Tag: ರಾಮ್ ನಾಥ್ ಕೋವಿಂದ್

  • ವರ್ಕ್ ಫ್ರಮ್ ಹೋಂ ಮಹಿಳೆಯರಿಗೆ ಟ್ರಿಪಲ್ ಹೊರೆ: ರಾಮನಾಥ್ ಕೋವಿಂದ್

    ವರ್ಕ್ ಫ್ರಮ್ ಹೋಂ ಮಹಿಳೆಯರಿಗೆ ಟ್ರಿಪಲ್ ಹೊರೆ: ರಾಮನಾಥ್ ಕೋವಿಂದ್

    – ಕೊರೊನಾ ನಮಗೆ ಸೂಕ್ತ ಪಾಠಗಳನ್ನು ಕಲಿಸಿದೆ

    ನವದೆಹಲಿ: ಕೋವಿಡ್ ಸೋಂಕಿನ ಹಿನ್ನೆಲೆ ಮನೆಯಿಂದಲೇ ಕೆಲಸ ಮಾಡುವುದು ಹೆಚ್ಚು ಪ್ರಯೋಜನಗಳನ್ನು ಹೊಂದಿದೆ. ಆದರೆ ಇದು ದುಡಿಯುವ ಮಹಿಳೆಯರಿಗೆ ‘ಟ್ರಿಪಲ್ ಹೊರೆ’ ಮಾಡಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದರು.

    ಮನೋರಮಾ ಇಯರ್‌ಬುಕ್ 2022ರಲ್ಲಿ ಪ್ರಕಟವಾದ ಯುವ ಭಾರತೀಯರಿಗೆ ಪತ್ರದಲ್ಲಿ ಕೋವಿಂದ್ ಅವರು, ಮಹಿಳೆಯರು ಈಗಾಗಲೇ ಪಾವತಿಸಿದ ಕೆಲಸ ಮತ್ತು ‘ಪಾವತಿಯಿಲ್ಲದ ಕೆಲಸ’ ಅಂದರೆ ಮನೆಯ ಜವಾಬ್ದಾರಿಗಳ ದುಪ್ಪಟ್ಟು ಹೊರೆಯನ್ನು ಹೊಂದಿದ್ದಾರೆ. ಮಕ್ಕಳು ಮನೆಯಿಂದ ಶಾಲೆಗೆ ಹೋಗುವಾಗ, ಅವರ ಕಲಿಕೆಗೆ ಪೋಷಕರು ಪೂರಕವಾಗಿರಬೇಕು. ಆ ಕಾರ್ಯವು ಸಾಮಾನ್ಯವಾಗಿ ತಾಯಿಯ ಮೇಲೆ ಬೀಳುತ್ತದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

    ವರ್ಕ್ ಫ್ರಮ್ ಹೋಂ ಸಮಯದಲ್ಲಿ ಕೆಲಸ ಮಾಡುವ ಪುರುಷನು ಸಹ ಮನೆಯಲ್ಲಿನ ಒತ್ತಡವನ್ನು ತೆಗೆದುಕೊಳ್ಳಬೇಕು. ಇದರಿಂದಾಗಿ ದಂಪತಿ ತಮ್ಮ ಜವಾಬ್ದಾರಿಗಳನ್ನು ಹಂಚಿಕೊಳ್ಳಬಹುದು. ಕೆಲಸಕ್ಕಾಗಿ ಸಮಯ ಹೆಚ್ಚಾದಂತೆ, ಕೆಲವು ಸಂದರ್ಭದಲ್ಲಿ ಉತ್ಪಾದಕತೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

    ಕೊರೊನಾ ರೋಗವು ನಮಗೆ ಸೂಕ್ತವಾಗಿ ಪಾಠಗಳನ್ನು ಕಲಿಸಿದೆ. ಸಾಂಕ್ರಾಮಿಕ ರೋಗವು ಅಭೂತಪೂರ್ವ ಬಿಕ್ಕಟ್ಟಾಗಿದೆ. ಆದರೆ ಇದು ದೊಡ್ಡ ಬಿಕ್ಕಟ್ಟಿನ ಎಚ್ಚರಿಕೆಯೂ ಆಗಿರಬಹುದು ಎಂದಿದ್ದಾರೆ.

