ಕನ್ನಡದ ಹಾಸ್ಯ ನಟ ತಬಲಾ ನಾಣಿ (Tabla Nani) ಪುತ್ರಿ ಚಿತ್ರಾ ರಾಮ್ (Chitra) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡು, ತಾಯಿಯಾಗುತ್ತಿರುವ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ: ಸಮಂತಾ
ತಬಲಾ ನಾಣಿ ಪುತ್ರಿ ಚಿತ್ರಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ಚಿತ್ರಾ ಇತ್ತೀಚೆಗೆ ಸರಳವಾಗಿ ಸೀಮಂತ ಶಾಸ್ತ್ರ ಜರುಗಿದೆ. ಕಾರ್ಯಕ್ರಮದ ಕೆಲ ಫೋಟೋಗಳನ್ನು ಚಿತ್ರಾ ಹಂಚಿಕೊಂಡಿದ್ದಾರೆ. ಇದೀಗ ಚಿತ್ರ ದಂಪತಿಗೆ ಅಭಿಮಾನಿಗಳು ಶುಭಕೋರಿದ್ದಾರೆ.
ಅಂದಹಾಗೆ, ಚಿತ್ರಾ ಅವರು ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದು, ಈ ವರ್ಷ ಫೆಬ್ರವರಿಯಲ್ಲಿ ತಬಲಾ ನಾಣಿ ಪುತ್ರಿ ಮದುವೆ ನಡೆಯಿತು. ‘ವೀಲ್ ಚೇರ್ ರೋಮಿಯೋ’ ಚಿತ್ರದ ಹೀರೋ ರಾಮ್ ಚೇತನ್ (Ram Chethan) ಜೊತೆ ಚಿತ್ರಾ ಅದ್ಧೂರಿಯಾಗಿ ಮದುವೆಯಾದರು.
ಬೆಳ್ಳಿತೆರೆ ಬಾನಂಗಳದಲ್ಲಿ ವೀಲ್‍ಚೇರ್ ರೋಮಿಯೋನ ಪಯಣ ಶುರುವಾಗಿದೆ. ನಿರೀಕ್ಷೆಗೆ ತಕ್ಕಂತೆ ಪ್ರೇಕ್ಷಕರನ್ನು ರೋಮಿಯೋ ರಂಜಿಸಿದ್ದಾನೆ. ಸಿನಿಮಾ ಆರಂಭದಿಂದ ಹಿಡಿದು ಅಂತ್ಯದವರೆಗೂ ಅದೇ ಕುತೂಹಲ ಕಾಯ್ದುಕೊಂಡು, ಭರ್ಜರಿ ಡೈಲಾಗ್, ವಿಭಿನ್ನ ಪಾತ್ರಗಳು, ವಿಶೇಷ ಕಥಾನಕದ ಮೂಲಕ ವೀಲ್‍ಚೇರ್ ರೋಮಿಯೋ ಚಿತ್ರ ಪ್ರೇಮಿಗಳ ಹೃದಯ ಕಲಕಿದ್ದಾನೆ.
