Tag: ರಾಮ ಜನ್ಮಭೂಮಿ

  • ಸನ್ ಗ್ಲಾಸ್ ಕ್ಯಾಮೆರಾ ಬಳಸಿ ರಾಮಜನ್ಮಭೂಮಿಯ ಚಿತ್ರೀಕರಣ – ಆರೋಪಿ ಅರೆಸ್ಟ್‌

    ಸನ್ ಗ್ಲಾಸ್ ಕ್ಯಾಮೆರಾ ಬಳಸಿ ರಾಮಜನ್ಮಭೂಮಿಯ ಚಿತ್ರೀಕರಣ – ಆರೋಪಿ ಅರೆಸ್ಟ್‌

    ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ (Ram Janmabhoomi ) ಕ್ಯಾಮೆರಾ ಅಳವಡಿಸಿದ ಸನ್‌ಗ್ಲಾಸ್‌ಗಳನ್ನು (Camera Sunglass )ಹಿಡಿದುಕೊಂಡು ಫೋಟೋ ಕ್ಲಿಕ್ಕಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಗುಜರಾತ್‌ನ ವಡೋದರಾದ ಜಾನಿ ಜೈಕುಮಾರ್ ಎಂದು ಗುರುತಿಸಲಾಗಿದೆ. ರಾಮಜನ್ಮಭೂಮಿ ಮಾರ್ಗದಲ್ಲಿ ಅನೇಕ ಚೆಕ್‌ಪೋಸ್ಟ್‌ಗಳ ಮೂಲಕ ಹಾದುಹೋಗುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಸೋಮವಾರ ದೇವಾಲಯದ ಸಂಕೀರ್ಣದ ಸಿಂಗ್‌ದ್ವಾರದ ಬಳಿ ಆತ ತಲುಪಿದ್ದ ಅಲ್ಲಿ ಅವನನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಭದ್ರತಾ ಕಾರಣಗಳಿಗಾಗಿ ಆರೋಪಿಯು ದೇವಾಲಯದಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿ ನಿಷೇಧಿಸಲಾಗಿದೆ. ಆರೋಪಿ ನಿಯಮವನ್ನು ಉಲ್ಲಂಘಿಸಿದ್ದಾನೆ ಎಂದು ಆರೋಪಿಸಲಾಗಿದೆ.

    ಕ್ಯಾಮೆರಾ ಅಳವಡಿಸಿದ್ದ ಕನ್ನಡಕದೊಂದಿಗೆ ಆರೋಪಿ ಫೋಟೋಗಳನ್ನು ತೆಗೆಯುತ್ತಿದ್ದ. ಈ ವೇಳೆ ಕ್ಯಾಮೆರಾ ಲೈಟ್ ಮಿಂಚಿದಾಗ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ.

    ಕ್ಯಾಮೆರಾ ಅಳವಡಿಸಿದ್ದ ಕನ್ನಡಕದ ಬೆಲೆ 50,000 ರೂ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಎಸ್‌ಎಸ್‌ಎಫ್ ಜವಾನ್ ಅನುರಾಗ್ ಬಾಜ್‌ಪೇಯ್ ಅವರಿಗೆ ಬಹುಮಾನ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

