ ಮೋದಿ ಅವರು ರಾಮ ಪರಿವಾರದಲ್ಲಿ ಆರತಿ ನೆರವೇರಿಸಿ, ದೇವಾಲಯದ ಧ್ವಜಾರೋಹಣ ಮಾಡಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

  • ಜೂ.3ರಂದು ಅಯೋಧ್ಯಾ ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ

    ಜೂ.3ರಂದು ಅಯೋಧ್ಯಾ ರಾಮಮಂದಿರದ ಸ್ವರ್ಣಗೋಪುರ ಉದ್ಘಾಟನೆ

    ಲಕ್ನೋ: ಅಯೋಧ್ಯೆಯ ರಾಮಮಂದಿರ (Ayodhya Ram Mandir) ಮತ್ತೊಂದು ಕ್ಷಣಕ್ಕೆ ಸಜ್ಜಾಗಿದೆ. 2ನೇ ಬಾರಿ ಪ್ರಾಣ ಪ್ರತಿಷ್ಠೆಗೆ ಮುನ್ನ ಬಂಗಾರದ ಗುಮ್ಮಟ (Gold Plated Shikhara) ಉದ್ಘಾಟನೆ ಆಗಲಿದೆ.

    ಗರ್ಭಗುಡಿಯ ಮೇಲೆ ಇರುವ ಬಂಗಾರದ ಶಿಖರವು ಪಾವಿತ್ರ್ಯತೆ, ಪ್ರಗತಿ ಮತ್ತು ಭಕ್ತಿಯ ಸಂಕೇತವಾಗಿದೆ. ಕಿಮೀಗಳ ದೂರಕ್ಕೆ ಗೋಚರಿಸ್ತಿರುವ ಈ ನಯನಮನೋಹರ ಗುಮ್ಮಟವು ಭಕ್ತರ ಕಣ್ಮನ ತಣಿಸುತ್ತಿದೆ. ಭಕ್ತಿ-ಭಾವವನ್ನು ಇಮ್ಮಡಿಗೊಳಿಸುತ್ತಿದೆ. ಇದನ್ನೂ ಓದಿ: ಪಂಜಾಬ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 113 ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    ಅಲ್ಲದೇ ಮಂಗಳವಾರದಿಂದ 3 ದಿನ 2ನೇ ಬಾರಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಜೊತೆಗೆ ಮೊದಲ ಮಹಡಿಯಲ್ಲಿ ಇತರೆ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದೆ. ಜೊತೆಗೆ ʻರಾಮ ದರ್ಬಾರ್ʼ ಕೂಡ ನಡೆಯಲಿದೆ. ಇದನ್ನೂ ಓದಿ: ಭ್ರಷ್ಟ ಅಧಿಕಾರಿಯ 3 ರಾಜ್ಯಗಳಲ್ಲಿದ್ದ ಆಸ್ತಿ ಮೇಲೆ ಸಿಬಿಐ ದಾಳಿ – 1 ಕೋಟಿ ನಗದು, 3.5 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಪತ್ತೆ

    ಈಗಾಗಲೇ ಸಾವಿರಾರು ಭಕ್ತರು ಅಯೋಧ್ಯೆಯತ್ತ ಮುಖಮಾಡಿದ್ದಾರೆ. ಈ ಮಧ್ಯೆ, ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ತಂದೆ ಎಲಾನ್‌ ಮಸ್ಕ್ ಭಾರತಕ್ಕೆ ಬಂದಿದ್ದು, ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ:  ಪಂಜಾಬ್‌ ವಿರುದ್ಧ ಫೈನಲ್‌ ಮ್ಯಾಚ್‌ – ಆರ್‌ಸಿಬಿ ಫ್ಯಾನ್ಸ್‌ಗೆ 1 ರೂ.ಗೆ ಆಫರ್‌ ಕೊಟ್ಟ ಸ್ನೂಕರ್‌ ಕ್ಲಬ್

  • ಬಿಹಾರದಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ಲ್ಯಾನ್‌

    ಬಿಹಾರದಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ಲ್ಯಾನ್‌

    – ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸೀತಾ ಮಂದಿರ ನಿರ್ಮಾಣ ಘೋಷಿಸಿದ ಅಮಿತ್ ಶಾ

    ಪಾಟ್ನಾ: ಅಯೋಧ್ಯೆ ಶ್ರೀರಾಮ ಮಂದಿರ ಮಾದರಿಯಲ್ಲೇ ಬಿಹಾರದಲ್ಲಿ ಸೀತಾ ಮಾತೆಯ ಭವ್ಯ ಮಂದಿರ (Sita Mata Mandir) ನಿರ್ಮಿಸುವುದಾಗಿ ಕೇಂದ್ರ ಸಚಿವ ಅಮಿತ್‌ ಶಾ (Amit Shah) ಘೋಷಸಿದ್ದಾರೆ.

    ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ (Bihar Elections) ಹಿನ್ನೆಲೆ ಅಮಿತ್‌ ಶಾ ಸೀತಾ ಮಂದಿರ ಘೋಷಿಸಿದ್ದು, ಬಿಜೆಪಿಯ ಈ ನಡೆಯನ್ನು ಜೆಡಿಯು ಮತ್ತು ಎಲ್‌ಜೆಪಿ ಸೇರಿದಂತೆ ಮಿತ್ರಪಕ್ಷಗಳು ಸ್ವಾಗತಿಸಿವೆ. ಇದನ್ನೂ ಓದಿ: ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ: ಶರಣು ಪ್ರಕಾಶ್ ಪಾಟೀಲ್

    ಗುಜರಾತ್‌ನಲ್ಲಿ ಶಾಶ್ವತ ಮಿಥಿಲಾ ಮಹೋತ್ಸವ 2025 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಬಿಹಾರ ಪ್ರದೇಶವು ಪ್ರಾಚೀನ ಕಾಲದಿಂದಲೂ ಪ್ರಜಾಪ್ರಭುತ್ವ ಮತ್ತು ತತ್ವಶಾಸ್ತ್ರವನ್ನು ಸಶಕ್ತಗೊಳಿಸುವ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

    ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಹಾರಕ್ಕೆ ಹೋಗಿದ್ದಾಗ ರಾಮ ಮಂದಿರ ನಿರ್ಮಾಣವಾಗಿದೆ ಎಂದು ಹೇಳಿದ್ದೆ. ಈಗ ಸೀತಾ ಮಾತೆಯ ಮಂದಿರ ನಿರ್ಮಾಣ ಮಾಡುವ ಕಾಲ ಬಂದಿದೆ. ಈ ದೇವಾಲಯ ಇಡೀ ಜಗತ್ತಿಗೆ ಸ್ತ್ರೀಶಕ್ತಿಯ ಸಂದೇಶವನ್ನು ನೀಡುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಮಕ್ಕಳಲ್ಲೂ ಕಾಡ್ತಿದೆ ಮಾರಕ ಕ್ಯಾನ್ಸರ್ – ಅಂಕಿ ಅಂಶ ಬಿಚ್ಚಿಟ್ಟ ಶರಣು ಪ್ರಕಾಶ್ ಪಾಟೀಲ್

    ಗುಜರಾತ್‌ನಲ್ಲಿ ನೆಲೆಸಿರುವ ಮಿಥಿಲಾಂಚಲ್ ಬೆಳವಣಿಗೆಗೆ ಬಿಹಾರದ ಜನ ಗಣನೀಯ ಕೊಡುಗೆ ನೀಡಿದ್ದಾರೆ. ಮಿಥಿಲಾ ಭೂಮಿ ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಬುದ್ಧಿಜೀವಿಗಳ ಭೂಮಿಯಾಗಿದೆ. ಅದೇ ರೀತಿ ʻವಿದೇಹʼ ಪ್ರಾಚೀನ ಸಾಮ್ರಾಜ್ಯವು ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದರಲ್ಲದೇ ಭಾರತದ ಆರು ಪ್ರಮುಖ ಫಿಲಾಸಫಿಗಳಲ್ಲಿ 4 ಮಿಥಿಲಾಂಚಲ್‌ನಿಂದ ಬಂದಿವೆ ಎಂದು ಶಾ ಶ್ಲಾಘಿಸಿದ್ರು. ಇದನ್ನೂ ಓದಿ: ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ: ಹಿಂದೂ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿವಾದದ ಮಾತು

  • ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿಗೆ ಸಂಚು – ಶಂಕಿತ ಭಯೋತ್ಪಾದಕ ಅರೆಸ್ಟ್

    ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿಗೆ ಸಂಚು – ಶಂಕಿತ ಭಯೋತ್ಪಾದಕ ಅರೆಸ್ಟ್

    ಫರಿದಾಬಾದ್: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದ (Ram Mandir) ಮೇಲೆ ಹ್ಯಾಂಡ್ ಗ್ರೆನೇಡ್ (Hand Grenade) ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.

    ಹರಿಯಾಣದ (Haryana) ಫರಿದಾಬಾದ್‌ನಲ್ಲಿ ಅಬ್ದುಲ್ ರೆಹಮಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಫೈಜಾಬಾದ್ ಮೂಲದ ಅಬ್ದುಲ್ ರೆಹಮಾನ್, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರಾಮ ಮಂದಿರದ ಮೇಲೆ ದಾಳಿ ನಡೆಸುವ ಸಂಚು ಬಹಿರಂಗವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ: ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ

    ರಾಮಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ಬಳಸಿ ದಾಳಿ ಮಾಡಿ ಭಾರಿ ವಿನಾಶವನ್ನುಂಟುಮಾಡುವುದು ಅಬ್ದುಲ್ ರೆಹಮಾನ್ ಸಂಚಾಗಿತ್ತು. ಪಿತೂರಿಯ ಭಾಗವಾಗಿ, ಅಬ್ದುಲ್ ಹಲವು ಬಾರಿ ರಾಮ ಮಂದಿರದ ಪರಿಶೀಲನೆ ನಡೆಸಿದ್ದ ಮತ್ತು ಎಲ್ಲಾ ಮಾಹಿತಿಯನ್ನು ಪಾಕಿಸ್ತಾನದ ಐಎಸ್‌ಐ ಜೊತೆ ಹಂಚಿಕೊಂಡಿದ್ದ. ಇದನ್ನೂ ಓದಿ: ಸಾಧ್ಯವಾದಷ್ಟು ಬೇಗ ಮಕ್ಕಳನ್ನ ಮಾಡಿಕೊಳ್ಳಿ – ಜನಸಂಖ್ಯೆ ಹೆಚ್ಚಿಸಲು ಎಂ.ಕೆ ಸ್ಟಾಲಿನ್ ಮನವಿ

    ಅಬ್ದುಲ್ ಫೈಜಾಬಾದ್‌ನಿಂದ ರೈಲಿನಲ್ಲಿ ಫರಿದಾಬಾದ್ ತಲುಪಿದ್ದ. ಅಲ್ಲಿ ವ್ಯಕ್ತಿಯೊಬ್ಬ ಹ್ಯಾಂಡ್ ಗ್ರೆನೇಡ್‌ಗಳನ್ನು ನೀಡಿದ್ದ. ಅದನ್ನು ತೆಗೆದುಕೊಂಡು ರೈಲಿನಲ್ಲಿ ಅಯೋಧ್ಯೆಗೆ ತೆರಳಿ ದಾಳಿ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ ಕೇಂದ್ರ ಸಂಸ್ಥೆಗಳ ಮಾಹಿತಿಯ ಆಧಾರದ ಮೇಲೆ ಯೋಜನೆ ಯಶಸ್ವಿಯಾಗುವ ಮೊದಲು, ಗುಜರಾತ್ ಎಟಿಎಸ್ ಮತ್ತು ಫರಿದಾಬಾದ್ ಎಸ್‌ಟಿಎಫ್ ಶಂಕಿತ ಭಯೋತ್ಪಾದಕನನ್ನು ಬಂಧಿಸಿದೆ. ಇದನ್ನೂ ಓದಿ: ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಯಾವುದೇ ಅನುದಾನ ತಂದಿಲ್ಲ: ಹೆಚ್‌ಸಿ ಬಾಲಕೃಷ್ಣ

  • ವರ್ಷದ ಮೊದಲ ದಿನ: 2 ಲಕ್ಷ ಜನರಿಂದ ಅಯೋಧ್ಯೆ ರಾಮನ ದರ್ಶನ!

    ವರ್ಷದ ಮೊದಲ ದಿನ: 2 ಲಕ್ಷ ಜನರಿಂದ ಅಯೋಧ್ಯೆ ರಾಮನ ದರ್ಶನ!

    ಅಯೋಧ್ಯೆ: ಹೊಸ ವರ್ಷದ ಮೊದಲ ದಿನವೇ ಅಯೋಧ್ಯೆಯಲ್ಲಿ ಜನವೋ ಜನ. ಜನವರಿ 1ರ ಸಂಜೆ 5 ಗಂಟೆಯವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಅಯೋಧ್ಯೆಯಲ್ಲಿ ವಿರಾಜಿತ ಬಾಲಕ ರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯ ತುಂಬಾ ರಾಮಭಕ್ತರ ದಂಡೇ ಕಾಣಿಸುತ್ತಿದ್ದು, ತಮ್ಮ ಇಷ್ಟದೇವರನ್ನು ಕಣ್ತುಂಬಿಕೊಳ್ಳಲು ಭಕ್ತರು ಸರತಿ ಸಾಲಿನಲ್ಲಿ ನಿಂತುಕೊಂಡಿದ್ದಾರೆ.

    ಜನವರಿ 1 ರಂದು ಬೆಳಗ್ಗೆ 7 ಗಂಟೆಯಿಂದ ಶ್ರೀರಾಮ ಲಲ್ಲಾನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಒಟ್ಟು 5 ಸರತಿ ಸಾಲುಗಳಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗುತ್ತಿದೆ. 2 ಲಕ್ಷ ಭಕ್ತರು ರಾಮನ ದರ್ಶನ ಪಡೆದಿದ್ದಾರೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್‌ನ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. ಇದನ್ನೂ ಓದಿ: ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್‌ ಆದೇಶ

    ಸಂಜೆ 5 ಗಂಟೆಯವರೆಗೆ 2 ಲಕ್ಷ ಭಕ್ತರು ಅಯೋಧ್ಯೆ ರಾಮನ ದರ್ಶನ ಪಡೆದಿದ್ದಾರೆ. ರಾತ್ರಿ 9 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಈಗಲೂ ಬಾಲಕ ರಾಮನ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲು ಸಿಎಂಗೆ ಧೈರ್ಯ ಇಲ್ಲ: ಛಲವಾದಿ ನಾರಾಯಣಸ್ವಾಮಿ

