Tag: ರಾಮ ನವಮಿ

  • ಬೆಂಗಳೂರಿನ ಎಲ್ಲೆಡೆ ರಾಮನವಮಿಯ ಸಂಭ್ರಮ – ಬಾಲರಾಮನ ವೇಷ ತೊಟ್ಟು ಬಂದ ಪುಟಾಣಿಗಳು

    ಬೆಂಗಳೂರಿನ ಎಲ್ಲೆಡೆ ರಾಮನವಮಿಯ ಸಂಭ್ರಮ – ಬಾಲರಾಮನ ವೇಷ ತೊಟ್ಟು ಬಂದ ಪುಟಾಣಿಗಳು

    – ರಾಜಾಜಿನಗರದ ರಾಮಮಂದಿರದಲ್ಲಿ ವಿಶೇಷ ಪೂಜೆ

    ಬೆಂಗಳೂರು: ರಾಜಧಾನಿಯಲ್ಲಿ ಇಂದು ಎಲ್ಲೆಡೆ ರಾಮನವಮಿ(Ram Navami) ಸಂಭ್ರಮ ಮನೆಮಾಡಿದ್ದು, ದೇವಾಲಯಗಳಲ್ಲಿ ರಾಮನಾಮ ಸ್ಮರಣೆ ಮೊಳಗಿದೆ. ರಾಮನವಮಿ ಪ್ರಯುಕ್ತ ರಾಜಾಜಿನಗರದ(RajajiNagara) ರಾಮಮಂದಿರದಲ್ಲಿ ವಿಶೇಷ ಪೂಜೆ-ಪುನಸ್ಕಾರ ನೆರವೇರಿತು.

    ರಾಮನವಮಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ, ಪೂಜೆ ಮಾಡಲಾಗಿದೆ. ಇದೀಗ ಭಕ್ತಗಣ ರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಲ್ಲದೇ 63 ಅಡಿ ಎತ್ತರದ ರಾಮಾಂಜನೇಯ ಮೂರ್ತಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ದೇಗುಲದತ್ತ ಭಕ್ತ ಸಾಗರ ಹರಿದುಬರುತ್ತಿದೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಸಾವು

    ರಥೋತ್ಸವ ಮೆರವಣಿಗೆಗೆ ಬ್ರಹ್ಮರಥವು ಸಜ್ಜಾಗಿ ನಿಂತಿದ್ದು, ದೇವಾಲಯದಲ್ಲಿ ಮಂಡಲ ಹಾಕಿ ವಿಶೇಷ ಪೂಜೆ-ಪುನಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

    ಇತ್ತ ಪುಟಾಣಿಗಳು ಬಾಲರಾಮನ ವೇಷ ತೊಟ್ಟು ಬಂದಿದ್ದು, ರಥೋತ್ಸವದಲ್ಲಿ ಎಲ್ಲರ ಗಮನ ಸೆಳೆಯಿತು. ಇನ್ನೂ ಶ್ರೀರಾಮನ ಭವ್ಯ ರಥವು ರಾಜಾಜಿನಗರದ ರಾಜಬೀದಿಯಲ್ಲಿ ಸಾಗಿತು.

  • ಪಶ್ಚಿಮ ಬಂಗಾಳ – ರಾಮನವಮಿ ಶೋಭಾಯಾತ್ರೆಯ ವೇಳೆ ಬಾಂಬ್‌ ಸ್ಫೋಟ, ಕಲ್ಲು ತೂರಾಟ

    ಪಶ್ಚಿಮ ಬಂಗಾಳ – ರಾಮನವಮಿ ಶೋಭಾಯಾತ್ರೆಯ ವೇಳೆ ಬಾಂಬ್‌ ಸ್ಫೋಟ, ಕಲ್ಲು ತೂರಾಟ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಧರ್ಮ ದಂಗಲ್ ಮುಂದುವರೆದಿದೆ. ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಭಾನುವಾರ ಸಂಜೆ ರಾಮನವಮಿ ಶೋಭಾಯಾತ್ರೆ (Rama Navami Procession) ವೇಳೆ ಹಿಂಸಾತ್ಮಕ ಘಟನೆಗಳು ನಡೆದಿದೆ.

