Tag: ರಾಮಲಲ್ಲಾ

  • ರಾಮನವಮಿ| ಅಯೋಧ್ಯೆ ಬಾಲರಾಮನ ಹಣೆ ಮೇಲೆ ಮೂಡಿದ ʼಸೂರ್ಯ ತಿಲಕʼ

    ರಾಮನವಮಿ| ಅಯೋಧ್ಯೆ ಬಾಲರಾಮನ ಹಣೆ ಮೇಲೆ ಮೂಡಿದ ʼಸೂರ್ಯ ತಿಲಕʼ

    ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ರಾಮನವಮಿ (Ram Navami) ಸಂಭ್ರಮ ಮನೆ ಮಾಡಿದೆ. ಈ ಶುಭ ಸಂದರ್ಭದಲ್ಲಿ ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕ ಮೂಡಿದೆ.

    ಸೂರ್ಯನ ಕಿರಣವು (Surya Tilak) ನೇರವಾಗಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ದಿವ್ಯ ದೃಶ್ಯ ಕಂಡುಬಂತು. ನಿಖರವಾಗಿ ಮಧ್ಯಾಹ್ನ 12 ಗಂಟೆಗೆ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ಸೂರ್ಯನ ಕಿರಣ, ದಿವ್ಯ ತಿಲಕವನ್ನು ರೂಪಿಸಿತು. ಇದನ್ನೂ ಓದಿ: ಬೆಂಗಳೂರಿನ ಎಲ್ಲೆಡೆ ರಾಮನವಮಿಯ ಸಂಭ್ರಮ – ಬಾಲರಾಮನ ವೇಷ ತೊಟ್ಟು ಬಂದ ಪುಟಾಣಿಗಳು

    ಸೂರ್ಯ ಕಿರಣವು ದೇವರ ಹಣೆಯನ್ನು ಬೆಳಗಿಸಿ, ಆಚರಣೆಗಳಿಗೆ ಆಧ್ಯಾತ್ಮಿಕ ಹೊಳಪನ್ನು ನೀಡಿತು.

    ದೇಶಾದ್ಯಂತ ರಾಮನವಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಇದು ವಿಷ್ಣುವಿನ ಏಳನೇ ಅವತಾರವಾದ ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವದ ದಿನ. ಜನರು ದೇವಾಲಯಗಳಿಗೆ ತೆರಳಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲಲ್ಲಿ ಭಜನೆಗಳು, ಮೆರವಣಿಗೆಗಳು ಮತ್ತು ಜಪಗಳು ನಡೆಯುತ್ತಿವೆ. ದೃಕ್ ಪಂಚಾಂಗದ ಪ್ರಕಾರ, ಭಗವಾನ್ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದ.

    ರಾಮನವಮಿ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರವು ಹೂವು, ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಲಕ್ಷಾಂತರ ಭಕ್ತರು ರಾಮಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ

  • ಅಯೋಧ್ಯೆ ಬಾಲರಾಮನಿಗೆ ಮಹಾ ಅಭಿಷೇಕ, ಭಕ್ತರಿಗೆ ಮಂಗಳ ದರ್ಶನ

    ಅಯೋಧ್ಯೆ ಬಾಲರಾಮನಿಗೆ ಮಹಾ ಅಭಿಷೇಕ, ಭಕ್ತರಿಗೆ ಮಂಗಳ ದರ್ಶನ

    ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ (Ayodhya) ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ ಸಂಭ್ರಮ ಮನೆ ಮಾಡಿದೆ. ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ರಾಮಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿವೆ.

    ಪ್ರತಿಷ್ಠಾ ದ್ವಾದಶಿಯಂದು ಬಾಲರಾಮಮೂರ್ತಿಗೆ ಮಹಾ ಅಭಿಷೇಕ ಮಾಡಲಾಯಿತು. ನಂತರ ಅವರ ಮಂಗಲ ದರ್ಶನ ನಡೆಯಿತು. ಈ ವಿಶೇಷ ದಿನದಂದು ರಾಮಮಂದಿರವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಮಲಲ್ಲಾನ (Ram Lalla) ದರ್ಶನ ಪಡೆದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

    ಅಯೋಧ್ಯೆಯಲ್ಲಿ ಹಬ್ಬದ ವಾತಾವರಣವೇ ಇತ್ತು. ಭಕ್ತರು ನೃತ್ಯ ಮಾಡುತ್ತಾ ಮತ್ತು ಹಾಡುತ್ತ ಮೆರವಣಿಗೆ ಸಾಗಿ ರಾಮಲಲ್ಲಾನ ಆಸ್ಥಾನಕ್ಕೆ ಬಂದ ದೃಶ್ಯಗಳು ಕಂಡುಬಂದವು. ಎಲ್ಲರೂ ಶ್ರೀರಾಮನ ಭಕ್ತಿಯಲ್ಲಿ ಮಿಂದೆದ್ದರು. ಆರಾಧ್ಯ ದೈವ ರಾಮನ ದರ್ಶನಕ್ಕೆ ಕುಟುಂಬ ಸಮೇತರಾಗಿ ಭಕ್ತರು ಆಗಮಿಸಿದ್ದರು.

