ಕನ್ನಡದ ರಾಮ್, ಅಣ್ಣಾ ಬಾಂಡ್ (Annabond) ಸಿನಿಮಾಗಳ ನಟಿ ಪ್ರಿಯಾಮಣಿ (Priyamani) ಅವರು ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಅನ್ಯಧರ್ಮದವನ ಜೊತೆ ಮದುವೆಯಾಗಿದ್ದಕ್ಕೆ (Wedding) ನಟಿ ಎದುರಿದ ಟ್ರೋಲ್, ಕಾಮೆಂಟ್‌ಗಳ ಬಗ್ಗೆ ಮೌನ ಮುರಿದ್ದಾರೆ. ತಮಗೆ ಹುಟ್ಟುವ ಮಕ್ಕಳು ಮುಂದೊಂದು ದಿನ ಭಯೋತ್ಪಾದಕರಾಗುತ್ತಾರೆ ಎಂದು ಟೀಕಿಸಿದವರಿಗೆ ನಟಿ ತಕ್ಕ ಉತ್ತರ ಕೊಟ್ಟಿದ್ದಾರೆ.
ನನಗೂ ಮತ್ತು ಮುಸ್ತಫಾಗೂ ಹುಟ್ಟುವ ಮಕ್ಕಳು ಭಯೋತ್ಪಾದಕರು ಆಗುತ್ತಾರೆ ಎಂದು ಕೆಲವರು ಹೇಳಿದ್ದರು. ಟ್ರೋಲ್ ಮಾಡಿದ್ದರು ಎಂದು ಪ್ರಿಯಾಮಣಿ ಹೇಳಿದ್ದಾರೆ. ಮದುವೆಯಾಗುತ್ತಿರುವ ಬಗ್ಗೆ ಘೋಷಣೆಯಾದ ದಿನದಿಂದ ಈ ದ್ವೇಷ ಅಭಿಯಾನವು ಮದುವೆಯ ನಂತರವೂ ಮುಂದುವರೆಯಿತು ಎಂದು ನಟಿ ಹೇಳಿದ್ದಾರೆ. ನನ್ನ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸುವ ರೀತಿಯಲ್ಲಿ ಈ ಸೈಬರ್ ದಾಳಿ ಮುಂದುವರೆದಿದೆ ಎಂದು ಪ್ರಿಯಾಮಣಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಅನ್ಯಧರ್ಮದವನ ಜೊತೆಗಿನ ಮದುವೆಯಾಗಿದ್ದಕ್ಕೆ ಮತ್ತೆ ಧರ್ಮದ ಕುರಿತು ಟೀಕಿಸಿದವರಿಗೆ ʻನಾನು ಹುಟ್ಟು ಹಿಂದೂʼ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಕೆಟ್ಟ ಟ್ರೋಲ್‌ಗಳ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ವರುಣ್ ಧವನ್ ನಟನೆಯ ‘ಬೇಬಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್?
ಅಂದಹಾಗೆ, ಮುಂಬೈ ಮೂಲದ ಮುಸ್ತಫಾ ರಾಜ್ ಅವರನ್ನು 2017ರಲ್ಲಿ ಪ್ರಿಯಾಮಣಿ ಮದುವೆಯಾದರು. ಹಲವು ವರ್ಷಗಳ ಡೇಟಿಂಗ್ ನಂತರ ಮದುವೆಯ ಮುದ್ರೆ ಒತ್ತಿದ್ದರು.
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಬಾಬಿ ಸಿಂಹ (Bobby Simha) ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಜಿಗರ್‌ಥಂಡ’ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಈ ಪ್ರತಿಭಾವಂತ ಸ್ಟಾರ್ 777 ಚಾರ್ಲಿ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಇದೀಗ ಬಾಬಿ ಸಿಂಹ ರಘು ಕೋವಿ ನಿರ್ದೇಶನದಲ್ಲಿ ತಯಾರಾಗುತ್ತಿದೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಬರಹಗಾರರಾಗಿ ಖ್ಯಾತಿ ಪಡೆದಿರುವ ರಾಜ್ಯ ಪ್ರಶಸ್ತಿ ವಿಜೇತ ರಘು ಕೋವಿ (Raghu Kovi) ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ‘ದಿಲ್ ಮಾರ್’ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿರುವ ರಾಮ್ ಗೆ ರಘು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ರಾಮ್ , ರಘು ಕೋವಿ ನಿರ್ದೇಶನದಲ್ಲಿ ನಟಿಸುತ್ತಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ. ಹಂಸಲೇಖ ಕಥಾ ಕಣಜದಿಂದ ಸ್ಯಾಂಡಲ್ ವುಡ್ ಪರಿಚಿತರಾದ ರಘು ಕೋವಿ, ಕೃಷ್ಣಲೀಲಾ ಅತ್ಯುತ್ತಮ ಬರವಣಿಗೆಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು, ಎಸ್.ಎಸ್. ರಾಜಶೇಖರ್ , ಕೆ.ವಿ.ರಾಜ್, ಶಶಾಂಕ್, ಉಪೇಂದ್ರ ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ರಘು ಕೋವಿ ದುಡಿದಿದ್ದಾರೆ. ಇದೀಗ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕಿಳಿದಿದ್ದಾರೆ.
ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರ್ತಿರುವ ಈ ಸಿನಿಮಾದಲ್ಲಿ ರಾಮ್ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಏನೂ ಅನ್ನೋದನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ಶೂಟಿಂಗ್ ಹಂತದಲ್ಲಿರುವ ಈ ಸಿನಿಮಾಗೆ ಓ ಮೈ ಗಾಡ್-2 ನಿರ್ಮಾಪಕ ನಿಕುಲ್ ದೇಸಾಯಿ ಕನ್ನಡ ನಿರ್ಮಾಣ ಸಂಸ್ಥೆ ಜೊತೆ ಕೈ ಜೋಡಿಸಿ ಹಣ ಹಾಕುತ್ತಿದ್ದಾರೆ.
ನೈಜ ಘಟನೆಯಾಧಾರಿತ ಕಥಾಹಂದರ ಹೊಂದಿರುವ ಸಿನಿಮಾಗೆ ಯುವರತ್ನ, ರಾಜಕುಮಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ಎ.ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಸದ್ಯ ಶೂಟಿಂಗ್ ನಲ್ಲಿ ನಿರತರಾಗಿರುವ ಚಿತ್ರತಂಡ ಶೀಘ್ರದಲ್ಲಿಯೇ ಟೈಟಲ್ ರಿವೀಲ್ ಮಾಡಲಿದೆ.
