Tag: ರಾಮನಗರ

  • ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್, ಸೈಲೆಂಟ್ ಆಗಿ ಇರದಿದ್ರೆ ವಿಪಕ್ಷಗಳಿಗೆ ಆಹಾರ ಆಗ್ತೀವಿ: ರಾಮಲಿಂಗಾ ರೆಡ್ಡಿ

    ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್, ಸೈಲೆಂಟ್ ಆಗಿ ಇರದಿದ್ರೆ ವಿಪಕ್ಷಗಳಿಗೆ ಆಹಾರ ಆಗ್ತೀವಿ: ರಾಮಲಿಂಗಾ ರೆಡ್ಡಿ

    ರಾಮನಗರ: ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ವಿಚಾರ ಯಾವುದನ್ನೂ ನಾನು ಮಾತನಾಡಲ್ಲ. ನಾವು ಮಾತನಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.

    ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಸಚಿವರಿಗೆ ಕೋಕ್ ಕೊಡುವ ವಿಚಾರ ಕುರಿತು ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ಸೇರಿ ಹೇಳ್ತೀನಿ, ಮಾತನಾಡಿದಷ್ಟು ಪಕ್ಷಕ್ಕೆ ಹಾನಿ. ಸಾಧ್ಯವಾದಷ್ಟು ಎಲ್ಲರೂ ಸೈಲೆಂಟ್ ಆಗಿ ಇರಿ. ಬಿಜೆಪಿಯಲ್ಲಿರುವಷ್ಟು (BJP) ಬಣ ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಏನೇ ಇದ್ದರೂ ನಾಲ್ಕು ಗೋಡೆ ಮಧ್ಯೆ ಚರ್ಚೆ ಮಾಡಬೇಕು. ಮಾಧ್ಯಮಗಳ ಮುಂದೆ ಮಾತನಾಡಿದ್ರೆ ವಿಪಕ್ಷಗಳಿಗೆ ಆಹಾರ ಆಗುತ್ತೇವೆ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ (Congress) ನಾಯಕರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಯಾಗಿ ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ಗಂಭೀರವಾಗಿರಬೇಕು – ಕನ್ನೇರಿ ಶ್ರೀಗಳಿಗೆ ಸುಪ್ರೀಂ ತರಾಟೆ

    ಇನ್ನೂ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಕ್ಕೆ ಹೈಕೋರ್ಟ್ ತಡೆ ವಿಚಾರ ಕುರಿತು ಮಾತನಾಡಿ, ಸರ್ಕಾರದ ಸರ್ಕ್ಯುಲರ್ ಮೇಲೆ ಕೋರ್ಟ್ ಆದೇಶ ಮಾಡಿದೆ. ಮುಖ್ಯಮಂತ್ರಿಗಳು ಅಪೀಲ್ ಹಾಕುತ್ತೇವೆ ಅಂತ ಹೇಳಿದ್ದಾರೆ. ಇದು ಹೊಸದಾಗಿ ನಾವು ಮಾಡಿರುವ ಕಾನೂನು ಅಲ್ಲ. ಹಿಂದೆ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಮಾಡಿದ್ದ ಆದೇಶ. ಶಾಲಾ, ಕಾಲೇಜು ಆವರಣದಲ್ಲಿ ಯಾವುದೇ ಕಾರ್ಯಕ್ರಮ ಮಾಡಬಾರದು ಅಂತ ಮಾಡಿದ್ದರು. ಇದು ಎಲ್ಲಾ ಪಕ್ಷಗಳು, ಎಲ್ಲಾ ಸಂಘಸಂಸ್ಥೆಗಳಿಗೂ ಅನ್ವಯ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಅಂತ ಟನಲ್ ರಸ್ತೆ ಮಾಡೋಕೆ ಡಿಕೆಶಿ ಹೊರಟಿದ್ದಾರೆ: ತೇಜಸ್ವಿ ಸೂರ್ಯ ವಾಗ್ದಾಳಿ

  • ಕುಮಾರಸ್ವಾಮಿಯವರನ್ನ ಸಿಎಂ ಕುರ್ಚಿಯಲ್ಲಿ ಕೂರಿಸೋದೆ ನನ್ನ ಗುರಿ, ನನಗೆ ಅಧಿಕಾರ ಬೇಕಿಲ್ಲ: ನಿಖಿಲ್

    ಕುಮಾರಸ್ವಾಮಿಯವರನ್ನ ಸಿಎಂ ಕುರ್ಚಿಯಲ್ಲಿ ಕೂರಿಸೋದೆ ನನ್ನ ಗುರಿ, ನನಗೆ ಅಧಿಕಾರ ಬೇಕಿಲ್ಲ: ನಿಖಿಲ್

    ರಾಮನಗರ: ಕುಮಾರಸ್ವಾಮಿ (HD Kumaraswamy) ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸೋದು ನನ್ನ ಗುರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.

    ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ (Channapatna) ಇಂದು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರ ವಿರುದ್ಧ ಬೇಸರ ಹೊರಹಾಕಿದರು. ಸೊಸೈಟಿ ಚುನಾವಣೆ ಹಿನ್ನೆಲೆ ಬಣ ರಾಜಕೀಯ ಮಾಡ್ತಿದ್ದ ಕಾರ್ಯಕರ್ತರನ್ನ ತರಾಟೆಗೆ ತೆಗೆದುಕೊಂಡ ನಿಖಿಲ್, ಶಿಸ್ತಿನ ಪಾಠ ಮಾಡಿದರು. ಇದನ್ನೂ ಓದಿ: ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ

    ಸ್ಥಳೀಯ ಮುಖಂಡರ ಒತ್ತಡಕ್ಕೆ ಮಣಿದು ನಾನು ಚುನಾವಣೆಗೆ ಬಂದೆ. ನಾನು ಹೇಡಿ ಅಲ್ಲ, ಸಾರ್ವಜನಿಕವಾಗಿ ಕಣ್ಣೀರು ಹಾಕಲ್ಲ, ಆದರೆ ಅವತ್ತು ಕಣ್ಣೀರು ಹಾಕಿದೆ. ಈಗ ಸೊಸೈಟಿ ಚುನಾವಣೆ ಬಗ್ಗೆ ಪ್ರಶ್ನೆ ಮಾಡ್ತಿದ್ದೀರಲ್ಲಾ. ಜಿಲ್ಲೆಯ ಜನ ನನಗೆ ಅಧಿಕಾರ ಕೊಟ್ಟಿದ್ದೀರಾ? ನನಗೆ ಒಂದು ಬಾರಿಯಾದ್ರೂ ಆಶೀರ್ವಾದ ಮಾಡಿದ್ದೀರಾ? ಕುಮಾರಣ್ಣ 1,200 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ರು. ಆದರೆ ಇಲ್ಲಿ ಅಭಿವೃದ್ಧಿ ರಾಜಕಾರಣಕ್ಕೆ ಬೆಲೆ ಇಲ್ಲ ಎಂದು ಬೇಸರಿಸಿದರು. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತದ ತನಿಖೆ ಆರಂಭಿಸಿದ ಸಿಬಿಐ

    ಜಿಲ್ಲೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನ ಗೆದ್ದಿದೆ, ಇದು ಶಾಶ್ವತ ಅಲ್ಲ. ಜನ ಮನಸ್ಸು ಮಾಡಿದ್ರೆ ಬದಲಾವಣೆ ಆಗೇ ಆಗುತ್ತೆ. ಇಲ್ಲಿ ನಡೆಯುವ ವಿಚಾರ ಇಡೀ ರಾಜ್ಯಕ್ಕೆ ಹೋಗುತ್ತೆ. ಇಲ್ಲಿ ಬೀದಿಬೀದಿಯಲ್ಲಿ ಚರ್ಚೆ ಮಾಡಿದ್ರೆ ಪಕ್ಷದ ಗೌರವ ಏನಾಗುತ್ತೆ? ಏನೇ ಸಮಸ್ಯೆ ಇದ್ರೂ ಪಕ್ಷದ ಚೌಕಟ್ಟಿನ ಒಳಗೆ ಚರ್ಚೆ ಮಾಡಿ. ಅಧಿಕಾರ ಇದ್ದಾಗ ಸಭೆಗೆ ಎಷ್ಟು ಜನ ಸೇರುತ್ತಿದ್ದರು. ಈಗ ಎಷ್ಟು ಜನ ಬಂದಿದ್ದಾರೆ ಎಂದರು. ಇದನ್ನೂ ಓದಿ: ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಅಲ್ಲದೇ ಚುನಾವಣೆ ಇನ್ನು ಎರಡೇ ವರ್ಷ ಇರೋದು. ಈಗ ಸೊಸೈಟಿ ಚುನಾವಣೆ ಬಗ್ಗೆ ಚರ್ಚೆ ಮಾಡಿಕೊಂಡು ಕೂತುಕೊಳ್ಳೊದು ಬೇಡ. ತಾಲೂಕಿನಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಸಹಕಾರ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿ ಗೆದ್ದಿದೆ. ಮುಂದೆ ಅಧಿಕಾರ ಹೇಗೆ ಮಾಡಬೇಕು ಅಂತ ಕಾಂಗ್ರೆಸ್‌ನವರು ತೋರಿಸಿಕೊಟ್ಟಿದ್ದಾರೆ. ಮುಂದೆ ನಾವೂ ಇದನ್ನೇ ಅನುಸರಿಸುತ್ತೇವೆ. ನಾನು ಕೆಲಸ ಮಾಡುತ್ತಿರೋದು ಈ ಪಕ್ಷಕ್ಕೋಸ್ಕರ. ಮುಂದೆ ಚುನಾವಣೆಗೆ ಎಷ್ಟು ಸೀಟ್ ತರಬೇಕು ಅನ್ನೋದು ಡೆಲ್ಲಿಯಲ್ಲಿ ತೀರ್ಮಾನ ಆಗುತ್ತದೆ. ಕುಮಾರಣ್ಣನ ಸಿಎಂ ಕುರ್ಚಿಯಲ್ಲಿ ಕೂತ ದಿನ ನಾನು ಅಧಿಕಾರ ತೆಗೆದುಕೊಳ್ಳಲ್ಲ. ಕಾರ್ಯಕರ್ತರು, ಮುಖಂಡರಿಗೆ ಅಧಿಕಾರ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ – ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ!

  • ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದ್ರೆ ಮುಖಕ್ಕೆ ಹೊಡೆಯುತ್ತೇನೆ – ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ತರಾಟೆ

    ರೈತರ ಸಮಸ್ಯೆ ಬಗೆಹರಿಸಲಿಲ್ಲ ಅಂದ್ರೆ ಮುಖಕ್ಕೆ ಹೊಡೆಯುತ್ತೇನೆ – ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ತರಾಟೆ

    ರಾಮನಗರ: ರೈತರ (Farmers) ಸಮಸ್ಯೆ ಬಗೆಹರಿಸಲಿಲ್ಲ ಅಂದರೆ ಮುಖಕ್ಕೆ ಹೊಡೆಯುತ್ತೇನೆ. ನೀವು ಮಾಡುವ ಕೆಲಸಕ್ಕೆ ಜನ ನಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ ಎಂದು ಜನಸ್ಪಂದನಾ ಸಭೆಯಲ್ಲಿ (Janaspandana Meeting) ಅಧಿಕಾರಿಗಳನ್ನ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಾಗಡಿ (Magadi) ತಾಲೂಕು ಕಚೇರಿಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಮಾಗಡಿ ತಹಶೀಲ್ದಾರ್ ಶರತ್ ಹಾಗೂ ಎಡಿಎಲ್‌ಆರ್ ಆನಂದ್‌ಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಸಭೆಯಲ್ಲಿ ಪೋಡಿ ದುರಸ್ತಿ ಬಗ್ಗೆ ಅಧಿಕಾರಿಗಳ ವಿರುದ್ಧ ರೈತ ದೂರು ನೀಡಿದ ಹಿನ್ನೆಲೆ ಆಕ್ರೋಶಗೊಂಡ ಶಾಸಕ, ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದೀರಿ. ಇಬ್ಬರಿಗೂ ಮುಖಕ್ಕೆ ಹೊಡೆಯುತ್ತೇನೆ. ನೀವು ಬಂದಾಗಿನಿಂದ ರೈತರ ಒಂದು ಸಮಸ್ಯೆ ಬಗೆಹರಿಸಲಾಗಿಲ್ಲ. ನಿಮ್ಮಿಬ್ಬರ ಕೆಲಸಕ್ಕೆ ಜನ ನಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ ಎಂದು ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಕೊಡಗು | ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್‌ ವಾಹನ ಪಲ್ಟಿ

    ರೈತರ ವಿಚಾರದಲ್ಲಿ ತಮಾಷೆ ಮಾಡುತ್ತಿದ್ದೀರಾ? ರಸ್ತೆಯಲ್ಲಿ ನಿಲ್ಲಿಸಿ ಇಬ್ಬರಿಗೂ ಹಾರ ಹಾಕಿ ಸನ್ಮಾನ ಮಾಡಿಸುತ್ತೇನೆ. ನಾಚಿಕೆ ಆಗಲ್ವಾ ನಿಮಗೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: RSS ಇಂದಿರಾ ಗಾಂಧಿಗೆ ಹೆದರಿಲ್ಲ, ನೆಹರೂ ಮುಂದೆ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?- ಸುನಿಲ್ ಕುಮಾರ್

  • ಎಕ್ಸ್‌ಪ್ರೆಸ್ ವೇಯಲ್ಲಿ ತಮಿಳುನಾಡು ಪಿಎಸ್‌ಐ ದರೋಡೆ ಪ್ರಕರಣ – ಮೂವರು ಆರೋಪಿಗಳು ಅರೆಸ್ಟ್

    ಎಕ್ಸ್‌ಪ್ರೆಸ್ ವೇಯಲ್ಲಿ ತಮಿಳುನಾಡು ಪಿಎಸ್‌ಐ ದರೋಡೆ ಪ್ರಕರಣ – ಮೂವರು ಆರೋಪಿಗಳು ಅರೆಸ್ಟ್

    ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ (Bengaluru-Mysuru Expressway) ವಾಹನ ಅಡ್ಡಗಟ್ಟಿ ತಮಿಳುನಾಡು ಮೂಲದ ಪಿಎಸ್‌ಐ (Tamil Nadu PSI) ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ದರೋಡೆಕೋರರನ್ನ ಬಂಧಿಸುವಲ್ಲಿ ಚನ್ನಪಟ್ಟಣ (Channapatna) ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಸೈಯದ್ ತನ್ವೀರ್ (30), ಫೈರೋಜ್ ಪಾಷ (28), ತನ್ವೀರ್ ಪಾಷ (32) ಬಂಧಿತ ಆರೋಪಿಗಳು. ಕಳೆದ ಮಂಗಳವಾರ ಬೆಂ-ಮೈ ಎಕ್ಸ್‌ಪ್ರೆಸ್ ಹೈವೇಯ ಚನ್ನಪಟ್ಟಣ ಬೈಪಾಸ್‌ನ ಲಂಬಾಣಿತಾಂಡ್ಯದ ಬಳಿ ದರೋಡೆ ಮಾಡಲಾಗಿತ್ತು. ಕಾರು ನಿಲ್ಲಿಸಿ ರೆಸ್ಟ್ ಮಾಡುತ್ತಿದ್ದ ತಮಿಳುನಾಡು ಚೀರಂಬಾಡಿ ಪೊಲೀಸ್ ಠಾಣೆ ಪಿಎಸ್‌ಐ ಶಾಜಿನ್ ದಂಪತಿಗೆ ಚಾಕು ತೋರಿಸಿದ ದರೋಡೆಕೋರರು, 16 ಗ್ರಾಂ ಚಿನ್ನದ ಸರ, 10 ಸಾವಿರ ನಗದು ಹಾಗೂ ಎರಡು ಮೊಬೈಲ್ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ ರೇಪ್‌; ಬಂಗಾಳದಲ್ಲಿ ಮತ್ತೊಂದು ಕ್ರೂರ ಘಟನೆ

    ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪಿಎಸ್‌ಐ ಶಾಜಿನ್ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ರೈತರಿಗೆ ಬಿಗ್ ಗಿಫ್ಟ್ – 35 ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ

  • ಜಾಲಿವುಡ್ ಸ್ಟುಡಿಯೋಗೆ ಅನುಮತಿ – ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

    ಜಾಲಿವುಡ್ ಸ್ಟುಡಿಯೋಗೆ ಅನುಮತಿ – ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

    ರಾಮನಗರ: ಜಾಲಿವುಡ್ ಸ್ಟುಡಿಯೋಗೆ (Jollywood Studio) ರಾತ್ರೋರಾತ್ರಿ ಅನುಮತಿ ನೀಡಿ ಗೇಟ್ ಓಪನ್ ಮಾಡಿದ ಹಿನ್ನೆಲೆ ಜಿಲ್ಲಾಡಳಿತದ ನಡೆ ಖಂಡಿಸಿ ಕನ್ನಡಪರ ಸಂಘಟನೆಗಳು (Pro Kannada Organizations) ಜಾಲಿವುಡ್ ಎದುರು ಪ್ರತಿಭಟನೆ ನಡೆಸಿದೆ.

    ಸರ್ಕಾರ ನಿಯಮ ಬಾಹಿರವಾಗಿ ಅನುಮತಿ ನೀಡಿದೆ. ಡಿಸಿಎಂ ಡಿಕೆಶಿ ಜಾಲಿವುಡ್ ಜೊತೆ ಡೀಲ್ ಮಾಡಿಕೊಂಡು ಓಪನ್ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಕಿಡಿಕಾರಿದ ಹೋರಾಟಗಾರರು, ಗೇಟ್ ಮೇಲೆ ಹತ್ತಿ ಹೈಡ್ರಾಮ ಸೃಷ್ಟಿಸಿದರು. ಕಾಂಪೌಂಡ್ ಹಾರಿ ಒಳನುಗ್ಗಲು ಯತ್ನಿಸಿದರು. ಇದನ್ನೂ ಓದಿ: ದಾವಣಗೆರೆ | ರಾಮಜ್ಯೋತಿ ರಥಯಾತ್ರೆ ದುರಂತಕ್ಕೆ 35 ವರ್ಷ – ಫೈರಿಂಗ್‌ನಲ್ಲಿ ಮೃತಪಟ್ಟವರ ಬ್ಯಾನರ್‌ ತೆರವಿಗೆ ಭಾರೀ ವಿರೋಧ

    ಈ ವೇಳೆ ಜಾಲಿವುಡ್ ಸೆಕ್ಯುರಿಟಿ ಹಾಗೂ ಹೋರಾಟಗಾರರ ನಡುವೆ ವಾಗ್ವಾದ ನಡೆದಿದ್ದು, ಕೂಡಲೇ ಜಾಲಿವುಡ್ ಸಂಪೂರ್ಣ ಸ್ಥಗಿತ ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಬಿಡದಿ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದರು. ಕನ್ನಡಪರ ಹೋರಾಟಗಾರರನ್ನು ಬಂಧಿಸಿ ಜೀಪ್‌ನಲ್ಲಿ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್‌ಗೆ ಬೀಗ ಹಾಕಿದ್ದಕ್ಕೂ `ನಟ್ಟು ಬೋಲ್ಟ್’ ಹೇಳಿಕೆಗೂ ಸಂಬಂಧವಿಲ್ಲ: ಶಿವರಾಜ್ ತಂಗಡಗಿ

  • ಬಿಗ್‌ ಬಾಸ್‌ ಓಪನ್‌ ಬೆನ್ನಲ್ಲೇ ಮುಂಜಾನೆ ಮನೆ ಪ್ರವೇಶಿಸಿದ ಸ್ಪರ್ಧಿಗಳು

    ಬಿಗ್‌ ಬಾಸ್‌ ಓಪನ್‌ ಬೆನ್ನಲ್ಲೇ ಮುಂಜಾನೆ ಮನೆ ಪ್ರವೇಶಿಸಿದ ಸ್ಪರ್ಧಿಗಳು

    ರಾಮನಗರ: ಬಿಗ್‌ಬಾಸ್‌ (Bigg Boss) ಮನೆಯ ಬೀಗ ತೆಗೆದ ಬೆನ್ನಲ್ಲೇ ಇಂದು ಮುಂಜಾನೆ ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಿಂದ ಸ್ಪರ್ಧಿಗಳು ಮತ್ತೆ ದೊಡ್ಮನೆಗೆ ಆಗಮಿಸಿದ್ದಾರೆ.