    ಧಾರ್ಮಿಕ ಕಾರ್ಯಗಳಲ್ಲಿ, ದೇವರಿಗೆ ನೈವೇದ್ಯ ಅರ್ಪಿಸಲಾಯಿತು. ಇದಾದ ನಂತರ ಮಹಾ ಆರತಿ ಮಾಡಲಾಯಿತು. ನಂತರ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ರಾಜಭೋಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ರಾಮಲಲ್ಲಾ ವಿರಾಜಮಾನನಾಗಿರುವ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರ ನೇತೃತ್ವದಲ್ಲಿ ಮಹಾ ಆರತಿ ನೆರವೇರಿಸಲಾಯಿತು. ಮಹಾ ಆರತಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಇದನ್ನೂ ಓದಿ: ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ `ರಾಮಲಲ್ಲಾʼ ಅಂತ ಕರೆಯುವುದೇಕೆ?

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮ ಮಂದಿರ ಸಂಕೀರ್ಣದ ಅಂಗದ್ ತಿಲಾದಲ್ಲಿ ಪ್ರತಿಷ್ಠಾ ದ್ವಾದಶಿ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಸಂತರು ಮತ್ತು ಮಹಾಂತರೊಂದಿಗೆ ಅನ್ನ ಪ್ರಸಾದ ಸ್ವೀಕರಿಸಿದರು.

  • ಚಳಿಗಾಲದಲ್ಲಿ ಅಯೋಧ್ಯೆ ರಾಮನನ್ನು ಬೆಚ್ಚಗಿಡಲು ಚಾದರ, ಪಶ್ಮಿನಾ ಶಾಲು, ಹೀಟರ್‌ ವ್ಯವಸ್ಥೆ

    ಚಳಿಗಾಲದಲ್ಲಿ ಅಯೋಧ್ಯೆ ರಾಮನನ್ನು ಬೆಚ್ಚಗಿಡಲು ಚಾದರ, ಪಶ್ಮಿನಾ ಶಾಲು, ಹೀಟರ್‌ ವ್ಯವಸ್ಥೆ

    – ಬೆಚ್ಚಗಿನ ನೀರಲ್ಲಿ ರಾಮಲಲ್ಲಾನಿಗೆ ಸ್ನಾನ

    ಲಕ್ನೋ: ಚಳಿಗಾಲ ಸಮೀಪಿಸಿದ್ದು, ಅಯೋಧ್ಯೆ (Ayodhya) ರಾಮಮಂದಿರದ (Ram Mandir) ಬಾಲರಾಮನನ್ನು ಬೆಚ್ಚಗಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ನವೆಂಬರ್‌ 20 ರಿಂದ ಬರುವ ‘ಅಘರ್‌ ಕಿ ಪಂಚಮಿ’ಯಿಂದ ರಾಮಲಲ್ಲಾನಿಗೆ ಚಾದರ, ಪಶ್ಮಿನಾ ಶಾಲು ಹೊದಿಸಿ ಅಲಂಕಾರ ಮಾಡಲಾಗುವುದು. ಹೀಟರ್‌ ಅಳವಡಿಕೆ ಮಾಡಿ ಮೂರ್ತಿಗೆ ಬಿಸಿ ನೀರಿನ ಅಭಿಷೇಕ ಮಾಡುವುದು. ಬಾಲರಾಮನಿಗೆ ಮೊಸರು ನೈವೇದ್ಯದ ಬದಲು ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಣ ಹಣ್ಣುಗಳ ನೈವೇದ್ಯ ಇರುತ್ತದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್‌ – ಬಿಷ್ಣೋಯ್‌ ಗ್ಯಾಂಗ್‌ ಜೊತೆ ನಂಟು ಸಾಬೀತು!

    ಚಳಿಗಾಲದ ಉಡುಗೆಯನ್ನು ದೆಹಲಿ ಮೂಲದ ವಿನ್ಯಾಸಕರು ಹೊಲಿಯುತ್ತಿದ್ದಾರೆ. ನ.20 ರಿಂದ, ರಾಮಲಲ್ಲಾ ಮೂರ್ತಿಗೆ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಲಾಗುವುದು ಮತ್ತು ಗರ್ಭಗುಡಿಯಲ್ಲಿ ಹೀಟರ್‌ಗಳನ್ನು ಅಳವಡಿಸಿ ಅದನ್ನು ಬೆಚ್ಚಗಿಡಲಾಗುತ್ತದೆ. ಹವಾಮಾನ ವೈಪರೀತ್ಯದ ಸಮಯದಲ್ಲಿ ಗರ್ಭಗುಡಿಯಲ್ಲಿ ಬ್ಲೋವರ್‌ನಿಂದ ಬೆಚ್ಚಗಿನ ಗಾಳಿಯನ್ನು ಸಹ ಒದಗಿಸಲಾಗುತ್ತದೆ.

    ರಾಮಲಲ್ಲಾ ಬಾಲಕ. ಹೀಗಾಗಿ, ಅವನ ಆರೈಕೆ ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಚಳಿಗಾಲದಲ್ಲಿ ಬಾಲಕ ರಾಮನಿಗೆ ವಿಶೇಷ ಗಮನ ಕೊಡಲಾಗುವುದು. ಇದನ್ನೂ ಓದಿ: ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್‌ ʻಮಹಾʼ ಗ್ಯಾರಂಟಿ!