    ಚಳಿಗಾಲ ಮತ್ತು ರಜಾ ಸೀಸನ್ ಆಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು ರಾಮ ಟೆಂಪಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ಇದನ್ನೂ ಓದಿ: ಮೊದಲ ಕ್ಯಾಬಿನೆಟ್‌ ರೈತರಿಗೆ ಅರ್ಪಿಸಿದ ಮೋದಿ – ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ

    ಕಳೆದ ವರ್ಷ ಜನವರಿ 22ರಂದು ರಾಮ ಮಂದಿರದಲ್ಲಿ ಬಾಲಕರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಲಾಗಿತ್ತು. ಕನ್ನಡಿಗರಾದ ಮೈಸೂರಿನ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಬಾಲಕ ರಾಮನ ಮೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದನ್ನೂ ಓದಿ: ಶಿವಮೊಗ್ಗ| ಪತಿಯ ಸಾವಿನ ಸುದ್ದಿ ತಿಳಿದು ಪತ್ನಿ ನೇಣಿಗೆ ಶರಣು

  • ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ದೀಪಾವಳಿ – 28 ಲಕ್ಷ ದೀಪ ಬೆಳಗಿಸಲು ಯೋಗಿ ಸರ್ಕಾರದಿಂದ ಸಿದ್ಧತೆ

    ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ದೀಪಾವಳಿ – 28 ಲಕ್ಷ ದೀಪ ಬೆಳಗಿಸಲು ಯೋಗಿ ಸರ್ಕಾರದಿಂದ ಸಿದ್ಧತೆ

    ಲಕ್ನೋ: ಅಯೋಧ್ಯೆಯ (Ayodhya) ರಾಮ ಮಂದಿರದಲ್ಲಿ (Ram Mandir) ಮೊದಲ ದೀಪಾವಳಿಯನ್ನು (Deepavali) ಅದ್ದೂರಿಯಾಗಿ ಆಚರಿಸಲು ಉತ್ತರ ಪ್ರದೇಶದ ಸರ್ಕಾರ ಸಿದ್ಧತೆ ಆರಂಭಿಸಿದೆ.

    ದೀಪಾವಳಿಯಂದು ಸರಯೂ ನದಿಯ ದಡದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಹಬ್ಬದ ದಿನದಂದು ವಿಶೇಷ ಪರಿಸರ ಸ್ನೇಹಿ ದೀಪಗಳು ರಾಮ ಮಂದಿರವನ್ನು ಬೆಳಗಿಸಲಿವೆ. ದೇವಾಲಯದ ಕಟ್ಟೆಗಳು ಹಾಗೂ ಕೆತ್ತನೆಯ ಮೇಲೆ ಕಲೆಗಳು ಮತ್ತು ಮಸಿ ಪರಿಣಾಮ ಬೀರುವುದನ್ನು ತಡೆಯಲು ಈ ದೀಪಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

    ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ವಿಶೇಷ ಮೇಣದ ದೀಪಗಳನ್ನು ಬಳಸಲಾಗುತ್ತದೆ. ದೀರ್ಘಕಾಲದವರೆಗೆ ಈ ದೀಪಗಳು ಬೆಳಗಲಿವೆ. ಈ ದೀಪೋತ್ಸವದಲ್ಲಿ ಪರಿಸರ ಸಂರಕ್ಷಣೆಯೂ ಪ್ರಮುಖವಾಗಿರಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

    ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸಲಿರುವ ರಾಮ ಮಂದಿರ ಸಂಕೀರ್ಣವನ್ನು ಅಲಂಕಾರಕ್ಕಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗಕ್ಕೆ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗಿದೆ. ಬೆಳಕು, ಪ್ರವೇಶ ಕಮಾನು ಅಲಂಕಾರಗಳು ಮತ್ತು ಸಂಪೂರ್ಣ ಶುಚಿಗೊಳಿಸುವಿಕೆಯ ಒಟ್ಟಾರೆ ಮೇಲ್ವಿಚಾರಣೆಯನ್ನು ಬಿಹಾರ ಕೇಡರ್‌ನ ನಿವೃತ್ತ ಐಜಿ ಅಶು ಶುಕ್ಲಾ ಅವರಿಗೆ ವಹಿಸಲಾಗಿದೆ.

    ಈ ದೀಪಾವಳಿಯಲ್ಲಿ ಅಯೋಧ್ಯೆಯನ್ನು ಕೇವಲ ಧರ್ಮ ಮತ್ತು ನಂಬಿಕೆಯ ಕೇಂದ್ರವನ್ನಾಗಿ ಮಾಡದೆ, ಸ್ವಚ್ಛತೆ ಮತ್ತು ಪರಿಸರ ಪ್ರಜ್ಞೆಯ ಸಂಕೇತವನ್ನಾಗಿ ಮಾಡುವ ಗುರಿಯನ್ನು ದೇವಾಲಯದ ಟ್ರಸ್ಟ್ ಹೊಂದಿದೆ. 2,000 ಕ್ಕೂ ಹೆಚ್ಚು ಮೇಲ್ವಿಚಾರಕರು, ಉಸ್ತುವಾರಿಗಳು ಮತ್ತು ಇತರ ಸದಸ್ಯರ ಮಾರ್ಗದರ್ಶನದಲ್ಲಿ 30,000 ಕ್ಕೂ ಹೆಚ್ಚು ಸ್ವಯಂಸೇವಕರು 28 ಲಕ್ಷ ದೀಪಗಳನ್ನು ಸರಯೂ ನದಿಯ ಉದ್ದಕ್ಕೂ 55 ಸಾಲುಗಳಲ್ಲಿ ಅಲಂಕರಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.

