Tag: ರಾಮಲಲ್ಲಾ

  • ಅಯೋಧ್ಯೆ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ

    ಅಯೋಧ್ಯೆ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ

    ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಇಂದು ನಡೆದ ರಾಮಲಲ್ಲಾ (Ram Lalla) ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಲರಾಮನ ದರ್ಶನ ಪಡೆದ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಮಮಂದಿರದ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಿರ್ವಿಘ್ನವಾಗಿ ನೇರವೇರಿದೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಮುಖ ನಾಯಕರು ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗುವ ಮೂಲಕ ಬಾಲರಾಮನ ಪ್ರಾಣಪ್ರತಿಷ್ಠೆಯನ್ನು ಕಣ್ತುಂಬಿಕೊಂಡರು. ಈ ಕಾರ್ಯಕ್ರಮದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದಲ್ಲದೇ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ಮುಕೇಶ್ ಅಂಬಾನಿ ದೇಣಿಗೆ ನೀಡಿರುವ ಕುರಿತು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಮಗಳು ಇಶಾ ಮತ್ತು ಅಳಿಯ ಆನಂದ್ ಪಿರಾಮಲ್, ಪುತ್ರರಾದ ಆಕಾಶ್ ಮತ್ತು ಅನಂತ್, ಸೊಸೆ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಭಾಗಿಯಾಗಿದ್ದರು. ಇದನ್ನೂ ಓದಿ: ಅಯೋಧ್ಯೆಯಿಂದ ಹಿಂದಿರುಗಿದ ನಂತರ ನನ್ನ ಮೊದಲ ನಿರ್ಧಾರ – ಹೊಸ ಯೋಜನೆ ಘೋಷಿಸಿದ ಮೋದಿ

    ಬಾಲರಾಮನ ಪ್ರಾಣಪ್ರತಿಷ್ಠೆ ಕುರಿತು ಮಾತನಾಡಿದ ಅಂಬಾನಿ, ಇಂದು ಭಗವಾನ್ ರಾಮ ಆಗಮಿಸಿದ್ದಾರೆ. ಜನವರಿ 22 ಇಡೀ ದೇಶಕ್ಕೆ ರಾಮ ದೀಪಾವಳಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕುರಿತು ಮಾತನಾಡಿದ ನೀತಾ ಅಂಬಾನಿ, ‘ಇದೊಂದು ಐತಿಹಾಸಿಕ ದಿನ’ ಎಂದು ಸಂತಸ ವ್ಯಕ್ತಪಡಿಸಿದರು. ಇನ್ನು ವಿಧಿವಿಧಾನಗಳನ್ನು ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸಮಾರಂಭವು ಹೊಸ ಯುಗದ ಆಗಮನವನ್ನು ಸೂಚಿಸುತ್ತದೆ ಎಂದರು. ಇದನ್ನೂ ಓದಿ: ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ

  • ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

    ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

    ಅಯೋಧ್ಯೆ: ಜಗವೇ ಕಾತರದಿಂದ ಕಾಯುತ್ತಿದ್ದ ಅಯೋಧ್ಯೆಯ (Ayodhya) ಶ್ರೀರಾಮನ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಂಡಿದೆ. ನಾಳೆಯಿಂದ (23 ಜನವರಿ 2024) ರಾಮಮಂದಿರದಲ್ಲಿ (Ram Mandir) ಭಕ್ತರು ಬಾಲರಾಮನ ದರ್ಶನ ಪಡೆದು ಕಣ್ತುಂಬಿಕೊಳ್ಳಬಹುದು.

    ಬೆಳಗ್ಗೆ 7ರಿಂದ 11.30ರವರೆಗೆ:
    ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದರ್ಶನ ಪಡೆಯಲು ನೀವು ಬೆಳಗಿನ ಹೊತ್ತು ಹೋಗುವವರಾಗಿದ್ದರೆ ಬೆಳಗ್ಗೆ 7ರಿಂದ ದರ್ಶನ ಭಾಗ್ಯ ಸಿಗಲಿದೆ. 7.00 ಗಂಟೆಗೆ ತೆರೆಯುವ ರಾಮನ ಮಂದಿರ 11.30ಕ್ಕೆ ಬಾಗಿಲು ಮುಚ್ಚಲಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ – Photos ನೋಡಿ..

    ಮಧ್ಯಾಹ್ನ 2ರಿಂದ ರಾತ್ರಿ 7.00ರವರೆಗೆ:
    ಮಧ್ಯಾಹ್ನ ನಂತರದ ರಾಮಲಲ್ಲಾನ (Ram Lalla) ದರ್ಶನಕ್ಕೂ ಸಮಯ ನಿಗದಿಯಾಗಿದ್ದು ಭಕ್ತರು ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 7.00 ಗಂಟೆಯವರೆಗೆ ಬಾಲರಾಮನ ದರ್ಶನ ಪಡೆಯಬಹುದು. ಜೊತೆಗೆ ಅಕ್ಕಪಕ್ಕದಲ್ಲಿರುವ ಹನುಮಾನ್‌ಗಡಿ, ಸರಯೂ ನದಿ (Sarayu River) ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಇನ್ಮುಂದೆ ಕರ್ಫ್ಯೂ ಇರೋದಿಲ್ಲ, ಗುಂಡಿನ ಸದ್ದು ಕೇಳೋದಿಲ್ಲ: ಯೋಗಿ ಆದಿತ್ಯನಾಥ್

    500 ವರ್ಷಗಳ ಕಾತರದ ಕಾಯುವಿಕೆ ಬಳಿಕ ಇಂದು ಭಗವಾನ್ ಶ್ರೀರಾಮ ರಾಮಮಂದಿರಕ್ಕೆ ಬಾಲರಾಮನ ಆಗಮನವಾಗಿದೆ. ಇಂದು ಬೆಳಗ್ಗೆ ನಡೆದ ಶುಭ ಸಮಾರಂಭದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಕಾರ್ಯ ನಡೆಯಿತು. ಈ ಸಮಾರಂಭದಲ್ಲಿ ಯಜಮಾನನಾಗಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ರಾಜಕಾರಣಿಗಳು, ಚಿತ್ರರಂಗ, ಕ್ರೀಡಾಕೂಟ, ಸಾಧು ಸಂತರು, ಸ್ವಾಮೀಜಿಗಳು ಹಾಗೂ ಇನ್ನೂ ಕೆಲವು ವಿವಿಐಪಿ ಗಣ್ಯರಿಗೆ ರಾಮಲಲ್ಲಾ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ದೇಶ ಗುಲಾಮಗಿರಿಯಿಂದ ಮುಕ್ತವಾಗಿದೆ, ಸಾವಿರಾರು ವರ್ಷಗಳ ನಂತರವೂ ಈ ಕ್ಷಣ ನೆನಪಿಸಿಕೊಳ್ತಾರೆ: ಮೋದಿ