    ದೇವಾಲಯದ ಟ್ರಸ್ಟ್‌ನ ವಕ್ತಾರ ಓಂಕಾರ್ ಸಿಂಗ್, ರಾಮಲಲ್ಲಾ ರಾಮಮಂದಿರದಲ್ಲಿ ರಾಜಕುಮಾರನಾಗಿ ಕುಳಿತಿದ್ದಾನೆ. ಆದ್ದರಿಂದ ಅವನ ಬಟ್ಟೆಗಳು ಅವನ ರಾಜಪ್ರಭುತ್ವಕ್ಕೆ ಹೊಂದಿಕೆಯಾಗಬೇಕು ಎಂದು ಸಿಂಗ್ ಹೇಳಿದರು.

  • ಜ.22ರ ಅಯೋಧ್ಯೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ 113 ಕೋಟಿ ವೆಚ್ಚ

    ಜ.22ರ ಅಯೋಧ್ಯೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ 113 ಕೋಟಿ ವೆಚ್ಚ

    ಅಯೋಧ್ಯೆ: ಜನವರಿ 22ರ ಅಯೋಧ್ಯೆಯ (Ayodhya) ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭದ (Consecration Ceremony of Ram Lalla Idol)ಯೋಜನೆಗೆ 113 ಕೋಟಿ ರೂ. ವೆಚ್ಚವಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shri Ram Janmabhoomi Teerth Kshetra Trust) ಹೇಳಿದೆ.

    ರಾಮ ಮಂದಿರ ನಿರ್ಮಾಣಕ್ಕೆ ಇಲ್ಲಿಯವರೆಗೆ 1,800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಮುಂದಿನ ಎರಡು ಹಂತಗಳ ನಿರ್ಮಾಣಕ್ಕೆ ಹೆಚ್ಚುವರಿ 670 ಕೋಟಿ ರೂ. ಖರ್ಚಾಗಬಹುದು ಎಂದು ಟ್ರಸ್ಟ್ ತನ್ನ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೇವಭೂಮಿ ʻದ್ವಾರಕೆʼಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ…

    2023-24 ರ ಆರ್ಥಿಕ ವರ್ಷದ ವಾರ್ಷಿಕ ಲೆಕ್ಕಪತ್ರಗಳನ್ನು ಟ್ರಸ್ಟಿಗಳ ಮಂಡಳಿಯ ಮುಂದೆ ಮಂಡಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇವಸ್ಥಾನಕ್ಕೆ ಸುಮಾರು 20 ಕೆಜಿ ಚಿನ್ನ ಮತ್ತು 13 ಕ್ವಿಂಟಾಲ್ ಬೆಳ್ಳಿ ದೇಣಿಗೆಯಾಗಿ ಬಂದಿದೆ.

    ಮಂದಿನ ಖರ್ಚಿನ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಏಪ್ರಿಲ್ 1, 2024 ಮತ್ತು ಮಾರ್ಚ್ 31, 2025 ರ ನಡುವಿನ ಒಟ್ಟು ಯೋಜಿತ ವೆಚ್ಚವು 850 ಕೋಟಿ ರೂ. ಆಗಬಹುದು ಎಂದು ತಿಳಿಸಿದರು.

    2023-24ರ ಹಣಕಾಸು ವರ್ಷದಲ್ಲಿ 676 ಕೋಟಿ ರೂ.ಒಟ್ಟು ವೆಚ್ಚವಾಗಿದೆ. ಈ ಪೈಕಿ 540 ಕೋಟಿ ರೂ. ದೇವಸ್ಥಾನ ನಿರ್ಮಾಣಕ್ಕೆ ಬಳಕೆಯಾಗಿದ್ದರೆ, 136 ಕೋಟಿ ರೂ. ಪ್ರತಿಷ್ಠಾಪನಾ ಸಮಾರಂಭ ಸೇರಿ ಇತರೆ ಕೆಲಸಗಳಿಗೆ ಖರ್ಚು ಮಾಡಲಾಗಿದೆ. ಇದನ್ನೂ ಓದಿ: ಅಶರೀರವಾಣಿಯ ಭಯ, ತಂಗಿಗೆ ಸೆರೆವಾಸ – ಕೃಷ್ಣ ಹುಟ್ಟಿದಾಗ ಏನಾಯ್ತು?

    ಕಳೆದ ಹಣಕಾಸು ವರ್ಷದಲ್ಲಿ 363.34 ಕೋಟಿ ರೂ. ಆದಾಯ ಬಂದಿದ್ದು ಇದರಲ್ಲಿ 204 ಕೋಟಿ ರೂಪಾಯಿ ಬ್ಯಾಂಕ್ ಬಡ್ಡಿಯ ಮೂಲಕ ಬಂದಿದೆ. ಚೆಕ್‌, ನಗದು ಮೂಲಕ 58 ಕೋಟಿ ರೂ. ಬಂದರೆ, ದೇಣಿಗೆ ಬಾಕ್ಸ್‌ನಲ್ಲಿ 24.5 ಕೋಟಿ ರೂ., ಆನ್‌ಲೈನ್‌ ಮೂಲಕ 71 ಕೋಟಿ ರೂ., ವಿದೇಶಗಳಿಂದ 10.43 ಕೋಟಿ ರೂ. ಬಂದಿದೆ.

