ಬೆಂಗಳೂರು: ರಾಜಧಾನಿಯಲ್ಲಿ ಇಂದು ಎಲ್ಲೆಡೆ ರಾಮನವಮಿ(Ram Navami) ಸಂಭ್ರಮ ಮನೆಮಾಡಿದ್ದು, ದೇವಾಲಯಗಳಲ್ಲಿ ರಾಮನಾಮ ಸ್ಮರಣೆ ಮೊಳಗಿದೆ. ರಾಮನವಮಿ ಪ್ರಯುಕ್ತ ರಾಜಾಜಿನಗರದ(RajajiNagara) ರಾಮಮಂದಿರದಲ್ಲಿ ವಿಶೇಷ ಪೂಜೆ-ಪುನಸ್ಕಾರ ನೆರವೇರಿತು.
ರಾಮನವಮಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ, ಪೂಜೆ ಮಾಡಲಾಗಿದೆ. ಇದೀಗ ಭಕ್ತಗಣ ರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಲ್ಲದೇ 63 ಅಡಿ ಎತ್ತರದ ರಾಮಾಂಜನೇಯ ಮೂರ್ತಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ದೇಗುಲದತ್ತ ಭಕ್ತ ಸಾಗರ ಹರಿದುಬರುತ್ತಿದೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್ ಕೋಸ್ಟರ್ ಆಡುವಾಗ ಕೆಳಗೆ ಬಿದ್ದು ಸಾವು
ಭಾರತೀಯ ಸಂಸ್ಕೃತಿಯ ಬುನಾದಿಯೇ ರಾಮಾಯಣ ಮಹಾಕಾವ್ಯ. ಯುಗಯುಗಾಂತರಗಳಿಂದ ಧರ್ಮದ ಬೇರಾಗಿ, ಜನಪದ ಜೀವನ ಸೂತ್ರವಾಗಿ, ಭರತಖಂಡದ ಮಾರ್ಗದರ್ಶಿಯಾಗಿದೆ. ರಾಮನ ಆದರ್ಶ, ಲಕ್ಷ್ಮಣನ ತ್ಯಾಗ, ಸೀತೆಯ ನಿಷ್ಠೆ, ಹನುಮಂತನ ಸ್ವಾಮಿ ಭಕ್ತಿ, ರಾಮರಾಜ್ಯದ ಕನಸುಗಳು ಇಂದಿಗೂ ಭಾರತೀಯ ವಿಚಾರಧಾರೆಯ ಸ್ಪೂರ್ತಿಸೆಲೆಯಾಗಿದೆ.
ನೀವು ಭಾರತದ ಯಾವುದೇ ಮೂಲೆಗೆ ಹೋದರೂ ರಾಮ ಎನ್ನುವ ಹೆಸರನ್ನು ಕೇಳಬಹುದು. ಯಾಕೆಂದರೆ ಆ ಹೆಸಡರಿನ ದೇವನಿಗೆ ಅಷ್ಟೊಂದು ಮಹತ್ವವಿದೆ ಮತ್ತು ಭಕ್ತರಿದ್ದಾರೆ. ಭಗವಾನ್ ರಾಮನು ವಿಷ್ಣುವಿನ 7ನೇ ಅವತಾರ ಎಂಬುದು ಪುರಾಣಗಳ ಉಲ್ಲೇಖ ಮತ್ತು ಪ್ರಪಂಚದಾದ್ಯಂತದ ಹಿಂದೂಗಳಿಂದ ಪೂಜಿಸಲ್ಪಡುವ ದೇವ. ರಾಮನು ಅತ್ಯಂತ ಶಕ್ತಿಶಾಲಿ ಮತ್ತು ಬುದ್ಧಿವಂತ ರಾಕ್ಷಸನಾದ ರಾವಣನನ್ನು