ಕೆಜಿಎಫ್ ಸಿನಿಮಾ ರೈಟರ್ ಚಂದ್ರಮೌಳಿ (Chandramouli) ಇದೀಗ ಡೈರೆಕ್ಟರ್ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ದಿಲ್ ಮಾರ್’ (Dil Mar) ಸಿನಿಮಾ ಮೂಲಕ ಮೊದಲ ಬಾರಿಗೆ ಅವರು ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾದಲ್ಲಿ ಮಾಸ್ ಮಹಾರಾಜ ರವಿತೇಜಾ ನಟನೆಯ ಕಿಲಾಡಿ ಚಿತ್ರದಲ್ಲಿ ನಟಿಸಿದ್ದ ಬೋಲ್ಡ್ ಬ್ಯೂಟಿ ಡಿಂಪಲ್ ಹಯಾತಿ (Dimple Hayathi) ನಾಯಕಿಯಾಗಿ ನಟಿಸಿದ್ದಾರೆ.
ಹೀರೋಯಿನ್ ಆಗಿ ಡಿಂಪಲ್ ಗೆ ಇದು ಮೊದಲ ಚಿತ್ರವಾಗಿದ್ದು, ಒಂದೊಳ್ಳೆ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಹೊಸ ಬಗೆಯ ಪಾತ್ರದ ಮೂಲಕ ಅವರು ಪ್ರೇಕ್ಷಕರ ಮುಂದೆ ನಿಲ್ಲಲಿದ್ದಾರೆ. ಡಿಂಪಲ್ ನಾಯಕಿಯಾದರೆ, ಯುವ ಪ್ರತಿಭೆ ರಾಮ್ (Ram)ನಾಯಕನಾಗಿ ಬಣ್ಣ ಹಚ್ಚಿದ್ದು, ಡೈಲಾಗ್ ಕಿಂಗ್ ಸಾಯಿ ಕುಮಾರ್ ವಿಲನ್ ಆಗಿ ಘರ್ಜಿಸಿದ್ದಾರೆ. ಇದನ್ನೂ ಓದಿ:ನನ್ನ ಜೀವನದಲ್ಲಿ ಇದೊಂದು ಸಿನಿಮಾ ಕಪ್ಪು ಚುಕ್ಕೆ: ಹಿರಿಯ ನಟ ದತ್ತಣ್ಣ
ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬರ್ತಿರುವ ದಿಲ್ ಮಾರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲಿಯೇ ಹಾಡು ಬಿಡುಗಡೆಯಾಗಲಿದೆ. ಇದಾದಾ ಬಳಿಕ ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಗೆ ಕಿಕ್ ಸ್ಟಾರ್ಟ್ ಕೊಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಈ ಸಿನಿಮಾದಲ್ಲಿ ನುರಿತ ತಂತ್ರಜ್ಞಾನ ತಂಡವೇ ಕೆಲಸ ಮಾಡಿದ್ದು, ಅರ್ಜುನ್ ರೆಡ್ಡಿ ಖ್ಯಾತಿಯ ರಾದನ್ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಕೆ ಮಹೇಶ್ ಮತ್ತು ನಾಗರಾಜ್ ಭದ್ರಾವತಿ ಬಂಡವಾಳ ಹೂಡಿದ್ದಾರೆ. ಯುವಕರನ್ನೇ ಗುರಿಯಾಗಿಸಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎನ್ನುತ್ತಿದೆ ಚಿತ್ರತಂಡ.
ಭೋಪಾಲ್: ಅನಾಮಿಕರ ಗುಂಪೊಂದು ಚರ್ಚ್‍ಗೆ (Church) ಬೆಂಕಿ ಹಚ್ಚಿ, ಗೋಡೆಯ ಮೇಲೆ ರಾಮ ಎಂದು ಬರೆದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.
ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸುಖತಾವಾ ಬ್ಲಾಕ್‍ನ ಚರ್ಚ್‍ನಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಚರ್ಚ್‍ನಲ್ಲಿದ್ದ ಧಾರ್ಮಿಕ ಗ್ರಂಥಗಳು, ಪಿಠೋಪಕರಣಗಳೆಲ್ಲವೂ ಬೆಂಕಿಗೆ ಆಹುತಿಯಾಗಿವೆ. ಜೊತೆಗೆ ಗೊಡೆಯ ಮೇಲೆ ಕಿಡಿಗೇಡಿಗಳು ರಾಮ (Ram) ಎಂದು ಬರೆದು ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಕಿಡಿಗೇಡಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5 ವರ್ಷಗಳ ಹಿಂದೆ ನಿರ್ಮಿಸಲಾದ ಚರ್ಚ್‍ನ ಕಿಟಕಿಯ ಬಾಗಿಲನ್ನು ತೆಗೆದು, ಒಳಗೆ ಹೋಗಿ ರಾಮ್ ಎಂದು ಬರೆದು, ಬೆಂಕಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಖ್ಯ ಶಿಕ್ಷಕಿಯನ್ನೇ ಕೂಡಿಹಾಕಿದ ವಿದ್ಯಾರ್ಥಿನಿಯರು
ಮಹಾಭಾರತದ ಭಗವದ್ಗಿತೆಯ ನಾಲ್ಕನೇ ಅಧ್ಯಾಯದಲ್ಲಿ ಬರುವ ’ನಹಿ ಜ್ಞಾನೇನ ಸದೃಶಂ’ ಶ್ಲೋಕವನ್ನು ಕೃಷ್ಣನು ಅರ್ಜುನನಿಗೆ ಯುದ್ದ ಪ್ರಾರಂಭವಾಗುವ ಮುನ್ನ ಹೇಳುತ್ತಾರೆ. ಈಗ ಇದೇ ಹೆಸರಿನಲ್ಲಿ ಮಕ್ಕಳ ಚಿತ್ರವೊಂದು ಸದ್ದಿಲ್ಲದೆ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಪ್ರಚಾರದ ಹಂತವಾಗಿ ಪೋಸ್ಟರ್ ಬಿಡುಗಡೆ ಸಮಾರಂಭವನ್ನು ಏರ್ಪಾಟು ಮಾಡಿಕೊಂಡಿದ್ದರು. ಶಿಕ್ಷಣ ಜತೆಗೆ ಮನರಂಜನೆ ಅಂತ ಇಂಗ್ಲಿಷ್ ಅಡಿಬರಹವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಮತ್ತು ಪದಾಧಿಕಾರಿಗಳಾದ ಸುಂದರರಾಜ್, ಕುಶಾಲ್, ಟಿ.ಪಿ.ಸಿದ್ದರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಅಮೆರಿಕಾ ನಿವಾಸಿ ಟೆಕ್ಕಿ ಕನ್ನಡಿಗ ರಾಮ್ ಬಿಡುವು ಮಾಡಿಕೊಂಡು ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ನಿರ್ಮಾಣವೆಂದು ಗೆಳಯರೇ ಸೇರಿಕೊಂಡು ಬಂಡವಾಳ ಹೂಡಿದ್ದಾರೆ. ಅದಕ್ಕಾಗಿ ಫ್ರೆಂಡ್ಸ್ ಫಂಡಡ್ ಫಿಲಿಂಸ್ ಎಂದು ಹೇಳಿಕೊಂಡಿದ್ದಾರೆ.