     

  • ಅಯೋಧ್ಯೆ ರಾಮಮಂದಿರ – ರಾಮಲಲ್ಲಾನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿದ್ದ ಅರ್ಚಕ ನಿಧನ

    ಅಯೋಧ್ಯೆ ರಾಮಮಂದಿರ – ರಾಮಲಲ್ಲಾನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿದ್ದ ಅರ್ಚಕ ನಿಧನ

    ಲಕ್ನೋ: ಅಯೋಧ್ಯೆ ರಾಮಮಂದಿರದ (Ayodhya Ram Mandir) ರಾಮಲಲ್ಲಾನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿದ್ದ ಅರ್ಚಕ ಪಂಡಿತ್‌ ಲಕ್ಷ್ಮೀಕಾಂತ್‌ ದೀಕ್ಷಿತ್‌ (Pandit Laxmikant Dixit) ನಿಧನರಾಗಿದ್ದಾರೆ.

    ಕಾಶಿಯ ಪ್ರಧಾನ ಅರ್ಚಕರೂ ಆಗಿದ್ದ ದೀಕ್ಷಿತ್‌ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕಾಶಿಯ ಪ್ರಖ್ಯಾತ ವೈದಿಕ ಶ್ರೌತ-ಸ್ಮಾರ್ತ ಸಂಸ್ಕಾರ ತಜ್ಞ, ಸಾಂಗ್ವೇದ ವಿದ್ಯಾಲಯದ ಯಜುರ್ವೇದ ಶಿಕ್ಷಕ ಲಕ್ಷ್ಮೀಕಾಂತ ದೀಕ್ಷಿತ್ ಅವರ ನಿಧನದಿಂದ ಸನಾತನಿ ಜಗತ್ತು ತುಂಬಲಾರದ ನಷ್ಟವನ್ನು ಅನುಭವಿಸಿದೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ YSR ಕಾಂಗ್ರೆಸ್‌ ಪಕ್ಷದ ಕಚೇರಿ ಧ್ವಂಸ – ಸೇಡಿನ ರಾಜಕಾರಣ ಎಂದು ಆಕ್ರೋಶ

    ದೀಕ್ಷಿತ್‌ ಅವರ ನೇತೃತ್ವದಲ್ಲಿ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪಿಸಲಾಯಿತು. ರಾಮಮಂದಿರದಲ್ಲಿ ಎಲ್ಲಾ ಪೂಜೆಗಳು ನೆರವೇರಿದ್ದವು. 2021ರ ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಯ ಪೂಜೆಯಲ್ಲಿ ಅವರು ಪಾಲ್ಗೊಂಡಿದ್ದರು.

    ಕಾಶಿಯ ವಿದ್ವಾಂಸರೂ, ಶ್ರೀರಾಮ ಜನ್ಮಭೂಮಿ ಪ್ರಾಣಪ್ರತಿಷ್ಠೆಯ ಪ್ರಧಾನ ಅರ್ಚಕರೂ ಆದ ವೇದಮೂರ್ತಿ ಅವರು, ಆಚಾರ್ಯ ಶ್ರೀ ಲಕ್ಷ್ಮೀಕಾಂತ ದೀಕ್ಷಿತ್ ಅವರ ನಿಧನ ಅಧ್ಯಾತ್ಮ ಮತ್ತು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿಗೆ ಅವರು ಮಾಡಿದ ಸೇವೆಗಾಗಿ ಅವರು ಯಾವಾಗಲೂ ಸ್ಮರಣೀಯರಾಗಿದ್ದಾರೆ ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಅಕ್ರಮ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಹೊಸ ಕಾನೂನು; 5-10 ವರ್ಷ ಜೈಲು, ಒಂದು ಕೋಟಿ ಕನಿಷ್ಠ ದಂಡ

    ಇದೇ ವರ್ಷದ ಜ.22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಬಾಲಕರಾಮ ಪ್ರಾಣಪ್ರತಿಷ್ಠೆ ಸಮಾರಂಭ ಜರುಗಿತು. ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನಡೆಯಿತು. ಅನೇಕ ಗಣ್ಯರು, ಸಿನಿತಾರೆಯರು, ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾದ ರಾಮಲಲ್ಲಾನನ್ನು ಕಣ್ತುಂಬಿಕೊಂಡಿದ್ದರು.

  • ಅಯೋಧ್ಯೆ ರಾಮನಿಗೆ ಬೆಳ್ಳಿಯ ಬಿಲ್ಲು-ಬಾಣ ಕೊಡುಗೆ

    ಅಯೋಧ್ಯೆ ರಾಮನಿಗೆ ಬೆಳ್ಳಿಯ ಬಿಲ್ಲು-ಬಾಣ ಕೊಡುಗೆ

    – ಬಿಲ್ಲು-ಬಾಣಕ್ಕೆ ಪೂಜೆ ಸಲ್ಲಿಸಿದ ಶೃಂಗೇರಿ ಮಠದ ಶ್ರೀಗಳು

    ಚಿಕ್ಕಮಗಳೂರು: ಅಯೋಧ್ಯೆಯ (Ayodhya) ಬಾಲರಾಮನಿಗೆ (Ram Lalla) ಭಕ್ತರೊಬ್ಬರು ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನು ನೀಡುವ ಮೂಲಕ ಭಕ್ತಿ ಸಮರ್ಪಿಸಿದ್ದಾರೆ. ಬೆಳ್ಳಿಯ ಬಿಲ್ಲು-ಬಾಣವನ್ನ ಮಾಡಿಸಿದ ಆಂಧ್ರಪ್ರದೇಶ ಮೂಲದ ಭಕ್ತರು ಅದನ್ನು ಶೃಂಗೇರಿಗೆ ತಂದು ಪೂಜೆ ಮಾಡಿಸಿದ್ದಾರೆ.