    ಹಿಂದೂ (Hindu) ಧರ್ಮೀಯರ ಮೇಲೆ ಕೆಲ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಶೋಭಾ ಯಾತ್ರೆ ಮಸೀದಿ ಮುಂದೆ ತೆರಳುವಾಗಲೇ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಹಿಂಸಾಚಾರದಲ್ಲಿ ಮಹಿಳೆ ಸೇರಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದ್ದಾರೆ. ಇದನ್ನೂ ಓದಿ: Exclusive: ಪ್ರತಿದಿನ 50 ಕೋಟಿ ಕಾಸು ಮಾಡದೇ ಡಿಕೆಶಿ ಮಲಗೋದಿಲ್ಲವಂತೆ: ಹೆಚ್‌ಡಿಕೆ ಬಾಂಬ್‌

    ಶೋಭಾಯಾತ್ರೆ ಸಮೀಪವೇ ಬಾಂಬ್ ಸ್ಫೋಟ (Bomb Blast) ಕೂಡ ನಡೆದಿದೆ. ಮೇದಿನಪುರದ ಎಗ್ರಾ ಎಂಬಲ್ಲಿಯೂ ಘರ್ಷಣೆ ನಡೆದಿದೆ. ಹಿಂಸಾಚಾರದ ದೃಶ್ಯಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

    ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಿಎಂ ಮಮತಾ ಬ್ಯಾನರ್ಜಿಯ (Mamata Banerjee) ಪ್ರಚೋದನಾಕಾರಿ ಭಾಷಣವೇ ಕಾರಣ ಎಂದು ಬಿಜೆಪಿ (BJP) ಗಂಭೀರ ಆರೋಪ ಮಾಡಿದೆ. ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ಹಿಂಸಾಚಾರದ ಬಗ್ಗೆ ಎನ್‌ಐಎ (NIA) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಅಣಕು ಮತ ಎಣಿಕೆ ವೇಳೆ ಬಿಜೆಪಿಗೆ ಹೆಚ್ಚುವರಿ ಮತ – ವರದಿ ಸುಳ್ಳೆಂದ ಚುನಾವಣಾ ಆಯೋಗ

    ಈ ಆರೋಪಗಳನ್ನು ತಳ್ಳಿ ಹಾಕಿರುವ ಸಿಎಂ ಮಮತಾ ಬ್ಯಾನರ್ಜಿ, ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಮುರ್ಷಿದಾಬಾದ್ ಹಿಂಸಾಚಾರ ಪೂರ್ವನಿಯೋಜಿತ. ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿಯೇ ನಡೆಸಿರುವ ಕುತಂತ್ರವಿದು ಎಂದು ಮಮತಾ ಕಿಡಿಕಾರಿದ್ದಾರೆ. ಘರ್ಷಣೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಉಡುಪಿಯಲ್ಲಿ ಅದ್ದೂರಿ ರಾಮೋತ್ಸವ ನಡೆದಿಲ್ಲ: ಕಿಡಿಗೇಡಿಗಳ ಅಪಪ್ರಚಾರಕ್ಕೆ ಪಲಿಮಾರು ಮಠ ಖಂಡನೆ