ಸೋಲಿಸಿದನು ಮತ್ತು ಅವನ ದುಷ್ಟತನದಿಂದ ನಮ್ಮನ್ನು ರಕ್ಷಿಸಿದನು. ಆದ್ದರಿಂದಲೇ ರಾಮನು ಭಾರತದ ದಿವ್ಯ ಭೂಮಿಯ ಪ್ರತಿಯೊಬ್ಬರ ಹೃದಯದಲ್ಲೂ, ಪ್ರತಿಯೊಂದು ಮೂಲೆಯಲ್ಲೂ ನೆಲೆಸಿದ್ದಾನೆ. ಆದ್ದರಿಂದಲೇ ಭಾರತದ ಪ್ರತಿಯೊಂದು ಸ್ಥಳದಲ್ಲೂ ಒಂದಿಲ್ಲೊಂದು ರೂಪದಲ್ಲಿ ಶ್ರೀರಾಮನ ದೇವಾಲಯಗಳನ್ನು ಕಾಣುತ್ತೇವೆ. ಆಧ್ಯಾತ್ಮಿಕ ಅನುಭವ ಪಡೆಯಲು ಭಯಸುವವರು ಶ್ರೀರಾಮನವಮಿಯಂದು ರಾಮನ ದೇವಾಲಯಗಳಿಗೆ ಭೇಟಿ ನೀಡಿ ಸಂತೃಪ್ತಿ ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಮನೆಯಲ್ಲೇ ಶ್ರೀರಾಮನ ಭಜನೆ, ಭಕ್ತಿ ಗೀತೆಗಳನ್ನು ಹಾಡಿ ತಮ್ಮ ಭಕ್ತಿಯನ್ನ ಸೂಚಿಸುತ್ತಾರೆ. ಹಾಗಾದ್ರೆ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಆಧ್ಯಾತ್ಮಿಕ ಶಕ್ತಿಗೆ ಹೆಸರು ವಾಸಿಯಾಗಿರುವ ದೇವಾಲಯಗಳ ಬಗ್ಗೆ ತಿಳಿಯೋಣ..
ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ
ಅಯೋಧ್ಯೆಯಲ್ಲಿರುವ ರಾಮಮಂದಿರವು ಯಾವಾಗಲೂ ಹಿಂದೂಗಳಿಗೆ ಅತ್ಯಂತ ಶ್ರೇಷ್ಠವಾದ ಸ್ಥಳವಾಗಿದೆ. ಏಕೆಂದರೆ ಇದು ರಾಮನ ಜನ್ಮಸ್ಥಳವಾದ ʻರಾಮ ಜನ್ಮ ಭೂಮಿ’ ಎಂದು ಹೇಳಲಾಗುತ್ತದೆ. ಫೈಜಾಬಾದ್ ಜಿಲ್ಲೆಯ ಸರಯು ನದಿಯ ದಡದಲ್ಲಿರುವ ಈ ರಾಮಮಂದಿರವು ಹಿಂದೂಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ತಮ್ಮ ಆದರ್ಶ ರಾಜ ಶ್ರೀರಾಮ ಜನಿಸಿದ ಸ್ಥಳವನ್ನು ನೋಡಲು ಈ ದೈವಿಕ ಭೂಮಿಗೆ ಬರುತ್ತಾರೆ. ಅದರಲ್ಲೂ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಳಿಕ ಇಲ್ಲಿಗೆ ಭೇಟಿ ನೀಡುವ ಶ್ರೀರಾಮಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.
ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನ, ಕೇರಳ
ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನ, ಕೇರಳ
ತ್ರಿಪ್ರಯಾರ್ ಶ್ರೀರಾಮ ದೇವಾಲಯವು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ. ಈ ರಾಮ ಮಂದಿರವು ಇಲ್ಲಿ ಸ್ಥಾಪಿಸಲಾದ ವಿಗ್ರಹದ ಹಿಂದೆ ಬಹಳ ಆಕರ್ಷಕವಾದ ಕಥೆಯನ್ನು ಹೊಂದಿದೆ. ತ್ರಿಪ್ರಯಾರ್‌ನಲ್ಲಿ ಇರಿಸಲಾಗಿರುವ ವಿಗ್ರಹವನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾದ ಶ್ರೀಕೃಷ್ಣನು ಪೂಜಿಸಲು ಬಳಸುತ್ತಿದ್ದನೆಂದು ನಂಬಲಾಗಿದೆ. ಈ ವಿಗ್ರಹವು ಒಮ್ಮೆ ಸಮುದ್ರದ ಪಾಲಾಗಿತ್ತು. ಆದರೆ, ಕೇರಳದ ಮೀನುಗಾಗರರಿಗೆ ಸಿಕ್ಕಿ ಮತ್ತೆ ಇದನ್ನು ಮರು ಸ್ಥಾಪನೆ ಮಾಡಲಾಗಿದೆ. ಈ ಆಕರ್ಷಕವಾದ ದೇವಾಲಯದಲ್ಲಿ ನೀವು ಆಸಕ್ತಿದಾಯಕ ಶಿಲ್ಪಗಳು ಮತ್ತು ಮರದ ಕೆತ್ತನೆಗಳನ್ನು ಕಾಣಬಹುದು, ಇದು ಭಾರತದ ಅತ್ಯುತ್ತಮ ರಾಮ ದೇವಾಲಯಗಳಲ್ಲಿ ಒಂದಾಗಿದೆ. ತ್ರಿಪ್ರಯಾರ್‌ಗೆ ಭೇಟಿ ನೀಡುವುದರಿಂದ ನಿಮ್ಮ ಸುತ್ತಮುತ್ತಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರಾಗುತ್ತದೆ ಎನ್ನುವ ನಂಬಿಕೆ ಈಗಲೂ ಜನರಿಗೆ ಇದೆ.
ನಾಸಿಕ್‌ನ ಕಲಾರಾಮ ಮಂದಿರ
ನಾಸಿಕ್‌ನ ಕಲಾರಾಮ ಮಂದಿರ
ನಾಸಿಕ್‌ನ ಕಲಾರಾಮ ಮಂದಿರವು ಮಹಾರಾಷ್ಟ್ರದ ನಾಸಿಕ್‌ನ ಪಂಚವಟಿ ಪ್ರದೇಶದಲ್ಲಿ ನೆಲೆಗೊಂಡಿರುವ ಭಾರತದ ಒಂದು ಅದ್ಭುತವಾದ ರಾಮಮಂದಿರವಾಗಿದೆ. ಕಲಾರಾಮ ಎಂದರೆ ‘ಕಪ್ಪು ರಾಮ’ ಎಂದರ್ಥ ಮತ್ತು ರಾಮನ 2 ಅಡಿ ಎತ್ತರದ ಕಪ್ಪು ಪ್ರತಿಮೆಯಿಂದಾಗಿ ಈ ದೇವಾಲಯಕ್ಕೆ ಈ ಹೆಸರು ಬಂದಿದೆ. ಸೀತಾದೇವಿ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ. ರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಿದಾಗ, ಹತ್ತನೇ ವರ್ಷದ ನಂತರ, ಅವನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಪಂಚವಟಿಯಲ್ಲಿ ಗೋದಾವರಿ ನದಿಯ ಪಕ್ಕದಲ್ಲಿ ವಾಸಿಸಲು ಬಂದಿದ್ದನು ಎಂದು ನಂಬಲಾಗಿದೆ. ಒಮ್ಮೆ ಕನಸಿನಲ್ಲಿ ಸರ್ದಾರ್ ರಂಗರೂ ಓಧೇಕರ್ ಗೋದಾವರಿ ನದಿಯಲ್ಲಿ ಕಪ್ಪು ಕಲ್ಲಿನ ದೃಶ್ಯವನ್ನು ನೋಡುತ್ತಾರೆ. ಮರುದಿನ ನದಿಯಿಂದ ಆ ಕಪ್ಪು ಕಲ್ಲನ್ನು ತೆಗೆದು ಕಲಾರಾಮ ರಾಮ ಮಂದಿರಲ್ಲಿ ನಿರ್ಮಿಸಿದರು.
