Tag: ರಾಮು

  • ಹೆಸರು ಬದಲಿಸಿಕೊಂಡ ನಟಿ ಮಾಲಾಶ್ರೀ ಪುತ್ರಿ

    ಹೆಸರು ಬದಲಿಸಿಕೊಂಡ ನಟಿ ಮಾಲಾಶ್ರೀ ಪುತ್ರಿ

    ನಸಿನ ರಾಣಿ ಮಾಲಾಶ್ರೀ (Malashree), ನಿರ್ಮಾಪಕ ರಾಮು (Ramu)ಪುತ್ರಿ ರಾಧನಾ ರಾಮ್ ಈಗ ತಮ್ಮ ಹೆಸರನ್ನು ಆರಾಧನಾ (Aradhanaa)  ಎಂದು ಬದಲಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಮಾಲಾಶ್ರೀ ‘ನಾನು, ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಮೂರು ಜನ ಚರ್ಚಿಸಿ ಆರಾಧನಾ ಎಂಬ ಹೆಸರನ್ನು (Name) ಆಯ್ಕೆ ಮಾಡಿದ್ದೇವೆ. ಈ ಹೆಸರು ಬರೀ ‘ಕಾಟೇರ’ ಚಿತ್ರಕ್ಕೆ ಮಾತ್ರವಲ್ಲ. ಇನ್ನು ಮುಂದೆ ನನ್ನ ಮಗಳ ಹೆಸರೆ ಆರಾಧನಾ.  ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು’ ಮಾಲಾಶ್ರೀ ವಿನಂತಿಸಿದ್ದಾರೆ.

    ಈಗಾಗಲೇ ಆರಾಧನಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಬಹುಭಾಷಾ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ಹಾರಿದ್ರಾ ನಟಿ- ಏನಾಯ್ತು ಸಮಂತಾಗೆ?

    ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕ ರಾಮು ಅವರ ಸಾಧನೆ ಕೊಡುಗೆ ಅಪಾರ. ಮಾಲಾಶ್ರೀ ಮತ್ತು ರಾಮು ದಂಪತಿ ಸಾಕಷ್ಟು ವರ್ಷಗಳಿಂದ ಕಲಾಸೇವೆ ಮಾಡುತ್ತಲ್ಲೇ ಬಂದವರು. ಇದೀಗ ಈ ಕುಟುಂಬದಿಂದ ಜ್ಯೂ.ಮಾಲಾಶ್ರೀ ಆರಾಧನಾ ರಾಮ್ ಕೂಡ ಚಿತ್ರರಂಗದಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ.

     

    ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮತ್ತು ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಿಗ್ ಬಜೆಜ್ ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ರಾಧನಾ ಲುಕ್ ಕೂಡ ರಿವೀಲ್ ಆಗಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ತಾಯಿ ಮಾಲಾಶ್ರೀ ಅಂತೆಯೇ ನಾಯಕಿಯಾಗಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿತ್ರರಂಗಕ್ಕೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಎಂಟ್ರಿ

    ಚಿತ್ರರಂಗಕ್ಕೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಎಂಟ್ರಿ

    ಡ್ಡೆಹುಡುಗರ ಕನಸಿನ ರಾಣಿಯಾಗಿ ಮಿಂಚಿರುವ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಬಹುಭಾಷಾ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ.

    ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕ ರಾಮು ಅವರ ಸಾಧನೆ ಕೊಡುಗೆ ಅಪಾರ. ಮಾಲಾಶ್ರೀ ಮತ್ತು ರಾಮು ದಂಪತಿ ಸಾಕಷ್ಟು ವರ್ಷಗಳಿಂದ ಕಲಾಸೇವೆ ಮಾಡುತ್ತಲ್ಲೇ ಬಂದವರು. ಇದೀಗ ಈ ಕುಟುಂಬದಿಂದ ಜ್ಯೂ.ಮಾಲಾಶ್ರೀ ರಾಧನಾ ರಾಮ್ ಕೂಡ ಚಿತ್ರರಂಗದಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ. ಇದನ್ನೂ ಓದಿ:ಪ್ರಾಣಿಗಳಿಗಾಗಿ ಬೆತ್ತಲಾಗುವಂತೆ ರಣವೀರ್ ಸಿಂಗ್ ಗೆ ಮನವಿ ಮಾಡಿದ ಪೇಟಾ

    ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮತ್ತು ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಿಗ್ ಬಜೆಜ್ ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಚಿತ್ರದ ರಾಧನಾ ಲುಕ್ ಕೂಡ ರಿವೀಲ್ ಆಗಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ತಾಯಿ ಮಾಲಾಶ್ರೀ ಅಂತೆಯೇ ನಾಯಕಿಯಾಗಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ದು ವರ್ಷಗಳ ನಂತರ ಕನಸಿನ ರಾಣಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ರಾಮು ನಿಧನದ ನಂತರ ಕುಗ್ಗಿ ಹೋಗಿದ್ದ ಅವರು ಈಗ ಅದೇ ನೋವಿನಲ್ಲೇ ಮತ್ತೆ ನಟನೆಯತ್ತ ಮರಳಿದ್ದಾರೆ. 2017ರಲ್ಲಿ ಬಿಡುಗಡೆಗೊಂಡ ’ಉಪ್ಪು ಹುಳಿ ಖಾರ’ ದಲ್ಲಿ ಮಾಲಾಶ್ರೀ ನಟಿಸಿ, ಗ್ಯಾಪ್ ತೆಗೆದುಕೊಂಡಿದ್ದರು. ಈಗ ಹೆಸರಿಡದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದು, ಎರಡನೇ ಬಾರಿ ಅವರು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಸಿನಿಮಾದ ಕಥೆಯೇ ವಿಭಿನ್ನವಾಗಿದೆ ಎಂದಿದ್ದಾರೆ ನಿರ್ದೇಶಕರು. ಸಿನಿಮಾ ಕಥೆಯಲ್ಲಿ ಹದಿನೈದು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಮರಳಿರುತ್ತಾರೆ. ಕರೋನ ಮತ್ತು ಲಾಕ್‌ಡೌನ್ ಅವಧಿಯಲ್ಲಿ ನಡೆದಂತ ನೈಜ ಘಟನೆಗಳನ್ನು ತೆಗೆದುಕೊಂಡು ಅದಕ್ಕೆ ಆಕ್ಷನ್ ಥ್ರಿಲ್ಲರ್ ಜತೆಗೆ ಸೆಂಟಿಮೆಂಟ್ ಅಂಶಗಳನ್ನು  ಸೇರಿಸಿ ಸಿನಿಮಾ ಮಾಡುತ್ತಿದ್ದಾರಂತೆ ನಿರ್ದೇಶಕರು. ಬಹುತೇಕ ಸನ್ನಿವೇಶಗಳು ಆಸ್ಪತ್ರೆಯಲ್ಲಿ ನಡೆಯುತ್ತದೆ. ಹಾಡುಗಳಿಗೆ ಅವಕಾಶವಿರುವುದಿಲ್ಲ. ಆದರೂ ಹಿನ್ನಲೆ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ರವೀಂದ್ರ ವೆಂಶಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಸಿನಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಿ.ಎಸ್.ಚಂದ್ರಶೇಖರ್ ಅವರ ಸ್ವರ್ಣಗಂಗ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ತಾರಗಣದಲ್ಲಿ ವೈದ್ಯರಾಗಿ ಪ್ರಮೋದ್‌ಶೆಟ್ಟಿ, ಪೋಲೀಸ್ ಆಗಿ ರಂಗಾಯಣರಘು, ಸಾಧುಕೋಕಿಲ, ಬಿಗ್‌ಬಾಸ್ ವಿಜೇತ ಮಂಜುಪಾವಗಡ, ಕುರಿರಂಗ, ಅಶ್ವಿನ್, ವರ್ದನ್ ಇದ್ದಾರೆ. ಸದ್ದಿಲ್ಲದೇ ಮೊದಲನೇ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತವನ್ನು ಯುಗಾದಿ ತರುವಾಯ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

  • ಕಾಲುವೆಗೆ ಈಜಲು ಹೋಗಿದ್ದ ಯುವಕ ಶವವಾಗಿ ಪತ್ತೆ

    ಕಾಲುವೆಗೆ ಈಜಲು ಹೋಗಿದ್ದ ಯುವಕ ಶವವಾಗಿ ಪತ್ತೆ

    ರಾಯಚೂರು: ಕಾಲುವೆಗೆ ಈಜಾಡಲು ಹೋಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ದೇವರಭೂಪುರ ಕಾಲುವೆ ಬಳಿ ನಡೆದಿದೆ. ಇದನ್ನೂ ಓದಿ: ನಿದ್ದೆ ಮಾಡುವುದಾಗಿ ಹೇಳಿ ಬೆಡ್‍ರೂಮ್‍ಗೆ ಹೋದ ಮಗಳು ದುರಂತ ಸಾವು