  • ಹುಬ್ಬಳ್ಳಿ ಹಿಂದೂ ಕಾರ್ಯಕರ್ತನ ಬಂಧನ ಉದ್ದೇಶಪೂರ್ವಕ ಅಲ್ಲ, ಆಕಸ್ಮಿಕ: ಪರಮೇಶ್ವರ್

    ಬೆಂಗಳೂರು: ಹುಬ್ಬಳ್ಳಿ ಗಲಭೆ (Hubballi Riots) ವಿಚಾರವಾಗಿ ಹಿಂದೂ (Hindu) ಕಾರ್ಯಕರ್ತರ ಬಂಧನ ಉದ್ದೇಶಪೂರ್ವಕ ಅಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (Parameshwar) ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಹಳೆ ಪ್ರಕರಣಗಳನ್ನು ಕ್ಲೀಯರ್ ಮಾಡಿ ಎಂದುಆದೇಶ ಕೊಟ್ಟಿದ್ದೇವೆ. ಅದರಲ್ಲಿ ಹುಬ್ಬಳ್ಳಿಯಲ್ಲಿ ಅವರನ್ನು ಅರೆಸ್ಟ್ ಮಾಡಿದ್ದಾರೆ. ಕಾನೂನು ಅಡಿಯಲ್ಲಿ ಪೊಲಿಸ್ (Police) ಇಲಾಖೆ ಕ್ರಮ ಕೈಗೊಳ್ಳುತ್ತದೆ. ಹಿಂದೂ (Hindu) ಕಾರ್ಯಕರ್ತರು ಅಂತ ಅಲ್ಲ. ಅದಕ್ಕೆ ಆ ಬಣ್ಣವನ್ನು ಕಟ್ಟುವುದು ಸೂಕ್ತವಲ್ಲ ಎಂದರು. ಇದನ್ನೂ ಓದಿ: ರಾಮಜನ್ಮಭೂಮಿ ಹೋರಾಟದ ಕೇಸ್‌ಗೆ ಮರುಜೀವ – 31 ವರ್ಷದ ಬಳಿಕ ಹುಬ್ಬಳ್ಳಿ ಆರೋಪಿ ಬಂಧನ

    ಒಬ್ಬರನ್ನೇ ಬಂಧನ ಮಾಡಿಲ್ಲ, ಆಕಸ್ಮಿಕವಾಗಿ ಆಗಿರಬಹುದು. ಈ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ಯಾರಾದರೂ ಬಂಧನ ಮಾಡುತ್ತಾರಾ? ವರ್ಷಾನುಗಟ್ಟಲೇ ಬಾಕಿ ಉಳಿದಿರುವ ಕೇಸ್‌ಗಳನ್ನು ಕ್ಲೀಯರ್ ಮಾಡಲು ಹೇಳಿದ್ದೇವೆ. ಅದರಲ್ಲಿ ಹುಬ್ಬಳ್ಳಿಯಲ್ಲಿ 32 ಕೇಸುಗಳು ಪೆಂಡಿಂಗ್ ಇತ್ತು . ಅದನ್ನು ಓಪನ್ ಮಾಡಿ ಕ್ಲೀಯರ್‌ ಮಾಡುವ ವೇಳೆ ಈ ಕೇಸ್ ಬಂದಿದೆ. ಈ ಪ್ರಕರಣದಲ್ಲಿ ಅರೆಸ್ಟ್ ಮಾಡಿ ಕಸ್ಟಡಿಗೆ ಕೊಟ್ಟಿದಾರೆ. ಎಲ್ಲರಿಗೂ ಹೇಗೆ ಮಾಡಿದ್ದಾರೆ ಇವರಿಗೂ ಹಾಗೆ ಮಾಡಿದ್ದಾರೆ ಎಂದರು.  ಇದನ್ನೂ ಓದಿ: ಅಂದು ಹೋರಾಡಿದ್ದಕ್ಕೆ ಈಗ ರಾಮಭಕ್ತರನ್ನು ಬಂಧಿಸ್ತಿದ್ದಾರೆ, ನನ್ನನ್ನೂ ಬಂಧಿಸ್ತಾರಾ? – ಆರ್.ಅಶೋಕ್ ಕಿಡಿ

    ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಟ್ಟುಕೊಂಡಿಲ್ಲ. ಹಿಂದೂ ಕಾರ್ಯಕರ್ತರು ಇನ್ನೊಂದು ಕಾರ್ಯಕರ್ತರು ಎನ್ನುವ ಟಾರ್ಗೆಟ್ ಮಾಡಿ ಮಾಡುವ ಪ್ರಯತ್ನ ಮಾಡಿಲ್ಲ.ಕಾನೂನಿನ ಪ್ರಕಾರ ಯಾವ ಕ್ರಮ ಆಗಬೇಕು ಪೊಲೀಸ್ ಇಲಾಖೆ ಮಾಡುತ್ತದೆ. ಇದಕ್ಕೆ ಕೋಮು ಬಣ್ಣ ಕಟ್ಟುವುದು ಸೂಕ್ತ ಅಲ್ಲ ಎಂದು ಹೇಳಿದರು.