ತೆಲಂಗಾಣದ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ
ತೆಲಂಗಾಣದ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ
ಸೀತಾ ರಾಮಚಂದ್ರಸ್ವಾಮಿ ದೇವಾಲಯವು ಭಾರತದ ಅತ್ಯಂತ ಪ್ರಸಿದ್ಧವಾದ ರಾಮಮಂದಿರಗಳಲ್ಲಿ ಒಂದಾಗಿದೆ. ಲಂಕೆಯಿಂದ ಸೀತೆಯನ್ನು ಮರಳಿ ಕರೆತರಲು ರಾಮನು ಗೋದಾವರಿ ನದಿಯನ್ನು ದಾಟಿದ ಮಹತ್ವಪೂರ್ಣ ಇತಿಹಾಸವನ್ನು ಹೊಂದಿದೆ. ದೇವಾಲಯದ ಒಳಗೆ ಪ್ರತಿಷ್ಠಾಪಿಸಲಾದ ವಿಗ್ರಹವು ತ್ರಿಭಂಗನ ಭಂಗಿಯಲ್ಲಿದೆ. ಭಗವಾನ್ ರಾಮನು ತನ್ನ ಕೈಯಲ್ಲಿ ಧನಸ್ಸು ಮತ್ತು ಬಾಣವನ್ನು ಹಿಡಿದಿದ್ದಾನೆ ಮತ್ತು ಸೀತಾ ದೇವಿಯು ಕೈಯಲ್ಲಿ ಕಮಲವನ್ನು ಹಿಡಿದು ಅವನ ಪಕ್ಕದಲ್ಲಿ ನಿಂತಿದ್ದಾಳೆ.
ರಾಮರಾಜ ದೇವಾಲಯ, ಮಧ್ಯಪ್ರದೇಶ
ರಾಮರಾಜ ದೇವಾಲಯ, ಮಧ್ಯಪ್ರದೇಶ
ರಾಮರಾಜ ದೇವಾಲಯವು ಭಾರತದಲ್ಲಿ ರಾಮನನ್ನು ದೇವರಂತೆ ಅಲ್ಲ, ರಾಜನಾಗಿ ಪೂಜಿಸುವ ಏಕೈಕ ದೇವಾಲಯವಾಗಿದೆ. ಈ ರಾಮಮಂದಿರವನ್ನು ಭವ್ಯವಾದ ಕೋಟೆಯಾಗಿ ನಿರ್ಮಿಸಲಾಗಿದ್ದು, ಜೊತೆಗೆ ಪೊಲೀಸರು ದೇವಾಲಯದ ಕಾವಲುಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ರಾಜ ರಾಮನಿಗೆ ಆಯುಧ ನಮಸ್ಕಾರವನ್ನು ನೀಡಲಾಗುತ್ತದೆ. ಇದು ಭಾರತದ ಅತ್ಯುತ್ತಮ ರಾಮ ದೇವಾಲಯಗಳಲ್ಲಿ ಒಂದಾಗಿದೆ.
ಧರ್ಮಸ್ಥಳ ರಾಮ ಮಂದಿರ
ಧರ್ಮಸ್ಥಳ ರಾಮ ಮಂದಿರ
ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ, ದೇವಾಲಯದ ತಾಣವು ಸಾಟಿಯಿಲ್ಲದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಪುರಾಣದ ಪ್ರಕಾರ, ಭಗವಾನ್ ರಾಮನು ‘ಸೀತಾನ್ವೇಷಣೆ ’ ಅಂದರೆ ಸೀತೆಯನ್ನು ಹುಡುಕುತ್ತಿದ್ದ ಸಮಯದಲ್ಲಿ ಸ್ವಲ್ಪ ಕಾಲ ಇಲ್ಲಿಯೇ ಇದ್ದರು. ಶ್ರೀಮಂತ ವಿನ್ಯಾಸ ಕಲಾತ್ಮಕ ಸೌಂದರ್ಯದಿಂದ ಸಮೃದ್ಧವಾಗಿರುವ ಈ ದೇವಾಲಯದಲ್ಲಿ ತಮಿಳುನಾಡಿನ ‘ವಾಸ್ತು’, ರಾಜಸ್ಥಾನದ ಶ್ರೀಮಂತ ಗ್ರಾನೈಟ್ ಕಲ್ಲುಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ರಾಜಸ್ಥಾನದ ಶಿಲ್ಪಿಗಳು ಕೆತ್ತಿದ ಸುಂದರ ವಿನ್ಯಾಸಗಳಿವೆ.
ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ರಾಮನ ದೇವಾಲಯ ನಿರ್ಮಾಣ ಕಾರ್ಯ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ.
ರಾಮ ಮಂದಿರ ದೇವಾಲಯ ಸಂಬಂಧ ಮಾಹಿತಿ ನೀಡಲೆಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನಲ್ಲಿ ಟ್ವಿಟ್ಟರ್‌ನಲ್ಲಿ ಖಾತೆಯನ್ನು ತೆರೆಯಲಾಗಿದೆ.
ರಾಮ ಮಂದಿರ ದೇವಾಲಯದ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ(ಸಿಬಿಆರ್‌ಐ), ಮದ್ರಾಸ್ ಐಐಟಿ ಮತ್ತು ಎಲ್ ಆಂಡ್ ಟಿ ಕಂಪನಿಯ ಎಂಜಿನಿಯರ್‌ಗಳು ಈಗ ಮಂದಿರ ನಿರ್ಮಾಣವಾಗುವ ಭಾಗದಲ್ಲಿರುವ ಮಣ್ಣನ್ನು ಪರೀಕ್ಷಿಸುತ್ತಿದ್ದಾರೆ. 36-40 ತಿಂಗಳ ಒಳಗಡೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಟ್ವೀಟ್ ಮಾಡಿ ತಿಳಿಸಿದೆ.
ಎರಡನೇ ಟ್ವೀಟ್‌ನಲ್ಲಿ, ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ಮಂದಿರವನ್ನು ನಿರ್ಮಿಸಲಾಗುವುದು. ಭೂಕಂಪ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳ ಸಂಭವಿಸಿದರೂ ಅದನ್ನು ತಡೆಯಬಲ್ಲ ಸಾಮರ್ಥ್ಯ ಇರುವ ದೇವಾಲಯವನ್ನು ಕಟ್ಟಲಾಗುತ್ತದೆ. ಮಂದಿರ ನಿರ್ಮಾಣದಲ್ಲಿ ಕಬ್ಬಿಣ ಬಳಕೆ ಮಾಡುವುದಿಲ್ಲ ಎಂದು ತಿಳಿಸಿದೆ.
ಈ ಟ್ವೀಟ್‌ಗೆ ಜನರು ಕಬ್ಬಿಣ ಇಲ್ಲದೇ ದೇವಾಲಯವನ್ನು ಹೇಗೆ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಳುತ್ತಿದ್ದಾರೆ. ಇದಕ್ಕೆ ಕೆಲವರು ಹಿಂದಿನ ಕಾಲದ ದೇವಾಲಯದಲ್ಲಿ ಕಬ್ಬಿಣದ ಬಳಕೆ ಇರಲಿಲ್ಲ. ಕಬ್ಬಿಣದ ಬಳಕೆ ಮಾಡಿದರೆ ಹಲವು ವರ್ಷಗಳ ಬಳಿಕ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಈ ಹಿಂದೆ ನಿರ್ಮಾಣವಾದ ದೇವಾಲಯಗಳಲ್ಲಿ ಕಬ್ಬಿಣ ಇರಲಿಲ್ಲ. ಕಲ್ಲುಗಳನ್ನು ಬಳಸಿ ನಿರ್ಮಿಸಿದ ದೇವಾಲಯ ನೂರಾರು ವರ್ಷಗಳ ಕಾಲ ಬಾಳಿಕೆ ಬಂದಿದೆ ಎಂದು ಉತ್ತರಿಸಿದ್ದಾರೆ.