    ಬಾಲರಾಮನ ಬೆಳ್ಳಿಯ ಬಿಲ್ಲು ಹಾಗೂ ಬಾಣಕ್ಕೆ ಶೃಂಗೇರಿ ಮಠದ ಹಿರಿಯ ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದ್ದಾರೆ. ಶೃಂಗೇರಿ ಮಠದ ಕಿರಿಯ ಗುರುಗಳಾದ ಮಿಧುಶೇಖರ ಶ್ರೀಗಳು ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನು ಕೈಯಲ್ಲಿ ಹಿಡಿದು ನೋಡಿದ್ದಾರೆ. ನೋಡಲು ಅತ್ಯಂತ ಸುಂದರ ಹಾಗೂ ಮನಮೋಹಕವಾಗಿರುವ ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನ ಆಂಧ್ರಪ್ರದೇಶ ಮೂಲದ ರಾಮನ ಭಕ್ತ ಚಲ್ಲಾ ಶ್ರೀನಿವಾಸ್ ಎಂಬ ಭಕ್ತರು ಅಯೋಧ್ಯೆಯ ರಾಮನಿಗೆ ಭಕ್ತಿ ಪೂರ್ವಕವಾಗಿ ನೀಡಿದ್ದಾರೆ. ಇದನ್ನೂ ಓದಿ: ಮೆಟ್ರೋ ಹಳದಿ ಮಾರ್ಗದಲ್ಲಿ ವಯಾಡಕ್ಟ್ ಪರಿಶೀಲನಾ ಕಾರ್ಯ ಆರಂಭ

    ಜನವರಿ 22 ರಂದು ಅಯೋಧ್ಯೆಯ ರಾಮನ ಪ್ರಾಣಪ್ರತಿಷ್ಠಾಪನೆ (Ayodhya Ram Mandir) ದಿನ ಶೃಂಗೇರಿಯ ಋತ್ವಿಜರು ಹಾಗೂ ಪುರೋಹಿತರು ಕೂಡ ಅಯೋಧ್ಯೆಯ ಧಾರ್ಮಿಕ ಕಾರ್ಯಕ್ರಮ, ವಿಧಿ-ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯೆ ರಾಮನ ಜಲಾಭಿಷೇಕಕ್ಕೆಂದು ಶೃಂಗೇರಿ ಶಾರದಾಂಭೆ ನೆಲೆಸಿರುವ ತುಂಗಾ ನದಿಯಿಂದಲೂ ಜಲವನ್ನ ಕೊಂಡೊಯ್ದಿದ್ದರು. ತುಂಗಾ ನದಿ ಜೊತೆ ಜಿಲ್ಲೆಯ ಭದ್ರಾ ಹಾಗೂ ಹೇಮಾವತಿ ನದಿಯಿಂದಲೂ ಜಲವನ್ನ ಕೊಂಡೊಯ್ದಿದ್ದರು.

    ಇದರ ಮಧ್ಯೆ ಅಯೋಧ್ಯೆಯ ಶ್ರೀರಾಮನಿಗೂ ಶೃಂಗೇರಿಗೂ ಅವಿನಾಭಾವ ಸಂಬಂಧವಿದೆ. ಶ್ರೀರಾಮನ ಸಹೋದರಿ ಶಾಂತ ಅವರ ದೇಗುಲವಿರುವ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲದಿಂದಲೂ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ದಿನ ರಾಮನ ಪೂಜೆಗಾಗಿ ಪಂಜೆ, ಶಲ್ಯ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ವಿವಿಧ ಧಾರ್ಮಿಕ ವಸ್ತುಗಳನ್ನ ಕೊಂಡೊಯ್ದಿದ್ದರು. ಇದನ್ನೂ ಓದಿ: 24 ಗಂಟೆಯೊಳಗೆ ಚುನಾವಣಾ ಕಣದಿಂದ ನಿವೃತ್ತರಾಗಿ: ರಘುಪತಿ ಭಟ್‍ಗೆ ಸುನಿಲ್ ಕುಮಾರ್ ಎಚ್ಚರಿಕೆ

    ಮಳೆ ದೇವರು ಎಂದೇ ಖ್ಯಾತಿಯಾಗಿರುವ ಕಿಗ್ಗಾದ ಶಾಂತಾ ಸಮೇತ ಋಷ್ಯಶೃಂಗೇಶ್ವರರು ಅಯೋಧ್ಯೆಯ ಶ್ರೀರಾಮನ ಅಕ್ಕ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇಂದು ಭಕ್ತರೊಬ್ಬರು ಅಯೋಧ್ಯೆಯ ಶ್ರೀರಾಮನಿಗೆ ಬೆಳ್ಳಿಯ ಬಿಲ್ಲು ಹಾಗೂ ಬಾಣವನ್ನ ಮಾಡಿಸಿ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಪೂಜೆ ಸಲ್ಲಿಸಿ ಅಯೋಧ್ಯೆಗೆ ತಲುಪಿಸಿದ್ದಾರೆ.