ಸಿನಿಮಾದ ಕುರಿತು ಹೇಳುವುದಾದರೆ ಆಶ್ರಮ ಸೇರಲು ಅಮೇರಿಕಾದಿಂದ ಬಂದ ರೋಬೊಟಿಕ್ ಇಂಜಿನಿಯರ್ ರಾಮ್, ಕಾರಣಾಂತರಗಳಿಂದ ಬಳ್ಳಾರಿಯ ಬೆಸ್ಟ್ ಶಾಲೆಯಲ್ಲಿ ತಾತ್ಕಾಲಿಕ ಗಣಿತದ ಶಿಕ್ಷಕನಾಗಿ ಸೇರುತ್ತಾನೆ. ಶಾಲೆಯಲ್ಲಿ ತನ್ನದೆ ಆದ ವಿಭಿನ್ನ ರೀತಿಯ ಶಿಕ್ಷಣ ಕೊಡುವ ಶೈಲಿಯಿಂದ ಮಕ್ಕಳು, ಅವರ ಪೋಷಕರು ಹಾಗೂ ಇತರೆ ಶಿಕ್ಷಕರೊಂದಿಗೆ ಹಲವು ಘರ್ಷಣೆಗಳುಂಟಾಗಿ ಅಪವಾದಗಳನ್ನು ಎದುರಿಸುತ್ತಾನೆ. ಈ ಅಪಾರ್ಥಗಳನ್ನು ದೂರ ಮಾಡಲು ಮಕ್ಕಳಿಗೆ ನಿಧಿ ಸಂಗ್ರಹಿಸುವ ಆಟವನ್ನು ಆಡಿಸಿ ಅದರ ಮೂಲಕ ಜ್ಘಾನದ ಪ್ರಾಮುಖ್ಯತೆ ಹಾಗೂ ಅದರ ಉಪಯೋಗದ ಮಹತ್ವವನ್ನು ಎಲ್ಲರಿಗೂ ತಿಳಿಸುವ ತನ್ನ ಉದ್ದೇಶವನ್ನು ವ್ಯಕ್ತಪಡಿಸುತ್ತಾನೆ. ಇದನ್ನೂ ಓದಿ:`ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ
ತಾರಗಣದಲ್ಲಿ ಚಿಣ್ಣರುಗಳಾದ ವೇದಿಕಾ, ಅಭಪಾಲಿ, ಮಹೇಶ್.ಎಸ್.ಪಿ, ಬೆಟ್ಟೇಶ್, ಶರತ್, ಗಗನ, ಶ್ರೀನಿಧಿ, ಲಿಂಗೇಶ್ ಇವರೊಂದಿಗೆ ಅರುಣಾಬಾಲರಾಜ್, ಎಸ್.ಪಿ.ಮಹೇಶ್ ರಾಘವೇಂದ್ರನಾಯಕ್, ವಾಸುದೇವಮೂರ್ತಿ ಮುಂತಾದವರು ನಟಿಸಿದ್ದಾರೆ. ಪ್ರಮೋದ್‌ಮರವಂತೆ ಸಾಹಿತ್ಯದ ಎರಡು ಗೀತೆಗಳಿಗೆ ಅರ್ಜುನ್‌ರಾಮು ಸಂಗೀತವಿದೆ. ಸಂಕಲನ ಶಿವಕುಮಾರ್, ಸಾಹಸ ಸುದರ್ಶನ್-ರಾಮ್, ನೃತ್ಯ ರಾಘವೇಂದ್ರ-ಶ್ವೇತಾ-ಜಗನ್-ರುತಿಕ್‌ರೋಷನ್ ಅವರದಾಗಿದೆ. ಸಂಪೂರ್ಣ ಚಿತ್ರೀಕರಣ ಬಳ್ಳಾರಿ ಸುತ್ತಮುತ್ತ ನಡೆಸಲಾಗಿದೆ. ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಮಕ್ಕಳ ಚಿತ್ರವೆಂದು ಪರಿಗಣಿಸಿ ’ಯು’ ಪ್ರಮಾಣಪತ್ರ ನೀಡಿದೆ. ಅಂದಹಾಗೆ ಸಿನಿಮಾವು ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ.
ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದರು. ಜೊತೆಗೆ ಹೈದರಾಬಾದ್ ಪೊಲೀಸರಿಗೂ ಟ್ಯಾಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೊಪ್ಟಾ) 2003 ರ ಅಡಿಯಲ್ಲಿ ದಂಡ ವಿಧಿಸಿದ್ದಾರೆ. ರಾಮ್ ಕೂಡ ದಂಡದ ಶುಲ್ಕವನ್ನು ಪಾವತಿಸಿದ್ದಾರೆ.
ಇಲ್ಲಿಯವರೆಗೆ ಚಾರ್ಮಿನಾರ್ ನಲ್ಲಿ ಧೂಮಪಾನ ಮಾಡಿದ್ದಕ್ಕಾಗಿ 20 ಜನರನ್ನು ಹಿಡಿದು ದಂಡ ವಿಧಿಸಲಾಗಿದೆ. ಇದೇ ರೀತಿ ಕಾರ್ಯಚರಣೆಯನ್ನು ಮುಂದುವರಿಸುತ್ತೇವೆ. ಇದರಿಂದ ಜನರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಎಂದು ಸಬ್ ಇನ್ಸ್‍ಪೆಕ್ಟರ್ ಬಿ.ಪಾಂಡರಿ ಹೇಳಿದ್ದಾರೆ.