    ದೀಪೋತ್ಸವ ಕಾರ್ಯಕ್ರಮದ ಸಲುವಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಅಕ್ಟೋಬರ್ 29 ರಿಂದ ನವೆಂಬರ್ 1 ರ ಮಧ್ಯರಾತ್ರಿಯವರೆಗೆ ದೇವಸ್ಥಾನವನ್ನು ‘ಭವನ ದರ್ಶನ’ಕ್ಕಾಗಿ ತೆರೆದಿಡಲು ನಿರ್ಧರಿಸಲಾಗಿದೆ.

  • ಜ.22ರ ಅಯೋಧ್ಯೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ 113 ಕೋಟಿ ವೆಚ್ಚ

    ಜ.22ರ ಅಯೋಧ್ಯೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ 113 ಕೋಟಿ ವೆಚ್ಚ

    ಅಯೋಧ್ಯೆ: ಜನವರಿ 22ರ ಅಯೋಧ್ಯೆಯ (Ayodhya) ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭದ (Consecration Ceremony of Ram Lalla Idol)ಯೋಜನೆಗೆ 113 ಕೋಟಿ ರೂ. ವೆಚ್ಚವಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shri Ram Janmabhoomi Teerth Kshetra Trust) ಹೇಳಿದೆ.

    ರಾಮ ಮಂದಿರ ನಿರ್ಮಾಣಕ್ಕೆ ಇಲ್ಲಿಯವರೆಗೆ 1,800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಮುಂದಿನ ಎರಡು ಹಂತಗಳ ನಿರ್ಮಾಣಕ್ಕೆ ಹೆಚ್ಚುವರಿ 670 ಕೋಟಿ ರೂ. ಖರ್ಚಾಗಬಹುದು ಎಂದು ಟ್ರಸ್ಟ್ ತನ್ನ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೇವಭೂಮಿ ʻದ್ವಾರಕೆʼಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ…

    2023-24 ರ ಆರ್ಥಿಕ ವರ್ಷದ ವಾರ್ಷಿಕ ಲೆಕ್ಕಪತ್ರಗಳನ್ನು ಟ್ರಸ್ಟಿಗಳ ಮಂಡಳಿಯ ಮುಂದೆ ಮಂಡಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇವಸ್ಥಾನಕ್ಕೆ ಸುಮಾರು 20 ಕೆಜಿ ಚಿನ್ನ ಮತ್ತು 13 ಕ್ವಿಂಟಾಲ್ ಬೆಳ್ಳಿ ದೇಣಿಗೆಯಾಗಿ ಬಂದಿದೆ.

    ಮಂದಿನ ಖರ್ಚಿನ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಏಪ್ರಿಲ್ 1, 2024 ಮತ್ತು ಮಾರ್ಚ್ 31, 2025 ರ ನಡುವಿನ ಒಟ್ಟು ಯೋಜಿತ ವೆಚ್ಚವು 850 ಕೋಟಿ ರೂ. ಆಗಬಹುದು ಎಂದು ತಿಳಿಸಿದರು.

    2023-24ರ ಹಣಕಾಸು ವರ್ಷದಲ್ಲಿ 676 ಕೋಟಿ ರೂ.ಒಟ್ಟು ವೆಚ್ಚವಾಗಿದೆ. ಈ ಪೈಕಿ 540 ಕೋಟಿ ರೂ. ದೇವಸ್ಥಾನ ನಿರ್ಮಾಣಕ್ಕೆ ಬಳಕೆಯಾಗಿದ್ದರೆ, 136 ಕೋಟಿ ರೂ. ಪ್ರತಿಷ್ಠಾಪನಾ ಸಮಾರಂಭ ಸೇರಿ ಇತರೆ ಕೆಲಸಗಳಿಗೆ ಖರ್ಚು ಮಾಡಲಾಗಿದೆ. ಇದನ್ನೂ ಓದಿ: ಅಶರೀರವಾಣಿಯ ಭಯ, ತಂಗಿಗೆ ಸೆರೆವಾಸ – ಕೃಷ್ಣ ಹುಟ್ಟಿದಾಗ ಏನಾಯ್ತು?