    ಎರಡು ದಿನಗಳ ಹಿಂದೆ ಕಾಲುವೆಗೆ ಈಜಲು ತೆರಳಿದ್ದ ಲಿಂಗಸುಗೂರಿನ ಪಿಂಚಣಿಪುರ ನಿವಾಸಿ ರಾಮು(25) ನೀರುಪಾಲಾಗಿದ್ದ. ಬಳಿಕ ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಇಂದು ಕಾಲುವೆ ಬಳಿ ರಾಮುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಗ್ರಾಹಕರಿಗೆ ಇನ್ನಷ್ಟು ಹೊರೆ- ಸಿಲಿಂಡರ್ ದರದಲ್ಲಿ 15 ರೂ. ಏರಿಕೆ  ಇದನ್ನೂ ಓದಿ: ಅ.8ರಂದು ಸಿಎಂ ಮತ್ತೆ ದೆಹಲಿ ಪ್ರವಾಸ

    ಸ್ನೇಹಿತರೊಂದಿಗೆ ಕಾಲುವೆಗೆ ಈಜಾಡಲು ತೆರಳಿದ್ದ ರಾಮು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದ. ಬಳಿಕ ಸ್ನೇಹಿತರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದರು. ನಂತರ ಪೊಲೀಸರು ಆಗಮಿಸಿ ರಾಮುವಿನ ಪತ್ತೆಗಾಗಿ ಎರಡು ದಿನಗಳಿಂದ ಕಾರ್ಯಚರಣೆ ನಡೆಸುತ್ತಿದ್ದರು ಇಂದು ಶವ ಪತ್ತೆಯಾಗಿದ್ದು, ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಎನ್‍ಸಿಬಿ ಅಧಿಕಾರಿಗಳ ಮುಂದೆ ವಿಜ್ಞಾನ ಪುಸ್ತಕಕ್ಕೆ ಬೇಡಿಕೆಯಿಟ್ಟ ಆರ್ಯನ್!

  • ನನಗೆ ವರಗಳನ್ನು ಕೊಡುವ ದೇವರಾಗಿ ಇದ್ರಿ: ಮಾಲಾಶ್ರೀ

    ನನಗೆ ವರಗಳನ್ನು ಕೊಡುವ ದೇವರಾಗಿ ಇದ್ರಿ: ಮಾಲಾಶ್ರೀ

    ಬೆಂಗಳೂರು: ನೀವು ನನ್ನಜೀವನದಲ್ಲಿ ದೇವರಾಗಿ ಬಂದಿದ್ದರಿ. ನೀವು ನನಗೆ ವರಗಳನ್ನು ಕೊಡುವ ದೇವರಾಗಿ ಇದ್ದೀರಿ ಎಂದು ಪತಿಯನ್ನು ನೆನೆದು ಸ್ಯಾಂಡಲ್‍ವುಡ್ ನಟಿ ಮಾಲಾಶ್ರೀ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಸ್ಯಾಂಡಲ್‍ವುಡ್‍ನ ಕೋಟಿ ನಿರ್ಮಾಪಕರಾದ ರಾಮು ಕೊರೊನಾದಿಂದ ಮೃತಪಟ್ಟಿದ್ದರು. ಇಂದು ಅವರ ಹುಟ್ಟು ಹಬ್ಬ ಇರುವುದರಿಂದ ಮಾಲಾಶ್ರೀ ಪತಿಯನ್ನು ನೆನೆದು ಕೆಲವು ಸಾಲುಗಳನ್ನು ಬರೆದುಕೊಂಡು ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ:  1986 ಜೂನ್ 19 ನನ್ನ ಜೀವನದ ಬಹುಮುಖ್ಯ ದಿನ- ನಟಿ ಸುಧಾರಾಣಿ

    ನನ್ನ ದಿನ ನೀವಾಗಿದ್ರಿ, ನನ್ನ ಕಡೆ ನೀವಾಗಿದ್ರಿ, ನನ್ನ ನುಡಿ, ನಗು, ನೆಮ್ಮದಿ, ನನ್ನ ಹೆಸರಿಗೆ ಬೆಳಕು ನೀವಾಗಿದ್ರಿ. ದಿನ ರಾತ್ರಿ ಆಗುಹೋಗುಗಳನ್ನು ಆಲಿಸಿ ನನಗೆ ಬುದ್ದಿ ಹೇಳಿ ಬದುಕಿನ ಬುನಾದಿಯನ್ನು ಕಟ್ಟಿಕೊಟ್ಟ ಗುರುಗಳು ನೀವಾಗಿದ್ರಿ. ಮಕ್ಕಳ ಜೀವನವನ್ನು ಹಸನಾಗಿರೂಪಿಸುವ ತಂದೆ ನೀವಾಗಿದ್ರಿ ಎಂದು ಬರೆದುಕೊಂಡು ಪತಿಯನ್ನು ನೆನಪಿಸಿಕೊಂಡಿದ್ದಾರೆ.

