Tag: ರಾಮಾಚಾರಿ

  • ಯಜಮಾನ-ರಾಮಾಚಾರಿ; ವಾರಪೂರ್ತಿ ಒಂದು ಗಂಟೆಯ ಮಹಾಸಂಚಿಕೆ

    ಯಜಮಾನ-ರಾಮಾಚಾರಿ; ವಾರಪೂರ್ತಿ ಒಂದು ಗಂಟೆಯ ಮಹಾಸಂಚಿಕೆ

    ವ್ ಮ್ಯಾರೇಜೂ ಅಲ್ಲದ, ಅರೇಂಜ್ ಮ್ಯಾರೇಜೂ ಅಲ್ಲದ ಪಕ್ಕಾ ಅಗ್ರಿಮೆಂಟ್ ಮ್ಯಾರೇಜ್ ಕತೆಯಲ್ಲಿ ಈಗ ನಾಯಕ ನಿಜವಾಗಲೂ ಯಾರಿಗೆ ‘ಯಜಮಾನ’ ಆಗ್ತಾನೆ ಅನ್ನೋ ಪ್ರಶ್ನೆಯ ಮೇಲೆ ಧಾರಾವಾಹಿ ನಡೀತಿದೆ. ಒಂದುಕಡೆ ರಾಘುವನ್ನ ಅಗ್ರಿಮೆಂಟ್ ಮ್ಯಾರೇಜ್ ಆಗಿರೋ ಆಗರ್ಭ ಶ್ರೀಮಂತೆ ಝಾನ್ಸಿ ತನ್ನ ಪ್ರೀತಿ ಪಡೆಯೋದಕ್ಕೆ, ಎಂತಹ ಕಷ್ಟವನ್ನಾದರೂ ಎದುರಿಸ್ತಾಳೆ. ಇನ್ನೊಂದು ಕಡೆ ಅರೇಂಜ್ ಮ್ಯಾರೇಜ್ ಆಗ್ಬೇಕಾಗಿರೋ ಅನಿತಾಗೆ ಹಸೆಮಣೆ ಮೇಲೆ ಮದುವೆ ನಿಂತಿರೋದು ಆಘಾತವಾಗಿ, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇಬ್ಬರಿಗೂ ತಮ್ಮ ‘ಯಜಮಾನ’ ರಾಘುವೇ ಆಗಬೇಕೆಂಬ ಹಠ. ಈ ಸಮಸ್ಯೆಗೆ ಪರಿಹಾರವಾಗಿ ಮನೆಯವರೆಲ್ಲ ಸೇರಿ ಝಾನ್ಸಿ-ಅನಿತಾ ನಡುವೆ ‘ನಾನಾ- ನೀನಾ’ ಸ್ಪರ್ಧೆ ಏರ್ಪಡಿಸಿದ್ದಾರೆ.

    ಝಾನ್ಸಿ ಸರಿಯಾದ ರೀತಿಯಲ್ಲಿ ಆಡಿ ಜಯಿಸಿದರೂ, ಎಲ್ಲರೂ ಸೇರಿ ಪೂರ್ವನಿರ್ಧಾರದಂತೆ, ಸೋತರೂ ಅನಿತಾಳದ್ದೇ ಗೆಲುವು ಎಂದು ತೀರ್ಮಾನಿಸುವುದು ಇಲ್ಲಿಯವರೆಗಿನ ಕತೆ. ದಿನದಿಂದ ದಿನಕ್ಕೆ ಈ ಪಂದ್ಯ ಕುತೂಹಲಕಾರಿಯಾಗಿ ಸಾಗುತ್ತಿದೆ. ಎಷ್ಟೇ ಆದರೂ ಇಡೀ ಕುಟುಂಬ ಅನಿತಾಳ ಬೆಂಬಲಕ್ಕಿದೆ. ರಾಘು ಸೇರಿದಂತೆ ಇನ್ನಿಬ್ಬರಿಗೆ ಮನಸ್ಸಲ್ಲಿ ಝಾನ್ಸಿಯೇ ಗೆಲ್ಲಬೇಕೆಂಬ ಆಸೆಯಿದ್ದರೂ, ಅದನ್ನು ತೋರಿಸಿಕೊಳ್ಳಲು ಅವರ ಪರಿಸ್ಥಿತಿ ಬಿಡುತ್ತಿಲ್ಲ. ಇದೀಗ ಝಾನ್ಸಿಯ ಪ್ರೀತಿಯನ್ನ ಗೆಲ್ಲಿಸೋಕೆ, ಅವಳಿಗೆ ಸಪೋರ್ಟ್ ಸಿಸ್ಟಮ್ ಆಗಿ ಜೊತೆಯಲ್ಲಿ ನಿಲ್ಲೋಕೆ ಕರುನಾಡೇ ಮೆಚ್ಚಿದ, ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಜನ ಮೆಚ್ಚಿದ ಜೋಡಿ ರಾಮಾಚಾರಿ-ಚಾರು ಬರ್ತಿದಾರೆ. ಇದನ್ನೂ ಓದಿ: ಸಿನಿಮಾ ನಿರ್ಮಾಣದತ್ತ ಹೆಜ್ಜೆ ಇಟ್ಟ ಪ್ರಜ್ವಲ್ ದೇವರಾಜ್