    ಬಿಗ್‌ ಬಾಸ್‌ ಆಯೋಜಕರು ಕಾರಿನಲ್ಲಿ ಸ್ಪರ್ಧಿಗಳನ್ನು ಕರೆತಂದಿದ್ದಾರೆ. ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ ಬೆನ್ನಲ್ಲೇ ವಾಹಿನಿ ಎಂದಿನಂತೆ ಅದೇ ಸಮಯಕ್ಕೆ ಶೋ ಪ್ರಸಾರವಾಗಲಿದೆ ಎಂದು ಪ್ರೋಮೋ ಬಿಟ್ಟಿದೆ.

     

    ಬಿಗ್‌ಬಾಸ್‌ ಮನೆಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಬೀಗ ಜಡಿದ ನಂತರ ಸ್ಪರ್ಧಿಗಳನ್ನು 6 ಕಿ.ಮೀ ದೂರದಲ್ಲಿರುವ ಈಗಲ್ಟನ್‌ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿತ್ತು. ಜಾಲಿವುಡ್‌ ಸ್ಟುಡಿಯೋ (Jollywood Studios) ಮಾಲಿನ್ಯ ನಿಯಮ ಪಾಲನೆ ಮಾಡದ್ದಕ್ಕೆ ಈ ರೆಸಾರ್ಟ್‌ಗೆ ನಿಮ್ಮನ್ನು ಕರೆತರಲಾಗಿದೆ ಎಂಬ ವಿಚಾರವನ್ನು ಆಯೋಜಕರು ಸ್ಪರ್ಧಿಗಳಿಗೆ ತಿಳಿಸಿದ್ದರು. ಇದನ್ನೂ ಓದಿ:  ಡಿಕೆಶಿ ಆದೇಶದ ಬೆನ್ನಲ್ಲೇ ಮಧ್ಯರಾತ್ರಿ ಬಿಗ್‌ ಬಾಸ್‌ ಮನೆ ರೀ ಓಪನ್‌

    ರೆಸಾರ್ಟ್‌ನಲ್ಲೂ (Resort) ಬಿಗ್‌ ಬಾಸ್‌ ನಿಯಮ ಅನ್ವಯವಾಗುತ್ತಿತ್ತು. ಯಾರ ಜೊತೆಯೂ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ರೆಸಾರ್ಟ್ ಸಿಬ್ಬಂದಿಯ ಜೊತೆಯೂ ಮಾತುಕತೆ ಆಡುವಂತಿಲ್ಲ, ಊಟ, ತಿಂಡಿ ಇತ್ಯಾದಿಗಳನ್ನು ಕೋಣೆಗೆ ಕಳುಹಿಸಲಾಗುತ್ತಿದೆ ಎಂದು ಆಯೋಜಕರು ಸ್ಪರ್ಧಿಗಳಿಗೆ ಸೂಚಿಸಿದ್ದರು. ಅಷ್ಟೇ ಅಲ್ಲದೇ ಮೊಬೈಲ್, ಇಂಟರ್ನೆಟ್, ಟಿವಿ ಯಾವ ಸೌಲಭ್ಯಗಳನ್ನು ಸಹ ನೀಡಿರಲಿಲ್ಲ.

  • ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

    ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

    – ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ

    ಬೆಂಗಳೂರು: ಬಿಗ್ ಬಾಸ್‌ಗೆ (Bigg Boss) 10 ದಿನ ಕಾಲಾವಕಾಶ ಕೊಟ್ಟಿರುವ ಸಂಬಂಧ ನಮಗೆ ಯಾವುದೇ ಮನವಿ ಬಂದಿಲ್ಲ. ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ (PM Narendraswamy) ಹೇಳಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಬಿಗ್ ಬಾಸ್ ಈವೆಂಟ್ ಬಗ್ಗೆ ಗೊತ್ತಿಲ್ಲ. ನಾವು ಜಾಲಿವುಡ್ (Jollywood) ಸಂಸ್ಥೆಗೆ ನೋಟಿಸ್ ಕೊಟ್ಟಿರೋದು. ಸುಮಾರು 152 ಯೂನಿಟ್‌ಗಳನ್ನು ಈಗಾಗಲೇ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ನಾವು ಕ್ಲೋಸ್ ಮಾಡುವ ಆದೇಶವನ್ನು ನೀಡಿದ್ದೇವೆ. ಹತ್ತು ದಿನದ ಕಾಲಾವಕಾಶ ಕೊಡುವ ಬಗ್ಗೆ ನಾವು ತೀರ್ಮಾನ ಮಾಡಿಲ್ಲ. ಈ ಪ್ರಕರಣ ಕೋರ್ಟ್‌ನಲ್ಲಿ ಇದೆ ಎಂದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    ನೋಟಿಸ್ ಕೊಟ್ಟಾಗಲು ಸ್ಪಂದಿಸಿಲ್ಲ. ಜಿಲ್ಲಾಡಳಿತ ನಮ್ಮ ಆದೇಶವನ್ನು ಪಾಲಿಸುತ್ತಿದೆ. ಮುಂದಿನ ನಿರ್ಧಾರ ನಾವೇ ತೆಗೆದುಕೊಳ್ಳಬೇಕು. ಅಮ್ಯೂಸ್‌ಮೆಂಟ್ ಪಾರ್ಕ್ ಸಮಸ್ಯೆಯಾಗಿದ್ದು. ಬಿಗ್ ಬಾಸ್ ಸ್ಟುಡಿಯೋಗೂ ಇದಕ್ಕೂ ಸಂಬಂಧ ಇರಲಿಲ್ಲ. ಜಾಲಿವುಡ್ ಬಂದ್ ಮಾಡಿರೋದು ದಿಢೀರ್ ಅಲ್ಲ. ಬಿಗ್ ಬಾಸ್‌ಗೆ ಅವರು ಮೋಸ ಮಾಡಿದ್ದಾರಾ ಗೊತ್ತಿಲ್ಲ. ನಮಗೆ ಇನ್ನೂ ಮನವಿ ಬಂದಿಲ್ಲ. ಜಿಲ್ಲಾಧಿಕಾರಿ ಗಳಿಂದ ಬಂದ ಮೇಲೆ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: `ನಟ್ಟು ಬೋಲ್ಟು’ ಹೇಳಿಕೆಗೂ ಬಿಗ್‌ಬಾಸ್ ಬಂದ್‌ಗೂ ಸಂಬಂಧವಿಲ್ಲ – ಈಶ್ವರ್ ಖಂಡ್ರೆ 