    ನೀವು ತುಂಬಾ ವಿಭಿನ್ನವಾದ ಆಲೋಚನೆಯನ್ನು ಉಳ್ಳವರು.ಕಾಳಜಿ, ಡೆಡಿಕೇಟೆಡ್ ಆಗಿದ್ದಿವರು ನೀವು. ನೀವುದೂರವಾದ ಆಕ್ಷಣ ಮತ್ತು ಈ ಸಾಲುಗಳನ್ನು ಬರೆಯುವ ಈ ಕ್ಷಣ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗುತ್ತಿದೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನಗಾಗೆ ಜನುಮ ಪಡೆದು ಬಂದ ಹೃದಯ ನೀವು. ನನಗೆ ಏನೇನು ಬೇಕೋ ಅದಲ್ಲ ಕೊಟ್ಟ ನಿಮಗೆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದಲೇ ಹಾರೈಕೆ ಮಾಡುತ್ತೇನೆ. ನಾನು ಯಾವಾಗಲು ತುಂಬಾ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಸ್ಯಾಂಡಲ್‍ವುಡ್ ನಿರ್ಮಾಪಕರಾಗಿ ಹೆಸರುವಾಸಿಯಾಗಿದ್ದ ರಾಮು ಅವರು ಉಸಿರಾಟದ ತೊಂದರೆಯಿಂದಾಗಿ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಎಪ್ರಿಲ್ 26ರಂದು ಮರಣ ಹೊಂದಿದ್ದರು. ವಿಶೇಷವಾಗಿ ಸಾಹಸ ದೃಶ್ಯಗಳಿಗೆ ದುಬಾರಿ ಹಣವನ್ನು ಖರ್ಚು ಮಾಡುತ್ತಿದ್ದರು. ದುಬಾರಿ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಕಾರಣ ಸ್ಯಾಂಡಲ್‍ವುಡ್‍ನಲ್ಲಿ ಕೋಟಿ ರಾಮು ಎಂದೇ ಹೆಸರುವಾಸಿಯಾಗಿದ್ದರು.

  • ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ – ಮಾಲಾಶ್ರೀ

    ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ – ಮಾಲಾಶ್ರೀ

    ಬೆಂಗಳೂರು: ಪತಿ ರಾಮು ಅವರು ಕೊರೊನಾಗೆ ಬಲಿಯಾದ ಬಳಿಕ ಮಾಲಾಶ್ರೀ ನಿಮ್ಮೆಲ್ಲರ ಪ್ರೀತಿ, ಕಾಳಜಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಟ್ಟಿಟ್ಟರ್‍ ನಲ್ಲಿ ಹೇಳಿದ್ದಾರೆ.

    ನೀವೆಲ್ಲರೂ ಕೂಡ ನಿಮ್ಮ ಪ್ರೀತಿಪಾತ್ರರಾದವರೊಂದಿಗೆ ಈ ಕಷ್ಟ ಕಾಲದಲ್ಲಿ ಜೊತೆಯಾಗಿರಿ. ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಕಳೆದ 12 ದಿನಗಳಿಂದ ನಾನು ತುಂಬಾ ನೋವನ್ನು ಅನುಭವಿಸುತ್ತಿದ್ದೇನೆ. ನಮ್ಮ ಕುಟುಂಬದವರೆಲ್ಲರೂ ಕೂಡ ರಾಮು ಅವರ ಮರಣದಿಂದ ನೊಂದಿದ್ದಾರೆ. ರಾಮು ಅವರು ನಮಗೆ ಯಾವತ್ತು ಬೆನ್ನಲುಬಾಗಿದ್ದರು. ಸದಾ ನಮಗೆ ಪ್ರೋತ್ಸಾಹಕರಾಗಿದ್ದರು.

    ರಾಮು ಅವರ ಮರಣದ ಸಂದರ್ಭ ಸಿನಿಮಾ ಇಂಡಸ್ಟ್ರಿಯವರು ಸಂತಾಪ ಸೂಚಿಸಿ ನಮಗೆ ಧೈರ್ಯ ತುಂಬಿದ್ದರು. ನಮ್ಮ ಕಷ್ಟಕಾಲದಲ್ಲಿ ನಮಗೆ ಧೈರ್ಯ ತುಂಬಿದ ಸಿನಿಮಾ ಕಲಾವಿದರು, ಮಾಧ್ಯಮ ಮಿತ್ರರು, ನಿರ್ಮಾಪಕರು, ಟೆಕ್ನಿಷಿಯನ್ ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ರಾಮು ಜೊತೆಗಿರುವ ಪ್ರೋಫೈಲ್ ಫೋಟೋವನ್ನು ಹಾಕಿಕೊಂಡಿದ್ದಾರೆ.