Hyderabad: Tollywood actor Ram Pothineni was yesterday fined of Rs 200 by the police under the Cigarettes and Other Tobacco Products Act (COPTA), 2003 for allegedly smoking in a public place near the Charminar during a break in shooting of his film 'iSmart Shankar'. #Telanganapic.twitter.com/WWutBGAIF3
‘ಇಸ್ಮಾರ್ಟ್ ಶಂಕರ್’ ಸಿನಿಮಾವನ್ನು ಪ್ರಸ್ತುತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಮಾಡುತ್ತಿದ್ದು, ನಭಾ ನಟೇಶ್ ಮತ್ತು ನಿಧಿ ಅಗರ್ವಾಲ್ ಸಿನಿಮಾದಲ್ಲಿ ಪ್ರಮುಖವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಇತಿಹಾಸ ನಿರ್ಮಿಸಿದ್ದ ‘ಕೆಜಿಎಫ್’ ಸಿನಿಮಾದಲ್ಲಿ ಖಳನಟನಾಗಿ ಅಬ್ಬರಿಸಿದ್ದ ಗರುಡ ಅವರು ದುಬಾರಿ ಕಾರನ್ನು ಖರೀದಿಸಿದ್ದಾರೆ.
ರಾಮಚಂದ್ರ ರಾಜು ಅವರು ಕೆಜಿಎಫ್ ಸಿನಿಮಾದಲ್ಲಿ ಗರುಡ ಪಾತ್ರದಲ್ಲಿ ಮಿಂಚಿದ್ದರು. ‘ಕೆಜಿಎಫ್’ ಸಿನಿಮಾದ ಮೊದಲ ಭಾಗದಲ್ಲಿ ರಾಕಿ ಭಾಯ್‍ಯಿಂದ ಕೊಲೆಯಾಗುವ ಗರುಡ ಪಾತ್ರಧಾರಿ ಪಾರ್ಟ್-2 ಗೆ ರೋಚಕ ತಿರುವು ನೀಡುವ ಮೂಲಕ ಅಭಿಮಾನಿಗಳಲ್ಲಿ ಉಳಿದುಕೊಂಡಿದ್ದಾರೆ.
‘ಕೆಜಿಎಫ್’ ನ ಸಕ್ಸಸ್ ಖುಷಿಯಲ್ಲಿರುವ ರಾಮ್ ಅವರು ಇವರು ಬಿಳಿ ಬಣ್ಣದ ಫಾರ್ಚೂನರ್ ಕಾರು ಖರೀದಿಸಿದ್ದಾರೆ. ವಿಶೇಷವೆಂದರೆ ಕಾರಿನ ಮೇಲೆ ಅವರಿಗೆ ಇಷ್ಟವಾದ ಮತ್ತು ತಮಗೆ ಖ್ಯಾತಿ ತಂದುಕೊಟ್ಟ ‘ಗರುಡ’ ಪ್ರತಿಮೆ ಹಾಕಿಸಿಕೊಂಡಿದ್ದಾರೆ. ಈ ಖುಷಿಯನ್ನು ತಮ್ಮ ಗೆಳೆಯ ನಟ ಯಶ್ ಜೊತೆ ಹಂಚಿಕೊಂಡಿದ್ದಾರೆ.
ರಾಮ್ ಅವರು ಕಾರ್ ಖರೀದಿಸಿದ ತಕ್ಷಣ ನೇರವಾಗಿ ಯಶ್ ಮನೆಗೆ ಹೋಗಿ ಹೊಸ ಕಾರನ್ನು ಅವರಿಗೆ ತೋರಿಸಿದ್ದಾರೆ. ಜೊತೆಗೆ ಅವರ ಮತ್ತು ಕಾರಿನ ಜೊತೆ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಾರು ಖರೀದಿಸಿದ್ದ ತಮ್ಮ ಗೆಳೆಯ ರಾಮ್ ಅವರಿಗೆ ಯಶ್ ಶುಭ ಕೋರಿದ್ದಾರೆ.
ಯಶ್ ಮತ್ತು ರಾಮ್ ಅವರು ಇಬ್ಬರು ಸ್ನೇಹಿತರಾಗಿದ್ದಾರೆ. ರಾಮ್ ಯಾವಾಗಲೂ ಯಶ್ ಜೊತೆಯೇ ಇರುತ್ತಿದ್ದರು. ‘ಕೆಜಿಎಫ್’ ಸಿನಿಮಾದಲ್ಲಿ ಗರುಡ ಪಾತ್ರಕ್ಕೆ ಅಭಿನಯಿಸಲು ಅವಕಾಶ ಕೊಟ್ಟಿದ್ದಕ್ಕೆ ಯಶ್ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ರಾಮ್ ಅವರು ರಶ್ಮಿಕಾ ಮಂದಣ್ಣ ಮತ್ತು ಕಾರ್ತಿಕ್ ಅಭಿನಯಿಸುತ್ತಿರುವ ತಮಿಳು ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ.
ಬೆಂಗಳೂರು: ಬಾಹುಬಲಿ ಚಿತ್ರ ನೋಡಿ ಅದರ ಅದ್ಧೂರಿತನಕ್ಕೆ ಮಾರು ಹೋಗದವರಿಲ್ಲ. ಆದರೀಗ ಅಂಥಾದ್ದೇ ಗುಣಲಕ್ಷಣ ಹೊಂದಿರೋ ಅಪ್ಪಟ ಕನ್ನಡ ಚಿತ್ರವೊಂದನ್ನು ನೋಡೋ ಭಾಗ್ಯ ಕನ್ನಡದ ಪ್ರೇಕ್ಷಕರಿಗೆ ಒದಗಿ ಬಂದಿದೆ. ಅದಕ್ಕೆ ಕಾರಣವಾಗಿರೋದು ಎಸ್ ಟೀಮ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ತಯಾರಾಗಿರುವ ‘ಸುವರ್ಣ ಸುಂದರಿ’ ಚಿತ್ರ. ಇದೀಗ ಈ ಚಿತ್ರದ ಟ್ರೈಲರ್ ಬಿಡುಗಡೆಗೆ ಮಹೂರ್ತ ಫಿಕ್ಸಾಗಿದೆ.