    ಜಾಲಿವುಡ್ ಮೂವತ್ತು ಎಕ್ರೆ ಪ್ರದೇಶದಲ್ಲಿದೆ. ಬಿಗ್ ಬಾಸ್ ನಡೆಯುತ್ತಿರೋದು ಒಂದು ಎಕ್ರೆ. ಅಮ್ಯೂಸ್‌ಮೆಂಟ್ ಪಾರ್ಕ್ ದೂರನ್ನು ಆಧರಿಸಿ ನೋಟಿಸ್ ಕೊಟ್ಟಿರೋದು. ಅವರು ಕನಿಷ್ಟ ಅರ್ಜಿ ಸಲ್ಲಿಕೆ ಮಾಡಿಲ್ಲ. ಇಷ್ಟು ದಿನ ಮುಚ್ಚಲು ಸಮಯಾವಕಾಶ ಯಾಕೆ? ಏಕಾಏಕಿ ಮುಚ್ಚಲು ಆಗಲ್ಲ. ಕೋರ್ಟ್ ತಪರಾಕಿ ಹಾಕಬಹುದು. ಈ ಫೈಲ್ ಪೆಂಡಿಂಗ್ ಇರೋದು ಆಗಸ್ಟ್‌ನಲ್ಲಿ ನಾನು ಅಧಿಕಾರ ವಹಿಸಿಕೊಂಡಾಗ ಗೊತ್ತಾಗಿದೆ. ನಾನು ಅಧಿಕಾರಕ್ಕೆ ಬಂದ ತಕ್ಷಣ ಕ್ರಮ ಕೈಗೊಂಡಿದ್ದೇನೆ. ಮೂರು ನೋಟಿಸ್ ಕೊಟ್ಟಿದ್ದೇವೆ. ಸ್ಪಾಟ್ ಮಹಜರು ಆಗಿದೆ. ಹತ್ತು ದಿನಗಳ ಕಾಲವಕಾಶವನ್ನು ಕೊಡಬಹುದು. ಅಫಿಡವಿಟ್ ಜೊತೆಗೆ ಮನವಿ ಪತ್ರ ಕೊಟ್ಟರೆ ಕಾಲಾವಕಾಶವನ್ನು ಕೊಡಬಹುದು. ಅಂದರೆ ಕಾನೂನಿನಲ್ಲಿ ಅವಕಾಶ ಇದೆ ಆದರೆ ಇದುವರೆಗೆ ತೀರ್ಮಾನ ಆಗಿಲ್ಲ. ರೆಡ್ ಕೆಟಗರಿ ಆಗಿರೋದ್ರಿಂದ 90 ದಿನ ಅವಕಾಶ ನೀಡಬಹುದು. ಈ ವಿಚಾರ ಈಗಾಗಲೇ ಕೋರ್ಟ್‌ನಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಇಂದೇ ಬಿಗ್‌ ರಿಲೀಫ್‌? – ಮತ್ತೆ ಶೋ ಆರಂಭ ಸಾಧ್ಯತೆ