    ಕಳೆದ ಹಣಕಾಸು ವರ್ಷದಲ್ಲಿ 363.34 ಕೋಟಿ ರೂ. ಆದಾಯ ಬಂದಿದ್ದು ಇದರಲ್ಲಿ 204 ಕೋಟಿ ರೂಪಾಯಿ ಬ್ಯಾಂಕ್ ಬಡ್ಡಿಯ ಮೂಲಕ ಬಂದಿದೆ. ಚೆಕ್‌, ನಗದು ಮೂಲಕ 58 ಕೋಟಿ ರೂ. ಬಂದರೆ, ದೇಣಿಗೆ ಬಾಕ್ಸ್‌ನಲ್ಲಿ 24.5 ಕೋಟಿ ರೂ., ಆನ್‌ಲೈನ್‌ ಮೂಲಕ 71 ಕೋಟಿ ರೂ., ವಿದೇಶಗಳಿಂದ 10.43 ಕೋಟಿ ರೂ. ಬಂದಿದೆ.

     

  • ಬಾಲ ರಾಮನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಅಮೆರಿಕ ವೀಸಾ ನಿರಾಕರಣೆ

    ಬಾಲ ರಾಮನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಅಮೆರಿಕ ವೀಸಾ ನಿರಾಕರಣೆ

    ಮೈಸೂರು: ಅಯೋಧ್ಯೆಯಲ್ಲಿ (Ayodhya Ram Mandir) ಬಾಲ ರಾಮನ ಮೂರ್ತಿಯನ್ನು ಕೆತ್ತಿದ್ದ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರಿಗೆ ಅಮೆರಿಕ (USA) ವೀಸಾ ನೀಡಲು ನಿರಾಕರಿಸಿದೆ.

    ಹೌದು. ಅಮೇರಿಕದಲ್ಲಿರುವ ಕನ್ನಡಿಗರು ನಡೆಸುವ 12ನೇ ವಿಶ್ವ ಅಕ್ಕ (Association of Kannada Kootas of America -AKKA) ಸಮ್ಮೇಳನದ ಮುಖ್ಯ ಅತಿಥಿಯಾಗಿ ಅರುಣ್‌ ಯೋಗಿರಾಜ್‌ ಅಮೆರಿಕಕ್ಕೆ ತೆರಳಬೇಕಿತ್ತು. ಈ ಸಂಬಂಧ ಅವರು ವೀಸಾ (Visa) ಪಡೆಯಲು ಅರ್ಜಿ ಹಾಕಿದ್ದರು. ಈ ವೇಳೆ ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸಿದೆ. ಇದನ್ನೂ ಓದಿ: ನಾಗಾರಾಧನೆ ವೇಳೆ ಭಾವೋದ್ವೇಗಕ್ಕೆ ಒಳಗಾದ ಹಿರಿಯ ನಟಿ ಜ್ಯೋತಿ

    ಅರುಣ್ ಯೋಗಿರಾಜ್ ಅವರ ಪತ್ನಿ ವಿಜೇತಾ ಅಮೆರಿಕಕ್ಕೆ ತೆರಳಿದ್ದಾರೆ.  ಆದರೆ ಯಾವ ಕಾರಣಕ್ಕೆ ಅರುಣ್‌ ಯೋಗಿರಾಜ್‌ ಅವರಿಗೆ  ಅಮೆರಿಕ ವೀಸಾ ನಿರಾಕರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ.

    ಅಮೇರಿಕದ ವರ್ಜೀನಿಯಾದ ರಿಚ್‌ಮಂಡ್‌ನಲ್ಲಿರುವ ಗ್ರೇಟರ್ ರಿಚ್‌ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆ.30 ರಿಂದ ಸೆ. 1ರವರೆಗೆ ಅಕ್ಕ ಸಮ್ಮೇಳನ ಆಯೋಜನೆಗೊಂಡಿದೆ.

     

  • ರಾಮ ಮಂದಿರ ನಿರ್ಮಾಣ ಮಾಡದಂತೆ ಕಾಂಗ್ರೆಸ್‌, ಹಿಂಬಾಲಕರಿಂದ ಕುತಂತ್ರ: ಮೋದಿ

    ರಾಮ ಮಂದಿರ ನಿರ್ಮಾಣ ಮಾಡದಂತೆ ಕಾಂಗ್ರೆಸ್‌, ಹಿಂಬಾಲಕರಿಂದ ಕುತಂತ್ರ: ಮೋದಿ

    ಕಾರವಾರ: ಕಾಂಗ್ರೆಸ್ ಪಕ್ಷ (Congress) ಸೇರಿದಂತೆ ಅವರ ಹಿಂಬಾಲಕರು ನ್ಯಾಯಾಲಯಕ್ಕೆ ಹೋಗಿ ರಾಮಮಂದಿರ (Ram Mandir) ನಿರ್ಮಾಣ ಮಾಡದಂತೆ ಕುತಂತ್ರ ಮಾಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಾಗ್ದಾಳಿ ನಡೆಸಿದ್ದಾರೆ.