ಇದೇ 19ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಒಂದು ಟ್ರೈಲರ್ ಮತ್ತು ಪೋಸ್ಟರ್ ಗಳೇ ಜನಮನ ಸೆಳೆದಿದ್ದವು. ಇದೀಗ ಪ್ರೇಕ್ಷಕರಿಗೆ ಎರಡನೇ ಟ್ರೈಲರ್ ನೋಡೋ ಅವಕಾಶ ಸಿಗಲಿದೆ. ಸೂರ್ಯ ನಿರ್ದೇಶನದ ಈ ಚಿತ್ರ ನಾಲ್ಕು ಕಾಲಮಾನಗಳ ವಿಶಿಷ್ಟವಾದ ಕಥಾ ಹಂದರ ಹೊಂದಿದೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಗೆಗೀಗ ತೆಲುಗು ಮತ್ತು ಕನ್ನಡದಲ್ಲಿ ಬಾಹುಬಲಿಯಂಥಾದ್ದೇ ಭಾರೀ ನಿರೀಕ್ಷೆ ಮೂಡಿಕೊಳ್ಳಲು ಸಾಕಷ್ಟು ಕಾರಣಗಳಿವೆ!
ಬಾಹುಬಲಿ ಚಿತ್ರ ಜನಮನ ಸೂರೆಗೊಂಡಿದ್ದಕ್ಕೆ ಅದರಲ್ಲಿನ ಗ್ರಾಫಿಕ್ಸ್ ಕೈಚಳಕವೂ ಮೂಲ ಕಾರಣ. ಆದರೆ ಕನ್ನಡದಂಥಾ ಸೀಮಿತ ಮಾರುಕಟ್ಟೆಯಿರೋ ಚಿತ್ರರಂಗದಲ್ಲಿ ಅಂಥಾ ಅದ್ಧೂರಿ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬಂಥಾ ವಾತಾವರಣವಿತ್ತು. ಆದರೆ ಸುವರ್ಣ ಸುಂದರಿ ಚಿತ್ರ ಅದನ್ನು ಸುಳ್ಳು ಮಾಡಿದೆ ಎಂಬುದು ಚಿತ್ರತಂಡದ ಖಚಿತ ಅಭಿಪ್ರಾಯ. ಯಾಕೆಂದರೆ ಈ ಚಿತ್ರದಲ್ಲಿಯೂ ಶೇಕಡಾ ನಲವತ್ತರಷ್ಟು ಭಾಗ ಅದ್ಭುತವಾದ ಗ್ರಾಫಿಕ್ಸ್ ನಿಂದ ತುಂಬಿದೆ. ಎಲ್ಲಿಯೂ ಅಸಹಜ ಅನ್ನಿಸದಂತೆ ಇದನ್ನು ಕ್ರಿಯೇಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗಿದೆ.
ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ 45 ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗದೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾ ಭಾರತದಾದ್ಯಂತ ಚಂದನವನದ ಬಗ್ಗೆ ಮಾತನಾಡುವಂತೆ ಮಾಡಿದೆ. ಅಷ್ಟರ ಮಟ್ಟಿಗೆ ಕನ್ನಡ ಸಿನಿಮಾವನ್ನು ಒಂದು ಹಂತಕ್ಕೆ ಕೆಜಿಎಫ್ ಸಿನಿಮಾ ತೆಗೆದುಕೊಂಡು ಹೋಗಿದೆ. ಕೆಜಿಎಫ್ ಸಿನಿಮಾದಲ್ಲಿ ನಟರಾಗಿ ಮಿಂಚಿದ್ದ ಯಶ್ ಬಗ್ಗೆ ಅದೇ ಸಿನಿಮಾ ಖಳನಾಯಕರಾದ ವಶಿಷ್ಠ ಸಿಂಹ, ವಿನಯ್, ರಾಮ್, ಲಕ್ಕಿ ಮತ್ತು ಅವಿನಾಶ್ ಮಾತನಾಡಿದ್ದಾರೆ.
ಯಶ್ ಬಗ್ಗೆ ವಶಿಷ್ಠ ಅವರ ಮಾತು:
ರಾಜಾಹುಲಿ ಸಿನಿಮಾ ರಿಲೀಸ್ ಆದ ಮೇಲೆ ನನಗೆ ಸಿನಿಮಾ ಇಂಡಸ್ಟ್ರೀ ಬಗ್ಗೆ ಏನು ಗೊತ್ತಿರಲಿಲ್ಲ. ಅಂದು ರಾಜಾಹುಲಿ ಸಿನಿಮಾ ತುಂಬಾ ಹಿಟ್, ಅದ್ಭುತವಾಗಿತ್ತು. ಬಳಿಕ ನನಗೆ ಚಿಕ್ಕಣ್ಣ ಕರೆ ಮಾಡಿ ಯಶ್ ಮಾತನಾಡುತ್ತಾರೆ ಎಂದು ಅವರ ಕೈಯಲ್ಲಿ ಫೋನ್ ಕೊಟ್ಟರು. ನಾನು ಯಶ್ ಹೇಳಿ ಎಂದೆ, ಆಗ ಅವರು ವಶಿಷ್ಠ ತಾಳ್ಮೆಯಿಂದ ಇರು. ನಿನಗೆ ಸಾಕಷ್ಟು ಫೋನ್‍ಗಳು ಮತ್ತು ಸಿನಿಮಾ ಆಫರ್ ಗಳು ಬರುತ್ತವೆ. ಆದರೆ ನೀನು ದುಡುಕಬೇಡ. ಟ್ಯಾಲೆಂಟ್ ಇರುವವರು ಮತ್ತು ಈ ರೀತಿ ಕಾಣಿಸಿಕೊಂಡು ಮುಖ ಪರಿಯಚವಾದರು ಸಿಗಲಿ ಎಂದು ಸಾಕಷ್ಟು ಜನರು ಕಾಯುತ್ತಿರುತ್ತಾರೆ. ಆದರೆ ನೀನು ಜೀವನದಲ್ಲಿ ಏನು ಮಾಡಬೇಕು ಅಂದುಕೊಂಡಿದ್ದೀಯಾ ಅದನ್ನು ನಿರ್ಧಿಷ್ಟವಾಗಿ ಪ್ಲಾನ್ ಮಾಡಿಕೊಂಡು ಕಾದು ನೋಡಿ ಅದರ ಫಲ ತಾನಾಗಿ ನಿನಗೆ ಸಿಗುತ್ತದೆ ಎಂದು ಹೇಳಿದ್ದರು.