ಭೂಕಂಪ ಸಂಭವಿಸಿದರೂ ದೇವಾಲಯಕ್ಕೆ ಯಾವುದೇ ಹಾನಿ ಆಗದೇ ಇರುವ ಅತ್ಯುನ್ನತ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತದೆ.
ಯಾವುದೇ ದೊಡ್ಡ ಕಟ್ಟಡವನ್ನು ನಿರ್ಮಿಸಿದಾಗ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಭೂಕಂಪ ಸಂಭವಿಸಬಹುದು? ಎಷ್ಟು ತೀವ್ರತೆಯ ಭೂಕಂಪ ಸಂಭವಿಸಿದರೆ ಯಾವ ರೀತಿ ಹಾನಿಯಾಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ ನಿರ್ಮಾಣ ಮಾಡಲಾಗುತ್ತದೆ. ಈ ಲೆಕ್ಕಾಚಾರವನ್ನು ರಾಮಮಂದಿರ ನಿರ್ಮಾಣಕ್ಕೂ ಮಾಡಲಾಗಿದೆ.
ರಿಕ್ಟರ್ ಮಾಪಕದಲ್ಲಿ 10ರಷ್ಟು ತೀವ್ರತೆ ದಾಖಲಾದರೂ ದೇವಾಲಯಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಅಗೆದು ಭೂಸಾರ ಪರೀಕ್ಷೆ ಮಾಡಲಾಗಿದೆ. ಸಾವಿರ ವರ್ಷವಾದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಆಗಾಗ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ದೇಶದಲ್ಲಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡುವಾಗ ಇವುಗಳನ್ನು ಜಾಸ್ತಿ ಲೆಕ್ಕಾಚಾರ ಹಾಕಲಾಗುತ್ತದೆ.
ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲನ್ಯಾಸ ಮಾಡಿದ್ದರು.
ಅಯೋಧ್ಯೆ: ಇಂದು ರಾಮಜನ್ಮ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದರೆ ರಾವಣ ದೇವಾಲಯದಲ್ಲೂ ಸಂಭ್ರಮ ಮನೆ ಮಾಡಿದೆ.
ಅಯೋಧ್ಯೆಯಿಂದ 650 ಕಿ.ಮೀ, ಗ್ರೇಟರ್ ನೋಯ್ಡಾದಿಂದ 10 ಕಿ.ಮೀ ದೂರದಲ್ಲಿರುವ ಗೌತಮ ಬುದ್ಧ ನಗರದ ಬಿಸ್ರಾಕ್ ಎಂಬಲ್ಲಿ ರಾವಣ ದೇವಾಲಯವಿದೆ. ಈ ದೇವಾಲಯದ ಅರ್ಚಕ ಮಹಾಂತ ರಾಮದಾಸ್ ಅವರು ಭೂಮಿ ಪೂಜೆ ನಡೆದ ಬಳಿಕ ಸಹಿ ಹಂಚಿ ಸಂಭ್ರಮಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವು, ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯುತ್ತಿರುವುದು ಸಂಭ್ರಮ ತಂದಿದೆ. ನಾನು ಲಾಡು ಹಂಚುವ ಮೂಲಕ ಈ ದಿನವನ್ನು ಸಂಭ್ರಮಿಸುತ್ತೇನೆ. ಈ ಜಾಗದಲ್ಲಿ ದೊಡ್ಡ ದೇವಾಲಯ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ರಾವಣ ಇಲ್ಲದೇ ಇದ್ದರೆ ರಾಮನ ಶಕ್ತಿ ಪ್ರಪಂಚಕ್ಕೆ ತಿಳಿಯುತ್ತಿರಲಿಲ್ಲ. ಒಂದು ವೇಳೆ ರಾಮ ಇಲ್ಲದೇ ಇದ್ದರೆ ರಾವಣ ಯಾರೂ ಎನ್ನುವುದು ಗೊತ್ತಾಗುತ್ತಿರಲಿಲ್ಲ ಎಂದು ತಿಳಿಸಿದರು.