  • ರಾಮಲಲ್ಲಾ ಆಸೀನರಾದ ತಕ್ಷಣ ಎಲ್ಲಾ ಕಷ್ಟಗಳು ಕೊನೆಗೊಳ್ತವೆ: ಆಚಾರ್ಯ ಸತ್ಯೇಂದ್ರ ದಾಸ್

    ರಾಮಲಲ್ಲಾ ಆಸೀನರಾದ ತಕ್ಷಣ ಎಲ್ಲಾ ಕಷ್ಟಗಳು ಕೊನೆಗೊಳ್ತವೆ: ಆಚಾರ್ಯ ಸತ್ಯೇಂದ್ರ ದಾಸ್

    ಅಯೋಧ್ಯೆ: ಬರೋಬ್ಬರಿ 500 ವರ್ಷಗಳ ಕನಸು ನನಸಾಗುತ್ತಿದೆ. ಇಂದು ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ  (Pran Prathistha ceremony) ನಡೆಯಲಿದೆ. ಅಯೋಧ್ಯೆಯಲ್ಲಿನ ತಯಾರಿಗಳ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ, ರಾಮಭಕ್ತರು ಬಯಸಿದ್ದು ಇಂದು ನೆರವೇರುತ್ತಿದೆ. ರಾಮಲಲ್ಲಾ ಆಸೀನರಾದ ತಕ್ಷಣ ಎಲ್ಲಾ ಕಷ್ಟಗಳು ಕೊನೆಗೊಳ್ಳುತ್ತವೆ ಎಂದು ತಿಳಿಸಿದ್ದಾರೆ.

    ಕೋಟ್ಯಂತರ ಭಾರತೀಯರ ಕಂಗಳು ಶ್ರೀರಾಮನ ವೈಭವವನ್ನ ಕಣ್ತುಂಬಿಕೊಳ್ಳಲು ಕಾಯುತ್ತಿವೆ. ಕಾರ್ಯಕ್ರಮದ ಯಜಮಾನ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಮ್‌ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪೂಜೆ ನೆರವೇರಿಸಲಿದ್ದಾರೆ. ಮಂದಿರ ಉದ್ಘಾಟನೆಗೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮುಗಿಸಿ ಬಳಿಕ ಅಲ್ಲಿಂದ ರಾಮ ಮಂದಿರಕ್ಕೆ ಬರಲಿದ್ದಾರೆ. ಇದನ್ನೂ ಓದಿ: ತೀವ್ರ ಚಳಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಎಲ್‌.ಕೆ ಅಡ್ವಾಣಿ ಗೈರು

    ಮಂದಿರದಿಂದ 3 ಕಿಲೋ ಮೀಟರ್ ದೂರದಲ್ಲಿರುವ ಸರಯೂ ನದಿಯಲ್ಲಿ ಮೋದಿ ಸ್ನಾನಕ್ಕಾಗಿಯೇ ವಿಶೇಷ ಚೌಕಿ ನಿರ್ಮಾಣ ಮಾಡಲಾಗಿದೆ. ಸತತ 11 ದಿನಗಳ ಕಾಲ `ಯಮನಿಮಯ’ ಅನುಷ್ಠಾನದಲ್ಲಿದ್ದ ಮೋದಿ, ನಾಸಿಕ್, ಲೇಪಾಕ್ಷಿ, ಗುರುವಾಯೂರು, ಕೋದಂಡರಾಮ, ರಾಮಸೇತುವಿನವರೆಗೆ ರಾಮಯಾತ್ರೆ ಕೈಗೊಂಡಿದ್ದರು. ಇವತ್ತು 5 ಗಂಟೆಗಳ ಕಾಲ ಅಯೋಧ್ಯೆಯಲ್ಲಿಯೇ ಮೋದಿ ಕಾಲ ಕಳೆಯಲಿದ್ದಾರೆ.

  • 3,000 ಮಹಿಳೆಯರಿಂದ 108 ಬಾರಿ ಹನುಮಾನ್ ಚಾಲೀಸಾ ಪಠಣ – ಶ್ರೀರಾಮನ ಕೃಪೆಗೆ ಪಾತ್ರರಾದ ಬೆಳಗಾವಿ ಮಹಿಳೆಯರು

    3,000 ಮಹಿಳೆಯರಿಂದ 108 ಬಾರಿ ಹನುಮಾನ್ ಚಾಲೀಸಾ ಪಠಣ – ಶ್ರೀರಾಮನ ಕೃಪೆಗೆ ಪಾತ್ರರಾದ ಬೆಳಗಾವಿ ಮಹಿಳೆಯರು

    – ಒಂದೇ ರೀತಿಯ ವೇಷಭೂಷಣ ಧರಿಸಿ ಮಂತ್ರಪಠಣ

    ಬೆಳಗಾವಿ: ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ (RamLalla) ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಶುರುವಾಗಿದೆ. ವಿಶ್ವದಾದ್ಯಂತ ನೆಲೆಸಿರುವ ರಾಮಭಕ್ತರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿಯೂ ವಿಶಿಷ್ಟ ರೀತಿಯಲ್ಲಿ ಪ್ರಾಣಪ್ರತಿಷ್ಠೆಯನ್ನು ಕೊಂಡಾಡಲು ಸಜ್ಜಾಗಿದ್ದಾರೆ.

    ಈ ನಡುವೆ ಬೆಳಗಾವಿಯ (Belagavi) ಗೋಕಾಕ್‌ ನಗರದ ಮಹಾಲಕ್ಷ್ಮಿ ದೇವಿ ಕಲ್ಯಾಣ ಮಂಟಪದಲ್ಲಿ ಸುಮಾರು 3,000 ಮಹಿಳೆಯರು ಏಕಕಾಲಕ್ಕೆ 108 ಬಾರಿ ಹನುಮಾನ್ ಚಾಲೀಸಾ (Hanuman Chalisa) ಪಠಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕೆ ಹೋಗಲ್ಲ.. ನಾವು ಅಣ್ಣಮ್ಮ, ಮಾರಮ್ಮ, ಭೂತ ಪೂಜೆ ಮಾಡೋರು.. ಅಲ್ಲಿಗೆ ಹೋಗ್ತೀವಿ: ಬಿ.ಕೆ.ಹರಿಪ್ರಸಾದ್

    ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸೇವಿಕಾ ಸಮಿತಿಯಿಂದ ಆಯೋಜಿಸಲಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಒಂದೇ ರೀತಿಯ ವೇಷಭೂಷಣ ಧರಿಸಿ, ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದು, 108 ಬಾರಿ ಹನುಮಾನ್ ಚಾಲೀಸಾ ಮಂತ್ರಪಠಣ ಮಾಡಿದ್ದಾರೆ. ಈ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಶೋಯೆಬ್‌ ಮಲಿಕ್‌ರಿಂದ ವಿಚ್ಛೇದನ ಪಡೆದಿದ್ದಾರೆ – ಡಿವೋರ್ಸ್ ವದಂತಿಗೆ ತೆರೆಎಳೆದ ಸಾನಿಯಾ ಕುಟುಂಬ

    ಯಾದಗಿರಿಯಲ್ಲಿ ಮಕ್ಕಳಿಗೆ ಶ್ರೀರಾಮನ ವೇಷ ತೊಡಿಸಿ ಸಂಭ್ರಮ: ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆ ಯಾದಗಿರಿಯಲ್ಲಿ ಪುಟ್ಟ ಮಕ್ಕಳು ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ವೇಷ ಧರಿಸಿ ಭಕ್ತಿಯಪರಕಾಷ್ಠೆ ಮೆರೆದಿದ್ದಾರೆ. ಪೋಷಕರು ಮಕ್ಕಳಿಗೆ ಶ್ರೀರಾಮ ಹಾಗೂ ಸೀತೆಯ ವೇಷಧಾರಿಗಳನ್ನಾಗಿ ಮಾಡಿ ಮಕ್ಕಳಲ್ಲಿ ಶ್ರೀರಾಮ ಹಾಗೂ ಸೀತಾಮಾತೆಯನ್ನು ಕಂಡು ಸಂತಸಗೊಂಡರು. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗಾಗಿ ಅರ್ಧದಿನ ರಜೆ ಘೋಷಿಸಿದ್ದ AIIMS – ಒಂದು ದಿನದ ನಂತ್ರ ಆದೇಶ ವಾಪಸ್‌! 

  • ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್‌ – ಜೈ ಶ್ರೀರಾಮ್‌ ಘೋಷಣೆ

    ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್‌ – ಜೈ ಶ್ರೀರಾಮ್‌ ಘೋಷಣೆ

    ಅಯೋಧ್ಯೆ (ರಾಮಮಂದಿರ): ಜನವರಿ 22 ರಂದು ಅಯೋಧ್ಯೆಯ (Ayodhya Ram Mandir) ರಾಮಮಂದಿರದಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾಪನೆ’ ಮಹೋತ್ಸವ ಜರುಗಲಿದೆ. ಈಗಾಗಲೇ ರಾಮಮಂದಿರದ ಗರ್ಭಗುಡಿಯಲ್ಲಿ ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ವಿರಾಜಮಾನವಾಗಿದೆ. ಬಾಲರಾಮನ ಪೂರ್ಣ ಭಂಗಿಯ ವಿಗ್ರಹದ ಫೋಟೋ ಎಲ್ಲೆಡೆ ವೈರಲ್‌ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ (Ram Lalla Idol) ವಿಗ್ರಹದ ದಿವ್ಯ ದರ್ಶನವೇ ಆಗಿದೆ. ‘ಜೈ ಶ್ರೀರಾಮ್‌’ ಘೋಷಣೆ ಮೊಳಗುತ್ತಿದೆ.

    ರಾಮಲಲ್ಲಾ ವಿಗ್ರಹದ ಫೋಟೋ ವೈರಲ್‌
    ಶುಕ್ರವಾರ ಬೆಳಗ್ಗೆ ನಿಂತ ಭಂಗಿಯಲ್ಲಿರುವ ರಾಮಲಲ್ಲಾ ವಿಗ್ರಹದ ಮೊದಲ ಫೋಟೋವನ್ನು ಹಂಚಿಕೊಳ್ಳಲಾಯಿತು. ವಿಗ್ರಹವನ್ನು ಬಿಳಿವಸ್ತ್ರದಿಂದ ಮುಚ್ಚಲಾಗಿತ್ತು. ನಂತರ ಕಣ್ಣಿಗಷ್ಟೇ ಬಟ್ಟೆ ಕಟ್ಟಿರುವ ರಾಮಲಲ್ಲಾ ವಿಗ್ರಹದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದವು. ಈಗ ಹಲವು ವಿಶೇಷತೆ ಹೊಂದಿರುವ ಪೂರ್ಣ ವಿಗ್ರಹದ ಚಿತ್ರಗಳು ವೈರಲ್‌ ಆಗುತ್ತಿವೆ. ಇದನ್ನೂ ಓದಿ: ಅಯೋಧ್ಯೆಯ ಬಾಲರಾಮನ ವಿಗ್ರಹದ ವಿಶೇಷತೆ ಏನು..?

    ಫೇಸ್‌ಬುಕ್‌, ಎಕ್ಸ್‌ ಖಾತೆ, ವಾಟ್ಸಪ್‌ ಸ್ಟೇಟಸ್‌ನಲ್ಲಿ ಮಿಂಚು
    ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ರಾಮಲಲ್ಲಾ ವಿಗ್ರಹದ ಫೋಟೋಗಳು ರಾರಾಜಿಸುತ್ತಿವೆ. ರಾಜಕೀಯ ನಾಯಕರು, ರಾಮಭಕ್ತರ ಫೇಸ್‌ಬುಕ್‌, ಎಕ್ಸ್‌ ಖಾತೆಗಳು ಹಾಗೂ ವಾಟ್ಸಪ್‌ ಸ್ಟೇಟಸ್‌ಗಳಲ್ಲೂ ಬಾಲರಾಮ ಮಿಂಚುತ್ತಿದ್ದಾನೆ. ಎಲ್ಲರೂ ‘ಜೈ ಶ್ರೀರಾಮ್‌’ ಘೋಷವಾಕ್ಯವನ್ನು ಚಿತ್ರದೊಂದಿಗೆ ಹಂಚಿಕೊಂಡಿದ್ದಾರೆ.

    ದಶಕಗಳ ಕನಸು ಈಗ ನನಸಾಗಿದೆ. ಪ್ರಭು ರಾಮಲಲ್ಲಾ ಅವರ ಮೊದಲ ನೋಟ. ಜೈ ಶ್ರೀ ರಾಮ್ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ರಾಮಲಲ್ಲಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್‌

    ಶ್ರೀರಾಮ ಜಯ ರಾಮ ಜಯ ಜಯ ರಾಮ! ಲಕ್ಷಾಂತರ ಜನರ ಆಕಾಂಕ್ಷೆಗಳು, ಶತಮಾನಗಳ ಹಂಬಲ, ಅಂತಿಮವಾಗಿ ಪ್ರಭು ರಾಮಲಲ್ಲಾ ಅವರ ದಿವ್ಯ ದರ್ಶನ! ಜೈ ಶ್ರೀ ರಾಮ್ ಎಂದು ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಅವರು ಎಕ್ಸ್‌ ಖಾತೆ ಬರೆದುಕೊಂಡಿದ್ದಾರೆ.