    ಸ್ಯಾಂಡಲ್‍ವುಡ್‍ನ ನಿರ್ಮಾಪಕರಾಗಿ ಹೆಸರುವಾಸಿಯಾಗಿದ್ದ ರಾಮು ಅವರು ಉಸಿರಾಟದ ತೊಂದರೆಯಿಂದಾಗಿ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಎಪ್ರಿಲ್ 26ರಂದು ಮರಣ ಹೊಂದಿದ್ದರು. ಕನ್ನಡದಲ್ಲಿ ಎಕೆ 47, ಲಾಕಪ್ ಡೆತ್, ಕಲಾಸಿಪಾಳ್ಯ, ಸಿಬಿಐ ದುರ್ಗಾದಂತಹ ಹೆಸರಾಂತ ಸಿನಿಮಾಗಳನ್ನು ನಿರ್ಮಿಸಿದ್ದರು. ವಿಶೇಷವಾಗಿ ಸಾಹಸ ದೃಶ್ಯಗಳಿಗೆ ದುಬಾರಿ ಹಣವನ್ನು ಖರ್ಚು ಮಾಡುತ್ತಿದ್ದರು. ದುಬಾರಿ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಕಾರಣ ಸ್ಯಾಂಡಲ್‍ವುಡ್‍ನಲ್ಲಿ ‘ಕೋಟಿ ರಾಮು’ ಎಂದೇ ಹೆಸರುವಾಸಿಯಾಗಿದ್ದರು.

  • ತಲೆಬಾಗಿ ಕ್ಷಮೆ ಕೋರುವೆ – ಮಾಲಾಶ್ರೀಗೆ ಸಾಂತ್ವನ ಹೇಳಿದ ಜಗ್ಗೇಶ್

    ತಲೆಬಾಗಿ ಕ್ಷಮೆ ಕೋರುವೆ – ಮಾಲಾಶ್ರೀಗೆ ಸಾಂತ್ವನ ಹೇಳಿದ ಜಗ್ಗೇಶ್

    ಬೆಂಗಳೂರು: ಕೋಟಿ ರಾಮು ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಕೊರೊನಾದಿಂದ ನಿಧನರಾಗಿದ್ದರೆ ಎಂದರೆ ಇಂದಿಗೂ ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ರಾಮುರನ್ನು ಕಳೆದುಕೊಂಡ ಚಂದನವನಕ್ಕೆ ಭರಿಸಲಾಗದ ನಷ್ಟವುಂಟಾಗಿದೆ.

    ಪತಿಯ ಅಗಲಿಕೆಯಿಂದ ನೊಂದಿರುವ ನಟಿ ಮಾಲಾಶ್ರೀಗೆ ಸ್ಯಾಂಡಲ್‍ವುಡ್‍ನ ಅನೇಕ ಕಲಾವಿದರು ಸಾಂತ್ವನ ಹೇಳುತ್ತಿದ್ದಾರೆ. ಇದೀಗ ನವರಸ ನಾಯಕ ಜಗ್ಗೇಶ್ ಕೂಡ ಮಾಲಾಶ್ರೀಯವರಿಗೆ ಟ್ವಿಟ್ಟರ್ ಮೂಲಕ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.

    ‘ಮೇಡಂ ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆಬಾಗಿ ಕ್ಷಮೆ ಕೋರುವೆ. ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ. ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆ ಮಾಡಿ ಅನೇಕ ಚಿತ್ರರಂಗದ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿಕೋರಿ ನಿಮ್ಮ ಮನೆಯಲ್ಲೇ  ರಾಮು ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದಾರೆ.

    ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ ಮಕ್ಕಳನ್ನು ರಾಮು ಎತ್ತರಕ್ಕೆ ಬೆಳೆಸಿ. ನಿಮ್ಮ ಜೊತೆ ನಾವು ಉದ್ಯಮದ ಎಲ್ಲ ಸ್ನೇಹಿತರು ಸದಾ ಇರುತ್ತೇವೆ. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ ನಿಮ್ಮ ಕಲಾಬಂಧು ಎಂದು ಟ್ವೀಟ್ ಮಾಡಿದ್ದಾರೆ.

    ಈ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶ್ರುತಿ, ಸುದೀಪ್, ಮಾಳವಿಕ ಅವಿನಾಶ್, ಶ್ರೀ ಮುರುಳಿ ಸೇರಿದಂತೆ ಅನೇಕ ಕಲಾವಿದರೂ ಸಾಂತ್ವನ ಹೇಳಿದ್ದರು.