    ಯಜಮಾನ-ರಾಮಾಚಾರಿ ಮಹಾಸಂಚಿಕೆ, ಕರುನಾಡಿಗೆ ಮನರಂಜನೆಯ ರಸದೌತಣವನ್ನ ಕೊಡಲು ಸಜ್ಜಾಗಿದೆ. ಎರಡು ಬ್ಯೂಟಿಫುಲ್ ಜೋಡಿಗಳ ಕ್ಯೂಟ್ ರೊಮ್ಯಾನ್ಸ್, ಎರಡು ಪವರ್‌ಫುಲ್ ಹೀರೋಗಳ ಸಖತ್ ಫೈಟ್, ಎರಡು ಹೀರೋಯಿನ್‌ಗಳ ಇಮೋಷನಲ್ ಸೀನ್ಸ್, ವಿಲನ್‌ಗಳ ಅಟ್ಟಹಾಸ, ಅದನ್ನ ಅಡಗಿಸೋ ಒಳ್ಳೆತನ, ನಾನ್-ಸ್ಟಾಪ್ ನಗು, ‘ನಾನಾ-ನೀನಾ’ ಪಂದ್ಯದ ಕುತೂಹಲ… ಹೀಗೆ ಮಹಾಸಂಚಿಕೆ ವಿಶೇಷವಾಗಿ ಮೂಡಿಬರಲಿದೆ. ನಿಜವಾಗ್ಲೂ ಮನೆಯವರ ವೋಟ್ ಪಡೆದು ಮನೆಯ ‘ಸೊಸೆ’ ಪಟ್ಟ ದಕ್ಕಿಸಿಕೊಳ್ಳೋರು ಯಾರು? ‘ಯಜಮಾನ’ನ ಅಸಲಿ ಯಜಮಾನಿ ಆಗೋದ್ಯಾರು? ಮನೆಯಿಂದಾಚೆ ಹೋಗೋರು ಯಾರು ಅನ್ನೋದು ಇಲ್ಲಿ ನಿರ್ಧಾರವಾಗಲಿದೆ. ಯಜಮಾನ-ರಾಮಾಚಾರಿ ವಾರಪೂರ್ತಿ ಒಂದು ಗಂಟೆಯ ಮಹಾಸಂಚಿಕೆ ಸೆಪ್ಟಂಬರ್ 8ರಿಂದ ರಾತ್ರಿ 9:30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

  • ಮಾರ್ಗರೇಟ್ ಪಾತ್ರದಲ್ಲಿ ಸೋನಲ್ ಮೊಂಥೆರೋ

    ಮಾರ್ಗರೇಟ್ ಪಾತ್ರದಲ್ಲಿ ಸೋನಲ್ ಮೊಂಥೆರೋ

    ನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಸಿನಿಮಾ ನಾಗರಹಾವು. ಈ ಚಿತ್ರದ ರಾಮಾಚಾರಿ (Ramachari) ಹಾಗೂ ಮಾರ್ಗರೇಟ್​ (Margaret) ಪಾತ್ರಗಳು ಇಂದಿಗೂ ಪ್ರೇಕ್ಷಕರ ಅಚ್ಚುಮೆಚ್ಚು. ಇದೇ ಚಿತ್ರದ ಪಾತ್ರಗಳನ್ನು ಇಟ್ಕೊಂಡು ಬಂದ ರಾಮಾಚಾರಿ ಮತ್ತು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ  ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಇದೇ ನಾಗರಹಾವು ಸಿನಿಮಾದ ಪಾತ್ರಗಳ ಸ್ಫೂರ್ತಿ ಪಡೆದು ಹೊಸ ಸಿನಿಮಾವೊಂದು ಬರ್ತಿದೆ. ಆ ಚಿತ್ರಕ್ಕೆ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಎಂದು ಟೈಟಲ್ ಇಡಲಾಗಿದೆ.

