Tag: ರಾಮಾಯಣ ಸಿನಿಮಾ

  • ರಾಮನ ಪಾತ್ರಕ್ಕಾಗಿ ಮಾಂಸಾಹಾರ, ಮದ್ಯ ಸೇವನೆ ಬಿಟ್ಟಿದ್ದರಂತೆ ರಣ್‌ಬೀರ್ ಕಪೂರ್

    ರಾಮನ ಪಾತ್ರಕ್ಕಾಗಿ ಮಾಂಸಾಹಾರ, ಮದ್ಯ ಸೇವನೆ ಬಿಟ್ಟಿದ್ದರಂತೆ ರಣ್‌ಬೀರ್ ಕಪೂರ್

    ಯಶ್ ನಟನೆಯ ʻರಾಮಾಯಣʼ ಚಿತ್ರದ (Ramayana Cinema) ಫಸ್ಟ್‌ ಗ್ಲಿಂಪ್ಸ್ ರಿಲೀಸ್ ಆದ ಬಳಿಕ‌ವಂತೂ ಕುತೂಹಲ ಹೆಚ್ಚಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ರಣ್‌ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿದ್ದರೇ ಸಾಯಿಪಲ್ಲವಿ (Sai Pallavi) ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ ʻರಾಮಾಯಣʼ ಮೊದಲ ಭಾಗ ತೆರೆಕಾಣೋಕೆ ಸಜ್ಜಾಗಿದೆ.

    ಮೊದಲ ಭಾಗದ ಚಿತ್ರೀಕರಣವೂ ಮುಕ್ತಾಯವಾಗಿದ್ದು, ಈ ನಡುವೆ ನಟ ರಣ್‌ಬೀರ್‌ ಕಪೂರ್‌ (Ranbir Kapoor) ಕುರಿತಾಗಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಚಿತ್ರದಲ್ಲಿ ಶ್ರೀರಾಮನ ಪಾತ್ರಧಾರಿಯಾಗಿರುವ ರಣ್‌ಬೀರ್ ಕಪೂರ್ ಇದೇ ಪಾತ್ರಕ್ಕಾಗಿ ಆಹಾರ ಪದ್ಧತಿಯನ್ನ ಸಂಪೂರ್ಣವಾಗಿ ಬದಲಿಸಿಕೊಂಡಿದ್ದರಂತೆ. ಮಾಂಸಾಹಾರ, ಮದ್ಯಸೇವನೆ ತ್ಯಜಿಸಿ ಸಾತ್ವಿಕ ಆಹಾರ ಪದ್ಧತಿಯ ಮೊರೆ ಹೋಗಿದ್ದರಂತೆ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್‌, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

    ಮರ್ಯಾದಾ ಪುರುಷೋತ್ತಮ ರಾಮ ಸಕಲ ಆಸೆಗಳನ್ನ ತ್ಯಜಿಸಿದ್ದ ರಘುಕುಲ ತಿಲಕ. ಇಂಥಹ ದೈವಾಂಶಸಂಭೂತ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಆಧ್ಯಾತ್ಮಿಕ ಶಿಸ್ತನ್ನ ರೂಢಿಸಿಕೊಂಡಿದ್ದರಂತೆ ರಣ್‌ಬೀರ್ ಕಪೂರ್. ಮದ್ಯ ಹಾಗೂ ಮಾಂಸಾಹಾರ ಸೇವನೆ ತ್ಯಜಿಸಿದ್ದರಂತೆ. ಧ್ಯಾನ ಹಾಗೂ ಯೋಗದ ಮೂಲಕ ದೇಹ ಹುರಿಗೊಳಿಸಿಕೊಂಡು ರಾಮನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದರಂತೆ. ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಬಹಳವೇ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ವಿನಯ್ ಜೊತೆ ರಮ್ಯಾ ಸುತ್ತಾಟ ಎಂದವರಿಗೆ ತಿರುಗೇಟು ಕೊಟ್ಟ ಮೋಹಕತಾರೆ

    ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ʻರಾಮಾಯಣʼ ಮಹಾಕಾವ್ಯದಲ್ಲಿ ರಾಮನ ಪಾತ್ರದಲ್ಲಿ ನಟಿಸಲು ರಣಬೀರ್ ಕಪೂರ್ ತಮ್ಮ ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿರುವ ವಿಚಾರ ಒಂದೊಂದಾಗೇ ಇದೀಗ ರಿವ್ಹೀಲ್‌ ಆಗುತ್ತಿದೆ. ಪರದೆಯ ಮೇಲೆ ರಾಮನ ದೈವಿಕತೆಯನ್ನ ಪ್ರತಿಬಿಂಬಿಸುವ ಪಾತ್ರ ಮಾಡುವಾಗ ರಣ್‌ಬೀರ್ ಜೀವನಶೈಲಿ ಬದಲಾವಣೆಯ ಮಹತ್ವದ ತೀರ್ಮಾನ ತೆಗೆದುಕೊಂಡು ವಿಶೇಷ ವ್ಯಕ್ತಿತ್ವ ಪ್ರದರ್ಶಿಸಿದ್ದಾರೆ.

    ಬಹುಶಃ ಮುಂದಿನ ದಿನಗಳಲ್ಲಿ ಖುದ್ದು ರಣ್‌ಬೀರ್ ಕಪೂರ್ ಈ ವಿಚಾರವಾಗಿ ಮಾತನಾಡುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ಅವರು ಕೈಗೊಂಡಿದ್ದ ಮಹತ್ವದ ಸಂಕಲ್ಪ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಕರಾವಳಿಯ ಮತ್ತೊಂದು ಕಥನ `ದಿಂಸೋಲ್’ ಪೋಸ್ಟರ್ ರಿಲೀಸ್

  • ರಾಕಿ ಭಾಯ್ ಫ್ಯಾನ್ಸ್‌ಗೆ ಸಿಹಿಸುದ್ದಿ – ಮಾರ್ಚ್‌ನಲ್ಲಿ ‘ರಾಮಾಯಣ’ ಚಿತ್ರತಂಡಕ್ಕೆ ಸೇರಿಕೊಳ್ಳಲಿದ್ದಾರೆ ಯಶ್

    ರಾಕಿ ಭಾಯ್ ಫ್ಯಾನ್ಸ್‌ಗೆ ಸಿಹಿಸುದ್ದಿ – ಮಾರ್ಚ್‌ನಲ್ಲಿ ‘ರಾಮಾಯಣ’ ಚಿತ್ರತಂಡಕ್ಕೆ ಸೇರಿಕೊಳ್ಳಲಿದ್ದಾರೆ ಯಶ್

    ನ್ಯಾಷನಲ್ ಸ್ಟಾರ್ ಯಶ್ (Yash) ‘ಟಾಕ್ಸಿಕ್’ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಬಾಲಿವುಡ್ ‘ರಾಮಾಯಣ’ (Ramayana) ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಶೂಟಿಂಗ್‌ ಮುಗಿಸಿದ ದುಷ್ಯಂತ್‌, ಆಶಿಕಾ ನಟನೆಯ ‘ಗತವೈಭವ’ ಸಿನಿಮಾ

    ‘ಟಾಕ್ಸಿಕ್’ ಸಿನಿಮಾ ಕೆಲಸ ಭರದಿಂದ ನಡೆಯುತ್ತಿದೆ. ಮುಂಬೈ, ಗೋವಾ ಸೇರಿದಂತೆ ಹಲವೆಡೆ ಈ ಚಿತ್ರದ ಶೂಟಿಂಗ್ ಮಾಡಲಾಗುತ್ತಿದೆ. ಈ ಚಿತ್ರದ ಕೆಲಸದ ನಡುವೆ ಇದೀಗ ರಾವಣನಾಗಿ ಅಬ್ಬರಿಸಲು ಯಶ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಚಿತ್ರದಲ್ಲಿ ರಾವಣನಾಗಿ ನಟಿಸುವ ಬಗ್ಗೆ ಈಗಾಗಲೇ ಯಶ್ ಅಧಿಕೃತವಾಗಿ ತಿಳಿಸಿದ್ದಾರೆ. ಇದೇ ಮಾರ್ಚ್‌ನಲ್ಲಿ ಯಶ್ ‘ರಾಮಾಯಣ’ ಚಿತ್ರತಂಡವನ್ನು ಸೇರಿಕೊಳ್ಳಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿದೆ ಎಂದು ಮಾಧ್ಯಮವೊಂದು ತಿಳಿಸಿದೆ.

    ಇನ್ನೂ ‘ರಾಮಾಯಣ’ ಸಿನಿಮಾಗೆ ಸಹ ನಿರ್ಮಾಪಕನಾಗಿಯೂ ಕೂಡ ಅವರು ಸಾಥ್ ನೀಡುತ್ತಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಕೂಡ ಭಾರೀ ನಿರೀಕ್ಷೆಯಿದೆ.

  • ಡಿಸೆಂಬರ್‌ನಲ್ಲಿ ‘ರಾವಣ’ನಾಗಿ ಘರ್ಜಿಸಲಿದ್ದಾರೆ ಯಶ್

    ಡಿಸೆಂಬರ್‌ನಲ್ಲಿ ‘ರಾವಣ’ನಾಗಿ ಘರ್ಜಿಸಲಿದ್ದಾರೆ ಯಶ್

    ನ್ಯಾಷನಲ್ ಸ್ಟಾರ್ ಯಶ್ ಪ್ರಸ್ತುತ ‘ಟಾಕ್ಸಿಕ್’ (Toxic) ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಒಪ್ಪಿಕೊಂಡಿರುವ ‘ರಾಮಾಯಣ’ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಡಿಸೆಂಬರ್‌ನಲ್ಲಿ ಯಶ್ (Yash) ‘ರಾಮಾಯಣ’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಕನ್ನಡತಿ ಸೀರಿಯಲ್‌ ನಟ ಕಿರಣ್‌ ರಾಜ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಆ.8ಕ್ಕೆ ಟಾಕ್ಸಿಕ್ ಸಿನಿಮಾಗೆ ಚಿತ್ರಕ್ಕೆ ನೀಡಲಾಗಿತ್ತು. ಅಂದಿನಿಂದ ಈ ಪ್ರಾಜೆಕ್ಟ್‌ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇನ್ನೂ ಹಲವು ಹಂತದಲ್ಲಿ ಶೂಟಿಂಗ್ ನಡೆಯಲಿದೆ. ಆದರೆ ರಣ್‌ಬೀರ್ ಕಪೂರ್ (Ranbir Kapoor) ‘ರಾಮಾಯಣ’ (Ramayana) ಚಿತ್ರದಲ್ಲಿ ಯಶ್ ‘ರಾವಣ’ನಾಗಿ ಬರೋಕೆ ಮುಹೂರ್ತ ಫಿಕ್ಸ್ ಆಗಿದೆ. ‘ಟಾಕ್ಸಿಕ್’ ಸಿನಿಮಾ ಜೊತೆಗೆಯೇ ಈ ಚಿತ್ರಕ್ಕೂ ಅವರು ಸಾಥ್ ನೀಡಲಿದ್ದಾರೆ.

    ರಣ್‌ಬೀರ್ ರಾಮನ ಪಾತ್ರ, ಸಾಯಿ ಪಲ್ಲವಿ (Sai Pallavi) ಸೀತೆ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಇವರ ಭಾಗದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ಚಿತ್ರದ ಸೆಟ್‌ಗೆ ಯಶ್ ಎಂಟ್ರಿ ಕೊಡಲಿದ್ದಾರೆ. ರಾವಣನಾಗಿ ಘರ್ಜಿಸೋಕೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇನ್ನೂ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

    ಇನ್ನೂ ‘ರಾಮಾಯಣ’ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಸಹ ನಿರ್ಮಾಪಕನಾಗಿಯೂ ಕನ್ನಡದ ನಟ ಯಶ್ ಕೈಜೋಡಿಸಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಅಶ್ಲೀಲ ಪದ ಬಳಸಿದ ಫೋಟೋಗ್ರಾಫರ್- ಶಾಕ್ ಆದ ರಣ್‌ಬೀರ್ ಕಪೂರ್

    ಅಶ್ಲೀಲ ಪದ ಬಳಸಿದ ಫೋಟೋಗ್ರಾಫರ್- ಶಾಕ್ ಆದ ರಣ್‌ಬೀರ್ ಕಪೂರ್

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಸದ್ಯ ‘ರಾಮಾಯಣ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಭರಣ ಮಳಿಗೆಯೊಂದಕ್ಕೆ ನಟ ಚಾಲನೆ ನೀಡಿದ್ದಾರೆ. ಈ ವೇಳೆ, ರಣ್‌ಬೀರ್ ವೇದಿಕೆ ಮೇಲಿದ್ದಾಗ ಫೋಟೋಗ್ರಾಫರ್ ಅಶ್ಲೀಲ ಪದ ಬಳಸಿ ಮಾತನಾಡಿದ್ದು, ಕೇಳಿ ಶಾಕ್ ಆಗಿದ್ದಾರೆ.

    ರಣ್‌ಬೀರ್ ವೇದಿಕೆಗೆ ಎಂಟ್ರಿ ಕೊಟ್ಟಾಗ ಬೇಗನೆ ಫೋಟೋ ಕ್ಲಿಕ್ಕಿಸಬೇಕೆಂಬ ತವಕ. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದ ನಿಮಿತ್ತ ಫೋಟೋಗ್ರಾಫರ್‌ಗೆ ಸರಿಯಾದ ಫೋಟೋ ಸಿಗದ ಕಾರಣ ಸಿಟ್ಟಾಗಿದ್ದಾರೆ. ಈ ವೇಳೆ, ಕೆಟ್ಟ ಪದ ಬಳಸಿ ಮಾತನಾಡಿದ್ದಾರೆ. ಆ ಪದ ಬಳಕೆ ಮಾಡಿದ್ದು, ರಣ್‌ಬೀರ್ ಅವರಿಗೇನಾ ಅಥವಾ ಸೇರಿದ್ದ ಜನರಿಗೇನಾ? ಎಂದು ಸ್ಪಷ್ಟನೆ ಸಿಕ್ಕಿಲ್ಲ. ಒಟ್ನಲ್ಲಿ ಫೋಟೋಗ್ರಾಫರ್ ವರ್ತನೆ ರಣ್‌ಬೀರ್‌ಗೆ ಕೋಪ ತರಿಸಿದೆ.

    ರಣ್‌ಬೀರ್ ಕೂಡ ತಾಳ್ಮೆ ಕಳೆದುಕೊಂಡಿಲ್ಲ. ಖಡಕ್ ಆಗಿ ಲುಕ್ ಕೊಟ್ಟು ವೇದಿಕೆಯಿಂದ ಹೊರನಡೆದಿದ್ದಾರೆ. ವೈರಲ್‌ ಆಗಿರುವ ವಿಡಿಯೋ ನೋಡಿ ಫೋಟೋಗ್ರಾಫರ್ ವರ್ತನೆಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಎಲ್ಲಿ ಹೇಗಿರಬೇಕು ಎಂಬ ಸೌಜನ್ಯವಿಲ್ಲ ಎಂದು ಖಡಕ್ ಆಗಿ ಪಾಪರಾಜಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕೈಯಲ್ಲಿ ಗನ್ ಹಿಡಿದು ರಕ್ತಸಿಕ್ತ ಅವತಾರದಲ್ಲಿ ಸಮಂತಾ

    ರಾಮಾಯಣ, ಅನಿಮಲ್ ಪಾರ್ಕ್, ಬ್ರಹ್ಮಾಸ್ತ್ರ 2, ಲವ್ & ವಾರ್ ಸೇರಿದಂತೆ ಹಲವು ಸಿನಿಮಾಗಳು ರಣ್‌ಬೀರ್ ಕೈಯಲ್ಲಿವೆ.

  • ರಾಮಾಯಣ ಸಿನಿಮಾ ಮಾಡಬೇಕಂತೆ ರಾಜಮೌಳಿ- ನೆಟ್ಟಿಗರ ಒತ್ತಾಯ

    ರಾಮಾಯಣ ಸಿನಿಮಾ ಮಾಡಬೇಕಂತೆ ರಾಜಮೌಳಿ- ನೆಟ್ಟಿಗರ ಒತ್ತಾಯ

    ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ರಾಜಮೌಳಿ ಅಭಿಮಾನಿಗಳು ಅವರಿಗೆ ಹೊಸದೊಂದು ಬೇಡಿಕೆಯನ್ನು ಇಟ್ಟಿದ್ದಾರೆ.

    ರಾಜಮೌಳಿಯವರು ರಾಮಾಯಣ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ. ಹ್ಯಾಶ್ ಟ್ಯಾಗ್‍ನೊಂದಿಗೆ ರಾಜಮೌಳಿ ಮೇಕ್ ರಾಮಾಯಣ ಎಂದು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ರಮಾನಂದ ಸಾಗರ್ ಬಿಟ್ಟರೆ ಈ ಕತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಸಾಮರ್ಥ್ಯ ಇರುವುದು ರಾಜಮೌಳಿಯವರಿಗೆ ಮಾತ್ರ. ಬಾಹುಬಲಿಯಂತಹ ಕಾಲ್ಪನಿಕ ಕತೆಯನ್ನೇ ನೈಜ ಕಥೆ ಎನ್ನುಂತೆ ಕಟ್ಟಿಕೊಟ್ಟಿದ್ದೀರಿ. ಇನ್ನು ರಾಮಾಯಣ ನಿಮ್ಮ ನಿರ್ದೇಶನದಲ್ಲಿ ಹೇಗೆ ಮೂಡಿ ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.

    ಪಾತ್ರವರ್ಗದ ಕುರಿತು ಸಹ ಹಲವರು ಚರ್ಚೆ ನಡೆಸುತ್ತಿದ್ದು, ರಾಜಮೌಳಿಯವರು ರಾಮಾಯಣ ಸಿನಿಮಾ ಮಾಡಿದರೆ ಪ್ರಮುಖ ಪಾತ್ರಗಳಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬಹುದು, ಈ ವರೆಗೆ ರಾಮ, ಲಕ್ಷ್ಮಣ, ರಾವಣ, ಹನುಮಂತನ ಪಾತ್ರದ ಕುರಿತು ಪ್ರಾಮಾಣಿಕ ಚರ್ಚೆ ನಡೆದಿಲ್ಲ. ಆದರೆ ಸೀತೆಯ ಪಾತ್ರಕ್ಕೆ ಅನುಷ್ಕಾ ಶೆಟ್ಟಿಯವರಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ದೇಶದ ಅತ್ಯತ್ತಮ ನಿರ್ದೇಶಕರ ಪಟ್ಟಿಯಲ್ಲಿ ಎಸ್.ಎಸ್.ರಾಜಮೌಳಿ ಸಹ ಒಬ್ಬರು. ಬಾಹುಬಲಿ ಸೇರಿದಂತೆ ಹಲವು ವಿಶಿಷ್ಠ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಭಾರತೀಯ ಚಿತ್ರ ರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಇವರ ನಿರ್ದೇಶನದ ಚಿತ್ರಕ್ಕಾಗಿ ಹಲವು ಪ್ರಸಿದ್ಧ ನಟರು ಕಾದು ಕುಳಿತಿರುತ್ತಾರೆ. ಅಲ್ಲದೆ ನಿರ್ಮಾಪಕರು ಸಹ ಬಂಡವಾಳ ಹೂಡಲು ಹಿಂಜರಿಯುವುದಿಲ್ಲ. ಅಷ್ಟರ ಮಟ್ಟಿಗೆ ರಾಜಮೌಳಿಯವರು ತಮ್ಮ ನಿರ್ದೇಶನದ ಮೂಲಕ ಮೋಡಿ ಮಾಡುತ್ತಾರೆ.

    ಬಾಹುಬಲಿಯಂತಹ ಸಿನಿಮಾ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸದ್ದು ಮಾಡಿತ್ತು. ಚಿತ್ರದ ಎರಡೂ ಭಾಗಗಳು ಹಿಟ್ ಆಗಿದ್ದವು. ಇದಾದ ಬಳಿಕ ರಾಜಮೌಳಿಯವರು ಜೂನಿಯರ್ ಎಂಟಿಆರ್ ಹಾಗೂ ರಾಮ್‍ಚರಣ್‍ತೇಜಾ ಕಾಂಬಿನೇಶನ್‍ನಲ್ಲಿ ಆರ್‍ಆರ್‍ಆರ್ ಸಿನಿಮಾ ಮಾಡುತ್ತಿದ್ದು, ಇದೂ ಸಹ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮುತ್ತಿದೆ.

    ಚಿತ್ರೀಕರಣ ಭರದಿಂದ ಸಾಗಿರುವಾಗಲೇ ಕೊರೊನಾ ಮಹಾಮಾರಿಯಿಂದಾಗಿ ಲಾಕ್‍ಡೌನ್ ಘೋಷಣೆಯಾಗಿತು. ಹೀಗಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದು, ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಆರಂಭವಾಗಲಿದೆ. ಅತ್ತ ಹಿಂದಿಯಲ್ಲಿ ಮರುಪ್ರಸಾರವಾದ ರಾಮಾಯಣ ಧಾರಾವಾಹಿ ಸಹ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದು, ಅತಿ ಹೆಚ್ಚು ಟಿಆರ್ ಪಿ ಗಳಿಸುವ ಮೂಲಕ ಜನಪ್ರಿಯತೆ ಗಳಿಸಿದೆ.

    ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ರಾಜಮೌಳಿಯವರು ಮಾತ್ರ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ಮಾಡಲಿದ್ದಾರೆಯೇ, ಇಲ್ಲವೇ ಎಂಬುದರ ಕುರಿತು ಅವರ ಉತ್ತರವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.