    ಈ ರೀತಿ ಬಹಳ ಕಡೆ ಕೇಸುಗಳನ್ನು ಬಿಟ್ಟು ಬಿಡುತ್ತಾರೆ. ಯಾವಾಗಲೂ ಒಮ್ಮೆ ಕೇಸ್ ರೀ ಓಪನ್ ಆಗುತ್ತದೆ. ಅಂಥದ್ದು ಏನಿತ್ತು ಈ ಪ್ರಕರಣದಲ್ಲಿ ಎನ್ನುವುದರ ಬಗ್ಗೆ ಆಯುಕ್ತರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

  • ರಾಮ ಜನ್ಮಭೂಮಿ ಆಂದೋಲನ ಆರಂಭಿಸಿದ್ದೇ ಸಿಖ್ಖರು: ರಾಜನಾಥ್‌ ಸಿಂಗ್‌

    ರಾಮ ಜನ್ಮಭೂಮಿ ಆಂದೋಲನ ಆರಂಭಿಸಿದ್ದೇ ಸಿಖ್ಖರು: ರಾಜನಾಥ್‌ ಸಿಂಗ್‌

    ಲಕ್ನೋ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ನಿರ್ಮಾಣಕ್ಕಾಗಿ ಆಂದೋಲನ ಆರಂಭಿಸಿದ್ದು ದೇಶದ ಸಿಖ್ ಸಮುದಾಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿಕೆ ನೀಡಿದ್ದಾರೆ.

    ಶನಿವಾರ ಉತ್ತರ ಪ್ರದೇಶದ (Uttar Pradesh) ಲಕ್ನೋದ ಗುರುದ್ವಾರ ಆಲಂಬಾಗ್‌ನಲ್ಲಿ ನಡೆದ ಗುರು ಗ್ರಂಥ ಸಾಹಿಬ್ ಪ್ರಕಾಶ್ ಉತ್ಸವದಲ್ಲಿ ರಾಜನಾಥ್‌ ಸಿಂಗ್‌ ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು, ಸನಾತನ ಧರ್ಮದ ರಕ್ಷಣೆಗೆ ಸಿಖ್ ಸಮುದಾಯ ಸಾಕಷ್ಟು ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 6 ಮಂದಿ ಸಾವು

    ರಾಮ ಜನ್ಮಭೂಮಿ ಆಂದೋಲನ ಪ್ರಾರಂಭಿಸಿದವರು ಸಿಖ್ಖರು. ಅವರ ಕೊಡುಗೆಯನ್ನು ಯಾವುದೇ ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಿಖ್ (Sikhs) ಸಮುದಾಯವು ಸನಾತನ ಧರ್ಮವನ್ನು ರಕ್ಷಿಸಲು ಸಾಕಷ್ಟು ಮಾಡಿದೆ ಎಂದು ತಿಳಿಸಿದ್ದಾರೆ.

    ರಾಮ ಜನ್ಮಭೂಮಿಗೆ ಸಿಖ್ ಸಮುದಾಯದ ಕೊಡುಗೆಯನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಸರ್ಕಾರಿ ದಾಖಲೆಯ ಪ್ರಕಾರ ನಾನು ಒಂದು ಪ್ರಮುಖ ಸಂಗತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಡಿಸೆಂಬರ್ 1, 1858 ರಂದು, ಗುರು ಗೋವಿಂದ್ ಸಿಂಗ್ ಅವರ ಘೋಷಣೆಗಳನ್ನು ಕೂಗುವ ಮೂಲಕ ಸಿಖ್ಖರ ಗುಂಪು ಆವರಣವನ್ನು ವಶಪಡಿಸಿಕೊಂಡಿತು. ಗೋಡೆಗಳ ಮೇಲೆ ಎಲ್ಲೆಡೆ ‘ರಾಮ್ ರಾಮ್’ ಎಂದು ಬರೆಯಿತು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಹಮಾಸ್‌ನ್ನು ಭಾರತದ ಭಯೋತ್ಪಾದಕರ ಪಟ್ಟಿಗೆ ಸೇರಿಸೋ ಕಾಲ ಬಂದಿದೆ: ಇಸ್ರೇಲಿ ರಾಯಭಾರಿ