    WFH has put working women under 'triple burden', says President Kovind - Lagatar English

    ಹವಾಮಾನ ಬದಲಾವಣೆಯು ಇನ್ನು ಮುಂದೆ ವೈಜ್ಞಾನಿಕ ಸಂಶೋಧನೆ ಮತ್ತು ನೀತಿ ಚರ್ಚೆಗಳ ವಿಷಯವಲ್ಲ. ಅದರ ಪರಿಣಾಮವು ಈಗಾಗಲೇ ಸ್ಪಷ್ಟವಾಗಿದೆ. 2020 ರ ದಶಕವು ಅತ್ಯಂತ ನಿರ್ಣಾಯಕ ಹಂತವಾಗಿ ಹೊರಹೊಮ್ಮಬಹುದು. ಪರಿಸ್ಥಿತಿ ಭೀಕರವಾಗಿದೆ. ನಿರಾಶಾವಾದ ಎಷ್ಟೇ ಇದ್ದರೂ ನಾನು ಆಶಾವಾದಿಯಾಗಿದ್ದೇನೆ ಎಂದು ಹೇಳಿದ್ದಾರೆ.

    ನಮ್ಮ ದೇಶಕ್ಕೆ ಕೊರೊನಾ ವೈರಸ್‍ನಿಂದ ಬೆದರಿಕೆ ಬಂದಾಗ ನಾವು ಹೇಗೆ ಸಮರ್ಥರಾಗಿದ್ದೇವೆ ಎಂಬುದನ್ನು ನಾವು ನೋಡಿದ್ದೇವೆ. ಎಲ್ಲ ರಾಷ್ಟ್ರಗಳು ಕೈಜೋಡಿಸಿದರೆ ಮಾನುಕುಲ ಏನು ಬೇಕಾದರೂ ಮಾಡಬಹುದು ಎಂಬುದನ್ನ ಕೋವಿಡ್-19 ತೋರಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.

    ವೃತ್ತಿ ಅವಕಾಶಗಳ ಕುರಿತು ಅವರು, ಇಪ್ಪತ್ತರ ಹರೆಯದಲ್ಲಿಯೇ ವೃತ್ತಿಜೀವನದ ಪ್ರಶ್ನೆಯು ನಮ್ಮ ಮನಸ್ಸಿನಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಸಾಮಾಜಿಕ ಅಗತ್ಯತೆಗಳ ಅಡಿಯಲ್ಲಿ ಅಥವಾ ಗೆಳೆಯರ ಒತ್ತಡದ ಅಡಿಯಲ್ಲಿ, ನಮ್ಮಲ್ಲಿ ಅನೇಕರು ಸಾಮಾನ್ಯವಾಗಿ ‘ವೃತ್ತಿ’ಯನ್ನು ‘ಉದ್ಯೋಗ’ದೊಂದಿಗೆ ಸಮೀಕರಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಬಂದಿದೆ ಹೊಸ ಫಾಂಟ್ ಬಂಡೀಪುರ!

    ಭಾರತದ ಸರ್ಕಾರ ಮತ್ತು ಸಾರ್ವಜನಿಕ ವಲಯ ಎರಡಕ್ಕೂ ಪ್ರತಿಭಾವಂತ, ಕಷ್ಟಪಟ್ಟು ದುಡಿಯುವ ಯುವಕರ ಅಗತ್ಯವಿದೆ. ಉದ್ಯೋಗ ಎಂದರೆ ಕೇವಲ ಸರ್ಕಾರ ಅಥವಾ ಸಾರ್ವಜನಿಕ ವಲಯದಲ್ಲಿ ಕೆಲಸ ಎಂದರ್ಥವಲ್ಲ. ಭಾರತದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರತಿಭೆಯ ಅಗತ್ಯವಿದೆ ಎಂದು ಬರೆದಿದ್ದಾರೆ.

  • ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ನವದೆಹಲಿ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದ ಹಿಮಾ ದಾಸ್ ಇತಿಹಾಸ ಸೃಷ್ಟಿಸಿದ್ದಾರೆ.