    ಯುವ ಪ್ರತಿಭೆ ಅಭಿಲಾಶ್ ನಾಯಕನಾಗಿ ಹಾಗೂ ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸುತ್ತಿರುವ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಚಿತ್ರದ ಮುಹೂರ್ತ ಸಮಾರಂಭವಿಂದು ಬೆಂಗಳೂರಿನ ಬಂಡೇ ಮಹಾಕಾಳಿ‌ ಸನ್ನಿಧಿಯಲ್ಲಿ ನೆರವೇರಿತು. ನಟರಾಕ್ಷಸ ಡಾಲಿ ಧನಂಜಯ್ (Dhananjay) ಹೊಸ‌ ತಂಡಕ್ಕೆ ಶುಭ ಹಾರೈಸಿದರು.  ಡಾಲಿ ಧನಂಜಯ್ ಮಾತನಾಡಿ,ಅಭಿ ಬಡವ ರಾಸ್ಕಲ್, ಹೊಯ್ಸಳದಲ್ಲಿ ಸಣ್ಣ ಪಾತ್ರ ಮಾಡಿದ್ದಾನೆ. ಆತ  ಅಭಿಮಾನಿಯಾಗಿ ಪರಿಚಯ. ಈಗ ಹೀರೋ ಆಗುತ್ತಿದ್ದಾನೆ. ಸುಮಾರು ವರ್ಷಗಳ ಪ್ರಯತ್ನ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು. ಇದನ್ನೂ ಓದಿ:ಮಂಗಳೂರಿನ ಕಾಡಿನಲ್ಲಿ ನಟಿ ಪೂಜಾ ಹೆಗ್ಡೆ ಸುತ್ತಾಟ

    ‌ನಿರ್ದೇಶಕ ಗಿರಿಧರ್ ಕುಂಬಾರ್ ಮಾತನಾಡಿ, ಈ ಚಿತ್ರದ ಮೂಲಕ ಇವತ್ತಿನ ಸಮಾಜಕ್ಕೆ ಬೇಕಿರುವ ಸಂದೇಶ ಕೊಡುತ್ತೇವೆ. ನಾಗರಹಾವು ಸಿನಿಮಾದ ಪಾತ್ರಗಳು ಲೆಜೆಂಡ್ ಪಾತ್ರಗಳು. ಅವುಗಳನ್ನು ನಾವು ಮುಟ್ಟಲಾಗುವುದಿಲ್ಲ. ಒಬ್ಬ ಸಾಮಾನ್ಯ ಹುಡುಗನಿಗೆ ಶ್ರೀಮಂತ ಹುಡುಗಿ ಸಿಕ್ಕಾಗ ಏನಾಗುತ್ತದೆ ಅನ್ನೋದೆ ಕಥೆ. ಮೇ 15ರಂದು ಶೂಟಿಂಗ್ ಶುರುವಾಗಲಿದೆ ಎಂದರು. ನಿರ್ಮಾಪಕರಾದ ಹರೀಶ್ ಮಾತಾನಾಡಿ, ಬಹಳ ಸಂತೋಷ ಆಗಿದೆ. ಧನಂಜಯ್ ಅಣ್ಣ ಬಂದಿರುವುದು ಖುಷಿಕೊಟ್ಟಿದೆ. ಅವರು ಯುವಕರಿಗೆ ಎಷ್ಟು ಪ್ರೇರಣೆ ಕೊಡುತ್ತಾರೆ ಎಂದರೆ ನಿಜ ಬೆಲೆ ಕಟ್ಟಲು ಆಗುವುದಿಲ್ಲ. ಎಲ್ಲವೂ ಹೊಸಮುಖ. ಧನಂಜಯ್ ಅಣ್ಣ, ಸುರೇಶ್ ಅಣ್ಣ, ಅಜಯ್ ಅಣ್ಣ ಮಾರ್ಗದರ್ಶನದಲ್ಲಿ ಹೋಗುತ್ತೇವೆ. ಒಳ್ಳೆ ಯುವಕರಿದ್ದಾರೆ. ಅವರ ಭವಿಷ್ಯ ಈ ಚಿತ್ರದಲ್ಲಿದೆ. ಈ ಸಿನಿಮಾ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.

    ನಟ ಅಭಿಲಾಷ್ (Abhilash), ತುಂಬಾ ಎಮೋಷನಲ್ ಮೂಮೆಂಟ್. ಇವತ್ತು ಕಷ್ಟಪಟ್ಟು ಇಲ್ಲಿ ಕೂತಿದ್ದೇನೆ. ಇದಕ್ಕೆ ಮೂಲ ಕಾರಣ ನಿರ್ಮಾಪಕರು. ನನ್ನ ಒದ್ದಾಟಗಳನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಇವರೇ ನನ್ನ ಅನ್ನದಾತರು. ಧನಂಜಯ್ ಅಣ್ಣ ಹೇಳಿಕೊಟ್ಟ ಮಾರ್ಗದರ್ಶನಲ್ಲಿ ನಾನು ನಡೆಯುತ್ತಿದ್ದೇವೆ. ಈಗ ಅವರು ನನ್ನ ಚಿತ್ರಕ್ಕೆ ಹಾರೈಸಿರುವುದು ಖುಷಿಕೊಟ್ಟಿದೆ ಎಂದರು. ರಂಗಭೂಮಿ ಹಿನ್ನೆಲೆ ಹೊಂದಿರುವ ನಟ ಅಭಿಲಾಶ್​ ‘ಮಾರ್ಗರೇಟ್​ ಲವರ್​ ಆಫ್​​ ರಾಮಾಚಾರಿ’ ಸಿನಿಮಾ ಮೂಲಕ ಹೀರೋ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಕೆಜಿಎಫ್​’, ‘ಲವ್​ ಮಾಕ್ಟೇಲ್​’, ‘ಬಡವ ರಾಸ್ಕಲ್​’, ‘ಗುರುದೇವ್​ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಅಭಿಲಾಶ್​  ಗುರುತಿಸಿಕೊಂಡಿದ್ದಾರೆ. ನಾಗರಹಾವು ಸಿನಿಮಾದಲ್ಲಿ ಪಾತ್ರಗಳನ್ನು ಹೋಲುವ ರೀತಿಯ ಹೆಸರುಗಳನ್ನೇ ‘ಮಾರ್ಗರೇಟ್​ ಲವರ್​ ಆಫ್​ ರಾಮಾಚಾರಿ’ ಸಿನಿಮಾದಲ್ಲಿಯೂ ಇಡಲಾಗಿದೆ.

    ಅಭಿಲಾಶ್​ ​ರಾಮಾಚಾರಿ ಅಲಿಯಾಸ್​ ರಾಮು ಎಂಬ ಪಾತ್ರ ಮಾಡಲಿದ್ದಾರೆ. ನಟಿ ಸೋನಲ್​ ಮೊಂಥೆರೋ  (Sonal Monthero) ಮೀರಾ ರಾಘವ್​ ರಾಮ್​ ಅಲಿಯಾಸ್​ ಮ್ಯಾಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್​ ಶೆಟ್ಟಿ ಜಯಂತ್​ ಅಲಿಯಾಸ್​ ಜಲೀಲಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ನಟರಾದ ಅವಿನಾಶ್​ ಮತ್ತು ರವಿಶಂಕರ್​ ಮುಂತಾದವರು ಕೂಡ ನಟಿಸುತ್ತಿದ್ದಾರೆ. ವನಿತಾ ಎಚ್​​.ಎನ್​. ಅವರ ‘ನಿಹಾಂತ್​ ಪ್ರೊಡಕ್ಷನ್ಸ್​’ ಮೂಲಕ ‘ಮಾರ್ಗರೇಟ್​ ಲವರ್​ ಆಫ್​ ರಾಮಾಚಾರಿ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ವಾಸುಕಿ ವೈಭವ್​ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಮಾರ್ಗರೇಟ್​ ಲವರ್​ ಆಫ್​​ ರಾಮಾಚಾರಿ’ ಮುಹೂರ್ತ ನೆರವೇರಿದ್ದು, ಮೇ 15ರಿಂದು ಚಿತ್ರದುರ್ಗದಲ್ಲಿ ಶೂಟಿಂಗ್ ಶುರುವಾಗಲಿದೆ.