    ನಾವು 500 ವರ್ಷಗಳಿಂದ ತಾಳ್ಮೆಯಿಂದ ಕಾಯುತ್ತಿದ್ದೇವೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಮುಂದಿನ 50 ಗಂಟೆಗಳು 500 ವರ್ಷಗಳಂತೆ ಗೋಚರವಾಗುತ್ತಿದೆ. ಈ ಧಾರ್ಮಿಕ ಉತ್ಸಾಹ ಮತ್ತು ಜೀವಮಾನದ ಘಟನೆಯನ್ನು ವೀಕ್ಷಿಸಲು ನಮ್ಮ ಪೀಳಿಗೆಯು ಅತ್ಯಂತ ಅದೃಷ್ಟಶಾಲಿ ಮತ್ತು ಧನ್ಯವಾಗಿದೆ ಎಂದು ರಾಮಭಕ್ತರು ಬರೆದುಕೊಂಡು ವಿಗ್ರಹದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Ram Mandir: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಹೇಗಿದೆ ನೋಡಿ – Photos

    ರಾಮಲಲ್ಲಾ ವಿಗ್ರಹದ ವಿಶೇಷತೆಯೇನು?
    51 ಇಂಚು ಎತ್ತರವಿರುವ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿಯು ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದೆ. ಬಾಲರಾಮನ ಹಣೆಯ ಮೇಲೆ ತಿಲಕವಿದೆ. ಬಾಲರಾಮ‌ನ ಮೂರ್ತಿಯ ಮೇಲ್ಭಾಗ ಸೂರ್ಯ ವಂಶದ ಶ್ರೀರಾಮಚಂದ್ರನನ್ನು ಬಿಂಬಿಸುವಂತಹ ಸೂರ್ಯದೇವರ ಕೆತ್ತನೆ ಮಾಡಲಾಗಿದೆ. ಬಾಲರಾಮನ ಮೂರ್ತಿ ಚಂದ್ರನ ನಾಚಿಸುವಷ್ಟು ಕಾಂತಿ ಅದ್ಭುತ ಕಳೆಯಲ್ಲಿದೆ. ಬಾಲರಾಮನ ಕಿರೀಟದ ಮೇಲೆ ನರಸಿಂಹ ದೇವರ ಕೆತ್ತನೆ ಇದೆ. ದಶವತಾರ ಬಿಂಬಿಸುವ ಮತ್ಸ್ಯ, ಕೂರ್ಮ, ವರಾಹ, ವಾಮನ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ಬ್ರಹ್ಮ, ಓಂ, ಆದಿಶೇಷ, ಚಕ್ರ ಹಾಗೂ ಈಶ್ವರ ಕೆತ್ತನೆಯು ವಿಗ್ರಹದ ಪ್ರಭಾವಳಿ ಬಲಭಾಗದಲ್ಲಿದೆ. ಇನ್ನು ವಿಗ್ರಹದ ಎಡಭಾಗದ ಪ್ರಭಾವಳಿಯಲ್ಲಿ ಮೇಲ್ಗಡೆ ಶಂಕ, ಗಧೆ, ಸ್ವಸ್ತಿಕ್‌, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕ್ಲಕಿ, ಹಾಗೂ ನೆತ್ತಿನ ಮೇಲೆ ಸೂರ್ಯನಿದ್ದಾನೆ.

     

    View this post on Instagram

     

    A post shared by Sandalwood Times (@sandalwood_times)

    ಗರ್ಭಗುಡಿಯಲ್ಲಿ ರಾಮಲಲ್ಲಾ ವಿರಾಜಮಾನ
    ಈಗಾಗಲೇ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಮಹೋತ್ಸವದ ಪೂರ್ವಭಾವಿ ವಿಧಿವಿಧಾನಗಳು ನಡೆಯುತ್ತಿವೆ. ರಾಮಲಲ್ಲಾ ವಿಗ್ರಹವನ್ನು ಬುಧವಾರ ರಾಮಮಂದಿರಕ್ಕೆ ತರಲಾಯಿತು. ದೇಶದ ನದಿಗಳ ನೀರಿನಿಂದ ವಿಗ್ರಹಕ್ಕೆ ಪವಿತ್ರ ಸ್ನಾನ ಮಾಡಿಸಲಾಯಿತು. ಜೊತೆಗೆ ಔಷಧೀಯ ಗುಣಗಳಿರುವ ಸಸ್ಯಗಳನ್ನು ನೆನೆಸಿರುವ ನೀರಿನಿಂದ ಸ್ವಚ್ಛಗೊಳಿಸಲಾಯಿತು. ಇದನ್ನೂ ಓದಿ: Ayodhya Ram Mandir: ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ

    ಗುರುವಾರ ರಾಮಮಂದಿರದ ಗರ್ಭಗುಡಿಯಲ್ಲಿ ‘ಗಣೇಶ ಪೂಜೆ’ ಮತ್ತು ‘ವರುಣ ಪೂಜೆ’ ನೆರವೇರಿಸಲಾಯಿತು. ನಂತರ ವಿಗ್ರಹವನ್ನು ಗರ್ಭಗುಡಿಯಲ್ಲಿ ವಿರಾಜಮಾನ ಮಾಡಲಾಯಿತು.

  • ಇದು ಇಡೀ ಭಾರತದ ಶ್ರೇಷ್ಠ ಕ್ಷಣ – ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಆಹ್ವಾನ ಪಡೆದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ

    ಇದು ಇಡೀ ಭಾರತದ ಶ್ರೇಷ್ಠ ಕ್ಷಣ – ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಆಹ್ವಾನ ಪಡೆದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ

    ಅಯೋಧ್ಯೆ: ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ (Ram Lalla Pran Pratishtha) ಅಯೋಧ್ಯೆ ನಗರ ಸಿಂಗಾರಗೊಳ್ಳುತ್ತಿದೆ. ದೇಶದ ಮೂಲೆ ಮೂಲೆಯಿಂದ ಗಣ್ಯಾತಿಗಣ್ಯರ ಆಗಮನ ಫಿಕ್ಸ್‌ ಆಗಿದ್ದು, ಅಮಂತ್ರಣ ಪತ್ರಿಕೆ ಹಂಚಿಕೆ ಕಾರ್ಯ ಶುರುವಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಅವರಿಗೂ ಆಹ್ವಾನ ನೀಡಲಾಗಿದೆ. ಈ ಮೂಲಕ ಕ್ರೀಡಾಕ್ಷೇತ್ರದ ಗಮನವನ್ನೂ ಸೆಳೆಯಲಾಗಿದೆ. ಟೀಂ ಇಂಡಿಯಾದ ಉತ್ತಮ ಬೌಲರ್‌ಗಳ ಪೈಕಿ ವೆಂಕಟೇಶ್‌ ಪ್ರಸಾದ್‌ ಸಹ ಒಬ್ಬರು. ಭಾರತದ ಪರ ಆಡಿದ 33 ಟೆಸ್ಟ್‌ ಪಂದ್ಯಗಳಲ್ಲಿ 96 ವಿಕೆಟ್‌ ಹಾಗೂ 161 ಏಕದಿನ ಪಂದ್ಯಗಳಲ್ಲಿ 196 ವಿಕೆಟ್‌ ಪಡೆದು ಸಾಧನೆ ಮಾಡಿರುವುದಲ್ಲದೇ ಏಕದಿನ ವಿಶ್ವಕಪ್‌ ಟೂರ್ನಿಯ ಹಲವು ಪಂದ್ಯಗಳಲ್ಲಿ ದಾಖಲೆಗಳನ್ನ ಮಾಡಿದ್ದಾರೆ.