ರಾವಣ ಬಹಳ ಜ್ಞಾನವಂತ ವ್ಯಕ್ತಿ. ಸೀತೆಯನ್ನು ಅಪಹರಣ ಮಾಡಿದ ಬಳಿಕ ಆತ ನೇರವಾಗಿ ಅರಮನೆಗೆ ಕರೆದುಕೊಂಡು ಹೋಗಲಿಲ್ಲ. ಅಶೋಕವನದಲ್ಲಿ ಇಟ್ಟು ಆಕೆಯ ಭದ್ರತೆಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಿದ್ದ. ರಾಮನನ್ನು ನಾವು ಮರ್ಯಾದಾ ಪುರೋಷೋತ್ತಮ ಎಂದು ಕರೆಯುತ್ತೇವೆ. ಅದೇ ರೀತಿಯಾಗಿ ರಾವಣನೂ ಸೀತೆಗೆ ಹಿಂಸೆ ನೀಡದೇ ಘನತೆಯನ್ನು ಎತ್ತಿ ಹಿಡಿದಿದ್ದ ಎಂದು ಹೇಳುತ್ತಾರೆ.
ಬಿಸ್ರಾಕ್ ರಾವಣನ ಜನ್ಮ ಸ್ಥಳವೆಂದು ಕಥೆಗಳು ಹೇಳುತ್ತವೆ. ಹೀಗಾಗಿ ಈ ಗ್ರಾಮದಲ್ಲಿ ರಾವಣನ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ರಾವಣ ಅಲ್ಲದೇ ಶಿವ, ಪಾರ್ವತಿ, ಕುಬೇರನ ದೇವಾಲಯವಿದೆ. ದೇವಾಲಯಕ್ಕೆ ಬರುವ ಶೇ.20 ರಷ್ಟು ಮಂದಿ ರಾವಣನನ್ನು ಪೂಜಿಸುತ್ತಾರೆ ಎಂದು ಮಹಾಂತ ರಾಮದಾಸ್ ಹೇಳುತ್ತಾರೆ.
ಅಯೋಧ್ಯೆ: ಭೂಕಂಪ ಸಂಭವಿಸಿದರೂ ದೇವಾಲಯಕ್ಕೆ ಯಾವುದೇ ಹಾನಿ ಆಗದೇ ಇರುವ ಅತ್ಯುನ್ನತ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತದೆ.
ಯಾವುದೇ ದೊಡ್ಡ ಕಟ್ಟಡವನ್ನು ನಿರ್ಮಿಸಿದಾಗ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಭೂಕಂಪ ಸಂಭವಿಸಬಹುದು? ಎಷ್ಟು ತೀವ್ರತೆಯ ಭೂಕಂಪ ಸಂಭವಿಸಿದರೆ ಯಾವ ರೀತಿ ಹಾನಿಯಾಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ ನಿರ್ಮಾಣ ಮಾಡಲಾಗುತ್ತದೆ. ಈ ಲೆಕ್ಕಾಚಾರವನ್ನು ರಾಮಮಂದಿರ ನಿರ್ಮಾಣಕ್ಕೂ ಮಾಡಲಾಗಿದೆ.
ರಿಕ್ಟರ್ ಮಾಪಕದಲ್ಲಿ 10ರಷ್ಟು ತೀವ್ರತೆ ದಾಖಲಾದರೂ ದೇವಾಲಯಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಅಗೆದು ಭೂಸಾರ ಪರೀಕ್ಷೆ ಮಾಡಲಾಗಿದೆ. ಸಾವಿರ ವರ್ಷವಾದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ
ಆಗಾಗ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ದೇಶದಲ್ಲಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡುವಾಗ ಇವುಗಳನ್ನು ಜಾಸ್ತಿ ಲೆಕ್ಕಾಚಾರ ಹಾಕಲಾಗುತ್ತದೆ.