  • ಮಾಲಾಶ್ರೀಗೆ ಪತ್ರ ಬರೆದು ಸಾಂತ್ವನ ತಿಳಿಸಿದ ನಟಿ ಶ್ರುತಿ

    ಮಾಲಾಶ್ರೀಗೆ ಪತ್ರ ಬರೆದು ಸಾಂತ್ವನ ತಿಳಿಸಿದ ನಟಿ ಶ್ರುತಿ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಸೋಮವಾರ ಕೊರೊನಾದಿಂದ ಸಾವನ್ನಪ್ಪಿದರು. ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ಮಾಲಾಶ್ರೀಗೆ ನಟಿ ಶ್ರುತಿ ಸಾಮಾಜಿಕ ಜಾಲತಾಣದ ಮೂಲಕ ಭಾವುಕ ಪತ್ರ ಬರೆದು ಸಾಂತ್ವಾನ ಹೇಳಿದ್ದಾರೆ.

    ‘ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ, ಒಬ್ಬ ಗೆಳತಿಯಾಗಿ ಇಂಥ ದುಃಖದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ ಕನಿಷ್ಠ ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಕ್ರೂರ ಪರಿಸ್ಥಿತಿಗೆ ನನ್ನದೊಂದು ದಿಕ್ಕಾರ.’

    ಮಾಲಾ ನಿಮಗಾದ ನಷ್ಟವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿರುವ ಅನಿವಾರ್ಯತೆ ಇದೆ. ನಿಮಗಾಗಿ, ನಿಮ್ಮ ಕೋಟ್ಯಾನುಕೋಟಿ ಅಭಿಮಾನಿಗಳಿಗಾಗಿ, ಬಹುಮುಖ್ಯವಾಗಿ ನಿಮ್ಮ ಮುದ್ದು ಮಕ್ಕಳ ಭವಿಷ್ಯಕ್ಕಾಗಿ. ನೀವು ಹುಟ್ಟು ಹೋರಾಟಗಾರ್ತಿ. ಅದು ನನ್ನ ಕಣ್ಣಾರೆ ನೋಡಿದ್ದೇನೆ.’

    ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದು ಕೇವಲ ಅದೃಷ್ಟದಿಂದ ಅಲ್ಲ. ನಿಮ್ಮ ಪರಿಶ್ರಮದಿಂದ. ನಂತರ ಒಬ್ಬ ಉತ್ತಮ ಗೃಹಿಣಿ ಆಗಿದ್ದು, ಕೇವಲ ದೇವರ ವರದಿಂದ ಅಲ್ಲಾ ತ್ಯಾಗ, ಸಹನೆ, ಪ್ರೀತಿಯಿಂದ, ಒಳ್ಳೆ ತಾಯಿ ಆಗಲೂ ಅಷ್ಟೇ ಶ್ರಮ, ಪ್ರಯತ್ನ ಇದ್ದೇ ಇರುತ್ತೆ.’ ಹೀಗೆ ಜೀವನದ ಎಲ್ಲಾ ಏರಿಳಿತದ ಸಂದರ್ಭವನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಬಂದಿದ್ದೀರಿ. ರಾಮು ಅವರಿಲ್ಲದ ಮುಂದಿನ ದಿನಗಳು ನಿಮಗೆ ಕಷ್ಟಕರವಾಗಿದ್ದರೂ ಅದನ್ನು ನಿಭಾಯಿಸುತ್ತೀರಿ ಹಾಗೂ ನಿಭಾಯಿಸುವ ಶಕ್ತಿ ಆ ದೇವರು ನಿಮಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಆ ಕಷ್ಟದ ಹಾದಿಯಲ್ಲಿ ಎಂದಾದರೂ ಈ ಗೆಳತಿಯ ಸಹಾಯ ಬೇಕಾದಲ್ಲಿ ಒಂದು ಫೋನ್ ಕಾಲ್ ಸಾಕು ಎಂದು ಪತ್ರ ಬರೆದಿದ್ದಾರೆ.

     

    View this post on Instagram

     

    A post shared by Shruthi (@shruthi__krishnaa)

    ಜೊತೆಗೆ ಕಾಮೆಂಟ್ ಸೆಕ್ಷನ್‍ನಲ್ಲಿ ಎಲ್ಲರಲ್ಲಿಯೂ ಒಂದು ಕಳಕಳಿಯ ಮನವಿ ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಹಾಗೂ ಸೆಲೆಬ್ರೆಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಾಮೆಂಟ್ ಮಾಡುವುದರ ಬದಲು ಒಂದು ಒಳ್ಳೆಯ ಕಮಿಟ್ಮೆಂಟ್ ಇರಲಿ ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ ಎಂದು ಬರೆದುಕೊಂಡಿದ್ದಾರೆ.

