Tag: ರಾಮ್ ವಿಲಾಸ್ ಪಾಸ್ವಾನ್

  • ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನ

    ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನ

    ನವದೆಹಲಿ: ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌(74) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಬಿಹಾರದ ಲೋಕ ಜನಶಕ್ತಿ ಪಕ್ಷದ ಪಾಸ್ವಾನ್‌ ಕಳೆದ 5 ದಶಕಗಳಿಂದ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು. ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ನೀಡಿದ್ದ ಅವರು ಕೆಲ ದಿನಗಳ ಹಿಂದೆ ಹೃದಯ ಚಿಕಿತ್ಸೆಗೆ ಒಳಗಾಗಿದ್ದರು. ಈಗ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಟ್ವೀಟ್‌ ಮಾಡಿ ಮೃತಪಟ್ಟ ವಿಚಾರವನ್ನು ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ತಂದೆಯವರು ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅಗತ್ಯವಿದ್ದಲ್ಲಿ ಮುಂದಿನ ವಾರಗಳಲ್ಲಿ ತನ್ನ ತಂದೆಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು ಎಂದು ಚಿರಾಗ್ ಹೇಳಿದ್ದರು.

  • 9 ತಿಂಗಳಿಗಾಗುವಷ್ಟು ಆಹಾರ ದಾಸ್ತಾನು ನಮ್ಮಲ್ಲಿದೆ – ಕೇಂದ್ರ ಸರ್ಕಾರ

    9 ತಿಂಗಳಿಗಾಗುವಷ್ಟು ಆಹಾರ ದಾಸ್ತಾನು ನಮ್ಮಲ್ಲಿದೆ – ಕೇಂದ್ರ ಸರ್ಕಾರ

    ನವದೆಹಲಿ: ಭಾರತದಲ್ಲಿ 9 ತಿಂಗಳ ಕಾಲ ದೇಶದ ಪ್ರಜೆಗಳಿಗೆ ವಿತರಿಸುವಷ್ಟು ಆಹಾರಗಳು ದಾಸ್ತಾನು ನಮ್ಮಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

    ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ನಾಗರಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸುಮಾರು ಒಂಭತ್ತು ತಿಂಗಳ ಕಾಲ, 81 ಕೋಟಿಗೂ ಅಧಿಕ ಫಲಾನುಭಗಳಿಗೆ ವಿತರಿಸಲು ಅಗತ್ಯವಿರುವಷ್ಟು ಅಕ್ಕಿ, ಗೋಧಿ, ದಾಸ್ತಾನು ನಮ್ಮಲ್ಲಿದೆ. ಈ ಬಾರಿ ಉತ್ತಮ ಇಳುವರಿಯಾದ ಕಾರಣ ಸರ್ಕಾರದ ಗೋದಾಮಿನಲ್ಲಿ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿಡಲಾಗಿದೆ ಎಂದು ತಿಳಿಸಿದರು.

    ಪ್ರಸ್ತುತ ಸರ್ಕಾರಿ ಗೋದಾಮುಗಳಲ್ಲಿ 299.45 ಲಕ್ಷ ಮೆಟ್ರಿಕ್ ಟನ್ ಅಕ್ಕಿ, 235.33 ಲಕ್ಷ ಮೆಟ್ರಿಕ್ ಟನ್ ಗೋಧಿ ಸೇರಿ ಒಟ್ಟು 534.78 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳ ದಾಸ್ತಾನಿದೆ. ಹೀಗಾಗಿ ನಾಗರಿಕರಿಗೆ ಆಹಾರದ ಕೊರತೆ ಆಗುವುದಿಲ್ಲ ಎಂದು ಹೇಳಿದರು.

    ನಮ್ಮ ಆಹಾರ ಧಾನ್ಯಗಳ ಸರಬರಾಜು ಮತ್ತು ವಿತರಣೆ ವ್ಯವಸ್ಥೆ ಈಗ ಬಹಳ ಉತ್ತಮವಾಗಿದೆ. ಕೊರೊನಾದಂತಹ ಸಮಸ್ಯೆ ಬಂದಾಗಲೂ ಪ್ರಜೆಗಳಿಗೆ ಸರಿಯಾದ ಸಮಯಕ್ಕೆ ಆಹಾರ ಧಾನ್ಯಗಳನ್ನು ತಲಪಿಸಲಾಗುತ್ತಿದೆ ಎಂದು ತಿಳಿಸಿದರು.