ವೀಲ್‍ಚೇರ್ ರೋಮಿಯೋ ಮಾಮೂಲಿ ಸಿನಿಮಾಗಳ ಕಥೆಯಂತು ಅಲ್ಲವೇ ಅಲ್ಲ. ಇದೊಂದು ಅಪರೂಪದ ಕಥೆ. ಇದು ನಿಮ್ಮನ್ನ ಭಾವನೆಗಳ ಲೋಕಕ್ಕೆ ಕರೆದೊಯ್ಯುವ ಇಂಟ್ರೆಸ್ಟಿಂಗ್ ಸ್ಟೋರಿ. ಬಾಲ್ಯದಿಂದ ಮೂಳೆ ಖಾಯಿಲೆಗೆ ಒಳಗಾದ ಹೀರೋ, ಈತ ದೊಡ್ಡವನಾದ ಮೇಲೆ ಮದುವೆ ಮಾಡಲು ಅಪ್ಪ ಸಿದ್ಧನಾಗುತ್ತಾನೆ. ಇಂದಿನ ಕಾಲದಲ್ಲಿ ಎಲ್ಲವೂ ಸರಿ ಇದ್ದು ಹೆಣ್ಣು ಕೊಡುವುದು ಕಷ್ಟ. ಇನ್ನೂ ಕಾಲಿಲ್ಲದ ನಾಯಕನಿಗೆ ಜೊತೆಯಾಗುವವರು ಯಾರು? ಮಗನ ಆಸೆ ಈಡೇರಿಸಲು ಅಪ್ಪ ಎಷ್ಟೆಲ್ಲಾ ಪರದಾಟ ನಡೆಸುತ್ತಾನೆ? ಹೀಗೆ ಸಾಗುವ ಕಥೆಯಲ್ಲಿ ನಾನಾ ರೋಚಕ ತಿರುವುಗಳು. ಕೊನೆಗೆ ನಾಯಕನಿಗೆ ಜೋಡಿ ಸಿಗುತ್ತಾಳಾ? ಆಕೆ ಈತನ್ನು ಒಪ್ಪಿಕೊಂಡಿದ್ದಾದ್ರೂ ಏಕೆ? ಅನ್ನೋದನ್ನು ನೀವು ಥಿಯೇಟರ್‍ನಲ್ಲಿಯೇ ನೋಡ್ಬೇಕು. ಇದನ್ನೂ ಓದಿ: ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು
ನಿರ್ದೇಶಕ ನಾಗರಾಜ್ ಮೊದಲ ಬಾರಿಗೆ ನಿರ್ದೇಶನದ ಅಖಾಡಕ್ಕೆ ಇಳಿದಿದ್ರೂ, ಪಳಗಿದ ನಿರ್ದೇಶಕನ ರೀತಿ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಹದಿನೈದು ವರ್ಷದ ತಮ್ಮ ಜರ್ನಿಯ ಅನುಭವಗಳನ್ನು ಅದ್ಭುತವಾಗಿ ಬಳಸಿಕೊಂಡಿರುವ ನಟರಾಜ್, ಮೂಲತಃ ಡೈಲಾಗ್ ರೈಟರ್ ಆಗಿದ್ದವರು. ಆದ್ರೂ ವೀಲ್‍ಚೇರ್ ರೋಮಿಯೋ ಸಿನಿಮಾಗೆ ಗುರು ಕಶ್ಯಪ್ ಅವರಿಂದ ಪಂಚಿಂಗ್ ಸಂಭಾಷಣೆ ಬರೆಸಿ ಸೈ ಎನಿಸಿಕೊಂಡಿದ್ದಾರೆ.
ಸೂಕ್ಷ್ಮ ಕಥೆಗೆ ಅಷ್ಟೇ ಪವರ್ ಫುಲ್ ಡೈಲಾಗ್ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ನಗುವಿನ ಕಡಲಲ್ಲಿ ತೇಲಿಸುವಂತೆ ಮಾಡುತ್ತವೆ. ಭರತ್ ಬಿಜೆ ಸಂಗೀತದ ಸ್ಪರ್ಶ ಹಾಗೂ ಸಂತೋಷ್ ಪಾಂಡಿ ಛಾಯಾಗ್ರಾಹಣದ ಸೊಗಸು ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕಲಾಬಳಗದ ಅಭಿನಯಕ್ಕೆ ಬರುವುದಾದರೆ, ರಂಗಾಯಣ ರಘು ಜಾಕ್ ಮಾಮಾ ಪಾತ್ರದಲ್ಲಿ ಅಕ್ಷಶರಃ ಮಿಂಚಿದ್ದಾರೆ. ಸುಚೇಂದ್ರ ಪ್ರಸಾದ್ ಪ್ರತಿಮ ಅಭಿನಯ, ತಬಲನಾಣಿ, ಗಿರಿಶಿವಣ್ಣ ಚಿತ್ರದ ಪ್ಲಸ್ ಪಾಯಿಂಟ್. ಅಂಧ ವೇಶ್ಯೆ ಪಾತ್ರದಲ್ಲಿ ನಟಿ ಮಯೂರಿ ಅಭಿನಯ ಅಮೋಘ ಅಂದ್ರು ತಪ್ಪಾಗಲಿಕ್ಕಿಲ್ಲ.
ರಾಮ್ ಚೇತನ್ ಮೊದಲ ಬಾರಿಗೆ ಹೀರೋ ಆಗಿ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಸಿನಿಮಾವನ್ನು ವೀಲ್ ಚೇರ್ ಮೇಲೆ ಕುಳಿತು ಚಾಲೆಂಜಿಂಗ್ ರೋಲ್ ಮಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಒಟ್ನಲ್ಲಿ ವೀಲ್ ಚೇರ್ ರೋಮಿಯೋ ನಿಜಕ್ಕೂ ಹೊಸ ಪ್ರಯತ್ನ. ತೆರೆಹಿಂದಿ ದುಡಿದವರು, ತೆರೆಮುಂದೆ ಬಣ್ಣ ಹಚ್ಚಿದವರು ಎಲ್ಲರ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ. ಇದನ್ನೂ ಓದಿ: ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡ್ತಿದೆ: ಪ್ರಹ್ಲಾದ್ ಜೋಶಿ
ಸಿನಿಮಾ ರಂಗದಲ್ಲಿ ಈಜುವ ಕನಸು ಇಟ್ಟುಕೊಂಡು ಬರುವ ಅದೆಷ್ಟೋ ಪ್ರತಿಭೆಗಳು ದಡ ಸೇರಲು ನಾನಾ ರೀತಿಯ ಸರ್ಕಸ್ ಮಾಡ್ತಾರೆ. ಪ್ರತಿಭೆ ಜೊತೆಗೆ ಪರಿಶ್ರಮ ಇದ್ದವರು ಮಾತ್ರ ಇಲ್ಲಿ ಗೆಲುವು ದಕ್ಕಿಸಿಕೊಳ್ಳುತ್ತಾರೆ. ನಿರ್ದೇಶಕನಾಗಬೇಕು ಎಂಬ ಸ್ಪಷ್ಟ ನಿಲುವು ಹೊಂದಿದ್ದ ವೀಲ್ ಚೇರ್ ರೋಮಿಯೋ ಸೂತ್ರಧಾರಿ ನಟರಾಜ್‌ಗೆ ಅಷ್ಟು ಸುಲಭವಾಗಿ ನಿರ್ದೇಶಕನಾಗುವ ಅವಕಾಶ ಸಿಗಲಿಲ್ಲ. ಈ ಅವಕಾಶಕ್ಕಾಗಿ ನಟರಾಜ್ ಪಟ್ಟ ಶ್ರಮ ಅಷ್ಟಿಷ್ಟಲ್ಲ.
ಕಳೆದ ಹದಿನೈದು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟರಾಜ್, ಆರಂಭಿಕ ದಿನಗಳಲ್ಲಿ ಕಷ್ಟವನ್ನು ನುಂಗಿಕೊಂಡು ಬಂದವರು. ಆ ನಂತರ ಮಠ ಗುರುಪ್ರಸಾದ್, ಪಿ.ಸಿ.ಶೇಖರ್, ಪ್ರಶಾಂತ್ ರಾಜ್ ಹೀಗೆ ಹಲವು ನಿರ್ದೇಶಕರ ಗರಡಿಯಲ್ಲಿ ಪಳಗಿದ ನಟರಾಜ್, ಗಣೇಶ್ ನಟನೆಯ ಜೂಮ್, ಆರೆಂಜ್, ರೋಮಿಯೋ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆಯುವ ಮೂಲಕ ಯಶಸ್ವೀ ಸಂಭಾಷಣಾಕಾರರಾಗಿಯೂ ಚಿತ್ರರಂಗಕ್ಕೆ ಪರಿಚಿತರಾದರು. ಇದನ್ನೂ ಓದಿ: ಈ ವಾರ ಜಾಕ್ ಮಾಮನಾಗಿ ಬರ್ತಿದ್ದಾರೆ ರಂಗಾಯಣ ರಘು
ದಶಕಕ್ಕೂ ಹೆಚ್ಚು ಕಾಲ ನಿರ್ದೇಶನ ವಿಭಾಗದಲ್ಲಿ, ಸಂಭಾಷಣೆಗಾರನಾಗಿಯೂ ತಮ್ಮ ಕಲಾಚಾಕಚಕತ್ಯೆ ತೋರಿಸಿದ ನಟರಾಜ್, ವೀಲ್ ಚೇರ್ ರೋಮಿಯೂ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟರು. ಪ್ರೇಕ್ಷಕರ ರುಚಿಗೆ ತಕ್ಕಂತೆ, ಅವರನ್ನು ಮನರಂಜಿಸುವ ಸಿನಿಮಾ ಮಾಡಲೇಬೇಕು ಎಂಬ ಛಲ ತೊಟ್ಟು ನಟರಾಜ್ ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ತಯಾರಿಸಿದ್ದಾರೆ.
ಹೊಡಿ ಬಡಿ ಸಿನಿಮಾಗಳ ಹಾವಳಿ ನಡುವೆ ಎಲ್ಲಾ ಚಿತ್ರಪ್ರೇಮಿಗಳಿಗೆ ಇಷ್ಟವಾಗುವ, ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರವನ್ನು ನಟರಾಜ್ ಕಟ್ಟಿಕೊಟ್ಟಿದ್ದಾರೆ ಅನ್ನೋದು ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಗೆ ಸಿಕ್ಕ ಯಶಸ್ಸು ಉದಾಹರಣೆ. ನಮ್ಮ ನಿಮ್ಮ ಮಧ್ಯೆ ನಡುವೆಯ ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ವೀಲ್ ಚೇರ್ ರೋಮಿಯೋ ಸಿನಿಮಾವನ್ನು ನಟರಾಜ್ ನಿರ್ದೇಶನ ಮಾಡಿದ್ದಾರೆ. ಕಣ್ಣು ಕಾಣದ ವೇಶ್ಯೆ ಮತ್ತು ಸದಾ ವೀಲ್ ಚೇರ್ ಮೇಲೆ ಕುಳಿತುಕೊಳ್ಳುವ ರೋಮಿಯೋ ನಡುವಿನ ಪ್ರೀತಿ ಜೊತೆಗೆ ತಂದೆ-ಮಗನ ಸೆಂಟಿಮೆಂಟ್‌ನ ಈ ಸಿನಿಮಾ ಇದೇ 27ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ರೋಮಿಯೋ ಆಗಿ ರಾಮ್ ಚೇತನ್ ನಟಿಸಿದ್ದು, ಜೂಲಿಯಟ್ ಆಗಿ ಮಯೂರಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ ವೀಲ್ ಚೇರ್ ರೋಮಿಯೋ ಸಿನಿಮಾ ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ನೀಡುವುದು ಸತ್ಯ. ಇದನ್ನೂ ಓದಿ: ನಿರ್ದೇಶಕ ಆರ್‌ಜಿವಿ ವಿರುದ್ಧ 56 ಲಕ್ಷ ವಂಚನೆ ಪ್ರಕರಣ ದಾಖಲು
ಕನ್ನಡ ಚಿತ್ರರಂಗದ ಉದ್ಯಾನವನದಲ್ಲಿ ಬೆಳೆದು ನಿಂತಿರುವ ವೀಲ್ ಚೇರ್ ರೋಮಿಯೋ ಬೆಳ್ಳಿತೆರೆ ಬಾನಂಗಳ ಪ್ರವೇಶಿಸಲು ಸನ್ನದ್ಧನಾಗಿದ್ದಾನೆ. ಈ ತಿಂಗಳ 27ರಂದು ಚಿತ್ರ ಪ್ರೇಮಿಗಳನ್ನು ರಂಜಿಸಲು ಬರುತ್ತಿರುವ ವೀಲ್ ಚೇರ್ ರೋಮಿಯೋ ಅಂಗಳದಿಂದ ಮನ ತಣಿಸಿ ಕುಣಿಸುವ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಹೃದಯದಲ್ಲಿ ಅರಮನೆ ಕಟ್ಟಿದೆ.
ರಂಗು ರಾಟೆ ರಂಗು ರಾಟೆ ಎಂದು ಶುರುವಾಗುವ ಅದ್ಭುತ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಅಷ್ಟೇ ಸೊಗಸಾದ ಸಂಗೀತವನ್ನು ಭರತ್ ಜಿ.ಜೆ ನೀಡಿದ್ದು, ವಿಜಯ್ ಪ್ರಕಾಶ್ ಹಾಡಿಗೆ ಧ್ವನಿಯಾಗಿದ್ದಾರೆ. ನಾಯಕ ನಾಯಕಿಯನ್ನು ಪ್ರೀತಿಸುವ ಪರಿಯನ್ನು ವಿವರಿಸುವ ಬಗೆಯ ಹಾಡು ಇದಾಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ :ಕ್ರಿಕೆಟ್ ಪಂದ್ಯದ ಮಧ್ಯ ಗಮನ ಸೆಳೆದಿದ್ದ ಈ ಸುಂದರಿ, ಸಿನಿಮಾ ರಂಗಕ್ಕೆ ಎಂಟ್ರಿ
ಕಾಲಿಲ್ಲದ ಯುವಕ, ಕಣ್ಣುಕಾಣದ ವೇಶ್ಯೆಯ ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತದೆ ಎಂಬ ಒಂದೊಳ್ಳೆ ಕಂಟೆಂಟು ಜೊತೆಗೆ, ಅಪ್ಪ ಮಗನ ಬಾಂಧವ್ಯವನ್ನು ವಿವರಿಸುವ ವೀಲ್ ಚೇರ್ ರೋಮಿಯೋ ಸಿನಿಮಾಗೆ ಹಲವು ಸ್ಟಾರ್ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಜಿ. ನಟರಾಜ್, ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ರಾಮ್ ಚೇತನ್ ಅಭಿನಯಿಸಿದ್ದರೆ, ಮಯೂರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲನಾಣಿ ಗಿರೀಶ್ ಸೇರಿದಂತೆ ಒಂದಷ್ಟು ಹಿರಿಯ ಕಲಾಬಳಗ ಸಿನಿಮಾದಲ್ಲಿದೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು
ಜೆ. ಭರತ್ ಸಂಗೀತವಿರುವ ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ಸಂತೋಷ್ ಛಾಯಾಗ್ರಹಣ, ಕಿರಣ್ ಸಂಕಲನವಿದ್ದು, ಗುರುಪ್ರಸಾದ್ ಸಂಭಾಷಣೆ ಇದ್ದು, ಟಿ.ವೆಂಕಟಾಚಲಯ್ಯ ಹಾಗೂ ಭಾರತಿ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಒಂದಷ್ಟು ಪಂಚಿಂಗ್ ಡೈಲಾಗ್, ವಿಭಿನ್ನತೆಯಿಂದ ಗಮನಸೆಳೆದಿರುವ ಟ್ರೇಲರ್ ಮೂಲಕ ಸಿನಿಮಾದ ಕಂಟೆಂಟು, ಕ್ವಾಲಿಟಿ ಮೇಲೆ ಬೆಳಕು ಚೆಲ್ಲಿರುವ ವೀಲ್ ಚೇರ್ ರೋಮಿಯೋ ಮೇ 27ಕ್ಕೆ ತೆರೆ ಮೇಲೆ ಬರಲಿದೆ.