  • ಚಂದನ್ ಶೆಟ್ಟಿ ಜೊತೆಗೆ ‘ಮಾಯಗಾರ’ನ ಇಷ್ಟ ಪಡುತ್ತಿದ್ದಾರಂತೆ ಬೇಬಿ ಡಾಲ್ ನಿವೇದಿತಾ ಗೌಡ

    ಚಂದನ್ ಶೆಟ್ಟಿ ಜೊತೆಗೆ ‘ಮಾಯಗಾರ’ನ ಇಷ್ಟ ಪಡುತ್ತಿದ್ದಾರಂತೆ ಬೇಬಿ ಡಾಲ್ ನಿವೇದಿತಾ ಗೌಡ

    ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳನ್ನು ಎಂಗೇಜ್ ಆಗಿಡುವ ನಿವೇದಿತಾ ಗೌಡ ಹೊಸ ಹೊಸ ಸುದ್ದಿಗಳನ್ನು ಕೊಡುತ್ತಲೇ ಇರುತ್ತಾರೆ. ಅದರಲ್ಲೂ ರೀಲ್ಸ್ ನಲ್ಲಿ ಹೊಸ ಹಳೆ ಹಾಡಿಗೆ ಹೆಜ್ಜೆ ಹಾಕುತ್ತಾ, ಅಭಿಮಾನಿಗಳನ್ನು ರಂಜಿಸುತ್ತಾರೆ. ಈ ಸಲವೂ ಅವರು ವಿಶೇಷ ಹಾಡಿಗೆ ಸೊಂಟ ಬಳಕುಸಿದ್ದು, ಈ ವಿಡಿಯೋ ರಿಪೀಟ್ ಆದರೂ, ನನ್ನಿಷ್ಟದ ಹಾಡು ಎಂದು ಬರೆದುಕೊಂಡಿದ್ದಾರೆ.

    ರವಿಚಂದ್ರನ್ ಅಭಿನಯದ ರಾಮಾಚಾರಿ ಸಿನಿಮಾದ ‘ಆಕಾಶದಾಗೆ ಯಾರೋ ಮಾಯಗಾರನೋ’ ಹಾಡೆಂದರೆ ನಿವೇದಿತಾ ಗೌಡ ಅವರಿಗೆ ಅಚ್ಚುಮೆಚ್ಚಂತೆ. ಹಾಗಾಗಿಯೇ ರಾಮಚಾರಿಯ ಹುಡುಗಿ ಮಾಲಾಶ್ರೀ ಅವರ ಗೆಟಪ್ ನಲ್ಲೇ ಕಾಸ್ಟ್ಯೂಮ್ ಹಾಕಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಮಾಯಾಗಾರನ ಹಾಡು ಯಾವಾಗಲೂ ನನಗೆ ಇಷ್ಟವೆಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    1991ರಲ್ಲಿ ಬಿಡುಗಡೆಯಾದ ರಾಮಾಚಾರಿಯ ಬಹುತೇಕ ಹಾಡುಗಳು ಹಿಟ್. ಅದರಲ್ಲೂ ಮನೋ ಮತ್ತು ಎಸ್.ಜಾನಕಿ ಅವರ ಧ್ವನಿಯಲ್ಲಿ ಮೂಡಿ ಬಂದ  ಆಕಾಶದಾಗೆ ಯಾರೋ ಮಾಯಗಾರನೋ ಹಾಡು ಎವರ್ ಗ್ರೀನ್. ಈ ಹಾಡಿನಲ್ಲಿ ರವಿಚಂದ್ರನ್ ಮತ್ತು ಮಾಲಾಶ್ರೀ ಕಂಡ ರೀತಿಯು ಸೊಗಸು ಸೊಗಸು. ಈ ಕಾರಣಕ್ಕಾಗಿಯೇ ನಿವೇದಿತಾ ಗೌಡ ಅವರಿಗೂ ಈ ಹಾಡು ಇಷ್ಟವಂತೆ.