    ಶಿರಸಿಯಲ್ಲಿ ಪಕ್ಷದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯೋಧ್ಯೆಯಲ್ಲಿ ನಮ್ಮ ರಾಮಮಂದಿರ ನಿರ್ಮಾಣಕ್ಕೆ ನಮ್ಮ ಪೂರ್ವಜರು 500 ವರ್ಷ ಹೋರಾಡಬೇಕಾಯಿತು. ರಾಮಮಂದಿರ ನಿರ್ಮಾಣಕ್ಕೆ ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ದೇಶ ಸ್ವತಂತ್ರವಾದ ತಕ್ಷಣವೇ ಈ ಕಾರ್ಯ ಮಾಡಬೇಕಾಗಿತ್ತು. ಆದರೆ ಅಂದು ಆಡಳಿತ ನಡೆಸಿದವರು ಮಾಡಲಿಲ್ಲ. ಈ ಕಾರ್ಯ ಮಾಡಲು 56 ಇಂಚಿನ ದೇಹ ಬೇಕಾಯಿತು ಎಂದು ಕಾಂಗ್ರೆಸ್‌ ವಿರುದ್ಧ ಕುಟುಕಿದರು. ಇದನ್ನೂಓದಿ: ಸಂಘ ಪರಿವಾರ ಎಂದಿಗೂ ಮೀಸಲಾತಿ ವಿರೋಧಿಸಿಲ್ಲ: ಆರ್‌ಎಸ್‌ಎಸ್‌ ಮುಖ್ಯಸ್ಥ

     

    ರಾಮಮಂದಿರ ಸರ್ಕಾರ ಹಣದಿಂದ ನಿರ್ಮಾಣವಾಗಲಿಲ್ಲ. ನಿಮ್ಮ ದಾನ-ಧರ್ಮದಿಂದ ಈ ಮಂದಿರ ನಿರ್ಮಾಣವಾಯಿತು. ಈ ಹಿಂದೆ ಮಾಡಿದ ಎಲ್ಲಾ ಪಾಪ ಕೃತಗಳನ್ನು ಮರೆತು ರಾಮಮಂದಿರ ಉದ್ವಾಟನೆಗೆ ಕಾಂಗ್ರೆಸ್ ಪಕ್ಷದ ಸೇರಿದಂತೆ ಇತರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಹೇಳಿದರು.

    ರಾಮ ಜನ್ಮಭೂಮಿ ಬಾಬರಿ ಮಸೀದಿ ಪ್ರಕರಣದ ಪ್ರಮುಖ ದೂರುದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರನ್ನು ಉಲ್ಲೇಖಿಸಿದ ಮೋದಿ, ಅನ್ಸಾರಿ ಕುಟುಂಬ ಮೂರು ತಲೆಮಾರುಗಳಿಂದ ಹೋರಾಟ ಮಾಡುತ್ತಾ ಬಂದಿತ್ತು. ಅನ್ಸಾರಿ ಕುಟುಂಬಕ್ಕೂ ಆಹ್ವಾನ ನೀಡಲಾಗಿತ್ತು . ಅವರು ರಾಮಮಂದಿರ ಉದ್ವಾಟನೆ ದಿನ ಇಡೀ ದಿನ ಉಪಸ್ಥಿತರಿದ್ದರು. ಇಷ್ಟೇ ಅಲ್ಲದೇ ಅವರ ರಕ್ಷಣೆಗೆ ಇದ್ದ ಹಿಂದೂ ಗನ್‌ ಮ್ಯಾನ್‌ಗೆ ರಾಮ ಮಂದಿರ ಮೂರ್ತಿಯನ್ನು ಕೊಡುಗೆ ನೀಡಿದ್ದರು ಎಂದರು.  ಇದನ್ನೂಓದಿ: ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯದಿಂದ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ನೇಹಾ ಹತ್ಯೆ: ಮೋದಿ

     

    ಹುಬ್ಬಳ್ಳಿಯ ನೇಹಾ ಪ್ರಕರಣವನ್ನು (Neha Case) ಪ್ರಸ್ತಾಪಿಸಿದ ಮೋದಿ, ಕರ್ನಾಟಕದಲ್ಲಿ ಒಂದು ಮಗಳು ಹತ್ಯೆಯಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕಾಂಗ್ರೆಸ್ (Congress) ಮತಬ್ಯಾಂಕ್‌ ತುಷ್ಟೀಕರಣ ಮಾಡುತ್ತಿದೆ. 2014ರ ಮೊದಲು ಬಾಂಬ್‌ ಸ್ಪೋಟಗಳ (Bomb Blast) ಸುದ್ದಿಗಳು ಬರುತ್ತಿದ್ದವು. ಆದರೆ 2014ರ ನಂತರ ಈ ಪ್ರಕರಣಗಳಿಗೆ ಕಡಿವಾಣ ಹಾಕಲಾಯಿತು. ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಐಟಿ ಹಬ್‌ ಬೆಂಗಳೂರಿನಲ್ಲಿ (Bengaluru) ಬಾಂಬ್ ಸ್ಪೋಟವಾಗಿದೆ. ಮೊದಲು ದೇಶಕ್ಕೆ ನುಗ್ಗಿ ಬಾಂಬ್ ಸ್ಫೋಟ ಮಾಡುತ್ತಿದ್ದರು. ಆದರೆ ಇಂದು ಹೊಸ ಹಿಂದೂಸ್ಥಾನ ಶತ್ರುಗಳ ಮನೆಗೆ ನುಗ್ಗಿ ಹೊಡೆಯುತ್ತಿದೆ ಎಂದು ಹೇಳಿದರು.