    ನಾನು ರಾಜಕೀಯ ಪಕ್ಷಕ್ಕೆ ಈಗ ಸೇರಿದವನು ಅಲ್ಲ. ನಾನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ. ಇದರಲ್ಲಿ ರಾಜಕೀಯ ಬೆರೆಸೋದು ಬೇಡ. ಕಾಯ್ದೆಯಡಿ ಕ್ಲೋಸರ್ ಆದೇಶ ಕೊಟ್ಟಿದ್ದೇವೆ. ದಂಡವನ್ನು ಕಟ್ಟಬೇಕಾಗುತ್ತೆ. ಈ ಕ್ಲೋಸರ್ ಆದೇಶ ಶಾಶ್ವತ, ತಾತ್ಕಾಲಿಕವೂ ಅಲ್ಲ. ಅವರು ದಂಡವನ್ನು ಕಟ್ಟಬೇಕಾಗುತ್ತದೆ. ಕೋರ್ಟ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಏಕಕಾಲಕ್ಕೆ ಮನವಿ ಕೊಟ್ಟರೆ ಕಷ್ಟ. ಜಾಲಿವುಡ್‌ನವರು ಕೂಡ ಕರೆ ಮಾಡಿದ್ದಾರೆ. ಅವರಿಗೂ ಅದನ್ನೇ ಹೇಳಿದ್ದೇನೆ. ಮಾನವೀಯತೆ ದೃಷ್ಟಿಯಿಂದ ಏನಾದರೂ ಮಾಡಬಹುದು, ನೋಡೋಣ ಎಂದರು. ಇದನ್ನೂ ಓದಿ: ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ: ಜಾಲಿವುಡ್ ಆಡಳಿತ ಮಂಡಳಿ

  • ಬಿಗ್‌ಬಾಸ್‌ಗೆ ಇಂದೇ ಬಿಗ್‌ ರಿಲೀಫ್‌? – ಮತ್ತೆ ಶೋ ಆರಂಭ ಸಾಧ್ಯತೆ

    ಬಿಗ್‌ಬಾಸ್‌ಗೆ ಇಂದೇ ಬಿಗ್‌ ರಿಲೀಫ್‌? – ಮತ್ತೆ ಶೋ ಆರಂಭ ಸಾಧ್ಯತೆ

    ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar)  ಮಧ್ಯಪ್ರವೇಶದ ಬೆನ್ನಲ್ಲೇ ಬಿಗ್‌ ಬಾಸ್‌ಗೆ (Bigg Boss)  ಇಂದೇ ಬಿಗ್‌ ರಿಲೀಫ್‌ ಸಿಗುವ ಸಾಧ್ಯತೆಯಿದೆ.

    ಬಿಗ್‌ ಬಾಸ್‌ ರಿಯಾಲಿಟಿ ಶೋ ನಡೆಯುವ ಜಾಲಿವುಡ್‌ ಸ್ಟುಡಿಯೋದ ಅಧಿಕಾರಿಗಳು ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯ  ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಪ್ಪುಗಳನ್ನು ಸರಿಪಡಿಸಿ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.

    ಈ ವೇಳೆ ಕೋರ್ಟ್ ಅಫಿಡವಿಟ್ ಸಲ್ಲಿಕೆ ಸೇರಿದಂತೆ ಅಗತ್ಯ ದಾಖಲಾತಿಯನ್ನು ಜಿಲ್ಲಾಧಿಕಾರಿ ಪಡೆದುಕೊಂಡಿದ್ದಾರೆ.  ಇದನ್ನೂ ಓದಿ:  ಬಿಗ್‌ಬಾಸ್‌ಗೆ ಬೀಗ| 2 ಸಾವಿರ ಉದ್ಯೋಗಿಗಳಿಗೆ ಸಮಸ್ಯೆ – ಇಂದು ಮಧ್ಯಾಹ್ನ ತುರ್ತು ಅರ್ಜಿ ವಿಚಾರಣೆ

    ಅಗತ್ಯ ದಾಖಲೆ ಸಲ್ಲಿಕೆಗೆ ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶ ನೀಡಿ ಅನುಮತಿ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ಕೊಟ್ಟಿರುವ ಗಡುವಿನಲ್ಲಿ ಸಮಸ್ಯೆ ಸರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರೆ ಇಂದು ಮಧ್ಯಾಹ್ನವೇ ಜಾಲಿವುಡ್‌ ಸ್ಟುಡಿಯೋ ತೆರೆಯಲಿದೆ. ಇದನ್ನೂ ಓದಿ:  Bigg Boss | ಉಲ್ಲಂಘನೆಯಾಗಿದ್ರೆ ಸರಿ ಮಾಡಲು ಅವಕಾಶ ಕೊಡಿ: ಡಿಕೆಶಿ ಸಾಫ್ಟ್‌ ಕಾರ್ನರ್‌

    ಇಂದು ಮಧ್ಯಾಹ್ನ ಹೈಕೋರ್ಟ್‌ನಲ್ಲಿ ಜಾಲಿವುಡ್‌ ಸ್ಟುಡಿಯೋ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬರಲಿದೆ. ಹೀಗಾಗಿ ಅಲ್ಲಿ ಏನಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

    ಒಂದು ವೇಳೆ ಇಂದೇ ಶೋ ಮತ್ತೆ ನಡೆಸಲು ಅನುಮತಿ ನೀಡಿದರೆ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿರುವ ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್‌ ಮನೆಗೆ ಮರಳಲಿದ್ದಾರೆ.

  • ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ: ಜಾಲಿವುಡ್ ಆಡಳಿತ ಮಂಡಳಿ

    ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ: ಜಾಲಿವುಡ್ ಆಡಳಿತ ಮಂಡಳಿ

    ರಾಮನಗರ: ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ ಬಿಗ್‌ಬಾಸ್‌ (Bigg Boss) ಮನೆಗೆ ಬೀಗ ಜಡಿದ ಬೆನ್ನಲ್ಲೇ ರಾಮನಗರ ಡಿಸಿ (Ramanagar DC Office) ಕಚೇರಿಗೆ ಜಾಲಿವುಡ್ (Jollywood) ಆಡಳಿತ ಮಂಡಳಿ ಭೇಟಿ ನೀಡಿದ್ದು, 15 ದಿನ ಕಾಲಾವಕಾಶ ಕೇಳಿ ಮನವಿ ಸಲ್ಲಿಸಿದೆ.

    ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್‌ಬಾಸ್ ಸೀಸನ್ 12ರ ಶೋ ನಡೆಯುತ್ತಿದ್ದು, ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡ್ತಿದ್ದಾರೆ. ಹೀಗೆ ಏಕಾಏಕಿ ಬಂದ್ ಮಾಡಿದರೆ ಕಾರ್ಮಿಕರ ಕೆಲಸಕ್ಕೆ ಕುತ್ತು ಬೀಳಲಿದೆ. ನಮ್ಮಿಂದ ತಪ್ಪಾಗಿದೆ, ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ ಎಂದು ಜಾಲಿವುಡ್ ಆಡಳಿತ ಮಂಡಳಿ ಡಿಸಿ ಬಳಿ ಪರಿಪರಿಯಾಗಿ ಬೇಡಿಕೊಂಡಿದೆ.ಇದನ್ನೂ ಓದಿ:Bigg Boss | ಉಲ್ಲಂಘನೆಯಾಗಿದ್ರೆ ಸರಿ ಮಾಡಲು ಅವಕಾಶ ಕೊಡಿ: ಡಿಕೆಶಿ ಸಾಫ್ಟ್‌ ಕಾರ್ನರ್‌

    ಸದ್ಯ ಜಾಲಿವುಡ್ ಆಡಳಿತ ಮಂಡಳಿ ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸುತ್ತಿದೆ. ಮಾತುಕತೆ ಫಲಪ್ರದವಾದರೆ ಜಿಲ್ಲಾಧಿಕಾರಿಯವರು ಷರತ್ತು ಬದ್ಧ ಅನುಮತಿ ನೀಡಿದರೆ ಇಂದೇ ಜಾಲಿವುಡ್ ಸ್ಟುಡಿಯೋ ಓಪನ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಕಾರಣ ಅವರಿಗೆ ಷರತ್ತುಗಳನ್ನು ವಿಧಿಸಿ ಬೀಗ ತೆಗೆಸಲು ಅಧಿಕಾರವಿದೆ.

  • ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ಗೆ ನೋಟಿಸ್ -‌ ಬಿಗ್‌ ಬಾಸ್‌ ಮನೆಗೆ ಬೀಳುತ್ತಾ ಬೀಗ?

    ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ಗೆ ನೋಟಿಸ್ -‌ ಬಿಗ್‌ ಬಾಸ್‌ ಮನೆಗೆ ಬೀಳುತ್ತಾ ಬೀಗ?

    – ಅರಣ್ಯ ಸಚಿವ ಈಶ್ವರ ಖಂಡ್ರೆ ಸಮರ್ಥನೆ ಏನು?

    ರಾಮನಗರ: ಜಿಲ್ಲೆಯ ಬಿಡದಿ (Bidadi) ಬಳಿಯಿರುವ ವೆಲ್ಸ್ ಸ್ಟುಡಿಯೋಸ್ & ಎಂಟರ್‌ಟೈನ್ಮೆಂಟ್ ಪ್ರೈ.ಲಿ. (Jollywood Studios) ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

    ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಗ್ ಬಾಸ್ (Bigg Boss Kannada 12) ಕಾರ್ಯಕ್ರಮ ನಡೆಯುತ್ತಿರುವ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ತಿಳಿಯಿತು. ಈ ಬಗ್ಗೆ ಮಾಹಿತಿ ಪಡೆದಾಗ, ರಾಮನಗರ ಪ್ರಾದೇಶಿಕ ಕಚೇರಿಯಿಂದ 2024ರಲ್ಲೇ 2 ಬಾರಿ ನೋಟಿಸ್ ನೀಡಿದ್ದರೂ ಅನುಪಾಲನೆ ಮಾಡಿದ ಕಾರಣ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಅಕ್ಕ, ಬಾವನ ಜೊತೆ ಗಲಾಟೆ – ಬಿಗ್‌ ಬಾಸ್‌ ರಂಜಿತ್‌ ಮೇಲೆ ದೂರು ದಾಖಲು

    ಇಲ್ಲಿ ಎಸ್‌ಟಿಪಿ ಕಾರ್ಯನಿರ್ವಹಣೆ ಸೇರಿದಂತೆ ಸಮರ್ಪಕವಾಗಿ ತಾಜ್ಯ ವಿಲೇವಾರಿ ಆಗುತ್ತಿಲ್ಲ. ಜನರೇಟರ್ ಸೆಟ್‌ಗಳಿದ್ದು, ಅದಕ್ಕೂ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ, ಮಂಡಳಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.