ಯಶ್ ಅವರು ಸಿಕ್ಕಿದ್ರೆ ಕೆರಿಯರ್, ಮುಂದೆ ಏನು ಮಾಡಬೇಕು, ಏನು ನಿರ್ಧಾರ ಮಾಡಬೇಕು, ಮುಂದಿನ ಪ್ಲಾನ್ ಏನು ಮಾಡಿಕೊಂಡಿದ್ದೀಯಾ ಇದರ ಬಗ್ಗೆಯೇ ಮಾತನಾಡುತ್ತಿದ್ದರು. ಕನ್ನಡದಲ್ಲಿ ಖಳನಟರೇ ಇಲ್ಲ ಎಂದಿದ್ದರು. ಅಂದು ರಾಜಾಹುಲಿಯಲ್ಲಿ ಮಾಡಿದ್ದ ಸಣ್ಣ ಪಾತ್ರಗಳು ತುಂಬಾ ಚೆನ್ನಾಗಿತ್ತು. ಆಗಲೂ ಯಶ್ ಹೊಸ ಹುಡುಗರು ಬರಲಿ ಎಂದು ಹೇಳುತ್ತಿದ್ದರು. ಅದರಂತೆಯೇ ಕೆಜಿಎಫ್ ನಲ್ಲೂ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದ್ರು.
ಯಶ್ ಅವರಿಗೆ, ನಾವು ಎನು ಮಾಡುತ್ತಿದ್ದೇವೆ ಎಂಬ ನಿರ್ಧಿಷ್ಟವಾದ ಕ್ಲ್ಯಾರಿಟಿ ಇರುತ್ತದೆ. ಅವರು ಯಾವಾಗಲೂ ನಮ್ಮ ಇಂಡಸ್ಟ್ರೀಗೆ ಕಲಾವಿದರ ಬರಬೇಕು ಎಂದು ಹೇಳುತ್ತಿರುತ್ತಾರೆ. ನನಗೆ ಇಷ್ಟವಾದ ವಿಷಯವೆಂದರೆ ಯಶ್ ಅವರನ್ನು ಅವತ್ತು ನೋಡಿದ ಕಲ್ಪನೆ ಇನ್ನೂ ಬದಲಾಗಿಲ್ಲ. ಈಗಲೂ ಅದೇ ರೀತಿ ಇದ್ದಾರೆ. ಈಗ ಇನ್ನೂ ಒಳ್ಳೆಯ ಕೆಲಸ ಮಾಡೋಣ ಎಂದು ಅವರ ಆಸೆ, ಬಯಕೆ ಹೆಚ್ಚಾಗಿದೆ ಅಂದುಕೊಳ್ಳಬಹುದು ಅಂತ ವಶಿಷ್ಠ ಅವರು ಹೇಳಿದ್ದಾರೆ.
ಇವೆಲ್ಲ ನಮ್ಮ ಜೀವನದ ನೆನಪಿನಲ್ಲಿ ಚಿರಕಾಲ ಉಳಿಯುತ್ತವೆ. ಯಾಕೆಂದರೆ ಯಾವತ್ತೂ ಯಾರೆಯಾಗಲಿ ನಮ್ಮನ್ನು ಗುರುತಿಸಬೇಕು ಅನ್ನುತ್ತೀವಿ, ನಮ್ಮನ್ನು ಗುರುತಿಸಿದರೆ ಕೆಲಸ ಸಿಗುತ್ತದೆ ಎಂದು ಯೋಚನೆ ಮಾಡುತ್ತೇವೆ. ಆದರೆ ಗುರುತಿಸಿಕೊಳ್ಳೋದು, ಗುರುತಿಸುವದನ್ನು ಮೀರಿ ಈ ಸಿನಿಮಾ ನಮ್ಮೆಲ್ಲರಿಗೂ ಇಂದು ಒಂದು ಸ್ಥಾನ-ಮಾನವನ್ನು ದೊರಕಿಸಿಕೊಟ್ಟಿದೆ. ಜೊತೆಗೆ ನಿಮ್ಮಂತ ಅದ್ಭುತ ಕಲಾವಿದರನ್ನು ಕೊಟ್ಟಿದೆ ಎಂದು ಉಳಿದ ಕಲಾವಿದರಿಗೆ ಹೇಳಿದ್ದಾರೆ.
ರಾಮ್
ಕಲಾವಿದರ ಬಳಿ ಯಾವ ಟ್ಯಾಲೆಂಟ್ ಇರುತ್ತವೆ ಎಂದು ಯಶ್ ಅವರು ಯೋಚನೆ ಮಾಡುತ್ತಾರೆ. ಒಂದು ವೇಳೆ ಅವರ ಟ್ಯಾಲೆಂಟ್ ನೋಡಿದರೆ ಮಾತ್ರ ಬಿಡುವುದಿಲ್ಲ. ಅವರಿಗೆ ತುಂಬಾ ಬೆಂಬಲ ಕೊಡುತ್ತಾರೆ. ಅಂದು ನಮ್ಮ ಬಾಸ್‍ನ್ನು ಹೇಗೆ ನೋಡಿದ್ದೇನೆ ಇಂದು ಹಾಗೆ ನೋಡುತ್ತಿದ್ದೇನೆ. ಇಂದು ಕನ್ನಡವನ್ನು ಈ ಹಂತಕ್ಕೆ ತೆಗೆದುಕೊಂಡು ಹೋಗಬಹುದೆಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಇದು ಖುಷಿಯ ವಿಚಾರವಾಗಿದೆ. ಹಿಂದಿಯಲ್ಲಿ ಯಾರೋ ಕನ್ನಡ್ ಕನ್ನಡ್ ಅನ್ನುತ್ತಿದ್ದರು. ಅವರಿಗೆ ಕನ್ನಡ ಎಂದು ಯಶ್ ಹೇಳಿಕೊಟ್ಟಿದ್ದರು ಎಂದು ಹೇಳಿದ್ದಾರೆ.
ಲಕ್ಕಿ
”This Is The Just Beginning, ನೋಡುತ್ತೀರಿ ಕನ್ನಡ ಸಿನಿಮಾ ಯಾವ ಹಂತಕ್ಕೆ ಹೋಗುತ್ತದೆ’ ಎಂದು ಯಶ್ ಬಾಸ್ ಸೈಮಾದಲ್ಲಿ ಅವಾರ್ಡ್ ತೆಗೆದುಕೊಳ್ಳುವಾಗ ಈ ಡೈಲಾಗ್ ಹೇಳಿದ್ದರು. ಅಂದೆ ಯಶ್ ಅವರಿಗೆ ಕನ್ನಡ ಸಿನಿಮಾವನ್ನು ಇಡೀ ಭಾರತ, ಇಂಟರ್ ನ್ಯಾಷನಲ್ ವರೆಗೂ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದರು. ಅದರಂತೆಯೇ ಅವರ ಹಾರ್ಡ್ ವರ್ಕ್ ಮೂಲಕ ಇಂದು ಕೆಜಿಎಫ್ ಸಿನಿಮಾ ಮೂಲಕ ತೆಗೆದುಕೊಂಡು ಹೋಗಿದ್ದಾರೆ, ಹ್ಯಾಟ್ಸ್ ಅಪ್ ಅವರಿಗೆ ಎಂದ್ರು.