  • ಅಯೋಧ್ಯೆಗೆ ಭೇಟಿ ಕೊಟ್ಟ ಬಳಿಕ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ: ʼಕೈʼ ವಿರುದ್ಧ ರಾಧಿಕಾ ಕಿಡಿ

    ಅಯೋಧ್ಯೆಗೆ ಭೇಟಿ ಕೊಟ್ಟ ಬಳಿಕ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ: ʼಕೈʼ ವಿರುದ್ಧ ರಾಧಿಕಾ ಕಿಡಿ

    ರಾಂಚಿ: ಅಯೋಧ್ಯೆಗೆ (Ayodhya  Ram Manir) ಭೇಟಿ ಕೊಟ್ಟು ರಾಮಲಲ್ಲಾನ ದರ್ಶನ ಪಡೆದ ಬಳಿಕ ಪಕ್ಷದಲ್ಲಿ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ ಎಂದು ಕಾಂಗ್ರೆಸ್‌ ಮಾಜಿ ವಕ್ತಾರೆ ರಾಧಿಕಾ ಖೇರಾ (Radhika Khera) ಗಂಭೀರ ಆರೋಪ ಮಾಡಿದ್ದಾರೆ.

    ಶನಿವಾರವಷ್ಟೇ ಕಾಂಗ್ರೆಸ್‌ ತೊರೆದಿರುವ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾನು ಅಯೋಧ್ಯೆಗೆ ಹೋಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗಲಿಲ್ಲ. ಆದರೆ ಅಲ್ಲಿಗೆ ಭೇಟಿ ನೀಡಿದ್ದಕ್ಕಾಗಿ ಇಷ್ಟೊಂದು ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ನಾನು ನನ್ನ ಜೀವನದಲ್ಲಿ ಎಂದಿಗೂ ಯೋಚಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ, ಎನ್‌ಡಿಎ ನಾಯಕರಿಂದ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ: ಬಿ.ವಿ ಶ್ರೀನಿವಾಸ್

    ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಅಯೋಧ್ಯೆಗೆ ಭೇಟಿ ಕೊಟ್ಟ ಬಳಿಕ ನನಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಕಾಂಗ್ರೆಸ್ ನನ್ನನ್ನು ಮಹಿಳಾ ವಿರೋಧಿ ಎಂದು ಆರೋಪಿಸಿದೆ. ಈ ಬಗ್ಗೆ ನಾನು ಧ್ವನಿಯೆತ್ತಿದರೂ ನನಗೆ ನ್ಯಾಯ ಸಿಗಲಿಲ್ಲ. ಇಂದು ನಾನು ನನ್ನ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ರಾಧಿಕಾ ತಿಳಿಸಿದ್ದಾರೆ.

    ಛತ್ತೀಸ್‌ಗಢ ಘಟಕದಲ್ಲಿ ಅಗೌರವದ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಯಾರೂ ನನಗೆ ಸಹಾಯ ಮಾಡಲಿಲ್ಲ. ಇದೇ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಮೂರು ವರ್ಷಗಳಿಂದ ಕಾಯುತ್ತಿದ್ದೇನೆ. ಆದರೆ ಅವರು ಯಾರೂ ನನ್ನನ್ನು ಭೇಟಿ ಮಾಡಲಿಲ್ಲ. ನನ್ನನ್ನು ಯಾವಾಗಲೂ ಒಂದು ಕಚೇರಿಯಿಂದ ಇನ್ನೊಂದಕ್ಕೆ ಕಳುಹಿಸಲಾಗುತ್ತದೆ ಎಂದು ಆರೋಪಿಸಿದರು.  

    ಇದೇ ವೇಳೆ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಲೇವಡಿ ಮಾಡಿದ ಖೇರಾ, ರಾಹುಲ್ ಗಾಂಧಿ (Rahul Gandhi) ಅವರು ರ‍್ಯಾಲಿಯಲ್ಲಿ ಯಾರನ್ನೂ ಭೇಟಿ ಮಾಡಲಿಲ್ಲ. ಜನರತ್ತ ಕೇವಲ 5 ನಿಮಿಷಗಳ ಕಾಲ ಕೈ ಬೀಸಿದರು ಹಿಂದುರಿಗಿದ್ದಾರೆ. ಅವರ ನ್ಯಾಯ ಯಾತ್ರೆ ಹೆಸರಿಗಾಗಿ ಮತ್ತು ಅವರು ಕೇವಲ ಟ್ರಾವೆಲ್ ವ್ಲಾಗರ್ ಆಗಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.