  • 200 ಎಂಎಲ್ ಹ್ಯಾಂಡ್ ಸ್ಯಾನಿಟೈಸರನ್ನು 100 ರೂ.ಗಿಂತ ಹೆಚ್ಚು ಬೆಲೆಗೆ ಮಾರುವಂತಿಲ್ಲ

    200 ಎಂಎಲ್ ಹ್ಯಾಂಡ್ ಸ್ಯಾನಿಟೈಸರನ್ನು 100 ರೂ.ಗಿಂತ ಹೆಚ್ಚು ಬೆಲೆಗೆ ಮಾರುವಂತಿಲ್ಲ

    ನವದೆಹಲಿ: ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು 200 ಎಂಎಲ್ ಬಾಟಲ್ ಹ್ಯಾಂಡ್ ಸ್ಯಾನಿಟೈಜರ್ ಅನ್ನು 100 ರೂ.ಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೇ 2 ಲೇಯರ್ ಮಾಸ್ಕ್‌ಗಳನ್ನು 8 ರೂ. ಹಾಗೂ 3 ಲೇಯರ್ ಮಾಸ್ಕ್‌ಗಳನ್ನು ಪ್ರತಿ ಪೀಸ್‍ಗೆ 10 ರೂ.ಗಿಂತ ಹೆಚ್ಚು ಬೆಲೆ ಮಾರಾಟ ಮಾಡುವಂತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜನರಿಗೆ ಇರುವ ಭೀತಿಯನ್ನೇ ಬಂಡವಾಳವಾಗಿ ಇಟ್ಟುಕೊಂಡು ದುಬಾರಿ ಬೆಲೆಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ಮೆಡಿಕಲ್‍ಗಳಲ್ಲಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಎಚ್ಚೆತ್ತ ಸರ್ಕಾರ ಈಗ ಈ ರೀತಿ ಅಕ್ರಮವೆಸೆಗುವ ವ್ಯಾಪಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳ ಬೆಲೆಯನ್ನು ನಿಗದಿಗೊಳಿಸಿ, ವ್ಯಾಪಾರಸ್ಥರಿಗೆ ಈ ನಿಗದಿತ ಬೆಲೆಗೆ ಸ್ಯಾನಿಟೈಸರ್, ಮಾಸ್ಕ್ ಮಾರಾಟ ಮಾಡುವಂತೆ ಸೂಚಿಸಿದೆ.

    200 ಎಂಎಲ್ ಬಾಟಲ್ ಹ್ಯಾಂಡ್ ಸ್ಯಾನಿಟೈಜರ್ ನ ಚಿಲ್ಲರೆ ಬೆಲೆ 100 ರೂ. ಮೀರುವಂತಿಲ್ಲ. ಈ ಬೆಲೆಗಳು 2020ರ ಜೂನ್ 30ರವರೆಗೆ ದೇಶಾದ್ಯಂತ ಅನ್ವಯವಾಗುತ್ತವೆ ಎಂದು ಟ್ವೀಟ್ ಮೂಲಕ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಫ್ಲಿಪ್‍ಕಾರ್ಟ್ ನಂತಹ ಆನ್‍ಲೈನ್ ಮಾರಾಟಗಾರರು ಹ್ಯಾಂಡ್ ಸ್ಯಾನಿಟೈಜರ್ ಗಳಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗಳನ್ನು ಉಲ್ಲೇಖಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆನ್‍ಲೈನ್‍ನಲ್ಲಿ ಕೆಲವು ಮಾರಾಟಗಾರರು 30 ಎಂಎಲ್ ಹ್ಯಾಂಡ್ ಸ್ಯಾನಿಟೈಜರ್ ಗೆ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಯನ್ನು 16 ಪಟ್ಟು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

    ಇದಕ್ಕೆ ಪ್ರತಿಕ್ರಿಯಿಸಿದ ಹಿಮಾಲಯ ಡ್ರಗ್ ಕಂಪನಿ ಹೀಗೆ ಅಕ್ರಮ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ. ನಮ್ಮ ಪ್ಯೂರ್ ಹ್ಯಾಂಡ್ಸ್ ಸ್ಯಾನಿಟೈಜರ್ ಗಳ ದರವನ್ನು ನಾವು ಹೆಚ್ಚಿಸಿಲ್ಲ. ಅನಧಿಕೃತ ತೃತೀಯ ಮಾರಾಟಗಾರರು ನಮ್ಮ ಕಂಪನಿ ಸ್ಯಾನಿಟೈಜರ್ ಗಳ ದರವನ್ನು ಹೆಚ್ಚಿಸಿದೆ. ಹೀಗೆ ದರ ಏರಿಸುತ್ತಿರುವ ಮಾರಾಟಗಾರರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹಿಮಾಲಯ ಟ್ವೀಟ್ ಮಾಡಿದೆ.