    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಂದಿರ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಗೆ ಆಹ್ವಾನ ಬಂದಿರುವುದಾಗಿ ಅವರು ತಿಳಿಸಿದ್ದಾರೆ. ಈ ವಿಷಯವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು

    ನನ್ನ ಜೀವಿತಾವಧಿಯಲ್ಲಿ ಶ್ರೀರಾಮಮಂದಿರದ ನಿರ್ಮಾಣವಾಗುವ ಭರವಸೆ ಮತ್ತು ಬಯಕೆ ಇತ್ತು. ಇದು ಎಂತಹ ಕ್ಷಣ. ಜನವರಿ 22ರಂದು ಶಂಕುಸ್ಥಾಪನೆ ಮಾತ್ರ ನಡೆಯುತ್ತಿಲ್ಲ. ಭಾರತದ ಶ್ರೇಷ್ಠ ಕ್ಷಣದಲ್ಲಿ ಪಾಲ್ಗೊಳ್ಳುವ ದೊಡ್ಡ ಅದೃಷ್ಟ ಮತ್ತು ಆಶೀರ್ವಾದ ನನಗೆ ಸಿಕ್ಕಿದೆ. ನನ್ನ ಜೀವಮಾನದಲ್ಲಿಯೂ ಮಾತ್ರವಲ್ಲದೇ ಭಾರತದ ಅತ್ಯಂತ ವಿಶೇಷ ಕ್ಷಣವಿದು. ಆಹ್ವಾನಕ್ಕಾಗಿ ಧನ್ಯವಾದಗಳು. ಜೈ ಶ್ರೀ ರಾಮ್ ಎಂದು ವೆಂಕಟೇಶ್ ಪ್ರಸಾದ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    4000 ಸಂತರಿಗೆ ಆಹ್ವಾನ:
    ಜನವರಿ 22 ರಂದು ಪ್ರಾಣ ಪ್ರತಿಷ್ಠೆಗೆ 4000 ಸಂತರಿಗೆ ಆಹ್ವಾನಿಸಲಾಗಿದ್ದು, ಭಾರತದ ಎಲ್ಲಾ ಸಂಪ್ರದಾಯಗಳ ಸಂತರನ್ನು ಆಹ್ವಾನಿಸಲಾಗಿದೆ. ಅಂಡಮಾನ್ ನಿಕೋಬಾರ್ ಕರಾವಳಿಯಲ್ಲಿ ವಾಸಿಸುವ ಧಾರ್ಮಿಕ ಮುಖಂಡರು, ಜಾರ್ಖಂಡ್‌ನ ಬನವಾಸಿ ಪ್ರದೇಶದ ಧಾರ್ಮಿಕ ಮುಖಂಡರು ಮತ್ತು 125 ಸಂತ ಸಂಪ್ರದಾಯಗಳ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: ಐಷಾರಾಮಿಯಷ್ಟೇ ದುಬಾರಿ ಅಯೋಧ್ಯಾ ಟೆಂಟ್‌ ಹೌಸ್ – ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?

    ಪ್ರಾಣ ತ್ಯಾಗ ಮಾಡಿದ ಕುಟುಂಬಗಳಿಗೆ ಆಹ್ವಾನ:
    ರಾಮ ಮಂದಿರ ಆಂದೋಲನದಲ್ಲಿ ಪ್ರಾಣ ತ್ಯಾಗ ಮಾಡಿದ ರಾಮಭಕ್ತನ ಕುಟುಂಬದ ಸದಸ್ಯರು, ಕೈಗಾರಿಕಾ ಲೋಕದ ಮುಖ್ಯಸ್ಥರು, ತಿರುಪತಿ, ವೈಷ್ಣೋದೇವಿ, ಕಾಶಿ ವಿಶ್ವನಾಥ ದೇಗುಲ ಪ್ರಮುಖರನ್ನು ಪ್ರಾಣ ಪ್ರತಿಷ್ಠೆಗೆ ಆಹ್ವಾನಿಸಲಾಗಿದೆ. 25 ಆರ್‌ಎಸ್‌ಎಸ್ ಕಾರ್ಯಕರ್ತರು, 100 ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಸಿಆರ್‌ಪಿಎಫ್ ಅಧಿಕಾರಿಗಳು ಮತ್ತು ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ:  ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?

    ಟಾಟಾ, ಅಂಬಾನಿ, ಅದಾನಿಗೂ ಆಹ್ವಾನ:
    ಲಾರ್ಸೆನ್ ಟೂಬ್ರೊ ಮುಖ್ಯಸ್ಥರ ಜೊತೆ, ರತನ್ ಟಾಟಾ ಅವರ ಉತ್ತರಾಧಿಕಾರಿ ಚಂದ್ರಶೇಖರನ್, ಅಂಬಾನಿ ಮತ್ತು ಅದಾನಿಗೂ ಆಹ್ವಾನ.

    ಸಿನಿಮಾ, ಕ್ರೀಡೆಯ ಗಣ್ಯರು
    ತಮಿಳು ಚಲನಚಿತ್ರ ನಟ ರಜನಿಕಾಂತ್, ಬ್ಯಾಡ್ಮಿಂಟನ್ ಆಟಗಾರ ಗೋಪಿಚಂದ್, ಗಾಯಕ ಗುರುದಾಸ್ ಮನ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್, ಅರುಣ್ ಗೋವಿಲ್, ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್, ಮಹಾಭಾರತದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಿದ ನಿತೀಶ್ ಭಾರದ್ವಾಜ್, ಚಲನಚಿತ್ರ ಸೆನ್ಸಾರ್ ಮಂಡಳಿಯ ಪ್ರಸೂನ್ ಜೋಶಿಯನ್ನು ಆಹ್ವಾನಿಸಿದ್ದಾರೆ.