  • ಇದೊಂದು ಭಾವನಾತ್ಮಕ ಕ್ಷಣ- ಚುನಾವಣಾ ಪ್ರಚಾರದ ಬ್ಯುಸಿನಲ್ಲೂ ಸೂರ್ಯ ತಿಲಕ ವೀಕ್ಷಿಸಿದ PM

    ಇದೊಂದು ಭಾವನಾತ್ಮಕ ಕ್ಷಣ- ಚುನಾವಣಾ ಪ್ರಚಾರದ ಬ್ಯುಸಿನಲ್ಲೂ ಸೂರ್ಯ ತಿಲಕ ವೀಕ್ಷಿಸಿದ PM

    ಗುವಾಹಟಿ: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಇಂದು ರಾಮನವಮಿ ಹಬ್ಬವನ್ನು ವಿಶೇಷ ಹಾಗೂ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸೂರ್ಯ ರಶ್ಮಿಯು ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸುವ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ವೀಕ್ಷಣೆ ಮಾಡಿದ್ದಾರೆ.

    ಬಳಿಕ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಲ್ಬರಿ ರ‍್ಯಾಲಿಯ ನಂತರ ನಾನು ಸೂರ್ಯ ತಿಲಕವನ್ನು (Surya Tilak) ವೀಕ್ಷಿಸಿದೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣವಾಗಿದೆ. ಈ ಸೂರ್ಯ ತಿಲಕ ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಲಿ ಎಂದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆಬಾಗುತ್ತೇನೆ: ಅರುಣ್‌ ಯೋಗಿರಾಜ್‌

    ಪ್ರಧಾನಿಯವರು ಇಂದು ಅಸ್ಸಾಂನ ನಲ್ಬರಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ನಡುವೆಯೇ ತಮ್ಮ ಟ್ಯಾಬ್ಲೆಟ್‌ನಲ್ಲಿ ಸೂರ್ಯ ತಿಲಕ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಶೂ ಕಳಚಿಟ್ಟು ವೀಕ್ಷಿಸುತ್ತಿದ್ದ ಮೋದಿ ಸೂರ್ಯ ತಿಲಕ ವೀಕ್ಷಿಸುತ್ತಿರುವ ವೀಡಿಯೋ ಹಾಗೂ ಫೋಟೋಗಳು ವೈರಲ್‌ ಆಗುತ್ತಿವೆ.

  • ಅಯೋಧ್ಯೆಯಲ್ಲಿ ‘ಜೈ ಶ್ರೀರಾಮ್‌’ ಎಂದ ಶಿಲ್ಪಿ ಅರುಣ್‌ ಯೋಗಿರಾಜ್‌ ಕುಟುಂಬ

    ಅಯೋಧ್ಯೆಯಲ್ಲಿ ‘ಜೈ ಶ್ರೀರಾಮ್‌’ ಎಂದ ಶಿಲ್ಪಿ ಅರುಣ್‌ ಯೋಗಿರಾಜ್‌ ಕುಟುಂಬ

    ಅಯೋಧ್ಯೆ: ನಾಳೆ ರಾಮನವಮಿ (Rama Navami) ಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ವಿಶೇಷ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಮಲಲ್ಲಾ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ (Sculptor Arun Yogiraj) ಕುಟುಂಬ ಈಗಾಗಲೇ ಅಯೋಧ್ಯೆ ತಲುಪಿದೆ.

    ಹೌದು. ರಾಮಂದಿರದಲ್ಲಿ ರಾಮಲಲ್ಲಾ (Rama Lalla) ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಮೊದಲ ರಾವನವಮಿ ಹಬ್ಬ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ (Ayodhya Ram Mandir) ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಅರುಣ್‌ ಕುಟುಂಬ ಆಗಮಿಸಿದೆ.

    ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅರುಣ್‌ ಅವರು, ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಮೊದಲ ಬಾರಿಗೆ ಕುಟುಂಬ ಸಮೇತ ಬಂದಿದ್ದೇನೆ. ನನ್ನ ಕೆಲಸವನ್ನು ನೋಡಿ ಕುಟುಂಬ ಸಂತಸಗೊಂಡಿದೆ. ರಾಮನವಮಿ ಆಚರಣೆಗಾಗಿ ನಾವು ಕಾತರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?

    ಈ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಶಿಲ್ಪಿ, ಜನವರಿ 22 ರ ಬಳಿಕ ಅಯೋಧ್ಯೆಗೆ ಭೇಟಿ ನೀಡಿಲ್ಲ. ಇದೀಗ ರಾಮಲಲ್ಲಾ ವಿಗ್ರಹವನ್ನು ವೀಕ್ಷಿಸಲು ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದೊಯ್ಯಲು ಉತ್ಸುಕನಾಗಿದ್ದೇನೆ. ಹೊಸ ಬಟ್ಟೆ ಖರೀದಿಸುವುದು ಸೇರಿದಂತೆ ತಮ್ಮ ಸಿದ್ಧತೆಗಳ ಜೊತೆಗೆ ತಮ್ಮ ಕುಟುಂಬ ಪ್ರವಾಸದ ಉತ್ಸಾಹವನ್ನು ಹಂಚಿಕೊಂಡಿದ್ದರು. ವಿಶೇಷವಾಗಿ ವಿಗ್ರಹದ ನೋಟದಲ್ಲಿನ ಬದಲಾವಣೆಗಳ ಬಗ್ಗೆ ಸ್ನೇಹಿತರಿಂದ ಕೇಳಿದ ನಂತರ ರಾಮಲಲ್ಲಾನನ್ನು (Rama Lalla) ಮತ್ತೆ ನೋಡಲು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದರು.