    ಸಿಖ್ ಗುರು ಗುರುನಾನಕ್ ದೇವ್ ಅವರನ್ನು ಸ್ಮರಿಸಿದ ಸಚಿವರು, ಭಾರತ ಮತ್ತು ಭಾರತೀಯರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಗುರುನಾನಕ್ ದೇವ್ ಕೂಡ ನಮಗೆ ಈ ಸ್ಫೂರ್ತಿಯನ್ನು ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಳ್ಳಾರಿಯ ಕಿಷ್ಕಿಂಧೆಯಲ್ಲಿ ತಲೆ ಎತ್ತಲಿದೆ ವಿಶ್ವದ ಎತ್ತರದ ಹನುಮಾನ್ ಪ್ರತಿಮೆ

    ಬಳ್ಳಾರಿಯ ಕಿಷ್ಕಿಂಧೆಯಲ್ಲಿ ತಲೆ ಎತ್ತಲಿದೆ ವಿಶ್ವದ ಎತ್ತರದ ಹನುಮಾನ್ ಪ್ರತಿಮೆ

    – ಅಂದಾಜು 1,200 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ

    ಲಕ್ನೋ: ಹನುಮ ಜನ್ಮಭೂಮಿಯಾದ ಬಳ್ಳಾರಿ ಜಿಲ್ಲೆಯ ಕಿಷ್ಕಿಂದೆಯಲ್ಲಿ ವಿಶ್ವದ ಅತೀ ಎತ್ತರದ ಹನುಮಂತನ ಪ್ರತಿಮೆಯನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದು ಹನುಮಂತ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದ ಆನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈ ಕುರಿತು ಮಾತನಾಡಿದ ಅವರು, 215 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, 1,200 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ವಿಶ್ವದಲ್ಲೇ ಅತ್ಯಂತ ಎತ್ತರದ ಹನುಮಂತನ ಪ್ರತಿಮೆಯಾಗಲಿದೆ. ಬಳ್ಳಾರಿಯ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುತ್ತಿದೆ. ರಾಷ್ಟ್ರಾದ್ಯಂತ ರಥಯಾತ್ರೆ ಮಾಡುವ ಮೂಲಕ ಪ್ರತಿಮೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಇದೇ ವೇಳೆ ರಾಮಜನ್ಮಭೂಮಿಯಲ್ಲಿ ರಥ ನಿರ್ಮಾಣದ ಕುರಿತು ಮಾತನಾಡಿರುವ ಅವರು, ರಾಮಜನ್ಮ ಭೂಮಿಯಲ್ಲಿ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ 80 ಅಡಿ ಎತ್ತರದ ರಥ ನಿರ್ಮಾಣ ಮಾಡಲಾಗುತ್ತಿದೆ. ಇನ್ನೆರಡು ವರ್ಷದಲ್ಲಿ ರಥ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.

    ಈ ತಿಂಗಳ ಆರಂಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬೋನೊ ವಿನ್ಯಾಸದ ಕಲ್ಪನೆಗಳನ್ನು ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಇದನ್ನು ರಾಮ ಮಂದಿರ ನಿರ್ಮಾಣದ ಅಂತಿಮ ಮಾಸ್ಟರ್ ಪ್ಲಾನ್‍ನಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಟ್ರಸ್ಟ್ ಹೇಳಿದೆ. ಧಾರ್ಮಿಕ ಯಾತ್ರೆ, ಆಚರಣೆಗಳು, ಸಂಸ್ಕೃತಿ ಹಾಗೂ ವೈಜ್ಞಾನಿಕ ಯೋಜನೆಗಳ ಪ್ರಮುಖ ಅಂಶಗಳ ಆಲೋಚನೆಗಳನ್ನು ತಿಳಿಸುವಂತೆ ಹೇಳಿದೆ.