  • ಕರ್ನಾಟಕದ ನಿರ್ಮಾಪಕ ಕೋಟಿ ರಾಮು ಇನ್ನಿಲ್ಲ

    ಕರ್ನಾಟಕದ ನಿರ್ಮಾಪಕ ಕೋಟಿ ರಾಮು ಇನ್ನಿಲ್ಲ

    ಬೆಂಗಳೂರು: ನಿರುದ್ಯೋಗಿ ಸ್ನೇಹಿತರುಗಳನ್ನು ಫೀಲ್ಡ್ ಗೆ ಕರೆತಂದು ಸಿನಿಮಾ ವಿತರಣೆಯನ್ನು ವಿಸ್ತರಿಸಿ ಹಲವರಿಗೆ ಬದುಕು ಕಟ್ಟಿಕೊಟ್ಟ ಸೃಜನಶೀಲ ನಿರ್ಮಾಪಕ ರಾಮು ಅವರು ನಿಧನರಾಗಿದ್ದಾರೆ.

    ಉಸಿರಾಟದ ತೊಂದರೆ, ಫುಡ್ ಪಾಯಿಸನ್ ನಿಂದ ಬಳಲುತ್ತಿದ್ದ ರಾಮು ಅವರು ಮೂರು ದಿನಗಳ ಹಿಂದೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಈ ನಡುವೆ ಕೊರೊನಾ ಪಾಸಿಟಿವ್ ಬಂದಿತ್ತು. ಇಂದು ರಾತ್ರಿ 7:30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ

    40 ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ಮಿಸಿದ್ದ ರಾಮು ಅವರ ಶ್ವಾಸಕೋಶಕ್ಕೆ ಸೋಂಕು ತೀವ್ರವಾಗಿ ತಗಲಿತ್ತು. ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಿಸುತ್ತಿದ್ದ ಕಾರಣ ಸ್ಯಾಂಡಲ್‍ವುಡ್‍ನಲ್ಲಿ ಅವರಿಗೆ ‘ಕೋಟಿ ರಾಮು’ ಎಂಬ ಹೆಸರು ಬಂದಿತ್ತು.

    ಕನ್ನಡದ ಸುಮಾರು ಎಲ್ಲಾ ಸ್ಟಾರ್ ನಟರಿಗೆ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇವರ ಚಿತ್ರಗಳಲ್ಲಿ ವಿಶೇಷವಾಗಿ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಭಾರೀ ಹಣವನ್ನು ಖರ್ಚು ಮಾಡಲಾಗುತ್ತಿತ್ತು.

    ರಾಮು ಅವರು ಕನ್ನಡದಲ್ಲಿ ಅದ್ದೂರಿ ಚಿತ್ರಗಳ ಟ್ರೆಂಡ್ ಹುಟ್ಟು ಹಾಕಿದಂತಹ ನಿರ್ಮಾಪಕ. ಲಾಕಪ್ ಡೆತ್, ಎಕೆ 47, ಕಲಾಸಿಪಾಳ್ಯ, ಮುಂತಾದ ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕರಾಗಿ ಕನ್ನಡಕ್ಕೆ ಹೊಸ ರೀತಿಯ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟಿದ್ದರು, ನಿರ್ಮಾಪಕರಾಗಿ, ವಿತರಕರಾಗಿ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಖ್ಯಾತ ನಟಿ ಮಾಲಾಶ್ರೀ ಅವರನ್ನ ವರಿಸಿ ಅವರನ್ನೇ ಮುಖ್ಯಭೂಮಿಕೆಯಲ್ಲಿ ಇಟ್ಟುಕೊಂಡು ಅನೇಕ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟಿದ್ದರು.

    ಸುಬ್ರಹ್ಮಣ್ಯ ನಗರದಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರದಿಂದ ಬದುಕು ಆರಂಭಿಸಿದ ಸುಂದರ ಯುವಕ ರಾಮು ಕೋಟಿ ನಿರ್ಮಾಪಕ ಎನ್ನಿಸಿಕೊಂಡರು. ತೆಲುಗು ಸಿನಿಮಾಗಳ ವಿತರಣೆಯಿಂದ ಲಾಭ ಗಳಿಸಿ ಓಂ ಪ್ರಕಾಶ್ ರಾವ್ ಜತೆಗೂಡಿ ಕನ್ನಡ ಸಿನಿಮಾ ನಿರ್ಮಿಸಿ ಹೆಸರುಗಳಿಸಿದ್ದರು.

  • ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರು ಚುನಾವಣೆಯಿಂದೆ ಹಿಂದೆ ಸರಿದರೂ ಅವರ ಬಗ್ಗೆ ಜಿಲ್ಲೆಯಲ್ಲಿ ದಿನಕ್ಕೊಂದು ಚರ್ಚೆ ನಡೆಯುತ್ತಿದೆ. ಅಂಬರೀಶ್ ಅವರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿ ಇದ್ದವರೇ ಕಾರಣ. ಅಕ್ಕಪಕ್ಕದಲ್ಲಿದ್ದವರೇ ಅವರನ್ನು ಹಾಳು ಮಾಡಿದ್ರು ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಎಚ್‍.ಬಿ.ರಾಮು ಪರೋಕ್ಷವಾಗಿ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಅಂಬಿ ಉತ್ತಮ ನಟ, ಉತ್ತಮ ವ್ಯಕ್ತಿ. ರಾಜಕಾರಣಕ್ಕೆ ಅವರ ನಡವಳಿಕೆ ಇಷ್ಟವಾಗಲಿಲ್ಲ. ಅವರ ಅಕ್ಕಪಕ್ಕ ಇದ್ದ ಹತ್ತಾರು ಮಂದಿ ಸ್ವಾರ್ಥಕ್ಕಾಗಿ ಅವರನ್ನು ಬಳಸಿಕೊಂಡರು. ಅಂಬಿ ಮೇಲೆ ಜನತೆ ಇಟ್ಟಂತಹ ಪ್ರೀತಿ ವಿಶ್ವಾಸಕ್ಕೆ ತಿಂಗಳಿಗೊಮ್ಮೆಯಾದ್ರೂ ಅವರು ಕಚೇರಿಯಲ್ಲಿ ಕುಳಿತುಕೊಂಡು ಜನಸಾಮಾನ್ಯರ ಕೆಲಸ ಮಾಡಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಅಂಬಿ ಆಪ್ತರ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದೇ ತಪ್ಪಾಗಿದೆ ಎಂದು ಹೇಳಿದ್ದಾರೆ.

    ಅಂಬರೀಶ್ ಜೊತೆಯಲ್ಲಿ ಇದ್ದಂತವರಾದ್ರೂ ವ್ಯವಸ್ಥಿತವಾಗಿ ಕೆಲಸ ಮಾಡಿಸಿದ್ದರೆ ಅವರ ಇಮೇಜ್ ಇಷ್ಟು ಹಾಳಾಗುತ್ತಿರಲಿಲ್ಲ. ಅಂಬರೀಶ್ ಅವರು ಕೆಲವರಿಗೆ ಮಾತ್ರ ಸೀಮಿತವಾದರು. ಪಕ್ಕದಲ್ಲಿ ಇದ್ದವರು ಮರ ಬೆಳೆದರೆ ಅದರ ನೆರಳಲ್ಲಿ ಹಲವರು ಇರಬಹುದು ಎಂದು ಯೋಚಿಸಬಹುದಿತ್ತು. ಆದರೆ ಮರವನ್ನು ಪೋಷಿಸುವ ಕೆಲಸ ಪಕ್ಕದಲ್ಲಿದ್ದವರು ಮಾಡಲಿಲ್ಲ ಎಂದ್ರು.

    ಅಂಬರೀಶ್ ಅವರು ಕಿವಿ ಮಾತನ್ನು ಹೆಚ್ಚು ಕೇಳುತ್ತಿದ್ದರು. ಕಬ್ಬಿಣ ಯಾವುದು ಚಿನ್ನ ಯಾವುದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಅವರಲ್ಲಿ ಉದಾರತನವಿತ್ತು ಅದನ್ನು ಜೊತೆಯಲ್ಲಿದ್ದವರು ದುರ್ಬಳಕೆ ಮಾಡಿಕೊಂಡು. ಇದು ತುಂಬಾ ನೋವಾಗುತ್ತೆ ಎಂದು ಅಮರಾವತಿ ಚಂದ್ರಶೇಖರ್ ವಿರುದ್ಧ ಮಾಜಿ ಶಾಸಕ ರಾಮು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಆದ್ರೆ ರಾಮು ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅಮರಾವತಿ ಚಂದ್ರಶೇಖರ್, ನಾನು ಈ ಬಗ್ಗೆ ನೋಡು ಇಲ್ಲ. ಕೇಳು ಇಲ್ಲ. ಇದರ ಬಗ್ಗೆ ನಾನೇನು ಮಾತನಾಡಲ್ಲ ಎಂದಿದ್ದಾರೆ.