    ನನ್ನ ಕುಟುಂಬದವರು ರಾಮಲಲ್ಲಾನನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದಾರೆ. ದಿನನಿತ್ಯ ಹೇಳುತ್ತಾ ಇರುತ್ತಾರೆ. ಆದರೆ ನಾನು ಮುಂದೂಡುತ್ತಲೇ ಇದ್ದೆ. ಹಾಗಾಗಿ ಈ ಬಾರಿ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ. ಅವರನ್ನು ಬಿಟ್ಟು ನಾನು ಅಯೋಧ್ಯೆಗೆ (Ayodhya) ಹೋದರೆ ಅವರು ನನ್ನನ್ನು ಶಿಕ್ಷಿಸುತ್ತಾರೆ ಎಂದು ನಗುತ್ತಲೇ ಅರುಣ್‌ ಅವರು ಹೇಳಿದ್ದರು. ಇದನ್ನೂ ಓದಿ: Ram Navami: ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡು

  • ಕುಟುಂಬದೊಂದಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಣೆಗೆ ಅರುಣ್‌ ಯೋಗಿರಾಜ್‌ ಪ್ಲಾನ್‌

    ಕುಟುಂಬದೊಂದಿಗೆ ಅಯೋಧ್ಯೆಯಲ್ಲಿ ರಾಮನವಮಿ ಆಚರಣೆಗೆ ಅರುಣ್‌ ಯೋಗಿರಾಜ್‌ ಪ್ಲಾನ್‌

    ಬೆಂಗಳೂರು: ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ (Sculptor Arun Yogiraj) ಅವರು ಏಪ್ರಿಲ್ 17 ರಂದು ರಾಮನವಮಿ (Rama Navami) ಹಬ್ಬವನ್ನು ಅಯೋಧ್ಯೆಯಲ್ಲಿ ತಮ್ಮ ಕುಟುಂಬದೊಂದಿಗೆ ಆಚರಿಸಲು ಪ್ಲಾನ್‌ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಜನವರಿ 22 ರ ಬಳಿಕ ಅಯೋಧ್ಯೆಗೆ ಭೇಟಿ ನೀಡಿಲ್ಲ. ಇದೀಗ ರಾಮಲಲ್ಲಾ ವಿಗ್ರಹವನ್ನು ವೀಕ್ಷಿಸಲು ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದೊಯ್ಯಲು ಉತ್ಸುಕನಾಗಿರುವುದಾಗಿ ತಿಳಿಸಿದ್ದಾರೆ.

    ಹೊಸ ಬಟ್ಟೆ ಖರೀದಿಸುವುದು ಸೇರಿದಂತೆ ತಮ್ಮ ಸಿದ್ಧತೆಗಳ ಜೊತೆಗೆ ತಮ್ಮ ಕುಟುಂಬ ಪ್ರವಾಸದ ಉತ್ಸಾಹವನ್ನು ಹಂಚಿಕೊಂಡರು. ವಿಶೇಷವಾಗಿ ವಿಗ್ರಹದ ನೋಟದಲ್ಲಿನ ಬದಲಾವಣೆಗಳ ಬಗ್ಗೆ ಸ್ನೇಹಿತರಿಂದ ಕೇಳಿದ ನಂತರ ರಾಮಲಲ್ಲಾನನ್ನು (Rama Lalla) ಮತ್ತೆ ನೋಡಲು ತುಂಬಾ ಉತ್ಸುಕನಾಗಿದ್ದೇನೆ. ಇಂತಹ ಐತಿಹಾಸಿಕ ಸ್ಥಳಕ್ಕಾಗಿ ವಿಗ್ರಹವನ್ನು ಕೆತ್ತಲು ಆಯ್ಕೆ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಈ ಬಾರಿ ಅಯೋಧ್ಯೆಯಲ್ಲಿ ರಾಮನವಮಿ ಅದ್ಧೂರಿ ಆಚರಣೆ- ಸೂರ್ಯ ತಿಲಕಕ್ಕೆ ಸಿದ್ಧತೆ

    ನನ್ನ ಕುಟುಂಬದವರು ರಾಮಲಲ್ಲಾನನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದಾರೆ. ದಿನನಿತ್ಯ ಹೇಳುತ್ತಾ ಇರುತ್ತಾರೆ. ಆದರೆ ನಾನು ಮುಂದೂಡುತ್ತಲೇ ಇದ್ದೆ. ಹಾಗಾಗಿ ಈ ಬಾರಿ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ. ಅವರನ್ನು ಬಿಟ್ಟು ನಾನು ಅಯೋಧ್ಯೆಗೆ (Ayodhya) ಹೋದರೆ ಅವರು ನನ್ನನ್ನು ಶಿಕ್ಷಿಸುತ್ತಾರೆ ಎಂದು ನಗುತ್ತಲೇ ಅರುಣ್‌ ಅವರು ಹೇಳಿದರು.

    ಇದೇ ವೇಳೆ ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿಯವರ ಕೃಪಾಶೀರ್ವಾದದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿಧಿವಿಧಾನಗಳ ನಡುವೆ ವಿಗ್ರಹ ಅನಾವರಣಗೊಳಿಸಲಾಯಿತು ಎಂದರು.