    ಸ್ಯಾನಿಟೈಸರ್ ಮತ್ತು ಮಾಸ್ಕ್ ಕೊರೊನಾ ವೈರಸ್ ಅಥವಾ ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಸಮಯದಲ್ಲಿ ಹೆಚ್ಚು ಅಗತ್ಯವಿರುವ ವಸ್ತುವಾಗಿದೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೆ ಮಾರಾಟಗಾರರು ಮಾತ್ರ ದೇಶ ಇಂತಹ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಮಾರಾಟಗಾರರು ಜನರ ಭಯವನ್ನೇ ಲಾಭ ಮಾಡಿಕೊಂಡು, ಅಧಿಕ ಬೆಲೆ ವಸ್ತುಗಳನ್ನು ಮಾರಾಟ ಮಡುತ್ತಿದೆ.

  • ಜೂನ್ ಒಂದರೊಳಗೆ ದೇಶದ್ಯಾಂತ ಒನ್ ನೇಷನ್, ಒನ್ ರೇಷನ್ ಕಾರ್ಡ್

    ಜೂನ್ ಒಂದರೊಳಗೆ ದೇಶದ್ಯಾಂತ ಒನ್ ನೇಷನ್, ಒನ್ ರೇಷನ್ ಕಾರ್ಡ್

    ನವದೆಹಲಿ: ಜೂನ್ ಒಂದರೊಳಗೆ ದೇಶಾದ್ಯಂತ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

    ಪಾಟ್ನಾದಲ್ಲಿ ಮಾತಾನಾಡಿದ ಅವರು, ಒಂದೇ ರೇಷನ್ ಕಾರ್ಡ್ ಮೂಲಕ ದೇಶದ ಬೇರೆ ಪ್ರದೇಶಗಳಲ್ಲಿ ಅದರ ಲಾಭ ಪಡೆಯಬಹುದು. ಹೊಸ ವರ್ಷದಿಂದ ದೇಶದ 12 ರಾಜ್ಯಗಳಲ್ಲಿ ಈ ಯೋಜನೆ ಪ್ರಾರಂಭವಾಗಿದೆ. ಈ 12 ರಾಜ್ಯಗಳಲ್ಲಿ ಒಂದೇ ರೇಷನ್ ಕಾರ್ಡ್ ಮೂಲಕ ಪಡಿತರ ಸೌಲಭ್ಯ ಪಡೆಯವ ಅವಕಾಶ ಮಾಡಿಕೊಟ್ಟಿದೆ. ಜೂನ್ ಒಂದರೊಳಗೆ ದೇಶದ್ಯಾಂತ ಇದನ್ನು ವಿಸ್ತರಿಸುತ್ತೇವೆ ಎಂದರು.

    ಈ ಸೌಲಭ್ಯದಡಿ ಸಾರ್ವಜನಿಕ ವಿತರಣಾ ಫಲಾನುಭವಿಗಳು ತಾವಿರುವ ಪ್ರದೇಶದಲ್ಲಿ ಪಡಿತರ ಪಡೆಯಬಹುದು. 2020 ಜೂನ್ 30 ರೊಳಗೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ಕಡ್ಡಾಯವಾಗಿ ಅನುಷ್ಠಾನಕ್ಕೆ ಬರಲಿದೆ ಎಂದರು.

    ಒನ್ ನೇಷನ್ ಒನ್ ರೇಷನ್ ಕಾರ್ಡ್ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾಗಿದ್ದು, ಒಂದೇ ರೇಷನ್ ಕಾರ್ಡ್ ಮೂಲಕ ದೇಶದ ಎಲ್ಲ ರಾಜ್ಯದಲ್ಲೂ ಪಡಿತರ ಪಡೆಯುವ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

  • ಕೇಂದ್ರ ಮಂತ್ರಿಗೆ ಕ್ಲಾಸ್ – ಗೈರಾದ ಸಂಸದರಿಗೂ ಬಿಸಿ ಮುಟ್ಟಿಸಿದ ಸ್ಪೀಕರ್

    ಕೇಂದ್ರ ಮಂತ್ರಿಗೆ ಕ್ಲಾಸ್ – ಗೈರಾದ ಸಂಸದರಿಗೂ ಬಿಸಿ ಮುಟ್ಟಿಸಿದ ಸ್ಪೀಕರ್

    ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕೇಂದ್ರ ಸಚಿವರನ್ನು ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.