  • ಅಯೋಧ್ಯೆಯಲ್ಲಿ ಭೂಮಿ ಪೂಜೆ – ರಾವಣ ದೇವಾಲಯದಲ್ಲಿ ಸಂಭ್ರಮಾಚರಣೆ

    ಅಯೋಧ್ಯೆಯಲ್ಲಿ ಭೂಮಿ ಪೂಜೆ – ರಾವಣ ದೇವಾಲಯದಲ್ಲಿ ಸಂಭ್ರಮಾಚರಣೆ

    ಅಯೋಧ್ಯೆ: ಇಂದು ರಾಮಜನ್ಮ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದರೆ ರಾವಣ ದೇವಾಲಯದಲ್ಲೂ ಸಂಭ್ರಮ ಮನೆ ಮಾಡಿದೆ.

    ಅಯೋಧ್ಯೆಯಿಂದ 650 ಕಿ.ಮೀ, ಗ್ರೇಟರ್‌ ನೋಯ್ಡಾದಿಂದ 10 ಕಿ.ಮೀ ದೂರದಲ್ಲಿರುವ ಗೌತಮ ಬುದ್ಧ ನಗರದ ಬಿಸ್ರಾಕ್‌ ಎಂಬಲ್ಲಿ ರಾವಣ ದೇವಾಲಯವಿದೆ. ಈ ದೇವಾಲಯದ ಅರ್ಚಕ ಮಹಾಂತ ರಾಮದಾಸ್‌ ಅವರು ಭೂಮಿ ಪೂಜೆ ನಡೆದ ಬಳಿಕ ಸಹಿ ಹಂಚಿ ಸಂಭ್ರಮಿಸುವುದಾಗಿ ಹೇಳಿದ್ದಾರೆ.

    ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವು, ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯುತ್ತಿರುವುದು ಸಂಭ್ರಮ ತಂದಿದೆ. ನಾನು ಲಾಡು ಹಂಚುವ ಮೂಲಕ ಈ ದಿನವನ್ನು ಸಂಭ್ರಮಿಸುತ್ತೇನೆ. ಈ ಜಾಗದಲ್ಲಿ ದೊಡ್ಡ ದೇವಾಲಯ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

    ಒಂದು ವೇಳೆ ರಾವಣ ಇಲ್ಲದೇ ಇದ್ದರೆ ರಾಮನ ಶಕ್ತಿ ಪ್ರಪಂಚಕ್ಕೆ ತಿಳಿಯುತ್ತಿರಲಿಲ್ಲ. ಒಂದು ವೇಳೆ ರಾಮ ಇಲ್ಲದೇ ಇದ್ದರೆ ರಾವಣ ಯಾರೂ ಎನ್ನುವುದು ಗೊತ್ತಾಗುತ್ತಿರಲಿಲ್ಲ ಎಂದು ತಿಳಿಸಿದರು.

    ರಾವಣ ಬಹಳ ಜ್ಞಾನವಂತ ವ್ಯಕ್ತಿ. ಸೀತೆಯನ್ನು ಅಪಹರಣ ಮಾಡಿದ ಬಳಿಕ ಆತ ನೇರವಾಗಿ ಅರಮನೆಗೆ ಕರೆದುಕೊಂಡು ಹೋಗಲಿಲ್ಲ. ಅಶೋಕವನದಲ್ಲಿ ಇಟ್ಟು ಆಕೆಯ ಭದ್ರತೆಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಿದ್ದ. ರಾಮನನ್ನು ನಾವು ಮರ್ಯಾದಾ ಪುರೋಷೋತ್ತಮ ಎಂದು ಕರೆಯುತ್ತೇವೆ. ಅದೇ ರೀತಿಯಾಗಿ ರಾವಣನೂ ಸೀತೆಗೆ ಹಿಂಸೆ ನೀಡದೇ ಘನತೆಯನ್ನು ಎತ್ತಿ ಹಿಡಿದಿದ್ದ ಎಂದು ಹೇಳುತ್ತಾರೆ.