  • ಜ.22ಕ್ಕೆ ರಾಮಲಲ್ಲಾನ ಪ್ರತಿಷ್ಠಾಪನೆ- ಮನೆ ಮನೆಗೂ ತಲುಪಲಿದೆ ಅಯೋಧ್ಯೆಯ ಮಂತ್ರಾಕ್ಷತೆ

    ಜ.22ಕ್ಕೆ ರಾಮಲಲ್ಲಾನ ಪ್ರತಿಷ್ಠಾಪನೆ- ಮನೆ ಮನೆಗೂ ತಲುಪಲಿದೆ ಅಯೋಧ್ಯೆಯ ಮಂತ್ರಾಕ್ಷತೆ

    ಬೆಂಗಳೂರು: ಅಯೋಧ್ಯೆಯಲ್ಲಿ (Ayodhye) ರಾಮವೈಭವಕ್ಕೆ ಸಜ್ಜಾಗುತ್ತಿದೆ. ಜನವರಿ 22 ರಂದು ಭವ್ಯ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅಯೋಧ್ಯೆ ನಗರಿಯ ಸಂಭ್ರಮದಲ್ಲಿ ಕರುನಾಡು ಭಾಗಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಮನೆ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ತಲುಪಲಿದೆ.

    ಸಂಘರ್ಷ ಸವಾಲಿನ ಮಧ್ಯೆ ಪುರುಷೋತ್ತಮ ಶ್ರೀರಾಮನ (Ramamandir) ಸಂಭ್ರಮದ ತೇರಿಗೆ ಮುಹೂರ್ತ ನಿಗದಿಯಾಗಿದೆ. ಮುಂದಿನ ವರ್ಷ ಜನವರಿ 22ರಂದು ಭವ್ಯ ಮಂದಿರದಲ್ಲಿ ರಾಮಲಲ್ಲಾನ ಪ್ರಭೆ ಪ್ರಜ್ವಲಿಸಲಿದೆ. ಭವ್ಯ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಈಗ ಶ್ರೀರಾಮ ಭಕ್ತರಿಗೆ ಹಬ್ಬವಿದ್ದಂತೆ. ಕರುನಾಡಿನ ಪ್ರತಿ ಮನೆ ಮನೆಗೂ ಅಯೋಧ್ಯೆಯ ಶ್ರೀರಾಮನ ಸನ್ನಿಧಾನದಿಂದಲೇ ಮಂತ್ರಾಕ್ಷತೆ ತಲುಪಿಸುವ ಕೆಲಸವನ್ನು ವಿಶ್ವಹಿಂದೂ ಪರಿಷತ್ ಮಾಡುತ್ತಿದೆ. ಬೆಂಗಳೂರಿನ ವಿವಿಪುರಂನ ಆಂಜನೇಯನ ದೇಗುಲದಲ್ಲಿ ಕಲಶದಲ್ಲಿ ಮಂತ್ರಾಕ್ಷತೆ, ರಾಮನ ಭಾವಚಿತ್ರ ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ:

    ಡಿಸೆಂಬರ್ 22ರೊಳಗೆ ಮಂತ್ರಾಕ್ಷತೆಯನ್ನು ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿ ಗ್ರಾಮ ಗ್ರಾಮಗಳಿಗೆ ತಲುಪಿಸುವ ಕಾರ್ಯ ನಡೆಯಲಿದೆ. ಇನ್ನು ಪ್ರಾಣ ಪ್ರತಿಷ್ಠಾಪನೆಯ ದಿನ ಸೂರ್ಯಾಸ್ತವಾದ ಮೇಲೆ ಪ್ರತಿ ಮನೆಯಲ್ಲಿ ದೀಪ ಬೆಳಗಿ ದೀಪೋತ್ಸವ ಆಚರಿಸಲು ಸಂಘಟನೆ ಮನವಿ ಮಾಡಿ ಕರಪತ್ರ ಹಂಚಲಿದೆ. ಪ್ರತಿ ಮನೆಗೂ ಆಯೋಧ್ಯೆಯ ಮಂತ್ರಾಕ್ಷತೆ ತಲುಪುವಂತೆ ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧಾರ ಮಾಡಿದೆ. ರಾಮ ಸಂಭ್ರಮಕ್ಕೆ ಎಲ್ಲಡೆ ಪಸರಿಸಲು ಈ ವಿಶಿಷ್ಠ ಪ್ರಯತ್ನವನ್ನು ಮಾಡುತ್ತಿದೆ.

  • ಅಯೋಧ್ಯೆಯಲ್ಲಿ ‘ರಾಮಲಲ್ಲಾ’ ಮೂರ್ತಿಯನ್ನು ಹೊರಲಿದ್ದಾರೆ ಪ್ರಧಾನಿ ಮೋದಿ

    ಅಯೋಧ್ಯೆಯಲ್ಲಿ ‘ರಾಮಲಲ್ಲಾ’ ಮೂರ್ತಿಯನ್ನು ಹೊರಲಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಲೋಕಾರ್ಪಣೆಗೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಅನಾವರಣಗೊಳ್ಳುತ್ತಿವೆ. ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯಿಂದ ಹಿಡಿದು ಪ್ರತಿಯೊಂದರ ಹಂತದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಮುಖ ಪಾತ್ರ ವಹಿಸಲಿದ್ದಾರೆ.

    ರಾಮ ಮಂದಿರ ಲೋಕಾರ್ಪಣೆ 2024ರ ಜನವರಿ 22 ರಂದು ನೆರವೇರಲಿದೆ. ಈ ವೇಳೆ ಸಹಜವಾಗಿಯೇ ಪ್ರಧಾನಿ ಮೋದಿ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಈ ವಿಶೇಷ ದಿನಕ್ಕಾಗಿ ಬಹಳಷ್ಟು ತಯಾರಿಗಳನ್ನು ಈಗಾಗಲೇ ನಡೆಸಲಾಗಿದೆ.