ವಿನಯ್
ಯಶ್ ಅವರು ಫಸ್ಟ್ ದಿನದಿಂದಲೂ ಇಂದಿನ ದಿನವರೆಗೂ ಚೂರು ಬದಲಾಗಿಲ್ಲ ಒಂದೇ ರೀತಿ ಇದ್ದಾರೆ. ಈ ಹಿಂದೆ ನಾನು ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿಯಲ್ಲಿ ಫರ್ಹಾನ್ ಎಂಬ ಚಿಕ್ಕ ಪಾತ್ರವನ್ನು ಮಾಡಿದ್ದೆ. ಲಕ್ಕಿ ಸಿನಿಮಾದಿಂದ ಮತ್ತೆ ಯಶ್ ಜೊತೆಗಿನ ನನ್ನ ಒಡನಾಟ ಹೆಚ್ಚಾಯ್ತು. ಒಂದು ದಿನ ನಿರ್ದೇಶಕ ಸೂರಿ ಸರ್ ಕೆಜಿಎಫ್ ಸಿನಿಮಾ ಆಡಿಷನ್ ನಡೆಯುತ್ತಿರೋದರ ಮಾಹಿತಿ ನೀಡಿದರು. ಅಲ್ಲಿಗೆ ಹೋಗಿ ಆಡಿಷನ್ ನೀಡಿ ಕೆಜಿಎಫ್ ಸಿನಿಮಾಗೆ ಸೆಲೆಕ್ಟ್ ಆದೆ ಎಂದು ವಿನಯ್ ಹೇಳ್ತಾರೆ.
ಕೆಜಿಎಫ್ ಸಿನಿಮಾ ನೋಡಿದವರಿಗೆ ಪ್ರತಿಯೊಂದು ದೃಶ್ಯದಲ್ಲಿ ಆರು ಅಡಿ ಎತ್ತರದ ಗಡ್ಡಧಾರಿಗಳು ಕಾಣಿಸುತ್ತಾರೆ. ಸಿನಿಮಾಗಾಗಿ ಗಡ್ಡ ಬಿಟ್ಟಿದ್ದ ಕಲಾವಿದರು ಕುಟುಂಬಸ್ಥರಿಂದ ಬೈಯಿಸಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ಎಲ್ಲ ನಟರು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಆಡಿಷನ್ ಬಂದಾಗ ನಿರ್ದೇಶಕ ಪ್ರಶಾಂತ್ ನೀಲ್ ಯಾರು ಶೇವಿಂಗ್ ಮಾಡಕೂಡದು ಎಂಬ ಕಂಡೀಷನ್ ಹಾಕಿದ್ದಾರಂತೆ. ಸಿನಿಮಾ ಮುಗಿಯುವವರೆಗೂ ಕೇವಲ ಟ್ರಿಮ್ ಮಾಡಿಕೊಳ್ಳಬೇಕು ಅಂತಾ ಸೂಚಿಸಿದ್ದರಂತೆ.
ಗರುಡ/ರಾಮ್: ಆಡಿಷನ್ ನೀಡಿ ಆಯ್ಕೆಯಾದಾಗ ಪ್ರಶಾಂತ್ ನೀಲ್ ಗಡ್ಡ ಬಿಡಬೇಕೆಂದು ಹೇಳಿದರು. ನಾನು ನಿರ್ದೇಶಕರು ಹೇಳಿದಂತೆ ಗಡ್ಡ ಬಿಟ್ಟೆ. ನನ್ನ ಮಗನಿಗೆ ಎರಡೂವರೆ ವರ್ಷ ಆತ ನನ್ನನ್ನು ಗಡ್ಡದಲ್ಲಿಯೇ ನೋಡಿದ್ದಾನೆ. ನನ್ನ ಗಡ್ಡ ನೋಡಿದ ನೆರೆಹೊರೆಯಯವರು ಏನಾಯ್ತು ಇವನಿಗೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದರು. ಮನೆಗೆ ಯಾರಾದರೂ ಗೆಸ್ಟ್ ಬಂದರೆ ಹೊರ ಹೋಗ್ತಿದ್ದೆ. ಎಲ್ಲರೂ ಹೋದ ಮೇಲೆ ಮನೆಯಿಂದ ಫೋನ್ ಮಾಡಿ ಹೇಳೋರು. ಎಲ್ಲರು ಹೋದ್ರು ಬನ್ನಿ ಅಂದಾಗ ಹೋಗ್ತಿದ್ದೆ ಅಂತಾ ರಾಮ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಿನಿಮಾಗೂ ಮುನ್ನ ತುಂಬಾ ನಗ್ತಾ ಇದ್ದೆ. ಶೂಟಿಂಗ್ ಆರಂಭಕ್ಕೂ ಮುನ್ನ ಪ್ರಶಾಂತ್ ಸರ್ ಆರು ತಿಂಗಳು ನಗಬೇಡ ಅಂತಾ ಹೇಳಿದರು. ಅವರ ಮಾತಿನಂತೆ ನನ್ನ ಮಾತುಗಳನ್ನು ಕಡಿಮೆ ಮಾಡಿಕೊಂಡೆ. ಪ್ರತಿಯೊಂದು ಹಂತದಲ್ಲಿಯೂ ಪ್ರಶಾಂತ್ ಸರ್ ನಮ್ಮನ್ನು ತಿದ್ದಿ ತೀಡಿದ್ದಾರೆ. ಆರು ತಿಂಗಳ ನಂತರ ಸಿನಿಮಾಗೆ ಮಾಸ್ ಲುಕ್ ಬಂತು ಅಂತಾ ಅಂದ್ರು.
ವಿನಯ್:
ನಾನು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಕಾರ್ಪೋರೇಟರ್ ಲುಕ್ ನಲ್ಲಿ ಕ್ಲೀನ್ ಶೇವಿಂಗ್ ಇರುತ್ತಿತ್ತು. ವರ್ಕ್ ಶಾಪ್‍ಗೆ ಬಂದಾಗ ಡೈಲಾಗ್ ಕೊಟ್ಟರು ಹೇಳಿದೆ. ಮೊದಲ ದಿನವೇ ಪ್ರಶಾಂತ್ ಸರ್ 20 ನಿಮಿಷ ಕ್ಲಾಸ್ ತೆಗೆದುಕೊಂಡರು. ನಾನು ಕೆಲಸ ಮಾಡತಕ್ಕಂತಹ ಸ್ಥಳದಲ್ಲಿ ನಾನೇ ಯಾಕೆ ಶೇವ್ ಮಾಡಿಲ್ಲ ಅಂತ ಪ್ರಶ್ನೆ ಮಾಡಬೇಕಿತ್ತು. ಆದ್ರೆ ನನ್ನ ಗಡ್ಡ ನೋಡಿಕೊಂಡು ಸುಮ್ಮನಾಗುತ್ತಿದ್ದೆ. ಸಿನಿಮಾಗಾಗಿ ಗಡ್ಡ ಬಿಡ್ತಿದ್ದೇನೆ ಅಂತಾ ಚೇರ್‍ಮೆನ್ ಅವರಿಂದ ಪರ್ಮಿಷನ್ ತೆಗೆದುಕೊಂಡಿದ್ದರಿಂದ ಯಾರು ನನ್ನನ್ನು ಪ್ರಶ್ನೆ ಮಾಡುತ್ತಿರಲಿಲ್ಲ.
ಲಕ್ಕಿ:
ನಾನು ಐಟಿ ಸೆಕ್ಟರ್ ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುವಂತಹ ವ್ಯಕ್ತಿ. ಯಾವತ್ತೂ ಗಡ್ಡ ಮೀಸೆ ಬಿಟ್ಟವನು ನಾನಲ್ಲ. ಪ್ರಶಾಂತ್ ಸರ್ ಫೋನ್ ಮಾಡಿ ನನ್ನ ಆಸೆ ಹೇಳಿದಾಗ, ಸಂಜಯ ನಗರ ಆಫೀಸಿಗೆ ಹೋಗಿ ಅಲ್ಲಿ ನಿಮಗೆ ನನ್ನ ಸಹಾಯಕರು ತರಬೇತಿ ಕೊಡ್ತಾರೆ. ಆದ್ರೆ ಎರಡು ಕಂಡೀಷನ್ ಹಾಕಿದರು. ಒಂದು ಗಡ್ಡ ಮತ್ತು ಮೀಸೆ ಬಿಡಬೇಕು, ಇನ್ನೊಂದು ತರಬೇತಿಯಲ್ಲಿ ನಮ್ಮ ಚಿತ್ರಕ್ಕೆ ನೀವು ಸೂಟ್ ಆಗಲಿಲ್ಲ ಅಂದ್ರೆ ಚಾನ್ಸ್ ನೀಡೊದಕ್ಕೆ ಸಾಧ್ಯವಿಲ್ಲ. ಸಿನಿಮಾಗೆ ಚಾನ್ಸ್ ಕೊಟ್ಟಿಲ್ಲ ದೋಸ್ತಿ ಬಿಡುವಂತಿಲ್ಲ ಅಂತಾ ಹೇಳಿದ್ದರು. 2016ರಲ್ಲಿಯೇ ನಾನು ಗಡ್ಡ ಮತ್ತು ಮೀಸೆಗೆ ಸಂಪೂರ್ಣ ಕತ್ತರಿ ಹಾಕದೇ ಕೇವಲ ಟ್ರಿಮ್ ಮಾಡಿಕೊಂಡು ಬಂದಿದ್ದೇನೆ.
ಅವಿನಾಶ್:
ನನಗೆ ಗಡ್ಡ ಬಿಡೋದಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಕಾರಣ ನಾನು ಸ್ವಂತ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುತ್ತಿದ್ದೇನೆ. ಬಾಸ್ ನಾನೇ ಆಗಿದ್ದರಿಂದ ಯಾರು ಪ್ರಶ್ನೆ ಮಾಡಲಿಲ್ಲ. 2015 ಅಕ್ಟೋಬರ್ ನಿಂದಲೇ ತರಬೇತಿ ತೆಗೆದುಕೊಳ್ಳಲು ಆರಂಭಿಸಿದಾಗ, ನಾವೇನು ಮಾಡುತ್ತಿದ್ದೇವೆ, ಯಾವುದಕ್ಕೆ ಈ ಎಲ್ಲ ತರಬೇತಿ ಅಂತಾ ಗೊತ್ತಾಗುತ್ತಿರಲಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ನಮ್ಮ ನಿಜ ಜೀವನದಲ್ಲಿ ಆ ಪಾತ್ರವನ್ನು ತರಿಸಿದ್ದರು. ಇದನ್ನೂ ಓದಿ:ರಣ ರಣ ಲುಕ್‍ನಲ್ಲಿ ಮಿಂಚಿರುವ ಕೆಜಿಎಫ್ ಕಿಲಾಡಿಗಳ ಸಿನಿಮಾ ಜರ್ನಿ ಆರಂಭದ ಕಥೆ
ಶೂಟಿಂಗ್ ಆರಂಭಕ್ಕೂ ಮುನ್ನವೇ ಕಥೆಗೆ ಬೇಕಾದ ಪಾತ್ರಗಳನ್ನು ಪ್ರಶಾಂತ್ ನೀಲ್ ಸೃಷ್ಟಿಸಿಕೊಂಡಿದ್ದರು ಎಂಬುದು ಕಲಾವಿದರ ಮಾತುಗಳಲ್ಲಿ ಗೊತ್ತಾಗುತ್ತದೆ. ಚಿತ್ರದ ಮತ್ತೋರ್ವ ನಟ ವಶಿಷ್ಟ ಹೇಳುವಂತೆ ನಿರ್ದೇಶಕರು ಫೇಮಸ್ ಆಗಿರುವ ಕಲಾವಿದರನ್ನು ಚಿತ್ರಕ್ಕಾಗಿ ಕರೆತರಲಿಲ್ಲ. ಕಥೆಗೆ ಬೇಕಾದ ಪಾತ್ರಗಳಿಗಾಗಿ ಹುಡುಕಾಟ ನಡೆಸಿ, ತರಬೇತಿ ಕೊಟ್ಟು ಚಿತ್ರಕ್ಕಾಗಿ ಎರಡ್ಮೂರು ವರ್ಷ ಕೆಲಸ ಮಾಡಿದ್ದಾರೆ.