Tag: ರಾಮರಸ

  • ಬಿಗ್‌ ಬಾಸ್‌ ಪ್ರತಿ ಸೀಸನ್‌ನಲ್ಲಿ ಹೀರೋ ಹುಟ್ಟುತ್ತಾರೆ ಅದೇ ತಲೆನೋವು- ಕಾರ್ತಿಕ್‌ ಕಾಲೆಳೆದ ಕಿಚ್ಚ

    ಬಿಗ್‌ ಬಾಸ್‌ ಪ್ರತಿ ಸೀಸನ್‌ನಲ್ಲಿ ಹೀರೋ ಹುಟ್ಟುತ್ತಾರೆ ಅದೇ ತಲೆನೋವು- ಕಾರ್ತಿಕ್‌ ಕಾಲೆಳೆದ ಕಿಚ್ಚ

    ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಇದೀಗ ‘ರಾಮರಸ’ (Ramarasa Film) ಸಿನಿಮಾದ ಮೂಲಕ ಹೀರೋ ಆಗಿ ಬರುತ್ತಿದ್ದಾರೆ. ಇದೀಗ ಕಾರ್ತಿಕ್ ನಟನೆಯ ‘ರಾಮರಸ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಕಿಚ್ಚ ಸುದೀಪ್ ಶುಭಕೋರಿದ್ದಾರೆ. ಈ ವೇಳೆ, ಬಿಗ್‌ ಬಾಸ್‌ ಪ್ರತಿ ಸೀಸನ್‌ನಲ್ಲೂ ಹೀರೋ ಹುಟ್ಟುತ್ತಾರೆ. ಅದೇ ನಮಗೆ ತಲೆ ನೋವು ಎಂದು ಕಾರ್ತಿಕ್‌ ಕಾಲೆಳೆದಿದ್ದಾರೆ ಸುದೀಪ್.‌

    ಗುರುರಾಜ್ ದೇಶಪಾಂಡೆ ನಿರ್ಮಾಣ ಮತ್ತು ಗಿರಿರಾಜ್ ನಿರ್ದೇಶನದ ‘ರಾಮರಸ’ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ಕಾರ್ತಿಕ್ ಮಹೇಶ್ ನಟಿಸಿದ್ದಾರೆ. ಸಿನಿಮಾದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಸುದೀಪ್ (Kiccha Sudeep) ಆಗಮಿಸಿ, ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಪೋಸ್ಟರ್ ಮಾಡಿದ ರೀತಿಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ:‘ಪುಷ್ಪ 2’ ಜಾಗಕ್ಕೆ ‘ಡಬಲ್‌ ಇಸ್ಮಾರ್ಟ್‌’ ಎಂಟ್ರಿ- ರಿಲೀಸ್ ಡೇಟ್ ಫಿಕ್ಸ್

    ಈ ವೇಳೆ, ಬಿಗ್ ಬಾಸ್‌ನಲ್ಲಿ ಆಡಿದ ರೀತಿಗೆ ಕಾರ್ತಿಕ್‌ಗೆ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ. ಬಳಿಕ ಪ್ರತಿ ಸೀಸನ್‌ನಲ್ಲಿಯೂ ಹೀರೋ ಹುಟ್ಕೊತಾರೆಕ ಅದೇ ನಮ್ಮ ತಲೆನೋವು ಎಂದು ಕಾರ್ತಿಕ್‌ಗೆ ಸುದೀಪ್ ಕಾಲೆಳೆದಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ನಮ್ಮವ್ರ ಥರ ಇರುತ್ತಾರೆ. ಆದರೆ ನಮ್ಮವರಲ್ಲ. ಬಿಗ್ ಬಾಸ್ ಗೆಲ್ಲೋದು ಇದೆಯಲ್ವಾ ಬಹಳ ಕಷ್ಟ. ಆದರೆ ಗೆದ್ಮೇಲೆ ಜೀವನ ರೂಪಿಸಿಕೊಳ್ಳುವುದು ಕಮ್ಮಿ ಎಂದು ಮಾತನಾಡಿದ್ದಾರೆ.

    ಕಾರ್ತಿಕ್ ತುಂಬಾ ಸ್ಮಾರ್ಟ್ ಹುಡುಗ. ಕರೆಕ್ಟ್ ಟೈಮ್‌ನಲ್ಲಿ ಕರೆಕ್ಟ್ ಜಾಗದಲ್ಲಿ ಕಾರ್ತಿಕ್ ಇದ್ದಾರೆ. ಹೀರೋ ಫಸ್ಟ್ ಹೀರೋ ಆಗೋದನ್ನು ನಿಲ್ಲಿಸಬೇಕು. ಆಗ ಅವರು ಹೀರೋ ಆಗೋದು ಎಂದು ಕಾರ್ತಿಕ್‌ಗೆ ಸುದೀಪ್ ಸಲಹೆ ನೀಡಿದ್ದಾರೆ. ಬಳಿಕ ಕಾರ್ತಿಕ್ ನಟನೆಯ `ರಾಮರಸ’ ಚಿತ್ರಕ್ಕೆ ಸುದೀಪ್ ವಿಶ್‌ ಮಾಡಿದ್ದಾರೆ.

  • ರಾಮರಸ ಕುಡಿದ 8 ಮಂದಿ ಅಸ್ವಸ್ಥ!

    ರಾಮರಸ ಕುಡಿದ 8 ಮಂದಿ ಅಸ್ವಸ್ಥ!

    ಹಾಸನ: ರಾಮರಸ ಕುಡಿದು ಎಂಟು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾಸನದ ಬೈಲಾಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶನಿವಾರ ರಾಜ್ಯದ ಎಲ್ಲಾ ಕಡೆ ರಾಮನವಮಿಯನ್ನು ಆಚರಿಸಲಾಗಿತ್ತು. ಹಾಸನದ ಬೈಲಾಹಳ್ಳಯಲ್ಲೂ ರಾಮನವಮಿಯನ್ನು ಅದ್ಧೂರಿಯಾಗಿಯೇ ಆಚರಿಸಲಾಗಿತ್ತು. ಈ ವೇಳೆ ಅಲ್ಲಿ ರಾಮರಸ ತಯಾರಿಸಲಾಗಿದ್ದು. ಇದನ್ನು ಕುಡಿದ 8 ಮಂದಿ ಅಸ್ವಸ್ಥಗೊಂಡಿದ್ದಾರೆ.

    ಅಸ್ವಸ್ಥಗೊಂಡವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಅಸ್ವಸ್ಥಗೊಂಡವರಿಗೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.