    ರಾಮಮಂದಿರ ಲೋಕಾರ್ಪಣೆಯಂದು ಏನಿರಲಿದೆ?
    ಮಂದಿರಕ್ಕೆ ಮೋದಿ ರಾಮಲಲ್ಲಾ ಮೂರ್ತಿ (Ram Lalla Idol) ಕೊಂಡೊಯ್ಯಲಿದ್ದಾರೆ. ತಾತ್ಕಾಲಿಕ ಮಂದಿರದಿಂದ ರಾಮಮಂದಿರಕ್ಕೆ ಮೆರವಣಿಗೆ ತೆರಳಲಿದೆ. ಪ್ರೋಟೊಕಾಲ್ ನಡುವೆಯೂ 500 ಮೀಟರ್ ಮೋದಿ ಹೆಜ್ಜೆ ಹಾಕಲಿದ್ದಾರೆ. ಗರ್ಭಗುಡಿಯವರೆಗೆ ಮೋದಿ ರಾಮಲಲ್ಲಾ ಮೂರ್ತಿಯನ್ನು ಹೊರಲಿದ್ದಾರೆ. ಇದನ್ನೂ ಓದಿ: ‘5 ವರ್ಷ ನಾನೇ ಸಿಎಂ’ ಹೇಳಿಕೆಯಿಂದ ಯೂಟರ್ನ್ ಹೊಡೆದ ಸಿದ್ದರಾಮಯ್ಯ

    ಪ್ರಧಾನಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಾಥ್ ನೀಡಲಿದ್ದಾರೆ. ಪ್ರಧಾನಿ ಸಮ್ಮುಖದಲ್ಲಿಯೇ ಪ್ರಾಣಪ್ರತಿಷ್ಠಾಪನೆ ಯಜ್ಞ ನಡೆಯಲಿದೆ. ಜನವರಿ 22ರ ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ ಹೋಮ ನಡೆಯಲಿದೆ. ಇದನ್ನೂ ಓದಿ: ವಿವಾಹಿತೆಯರಿಗೆ ವರ್ಷಕ್ಕೆ 12,000 ರೂ. ನೀಡುತ್ತೇವೆ: ‘ಮೋದಿ ಕಿ ಗ್ಯಾರಂಟಿ’ ಘೋಷಿಸಿದ ಅಮಿತ್‌ ಶಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ

    ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ

    – ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಎಲ್ಲಿ?
    – ವಾಲ್ಮೀಕಿ ರಾಮಾಯಣದಲ್ಲಿ ಜಾಗದ ಬಗ್ಗೆ ಉಲ್ಲೇಖ ಇಲ್ಲ
    – ಸ್ಕಂದ ಪುರಾಣದ ಶ್ಲೋಕಕ್ಕೂ ಸ್ಥಳಕ್ಕೆ ತಾಳೆ

    ನವದೆಹಲಿ: ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಾನೆ ಎನ್ನುವುದು ಹಿಂದೂಗಳ ನಂಬಿಕೆ. ಆದರೆ ಅಯೋಧ್ಯೆಯಲ್ಲಿ ಹುಟ್ಟಿದ್ದು ಎಲ್ಲಿ ಎನ್ನುವ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಸ್ಕಂದ ಪುರಾಣದಲ್ಲಿ ಉತ್ತರ ಕಂಡುಕೊಂಡಿದೆ.

    ಹೌದು, 1045 ಪುಟಗಳ ಸುದೀರ್ಘ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪುರಾತತ್ವ ಇಲಾಖೆಯ ಸಾಕ್ಷ್ಯಗಳು, ಬ್ರಿಟಿಷ್ ಮತ್ತು ಭಾರತ ಸರ್ಕಾರದ ಗೆಜೆಟ್‍ಗಳು, ವಿದೇಶಿ ವ್ಯಕ್ತಿಗಳು ಬರೆದ ಗ್ರಂಥಗಳು, ಮೌಖಿಕ ಹೇಳಿಕೆಯ ಜೊತೆಗೆ ಸ್ಕಂದ ಪುರಾಣವನ್ನು ಉಲ್ಲೇಖಿಸಿದೆ.

    40 ದಿನಗಳ ದೀರ್ಘ ವಿಚಾರಣೆಯ ಸಮಯದಲ್ಲಿ ರಾಮ ಅಯೋಧ್ಯೆಯಲ್ಲಿ ಹುಟ್ಟಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ವಾದ ಮಂಡಿಸಿರಲಿಲ್ಲ. 2.77 ಎಕ್ರೆ ವಿವಾದಿತ ಜಾಗದಲ್ಲಿ ರಾಮ ಜನಿಸಿರಲಿಲ್ಲ. ಅಲ್ಲಿ ದೇವಾಲಯ ಕೆಡವಿ ಮಸೀದಿ ನಿರ್ಮಾಣಗೊಂಡಿಲ್ಲ ಎನ್ನುವುದಷ್ಟೇ ಅವರ ವಾದವಾಗಿತ್ತು. ಆದರೆ ರಾಮಲಲ್ಲಾ ಪರ ವಾದ ಮಂಡಿಸಿದ ವಕೀಲರು ವಿವಾದಿತ ಸ್ಥಳದಲ್ಲೇ ರಾಮ ಜನಿಸಿದ್ದ. ಹೀಗಾಗಿ ಈ ಜಾಗ ನಮಗೆ ನೀಡಬೇಕು ಎಂದು ವಾದಿಸಿದ್ದರು.  ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

    ಪುರಾತತ್ವ ಇಲಾಖೆ ಹಿಂದೂ ದೇವಾಲಯ ಕೆಡವಿ ಮಸೀದಿ ನಿರ್ಮಾಣವಾಗಿದೆ. ಹಿಂದೂ ದೇವಾಲಯಗಳಲ್ಲಿ ಬಳಸುವ ಕಲ್ಲು, ಪ್ರಾಣಿಗಳು ಸಿಕ್ಕಿವೆ ಎಂದು ಆಧಾರ ನೀಡಿದರೂ ವಿವಾದಿತ ಜಾಗದಲ್ಲೇ ರಾಮ ಜನಿಸಿದ್ದಾನೆ ಎನ್ನುವುದಕ್ಕೆ ಆಧಾರ ಸಿಗದ ಕಾರಣ ಪ್ರಕರಣ ಜಟಿಲವಾಗಿತ್ತು. ಅಷ್ಟೇ ಅಲ್ಲದೇ ವಿವಾದಿತ ಸ್ಥಳದಲ್ಲಿ ರಾಮ ಜನಿಸಿಲ್ಲ ಎನ್ನುವುದು ಸುನ್ನಿ ವಕ್ಫ್ ಬೋರ್ಡ್ ವಾದವಾಗಿದ್ದರಿಂದ ಹಾಗಾದರೆ ರಾಮ ಜನಿಸಿದ್ದು ಎಲ್ಲಿ ಎನ್ನುವ ಕಠಿಣ ಪ್ರಶ್ನೆ ಎದ್ದಿತ್ತು.

     

    ಅಯೋಧ್ಯೆಯಲ್ಲಿ ರಾಮ ಜನಿಸಿಯೇ ಇಲ್ಲ ಎಂದು ವಾದಿಸಿದ್ದರೆ ಪ್ರಕರಣ ಬೇರೆ ರೀತಿಯ ತಿರುವು ಪಡೆದುಕೊಳ್ಳುತಿತ್ತು. ಆದರೆ ಇಲ್ಲಿ ವಿವಾದಿತ ಸ್ಥಳದಲ್ಲಿ ರಾಮ ಜನಿಸಿಲ್ಲ ಎನ್ನುವ ವಾದಕ್ಕೆ ಮಾತ್ರ ಆಕ್ಷೇಪ ಇದ್ದ ಕಾರಣ ರಾಮ ಅಯೋಧ್ಯೆಯಲ್ಲೇ ಜನಿಸಿದ್ದ ಎನ್ನುವ ಅಂಶ ದೃಢವಾಯಿತು.