    ಪ್ರಶ್ನೋತ್ತರ ಅವಧಿಯಲ್ಲಿ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ರೌಸಾಹೇಬ್ ಪಾಟೀಲ್ ದಾನ್ವೆ ಅವರಿಗೆ ಸ್ಪೀಕರ್ ಕ್ಲಾಸ್ ತೆಗೆದುಕೊಂಡಿದ್ದು, ಸದನದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳ ಬಗ್ಗೆ ಗಮನಹರಿಸಿ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು.

    ಶಿವಸೇನೆಯ ಸಂಸದ ಹೇಮಂತ್ ತುಕಾರಾಮ್ ಗೋಡ್ಸೆ ಅವರು ಹೆಚ್ಚುವರಿ ಪ್ರಶ್ನೆ ಕೇಳುವ ವೇಳೆ ದಾನ್ವೆ ಅವರು ಇನ್ನೊಂದು ಬಾರಿ ಕೇಳಿ ಎಂದು ಹೇಳಿದ್ದಾರೆ. ಆಗ ಕೋಪಗೊಂಡ ಓಂ ಬಿರ್ಲಾ ಅವರು, ಸನ್ಮಾನ್ಯ ಸಚಿವರೇ ಪ್ರಶ್ನೆಗಳ ಬಗ್ಗೆ ಗಮನಹರಿಸಿ, ಸರಿಯಾಗಿ ಕೇಳಿ ಎಂದು ಖಾರವಾಗಿ ಹೇಳಿದರು.

    ನಂತರ ಗೋಡ್ಸೆಯವರು ಮತ್ತೊಂದು ಪ್ರಶ್ನೆಯನ್ನು ಕೇಳಿದ್ದು, ಆಗ ದಾನ್ವೆಯವರ ಸಾಲಿನಲ್ಲೇ ಕುಳಿತಿದ್ದ ಕೇಂದ್ರ ನಾಗರಿಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಎದ್ದು ನಿಂತು ಪ್ರಶ್ನೆಗೆ ಉತ್ತರಿಸಿದರು. ಅಲ್ಲದೆ ಗೋಡ್ಸೆಯವರು ಕೇಳಿದ ಹೆಚ್ಚುವರಿ ಪ್ರಶ್ನೆಗಳಿಗೂ ಪಾಸ್ವಾನ್ ಅವರೇ ಉತ್ತರಿಸಿದರು.

    ನೀವು ಕುಳಿತುಕೊಂಡೇ ಉತ್ತರಿಸಿ, ಸದನವು ನಿಮಗೆ ಅನುಮತಿ ನೀಡುತ್ತದೆ. ನಿಮ್ಮ ಕಾಲು ಮುರಿದಿದೆ. ಕುಳಿತುಕೊಂಡೆ ಉತ್ತರ ನೀಡಿ ಎಂದು ಪಾಸ್ವಾನ್ ಅವರಿಗೆ ಸೂಚಿಸಿದರು.

    ಹಲವು ಸಂಸದರು ಗೈರಾಗಿದ್ದಕ್ಕೆ ಸ್ಪೀಕರ್ ಮೊದಲೇ ಕೆಂಡಾಮಂಡಲವಾಗಿದ್ದರು. ಪ್ರಶ್ನೋತ್ತರ ಅವಧಿಯಲ್ಲೇ ಸಂಸದರು ಇಲ್ಲದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದರು. ಹೆಸರು ನೋಂದಾಯಿಸಿಕೊಂಡವರು ಯಾರು ಸದನಕ್ಕೆ ಹಾಜರಾಗಿಲ್ಲವೋ ಅವರು ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಯಾವುದೇ ಪ್ರಶ್ನೆ ಕೇಳುವಂತಿಲ್ಲ ಎಂದು ಖಡಕ್ ಆಗಿ ಹೇಳಿ ಬಿಸಿ ಮುಟ್ಟಿಸಿದ್ದಾರೆ.