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ನೇ ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

    ಸ್ಪರ್ಧೆಯಲ್ಲಿ ಗೆಲುವು ಪಡೆದ ಬಳಿಕ ಮಾತನಾಡಿರುವ ಹಿಮಾ ದಾಸ್, ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿರುವುದು ಸಂತಸ ತಂದಿದೆ. ನನಗೆ ಬೆಂಬಲ ನೀಡಿದ ಎಲ್ಲಾ ಭಾರತೀಯರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

    ಹೇಮಾ ದಾಸ್ ಚಿರತೆಯಂತೆ ಓಡಿದ ವಿಡಿಯೋವನ್ನು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಸದ್ಯ ಹಿಮಾ ದಾಸ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

    ಅಂದಹಾಗೇ ಹಿಮಾದಾಸ್ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದು, ಆದರೆ ಕಳೆದ ತಿಂಗಳು ಗುವಾಹತಿಯಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಕೇವಲ 51.13 ಸೆಕೆಂಡ್ ಗಳಲ್ಲಿ 400 ಮೀಟರ್ ದೂರವನ್ನು ಕ್ರಮಿಸಿದ್ದರು.

     

  • ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಹಿಮಾದಾಸ್ ಗೆ ಅಭಿನಂದನೆ

    ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಹಿಮಾದಾಸ್ ಗೆ ಅಭಿನಂದನೆ

    ನವದೆಹಲಿ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳೆ ಹಿಮಾ ದಾಸ್ ಅವರನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

    ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರು ಹಿಮಾದಾಸ್ ಗೆ ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದು ಅಸ್ಸಾಂ ಮತ್ತು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ಕೋವಿಂದ್ ಹೇಳಿದ್ದಾರೆ. ಇನ್ನು ದಾಸ್ ಗೆಲುವು ಮುಂದಿನ ವರ್ಷಗಳಲ್ಲಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

    ಅಷ್ಟೇ ಅಲ್ಲದೇ “ವಿಶ್ವ ಅಂಡರ್ -20 ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ ಚಿನ್ನದ ಪದಕ ಗೆದ್ದ ನಮ್ಮ ಸಂವೇದನೆಯ ಸ್ಪ್ರಿಂಟ್ ತಾರೆ ಹಿಮಾ ದಾಸ್ ಗೆ ಅಭಿನಂದನೆಗಳು. ಇದು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮೊಟ್ಟಮೊದಲ ಟ್ರ್ಯಾಕ್ ಚಿನ್ನವಾಗಿದೆ. ಇದು ಅಸ್ಸಾಂ ಮತ್ತು ಭಾರತ ಹೆಮ್ಮೆ ಪಡುವ ಸಂಗತಿಯಾಗಿದೆ. ಈಗ ಹಿಮಾ ಒಲಿಂಪಿಕ್ ವೇದಿಕೆಯ ಬೇಕಾನ್ಸ್ ಆಗಿದ್ದಾರೆ” ಎಂದು ಕೋವಿಂದ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

    “ವಿಶ್ವ ಯು20 ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ ನಲ್ಲಿ ಐತಿಹಾಸಿಕ ಚಿನ್ನವನ್ನು ಗೆದ್ದ ಕ್ರೀಡಾಪಟು ಹಿಮಾ ದಾಸ್ ಅವರಿಂದ ಭಾರತವು ಹೆಮ್ಮೆಯಿಂದ ಖುಷಿಪಟ್ಟಿದೆ. ಹಿಮಾ ದಾಸ್ ಅವರ ಈ ಸಾಧನೆಯು ಮುಂದಿನ ವರ್ಷಗಳಲ್ಲಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ. ಹಿಮಾ ದಾಸ್ ಗೆ ಅಭಿನಂದನೆಗಳು” ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ 18 ನೇ ವಯಸ್ಸಿನಲ್ಲಿ ಹಿಮಾ ದಾಸ್ ಚಿನ್ನದ ಪದಕ ಗೆದ್ದು ದೇಶದ ಇತಿಹಾಸವನ್ನು ಬರೆದಿದ್ದಾರೆ. 400 ಮೀಟರ್ ಓಟದ ಸ್ಪರ್ಧೆಯಲ್ಲಿ ದಾಸ್ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ಅಗ್ರಸ್ಥಾನಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.