    Live Tv
    [brid partner=56869869 player=32851 video=960834 autoplay=true]

  • ರಾಮಸ್ವಾಮಿ ಸಿಕ್ಕಾಯಿತು, ರಮ್ಯಾ ಸಿಗಬೇಕಿದೆ

    ರಾಮಸ್ವಾಮಿ ಸಿಕ್ಕಾಯಿತು, ರಮ್ಯಾ ಸಿಗಬೇಕಿದೆ

    ಚಿ.ಗುರುದತ್ ನಿರ್ದೇಶನದಲ್ಲಿ ಮೂಡಿ ಬರಲಿರುವ ‘ರಮ್ಯಾ ರಾಮಸ್ವಾಮಿ’ ಸಿನಿಮಾದ ಕೆಲವು ಅಪ್‍ಡೇಟ್ ಹೊರ ಬಿದ್ದಿದೆ. ಈಗಾಗಲೇ ರಾಮಸ್ವಾಮಿಯ ಆಯ್ಕೆಯಾಗಿದ್ದು, ರಮ್ಯಾ ಪಾತ್ರಧಾರಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಕನ್ನಡ ಸಿನಿಮಾ ರಂಗದ ಎವರ್‍ಗ್ರೀನ್ ರಾಮಾಚಾರಿ ಆಗಿರುವ ರವಿಚಂದ್ರನ್ ಅವರು ರಾಮಸ್ವಾಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಕನ್ನಡದ ಹೆಸರಾಂತ ನಟಿಯೇ ರಮ್ಯಾ ಪಾತ್ರವನ್ನು ಮಾಡಲಿದ್ದಾರಂತೆ. ಆ ಸ್ಟಾರ್ ನಟಿ ಯಾರು ಅನ್ನುವ ಹುಡುಕಾಟ ಸದ್ಯಕ್ಕೆ ನಡೆದಿದೆ. ಇದನ್ನೂ ಓದಿ : ಜಗತ್ತಿನ ಅತ್ಯಂತ ದುಬಾರಿ ನಟನಿಗೆ ಗಾಳ ಹಾಕಿದ ರಾಜಮೌಳಿ

    ನಿರ್ದೇಶಕ ಚಿ.ಗುರುದತ್ ಮತ್ತು ರವಿಚಂದ್ರನ್ ನಲವತ್ತು ವರ್ಷಗಳ ಸ್ನೇಹಿತರು. ಈ ಸ್ನೇಹವೇ ಇಂದು ಸಿನಿಮಾ ಮಾಡಲು ಪ್ರೇರೇಪಿಸಿದೆ. ಜನಾರ್ದನ್ ಮಹರ್ಷಿ ಅವರು ಈ ಸಿನಿಮಾಗಾಗಿ ಕಥೆ ಬರೆದಿದ್ದು, ಭಾವನಾತ್ಮಕ ಅಂಶಗಳ ಜತೆಗೆ ನಗಿಸುತ್ತಲೇ ಈ ಸಿನಿಮಾ ಸಾಗಲಿದೆ ಎಂದಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ರಾಮಸ್ವಾಮಿ ಪಾತ್ರದಷ್ಟೇ ರಮ್ಯಾ ಪಾತ್ರಕ್ಕೂ ಮಹತ್ವವಿದೆಯಂತೆ. ಈ ಎರಡೇ ಪಾತ್ರಗಳ ಸುತ್ತ ಇಡೀ ಸಿನಿಮಾ ಹೆಣೆಯಲಾಗಿದೆಯಂತೆ. ಹಾಗಾಗಿ ಸ್ಟಾರ್ ನಟಿಯೇ ಈ ಪಾತ್ರಕ್ಕೆ ಸೂಕ್ತ ಎನ್ನುವುದು ನಿರ್ದೇಶಕರು ಮಾತು. ಈಗಾಗಲೇ ಇಬ್ಬರು ನಾಯಕಿಯರ ಜತೆ ಮಾತುಕತೆ ಕೂಡ ನಡೆದಿದೆ ಎನ್ನಲಾಗುತ್ತಿದೆ. ನಾಯಕಿಯ ಆಯ್ಕೆ ಮಾಡಿಕೊಂಡೇ ಚಿತ್ರೀಕರಣಕ್ಕೆ ಹೋಗಲಿದೆ ಚಿತ್ರತಂಡ. ಮೈತ್ರಿ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಬಂಡವಾಳ ಹೂಡಿರುವ ಎನ್.ಎಸ್.ರಾಜಕುಮಾರ್ ಈ ಸಿನಿಮಾದ ನಿರ್ಮಾಪಕರು. ಏಪ್ರಿಲ್ ನಿಂದ ಶೂಟಿಂಗ್ ಶುರುವಾಗಲಿದೆ.