  • 500 ವರ್ಷದ ಬಳಿಕ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಅಭಿಷೇಕ, ಸೂರ್ಯ ತಿಲಕ!

    500 ವರ್ಷದ ಬಳಿಕ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಅಭಿಷೇಕ, ಸೂರ್ಯ ತಿಲಕ!

    ಅಯೋಧ್ಯೆ: 500 ವರ್ಷದ ಬಳಿಕ ಶ್ರೀರಾಮನ ಹುಟ್ಟಿದ ಸ್ಥಳ ಅಯೋಧ್ಯೆಯಲ್ಲಿ(Ayodhya) ರಾಮನವಮಿಯಂದು (Rama Navami) ಬಾಲರಾಮನಿಗೆ ಸೂರ್ಯ ಅಭಿಷೇಕ (Surya Tilak)ನಡೆಯಿತು.

    ಭಗವಾನ್ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ  ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿತು.

     

    ರಾಮ ಮಂದಿರದಲ್ಲಿ (Ram Mandir) ಸೂಕ್ತ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವನ್ನು ರಾಮ ಲಲ್ಲಾ ಮೂರ್ತಿಯ ಹಣೆಯನ್ನು ಸ್ಪರ್ಶಿಸಿತು. ಯಾವುದೇ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಕೆ ಮಾಡದೇ ಸೂರ್ಯನ ಕಿರಣಗಳು ನೇರವಾಗಿ ಬಾಲ ರಾಮನ ಹಣೆಯನ್ನು ಸ್ಪರ್ಶಿಸುವಂತೆ ಮಾಡಲು ಮಸೂರಗಳನ್ನು ಮಾತ್ರ ಬಳಕೆ ಮಾಡಲಾಗಿತ್ತು.  ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?

    ಬಾಲಕ ರಾಮ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಮೊದಲ ರಾಮನವಮಿ ನಡೆಯುತ್ತಿದ್ದು, ಅಯೋಧ್ಯೆಯಲ್ಲಿ ಸಡಗರ ಕಳೆಗಟ್ಟಿದೆ. ಜಾನೆಯೇ ಬೆಳಗಿನ ಜಾವ 3.30ಕ್ಕೆ ಮಂಗಳಾರತಿ ನೆರವೇರಿಸುವುದರ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ರಾತ್ರಿ 11 ರ ತನಕವೂ ಭಕ್ತರಿಗೆ ರಾಮನ ದರ್ಶನ ಸಿಗಲಿದೆ. ಇಂದು ಬರೋಬ್ಬರಿ 19 ಗಂಟೆಗಳ ಕಾಲ ರಾಮ ಮಂದಿರ ಓಪನ್ ಇರಲಿದೆ.

    ಸಂಭ್ರಮದ ಹಬ್ಬಕ್ಕೆ ಮಂದಿರದ ಆಡಳಿತ ಮಂಡಳಿ ಈಗಾಗಲೇ ಸಕಲ ಸಿದ್ಧತೆ ಮಾಡಿದೆ. ಹಬ್ಬದ ದಿನದಂದು ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್ ನಿಂದ ಈಗಾಗಲೇ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದ್ದು, ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲಾಗುತ್ತದೆ.

    ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮನವಮಿ ಆಗಿರುವ ಕಾರಣದಿಂದ ಹೆಚ್ಚಿನ ಸಂಖ್ಯೆ ರಾಮಭಕ್ತರು ಸೇರುವ ನಿರೀಕ್ಷೆಯಿದೆ. ರಾಮನವಮಿ ಸಂಭ್ರಮದಲ್ಲಿ ಅಯೋಧ್ಯೆಗೆ 40 ಲಕ್ಷ ಜನ ಭಕ್ತರು ಬರುವ ನಿರೀಕ್ಷೆಯಿದೆ. ಗಣ್ಯ ಅತಿಥಿಗಳು ಏ.19 ರ ತನಕ ರಾಮದರ್ಶನ ಮುಂದೂಡಿ ಎಂದಿರುವ ರಾಮಜನ್ಮ ಭೂಮಿ ಟ್ರಸ್ಟ್ ಈ 19 ರ ತನಕ ಬುಕ್ಕಿಂಗ್ ರದ್ದು ಮಾಡಿದ್ದು, ಎಲ್ಲರೂ ಸರತಿ ಸಾಲಿನಲ್ಲಿಯೇ ನಿಂತು ದರ್ಶನ ಪಡೆಯುವಂತೆ ಹೇಳಿದೆ. ಬಾಲಕರಾಮನ ಪೂಜೆ ಕೈಂಕರ್ಯಗಳು ನೇರ ಪ್ರಸಾರಗೊಳ್ಳುತ್ತಿದ್ದು, ಅಯೋಧ್ಯೆಯಾದ್ಯಂತ 100 ಎಲ್ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿದೆ.