Tag: ರಾಮ್ ಚರಣ್ ತೇಜಾ

  • ಕೆಲವೇ ದಿನಗಳಲ್ಲಿ RRR ಸುತ್ತ ವಿವಾದ ಏಳಬಹುದು: ಖ್ಯಾತ ಜ್ಯೋತಿಷಿ ಭವಿಷ್ಯ

    ಕೆಲವೇ ದಿನಗಳಲ್ಲಿ RRR ಸುತ್ತ ವಿವಾದ ಏಳಬಹುದು: ಖ್ಯಾತ ಜ್ಯೋತಿಷಿ ಭವಿಷ್ಯ

    ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತರಾಗಿರುವ ಪಂಡಿತ್ ಜಗನ್ನಾಥ್ ಗುರೂಜಿ ‘ಆರ್.ಆರ್.ಆರ್’ (RRR) ಸಿನಿಮಾದ ಬಗ್ಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಬಾಕ್ಸ್ ಆಫೀಸ್ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿರುವ ಇವರು, ಕೆಲವೇ ದಿನಗಳಲ್ಲಿ ಆರ್.ಆರ್.ಆರ್ ಸುತ್ತ ವಿವಾದ ಎದ್ದೇಳಬಹುದು ಎಂದು ಹೇಳುವ ಮೂಲಕ ಅಚ್ಚರಿಗೆ ದೂಡಿದ್ದಾರೆ.

    ಬಾಹುಬಲಿ ಸಿನಿಮಾ ರಿಲೀಸ್ ಆದಾಗ ಇದೇ ಜ್ಯೋತಿಷಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಅವರು ಹೇಳಿದ್ದ ಬಹುತೇಕ ಮಾತುಗಳು ನಿಜವೂ ಆಗಿದ್ದವು ಎನ್ನಲಾಗುತ್ತಿದೆ. ಹಾಗಾಗಿ ಆರ್.ಆರ್.ಆರ್ ಸುತ್ತ ಯಾವ ವಿವಾದ ಎದ್ದೇಳಬಹುದು ಎಂದು ತಲೆಕೆಡಿಸಿಕೊಂಡು ಕೂತಿದ್ದಾರೆ ರಾಜಮೌಳಿ‌ (S. S. Rajamouli) ಅಭಿಮಾನಿಗಳು. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್

    ಆರ್.ಆರ್.ಆರ್ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆಯೂ ಮಾತನಾಡಿರುವ ಜಗನ್ನಾಥ್ ಗುರೂಜಿ, ಈವರೆಗೂ ಭಾರತೀಯ ಸಿನಿಮಾ ರಂಗದ ಯಾವ ಚಿತ್ರವೂ ಮಾಡದಷ್ಟು ದುಡ್ಡನ್ನು ಈ ಚಿತ್ರ ಮಾಡಲಿದೆ ಎಂದು ನುಡಿದಿದ್ದಾರೆ. ದಾಖಲೆಯ ರೀತಿಯಲ್ಲಿ ರಾಜಮೌಳಿ ಟೀಮ್ ಗೆ ಹಣ ಹರಿದು ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ಸಿನಿಮಾ ರಂಗದ ಅನೇಕರಿಗೆ ಈ ಗುರೂಜಿ ಭವಿಷ್ಯ ಹೇಳುತ್ತಾರೆ. ಅಲ್ಲದೇ, ಕೆಲ ಸಿನಿಮಾಗಳು ರಿಲೀಸ್ ಆದಾಗಲೂ ಇವರು ಮಾತನಾಡಿದ್ದಾರೆ. ಹಾಗಾಗಿ ಗುರೂಜಿ ಮಾತಿಗೆ ಮಹತ್ವ ಬಂದಿದೆ. ಯಾವ ರೀತಿಯಲ್ಲಿ ಈ ಸಿನಿಮಾ ಕಾಂಟ್ರವರ್ಸಿ ಆಗುತ್ತದೆ ಎಂಬ ಲೆಕ್ಕಾಚಾರ ಕೂಡ ತೆಲುಗು ಚಿತ್ರೋದ್ಯಮದಲ್ಲಿ ಶುರುವಾಗಿದೆ.

  • ಆರ್.ಆರ್.ಆರ್. ಬೆಂಗಳೂರು ಒಂದರಲ್ಲೇ 700ಕ್ಕೂ ಅಧಿಕ ಶೋಗಳು : ಬಾಕ್ಸ್ ಆಫೀಸೂ ಉಡಿಸ್

    ಆರ್.ಆರ್.ಆರ್. ಬೆಂಗಳೂರು ಒಂದರಲ್ಲೇ 700ಕ್ಕೂ ಅಧಿಕ ಶೋಗಳು : ಬಾಕ್ಸ್ ಆಫೀಸೂ ಉಡಿಸ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ದಾಖಲೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಕೇವಲ ಬೆಂಗಳೂರು ಒಂದರಲ್ಲೇ ಇಂದು 700ಕ್ಕೂ ಅಧಿಕ ಶೋಗಳು ನಡೆದಿವೆ. ಹಾಗಾಗಿ ಇಂದು ಗಾಂಧಿನಗರದಲ್ಲಿ ಬರೀ ಆರ್.ಆರ್.ಆರ್ ಸಿನಿಮಾದ್ದೇ ಮಾತು ಕೇಳಿ ಬರುತ್ತಿದೆ.

    ಮಧ್ಯರಾತ್ರಿ 12.45 ರಿಂದ ಶುರುವಾದ ಶೋಗಳು ನಿರಂತರವಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಬಾಕ್ಸ್ ಆಫೀಸು ತುಂಬಿ ತುಳುಕುತ್ತಿದೆ. ಟಿಕೆಟ್ ದರದಲ್ಲೂ ಭಾರೀ ಏರಿಕೆ ಕಂಡಿದ್ದರೂ, ಅಭಿಮಾನಿಗಳು ಮಾತ್ರ ತಲೆಕೆಡಿಸಿಕೊಳ್ಳದೇ ಸಿನಿಮಾ ನೋಡುತ್ತಿದ್ದಾರೆ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್

    700 ಸ್ಕ್ರೀನ್ ಗಳಲ್ಲಿ 600ಕ್ಕೂ ಹೆಚ್ಚು ತೆಲುಗು ಆರ್.ಆರ್.ಆರ್ ಪ್ರದರ್ಶನ  ಕಾಣುತ್ತಿದ್ದರೆ, 28 ಸ್ಕ್ರೀನ್ ಗಳಲ್ಲಿ ಕನ್ನಡ ಆರ್.ಆರ್.ಆರ್ ರಿಲೀಸ್ ಆಗಿದೆ. ಉಳಿದಂತೆ ಬೆರಳೆಣಿಕೆಯಲ್ಲಿ ತಮಿಳು ಮತ್ತು ಹಿಂದಿಯಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ವಿಶ್ವದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಆರ್.ಆರ್.ಆರ್ ರಿಲೀಸ್ ಆಗಿದೆ. ಅಂದಾಜು ಒಂದೇ ದಿನಕ್ಕೆ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿದೆ.

  • ಮಾರ್ಚ್ 25ಕ್ಕೆ RRR ಸಿನಿಮಾ ತೆರೆಗೆ

    ಮಾರ್ಚ್ 25ಕ್ಕೆ RRR ಸಿನಿಮಾ ತೆರೆಗೆ

    ಹೈದರಾಬಾದ್: ರಾಜ್‍ಮೌಳಿ ನಿರ್ದೇಶನದ ಬಹುನೀರಿಕ್ಷಿತ  ಆರ್‌ಆರ್‌ಆರ್‌ ಸಿನಿಮಾವನ್ನು ಮಾರ್ಚ್ 25ರಂದು ಬಿಡುಗಡೆ  ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಕೊರೊನಾ ಕಾರಣದಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಾ ಬಂದಿರುವ ಚಿತ್ರ ತಂಡ ಅಧಿಕೃತ ದಿನಾಂಕವನ್ನು ಪ್ರಕಟ ಮಾಡಿದೆ.

    ಜೂನಿಯರ್ ಎನ್‍ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್‌ ಸಿನಿಮಾವು ಜನವರಿ 7ರಂದು ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಈ ಮಧ್ಯೆ ಮಾರ್ಚ್ 18ರಂದು ಆರ್‌ಆರ್‌ಆರ್‌ ಸಿನಿಮಾವನ್ನು ತೆರೆಕಾಣಿಸಲು ಸಜ್ಜಾಗಿದ್ದರು ರಾಜಮೌಳಿ. ಆ ದಿನಾಂಕ ಹೊಂದಿಕೆಯಾಗದೇ ಇದ್ದರೆ ಏಪ್ರಿಲ್ 28ರ ಮೇಲೆ ಕಣ್ಣಿಟ್ಟಿದ್ದರು. ಇದೀಗ ಅವರೆಡನ್ನೂ ಬಿಟ್ಟು ಹೊಸ ರಿಲೀಸ್ ಡೇಟ್ ಫೈನಲ್ ಮಾಡಲಾಗಿದೆ. ಮಾರ್ಚ್ 25ರಂದು ಆರ್‌ಆರ್‌ಆರ್‌ ರಿಲೀಸ್ ಆಗೋದು ಖಚಿತ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ.

    ರಾಮ್ ಚರಣ್ ತೇಜಾ, ಜೂ.ಎನ್‍ಟಿಆರ್ ಅಭಿನಯಿಸಿರುವ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಸಿನಿಮಾವಾಗಿದೆ.  ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್​ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಈಗಾಗಲೇ ಆರ್‌ಆರ್‌ಆರ್‌ ಚಿತ್ರತಂಡ ಸಿನಿಮಾ ಕುರಿತಂತೆ ಭರ್ಜರಿಯಾಗಿ ಪ್ರಮೋಷನ್ ನಡೆಸಿದ್ದು, ಚಿತ್ರ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ.

  • ಗೆಳೆಯ ಗೆಳೆಯ ಗೆಲುವೇ ನಿನ್ನದಯ್ಯ- ಅಪ್ಪು ನೆನೆದು ಜೂ. ಎನ್‍ಟಿಆರ್ ಭಾವುಕ

    ಗೆಳೆಯ ಗೆಳೆಯ ಗೆಲುವೇ ನಿನ್ನದಯ್ಯ- ಅಪ್ಪು ನೆನೆದು ಜೂ. ಎನ್‍ಟಿಆರ್ ಭಾವುಕ

    -ಅಪ್ಪು ಇಲ್ಲದೆ ನನಗೆ ಕರ್ನಾಟಕವೇ ಶೂನ್ಯ ಅನ್ನಿಸ್ತಿದೆ

    ಬೆಂಗಳೂರು: ಸಿನಿಮಾ ರಂಗದಲ್ಲಿ ಭಾರೀ ಸಂಚಲ ಮೂಡಿಸಿರುವ ಸಿನಿಮಾ RRR. ಈ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಇವೆಂಟ್‍ನಲ್ಲಿ ಭಾಗಿಯಾದ ಜೂ. ಎನ್‍ಟಿಆರ್ ಆಪ್ತ ಗೆಳೆಯ ಅಪ್ಪುನನ್ನು ನೆನೆದು ಭಾವುಕರಾಗಿದ್ದಾರೆ.

    ಬೆಂಗಳೂರಿನ ಒರಾಯನ್ ಮಾಲ್ PVRನಲ್ಲಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ತೇಜಾ, ಆಲಿಯಾ ಭಟ್ ಭಾಗಿಯಾಗಿದ್ದಾರೆ. ಇದನ್ನೂ ಓದಿ: 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಧಿಕಾ-ಯಶ್

    ಅಗಲಿದ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮದವನ್ನು ಪ್ರಾರಂಭಿಸಲಾಯಿತ್ತು. ತುಂಬಾ ಸಂತೋಷ ಆಗ್ತಿದೆ ಎಕ್ಸ್ಪ್ರೆಸ್ ಮಾಡೋಕೆ ಆಗುತ್ತಿಲ್ಲ. ತುಂಬಾ ಖುಷಿ ಇದೆ ಎಂದು ರಾಜ್‍ಮೌಳಿ ಹೇಳಿದ್ದಾರೆ. ತುಂಬಾ ಬಾರಿ ಬೆಂಗಳೂರಿಗೆ ಬಂದಿದ್ದೇನೆ. ತುಂಬಾ ಖುಷಿ ಆಗ್ತಿದೆ. RRR ಟ್ರೇಲರ್‌ಗೆ ಒಳ್ಳೆಯ ರೆಸ್ಪಾನ್ಸ್ ಬರ್ತಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: RRR ಟ್ರೇಲರ್ ಔಟ್ – ರಾಮ್ ಚರಣ್, ಜ್ಯೂ. ಎನ್‍ಟಿಆರ್ ಆ್ಯಕ್ಷನ್‍ಗೆ ಫ್ಯಾನ್ಸ್ ಫಿದಾ

    ಕನ್ನಡದಲ್ಲೇ ಮಾತು ಆರಂಭಿಸಿದ ಜೂ. ಎನ್‍ಟಿಆರ್ ನನಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ.ತಪ್ಪಾದರೆ ಕ್ಷಮಿಸಿ. ತುಂಬಾ ಖುಷಿಯಾಗುತ್ತಿದೆ. ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ನಾನೇ ಕನ್ನಡದಲ್ಲಿ ಡಬ್ ಮಾಡಿದ್ದೇನೆ. ಅಮ್ಮ ಕುಂದಾಪುರದವರು, ಅವರು ಹೇಳಿದ್ರು, ನೀನು ಡಬ್ ಮಾಡದಿದ್ದರೂ ಪರವಾಗಿಲ್ಲ. ತಪ್ಪಾಗಿ ಮಾತನಾಡಬಾರದು. ಏಕೆಂದರೆ ಅಲ್ಲಿ ನಮ್ಮವರಿದ್ದಾರೆ ಅಂತ ಅಮ್ಮ ಹೇಳಿದ್ದರು. ಅಪ್ಪು ಇಲ್ಲದೆ ನನಗೆ ಕರ್ನಾಟಕವೇ ಶೂನ್ಯ ಅನ್ನಿಸ್ತಿದೆ. ತುಂಬಾ ಕಷ್ಟವಾಗುತ್ತಿದೆ. ಚಕ್ರವ್ಯೂಹ ಚಿತ್ರದಲ್ಲಿ ಅಪ್ಪುಗೆ ಹಾಡಿದ್ದ “ಗೆಳೆಯ ಗೆಳೆಯ ಗೆಲುವೇ ನಿನ್ನದಯ್ಯ” ಹಾಡು ಹಾಡಿ ಅಪ್ಪು ಬಗ್ಗೆ ಜೂ.ಎನ್‍ಟಿಆರ್ ಭಾವುಕರಾಗಿದ್ದಾರೆ.

    ಸ್ವತಂತ್ರಪೂರ್ವ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕಥೆ ಆಧಾರಿತ ಸಿನಿಮಾ ಇದಾಗಿದೆ. ಕೊಮರಂ ಭೀಮ್ ಆಗಿ ಜೂನಿಯರ್ ಎನ್ ಟಿಆರ್ ಕಾಣಿಸಿಕೊಂಡಿದ್ದಾರೆ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ ನಟಿಸಿದ್ದಾರೆ. 400 ಕೋಟಿ ಬಜೆಟ್ ನಲ್ಲಿ ತಯಾರಾದ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ತೆಲುಗು , ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ತೆರೆ ಕಾಣಲು ಭರ್ಜರಿ ಸಿದ್ಧತೆ ನಡೆಸಿದೆ.

    ಜನವರಿ 7ಕ್ಕೆ ವಲ್ರ್ಡ್ ವೈಡ್ ರಿಲೀಸ್ ಆಗ್ತಿರೋ RRR ಸಿನಿಮಾದ ಕರ್ನಾಟಕದಲ್ಲಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದಿರೋ ಏಗಿಓ ಪ್ರೊಡೆಕ್ಷನ್ ಪಡೆದುಕೊಂಡಿದೆ. ಈಗಾಗ್ಲೇ ಟ್ರೈಲರ್ ಲಾಂಚ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಮಾ ಕುರಿತು ಮಾಧ್ಯಮಗಳ ಜೊತೆ ಚಿತ್ರತಂಡ ಸಂವಾದ ನಡೆಸಿದೆ.

     

  • ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ಬೆಂಗಳೂರು: ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಈ ಸತ್ಯವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟ ರಾಮ್ ಚರಣ್ ತೇಜಾ ಅವರು ಪುನೀತ್ ನೆನೆದು ಭಾವುಕರಾಗಿ ಮಾತನಾಡಿದ್ದಾರೆ.

    ಪುನೀತ್ ಸಾವನ್ನು ಯಾರಿಗೂ ನಂಬಲು ಆಗುತ್ತಿಲ್ಲ. ಇವರು ಬರೀ ಕನ್ನಡಿಗರಿಗೆ ಮಾತ್ರವಲ್ಲ, ಅಪ್ಪು ಎಲ್ಲೇ ಹೋದರು ಅವರಿಗೆ ಫ್ಯಾನ್ಸ್ ಮತ್ತು ಸ್ನೇಹಿತರು ಜಾಸ್ತಿ. ಅಪ್ಪುವನ್ನು ಮಾತನಾಡಿಸಿದರೆ ಎಷ್ಟೋ ವರ್ಷಗಳ ಸ್ನೇಹ ಇದೆ ಎಂಬಂತೆ ಬೇಗ ಹೊಂದಿಕೊಳ್ಳುತ್ತಾರೆ. ಅದೇ ರೀತಿ ರಾಮ್ ಚರಣ್ ತೇಜ ಸಹ ಪುನೀತ್ ವಿಚಾರದಿಂದ ದುಃಖಿತರಾಗಿದ್ದು, ಇಂದು ಶಿವಣ್ಣನ ಮನೆಗೆ ಬಂದು ಅವರಿಗೆ ಸಾಂತ್ವನವನ್ನು ಹೇಳಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ತುಂಬಾ ದುಃಖವಾಗುತ್ತಿದೆ. ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾರಿಗೆ ಏನಾದರೂ ಆದರೆ ನಮಗೆ ಅರ್ಥವಾಗುತ್ತೆ. ಆದರೆ ಪುನೀತ್ ಅವರಿಗೆ ಈ ರೀತಿಯಾಗಿದ್ದು, ನನಗೆ ನಿಜವಾಗಿಯೂ ತುಂಬಾ ದುಃಖ ತಂದಿದೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ

    ನನಗೆ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಾತು ಸಹ ಬರುತ್ತಿಲ್ಲ. ಇದು ನಡೆಯಿತಾ, ಇಲ್ಲವಾ ಎಂದು ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಇಂತಹ ಹಂಬಲ್ ವ್ಯಕ್ತಿಗೆ ಈ ರೀತಿ ಆಗಿರುವುದನ್ನು ನನಗೆ ತುಂಬಾ ದುಃಖ ತಂದಿದೆ. ಇಂತಹ ಪ್ರೀತಿ ತುಂಬಿದ ವ್ಯಕ್ತಿ ಎಲ್ಲಿಯೂ ಹುಟ್ಟಿಲ್ಲ. ನಮ್ಮ ಮನೆಗೆ ಬಂದು ಅವರು ನಮ್ಮ ಮನೆಯವರಂತೆ ಬೇಗ ಹೊಂದಿಕೊಂಡಿದ್ದರು ಎಂದು ನೆನೆದರು.

    ಪುನೀತ್ ಎಂದಿಗೂ ನಮ್ಮ ಮನೆಗೆ ಬಂದಾಗ ಅತಿಥಿ ಎಂಬ ಭಾವನೆಯೇ ಬಂದಿಲ್ಲ. ನಮ್ಮ ಮನೆಗೆ ಬಂದರೆ ಅವರು ನಮ್ಮವರು ಎಂಬಂತೆ ಎಲ್ಲರ ಜೊತೆ ಬೇಗ ಹೊಂದಿಕೊಳ್ಳುವ ಗುಣ ಇತ್ತು. ಎಲ್ಲರನ್ನು ನಮ್ಮವರು ಎಂದು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಅವರು ಎಂದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

    ನಾನು ಅವರನ್ನು ಭೇಟಿಯಾದಗಲೆಲ್ಲ ಮಾನವೀಯತೆ ಏನು? ಸಾಮಾನ್ಯವಾಗಿ ಹೇಗೆ ಇರಬೇಕು? ಎಂಬುದನ್ನು ನೋಡಿ ಕಲಿಯುತ್ತಿದೆ. ಪುನೀತ್ ಎಲ್ಲೇ ಇದ್ದರೂ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಚಿತ್ರರಂಗಕ್ಕೆ ನೀವು ಕೊಟ್ಟ ಕೂಡುಗೆಗೆ ಧನ್ಯವಾದ. ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ಅಭಿಮಾನಿಗಳು ಮತ್ತು ಪುನೀತ್ ಅವರ ಕುಟುಂಬದವರ ಜೊತೆ ಯಾವಾಗಲೂ ನಾವು ಇರುತ್ತೇವೆ ಎಂದು ಹೇಳಿದರು.