    ಬಿಸ್ರಾಕ್‌ ರಾವಣನ ಜನ್ಮ ಸ್ಥಳವೆಂದು ಕಥೆಗಳು ಹೇಳುತ್ತವೆ. ಹೀಗಾಗಿ ಈ ಗ್ರಾಮದಲ್ಲಿ ರಾವಣನ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ರಾವಣ ಅಲ್ಲದೇ ಶಿವ, ಪಾರ್ವತಿ, ಕುಬೇರನ ದೇವಾಲಯವಿದೆ. ದೇವಾಲಯಕ್ಕೆ ಬರುವ ಶೇ.20 ರಷ್ಟು ಮಂದಿ ರಾವಣನನ್ನು ಪೂಜಿಸುತ್ತಾರೆ ಎಂದು ಮಹಾಂತ ರಾಮದಾಸ್‌ ಹೇಳುತ್ತಾರೆ.

  • ಸುಪ್ರೀಂ ತೀರ್ಪಿನ ಲಾಭವನ್ನು ಕೇಂದ್ರ ಪಡೆದುಕೊಳ್ಳಬಾರದು: ಉದ್ಧವ್ ಠಾಕ್ರೆ

    ಸುಪ್ರೀಂ ತೀರ್ಪಿನ ಲಾಭವನ್ನು ಕೇಂದ್ರ ಪಡೆದುಕೊಳ್ಳಬಾರದು: ಉದ್ಧವ್ ಠಾಕ್ರೆ

    ಮುಂಬೈ: ರಾಮಮಂದಿರ ಸುಪ್ರೀಂ ಕೋರ್ಟ್ ಬಹುನಿರೀಕ್ಷಿತ ತೀರ್ಪು ನೀಡಿದ್ದು, ಇದರ ಲಾಭವನ್ನು ಕೇಂದ್ರ ಸರ್ಕಾರ ಪಡೆಯಲು ಸಾಧ್ಯವಿಲ್ಲ ಎಂದು ಶಿವ ಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಇದೀಗ ರಾಮಮಂದಿರದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಉದ್ಧವ್ ಠಾಕ್ರೆ ಅವರ ಈ ಹೇಳಿಕೆ ಮಹತ್ವ ಪಡೆದಿದ್ದು, ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಇದರ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

    ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ರಾಮಜನ್ಮ ಭೂಮಿಯಲ್ಲೇ ದೇವಸ್ಥಾನ ನಿರ್ಮಿಸಬೇಕು ಎಂದು ಆದೇಶ ಪ್ರಕಟಿಸಿದೆ.

    ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ನಿರ್ಮಿಸಲು ಕಾನೂನು ರೂಪಿಸುವಂತೆ ನಾವು ಸರ್ಕಾರವನ್ನು ಮನವಿ ಮಾಡಿದ್ದೆವು. ಆದರೆ ಸರ್ಕಾರ ಅದನ್ನು ಮಾಡಿರಲಿಲ್ಲ. ಹೀಗಾಗಿ ಈಗ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದ್ದಕ್ಕೆ ಕೇಂದ್ರ ಸರ್ಕಾರ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ ಎಂದು ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

    ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಗ್ಗೆ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಮುಖ್ಯಮಂತ್ರಿ ಹುದ್ದೆಯನ್ನು ಸಮಾನವಾಗಿ ಹಂಚಿಕೊಳ್ಳುವಲ್ಲಿನ ಅಡಚಣೆಯು ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ 13ನೇ ರಾಜ್ಯ ವಿಧಾನಸಭೆಯ ಅವಧಿ ಮುಗಿಯುವುದಕ್ಕೆ ಒಂದು ದಿನ ಮುಂಚಿತವಾಗಿ ಸಿಎಂ ದೇವೇಂಧ್ರ ಫಡ್ನವಿಸ್ ಅವರ ರಾಜೀನಾಮೆ ನೀಡಿದ್ದಾರೆ.