    ಉಡುಪಿಯಲ್ಲಿ ಅದ್ದೂರಿ ರಾಮೋತ್ಸವ ನಡೆದಿಲ್ಲ: ಕಿಡಿಗೇಡಿಗಳ ಅಪಪ್ರಚಾರಕ್ಕೆ ಪಲಿಮಾರು ಮಠ ಖಂಡನೆ

    ಉಡುಪಿ: ನಗರದಲ್ಲಿ ಗುರುವಾರ ಅದ್ದೂರಿ ರಾಮ ನವಮಿ ಉತ್ಸವ ನಡೆದಿಲ್ಲ. ಕೆಲ ಕಿಡಿಗೇಡಿಗಳು ಮಠದ ಹಳೆಯ ಫೋಟೋಗಳನ್ನು ಬಳಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಳೆದ 10 ದಿನಗಳಿಂದ ಉಡುಪಿ ಜಿಲ್ಲೆ ಕಾಪುವಿನ ಕುತ್ಯಾರು ಗ್ರಾಮದಲ್ಲಿ ಸರಳವಾದ ರಾಮೋತ್ಸವ ನಡೆಯುತ್ತಿದೆ. ಪಲಿಮಾರು ಶ್ರೀಗಳ ಶಿಷ್ಯರಾದ ರಾಜಗೋಪಾಲ ಆಚಾರ್ಯ ಎಂಬವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಭಾರತ ಲಾಕ್‍ಡೌನ್ ಆಗಿರುವುದರಿಂದ ಎಲ್ಲಾ ಧಾರ್ಮಿಕ ಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು. ಕೇವಲ ಐದಾರು ಜನ ಅರ್ಚಕರು ಇಬ್ಬರು ಸ್ವಾಮೀಜಿ ಧಾರ್ಮಿಕ ವಿಧಿವಿಧಾನ ನಡೆಸುತ್ತಿದ್ದರು.

    ರಾಮನವಮಿಯ ದಿನವಾದ ಗುರುವಾರ ಪಲಿಮಾರು ಹಿರಿಯ ಕಿರಿಯ ಶ್ರೀಗಳು ಅಭಿಷೇಕ, ಪೂಜೆ ಮಾಡಿದ್ದರು. ಧಾರ್ಮಿಕವಾಗಿ ಅವಶ್ಯವಿದ್ದ ಅರ್ಚಕರು ಈ ಸಂದರ್ಭ ಜೊತೆಗಿದ್ದರು. ಆದರೆ ಕೆಲ ಕಿಡಿಗೇಡಿಗಳು ತಿಂಗಳ ಹಿಂದಿನ ಪೂರ್ವಭಾವಿ ಸಭೆಯ ಫೋಟೋವನ್ನು ಬಳಸಿ ಇದೆಂಥಾ ನ್ಯಾಯ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಹಳೆಯ ಫೋಟೋ ಇಟ್ಟು ಫಾರ್ವರ್ಡ್ ಮಾಡುತ್ತಿದ್ದಾರೆ. ಪೊಲೀಸರು ಮತ್ತು ಮಾಧ್ಯಮದ ಮೇಲೆ ಕಿಡಿ ಕಾರುತ್ತಿದ್ದಾರೆ. ಹಿಂದೂಗಳಿಗೆ ಒಂದು ನ್ಯಾಯ, ಮುಸಲ್ಮಾನರಿಗೆ ಇನ್ನೊಂದು ನ್ಯಾಯನಾ ಅಂತ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

    ಈ ನಡುವೆ ಪಲಿಮಾರು ಮಠದ ಪರವಾಗಿ ರಾಮೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಕುತ್ಯಾರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಅಪಪ್ರಚಾರ. ರಾಮನ ವಿಚಾರದಲ್ಲಿ ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ. ರಾಮೋತ್ಸವದಲ್ಲಿ ಐದಾರು ಜನ ಬಿಟ್ಟರೆ ಸಮಿತಿಯ ಸದಸ್ಯರು ಕೂಡ ಪಾಲ್ಗೊಂಡಿಲ್ಲ. 10 ದಿನದ ಕಾರ್ಯಕ್ರಮಕ್ಕೆ ಮೂರ್ನಾಲ್ಕು ತಿಂಗಳಿಂದ ತಯಾರಿ ಮಾಡಿದ್ದೆವು. ಆದರೆ ಕಾನೂನು ಮೀರಬಾರದೆಂದು ದೇವರ ಕಾರ್ಯಕ್ರಮ ಸರಳವಾಗಿ ನಡೆಸಿದ್ದೇವೆ. ಪೂರ್ವಭಾವಿ ಸಭೆಯ ಸಂದರ್ಭದ ಹಳೆಯ ಫೋಟೋಗಳನ್ನು ಬಳಸಿ ವೈರಲ್ ಮಾಡಿರುವುದು ಖಂಡನೀಯ ಎಂದಿದ್ದಾರೆ. ಪಲಿಮಾರು ಶ್ರೀಗಳಿಗೆ ಇದರಿಂದ ಬೇಸರವಾಗಿದೆ ಎಂದು ಹೇಳಿದರು.