    ಈಗ ವಿವಾದಕ್ಕೆ ಕಾರಣವಾಗಿರುವ ಜಾಗದಲ್ಲೇ ರಾಮ ಹುಟ್ಟಿದ್ದಾನೆ ಎಂದು ತಿಳಿದುಕೊಳ್ಳುವುದು ಹೇಗೆ? ಈ ಎರಡನೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನ್ಯಾಯಾಧೀಶರು ವಾಲ್ಮೀಕಿ ರಾಮಾಯಣ ಮತ್ತು ಸ್ಕಂದ ಪುರಾಣದ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ರಕ್ತದಲ್ಲಿ ಬರೆದು ಸುಪ್ರೀಂ ತೀರ್ಪು ಸ್ವಾಗತಿಸಿದ ಮುಸ್ಲಿಂ ವ್ಯಕ್ತಿ

    ರಾಮಾಯಣದ ಮೂಲ ಕೃತಿಯಾದ ವಾಲ್ಮೀಕಿ ರಾಮಾಯಣದ 10ನೇ ಶ್ಲೋಕದಲ್ಲಿ ಕೌಸಲ್ಯೆಯು ಮಗನೊಬ್ಬನಿಗೆ ಜನ್ಮ ನೀಡಿದ್ದಳು. ರಾಮನ ಆಗಮನದಿಂದ ಅಯೋಧ್ಯೆ ಪಾವನಗೊಂಡಿತು. ಮುಂದೆ ಆತ ವಿಶ್ವಕ್ಕೆ ದೇವರಾದ ಎನ್ನುವ ಉಲ್ಲೇಖವಿದೆ. ರಾಮ ಅಯೋಧ್ಯೆಯಲ್ಲಿ ಜನಿಸಿದ್ದಾನೆ ಎನ್ನುವುದಕ್ಕೆ ಉಲ್ಲೇಖ ಇದ್ದರೂ ವಾಲ್ಮೀಖಿ ರಾಮಾಯಣದಲ್ಲಿ ವಿವಾದಿತ ಜಾಗದಲ್ಲೇ ರಾಮ ಜನಿಸಿದ್ದ ಎನ್ನುವುದಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ಹೀಗಾಗಿ ನ್ಯಾಯಾಧೀಶರು ಸ್ಕಂದ ಪುರಾಣವನ್ನು ಅಧ್ಯಯನ ಮಾಡಿದ್ದಾರೆ.

    ಸ್ಕಂದ ಪುರಾಣದಲ್ಲಿರುವ ವೈಷ್ಣವಕಾಂಡದಲ್ಲಿ ಅಯೋಧ್ಯಾ ಮಹಾತ್ಮ ಅಧ್ಯಾಯದಲ್ಲಿ ರಾಮನ ಜನ್ಮಸ್ಥಾನದ ಉಲ್ಲೇಖದ ಬಗ್ಗೆ ಶ್ಲೋಕವಿದೆ. ಈ ಶ್ಲೋಕದ ಪ್ರಕಾರ ಇಲ್ಲಿಂದ ಈಶಾನ್ಯ ದಿಕ್ಕಿನಲ್ಲಿರುವ ಜಾಗವೇ ರಾಮಜನ್ಮ ಸ್ಥಾನ. ಮೋಕ್ಷ ಸ್ಥಾನವಾಗಿರುವ ಈ ಸ್ಥಳವು ವಿಘ್ನೇಶ್ವರದ ಪೂರ್ವ ದಿಕ್ಕಿನಲ್ಲಿದ್ದು, ವಶಿಷ್ಠದ ಉತ್ತರ ದಿಕ್ಕಿನಲ್ಲಿದೆ ಲಾವ್ಮಾಸಾ ಆಶ್ರಮದ ಪಶ್ಚಿಮ ದಿಕ್ಕಿನಲ್ಲಿದೆ ಎಂದು ಹೇಳುತ್ತದೆ.

     

    ಈ ಶ್ಲೋಕದಲ್ಲಿ ತಿಳಿಸಿದ ಅಂಶ ರಾಮಲಲ್ಲಾ ಕಡೆಯವರ ವಾದಕ್ಕೂ ತಾಳೆಯಾಗುತ್ತದೆಯೇ ಎನ್ನುವುದನ್ನು ಕೋರ್ಟ್ ಅಧ್ಯಯನ ಮಾಡಿದೆ. ಈ ಶ್ಲೋಕದಲ್ಲಿರುವ ಸ್ಥಳಗಳು ವಿವಾದಿತ ಪ್ರದೇಶದಲ್ಲಿರುವ ಸ್ಥಳಗಳಿಗೂ ತಾಳೆಯಾಗುತ್ತಾ ಎನ್ನುವುದನ್ನು ಪರಿಶೀಲಿಸಿದಾಗ, ಶ್ಲೋಕದಲ್ಲಿ ಉಲ್ಲೇಖಿಸಿರುವ ದಿಕ್ಕಿನಲ್ಲಿಯೇ ರಾಮಮಂದಿರವಿದ್ದು ಈಗಲೂ ಈ ಸ್ಥಳಗಳು ಇವೆ. ನಾವು ಈ ಸ್ಥಳಕ್ಕೆ ಭೇಟಿ ನೀಡಿದ್ದೇವೆ ಎನ್ನುವುದನ್ನು ಹಲವು ವ್ಯಕ್ತಿಗಳು ಮೌಖಿಕ ಸಾಕ್ಷ್ಯ ನುಡಿದಿದ್ದಾರೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಸ್ಕಂದ ಪುರಾಣದ ಆಧಾರ ಮತ್ತು ಖಾಲಿ ಜಾಗದಲ್ಲಿ ಮಸೀದಿ ನಿರ್ಮಾಣವಾಗಿಲ್ಲ. ಹಿಂದೂ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಾಣವಾಗಿದೆ ಎನ್ನುವ ಭಾರತೀಯ ಪುರಾತತ್ವ ಇಲಾಖೆ ಸಾಕ್ಷ್ಯಗಳನ್ನು ಗಂಭೀರ ಪರಿಗಣಿಸಿದ ಕೋರ್ಟ್ ಅಂತಿಮವಾಗಿ ವಿವಾದಿತ 2.77 ಎಕ್ರೆ ಜಾಗ ರಾಮಲಲ್ಲಾಗೆ ಸೇರಬೇಕೆಂದು ಷರಾ ಬರೆದು ವಿವಾದವಾಗಿದ್ದ ಪ್ರಕರಣಕ್ಕೆ ಪೂರ್ಣ ವಿ’ರಾಮ’ ಹಾಕಿದೆ.